ಪರಿಶ್ರಮ
parishramamd@gmail.com
ಒಂದು ವರ್ಷದ ತಪಸ್ಸು ನಿರಂತರ ಪ್ರಯತ್ನ, ಚದುರದ ಏಕಾಗ್ರತೆ ಗೆದ್ದೆ ಗೆಲ್ಲುತ್ತೇನೆಂಬ ಭರವಸೆ, ಕರ್ನಾಟಕದ ಮೂಲೆ ಮೂಲೆಗಳಿಂದ ಬೆಂಗಳೂರಿನ ಮೆಜೆಸ್ಟಿಕ್‌ಗೋ, ಯಶವಂತಪುರದ ರೈಲ್ವೆ ನಿಲ್ದಾಣಕೋ ಸಾವಿರ ಕನಸನ್ನು ಕಟ್ಟಿಕೊಂಡು, ಕೆಂಗೇರಿಯ ಪರಿಶ್ರಮ ನೀಟ್ ಅಕಾಡೆಮಿಗೆ ಒಂದು ವರ್ಷಗಳ ಹಿಂದೆ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾದರ್ಪಣೆ ಮಾಡಿದರು.
ಪ್ರತಿಯೊಬ್ಬರ ಮುಖದ ಮೇಲೆ ವೈದ್ಯರಾಗಬೇಕೆಂಬ ಭರವಸೆ. ತಂದೆಯ ಕಷ್ಟವನ್ನ ಗೆಲ್ಲಸಬೇಕೆಂಬ ತಪಸ್ಸು, ತಾಯಿಯ ತ್ಯಾಗವನ್ನ ಗೌರವಿಸಬೇಕೆಂಬ ತೀರ್ಮಾನ. ಅದೆಲ್ಲದಕ್ಕಿಂತ ಮಿಗಿಲಾಗಿ ವೈದ್ಯರಾಗಿ. ಈ ದೇಶ ಸೇವೆ ಮಾಡ ಬೇಕೆಂಬ ಅದಮ್ಯ ಉತ್ಸಾಹ ಎಲ್ಲವನ್ನ ಕನಸುಗಳನ್ನು ಕಟ್ಟಿಕೊಂಡು ಕೇವಲ ತಮ್ಮ ಲಗೇಜ್‌ನೊಂದಿಗೆ ಮಾತ್ರವಲ್ಲದೆ ಕನಸು ಗಳೊಂದಿಗೆ ಬೆಂಗಳೂರಿಗೆ ಕಾಲಿಟ್ಟ 550 ಹೆಚ್ಚು ವಿದ್ಯಾರ್ಥಿಗಳು, ಇವತ್ತು ನಮ್ಮಲ್ಲಿ ವೈದ್ಯರಾಗಲು ಸಿದ್ಧರಾಗಿದ್ದಾರೆ.
ಪರಿಶ್ರಮ ನೀಟ್ ಅಕಾಡೆಮಿ ಕೇವಲ 3 ವರ್ಷ ಹಳೆಯದ್ದು, ವರ್ಷಗಳಲ್ಲಿ ಮೂರರದ್ದು ಎಂದು ಅನಿಸಿದ್ದರೂ ಸಹ ಅನುಭವದಲ್ಲಿ ಯಾವ 30 ವರ್ಷಗಳ ಸಂಸ್ಥೆಗೂ ಕಡಿಮೆಯಿಲ್ಲ. ಛಲ ಬಿಡದ ವಿಕ್ರಮರಂತೆ ಕಾರ್ಯ ನಿರ್ವಹಿಸುವ ಉಪಾನ್ಯಾಸಕರು ದಿನದ 16-17 ತಾಸು ನಿರಂತರವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಇವೆಲ್ಲವನ್ನು ಹೊರತುಪಡಿಸಿ ಗೆಲ್ಲಲೇಬೇಕೆಂಬ ಬಯಕೆ ಯಿಂದ 1 ವರ್ಷಗಳ ಕಾಲ ಸಾಮಾಜಿಕ ಜಾಲತಾಣ, ಮೊಬೈಲ್, ಮನೆ ಎಲ್ಲದರಿಂದ ದೂರ ಉಳಿದು ಏಕಾಗ್ರತೆಯನ್ನು ಕುದುರಿಸಿಕೊಳ್ಳುವ ಅವರ ಪ್ರಾಮಾಣಿಕತೆ ಎಲ್ಲದಕ್ಕೂ ಬೆಲೆ ಕಟ್ಟಲಾಗುವುದಿಲ್ಲ.
