ಆಪ್ತತೆ
ಡಾ.ಕೆ.ಪಿ.ಪುತ್ತೂರಾಯ
ಈ ಜಗತ್ತಿಗೆ ಬರುವಾಗ ಎಲ್ಲರೂ ಒಬ್ಬೊಬ್ಟರೇ. ಜಗತ್ತನ್ನು ಬಿಡುವಾಗಲೂ ಒಬ್ಬರೇ. ಆದರೆ ಈ ಬಂದು ಹೋಗೋದರ ನಡುವೆ
ಮದುವೆ ಮಾಡಿಕೊಂಡು ದಂಪತಿಗಳಾಗುತ್ತೇವೆ. ಮುಂದೆ ಮಕ್ಕಳನ್ನು ಪಡೆದು ಸಂಸಾರಿಗಳಾಗುತ್ತೇವೆ. ಗಂಡಸರು ಏಕೆ ಮದುವೆ ಆಗ್ತಾರೆ ಎಂದರೆ, ಬೀಚಿಯೇ ಹೇಳಿದ್ದಾರಲ್ಲ ‘ಗಂಡಸಾದವನಿಗೆ ಒಂದು ಮನೆ ಒಂದು ಹೆಂಡ್ತಿ ಇರಬೇಕು; ಸ್ವಂತದ್ದಾದರೆ ಒಳ್ಳೆಯ ದೂಂತ’.
ಹುಡುಗಿಯರು ಮದುವೆ ಆಗ್ತಾರೆ; ಕಾರಣ ಸೀಯಾದವಳಿಗೆ ಬಾಲ್ಯದಲ್ಲಿ ಹೆತ್ತವರ ಆಸರೆ, ಯೌವನದಲ್ಲಿ ಗಂಡನ ಪ್ರೀತಿ, ವೃದ್ಧಾಪ್ಯದಲ್ಲಿ ಮಕ್ಕಳ ಸೇವೆ ಬೇಕಾಗುತ್ತದೆ. ಒಟ್ಟಿನಲ್ಲಿ ಇಬ್ಬರೂ ಸೇರಿ ಮದುವೆಯಾಗುವ ಉದ್ದೇಶವೆಂದರೆ, ಸಂತೋಷಕ್ಕಾಗಿ
ಮತ್ತು ಸಂತಾನೋತ್ಪತ್ತಿಗಾಗಿ (For recreation and reproduction) ಇವುಗಳ ಪೈಕಿ ಸಂತಾನೋತ್ಪತ್ತಿ ಬಹುತೇಕ ಗ್ಯಾರಂಟಿ. ಅದಕ್ಕೆ ನೋಡಿ ಭಾರತದ ಜನಸಂಖ್ಯೆ ೧೩೦ ಕೋಟಿ. (ಕಾರಣ Indians are good at Indoor games!) ಆದರೆ ಸಂತೋಷ ಗ್ಯಾರಂಟಿ ಅಲ್ಲ.
ಈ ಸತ್ಯವನ್ನರಿತೇ ‘Marriages are made in heaven, but suffered on this earth’ ಎಂಬುದಾಗಿ ಒಬ್ಬರು ತಮ್ಮ ಅನುಭವವನ್ನು ಹೇಳಿಕೊಂಡರೆ, ಇನ್ನೊಬ್ಬರು ‘marriage is not a word; it is a sentence, it is a life sentence” ಎಂಬದಾಗಿ ಹೇಳಿದರು. ಇನ್ನೊಬ್ಬರಂತೂ ‘marriages is a hurriedly done act, which is slowly repented’ ಎಂದು ಪ್ರಶ್ಚಾತ್ತಾಪ ಪಟ್ಟುಕೊಂಡರು.
