Wednesday, 11th December 2024

ಹಾಗಿದ್ದರೂ ಹೇಳೋಣ, ಹ್ಯಾಪಿ ಬರ್ತ್‌ ಡೇ ಚಾಚಾ !

ತನ್ನಿಮಿತ್ತ

ವಿನಯ್‌ ಖಾನ್‌

vinaykhan078@gmail.com

ಸ್ವಾತಂತ್ರ್ಯ ಬಂದು ಕಣ್ತೆರೆಯುವ ಮುನ್ನವೇ ಜನಾಂಗೀಯ ಹತ್ಯೆಗಳನ್ನು ಉದ್ದೀಪಿಸಿದ, ದೇಶ ಇಂದಿಗೂ ತಲೆ ಎತ್ತಲಾಗದಂತೆ ಮಾಡಿದ, ನೂರಾರು ಅಪಸವ್ಯ
ನೋಡಿಯೂ ಸಿಗಾರ್ ಹೊತ್ತಿಸಿಕೊಂಡು ರಂಗುರಂಗಿನ ಜೀವನ ನಡೆಸಿದ, ಸ್ವಾರ್ಥಕ್ಕೆ ದೇಶದ ಬೆಳವಣಿಗೆ ಚಿವುಟಿದ ಮಹಾ ಮುತ್ಸದ್ಧಿಯ ಹುಟ್ಟಿದ ದಿನವಿಂದು!

ಭಾರತದ ಮೊದಲ ಪ್ರಧಾನ ಮಂತ್ರಿ. ಆಧುನಿಕ ಭಾರತದ ಶಿಲ್ಪಿ. ಸ್ವಯಂ ಭಾರತರತ್ನ ಪ್ರಶಸ್ತಿ ಕೊಟ್ಟುಕೊಂಡ ಹೆಮ್ಮೆಯ ಭಾರತೀಯ. ಭಾರತ-ಪಾಕಿಸ್ತಾನವನ್ನು
ಮುಬ್ಬಾಗ ಮಾಡಿದಂತಹ ರಾಜನೀತಿಜ್ಞ. ದೇಶ ಮುರಿದು ಪಾಕಿಸ್ತಾನದ ಹಿಂದೂಗಳ ಮಾರಣ ಹೋಮವಾದಾಗ, ಅವೆಲ್ಲ ರಾಜಕೀಯದಲ್ಲಿ ಕಾಮನ್ ಕಣ್ರೀ ಎಂದ ಮಹಾ ಮುತ್ಸದ್ಧಿ. ಈ ದೇಶಕ್ಕೋಸ್ಕರವೇ ತನ್ನ ವಂಶವೃಕ್ಷ ಬೆಳೆಸಿ, ಅದು ಇನ್ನು ದೇಶದ ರಾಜಕಾರಣದಲ್ಲಿ ಬಿಡುಬಿಟ್ಟು ತನ್ನದೇ ಆಟಕ್ಕೆ ಅಣಿ ಮಾಡಿದಂತಹ ಮಹಾನುಭಾವ. ದೇಶಕ್ಕೆ ಆಗತಾನೆ ಸ್ವಾತಂತ್ರ ಬಂದು ದೇಶವು ಇನ್ನಿಲ್ಲದ ಬಡತನದಲ್ಲಿದ್ದಾಗಲೂ ಪಾಕಿಸ್ತಾನಕ್ಕೆ 55 ಕೋಟಿ ಬಳುವಳಿ ನೀಡಿದ ಮಹಾನ್ ನೇತಾರ.

ಹೌದು, ಪಂಡಿತ ಜವಾಹರ್ ಲಾಲ್ ನೆಹರು! ಈ ದೇಶದ ಅತ್ಯುತ್ತಮ ಪ್ರಧಾನಿ ಎಂದೆನಿಸಿಕೊಂಡ ನೆಹರು ಪ್ರಮಾದಗಳು ಅಕ್ಷರಗಳಲ್ಲಿ ವರ್ಣಿಸಲ ಸಾಧ್ಯ. ಗಾಂಧಿ, ಪಟೇಲ್ ಅವರು ನೆಹರುಗಿಂತ ಅಪಾರ ಜನಪ್ರಿಯತೆ ಗಳಿಸಿ, ಪ್ರಧಾನಿ ಪಟ್ಟಕ್ಕೆ ಸಮರ್ಥರಾಗಿದ್ದರು. ಆದರೇ ಗಾಂಧಿ ಒತ್ತಾಸೆಯ ಮೇರೆಗೆ ಪಟೇಲ್‌ ರಂತಹ ಜನಪ್ರಿಯರನ್ನು ಸೈಡ್ ಲೈನ್ ಮಾಡಿ ನೆಹರು ಗೆ ಪಟ್ಟ ಕಟ್ಟಿದ್ದು ಹಳೇ ಸಂಗತಿ ಬಿಡಿ.

