Sunday, 15th December 2024

ರೆಡ್ಡಿಯವರೇ, ಹಂಪಿ ಫೈಲ್ಸ್ ಮಾಡಿ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಹಿಂದೂಗಳ-ಹಿಂದೂ ಸಂಸ್ಕೃತಿಯ ಮೇಲೆ ಹುಚ್ಚುನಾಯಿಗಳಂತೆ ದಾಳಿ ಮಾಡಿದ ಧರ್ಮಾಂಧರನ್ನು ದರೋಡೆಕೋರ ರನ್ನು ಮಹಾನ್ ರಾಜರಂತೆ ಪಠ್ಯಪುಸ್ತಕಗಳಲ್ಲಿ ಸೇರಿಸಿ ಮಕ್ಕಳ ಜ್ಞಾನಕ್ಕೆ ಮೋಸ ಮಾಡಲಾಗಿದೆ. ರಕ್ಕಸತಂಗಡಿ ಫೈಲ್ ಕನ್ನಡದಲ್ಲಿ ಬೇಗ ಓಪನ್ ಆಗಲಿ.

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಈಗ ಬೇಕಿತ್ತ ಎನ್ನುವ ಹೊಣೆಗೇಡಿಗಳು ಕಾಂಗ್ರೆಸ್ ಪಕ್ಷವನ್ನು ನೋಡಿ ಕಲಿಯಬೇಕು. ‘ನಮ್ಮದು ನೂರೈವತ್ತು ವರ್ಷಗಳ ಇತಿಹಾಸವಿರುವ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಈ ದೇಶ ಕಾಂಗ್ರೆಸ್ ಅನ್ನು ಎಂದಿಗೂ ಮರೆಯಬಾರದು’ ಎನ್ನುವುದರ ಮೂಲಕ ಇತಿಹಾಸದ ಸತ್ಯವನ್ನು ಯಾರೂ ಕಡೆಗಣಿಸಬಾರದೆಂಬ ತತ್ತ್ವವನ್ನು ಕಾಂಗ್ರೆಸ್ ಎತ್ತಿಹಿಡಿದಿದೆ.

ಹೀಗೆ ಇತಿಹಾಸವೆಂಬ ಛತ್ರಿ ಹಿಡಿದುಕೊಂಡೇ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಿದೆ. ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾಗಾಂಧಿ ಯವರ ಮೂಗನ್ನು ಹೋಲಿಸಿಕೊಂಡು ಈಗಲೂ ಜನರ ಮುಂದೆ ತಮ್ಮ ಪಕ್ಷದ ಪರಂಪರೆ-ಇತಿಹಾಸವನ್ನಿಟ್ಟು ವೋಟ್ ಕೇಳ ಲಾಗುತ್ತಿದೆ. ಹೌದು ಅವರಿಗೆ ಅವರ ಪಕ್ಷದ ಇತಿಹಾಸ ಎಷ್ಟು ಮುಖ್ಯವೋ, ಇಡೀ ಭಾರತೀಯರಿಗೆ ದೇಶದ ಸತ್ಯ ಇತಿಹಾಸವೂ ಅಷ್ಟೇ ಮುಖ್ಯ. ಇತಿಹಾಸವನ್ನು ಯಾರೂ ಕಡೆಗಣಿಸಬಾರದು. ಕಾಂಗ್ರೆಸ್‌ನಿಂದ ಯಾವ್ಯಾವ ಜೀವಿಗಳು ಸತ್ತರೋ ಹಾಗೆಯೇ
ಕಾಶ್ಮೀರದಲ್ಲಿ ಅಮಾನುಷವಾಗಿ ಬಲಿಯಾದ ಲಕ್ಷಾಂತರ ಪಂಡಿತರನ್ನೊಳಗೊಂಡ ಹಿಂದೂಗಳ ನರಮೇದದ ಇತಿಹಾಸವೂ ಭಾರತೀಯರಿಗೆ ಬೇಕೇಬೇಕು.