ತಾಳಿ ಕದ್ದು ಕಳ್ಳ ಸಿಕ್ಕಿ ಬಿದ್ದ ಎಂಬ ಸುದ್ದಿಯನ್ನು ಓದಿದಾತ ತನಗೇ ತಾನೇ ಹೇಳಿಕೊಳ್ಳುತ್ತಾನೆ. ತಾಳಿ ಕಟ್ಟಿ ನಾನು ಸಿಕ್ಕಿ ಬಿದ್ದೆ! ನನಗೆ ಮದುವೆ ಆಗಿದೆ. ಆದರೂ ನಾನು ಸುಖ-ಸಂತೋಷದಿಂದ ಇಲ್ಲ ಎಂಬ ಒಬ್ಬರ ಪ್ರಶ್ನೆಗೆ ಅನುಭಗಳು ತಾಳಿದವನು ಬಾಳಿ ಯಾನು ಎಂಬ ಮಾತಿದೆ. ಆದರೆ ತಾಳಿ ಕಟ್ಟಿದವನು ಬಾಳಿಯಾನೂಂತ ಎಲ್ಲಿದೆ? ಎಂಬ ಸಮಜಾಯಿಷಿಯನ್ನು ನೀಡಿದರು. ಒಟ್ಟಿನಲ್ಲಿ ಮದುವೆ ಎಂದರೆ 3 rings ಇದ್ದಂತೆ. Engagement ringwedding ring ª ಮತ್ತು suffering ring. ಒಟ್ಟಿನಲ್ಲಿ ಮದುವೆ ಆದ ಹೊಸದರಲ್ಲಿ ನಾವು ಆದರ್ಶ ದಂಪತಿಯಾಗಿರಬೇಕು; ನಮ್ಮದು ಆದರ್ಶ ಸಂಸಾರವಾಗಿgಬೇಕು ಎಂಬ ಆಸೆ, ಅಭಿಲಾಶೆ ಎಲ್ಲ ನವವಿವಾಹಿತರಿಗೆ ಇರುತ್ತದೆ.
ಆದರೆ ಬಯಸೋದು ಒಂದು. ಆಗೋದು ಇನ್ನೊಂದು. ಒಂದೊಂದು ಮನೆಯಲ್ಲಿ ಒಂದೊಂದು ಕತೆ ಇದೆ; ಒಂದೊಂದು ಮನದಲ್ಲಿ ಒಂದೊಂದು ವ್ಯಥೆ ಇದೆ. ಕೆಲವು ಇತರರಿಗೆ ಹೇಳಬಹುದಾದ ಕತೆಗಳು; ಕೆಲವು ಯಾರಿಗೂ ಹೇಳಲಾರದ ಕತೆಗಳು. ಕೆಲವಕ್ಕೆ ಪರಿಹಾರವಿದೆ; ಕೆಲವಕ್ಕೆ ಪರಿಹಾರವೇ ಇರೋದಿಲ್ಲ. ಆದರ್ಶ ದಂಪತಿ ಅನ್ನೋದು ಒಂದು ಸುಂದರ ಕಲ್ಪನೆ. ವಾಸ್ತವದಲ್ಲಿ ಆದರ್ಶ ದಂಪತಿಯೆನ್ನುವವರು ಬಹಳ ಅಪರೂಪ; ಇದ್ದಾರೆ.
ಕುರುಡ ಗಂಡ, ಕಿವುಡಿ ಹೆಂಡತಿ, ಈ ಕಟು ಸತ್ಯವನ್ನರಿತೇ ಬಲ್ಲವರೆಂದರು “Home is the only place where two undeclared enemies live together” ಅದಕ್ಕೆ ನೋಡಿ ಮದುವೆ ಮಂಟಪದಲ್ಲಿ ಕೊನೆಯಲ್ಲಿ ವಧೂ-ವರರು Handshake ಮಾಡಿಕೊಳ್ಳುತ್ತಾರೆ. ಕಾರಣ ಕೇಳಿದಾಗ ಇದು ಯುದ್ಧದ ನಿಯಮವೆಂದು ಹೇಳಲಾಯಿತು.