ಪರಿಶ್ರಮದ ಬಗ್ಗೆ ಬರೆಯುತ್ತಾ ಹೋದರೆ 550 ಕ್ಕೂ ಹೆಚ್ಚು ಲೆಜೆಂಡ್‌ಗಳ ಬಗ್ಗೆ ಬರೆಯಬೇಕಾಗುತ್ತದೆ. ಜಾಗದ ಅಭಾವದಿಂದ ಕೆಲವರ ಬಗ್ಗೆ ಹೇಳುತ್ತಿದ್ದೇನೆ. ಬೆಂಗಳೂರಿನ ಕಾಡುಗೋಡಿನ ಹುಡುಗ, ಆ ಹುಡುಗನ ತಾಯಿಯೂ ಸಹ ‘ವಿಶ್ವವಾಣಿ’ಯ ಪತ್ರಿಕೆಯ ಅತೀ ದೊಡ್ಡ ಅಭಿಮಾನಿ. ಒಂದು ವರ್ಷಗಳ ಹಿಂದೆ ಪರಿಶ್ರಮಕ್ಕೆ ಬಂದಾಗ, ವೈದ್ಯನಾಗೇ ಆಗುತ್ತೇನೆಂದು ಭರವಸೆ
ಇಟ್ಟಿದ್ದ. ಛಲವು ಇತ್ತು, ಆ ಹುಡುಗನನ್ನು ಕಳೆದ 10 ತಿಂಗಳಿನಿಂದ ಗಮನಿಸುತ್ತಿದ್ದೆವು.
ಶ್ರದ್ಧೆ, ಏಕಾಗ್ರತೆ ಅವನ c/o address ನಂತೆ ಕಾಣಿಸುತ್ತಿತ್ತು. ಮುಂದೊಂದು ದಿನ ದೆಹಲಿಯ ಏಮ್ಸ್‌ನಲ್ಲಿ ಇವನು ಕೂರುತ್ತಾನೆಂದು ಭರವಸೆ ಪ್ರತಿ ಉಪನ್ಯಾಸಕರಿಗೂ ಬಂದಿತ್ತು. 10 ರಿಂದ – 11 ತಿಂಗಳುಗಳ ತಪಸ್ಸು ರಾತ್ರಿ ಒಂದು ಎರಡೆನ್ನದೆ ಅಭ್ಯಾಸ ಮಾಡಿ ಕಡೆಗೂ ನೀಟ್ ಪರೀಕ್ಷೆಯಲ್ಲಿ ಇವತ್ತು 705 ಅಂಕ ಗಳಿಸಲಿದ್ದಾನೆ. ಈಗಾಗಲೇ ಅವನ ಕೀ ಆನ್ಸ್ವರ್ ಪ್ರಕಾರ ಅವರ ಅಂಕ 705 ದೇಶದ ರಾಜಧಾನಿ ದೆಹಲಿಯ ದೇಶದ ನಂ.1 Institute AIIMS ನಲ್ಲಿ ಆತ ದಾಖಲಾಗುವುದು ಖಂಡಿತ. ಕರ್ನಾಟಕದಿಂದ ಕೆಲವೇ ಕೆಲವು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ.
ಅಂತ ವಿದ್ಯಾರ್ಥಿಗಳಲ್ಲಿ ಒಬ್ಬ Satvik – The Legend ಗೆಲ್ಲುವ ಕನಸು ಕಾಣುವುದು ಪ್ರತಿಯೊಬ್ಬರಿಗೂ ಸುಲಭ. ಆದರೆ ಗೆದ್ದು ಪ್ರತಿಯೊಬ್ಬರಿಗೂ ಸಂದೇಶ ರವಾನಿಸುವುದು ಸಾತ್ವಿಕ್ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಸಾತ್ವಿಕ್ ಇವತ್ತು ಕೇವಲ ಪರಿಶ್ರಮದ topper ಅಲ್ಲ. ಕರ್ನಾಟಕದ topper ಇದು ಕೇವಲ ಪರಿಶ್ರಮದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಇದು ಕೇವಲ ಪರಿಶ್ರಮದ ಘರ್ಜನೆಯಲ್ಲ. ಕರ್ನಾಟಕದ ಸಾಮರ್ಥ್ಯದ ಸಿಂಹ ಘರ್ಜನೆ. ಸಾತ್ವಿಕ್‌ಗೆ ಶುಭವಾಗಲಿ.
