Friday, 13th December 2024

Hari Parak Column: ʼತುಪ್ಪʼ ತಿಂದು ಕೊಬ್ಬು ಜಾಸ್ತಿ ಆದವರು ʼಘೀʼಳಿಡುತ್ತಾರೆ

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗ ಮತ್ತು ವಿಮರ್ಶಕರ ಮಧ್ಯೆ ಕಿರಿಕ್ ಸರ್ವೇಸಾಧಾರಣ ಅನ್ನೋದು ಎಲ್ಲರಿಗೂ ಗೊತ್ತು. ಮೊದಲೆಲ್ಲ ಮಾಧ್ಯಮದವರು ಏನೇ ಬರೆದ್ರೂ ಅದನ್ನ ಚಿತ್ರತಂಡವರು ಸಮಾಧಾನ-ಚಿತ್ತದಿಂದಲೇ ತಗೋತಾ ಇದ್ರು. ಅಸಮಾಧಾನ ಇದ್ರೂ ಅದನ್ನ ಹೇಳಬೇಕಾದ ರೀತಿಯಲ್ಲಿ ಹೇಳ್ತಾ ಇದ್ರು. ಈಗ ಅದು ಸಾಕಷ್ಟು ಬದಲಾಗಿದೆ. ವಿಮರ್ಶೆ ಬರೆಯುವವರ ಬಗ್ಗೆ ಕೀಳಾಗಿ ಮಾತಾಡೋದು, ಅವರನ್ನ ಟ್ರೋಲ್ ಮಾಡೋದು ಆಗ್ತಿದೆ.

ಅದರಲ್ಲೂ ಸ್ಟಾರ್ ಸಿನಿಮಾಗಳಾದ್ರೆ ಅವರ ಕಡೆಯವರು ಮತ್ತು ಪೇಯ್ಡ್ ಅಭಿಮಾನಿಗಳ ಕಾಟಕ್ಕೆ ವಿಮರ್ಶಕರು
ಕಂಗಾಲಾಗಿದ್ದಾರೆ. ಇತ್ತೀಚೆಗೆ ಇದರ ಹಾವಳಿ ಹೆಚ್ಚಾಗಿದೆ. ಆದರೆ ಇದುವರೆಗೆ ಕೇವಲ ಒಳಗೊಳಗೇ ಇದ್ದ ಈ
ಬೆಳವಣಿಗೆ ಈಗ ಇನ್ನೊಂದು ಆಯಾಮಕ್ಕೆ ತಿರುಗಿಕೊಂಡಿದೆ. ಆ ವಾರ ಬಿಡುಗಡೆ ಆಗ್ತಾ ಇರೋ ಸ್ಟಾರ್
ಸಿನಿಮಾ ಬಗ್ಗೆ ಯಾರಾದ್ರೂ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಆಗಿ ಮಾತಾಡಿದ್ರೆ, ‘ನೀವು ಕನ್ನಡ ಸಿನಿಮಾ ಗಳನ್ನ ಬೆಂಬಲಿಸಲ್ಲ’ ಅಂತ ವರಾತ ತೆಗೆಯುತ್ತಾರೆ. ಈ ವಾರ ಬಿಡುಗಡೆ ಆದ ‘ಮಾರ್ಟಿನ್’ ಚಿತ್ರ ಈ ವಿಷಯದಲ್ಲಿ ಈಗ ಒಂದು ಹೆಜ್ಜೆ ಮುಂದೆ ಹೋಗಿದೆ.

ಚಿತ್ರಕ್ಕೆ ಸಂಬಂಧಪಟ್ಟವರೊಬ್ಬರು ಎಲ್ಲ ವಿಮರ್ಶಕರಿಗೂ ‘ಇದೊಂದು ರಿಕ್ವೆ’ ಅಂತ ಹೇಳುತ್ತಲೇ, ‘ಸಿನಿಮಾ ನೋಡಿ
ಚೆನ್ನಾಗಿದೆ ಅನ್ನಿಸಿದ್ರೆ ಹಾಗೇ ರಿವ್ಯೂ ಮಾಡಿ, ಇಷ್ಟ ಆಗದಿದ್ರೆ ನಮಗೆ ಕಾಲ್ ಮಾಡಿ ಡಿಸ್ಕಸ್ ಮಾಡಿ; ನಾವು ನಿಮಗೆ
ಎಕ್ಸ್‌ಪ್ಲೇನ್ ಮಾಡ್ತೀವಿ, ಅದಕ್ಕೆ ತಕ್ಕಂತೆ ರಿವ್ಯೂ ಮಾಡಿ. ಸುಮ್ನೆ ಸಿನಿಮಾ ನೋಡಿ ಹೆಂಗೆಂಗೋ ರಿವ್ಯೂ ಮಾಡ
ಬೇಡಿ’ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಇದನ್ನು ಕೇಳಿ ಕಂಗಾಲಾಗಿರೋ ಅನೇಕ ವಿಮರ್ಶಕರು
‘ಎಲ್ಲಿಗೆ ಬಂತಪ್ಪಾ ವಿಮರ್ಶೆಯ ಪರಿಸ್ಥಿತಿ! ಈ ಹುಟ್ಟಿಗೆ ವಿಮರ್ಶೆ ಬೇರೆ ಮಾಡ್ಬೇಕಾ?’ ಅಂತ ಹೇಳ್ತಾ, ‘ನಿಮ್ಮ
ಸಿನಿಮಾ ನೋಡೋದೇ ಬೇಡ ಬಿಡಿ’ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.