ವಾಸ್ತವದಲ್ಲಿ ಭಿನ್ನ ಭಿನ್ನವಾದ ಕೌಟುಂಬಿಕ-ಸಾಂಸ್ಕೃತಿಕ-ಆರ್ಥಿಕ-ಸಾಮಾಜಿಕ ಶೈಕ್ಷಣಿಕ ಹಿನ್ನೆಲೆಯಿಂದ ಬಂದ ಹುಡುಗ ಹುಡುಗಿ ಏನೇನೂ ಭಿನ್ನಾಭಿಪ್ರಾಯವಿಲ್ಲದೆ, ಜಗಳಗಳೇ ಇಲ್ಲದೆ ಸದಾ ಹಾಲುಜೇನಿನಂತೆ ಇದ್ದೇವೆ ಎಂದರೆ ನಂಬಲು ಸ್ವಲ್ಪ ಕಷ್ಟ ಸಾಧ್ಯವೇ. ಹೇಳಿ ಮಾಡಿಸಿದ ಜೋಡಿ ಸಿಗೋದು ಚಪ್ಪಲ್‌ನಲ್ಲಿ ಮಾತ್ರ. ಬಾಕಿ ಎಲ್ಲವೂ adjustment ಅಷ್ಟೆ. ಹೌದು ಮದುವೆ
ಯ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಹೆಂಡತಿಯು ಮುಖವೇ ಚಂದ; ಗಂಡನ ಸನಿಹವೇ ಅಂದ; ಬರಬರುತ್ತಾ ‘ಹಿತ್ತಲ ಗಿಡ ಮದ್ದಲ್ಲ; ಮನೆಯ ಹೆಂಡ್ತಿ ಮುದ್ದಲ್ಲ’ ಎಂದು ಗಂಡನಿಗೆ ಅನಿಸಲಾರಂಭಿಸುತ್ತದೆ.
ಮದುವೆ ಆದ ಹೊಸದರಲ್ಲಿ ಹೆಂಡತಿಯನ್ನು ಸೈಕಲ್ ಮೇಲೆ ಕೂರಿಸಿ Jolly rideಗೆ ಕರಕೊಂಡು ಹೋಗುವುದೆಂದರೆ ಗಂಡನಿಗೆ ಇಷ್ಟ; ಕಾರಣ ತನ್ನ ತೆಕ್ಕೆಯ ಒಳಗೆ ಅವಳು ಕುಳಿತಿರುತ್ತಾಳೆ; oಟಟಠಿಛ್ಟಿ ಮೇಲೆ ಕೂರಿಸಿ ಕರಕೊಂಡು ಹೋಗುವುದೆಂದರೂ ಇವನಿಗೆ ಇಷ್ಟ ಕಾರಣ ಅವಳ ಮೃದು ಬಾಹುಗಳ ಮಧ್ಯೆ ಇವನಿರುತ್ತಾನೆ. ಆರಂಭದ ದಿನಗಳಲ್ಲಿ ಹೆಂಡತಿ ಮಾಡಿದ ಅಡುಗೆ ಹೇಗಿದ್ದರೂ ಸರಿಯೇ; ರುಚಿಯೇ ರುಚಿ!
ಬರಬರುತ್ತ ನಿಮಗೋಸ್ಕರ ಕಷ್ಟಪಟ್ಟು ಮಾಡಿದ್ದೇನೆ ಎಂದು ರಬ್ಬರ್ ತರ ಇದ್ದ ಗೋಧಿ ಹಲ್ವಾವನ್ನು ನೀಡಿದ ಮಡದಿಗೆ
