Sunday, 15th December 2024

ಒಂದು ಶಿಲೀಂಧ್ರ ೧೯ ಮುಗ್ಧರನ್ನು ಗಲ್ಲಿಗೇರಿಸಿತು !

ಹಿಂದಿರುಗಿ ನೋಡಿದಾಗ

ಮಾಟಗಾತಿಯರು ಹಾಗೂ ಮಾಟಗಾರರು ಈ ಜಗತ್ತಿನಲ್ಲಿರುವರು ಎನ್ನುವುದು ಅನಾದಿ ಕಾಲದ ಒಂದು ನಂಬಿಕೆ. ಇವರು ಅಸ್ತಿತ್ವದಲ್ಲಿದ್ದರು ಎನ್ನುವುದಕ್ಕೆ ಮಾನವ ಇತಿಹಾಸದ ಎಲ್ಲ ಕಾಲದ, ಎಲ್ಲ ಸಮಾಜಗಳಲ್ಲಿ, ಒಂದಲ್ಲ ಒಂದು ರೀತಿಯ ಪುರಾವೆಗಳಿವೆ. ಮಾಟಗಾತಿಯರಿಗೆ ಇಂಗ್ಲಿಷ್‌ನಲ್ಲಿ ವಿಚ್’ ಎನ್ನುವ ಹೆಸರಿದೆ. ಇದರ ಮೂಲ ಹಳೆಯ ಇಂಗ್ಲಿಷ್ ನ ವಿಕ್ಕ (ಪುಲ್ಲಿಂಗ) ಹಾಗೂ ವಿಕ್ಕೆ (ಸೀಲಿಂಗ).

ಹಳೆಯ ಇಂಗ್ಲಿಷ್‌ನೊಳಗೆ ಈ ಶಬ್ದವು ಹೇಗೆ ಬಂದು ಸೇರಿತು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಇತಿಹಾಸದಲ್ಲಿ ಮಾಟಗಾರರಿಗಿಂತ ಮಾಟಗಾತಿಯರೇ ಹೆಚ್ಚು ಕಂಡುಬರುವುದುಂಟು. ಮಾಟಗಾತಿ ಯರು ಅಪಾಯಕಾರಿ ಅತೀಂದ್ರಿಯ/ಅಮಾನುಷ ಶಕ್ತಿಯನ್ನು ಉಳ್ಳವರು ಎಂಬ ನಂಬಿಕೆ ಅಂದೂ ಇತ್ತು, ಇಂದೂ ಇದೆ. ಇವರು ಸೈತಾನನಿಗೆ ತಮ್ಮ ಆತ್ಮವನ್ನು ಮಾರಿಕೊಂಡಾಗ ಸೈತಾನನು ಅವರಿಗೆ ವಿಶಿಷ್ಟಶಕ್ತಿ ನೀಡುತ್ತಾನೆ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಇವರು ಒಳಿತಿಗಿಂತ ಕೆಡುಕನ್ನೇ ಮಾಡುವರೆಂಬ ಸುದ್ದಿ.

ಹಾಗಾಗಿ ಇತಿಹಾಸದ ಅನೇಕ ಘಟ್ಟಗಳಲ್ಲಿ ಮಾಟಗಾತಿಯರ ಬಹಿರಂಗ ವಿಚಾರಣೆ ಮತ್ತು ಅವರಿಗೆ ಗಲ್ಲುಶಿಕ್ಷೆ ವಿಧಿಸಿದ ಪ್ರಕರಣಗಳು ಕಂಡು ಬರುತ್ತವೆ. ಇದಕ್ಕೆ ಮಾಟಗಾತಿಯರ ಬೇಟೆ (ವಿಚ್ ಹಂಟಿಂಗ್) ಎಂಬ ಹೆಸರಿದೆ. ಭಾರತದಲ್ಲೂ ಮಾಟಗಾತಿಯರ ಬೇಟೆ ಹಿಂದೆ ನಡೆದಿತ್ತು, ಇಂದಿಗೂ ನಡೆಯುತ್ತಿದೆ. ರಾಷ್ಟ್ರೀಯ ಮಹಿಳಾ  ಆಯೋಗದ ಅನ್ವಯ ೨೦೦೮-೨೦೧೩ರ ನಡುವೆ ೭೬೮ ಮಹಿಳೆಯರನ್ನು ಮಾಟಗಾತಿಯರು ಎನ್ನುವ ಆರೋಪದಲ್ಲಿ ಕೊಲ್ಲಲಾಗಿದೆ. ೨೦೦೧-೨೦೦೬ರ ನಡುವೆ ೩೦೦ ಜನರನ್ನು ಅಸ್ಸಾಂನಲ್ಲಿ ಕೊಲ್ಲಲಾಗಿದೆ.