ಇಂಥ ಮುಚ್ಚಿ ಹಾಕಿದ ಇತಿಹಾಸವನ್ನು ಕೆದಕಿ, ಮೋಸ ವಂಚನೆ ಇತಿಹಾಸಕ್ಕೇ ಬಗೆದ ದ್ರೋಹವನ್ನು ಇಂದಿನ ಮುಂದಿನ ಪೀಳಿಗೆಗೆ ತಲುಪಿಸಲೇ ಬೇಕಿದೆ. ಅದರಿಂದ ಇಂಥ ತಪ್ಪುಗಳು ಮುಂದೆಯೂ ಸಂಭವಿಸದಂತೆ ಎಚ್ಚೆತ್ತುಕೊಳ್ಳಬೇಕಾದ ಅನಿವಾ ರ್ಯತೆಯಿದೆ. ರಾಹುಲ್‌ಗಾಂಧಿಯಂಥ ಪ್ರಚಂಡ ನಾಯಕನನ್ನು ಐತಿಹಾಸಿಕ ಗಾಂಧಿವಂಶದ ಕುಡಿಯೆಂಬ ಆಕರ್ಷಣೆ ಯಿಂದಲೇ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಹೊರಲಾಗುತ್ತಿದೆ. ವ್ಯಕ್ತಿಯೊಬ್ಬ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಆತನ ಇತಿಹಾಸ ವನ್ನು ಪರಿಶೀಲಿಸಿ ಸ್ಥಳೀಯ ಪೊಲೀಸ್ ಠಾಣೆ ಪ್ರಮಾಣಪತ್ರ ನೀಡದರೆ ಮಾತ್ರ ಆತನಿಗೆ ಅವಕಾಶ.

ಇನ್ನು ನ್ಯಾಯಾಲಗಳು ಸಹ ತೀರ್ಪು ನೀಡಬೇಕಾದರೆ ಇತಿಹಾಸದಲ್ಲಿನ ಪ್ರಕರಣಗಳ ಆಗುಹೋಗುಗಳನ್ನು ಪರಿಶೀಲಿಸಿ, ಆ ತೀರ್ಪುಗಳನ್ನು ಆಧಾರವಾಗಿಟ್ಟುಕೊಂಡೇ ವಾಸ್ತವ ಮತ್ತು ಭವಿಷ್ಯವನ್ನು ಸರಿಪಡಿಸುವಂಥ ಹೊಣೆಗಾರಿಕೆಯನ್ನೇ ಅವಲಂಬಿ ಸಿರುತ್ತದೆ. ಅಷ್ಟೇ ಏಕೆ ಸಂವಿಧಾನವು ರಚನೆಯಾಗಬೇಕಾದರೆ ಚರಿತ್ರೆಯಲ್ಲಿನ ದೋಷಗಳು ಸರಿ-ತಪ್ಪುಗಳನ್ನು ಅವಲಂಬಿಸಿ-ಆಧರಿಸಿಯೇ ಮುಂದೆ ಅಂಥ ತಪ್ಪುಗಳು ನಡೆಯದಂತೆ ರೂಪಿಸಿ ಭವಿಷ್ಯವನ್ನು ನಿರ್ಮಿಸಲಾಗುತ್ತಿದೆ.