ಗಂಡ ಹೇಳುತ್ತಾನೆ. ನಾನು ಸಹ ಕಷ್ಟಪಟ್ಟು ತಿನ್ನುತ್ತಿದ್ದೇನೆ!. ಲಗ್ನವಾದ ಮೊದಲ ದಿನಗಳಲ್ಲಿ ಗಂಡ ಹೇಳಿದ್ದನ್ನೆಲ್ಲ ಹೆಂಡತಿ ಕೇಳ್ತಾ ಇರ‍್ತಾಳೆ. ನಂತರದ ದಿನಗಳಲ್ಲಿ ಹೆಂಡತಿ ಹೇಳಿದ್ದನ್ನೆಲ್ಲಾ ಗಂಡ ಕೇಳ್ತಾ ಇರ‍್ತಾನೆ. ಮುಂದಿನ ದಿನಗಳಲ್ಲಿ ಇವರಿಬ್ಬರ ವಾಕ್ಸಮರಗಳನ್ನು ಮಕ್ಕಳು, ಪಕ್ಕದ ಮನೆಯವರು ಕೇಳ್ತಾ ಇರ‍್ತಾರೆ. ಮೊದ ಮೊದಲಿಗೆ ಗಂಡನನ್ನು ಬಹುವಚನದಲ್ಲಿ ಕರೆಯು ತ್ತಿದ್ದ ಹೆಂಡತಿ ಬರಬರುತ್ತ ಏಕವಚನಕ್ಕೆ ಇಳಿದು ಮುಂದೆ ಮೃತ್ಯುಂಜಯ ಎಂಬ ಹೆಸರಿನ ಗಂಡನನ್ನು ಮೃತ್ಯೂ ಎಂದು ಶತ್ರುಘ್ನ ಎಂಬ ಹೆಸರಿನವನನ್ನು ಶತ್ರೂ ಎಂದು ಪಾಪಣ್ಣ ನೆಂಬ ಹೆಸರಿನವನನ್ನು ಪಾಪೀ ಎಂದು ಬೋಧಿಸಲಾರಂಭಿಸುತ್ತಾಳೆ.
ಆರಂಭದ ದಿನಗಳಲ್ಲಿ “Darling, Honey” ಎಂದು ಕರೆಯುತ್ತಿದ್ದವಳು ಬರಬರುತ್ತ ಎಲ್ಲಿದ್ದೀರಿ? ಎಂದು ಗಟ್ಟಿ ಧ್ವನಿಯಲ್ಲಿ ಕೂಗಲಾರಂಭಿಸಿ, ಕೊನೆ ಕೊನೆಗೆ ಎಲ್ಲಿ ಸತ್ತು ಹೋದಿರಿ? ಎಂದು ಕಿರುಚಲಾರಂಭಿಸುತ್ತಾಳೆ. ಆಂತೆಯೇ ನೀನೇ ನನ್ನ ಪ್ರಾಣ ಎಂದು ಶುರು ಶುರುವಿಗೆ ಹೇಳುತ್ತಿದ್ದ ಗಂಡ, ಬರಬರುತ್ತ ನಿನ್ನಿಂದಲೇ ನನಗೆ ನಿತ್ರಾಣ ಎಂಬ ಆಪಾದನೆಯನ್ನು ಮಾಡುತ್ತ ಕೊನೆಗೆ ನಿನ್ನಿಂದಲೇ ನನ್ನ ಪ್ರಾಣ ಹರಣ ಎನ್ನುತ್ತಿರುತ್ತಾನೆ. ಮೊದ ಮೊದಲಿಗೆ ಮನೆಯೊಳಗೆ ಬಂದವಳೇ; ಮನೆಯಾಕೆ ಆದವಳೇ, ಮನದಲ್ಲಿ ನಿಂದವಳೇ ಅಂದವನು ಮುಂದೆ ನಿನ್ನಂತಹವರು ಈ ಮನೆಯಲ್ಲಿ ಇದ್ದರೆಷ್ಟು? ಇರದಿದ್ದರೆಷ್ಟು? ಎಂದು
ಪ್ರಶ್ನಿಸಿ ಕೊನೆಗೆ ಒಂದೋ ಈ ಮನೆಯಲ್ಲಿ ನೀನಿರಬೇಕು, ಇಲ್ಲ ನೀನಿರಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ.