೨೦೦೫-೨೦೧೦ರವರೆಗೆ ಒಡಿಶಾದಲ್ಲಿ ೩೫ ಜನರ ಹತ್ಯೆಯಾಗಿವೆ. ಇಂದಿಗೂ ಇಂಥ ಹತ್ಯೆಗಳು ನಡೆಯುತ್ತಿದ್ದು, ಅವುಗಳಲ್ಲಿ ಬಹಳಷ್ಟು
ಪ್ರಕರಣಗಳು ಹೊರಗೆ ಬರುವುದಿಲ್ಲ ಎನ್ನಲಾಗಿದೆ. ಮಧ್ಯಯುಗದ ಯುರೋಪಿನಲ್ಲಿ ಮಾಟಗಾತಿಯರ ಬೇಟೆ ವಿಶೇಷವಾಗಿ ನಡೆಯಿತು, ೧೩ನೇ ಶತಮಾನದಿಂದ ೧೮ನೇ ಶತಮಾನದವರೆಗೆ ಅವ್ಯಾಹತವಾಗಿ ಮುಂದುವರಿಯಿತು. ೩/೪ ಭಾಗದ ಮಾಟಗಾತಿಯರ ಬೇಟೆಯು
ಪ್ರಧಾನವಾಗಿ ಜರ್ಮನಿ, ಫ್ರಾನ್ಸ್, ಉತ್ತರ ಇಟಲಿ ಮತ್ತು ಸ್ವಿಜ಼ರ್ಲೆಂಡ್‌ನಲ್ಲಿ ನಡೆದವು. ಯುರೋಪ್ ಖಂಡದ ಕಟ್ಟಕಡೆಯ ಮಾಟಗಾತಿಯ ಬೇಟೆ
ಮತ್ತು ಗಲ್ಲುಶಿಕ್ಷೆಯು ೧೭೮೨ರ ಸ್ವಿಜ಼ರ್ಲೆಂಡ್‌ನಲ್ಲಿ ನಡೆಯಿತು ಎನ್ನಲಾಗಿದೆ.

ಲಭ್ಯ ದಾಖಲೆಗಳ ಅನ್ವಯ ೧,೧೦,೦೦೦ ಮಾಟಗಾತಿಯರ ಬಹಿರಂಗ ವಿಚಾರಣೆ ನಡೆದಿದ್ದು, ಅವರಲ್ಲಿ ಸುಮಾರು ೪೦,೦೦೦-೬೦,೦೦೦
ಜನರಿಗೆ ಮರಣದಂಡನೆ ವಿಧಿ ಲಾಗಿದೆ. ಅಂಥ ಮಾಟಗಾತಿಯರ ವಿಚಾರಣಾ ಪ್ರಕರಣಗಳಲ್ಲಿ ಅಮೆರಿಕದ ಮಸಾಚುಸೆಟ್ಸ್ ಪ್ರದೇಶದಲ್ಲಿದ್ದ ಸೇಲಮ್ ಎಂಬ ಹಳ್ಳಿಯಲ್ಲಿ ನಡೆದ ಪ್ರಕರಣವು (ಜೂನ್ ೧೬೯೨-ಮೇ ೧೬೯೩) ಅತ್ಯಂತ ಕುತೂಹಲಕರವಾಗಿದೆ. ಇದು ಸಮಕಾಲೀನ ಚರ್ಚ್ ರಾಜಕೀಯ, ಕುಟುಂಬಗಳ ನಡುವಿನ ದ್ವೇಷ, ಉನ್ಮಾದ ಪೀಡಿತ ಮಕ್ಕಳು ಹಾಗೂ ರಾಜಕೀಯದ ಕಲಸುಮೇಲೋಗರದ ಫಲವಾಗಿತ್ತು ಎಂದು ಇಂದಿಗೆ ಸ್ಪಷ್ಟವಾಗಿದೆ.