ಇನ್ನೂ ಚುಟುಕಾಗಿ ಹೇಳಬೇಕೆಂದರೆ ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವಾಗ ‘ಅಯ್ಯೋ ನಾವುಗಳು ಪಟ್ಟ ಕಷ್ಟ ನಮ್ಮ ಮಕ್ಕಳು ಅನುಭವಿಸಬಾರದು’ ಎಂದು ತಮ್ಮ ಇತಿಹಾಸದಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ. ಹೀಗೆ ಇತಿಹಾಸವೆಂಬುದು ಒಂದು ಗುರುವಿನಂತೆ, ಒಂದು ಅನುಭವದಂತೆ ಪಾತ್ರವಹಿಸಿದರೆ ಮಾತ್ರ ಭವಿಷ್ಯ ಸರಿದಾರಿಗೆ ಸಾಗುತ್ತದೆ. ಆದರೆ, ಕಳೆದ ಎಪ್ಪತ್ತು ವರ್ಷಗಳಿಂದ ಭಯಾನಕ ಸತ್ಯವನ್ನು ಮುಚ್ಚಿಹಾಕಿ ಉದ್ದೇಶಪೂರ್ವಕವಾಗಿ ತಿರುಚಲಾದ ಇತಿಹಾಸವನ್ನು ಹೇಳಿಕೊಂಡು ಬಂದು ಭಾರತೀಯರ ಮನಃಸ್ಥಿತಿಗೆ ಗುಲಾಮಗಿರಿಯ ಮಂಕುಬೂದಿ ಎರಚಿಕೊಂಡು ಬರಲಾಗಿದೆ.

ಹಿಂದೂಗಳ ಮತ್ತು ಹಿಂದೂ ಸಂಸ್ಕೃತಿಯ ಮೇಲೆ ಹುಚ್ಚು ನಾಯಿಗಳಂತೆ ದಾಳಿಮಾಡಿ ಆಕ್ರಮಣ ಮಾಡಿದ ವಿಕೃತರನ್ನು ದರೋಡೆಕೋರರನ್ನು ಮಹಾನ್ ರಾಜರಂತೆ ಪಠ್ಯಪುಸ್ತಕಗಳಲ್ಲಿ ಸೇರಿಸಿ ಮಕ್ಕಳ ಜ್ಞಾನಕ್ಕೆ ಮೋಸ ಮಾಡಲಾಗಿದೆ. ಮಹಮದ್ ಘೋರಿ, ಖಿಲ್ಜಿ, ತುಘಲಕ್, ಸೈಯದ್, ಅಲೋಡಿ, ಮೊಘಲರು, ಸೂರಿ ಈ ವಂಶಗಳೆಲ್ಲ ನಮ್ಮ ದೇಶದಲ್ಲಿ ಮತಾಂಧತೆ ಜಿಹಾದಿ ಯ ಅನುಷ್ಠಾನಕ್ಕಾಗಿ ಹಿಂದೂ ಧರ್ಮಾದ ಸರ್ವನಾಶಕ್ಕಾಗಿ ಯತ್ನಿಸಿದ ಸತ್ಯವನ್ನು ಇನ್ನಾದರೂ ಭಾರತೀಯರು ಮನಗಾಣ ಬೇಕಿದೆ.

ಅದಕ್ಕೆ ಕಾಲ ಈಗ ಪಕ್ವವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ನೂರೈವತ್ತು ವರ್ಷಗಳ ಸತ್ಯ ಇತಿಹಾಸದ ಮೈಲೇಜು ಅನಿವಾರ್ಯವಾಗಿರು ವಾಗ ಕೇವಲ ಮೂವತ್ತೆರೆಡು ವರ್ಷಗಳ ಹಿಂದಿನ ಕಾಶ್ಮೀರಿ ಪಂಡಿತರ ಮೇಲಿನ ರಕ್ಕಸ ಹತ್ಯಾಕಾಂಡದ ಸತ್ಯವನ್ನು ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಜಗತ್ತಿಗೆ ತೆರೆದಿಟ್ಟಿದೆ.