1940-60, ಈ 20 ವರ್ಷ ದೇಶದ ಭವಿಷ್ಯವನ್ನು ನಿರ್ಣಯಿಸುವ ಸವಾಲಿನ ದಿನಗಳಾಗಿದ್ದವು. ಆದರೆ, ತಪ್ಪು ಮಾಹಿತಿ, ದುರ್ಬಲ ನಾಯಕತ್ವದ ಪರಿಣಾಮ ಭಾರತೀಯರು ಇಲ್ಲಿವರೆಗೂ ನರಳುವಂತೆ ಮಾಡಿದ ಕೆಟ್ಟ ದಿನಗಳಾಗಿ ಪರಿವರ್ತಿತಗೊಂಡವು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ಸಂಯುಕ್ತ ರಾಜ್ಯ ಗಳನ್ನು ದೇಶದ ಒಳಕ್ಕೆ ಬೇಗ ಬಿಟ್ಟುಕೊಳ್ಳದೆ ಹಲವಾರು ಅಪಸವ್ಯಗಳನ್ನು ಸೃಷ್ಟಿಸಿ ದೇಶವನ್ನು ಸುಡುವ ಬಾಣಲೆಗೆ ಹಾಕಿ. ಅದು ಇನ್ನೂ ನಮ್ಮನ್ನು ಸುಡುವ ತರಹ ಮಾಡಿದ ದಿನಗಳು.

ಭಾರತದ ಕಿರೀಟ ಎಂದೆನಿಸಿಕೊಳ್ಳುವ ಕಾಶ್ಮೀರ ಮುಳ್ಳಿನ ಕೀರಟವಾಗುವಂತೆ ದೇಶವನ್ನು ಚುಚ್ಚುತ್ತಿರುವುದನ್ನು ಮರೆಯಬೇಕೆ? ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಸೇರಲು ಹಾತೊರೆಯುತ್ತಿದ್ದಾಗ ಅದನ್ನು ನಿರ್ಲಕ್ಷಿಸಿ. ಆಮೇಲೆ ಕಾಶ್ಮೀರ ಸೇರ್ಪಡೆಯನ್ನು ತಾತ್ಕಾಲಿಕ, ಷರತ್ತು ಬದ್ಧವಾಗಿ ಕೊನೆಗಾಣಭಿಸಿದರು. 1948ರಲ್ಲಿ ಪಾಕಿಸ್ತಾನದ ದಾಳಿಕೊರರನ್ನು ಭಾರತೀಯ ಸೇನೆ ಕಾಶ್ಮೀರದಿಂದ ಓಡಿಸಿ ಕಾಶ್ಮೀರವನ್ನು ಭಾರತಕ್ಕೆ ತರಲು ಹಾತೊರೆಯುತ್ತಿದ್ದಾಗ ಸೇನೆ ತಡೆ ಹಿಡಿದು ಆ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸಿ, ಅಂಬೇಡ್ಕರ್, ಪಟೇಲರ ವಿರೋಧದ ನಡುವೆಯೂ ಕಾಶ್ಮೀರಕ್ಕೆ 370, 365ಅ ವಿಶೇಷ ಸ್ಥಾನಮಾನ ನೀಡಿ ಭಾರತಕ್ಕೆ ತಲೆನೋವು ಮಾಡಿದ್ದು ಸರಿಯೇ? ಪಠಾಣ್ ಆಕ್ರಮಣಕಾರರಿಂದ ಸ್ವಾಧೀನಪಡಿಸಿಕೊಂಡ ಪ್ರದೇಶವನ್ನು ಸಂಪೂರ್ಣ ಮರುಪಡೆಯಲು ಭಾರತೀಯ ಸೇನೆಗೆ ಅವಕಾಶ ನೀಡದೆ. ಆ ಸ್ಥಳವನ್ನು POK ಮಾಡಿದ್ದು!