೧೭ನೇ ಶತಮಾನ. ಅಮೆರಿಕದ ಮಸಾಚುಸೆಟ್ಸ್ ಕೊಲ್ಲಿ. ಸೇಲಮ್ ಎಂಬ ನಗರ. ಅಲ್ಲಿಂದ ೧೬ ಕಿ.ಮೀ ದೂರದಲ್ಲಿ ಅದೇ ಹೆಸರಿನ ಹಳ್ಳಿಯೂ ಇತ್ತು. ಸುಮಾರು ೫೦೦ ಜನ  ವಾಸವಾಗಿದ್ದ ಆ ಹಳ್ಳಿಯಲ್ಲಿ ಎರಡು ಕುಟುಂಬಗಳ ನಡುವೆ ದ್ವೇಷವಿತ್ತು. ಮೊದಲನೆಯದು ಪೋರ್ಟರ್ ಕುಟುಂಬ.
ಇವರು ಶ್ರೀಮಂತರು. ಇವರ ಸಾಕಷ್ಟು ಬೆಂಬಲಿಗರು ಸೇಲಮ್ ನಗರದಲ್ಲಿದ್ದರು. ಎರಡನೆಯದು ಪುಟ್ನಮ್ ಕುಟುಂಬ. ಇವರು ರೈತಾಪಿ ವರ್ಗದವರು. ಇವರಿಗೆ ಸೇಲಮ್ ಹಳ್ಳಿಯಲ್ಲಿದ್ದ ಶ್ರೀಸಾಮಾನ್ಯರ ಅಪಾರ ಬೆಂಬಲವಿತ್ತು. ಈ ಎರಡೂ ಕುಟುಂಬಗಳ ನಡುವೆ ಆಸ್ತಿಗಾಗಿ ವ್ಯಾಜ್ಯಗಳು ನಡೆಯುತ್ತಿದ್ದವು.

೧೬೮೯. ಪುಟ್ನಮ್ ಕುಟುಂಬದ ಬೆಂಬಲದೊಡನೆ ಸ್ಯಾಮ್ಯುಯಲ್ ಪ್ಯಾರಿಸ್ ಎಂಬುವವನು ಚರ್ಚಿನ ಪಾದ್ರಿಗಿ ಬಂದ. ಈತನ ಜತೆ ಮಡದಿ, ಮೂವರು ಮಕ್ಕಳು, ಒಬ್ಬ ಸೋದರಳಿಯನೂ ಬಂದರು. ಜತೆಗೆ ಇಬ್ಬರು ಗುಲಾಮರಿದ್ದರು. ಒಬ್ಬ ಗುಲಾಮ, ಜಾನ್ ಇಂಡಿಯನ್ ಎಂಬ
ಪುರುಷ. ಮತ್ತೋರ್ವಳು ಟಿಟುಬ ಎಂಬ ಮಹಿಳೆ. ಟಿಟುಬ, ಬಹುಶಃ ಆಫ್ರಿಕ ಮೂಲದವಳಾದ ಕಾರಣ ಮಕ್ಕಳಿಗೆ ವೂಡು ಕಥೆಗಳನ್ನು (ಮಾಟ) ಹೇಳುತ್ತಿದ್ದಳು. ಅವನ್ನು ಸೋದರಳಿಯ ಅಬಿಗೇಲ್ ವಿಲಿಯಮ್ಸ್ (೧೧ ವರ್ಷ) ಹಾಗೂ ಮಗಳು ಬೆಟ್ಟಿ (೯ ವರ್ಷ) ನಿತ್ಯ ಕೇಳುತ್ತಿದ್ದರು. ೧೬೯೨ ಜನವರಿ. ಅಬಿಗೇಲ್ ಮತ್ತು ಬೆಟ್ಟಿ ವಿಚಿತ್ರವಾಗಿ ವರ್ತಿಸಲಾರಂಭಿಸಿದರು. ಯಾರೋ ತಮ್ಮನ್ನು ಕಚ್ಚುತ್ತಿದ್ದಾರೆ, ಜಿಗುಟುತ್ತಿದ್ದಾದರೆ ಎಂದು ಚೀರಲಾರಂಭಿಸಿದರು.