AIIMS ನಲ್ಲಿ ಓದಿ ಅಧ್ಯಯನ ಮಾಡಿ ದೇಶದ ಅತ್ಯುತಮ ವೈದ್ಯರ ಸಾಲಿನಲ್ಲಿ ನಿಲ್ಲಲ್ಲಿ ಎಂಬುದು ನಮ್ಮ ತಂಡದ ಆಶಯ.
ಉದಾಹರಣೆ 2: ಮೈಸೂರಿನಿಂದ ಬಂದಂತಹ ಸಂಜನ ಬಿ ಎಂಬಂತಹ ವಿದ್ಯಾರ್ಥಿನಿ ಸಾವಿರ ಕನಸುಗಳನ್ನು ಕಂಡು ವೈದ್ಯ ಳಾಗ್ತೀನಿ, ಅಪ್ಪ-ಅಮ್ಮನ ಹೆಸರು ಉಳಿಸ್ತೀನಿ, ಗೆದ್ದೇ ಗೆಲ್ತಿನೀ ಎಂದು ಭರವಸೆ ತೊಟ್ಟು ಪರಿಶ್ರಮಕ್ಕೆ ಪಾದಾರ್ಪಣೆ ಮಾಡಿ ದಳು.
ಆ ಪರಿಶ್ರಮದ ಪುಟ್ಟ ದೇವತೆ ಮುಂದೂಂದು ದಿನ ದೇಶದ Topper ಆಗುತ್ತಾಳೆಂದು ಊಹಿಸಿರಲಿಲ್ಲ 16-17 ತಾಸು ಅಧ್ಯಯನ ಏಕಾಗ್ರತೆ ವಿವರಿಸಲು ಸಾಧ್ಯವಾಗದಂಥ ಶ್ರಮ ಇಷ್ಟೆಲ್ಲರ ನಡುವೆ ಆಕೆ 720ಕ್ಕೆ 700 ಅಂಕಗಳಿಸಿದ್ದಾಳೆ.
ಆಕೆಯು ಸಹ AIIMS ದೆಹಲಿಯಲ್ಲಿ ಅಡ್ಮಿಷನ್ ಪಡಿಯುತ್ತಾಳೆಂಬ ವಿಶ್ವಾಸ ನಮ್ಮದು ಮೈಸೂರಿನವರು ಮಾತ್ರವಲ್ಲ.
ಕರ್ನಾಟಕದವರು ಸಂತಸ ಪಡುವ ಹೆಮ್ಮೆಯ ಕನ್ನಡತಿ ಇಕೆ. ಇಂಥ ವಿದ್ಯಾರ್ಥಿನಿಯಿಂದ, ಇಂಥ ವಿದ್ಯಾರ್ಥಿಗಳಿಂದ ಪರಿಶ್ರಮ ಫಲಿತಾಂಶ ರಾಷ್ಟ್ರಮಟ್ಟದಲ್ಲಿ ಮಿಂಚಲ್ಲಿದೆ.