ಆಗ ತಾನೇ ಸ್ವಾತಂತ್ರ್ಯ ಬಂದಂತಹ ದೇಶಕ್ಕೆ ಪೊಲೀಸ್, ಕಾನೂನು ಸುವ್ಯವಸ್ಥೆ, ನ್ಯಾಯಾಂಗ, ಆರೋಗ್ಯ, ಶಿಕ್ಷಣ ಇವುಗಳಾವುದರ ಮೇಲು ಸರಿಯಾದ ಗಮನ ಹರಿಸದೇ ಬ್ರಿಟಿಷರನ್ನೇ ಅನುಕರಿಸಿದ್ದು, ಅನುಸರಿಸಿದ್ದು. ಸ್ವಾತಂತ್ರ್ಯಬಂದಾಗ ದೇಶದ ಜನಸಂಖ್ಯೆ 35 ಕೋಟಿ. ಆದರೆ ಈಗ! ಇವೆಲ್ಲ ತಲೆದೂಗಿದ್ದು ದೂರ ದೃಷ್ಟಿಯ ಕೊರತೆಯಿಂದಾಗಿ ಅಲ್ಲವೇ?. ಬಲೂಚಿಸ್ತಾನದ ಕಲಾತ್ ಖಾನ್ ಭಾರತಕ್ಕೆ ಸೇರಲು ಇಚ್ಛೆ ಇದ್ದರು ಸಹ ಪ್ರವೇಶಾನುಮತಿ ಕೊಡದೆ ಅದನ್ನು
ಪಾಕಿಸ್ತಾನ್‌ಗೆ ಸೇರುವ ಹಾಗೆ ಮಾಡಿದ್ದು ಸರಿಯೇ? ಹೈದರಾಬಾದ್ ನಿಜಾಮನಿಗೆ ಭಾರತಕ್ಕೆ ಸೇರುವ ಇಚ್ಛೆ ಏನಿರಲಿಲ್ಲ. ಹಾಗೆ ಹೈದರಾಬಾದ್ ಅನ್ನೂ ಭಾರತದ ಪಾಕಿಸ್ತಾನವನ್ನಾಗಿ ಮಾಡಿ ರಜಾಕ್‌ರ ಮೂಲಕ ಅಲ್ಲಿದ್ದ ಹಿಂದೂಗಳ ಮಾರಣಹೋಮ ನಡೆಯುವಂತೆ ಎತ್ತಿಕಟ್ಟಲಾಗಿತ್ತು.