ದೇಹವನ್ನು ಹೇಗೆಂದರೆ ಹಾಗೆ ತಿರುಚಲಾರಂಭಿಸಿದರು. ಗಂಟಲಿನಿಂದ ಅಸಹಜ ಶಬ್ದಗಳನ್ನು ಹೊರಡಿಸಿದರು. ಕೈಗೆ ಸಿಕ್ಕ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರು. ವಿಪರೀತ ಸೆಳವು ಬಂದು ಮೂರ್ಚೆ ತಪ್ಪುತ್ತಿದ್ದರು. ವೈದ್ಯರು ಪರೀಕ್ಷೆ ಮಾಡಿದರೂ ಅವರ ವಿಚಿತ್ರ ವರ್ತನೆಗೆ ಕಾರಣ ಮಾತ್ರ
ತಿಳಿಯಲಿಲ್ಲ. ಅಸ್ತಮ/ಮಿದುಳುರಿಯೂತ/ಲೈಮ್ ಕಾಯಿಲೆ/ಅಪಸ್ಮಾರ/ಭ್ರಮೆ ಹೀಗೆ ಒಂದೊಂದು ಕಾರಣಗಳಿರಬಹುದೆಂದು ತರ್ಕಿಸಿದರು. ಕೊನೆಗೆ ಇದು ‘ಅರ್ಗಟ್ ವಿಷವೇರಿಕೆ’ಯ ಸೆಳವು ರೂಪವಿರಬಹುದೆಂಬ ತೀರ್ಮಾನಕ್ಕೆ ಬಂದರು. ಗದಾಶೀರ್ಷ ಶಿಲೀಂಧ್ರ ಅಥವಾ ಕ್ಲಾವಿಸೆಪ್ಸ್ ಪರ್ಪ್ಯೂರ ಎಂಬುದು ಕಿರುಗೋಧಿಯ ತೆನೆಯಲ್ಲಿ ಬೀಡುಬಿಡುವ ಒಂದು ಪರಾವಲಂಬಿ ಶಿಲೀಂಧ್ರ.

ಕಿರುಗೋಧಿ ತೆನೆಯಲ್ಲಿ ಕಾಯಕವಚವು (ಸ್ಕ್ಲೀರೋಶಿಯ) ರೂಪುಗೊಳ್ಳುತ್ತಿತ್ತು. ಈ ಕಾಯಕವಚದಲ್ಲಿ ಅಪಾಯಕಾರಿ ‘ಅರ್ಗಟ್ ಆಲ್ಕಲಾಯ್ಡು’ಗಳಿರುತ್ತಿದ್ದವು. ಈ ಕಾಯಕವಚವಿದ್ದ ತೆನೆಗಳನ್ನು ಬೀಸಿ, ಆ ಹಿಟ್ಟಿನಿಂದ ಮಾಡಿದ ಬ್ರೆಡ್ ಮಾಡಿ ತಿಂದರೆ ವಿಷದ ಲಕ್ಷಣಗಳು
P ಣಿ ಸಿ P ತಿ z . ವಿಷಲಕ್ಷಣಗಳನ್ನು ೨ ರೀತಿಯಲ್ಲಿ ಗಿ P ರಿ ತಿ z g – ತೀವ್ರಸ್ವರೂಪದ ವಿಷವೇರಿಕೆಯನ್ನು ಸೆಳವು ಲಕ್ಷಣಗಳು (ಕನ್ವಲ್ಸಿವ್
ಅರ್ಗಟಿಸಂ) ಹಾಗೂ ದೀರ್ಘಕಾಲದಲ್ಲಿ ಕಂಡುಬರುವ ಒಣ ಅಂಗಕ್ಷಯ ವಿಷವೇರಿಕೆಯ (ಗ್ಯಾಂಗ್ರಿ ಸ್ ಅರ್ಗಟಿಸಂ) ಲಕ್ಷಣಗಳು ಎಂಬ ರೀತಿಯಲ್ಲಿ.
ಅರ್ಗಟ್ ಆಲ್ಕಲಾಯ್ಡುಗಳಿದ್ದ ಬ್ರೆಡ್ಡನ್ನು ತಿಂದಮೇಲೆ, ಆ ಆಲ್ಕಲಾಯ್ಡುಗಳು ಶರೀರದಲ್ಲಿ ಎಲ್‌ಎಸ್‌ಡಿಯಾಗಿ ಪರಿವರ್ತನೆಯಾಗುತ್ತಿದ್ದವು.