ಇದನ್ನು ಕಂಡು ಗುಲಾಮರುಗಳ ಬುಡಕ್ಕೆ ಮೆಣಸಿನಕಾಯಿ ಇಟ್ಟಂತಾಗಿದೆ. ಈ ಒಂದು ಚಲನಚಿತ್ರ ಭಾರತೀಯರ ಮನಃಸ್ಥಿತಿ ಗಳನ್ನು ಬದಲಾಯಿಸುತ್ತಿದೆ. ಹೀಗಾಗಿ ದೇಶದ ಭವಿಷ್ಯಕ್ಕೆ ಯಾವ ಪಕ್ಷದ ಅನಿವಾರ್ಯ ಇದೆ, ಯಾವ ಪಕ್ಷದ ಸರ್ವನಾಶದ
ಅವಶ್ಯಕತೆಯಿದೆ ಎಂಬುದನ್ನು ಈ ಚಿತ್ರ ನಿರ್ಧರಿಸುವಂತಾಗಿದೆ. ಕಾಶ್ಮೀರಿ ಹಿಂದೂಗಳ ಮೇಲೆ ಪೈಶಾಚಿಕ ದಾಳಿ ನಡೆಸಿ ಅವರ ಬದುಕನ್ನು ಹಾಳುಮಾಡಿದ್ದು ಇಸ್ಲಾಂ ಭಯೋತ್ಪಾದಕರು. ಭಯೋತ್ಪಾದಕರು ದೇಶದ ಶತ್ರುಗಳು ಮತ್ತು ಪಂಡಿತರು ನಮ್ಮ ಭಾರತೀಯರು.

ಪ್ರತಿಯೊಬ್ಬ ದೇಶಾಭಿಮಾನಿಗಳೂ ಇದೇ ಮನಃಸ್ಥಿತಿಯಿಂದ ನೋಡಬೇಕಿರುವುದು ಪ್ರಕೃತಿ ಸಹಜ. ಆದರೆ, ಮೊನ್ನೆ ರಾಜ್ಯದ ವಿಧಾನ ಸಭಾಧ್ಯಕ್ಷರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡುವ ವ್ಯವಸ್ಥೆ ಮಾಡಿದಾಗ ಕಾಂಗ್ರೆಸ್ ಪಕ್ಷದವರು ವಿರೋಧಿಸಿದರೆ ಏನರ್ಥ? ಪಂಡಿತರ ನರಮೇಧ ನಡೆಸಿದ್ದೇನು ಭಯೋತ್ಪಾದಕರೇ ಅಥವಾ ಕಾಂಗ್ರೆಸಿಗರೇ? ಅಲ್ಲವಲ್ಲ, ನೊಂದವರು ಭಾರತೀ ಯರು, ಕೊಂದವರು ಶತ್ರುಗಳು ಎಂದಾದ ಮೇಲೆ ಅಂಥ ಚಿತ್ರವನ್ನು ವಿರೋಧಿಸಿದರೆ ಕಾಂಗ್ರೆಸ್ ಯಾರ ಪರವೆಂದು ತಿಳಿಯ ಬೇಕು? ಮತ್ತು ಯಾವ ದೃಷ್ಟಿಕೋನದಿಂದ ನೋಡಬೇಕು? ಸಮಾಜಕ್ಕೆ ಕಾಂಗ್ರೆಸ್‌ನಿಂದ ಅದೆಂಥ ಸಂದೇಶ ಸಿಗುತ್ತದೆ? ಒಂದು ಸಂವಿಧಾನಿಕ ರಾಜಕೀಯ ಪಕ್ಷವಾಗಿ ಯಾವುದನ್ನು ವಿರೋಧಿಸಬೇಕು ಯಾವುದನ್ನು ಒಪ್ಪಿಕೊಳ್ಳಬೇಕೆಂಬ ಪ್ರಾಮಾಣಿಕತೆ
ಇಲ್ಲವಾದ ಮೇಲೆ ಆ ಪಕ್ಷದ ಭವಿಷ್ಯವನ್ನು ಮತದಾರ ಖಂಡಿತಾ ಸ್ವಯಂಪ್ರೇರಿತನಾಗಿ ನಿರ್ಧರಿಸುತ್ತಾನೆ ಬಿಡಿ.