ಅದನ್ನು ತಡೆದು ಹೈದರಾಬಾದ್ ಅನ್ನು ಭಾರತದ ಸುಪರ್ದಿಗೆ ಸೇರಿಸಿಕೊಳ್ಳಲು ಸರ್ದಾರ್ ಪಟೇಲರು ಸೇನೆ ಬಳಸಿದರು. ಈ ಚಿಂತನೆಯನ್ನೇ ವಿರೋಧಿಸಿದ್ದ ನೆಹರು, ಪಟೇಲರನ್ನು ‘ಸಂಪೂರ್ಣ ಕೋಮುವಾದಿ’ ಎಂದು ಕರೆದದ್ದನ್ನು ಕ್ಷಮಿಸಲಾಗುವುದೇ? ಆಮೇಲೆ ಛಲಬಿಡದ ಪಟೇಲರು ಆಪರೇಷನ್ ಪೋಲೊ ಮಾಡಿ ಹೈದರಾಬಾದ್ ಅನ್ನು ವಿಮೋಚನೆಗೊಳಿಸಿದರು ಬಿಡಿ. ಮೋಘಲರಿಂದ ನಾಶವಾಗಿದ್ದ ಸೋಮನಾಥಮಂದಿರದ ಪುನರುಜ್ಜೀವನವನ್ನು ವಿರೋಧಿಸಿದ್ದು, ಅದನ್ನು ಹಿಂದೂ ಪುನರುಜ್ಜೀವನ ಎಂದು ಕರೆದಿದ್ದು, ಹಾಗೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಅದರ ಉದ್ಘಾಟನೆಗೆ ಹೋಗುವಾಗ ‘ಭಾರತೀಯ ಜಾತ್ಯತೀ ಯತೆಯ ಸಂರಕ್ಷಿಸಲು ಉದ್ಘಾಟನೆಗೆ ಹೋಗದಿರುವುದು ಒಳ್ಳೆಯದು’ ಎಂದು ಸಲಹೆ ಇಟ್ಟಿದ್ದು… ಇವೆಲ್ಲ ಯಾಕೆ? ಯುನೈಟೆಡ್ ಸ್ಟೇಟ್ಸ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಸ್ಥಾನದ ಅವಕಾಶ ಕೊಟ್ಟಾಗ ಅದನ್ನು ಚೀನಾಗೆ ಬಳುವಳಿಯಾಗಿ ನೀಡಿದರಲ್ಲವೇ? ಇನ್ನು ಸಹ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ದೇಶವಾಗಲಾಗಿಲ್ಲ. ಈ ಪ್ರಮಾದ ಕ್ಷಮಿಸುವಂತಹದೆ? ನೇಪಾಳದ ರಾಜ ನೇಪಾಳವನ್ನು ಭಾರತಕ್ಕೆ ಸಂಪೂರ್ಣವಾಗಿ ಸೇರಿಸಲು ಇಚ್ಛೆ ಪಟ್ಟಾಗ ಅದನ್ನು ನಿರಾಕರಿಸಿದ್ದು, ಭಾರತವನ್ನು ಏಷ್ಯಾದ ಪರಮಾಣು ಶಕ್ತಿಯನ್ನಾಗಿ ರೂಪಿಸಲು ಅಮೆರಿಕದ ಅಧ್ಯಕ್ಷ ಕೆನಡಿಯ ಪ್ರಸ್ತಾಪವನ್ನು ನಿರಾಕರಿಸಿದ್ದು, ನಮ್ಮ ದೇಶವನ್ನು ಬೆಳೆಸಲು ಹಲವಾರು ಸಾಧ್ಯಗಳಿದ್ದರು ಅದನ್ನೆಲ್ಲ ಕಡೆಗಣಿಸಿ ಅವರು ಮಾಡಿದ್ದು…. ಒಂದೇ ಎರಡೇ? ಗರೀಭಿ ಹಠಾವೋ! ನೆಹರು ಕಾಲದಿಂದ ರಾಹುಲ್ ವರೆಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗುವ ಮೊದಲನೆಯ ಅಂಶ.

ಆದರೇ, ನಿಜವಾಗಲೂ ಬಡತನ ದೇಶವನ್ನು ತೊರೆದಿದೆಯೇ? ಆರ್‌ಬಿಐನ ಅಂಕಿ ಅಂಶಗಳ ಪ್ರಕಾರ ಒಬ್ಬ ಪ್ರಜೆಯ ಮೇಲೆ ಕಡಿಮೆಯೆಂದರೂ 30 ಸಾವಿರಕ್ಕೂ
ಅಧಿಕ ಸಾಲ ಮೈಮೇಲಿದೆ. ನೆನಪಿನಲ್ಲಿಡಿ ನಾವು ಯಾರ ಹತ್ತಿರವು ಸಾಲ ಮಾಡಿಲ್ಲ ಎಂದು ಖುಷಿ ಪಡಬೇಡಿ; 60 ವರ್ಷಗಳಲ್ಲಿ ಸರಕಾರವು ನಿಮ್ಮ ಮೇಲೆ 30 ಸಾವಿರಕ್ಕಿಂತ ಹೆಚ್ಚು ಸಾಲವನ್ನಿರಿಸಿದೆ! ಇದು ಗರೀಭೀ ಹಠಾವೋ! ಹಾಗೆ ನೆಹರು ವಂಶದ ಸೊಸೆ ಸೋನಿಯಾಗಾಂಧಿ ವಿಶ್ವದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ 12ನೇ ಸ್ಥಾನ ಪಡೆಯುವಷ್ಟು ಬಡವೆ!