ವಾಕರಿಕೆ, ವಾಂತಿ, ತಲೆನೋವು, ಉಸಿರುಗಟ್ಟುವುದು, ಭ್ರಮೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಚರ್ಮದ ಕೆಳಗೆ ಹಾವು, ಚೇಳು ಓಡಾಡಿದಂಥ ಅನುಭವವಾಗುವುದು, ಹೇಗೆಂದರೆ ಹಾಗೆ ಕುಣಿಯುವುದು, ಸೆಳವು ಬಂದು ಮೂರ್ಛೆ ಬೀಳುವುದು ಇತ್ಯಾದಿ ಲಕ್ಷಣಗಳು ಅರ್ಗಟ್ ವಿಷವೇರಿಕೆಯಲ್ಲಿ ಕಂಡುಬರುತ್ತಿದ್ದವು. ಆದರೆ ವೈದ್ಯರಿಗೆ ಇವೆಲ್ಲವು ಅರ್ಗಟ್ ಆಲ್ಕಲಾಯ್ಡುಗಳ ವಿಷವೇರಿಕೆಯ ಲಕ್ಷಣದ ಫಲ ಎಂದು
ಹೇಳಲು, ಬಹುಶಃ ಧೈರ್ಯವಿರಲಿಲ್ಲ ಎನಿಸುತ್ತದೆ. ಹಾಗಾಗಿ ಇದೆಲ್ಲವೂ ಅತೀತಶಕ್ತಿಯ ಆಟ, ಮಾಟದ ಲಕ್ಷಣಗಳು ಎಂದು ಘೋಷಿಸಿದರು.

ತನ್ನ ಮಕ್ಕಳಿಗೆ ಮಾಟ ಮಾಡಿದ್ದಾರೆ ಎಂಬ ಸುದ್ದಿಯನ್ನು ಕೇಳುತ್ತಲೇ ಕುಪಿತನಾದ ಪ್ಯಾರಿಸ್ ತೀವ್ರವಾಗಿ ಪ್ರಶ್ನಿಸಿದಾಗ, ಮಕ್ಕಳು ತಮಗಾಗುತ್ತಿರುವ ಎಲ್ಲ ಅನುಭವಗಳಿಗೆ ಗುಲಾಮಳಾಗಿ ಕೆಲಸ ಮಾಡುತ್ತಿದ್ದ ಟಿಟುಬಳೇ ಕಾರಣ ಎಂದು ಆಕೆಯ ಮೇಲೆ ಆರೋಪ ಹೊರಿಸಿದರು. ಹಾಗೆಯೇ
ಸಾರಾ ಗುಡ್ ಮತ್ತು ಸಾರಾ ಆಸ್ಬರ್ನ್ ಎಂಬ ಇಬ್ಬರು ಬಡ ಹೆಂಗಸರ ಹೆಸರನ್ನೂ ಸೇರಿಸಿದರು. ಮಾರ್ಚ್ ೧. ಸೇಲಮ್ ನಗರದಿಂದ ಜಾನ್ ಹಾಥೋರ್ನ್ ಮತ್ತು ಜೊನಾಥನ್ ಕೋರ್ವಿನ್ ಇಬ್ಬರು ನ್ಯಾಯಾಧೀಶರು ಸೇಲಮ್ ಹಳ್ಳಿಗೆ ಬಂದರು. ಅನಧಿಕೃತವಾಗಿ ಟಿಟುಬಳನ್ನು ವಿಚಾರಿಸಿದರು. ಟಿಟುಬ ಹೇಳಿ ಕೇಳಿ ಗುಲಾಮಳು.