ಲೂಸ್‌ ಟಾಕ್‌ -ರಾಹುಲ್ ಗಾಂಧಿ
ಏನ್ ಸರ್, ೨ ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಏನ್ ಹೇಳ್ತೀರಾ?

  • ದೇಶದ ಜನ ಈ ಥರ ಆದೇಶ ಕೊಟ್ಟಮೇಲೆ ಏನ್ ಮಾಡೋಕಾಗುತ್ತೆ. ಫಲಿತಾಂಶವನ್ನ ಸ್ವೀಕರಿಸಲೇಬೇಕು.
  • ಆದ್ರೂ ಫಲಿತಾಂಶದ ಜತೆಗೆ ಹಂಗೇ ರಾಜಕೀಯ ಸನ್ಯಾಸನೂ ಸ್ವೀಕರಿಸಿ ಅಂತ ಜನ ಹೇಳ್ತಾ ಇದ್ದಾರೆ ಅನ್ಸುತ್ತೆ.
  • ಸನ್ಯಾಸಿಗಳೇ ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದಾರಂತೆ. ನಾವ್ಯಾಕೆ ಸನ್ಯಾಸತ್ವ ತಗೊಬೇಕು? ಇದಕ್ಕೆ ಸರಿಯಾದ ಉತ್ತರ ಕೊಡ್ತೀವಿ ನೋಡ್ತಾ ಇರಿ.
  • ಆದ್ರೂ ದೇಶದಲ್ಲಿ ಕಾಂಗ್ರೆಸ್‌ನ ಪ್ರೋಗ್ರೆಸ್ ತುಂಬಾ ಚೆನ್ನಾಗಿದೆ ಅಲ್ವಾ?
  • ಏನು, ದೇಶದಲ್ಲಿ ಕಾಂಗ್ರೆಸ್ ಫುಲ್ ಡಲ್ ಆಗಿದೆ ಅಂತ ಕಿಂಡಲ್ ಮಾಡ್ತಾ ಇದ್ದೀರಾ?
  • ಅಯ್ಯೋ ಇಲ್ಲಾ, ಕಾಲ್ಪನಿಕ ಸಂದರ್ಶನ ಅಲ್ವಾ, ಅದಕ್ಕೇ ಕಾಲ್ಪನಿಕ ವಿಷಯದ ಬಗ್ಗೆ ಕೇಳ್ತಾ ಇದ್ದೀನಿ ಅಷ್ಟೇ..
  • ಮತ್ತೆ ಕಿಂಡಲ್ಲು, ಇರ್ಲಿ, ಇರ್ಲಿ. ಸದ್ಯ ಕ್ಕೆ ಕಾಂಗ್ರೆಸ್ ಕ್ರಾಷ್ ಆಗಿದೆ. ದೇವೇಗೌಡ್ರ ಹತ್ರ ಕ್ರಾಷ್ ಕೋರ್ಸ್
    ತಗೊಂಡು, ಫೀನಿಕ್ಸ್ ಥರ‌ ಎದ್ದು ಬರ್ತೀವಿ ನೋಡ್ತಾ ಇರಿ.
  • ಆಯ್ತು. ಆದ್ರೆ, ಹರಿಯಾಣದಲ್ಲಿ ನೀವು ಗೆಲ್ತೀರಾ ಅಂತಿದ್ರು ಎಲ್ರೂ, ಸೋಲೋಕೆ ಕಾರಣ ಏನು?
  • ಮೊದ್ಲೇ ಅದರ ಹೆಸರು ‘ಹರಿ’ಯಾಣ. ನಿಮ್ದೇ ಏನೋ ಕಿತಾಪತಿ ಇರ್ಬೇಕು.
  • (ಕಾಲ್ಪನಿಕ ಸಂದರ್ಶನ)
  • ನೆಟ್‌ ಪಿಕ್ಸ್