ಹೇಳಲು ಹೊರಟರೆ ಇವರ ಬಗ್ಗೆ ಕೆಲವೇ ಕೆಲವು ಪದಗಳು ಅನ್ನಿಸಿ ಬಿಡುತ್ತದೆ. ಅಷ್ಟು ಕಷ್ಟಪಟ್ಟು ಇಷ್ಟು ಅಂಕಗಳನ್ನು ಗಳಿಸಿ ದ್ದಾರೆ. ಸಂಜನಾ ಸಹ ದೇಶ ಮೆಚ್ಚುವ ಅತ್ಯುತ್ತಮ ವೈದ್ಯಳಾಗಬೇಕು. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ದೇಶವೇ ಮೆಚ್ಚುವಂಥಾ ವೈದ್ಯಳಾಗಬೇಕೆಂಬ ಆಸೆ, ಭರವಸೆ ನಮ್ಮೆಲ್ಲರದು. ಸಂಜನಾ ನಿಮಗೆ ಶುಭವಾಗಲಿ. ಈ ದೇಶವೇ ಮೆಚ್ಚುವ ವೈದ್ಯರಾಗುತ್ತೀರೆಂದು ಭರವಸೆ ನಮ್ಮದು. ನಮ್ಮ ಮಾರ್ಗದರ್ಶನದಿಂದ ನೀವು ಗೆದ್ದಿದ್ದರೆ ಇದು ಕೇವಲ ಪರಿಶ್ರಮದ ಗೆಲುವು ಅಲ್ಲ. ಮೈಸೂರಿನ ಗೆಲ್ಲುವಲ್ಲ, ಕರ್ನಾಟಕದ ಗೆಲುವೂ ಕೂಡ ಹೌದು.
ಉದಾಹರಣೆ 3: ಕೋಲಾರ ಚಿನ್ನದ ಗಣಿಯಾಗಿದ್ದು ಕೋಲಾರ ಇವಾಗ ಚಿನ್ನದ ಗಣಿ ಮಾತ್ರವಲ್ಲ ಚಿನ್ನದಂಥಾ ಹುಡುಗಿಯ ರಿಗೂ ಜನ್ಮ ಕೊಟ್ಟ ಚಿನ್ನದಂಥ ನಾಡು. ಇಂಜಿನಿಯರ್ ಮಗ ಪ್ರಜ್ವಲ್, ಬೆಂಗಳೂರಿಗೆ ಬಂದು ದಾಖಲಾಗಿ ವೈದ್ಯನಾದರೆ ಸಾಕೆಂದು ಭರವಸೆ ಇಟ್ಟಿದ್ದ. ಆದರೆ ಇವತ್ತು 6965 ಅಂಕ ಗಳಿಸಿ ಇವತ್ತು AIIMS ಅಥವಾ JIPMER ನಲ್ಲಿ ಆತನಿಗೆ ಶೇಕಡಾ 100% ಸೀಟು ಲಭಿಸಲಿದೆ. ದೇಶವೇ ಮೆಚ್ಚುವ ವೈದ್ಯರಾಗಬಹುದು.
ಒಂದು ಕಾಲದಲ್ಲಿ ಕೋಲಾರದಲ್ಲಿ ಕೆಎಎಸ್ ಅಧಿಕಾರಿಗಳೇ ಹೆಚ್ಚು ಬರುತ್ತಿದದರು. ಕೆಎಎಸ್ ಎಂದರೆ ಕೋಲಾರದ ಮಿನಿ ಸ್ಟ್ರೇಟರ್ ಸರ್ವಿಸ್ ಆಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ, ಕಳೆದ 3 ವರ್ಷಗಳ ಹಿಂದೆ KAS ಪರೀಕ್ಷೆಯ Topper ನಂದಿನಿ ಕೋಲಾರ ಮಣ್ಣಿನವಳು. ಇವತ್ತು ಇದೇ ನೀಟ್ ಪರೀಕ್ಷೆಯ ಟಾಪರ್‌ಗಳಲ್ಲಿ ಒಬ್ಬಳು. ಕೋಲಾರ ಮಣ್ಣಿ ನವಳು, ಕೋಲಾರ ಮಣ್ಣಿನ ತಾಕತ್ತು ಅಂಥದ್ದು ಬಹಳಷ್ಟು ಪ್ರತಿಭೆಗೆ ಜನ್ಮ ಕೊಟ್ಟಿದೆ. ಪ್ರಜ್ವಲ್ ನಿಮ್ಮ ಬದುಕು ಹಸನಾಗಲಿ, ಅದ್ಭುತ ವಾಗಿರಲಿ, ನಿಮ್ಮ ಯಶಸ್ಸು ಹೀಗೆ ಸಾಗಲೆಂದು ನಮ್ಮ ಆಶಯ.