ನ್ಯಾಯಾಧೀಶರ ವಿಚಾರಣೆಯನ್ನು ತಡೆದುಕೊಳ್ಳಲಾಗದೆ, ‘ಹೌದು… ನನ್ನ ಬಳಿ ಸೈತಾನ ಬಂದಿದ್ದ. ಅವನ ಜತೆ ಒಡಂಬಡಿಕೆ ಮಾಡಿಕೊಂಡು ಸಹಿ ಹಾಕಿದ್ದೇನೆ’ ಎಂದಳು. ಜತೆಗೆ, ‘ಸೈತಾನನ ಪುಸ್ತಕದಲ್ಲಿ ಸಾರಾ ಗುಡ್ ಮತ್ತು ಸಾರಾ ಆಸ್ಬರ್ನ್ ಅವರ ಹೆಸರುಗಳ ಜತೆಯಲ್ಲಿ ಇನ್ನೂ ೭ ಜನರ ಹೆಸರುಗಳಿದ್ದವು’ ಎಂದೂ ಹೇಳಿದಳು. ನ್ಯಾಯಾಧೀಶನಿಗೆ ನಿರೀಕ್ಷಿತ ತಪ್ಪೊಪ್ಪಿಕೆಯು ದೊರೆತಿತ್ತು. ಜತೆಗೆ ಸಮುದಾಯದಲ್ಲಿ ಮತ್ತೂ ೭ ಜನ ಮಾಟಗಾತಿಯರು ಇದ್ದಾರೆ ಎನ್ನುವ ಸುದ್ದಿ ಸೇಲಮ್ ಹಳ್ಳಿಯ ಜನರಲ್ಲಿ ತೀವ್ರ ಸಂಚಲನ ಉಂಟುಮಾಡಿತು. ಈ ಸುದ್ದಿಯು ರೆಕ್ಕೆ ಪುಕ್ಕಗಳೊಂದಿಗೆ ಎಲ್ಲೆಡೆ ಹರಡುತ್ತಿದ್ದಂತೆಯೇ ಆನ್ ಪುಟ್ನಮ್ ಜೂನಿಯರ್, ಆಕೆಯ ತಾಯಿ, ಸೋದರ ಸಂಬಂಧಿ ಹಾಗೂ ಪುಟ್ನಮ್ ಕುಟುಂಬದ ಸೇವಕಿಯರು ಮಕ್ಕಳು ತೋರಿದಂಥ ವಿಚಿತ್ರ ವರ್ತನೆಗಳನ್ನು ತೋರುತ್ತ ಸೆಳವು ಬಂದು ಬೀಳಲಾರಂಭಿಸಿದರು.

ನಂತರ ಪುಟ್ನಮ್ ಕುಟುಂಬದ ವಿರೋಧಿಗಳಲ್ಲಿ ಅನೇಕರು ಈ ವಿಚಿತ್ರ ವರ್ತನೆಗಳನ್ನು ತೋರಲಾರಂಭಿಸಿದರು. ಮೇ ೨೭, ೧೬೯೨. ಮಸಾಚುಸೆಟ್ಸ್ ಕೊಲ್ಲಿಯ ಗವರ್ನರ್ ವಿಲಿಯಂ ಫಿ-, ಸೇಲಮ್ ಹಳ್ಳಿಯ ಪ್ರಕರಣದ ಅಧಿಕೃತ ವಿಚಾರಣೆಯನ್ನು ನಡೆಸಲು ಆಣತಿಯನ್ನಿತ್ತ. ೭
ನ್ಯಾಯಾಽಶರನ್ನು ಒಳಗೊಂಡ ಮಂಡಳಿ ವಿಚಾರಣೆಯನ್ನು ಆರಂಭಿಸಿತು. ಅದು ಶುರುವಾಗುತ್ತಿದ್ದಂತೆ ಆರೋಪಿಗಳಲ್ಲಿ ೨ ಗುಂಪುಗಳು ಉಂಟಾದವು. ಮೊದಲನೆಯವರು ತಾವು ಸೈತಾನನ ಪ್ರಭಾವಕ್ಕೆ ಒಳಗಾಗಿ ಮಾಟದಲ್ಲಿ ತೊಡಗಿದ್ದಾಗಿಯೂ, ಇನ್ನುಮುಂದೆ ಮಾಟದಲ್ಲಿ ತೊಡಗುವುದಿಲ್ಲವೆಂದೂ, ತಮ್ಮನ್ನು ಕ್ಷಮಿಸಬೇಕೆಂದೂ ಪ್ರಾರ್ಥಿಸಿದರು.