ಒಟ್ಟಿನಲ್ಲಿ ಆರಂಭದಲ್ಲಿ ಸವಿ ಸವಿಯಾದ ಚಾಕಲೇಟ್ ನಂತಿದ್ದ ದಾಂಪತ್ಯ ಜೀವನ ಬರುಬರುತ್ತ ಚಕ್ಕುಲಿಯಂತೆ ಗಟ್ಟಿಯಾಗಿ ಕೊನೆಯಲ್ಲಿ ಉಗುಳಲಾರದ, ನುಂಗಲಾರದ, ಎಷ್ಟು ಜಗಿದರೂ ರಸವೇ ಇಲ್ಲದ Chewing gum- ನಂತಾಗುತ್ತದೆ. ಹೀಗಾಗ ದಿರಲು ಗಂಡ-ಹೆಂಡತಿಯರಿಬ್ಬರೂ ಒಬ್ಬರಿನ್ನೊಬ್ಬರನ್ನೂ ಖು ಪಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿರಬೇಕು. ಈ ಹಿನ್ನೆಲೆಯಲ್ಲಿ ಗಂಡಸರಿಗೆ ಕೆಲ ಕಿಮಾತುಗಳು:
-ಹೆಂಡತಿ ರುಚಿ ರುಚಿಯಾದ ಅಡುಗೆಯನ್ನು ಮಾಡಿ ಉಣಬಡಿಸಿದಾಗ, ಅವಳ ತಲೆಕೂದಲು ಈಗ ಬೆಳ್ಳಗೆ ತೆಳ್ಳಗೆ ಆಗಿದ್ದರೂ, ಆಕೆ ಒಳ್ಳೆಯ ಸೀರೆಯನ್ನುಟ್ಟು ಅಲಂಕಾರ ಮಾಡಿಕೊಂಡು ಅಂದವಾಗಿ ಕಂಡಾಗ, ಒಳ್ಳೆಯ ಕೆಲಸಗಳನ್ನು ಮಾಡಿದಾಗ, ಒಂದು ಮೆಚ್ಚುಗೆಯ ಮಾತುಗಳನ್ನಾಡಬೇಕು. ಇದು ಅವಳ ನಡೆ ನುಡಿಯಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.
-ಅವಳ ಆರೋಗ್ಯ-ಆಸಕ್ತಿ-ಅಭಿರುಚಿ-ಭಷ್ಯದ ಬಗ್ಗೆ ಆಗಾಗ ಚಾರಿಸುತ್ತಿರಬೇಕು.
-ಅವಳ ತವರಿನವರು ಎಷ್ಟೇ ಬಡವರೇ ಮೂರ್ಖರೇ ಆಗಿದ್ದರೂ ಅವರನ್ನೆಂದೂ ಟೀಕಿಸಬಾರದು. ಕಾರಣ ಒಂದು ಹೆಣ್ಣು ತನ್ನ ತವರಿನ ಬಗ್ಗೆ ಎಂದೂ ಗೌರವದ ಪ್ರೀತಿಯ ಭಾವನೆಗಳನ್ನಿಟ್ಟುಕೊಂಡಿರುತ್ತಾಳೆ. ಅವರ ಬಗೆಗಿನ ಯಾವುದೇ ಟೀಕೆ ಟಿಪ್ಪಣಿಗಳನ್ನು ಆಕೆ ಸಸಲಾರಳು.
-ಗಂಡ ಟೂರ್‌ನಲ್ಲಿ ಇದ್ದಾಗ ಆಗಾಗ ಹೆಂಡತಿಗೆ -ನಾಯಿಸಿ “I miss you” ಎಂದು ಹೇಳುತ್ತಿರಬೇಕು.
ಅಂತೆಯೇ ಹಿಂದಿರುಗುವಾಗ ಸಣ್ಣಪುಟ್ಟ ಉಡುಗೊರೆUಳನ್ನು ತರಬೇಕು. ಹಾಗೆಂದು I was very very happy in this trip “ ಎಂದು ಹೇಳಿದರೆ, ಇಲ್ಲವೇ ತುಂಬಾ ಬೆಲೆಬಾಳುವ ಉಡುಗೊರೆಗಳನ್ನು ತಂದರೆ ಅದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಅದಕ್ಕೆ ನೋಡಿ “whenever a wife hugs you on return from your tour, it is not necessarily affection; nut it could be an inspection as well” ಎಂಬುದು ಅನುಭಗಳ ಮಾತು.
-ಆಕೆ ಏನಾದರೂ ಸಮಸ್ಯೆಯನ್ನು ಹೇಳಿಕೊಂಡರೆ, ಸುಮ್ಮಗೆ ಕೇಳಿಬಿಡಬೇಕು ಅಷ್ಟೆ; ಪ್ರತಿಕ್ರಿಯಸಬಾರದು, ಇಲ್ಲವೇ ಪರಿಹಾರ ನೀಡಬಾರದು. ಕಾರಣ They only need your attention, not a solution.