ದೇಶದ ಮನಃಸ್ಥಿತಿ ಬದಲಾಗುತ್ತಿದೆ. ಇದಕ್ಕೆ ಪುರಾವೆಯಾಗಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ. ಈ ಚುನಾವಣೆಗೂ ಮುನ್ನವೇ ಈ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಗೊಂಡಿದ್ದರೆ ಬಿಜೆಪಿ ಇನ್ನೂ ಹೆಚ್ಚಿನ ಅಂತರದಿಂದ ಗೆದ್ದುಬಿಡುತಿತ್ತೇನೋ? ಈ
ಒಂದು ಚಲನಚಿತ್ರ ಭಾರತೀಯರಲ್ಲಿ ಇತಿಹಾಸದ ಇನ್ನಷ್ಟು ಒರಿಜಿನಲ್ ಫೈಲ್‌ಗಳನ್ನು ತೆರೆಗೆ ತರಬೇಕೆಂಬ ಒತ್ತಾಸೆಗೆ ದನಿ ಯಾಗಿಸುತ್ತಿದೆ. ಮಮ್ಲುಕ್, ಖಿಲ್ಜಿ, ತುಘಲಕ್, ಬಾಬರ್, ಅಕ್ಬರ್, ಘೋರಿ, ಔರಂಗ್‌ಜೇ ಫೈಲ್ಸ್ ಹೀಗೆ ಇವರೆಲ್ಲರ ಒರಿಜಿನಲ್
ಫೈಲ್‌ಗಳನ್ನು ಸಿನಿಮಾ ರೂಪದಲ್ಲಿ ತಂದರೆ ಆಗ ಇವರ ಡುಪ್ಲಿಕೆಟ್ ಫೈಲ್‌ಗಳು ಡಿಲೀಟ್ ಆಗಿ ಇತಿಹಾಸಕ್ಕೆ ಮತ್ತು ಅಂದಿನ ನಾಗರಿಕರ ಆತ್ಮಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ.

ಇನ್ನೆಷ್ಟು ಕಾಲ ಹೀಗೆ ಈ ಮತಾಂಧರನ್ನು ದರೋಡೆಕೋರರನ್ನು ನಾವುಗಳು ಭಾರತೀಯರ ರಾಜರುಗಳೆಂದು, ತಿರುಚಿದ ಇತಿಹಾಸವನ್ನು ಮಕ್ಕಳು ಓದಬೇಕು? ಇನ್ನೆಷ್ಟು ಕಾಲ ಈ ಪಾಪಿಗಳ ಆಕ್ರಮಣ, ಹತ್ಯಾಕಾಂಡ, ಅತ್ಯಾಚಾರ ಅನಾಚಾರಗಳನ್ನು ಮರೆತು ಇವರನ್ನು ಮೆರೆಸಬೇಕು?. ನೂರು ಅಪರಾಧಿಗಳಿಗಿಂತ ಒಬ್ಬ ನಿರಪರಾಧಿಯನ್ನು ಉಳಿಸುವುದು ನ್ಯಾಯಸಮ್ಮತ.
ಪೂರ್ವಾರ್ಜಿತ ಪಿತ್ರಾರ್ಜಿತ ಆಸ್ತಿಯನ್ನು ಸಂಬಂಧಿಸಿದವರಿಗೆ ನೀಡಲು ಆದೇಶಿಸುವುದು ನ್ಯಾಯಾಲಯದ ಪರಮ ಧರ್ಮ. ಆದರೆ ಇತಿಹಾಸದಲ್ಲಿ ಕೋಟ್ಯಂತರ ಅಮಾಯಕ-ಮುಗ್ಧ ಹಿಂದೂಗಳ ಹತ್ಯೆಯಾಗಿವೆ.