ಇಂಥವರನ್ನು ನ್ಯಾಯಾಧೀಶರ ಮಂಡಳಿ ಕ್ಷಮಿಸಿ, ‘ಇವರಿಗೆ ದೇವರು ಶಿಕ್ಷೆ ಕೊಡಲಿ’ ಎಂದರು. ಎರಡನೆಯ ಗುಂಪಿ ಲ್ಲಿದ್ದ ಆರೋಪಿಗಳು ತಾವು ಮಾಟಗಾರರೆಂಬ ಆರೋಪವೇ ಸುಳ್ಳು ಎಂದು ವಾದಿಸಲಾರಂಭಿಸಿದರು. ಹಾಗಾಗಿ ನ್ಯಾಯಾಧೀಶರು ಇವರ ವಿಷಯದಲ್ಲಿ ಉಗ್ರ ನಿಲುವನ್ನು ತಳೆದರು. ತಮ್ಮ ಕಣ್ಣ ಮುಂದೆಯೇ ಅನ್ಯಾಯ ನಡೆಯುತ್ತಿದ್ದರೂ ಹಳ್ಳಿಗರು ಮೂಕಪ್ರೇಕ್ಷಕರಾಗಿದ್ದರು. ಏಕೆಂದರೆ ಎಲ್ಲಿ ತಮ್ಮನ್ನೂ ಮಾಟಗಾತಿಯರು ಎಂದು ಸಾರಿಬಿಡುತ್ತಾರೋ ಎಂಬ ಭಯ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಬ್ರಿಜೆಟ್ ಬಿಷಪ್, ತಾನು ಮಾಟಗಾತಿಯಲ್ಲ ಎಂದು ವಾದಿಸಿದ್ದಳು.

ಅವಳನ್ನು ಜೂನ್ ೧೦ರಂದು ಸೇಲಮ್ ಹಳ್ಳಿಯ ಗ್ಯಾಲೋಸ್ ಹಿಲ್ ಎಂಬ ಬೆಟ್ಟದ ಮೇಲೆ ನೇಣಿಗೆ ಏರಿಸಿದರು. ಜುಲೈ ೧೯ರಂದು ಐವರನ್ನು ಮತ್ತೆ
ನೇಣಿಗೇರಿಸಿದರು. ಜಾರ್ಜ್ ಬರೋಸ್ ಎಂಬುವವನು ೧೬೮೦-೮೩ರವರೆಗೆ ಸೇಲಮ್ ಹಳ್ಳಿಯಲ್ಲಿ ಪಾದ್ರಿಯಾಗಿ ಕೆಲಸ ಮಾಡಿದ್ದ. ಅವನನ್ನು ‘ಮಾಟಗಾತಿಯರ ರಿಂಗ್ ಲೀಡರ್’ ಎಂದು ಆರೋಪಿಸಿ ಆಗಸ್ಟ್ ೧೯ರಂದು, ಇನ್ನೂ ನಾಲ್ವರ ಜತೆ ನೇಣಿಗೇರಿಸಿದರು. ಜಾರ್ಜ್ ಬರೋಸ್
ನೇಣುಕುಣಿಕೆಯ ಮುಂದೆ ನಿಂತು ನಿರರ್ಗಳವಾಗಿ ಭಗವಂತನನ್ನು ಪ್ರಾರ್ಥಿಸಿದ. ಇದನ್ನು ನೋಡಿದ ಎಲ್ಲರಿಗೂ ಆಶ್ಚರ್ಯವಾಯಿತು. ಸೈತಾನನ ಪ್ರಭಾವಕ್ಕೆ ಒಳಗಾದವರು ಭಗವಂತನ ಸ್ತೋತ್ರವನ್ನು ಇಷ್ಟು ಸುಟವಾಗಿ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಹಳ್ಳಿಗರಲ್ಲಿ ಜಾರ್ಜ್ ಬರೋಸ್
ಬಹುಶಃ ಮಾಟಗಾರನಲ್ಲ ಎಂಬ ಗುಸುಗುಸು ತೀವ್ರವಾಯಿತು.