ಹೆಂಗಸರಿಗೆ ಕಿಮಾತುಗಳು: -‘ನಿಮ್ಮಂತಹವರ ಕೈ ಹಿಡಿಯಲು ನಾನು ಏಳೇಳು ಜನ್ಮಗಳ ಪುಣ್ಯ ಮಾಡಿರಬೇಕು ರೀ’ ಎಂಬ ಮಾತನ್ನು ಗಂಡನಿಗೆ ಆಗಾಗ ಹೇಳುತ್ತಿರಬೇಕು. ಪ್ರತಿಯಾಗಿ ಹಾಗಿದ್ದರೆ ಇದೇ ನನ್ನ ಏಳನೆಯ ಜನ್ಮವಾಗಿರಲಿ ಎಂದು ಆತ ಮನಸ್ಸಿ ನೊಳಗೆ ಅಂದುಕೊಳ್ಳಬಹುದು!
-ಗಂಡನಿಗೆ ಇಷ್ಟವಾದ ಸೀರೆಗಳನ್ನುಉಡಬೇಕು. ಅವನಿಗೆ ಇಷ್ಟವಾಗುವ ಊಟ ತಿಂಡಿಗಳನ್ನು ಮಾಡಿ, ಪ್ರೀತಿಯಿಂದ ಉಣ ಬಡಿಸಬೇಕು. ಅವನ ಆರೋಗ್ಯದ ಬಗ್ಗೆ ಕಾಳಜಿ ವಸಬೇಕು.
-ಗಂಡನದೇ ತಪ್ಪಾಗಿದ್ದರೂ ಎದುರಾಡದಿರಿ. ಮೊದಲು ಅವನು ಹೇಳಿದ್ದಕ್ಕೆಲ್ಲ ಹೂಂ ಎಂದು ಹೇಳಿ ಮುಂದೆ ಮೆತ್ತಗೆ ನಿಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳಿ. ಎಷ್ಟಾದರೂ ಅವನು Highcourt ಆಗಿದ್ದರೂ ನೀವು Supreme court” ಅಲ್ಲವೇ? ಅವನು ತಲೆಯಾಗಿದ್ದರೂ ನೀವು ಆ ತಲೆಯನ್ನಾಡಿಸುವ ಕತ್ತು ಅಲ್ಲವೇ?
-ಚಂದ ಚಂದ ಹುಡುಗಿಯರನ್ನು ಕಂಡಾಗ, ನಿಮ್ಮ ಗಂಡ ಕಣ್ ಕಣ್‌ಬಿಟ್ಟು ನೋಡಲಾರಂಭಿಸಿದರೂ ನೀವು ಮಾತ್ರ ಅದನ್ನು ನೋಡದಂತಿರಿ. ಕಣ್ಣು ಮುಚ್ಚಿಕೊಳ್ಳಿ. ಪಾಪ ನೋಡಲಿ ಬಿಡಿ, ನೋಡಿದ್ದು ಮಾತ್ರ ತಾನೇ? ಈ ಹುಡುಗಿಯರು ಅಂದ ಚೆಂದವಾಗಿ ಕಾಣೋದು ಏಕೆ? ಇತರರು ನೋಡಲಿ ಎಂದಲ್ಲವೇ?