ಅಷ್ಟಲ್ಲದೆ, ಭವ್ಯ ದೇಗುಲಗಳು ಸ್ಮಶಾನವಾಗಿ, ಸೌಧ ಸಮಾದಿ ಮಸೀದಿಗಳಾಗಿವೆ. ಇವೆಲ್ಲವನ್ನೂ ಇತಿಹಾಸದಲ್ಲಿ ಮುಚ್ಚಿ ಹಾಕಲಾಗಿದೆ. ಆದರೆ, ಅದೆಲ್ಲವನ್ನು ವಿಚಾರಣೆ ನಡೆಸಿ ಶಿಕ್ಷೆ-ನ್ಯಾಯ -ಪರಿಹಾರ ನೀಡುವಂತೆ ಜಗತ್ತಿನ ಯಾವ ನ್ಯಾಯಾಲಯ ದಲ್ಲಿ ಹಿಂದೂಗಳು ಭಿಕ್ಷೆ ಬೇಡಬೇಕು. ಒಂದು ಅಯೋಧ್ಯೆ ದೇವಾಲಯವನ್ನೇ ಹಿಂಪಡೆಯಲು ಶತಮಾನ ಕಳೆದುಹೋಗಿದೆ. ಇನ್ನೆಷ್ಟು ಮನೆಹಾಳು ಸಂದರ್ಭಗಳನ್ನು ಹಿಂದೂಗಳು ಮುಂದೆಯೂ ಅನುಭವಿಸಬೇಕಿದೆ? ಅದಕ್ಕೆಲ್ಲ ಪರಿಹಾರವನ್ನು
ಕೊಡಲಾಗದಿದ್ದರೂ ಕೊನೇಪಕ್ಷ ಅದರಲ್ಲಿನ ಸತ್ಯ ಇತಿಹಾಸವನ್ನಾದರೂ ತಿಳಿದುಕೊಳ್ಳಬೇಕಾದ ಹಕ್ಕು ಭಾರತೀಯರಿಗಿಲ್ಲವೇ? ನೆನಪಿರಲಿ, ಚಲನಚಿತ್ರದಲ್ಲಿ ಅಪರಾಧಿಯೊಬ್ಬನನ್ನು ಹೀರೋ ಮಾಡಿ ತೋರಿಸಿದರೂ ಚಿತ್ರದ ಅಂತ್ಯದಲ್ಲಿ ಆತನನ್ನು ಪೊಲೀಸರು ಬಂಧಿಸುವಂತೆ, ಆತನ ತಪ್ಪಿಗೆ ಸರಿಯಾದ ಶಿಕ್ಷೆಯಾಗುವಂತೆ ಕ್ಲೈಮ್ಯಾಕ್ಸನ್ನು ಸಂಯೋಜಿಸಲಾಗುತ್ತದೆ.

ಇಲ್ಲದಿದ್ದರೆ ಅಪರಾಧಕ್ಕೆ ಕುಮಕ್ಕು ನೀಡಿದಂತಾಗುತ್ತೆ ಎಂಬ ಸಾಮಾಜಕ-ನ್ಯಾಯ ಪ್ರಜ್ಞೆಯಿಂದಲೇ ಕಥೆಯನ್ನು ರೂಪಿಸ ಲಾಗುತ್ತದೆ. ಮಾತು ಬಾರದ ಮಗುವಿಗೆ ಕಪಾಳಕ್ಕೆ ರಪರಪನೆ ಹೊಡೆದು ಅದು ಜೋರಾಗಿ ಅಳುತ್ತಿರುವಾಗ ಅದರ ಆಕ್ರಂದನ ವನ್ನು ಯಾರೂ ಗಮನಿಸದೇ ನಂತರ ಅದು ಸುಧಾರಿಸಿಕೊಂಡು ಕಿಲಕಿಲ ನಗುತ್ತಿದ್ದರೆ ಆಗ ಮಾತ್ರ ಎಲ್ಲರೂ ಅದನ್ನು ಎತ್ತಿ ಮುದ್ದಾಡಿದರೆ ಅದು ಯಾವ ನೈತಿಕತೆ? ಯಾವ ನ್ಯಾಯ? ಆ ಮಗುವಿನ ನೋವು ಅಳಲನ್ನೂ ಕೇಳಬೇಕಲ್ಲವೇ? ಆದರೆ ಅದು
ಕಳೆದ ಎಪ್ಪತ್ತು ವರ್ಷಗಳಿಂದ ಆಗುತ್ತಿಲ್ಲ.