ಉದಾಹರಣೆ 4: ಬೆಂಗಳೂರಿನ ಖ್ಯಾತ ಯುರಿಯೋ ಸರ್ಜನ್ ಸಾವಿರಾರು ಬಂದ ರೋಗಿಗಳಿಗೆ ಅವರು ಉಚಿತ ಚಿಕಿತ್ಸೆ ಕೊಟ್ಟಿದ್ದಾರೆ. ಹಾಗೂ ಯುರೋ ಸರ್ಜನ್‌ನಲ್ಲಿ Neuro Science ನಲ್ಲಿ ಅದ್ಭುತವಾದ ಹೆಸರು ಮಾಡಿದಂಥ ಅಂತವರ ಮಗ ಯಶಸ್ಸು ಪರಿಶ್ರಮಕ್ಕೆ ದಾಖಲಾಗಿದ್ದ, ಕಷ್ಟ ಪಟ್ಟು ಓದಿದ, ಸ್ವಲ್ಪ ಮೌನಿಯಂತೆ ಕಂಡಿದ್ದರೂ ಸಹ ಅವನ ತಯಾರಿಯಲ್ಲಿ
ಮಾತ್ರ ಆರ್ಭಟವಿತ್ತು.
ಮುಂದೊಂದು ದಿನ ಇವನು All India Topper ಆಗುತ್ತಾನೆಂಬ ಭರವಸೆ ಇತ್ತು. ಗೆದ್ದೇ ಗೆಲ್ಲುತ್ತಾನೆಂಬ ಭರವಸೆ ನಮ್ಮೆಲ್ಲ ಶಿಕ್ಷಣ ಸಮುದಾಯ ಇವತ್ತು ಎಷ್ಟೇ ಹೇಳಿದರೂ ಪದಗಳು ಕಡಿಮೆ. ಪದಗಳ ಕೊರತೆಯಾಗುತ್ತೆ. ಇವತ್ತು ಶ್ರೆಯಸ್ಸ್ ಇವತ್ತು ಯಶಸ್ಸು ಸಹ 685 ಅಂಕ ಗಳಿಸಿ, ಏಮ್ಸ್ ಚಿಕ್ಕಮಗಳೂರಿನಲ್ಲಿ ದಾಖಲಾಗಿದ್ದಾನೆ. ಯಶಸ್ಸ್ ನಿನ್ನ ಬದುಕು ಅದ್ಭುತವಾಗಿರ ಲೆಂದು ನಮ್ಮ ಆಶಯ. ಈ ಎಲ್ಲ Top Person ಪೋಷಕರಿಗೆ ನಾನು ಮೊದಲನೆಯದಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ಪರಿಶ್ರಮದ ಮೇಲೆ ಇಟ್ಟ ನಂಬಿಕೆಗೆ ನಾನು ಚಿರಋಣಿಯಾಗಿರುತ್ತೇನೆ.
ನಿಮ್ಮ ನಂಬಿಕೆಯೇ ನಮ್ಮ ಬಂಡವಾಳ, ನೀವು ತೋರಿದ ಪ್ರೀತಿಯೇ ನಮ್ಮ ಆರ್ಶೀವಾದ. ನಿಮ್ಮ ಪ್ರೀತಿಗೆ ಬೆಲೆಡಿಕಟ್ಟ ಲಾಗುವುದಿಲ್ಲ. ಒಂದು ವರ್ಷದ ನಿರಂತರ ಪ್ರಯತ್ನಗಳಲ್ಲಿ ಏಳು ಬೀಳುಗಳ ನಡುವೆ. ಪರಿಶ್ರಮ ನೀಟ್ ಅಕಾಡೆಮಿ ಇಂದು ದಕ್ಷಿಣ ಭಾರತದಲ್ಲಿಯೇ ಸದ್ದು ಮಾಡಲಿದೆ.