ಖೇಮು ಮತ್ತವನ ಸಂಸಾರ ಒಂದು ನಗರದಿಂದ ದೂರದ ಹಳ್ಳಿಯಲ್ಲಿ ವಾಸವಾಗಿತ್ತು. ಆ ಹಳ್ಳಿಗೆ ಅಂಟಿಕೊಂಡಂತೆ ಒಂದು ದಟ್ಟವಾದ ಕಾಡು ಇತ್ತು. ಅಲ್ಲಿ ಖೇಮುಗೆ ಅನೇಕ ಗೆಳೆಯರೂ ಇದ್ದರು. ಒಂದು ದಿನ ಖೇಮು ಮನೆಯಿಂದ ಹೊರಟ. ಹಳ್ಳಿ ದಾರಿಯಲ್ಲಿ ಹೋಗುವಾಗ ಅಲ್ಲಿ ಅವನ ಸ್ನೇಹಿತ ರಾಮು ಬೀಡಿ ಸೇದ್ತಾ ಕೂತಿದ್ದ. ಅವನನ್ನು ನೋಡಿದ ಖೇಮು, “ಲೋ ರಾಮು, ಬೀಡಿ ಸೇದೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ” ಅಂದ. ಸರಿ ರಾಮು ಖೇಮು ಜತೆ ಹೊರಟ. ಇಬ್ಬರೂ ಹೋಗ್ತಾ ಇದ್ರು. ಅಲ್ಲಿ ಇನ್ನೊಬ್ಬ ಸ್ನೇಹಿತ ಸೋಮು ಹೆಂಡ ಕುಡೀತಾ ಕೂತಿದ್ದ. ಅವನನ್ನು ನೋಡಿದ ಖೇಮು “ಲೋ ಸೋಮು, ಹೆಂಡ ಕುಡಿಯೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜತೆ ಬಾ.

ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ” ಅಂದ. ಸರಿ ಸೋಮು ಕೂಡ ಅವರಿಬ್ಬರ ಜತೆ ಹೊರಟ. ಮುಂದೆ ಹೋಗುವಾಗ ಅಲ್ಲಿ ಇನ್ನಷ್ಟು ಸ್ನೇಹಿತರು ಇಸ್ಪೀಟ್ ಆಡ್ತಾ ಕೂತಿದ್ರು. ಅವರನ್ನು ನೋಡಿದ ಖೇಮು “ಲೇ, ಇಸ್ಪೀಟ್ ಆಡೋದು ಕೆಟ್ಟದ್ದು ಕಣ್ರೋ, ಅದನ್ನೆ ಬಿಟ್ಟು ನನ್ನ ಜತೆ ಬನ್ನಿ. ಕಾಡಿನ ಒಳಗೆ ನಿಮಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ” ಅಂದ. ಸರಿ ಗುಂಪುಗೂಡಿಕೊಂಡು ಎಲ್ಲರೂ ಖೇಮುವಿನ ಜತೆ ಹೊರಟರು. ಮುಂದೆ ದಾರಿಯಲ್ಲಿ ಅವರಿಗೆ ಇನ್ನೊಬ್ಬ ಗೆಳೆಯ ಮಾರ ಸಿಕ್ಕಿದ. ಅವನು ಹೊಗೆಸೊಪ್ಪು ಅಗಿಯುತ್ತಾ ಕೂತಿದ್ದ. ಅವನನ್ನು ನೋಡಿದ ಖೇಮು “ಲೋ ಮಾರ, ಹೊಗೆಸೊಪ್ಪು ತಿನ್ನೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ” ಅಂದ.

ಅದಕ್ಕೆ ಮಾರ ಇದ್ದಕ್ಕಿದ್ದಂತೆ ಖೇಮು ಕಡೆ ನುಗ್ಗಿ ಬಂದು ಅವನನ್ನು ಹಿಗ್ಗಾ ಮುಗ್ಗಾ ಹೊಡೆಯೋಕೆ ಶುರುಮಾಡಿದ. ಎಲ್ಲರೂ ಸೇರಿ ಅವನನ್ನು ಬಿಡಿಸಿ, “ಅ ಮಾರ, ಪಾಪ ಅವನು ಒಳ್ಳೇದು ಹೇಳಿದ್ರೆ ನೀನು ಹಿಂಗಾ ಹೊಡೆಯೋದು” ಅಂತ ಕೇಳಿದಾಗ ಮಾರ ಹೇಳಿದ, “ನಿಮಗ್ ಗೊತ್ತಿಲ್ಲ, ಈ ಬಡ್ಡೀಮಗ ಖೇಮು, ಹೋದ್ ವಾರ ಕೂಡ ಹಿಂಗೇ ಗಾಂಜಾ ಹೊಡ್ಕೊಂಡು ಬಂದು, ಏನೋ ತೋರಿಸ್ತೀನಿ ಅಂತ ಇಡೀ ಕಾಡೆ ಸುತ್ತಿಸಿದ್ದ”.