ಅದು ‘ಕಾಶ್ಮಿರ್ ಫೈಲ್ಸ್’ನಿಂದ ಸಾಧ್ಯವಾಗಿ ಚಿತ್ರವನ್ನು ನೋಡಿದವರೆಲ್ಲರೂ ಈಗ ಅಳುತ್ತಿದ್ದಾರೆ. ಹೀಗಾಗಿ ಇತಿಹಾಸಕ್ಕೆ ಒಂದು ನ್ಯಾಯ-ಗೌರವ ಸಲ್ಲಬೇಕಾದರೆ ಅದರ ಸತ್ಯ ಬಯಲಾಗಲೇ ಬೇಕು. ಈ ನಿಟ್ಟಿನಲ್ಲಿ ಪ್ರಮುಖವಾಗಿ ದಕ್ಷಿಣಭಾರದ ರಾಜಧಾನಿ ಯಾಗಿ ವೈಭವ ಮೆರೆದ ಹಂಪಿ ವಿಜಯನಗರ ಸಾಮ್ರಾಜ್ಯ ಪೌರಾಣಿಕ, ರಾಮಾಯಣ, ಮಹಾಭಾರತ, ಐತಿಹಾಸಿಕ, ವಾಸ್ತುಶಿಲ್ಪ, ವೈಜ್ಞಾನಿಕತೆ, ಶ್ರೀಮಂತ ನಾಗರಿಕತೆ, ಪರಮಸಹಿಷ್ಣು, ಧರ್ಮಾಡಳಿತ, ಸಾಮಾಜಿಕ ನ್ಯಾಯಗಳಿಂದ ವಿಶ್ವಪ್ರಸಿದ್ಧಿ ಗಳಿಸಿದ್ದ ಭವ್ಯ ಸಾಮ್ರಾಜ್ಯವನ್ನು ಮೋಸದ ಯುದ್ಧದಿಂದ ಸೋಲಿಸಿ, ಆ ನಂತರ ಮತಾಂಧ ಸುಲ್ತಾನರು ನಡೆಸಿದ ಘನಘೋರ ಪೈಶಾಚಿಕ ದಾಳಿಗೆ ತುತ್ತಾಗಿ ಇಂದು ಹಾಳು ಹಂಪಿಯಾಗಿದೆಯಲ್ಲ, ಆ ರಕ್ಕಸತಂಗಡಿ ಯುದ್ಧದ ಒರಿಜಿನಲ್ ಫೈಲ್ ಚಲನಚಿತ್ರವಾಗಿ ಹೊರ ಹೊಮ್ಮಬೇಕಿದೆ.

ಸರಕಾರ ಹಂಪಿ ಉತ್ಸವ ಮಾಡಿ ನಗುವ ಮಗುವನ್ನು ಎತ್ತಾಡಿಸುವುದಲ್ಲ. ಅದರ ನೋವಿನ ಕಥೆಯನ್ನೂ ಜಗತ್ತಿಗೆ ಹೇಳುವ
ಕೆಲಸ ಆಗಬೇಕಿದೆ. ಅಂಥ ಸತ್ಯ ಇತಿಹಾಸವನ್ನು ದಿಟ್ಟವಾಗಿ ತೋರಿಸುವ ಗುಂಡಿಗೆ ಇರುವ ಕನ್ನಡದ ನಿರ್ದೇಶಕರು ಮುಂದೆ ಬರಬೇಕಿದೆ. ಅದಕ್ಕಾಗಿ ಬಂಡವಾಳ ಹೂಡುವ ತಾಕ್ಕತ್ತು ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿ ಅವರಿಗಿದೆ. ಚಕ್ರವರ್ತಿ ವಿರೂಪಾಕ್ಷ
ದೇವರ ಭಕ್ತರೂ ಆಗಿರುವ ರೆಡ್ಡಿ ಸೋದರರು ಇಂಥ ಒಂದು ಪ್ರಯತ್ನ ಮಾಡಿ ‘ಹಂಪಿ ಫೈಲ್ಸ್’ ಹೊರ ತಂದರೆ ಅದಕ್ಕಿಂತ ಪವಿತ್ರ ವಾದ ಕೆಲಸ ಮತ್ತೊಂದಿಲ್ಲ.