ಆದರೆ ನ್ಯಾಯಮಂಡಳಿ ಈ ವಾದವನ್ನು ತಿರಸ್ಕರಿಸಿತು. ಸೆಪ್ಟೆಂಬರ್ ೨೨ರಂದು ಮತ್ತೆ ೮ ಜನರನ್ನು ಗಲ್ಲಿಗೆ ಹಾಕಿದರು. ಮಾಥಾ ಕೋರಿ ಎಂಬ ಹಿರಿಯ ಮಹಿಳೆಯನ್ನು ನೇಣಿಗೇರಿಸಿ, ಆಕೆಯ ಗಂಡ ಗೈಲ್ಸ್ ಸಹ ಮಾಟದಲ್ಲಿ ತೊಡಗಿರುವ ಬಗ್ಗೆ ಒಪ್ಪಿಕೊಳ್ಳಬೇಕೆಂದು ಒತ್ತಡ ಹಾಕಿ, ಅವನ ಮೇಲೆ ಒಂದು ಚಪ್ಪಡಿ ಕಲ್ಲನ್ನು ಹೇರಿದರು. ಕಲ್ಲಿನ ಒತ್ತಡಕ್ಕೆ ಸಿಕ್ಕಿ ಆತ ಸತ್ತೇಹೋದ.

ಅಕ್ಟೋಬರ್ ೨೯. ಗವರ್ನರ್ ಫಿಪ್‌ನಿಗೆ ಸ್ವಲ್ಪ ಅನುಮಾನ ಬಂದು ವಿಚಾರಣೆ ನಿಲ್ಲಿಸುವಂತೆ ಸೂಚಿಸಿದ. ಹಳೆಯ ನ್ಯಾಯಾಧೀಶರ ಸ್ಥಾನದಲ್ಲಿ ನ್ಯಾಯಾಽಶರ ಮತ್ತೊಂದು ಮಂಡಳಿಯನ್ನು ಕಳುಹಿಸಿದ. ಜನವರಿಯಲ್ಲಿ ಮತ್ತೆ ವಿಚಾರಣೆ ಆರಂಭವಾಗಿ ೫೬ ಜನರ ವಿಚಾರಣೆ ನಡೆಯಿತು. ಆದರೆ ಕೇವಲ ಮೂವರಿಗೆ ಮಾತ್ರ ಗಲ್ಲುಶಿಕ್ಷೆ ದೊರೆಯಿತು. ೧೯೭೬ರಲ್ಲಿ ಲಿಂಡ ಆರ್. ಕಾರ್ಪೋರಿಯಲ್ ಎಂಬಾಕೆ ಸೇಲಮ್ ವಿಚಾರಣೆಯನ್ನು ವಿಸ್ತೃತವಾಗಿ ಅಧ್ಯಯನ ಮಾಡಿದಳು. ಆರೋಪಿಗಳಲ್ಲಿ ಕಂಡುಬಂದ ಎಲ್ಲ ಲಕ್ಷಣ ಗಳಿಗೆ ಅರ್ಗಟ್ ವಿಷವೇರಿಕೆಯೇ ಕಾರಣ ಎಂದು ‘ಸೈನ್ಸ್’ ಪತ್ರಿಕೆಯಲ್ಲಿ (ಏಪ್ರಿಲ್ ೨, ೧೯೭೬) ತೀರ್ಮಾನಕ್ಕೆ ಬಂದಳು.

೧೯೮೨ರಲ್ಲಿ ಮೇರಿ ಮಾಂಟೋಸಿಯನ್ ‘ಅಮೆರಿಕನ್ ಸೈಂಟಿಸ್ಟ್’ ಪತ್ರಿಕೆಯಲ್ಲಿ ಕಾರ್ಪೋರಿಯಲ್ ವಾದವನ್ನು ಎತ್ತಿ ಹಿಡಿಯುವ ಲೇಖನವನ್ನು ಪ್ರಕಟಿಸಿದಳು. ಹೀಗೆ ಒಂದು ಶಿಲೀಂಧ್ರವು ೧೯ ಜನ ಮುಗ್ಧರ ಗಲ್ಲುಶಿಕ್ಷೆಗೆ ಕಾರಣವಾದದ್ದು, ಮಾನವನ ಇತಿಹಾಸದಲ್ಲಿ ಒಂದು ವಿಚಿತ್ರ
ಅಧ್ಯಾಯವಾಗಿದೆ.