ಲೈನ್‌ ಮ್ಯಾನ್

ಟಿಕೆಟ್ ರೇಟ್ ದುಬಾರಿ ಮಾಡಿ, ‘ಕನ್ನಡ ಸಿನಿಮಾ ನೋಡಿ, ಕನ್ನಡ ಸಿನಿಮಾ ಬೆಳೆಸಿ’ ಅನ್ನೋ ಚಿತ್ರತಂಡದವರಿಗೆ ಒಂದು ಪ್ರಶ್ನೆ

  • ಅಷ್ಟೊಂದು ಖರ್ಚು ಮಾಡಿಕೊಂಡು ನಿಮ್ಮನ್ನ ಬೆಳೆಸೋಕೆ ನಾವೇನು ಅಂಬಾನಿ ವಂಶಸ್ಥರಾ, ಇಲ್ಲ ಮೈಸೂರು ಅಂಬಾರಿ ವಂಶಸ್ಥರಾ?

  • ರಾಧಿಕಾ ಕುಮಾರಸ್ವಾಮಿ ಅವರು ‘ಭೈರಾದೇವಿ’ ಅನ್ನೋ ದೆವ್ವದ ಸಿನಿಮಾ ಮಾಡಿದ್ದಾರೆ
  • ಇಷ್ಟು ದಿನ ‘ಗ್ಲಾಮರ್ ದಿವಾ’ ಆಗಿದ್ದ ರಾಧಿಕಾ ಅವರು, ಈಗ ‘ಗ್ಲಾಮರ್ ದೆವ್ವ’ ಆಗಿದ್ದಾರೆ.
  • ಸ್ಲೀಪ್ ಸೈಕಲ್ ಸರಿ ಮಾಡಿಕೊಂಡು, ನಿದ್ದೆ ಮಾಡೋದು ಹೇಗೆ ಅಂತ ಹೇಳಿಕೊಡೋ ಕ್ಲಾಸಸ್ ಮಾಡ್ತಾ ಇರೋ ಕಾಲ ಇದು
  • ನಮ್ ಕಾಲದಲ್ಲಿ ನಾವು ಸ್ಕೂಲಿಗೆ ಹೋದಾಗ ಕ್ಲಾಸ ನಿದ್ದೆ ಮಾಡ್ತಿದ್ವಪ್ಪ.
  • ಯಾರಾದ್ರೂ ಕೆಲಸ ಕೊಟ್ರೆ ಖಂಡಿತಾ ಕುಡಿಯೋದು ಬಿಡ್ತೀನಿ- ವಿನೋದ್ ಕಾಂಬ್ಳಿ
  • ಕೆಲ್ಸ ಇಲ್ಲದೆ ದುಡ್ಡಿಲ್ಲ ಅಂದ್ರೂ ಕುಡಿಯೋ ಮಗ ನೀನು, ಇನ್ನು ಕೆಲಸ ಸಿಕ್ಮೇಲೆ ಬಿಡ್ತೀಯಾ ಗುರೂ?
  • ಮಕ್ಕಳಿಗೆ ಅಂತ ಬೇರೆ ಬ್ರಾಂಡ್ ಬ್ರ್ಯಾಂಡಿ ಇದೆ. ಹಾಗೇ ಬಿಯರ್ ಕೂಡಾ ಇದ್ದಿದ್ರೆ ಅದು
  • ‘ಚೈಲ್ಡ್’ ಬಿಯರ್
  • ಒಬ್ಬ ‘ಸುಳ್ಳು’ ಹೇಳೋದ್ ನೋಡಿ ಅವನ ಜತೆಗಿರೋ ಜನರೆಲ್ಲ ಅಂಥವರೇ ಅಂತ ಡಿಸೈಡ್ ಮಾಡೋದು
  • ‘ಜನ’ರ‘ಲೈಸ್’
  • ‘ತುಪ್ಪ’ ತಿಂದು ಕೊಬ್ಬು ಜಾಸ್ತಿ ಆದವರು ಏನ್ ಮಾಡ್ತಾರೆ?
  • ‘ಘೀ’ಳಿಡುತ್ತಾರೆ
  • ಚೆಸ್ ಆಡುವವರು
  • ‘64’ ವಿದ್ಯೆಯಲ್ಲಿ ಪಾರಂಗತರು
    ಕುರುಡನೊಬ್ಬನ ಮೇಲೆ ಯಾರಾದ್ರೂ ಕೇಸು ಹಾಕಿದ್ರೆ, ವಿಚಾರಣೆ ಎಲ್ಲಿ ನಡೆಯುತ್ತೆ?
  • ‘ಐ’ ಕೋರ್ಟ್‌ನಲ್ಲಿ

ಇದನ್ನೂ ಓದಿ: Hari Parak Column: ಮಾಸ್ತರರಿಗೆ ಇಡೋ ಹೆಸರು – ಸರ್‌ ನೇಮ್