ಈಗಾಗಲೆ ಗಣಿಗಾರಿಕೆಯಿಂದ ಕಂಗಾಲಾಗಿರುವ ರೆಡ್ಡಿಯವರು ಮಗನ ಚಿತ್ರಕ್ಕಿಂತ ಮಿಗಿಲಾಗಿ ಇಂಥ ಚಲನ ಚಿತ್ರವನ್ನು ನಿರ್ಮಿಸಿ ದರೆ ಇತಿಹಾಸ ಇವರನ್ನು ಸ್ಮರಿಸುತ್ತದೆ. ಮೂರು ದಶಕಗಳ ಹಿಂದೆ ಹಂಪಿಯ ಶಿಥಿಲ ಗುಡಿಗೋಪುರಗಳನ್ನು ನವೀಕರಣ ಗೊಳಿಸಿ ಹಿಂದಿನ ರೂಪ ನೀಡುವ ಯೋಜನೆಯೊಂದು ಪ್ರಾರಂಭಗೊಂಡಿತ್ತು. ಆದರೆ eನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಎಚ್ಚೆತ್ತು ಯೋಜನೆಯನ್ನು ತಡೆದರು. ಕಾರಣ, ಭಗ್ನ ಸ್ಮಾರಕಗಳು ಹಿಂದಿನ ವೈಭವದ ರೂಪವನ್ನು ಪಡೆದುಕೊಂಡು ಬಿಟ್ಟರೆ, ಅದರ ಮೇಲಾದ ದಾಳಿಗೆ ಪುರಾವೆಯೇ ಇಲ್ಲದಂತಾಗಿ ದಾಳಿಕೋರರ ಕೃತ್ಯಗಳು ಮುಚ್ಚಿಹೋಗಿ ಅವರ ಅಪರಾಧಗಳು ಮರೆಯಾಗಿ ಬಿಡುತ್ತದೆ.

ಆದ್ದರಿಂದ ಹೊಡೆತ ತಿಂದ ಮಗುವಿನ ಅಳು ನಿಲ್ಲಬಾರದು, ಮುಗುವಿನ ಆ ದುಸ್ಥಿತಿಗೆ ಕಾರಣರಾದವರನ್ನು ಜನ ತಿಳಿಯಬೇಕು
ಅದರಿಂದ ಇತಿಹಾಸವನ್ನು ಇದ್ದಂತೆಯೇ ಓದಬೇಕು ಕಾಣಬೇಕೆಂಬ ನೀತಿಯೇ ಅಜ್ಜ ಶಿವರಾಮ ಕಾರಂತರದ್ದಾಗಿತ್ತು. ಇದೇ ನೀತಿಯೇ ಇಂದು ಯುನೆಸ್ಕೊ ಅವರದ್ದೂ ಆಗಿದ್ದು ಇತಿಹಾಸದ ಹೆಜ್ಜೆಗಳು ಮಾಸದಂತೆ ಕಾಪಾಡಿಕೊಂಡು ಬರುವುದಾಗಿದೆ. ಅದೇ ನಿಟ್ಟಿನಲ್ಲಿ ಮೊದಲಿಗೆ ‘ಹಂಪಿ ಫೈಲ್ಸ್’ ಚಿತ್ರವಾಗ ಬೇಕು. ರಕ್ಕಸತಂಗಡಿಯ ಘೊರ ದಾಳಿಯ ಚಿತ್ರಣವನ್ನು ತೆರೆಯ ಮೇಲೆ ತೋರಿಸಬೇಕು. ಅಂತೆಯೇ ಕಾಂಗ್ರೆಸ್ ಪಕ್ಷದ ನೂರೈವತ್ತು