ಈ ದೇಶದ ತುಂಬೆಲ್ಲ ಹಬ್ಬಿಸಿದ್ದು ಬರೀ ಸುಳ್ಳು! ಮಕ್ಕಳು ಓದುವ ಪುಸ್ತಕದಿಂದ ನೋಟಿನವರೆಗೂ! ನಾವೆಲ್ಲ ಓದಿದ್ದು ಬರೀ ಮೋಘಲರು, ನಿಜಾಮರು ಈ ದೇಶವನ್ನಾಳಿದರು ಅಂತ. ಎಲ್ಲೋ ಅಲ್ಪ ಸ್ವಲ್ಪ ಅಶೋಕ ಚಕ್ರವರ್ತಿ, ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್‌ರ ಹೆಸರು. ಈ ದೇಶವನ್ನೆಲ್ಲ ಆಳಿದ ಮಹಾನ್ ರಾಜರುಗಳ ಹೆಸರನ್ನು ಅಳಿಸಿದ್ದು ಯಾರು? ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಗಾಂಧಿ, ನೆಹರು ನೇತೃತ್ವದ ಕಾಂಗ್ರೆಸ್‌ನ ಹೋರಾಟಕ್ಕೇ,!? ಹಾಗಾದರೆ ಈ ದೇಶವೇ ಸರ್ವಸ್ವ, ಇಲ್ಲಿಯ ಜನರೇ ಸ್ವಂತ ಅಂತ ದೇಶಕ್ಕಾಗಿ ಪ್ರಾಣಾಹುತಿ ನೀಡಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಖುದಿರಾಮ ಬೋಸ್,
ಜಗದೀಶ್ ಚಂದ್ರ ಬೋಸರೆಲ್ಲ ಮಾಡಿದ್ದು ಏನನ್ನು? ಅವರಿಗೆ ಪುಸ್ತಕದಲ್ಲಿ ಸ್ಥಾನವೇ ಸಿಗಲಿಲ್ಲ.

ನಮ್ಮದು ಹಿಂದೂ ಸಂಸ್ಕೃತಿ, ನಾಗರಿಕತೆ ಅದಕ್ಕಾಗಿಯೇ ಭಾರತಕ್ಕೆ ಹಿಂದೂಸ್ತಾನ, ಭಾರತೀಯರನ್ನು ಹಿಂದೂ ಎಂದು ಕರೆದಿದ್ದು. ಭಾರವು ಮುಬ್ಬಾಗವಾಗಿ ಎಲ್ಲ
ದೇಶಗಳು ಇಸ್ಲಾಮಿಕ್ ದೇಶವೆಂದು ಘೋಷಿಸಿಕೊಂಡ ಮೇಲೂ ಭಾರತವನ್ನು ಜಡ್ಡು ಜಾತ್ಯತೀತೆಗೆ ಸಿಲುಕಿಸಿದ್ದು ಯಾರು? ನಮ್ಮ ಸಂಸ್ಕೃತಿಯನ್ನು ಹೀಗಳೆದು
ಬೇರೆಯವರನ್ನು ಅನುಕರಣೆ ಮಾಡಲಾರಂಭಿಸಿದ್ದು ಬೌದ್ಧಿಕ ಅಧಃಪತನಕ್ಕೆ ಕಾರಣವಾಗಿದ್ದನ್ನು ನೋಡಿಯೂ ಸುಮ್ಮನಿರಬೇಕಾದ ಪರಿಸ್ಥಿತಿ ಸೃಷ್ಠಿಸಿ ಹೋದರಲ್ಲ. ದೇಶ ವಿದ್ಯಾರ್ಜನೆ ಗುರುಕುಲ ಸಂಸ್ಕೃತಿ ಹೊಂದಿತ್ತು ಅದನ್ನು ಮಕಾಲೆಯ ಶಾಲೆಗಳನ್ನು ಮಾಡಿ ಇಡೀ ವಿದ್ಯಾಸಂಸ್ಕೃತಿಯನ್ನು ಮಕಾಡೆ ಮಲುಗಿಸಿದವರು ಇವರೇ ಅಲ್ಲವೇ? ತಥಾಕಥಿತ ಇತಿಹಾಸಗಾರರ ಕಟ್ಟ ಕಥೆಯಾಗಿ ದೇಶದ ಇತಿಹಾಸವನ್ನು ಸೃಷ್ಟಿಸಿದ್ದನ್ನು ಕ್ಷಮಿಸಲಾದೀತೆ? ಇನ್ನು ಕಾಂಗ್ರೆಸ್, ಸೂಕ್ತ ಅಧ್ಯಕ್ಷ ಸಿಗದೆ ಒದ್ದಾಡುತ್ತಿರುವ ಪಕ್ಷ. ಆದರೆ ಆ ಕಾಲದಲ್ಲಿ ಭಾರತದ ಅತಿ ದೊಡ್ಡ ರಾಜಕೀಯ ಪಾರ್ಟಿ, ನೆಹರು ಇದ್ದಂತಹ ಪಾರ್ಟಿ ಎಂದರೇ ಇನ್ನು ಕೇಳಬೇಕೆ; ಇದು ಸಹ ಬರೀ ಸುಳ್ಳು ಪುಕಾರು.