-ಅವನ ಬುದ್ಧಿವಂತಿಕೆಯ ಬಗ್ಗೆ ಸಾಧನೆಗಳ ಬಗ್ಗೆ ಆಗಾಗ ಹೊಗಳುತ್ತಿರಿ. ಗಂಡ ಹೆಂಡತಿಯರಿಬ್ಬರಿಗೂ ಕಿಮಾತು: -ಒಬ್ಬರಿನ್ನೊಬ್ಬರ ಆಸೆ-ಆಕಾಂಕ್ಷೆಗಳನ್ನು, ಭಾವ- ಭಾವನೆಗಳನ್ನು, ಬೇಕು-ಬೇಡಗಳನ್ನು ದೌರ್ಬಲ್ಯ- ದುರ್ಗುಣಗಳನ್ನು ಗುಣ ಸ್ವಭಾವವನ್ನು ಅರ್ಥೈಸಿಕೊಳ್ಳಿ; ಅದರಂತೆ ಸಕ್ರಿಯವಾಗಿ ಸ್ಪಂದಿಸಿ. ಒಬ್ಬರಿನ್ನೊಬ್ಬರನ್ನು ಸಂತೈಸಿ, ಸಂಭಾಳಿಸಿ, ಸಸಿಕೊಂಡು ಸಹಕರಿಸಿ.
– ಒಬ್ಬರಿನ್ನೊಬ್ಬರ ಹುಟ್ಟು ಹಬ್ಬದ ದಿನದಂದು ಉಡುಗೊರೆಯನ್ನು ನೀಡಲು ಮರೆಯದಿರಿ.
-ಒಬ್ಬರಿನ್ನೊಬ್ಬರ ಬಗ್ಗೆ ಆತ್ಮೀಯತೆ ಇರಲಿ (ಅನುಕೂಲ ಸಾಂಗತ್ಯವಲ್ಲ; ಅನುರಾಗ ದಾಂಪತ್ಯ) commitment concern ಇರಲಿ.
-ನಂಬಿಕೆ ಹಾಗೂ ಪ್ರಶ್ನಾತೀತವಾದ ಪ್ರೀತಿ ಇರಲಿ; ಪ್ರೋತ್ಸಾಹರಲಿ; ಹೊಂದಾಣಿಕೆ ಇರಲಿ. ಒಬ್ಬರು pressure cooker ಆದಾಗ ಇನ್ನೊಬ್ಬರು Fridge ಆಗಬೇಕು. ಒಬ್ಬರು grinde ಆದಾಗ ಇನ್ನೊಬ್ಬರು ಞಜ್ಡಿಛ್ಟಿ ಆಗಬಾರದು.
– ಗಂಡ ಹೆಂಡತಿಯರ ನಡುವೆ ಜಗಳಗಳಿರಲಿ; ಊಟದಲ್ಲಿರುವ ಉಪ್ಪಿನಕಾಯಿ ತರ. ಆದರೆ ಎಲೆ ತುಂಬ ಬರೇ ಉಪ್ಪಿನಕಾಯಿನೇ ಇರಬಾರದು.
-ಗಂಡನಿಗೆ ಚಟ ಇರಬಾರದು. ಹೆಂಡತಿಗೆ ಹಠ ಇರಬಾರದು. ಮಾತು ಚೆನ್ನಾಗಿರಲಿ.
-ಒಬ್ಬರಿನ್ನೊಬ್ಬರನ್ನು ಎಂದೂ ಕೈಕೊಡದ, ಕೈ ಬಿಡದ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಿ.
ಒಟ್ಟಿನಲ್ಲಿ ಸಂಸಾರದಲ್ಲಿ ಎಲ್ಲವೂ ಸರಿ ಇದ್ದರೆ ಸರಿಗಮ; ಸಾಂಸಾರಿಕ ಜೀವನವೇ ಘಮ ಘಮ; ಇಲ್ಲವಾದರೆ ಢಮ ಢಮ. ಮದುವೆ ಅದ್ದೂರಿ ಆದರೆ ಸಾಲದು; ದಾಂಪತ್ಯ ಜೀವನವೂ ಅದ್ದೂರಿಯಾಗಬೇಕು. ಒಮ್ಮತವಿರುವ ವಿಷಯಗಳನ್ನಲ್ಲ; ಒಮ್ಮತ ವಿಲ್ಲದ ವಿಷಯಗಳನ್ನೂ ಹೇಗೆ ನಿಭಾಯಿಸುತ್ತೇವೆ ಅನ್ನೋದರಲ್ಲಿ ಅಡಗಿದೆ ಗಂಡ ಹೆಂಡತಿಯ ಸುಖ ಸಂತೋಷ!