ಇದಕ್ಕೆ ಪ್ರಮುಖ ಕಾರಣ ಪರಿಶ್ರಮ ನೀಟ್ ಅಕಾಡೆಮಿ ನಂಬಿದ ವಿದ್ಯಾರ್ಥಿಗಳು. ನಂತರ ನಮ್ಮೆಲ್ಲ ಹಿರಿಯರು, ಮಾರ್ಗ ದರ್ಶಕರು ನಮ್ಮನ್ನು ಮುನ್ನಡೆಸುವಂತಹ ಪ್ರೇರಕ ಶಕ್ತಿ. ನಮ್ಮ ಸಂಸ್ಥೆಯ ಡೀನ್‌ಆಗಿರುವಂತಹ ಪ್ರೋ. ಹನುಮಂತ ರಾವ್ ಅವರ ಮಾರ್ಗದರ್ಶನ. ಈ ಅಭೂತ ಪೂರ್ವ ಯಶಸ್ಸಿಗೆ ಕಾರಣವಾಗುತ್ತದೆ. ಅವರಿಗೂ ಸಹ ಕೇವಲ ಪದಗಳಲ್ಲಿ ಧನ್ಯವಾದ ಗಳು ಸಲ್ಲಿಸಲು ಸಾಧ್ಯವಿಲ್ಲ. ನಂತರ ಭೌತಶಾಸ್ತ್ರದ ನೀಟ್ ವಿದ್ಯಾರ್ಥಿಗಳಿಗೆ ತುಂಬಾ ಕಠಿಣ, ಅಂತಹ ಭೌತಶಾಸ್ತ್ರದ ವಿಷಯ ಆದನ್ನು ತುಂಬಾ ಸರಳವಾಗಿ ಹೇಳಿಕೊಟ್ಟು ದಕ್ಷಿಣ ಭಾರತವೇ ಮೆಚ್ಚುವಂತಹ ನೀಟ್ ತರಬೇತಿದಾರರು Physics Teacher ಆಗಿ ಹೆಸರುಗಳಿಸಿರುವಂತಹ ಮಾಧವರಾವ್‌ರವರ ಮಾರ್ಗದರ್ಶನ ಇವತ್ತು ಈ ಗೆಲುವಿಗೆ ಕಾರಣವಾಗಿದೆ.
ಜೀವಶಾಸವನ್ನು ಕಲಿಸುವುದು ಅಷ್ಟು ಸುಲಭವಲ್ಲ. ಅಂತಹ ಜೀವಶಾಸ್ತ್ರವನ್ನು ಜೀವನದ ಜತೆ ಕಲಿಸಿ. ಜೀವನದ ಜತೆ ಕಲಿಸಿ ಕೊಟ್ಟು, ಇವತ್ತು ವಿದ್ಯಾರ್ಥಿಗಳಿಗೆ ಅಪಾರವಾಗಿ ಮನ್ನಣೆಗೆ ಪಾತ್ರವಾಗಿ ವಿದ್ಯಾರ್ಥಿಗಳ ಮನಸ್ಸಲ್ಲಿ. ಪ್ರೀತಿಗೆ ಕಾರಣರಾಗಿ ಇವತ್ತು ಜೀವಶಾಸ್ತ್ರದ ಯಶಸ್ಸಿಗೆ ಮೂಲ ಕಾರಣರಾದ ಶ್ರೀ ನಿಽ ಸರ್‌ರವರ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.
ನಮ್ಮೆಲ್ಲ ತಂಡದ ಶ್ರಮದಿಂದ ಇದು ಸಾಧ್ಯವಾಗಿದೆ. ಮೊದಲ ಧನ್ಯವಾದಗಳು ವಿದ್ಯಾರ್ಥಿಗಳಿಗೆ ಎರಡನೇ ಧನ್ಯವಾದಗಳು ಪೋಷಕರಿಗೆ, ಮೂರನೆ ಧನ್ಯವಾದಗಳು ಪರಿಶ್ರಮಕ್ಕೆ ಏನೇ ಆಗಲಿ, ಪರಿಶ್ರಮದ ಘರ್ಜನೆ ಹೀಗೆ ಮುಂದುವರೆಯಲಿದೆ. ಎಷ್ಟೇ ಅಡೆ-ತಡೆಗಳು ಬಂದರೂ ನಮ್ಮ ಘರ್ಜನೆ ಸಾಗಲಿದೆ. ನಿಮ್ಮ ಪ್ರೀತಿಯೊಂದಿದ್ದರೆ ಸಾಕು.