ನಮ್ಮ ಅಸ್ಥಿತ್ವದಿಂದ ಹಿಡಿದು ನಾವು ಪೂಜಿಸುವ ದೇವರವರೆಗೂ ಸುಳ್ಳೆಂದು ಹಬ್ಬಿಸಿ ನಮ್ಮನ್ನು ಮೂರ್ಖ ಮಾಡಲು ಹೊರಟಿತ್ತು. ನಾವು ಪೂಜಿಸುವ ರಾಮನನ್ನು, ನಾವು ಕೇಳುವ ಪುರಾಣವನ್ನು ಕಟ್ಟು ಕಥೆಯಂತೆ ಬಿಂಬಿಸಿದರು. ಸಣ್ಣ ವಿಷಯದಿಂದ ದೊಡ್ಡದರವರೆಗೂ ಬರೀ ಸುಳ್ಳು! ಈ ಸುಳ್ಳುಗಳ ಪ್ರಮಾದ ಅವರ ಹೆಸರನ್ನು ಬದಲು, ಮಾಡಿ ರಾಷ್ಟ್ರೀಯತೆಯನ್ನು ಬದಲು ಮಾಡಿ, ಧರ್ಮವನ್ನೇ ಬದಲಾಗಿಸಿಬಿಟ್ಟಿತ್ತು!

ನಮಗೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ, ಜಪಾನ್‌ನ ನಾಗಾಸಾಕಿ ಹಿರೋಷಿಮಾ ಮೇಲೆ ಅಣು ಬಾಂಬ್ ಹಾಕಿದ್ದು ೧೯೪೫ರಲ್ಲಿ, ಅಂದರೆ ಎರಡು ವರ್ಷ ಮುಂಚೆಯಷ್ಟೇ. ಆದರೆ ಜಪಾನ್ ಕೆಲವೇ ವರ್ಷಗಳಲ್ಲಿ ಮೈಕೊಡವಿ ಮೇಲೆದ್ದು ಇಡೀ ವಿಶ್ವವೇ ತನ್ನತ್ತ ನೋಡುವ ರೀತಿ ಮಾಡಿಕೊಂಡಿದೆ. ಇವರು ಮಾತ್ರ ಭಾರತವನ್ನು ಪ್ರಪಂಚದೆದುರು ಹಾವಾಡಿಗರ ದೇಶದಂತೆ ಬಿಂಬಿಸಿಟ್ಟು ಹೋದರು. ನಮ್ಮ ಅಂತಃಸತ್ವಕ್ಕೇ ಕೊಡಲಿ ಏಟು ಕೊಟ್ಟು ಪಾಶ್ಚಾತ್ಯೀಕರಣಕ್ಕೆ ಕಾರಣವಾದರಲ್ಲ ಇಂತವರೆಲ್ಲ ನಮ್ಮ ದೇಶವನ್ನಾಳಿದರೆಂದರೇ SHAME!

ಹೋಗಲಿ ಬಿಡಿ, ನಾವೆಲ್ಲ ಚಿಕ್ಕವರಿದ್ದಾಗ ಶಾಲೆಗೆ ಒಂದು ದಿನವಾದರೂ ಕಲರ್ ಕಲರ್ ಡ್ರೆಸ್ ಹಾಕಿಕೊಂಡು ಮೋಜುಮಾಡಲು ಸಪೋರ್ಟ್ ಮಾಡಿ ಹೋದ ಚಾಚಾ ನೆಹರುಗೆ ಒಂದ್ಸಲ ಹೇಳಿಬಿಡೋಣ ಹ್ಯಾಪಿ ಬರ್ತ್‌ಡೇ!!