Sunday, 24th November 2024

Hari Parak Column: ʼಜಗದೀಶನಾಡುವʼ ಜಗವೇ ನಾಟಕ ರಂಗ

ತುಂಟರಗಾಳಿ

ಸಿನಿಗನ್ನಡ

ಸಿನಿಮಾ ನೋಡೋಕೆ ಹೋಗೋ ಪ್ರೇಕ್ಷಕ ಏನನ್ನು ನಿರೀಕ್ಷೆ ಮಾಡ್ತಾನೆ ಅಂತ ಹೇಳೋದು ಸ್ವಲ್ಪ ಕಷ್ಟದ ಕೆಲಸ.
ಹಾಗಾಗಿನೇ ವರ್ಷಕ್ಕೆ ನೂರಾರು ಸಿನಿಮಾಗಳು ಬಿಡುಗಡೆ ಆದರೂ ಅವುಗಳಲ್ಲಿ ಗೆಲುವು ಕಾಣೋದು ಬೆರಳೆಣಿಕೆ ಯಷ್ಟು ಮಾತ್ರ.

ಎಲ್ಲಾ ಸಿನಿಮಾಗಳಲ್ಲೂ ಕಥೆ, ಚಿತ್ರಕಥೆ, ಬಜೆಟ್, ಸಂದೇಶ ಹೀಗೆ ಎಲ್ಲವನ್ನೂ ಹುಡುಕೋಕೆ ಪ್ರೇಕ್ಷಕ ಹೋಗೋ ದಿಲ್ಲ. ಅಲ್ಲದೆ ಅವನು ದೊಡ್ಡ ಹೀರೋಗಳ ಹೈ ಬಜೆಟ್ ಚಿತ್ರ ನೋಡೋದಕ್ಕೂ, ಸಣ್ಣ ಸ್ಟಾರ್‌ಗಳ ಸಿನಿಮಾ ನೋಡೋದಕ್ಕೂ ವ್ಯತ್ಯಾಸ ಇರುತ್ತೆ. ಕೆಲವೊಮ್ಮೆ ಕೇವಲ ನಟನೊಬ್ಬನಿಗಾಗಿ ಸಿನಿಮಾ ನೋಡುವವರೂ
ಇದ್ದಾರೆ. 20-25 ವರ್ಷಗಳ ಹಿಂದೆ ಜಗ್ಗೇಶ್ ಅವರಿಗೆ ಇದ್ದಂಥ ಕ್ರೇಜ್ ಅದು.

ಅವರ ಸಿನಿಮಾಗಳಲ್ಲಿ ಕಥೆ, ಅದು ಇದು ಅಂತ ಯಾರೂ ನಿರೀಕ್ಷೆ ಮಾಡ್ತಾ ಇರಲಿಲ್ಲ. ಜಗ್ಗೇಶ್ ಅವರು ಇಡೀ ಸಿನಿಮಾ ಸ್ಕ್ರೀನ್ ಮೇಲೆ ಇದ್ದರೆ ಸಾಕು, ನಾವು ಕೊಟ್ಟ ದುಡ್ಡು ವಾಪಸ್ ಬಂದಂತೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ ಆಗಿತ್ತು. ಹಾಗಾಗಿಯೇ ಜಗ್ಗೇಶ್ ಅವರ ಕೆಲವು ಮಾಮೂಲಿ ಚಿತ್ರಗಳು ಕೂಡಾ ಸಾಕಷ್ಟು ಹಣ ಗಳಿಸುತ್ತಿದ್ದವು.

ಈಗ ಅವರ ತಮ್ಮ ಕೋಮಲ್ ಅವರ ‘ಯಲಾ ಕುನ್ನಿ’ ಚಿತ್ರ ತೆರೆಗೆ ಬಂದಿದೆ. ಎಗೇನ್, ಈ ಸಿನಿಮಾದಲ್ಲಿ ಏನಿದೆ ಅಂತ ನೋಡೋಕೆ ಹೋದ್ರೆ ನಿರಾಸೆ ಗ್ಯಾರಂಟಿ. ಆದ್ರೆ ಇಲ್ಲಿ ಕೋಮಲ್ ಅವರು ಒಂದು ಎಪಿಸೋಡ್‌ನಲ್ಲಿ ವಜ್ರಮುನಿ ಅವರನ್ನು ಕಾಪಿ ಮಾಡಿದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನು ನೋಡಿದ್ರೆ ನಿಮಗೆ, ‘ಇದೇನು ಕೋಮಲ್ ಅವರು ಅಭಿನಯ ಮಾಡಿದ್ದಾರೋ, ಅಥವಾ ಈ ಪಾತ್ರಕ್ಕೆ ‘ಎಐ’, ‘ಸಿಜಿ’ ಮಾಡಿ ವಜ್ರಮುನಿ ಅವರಂತೆ ಕಾಣೋ ಥರ ಮಾಡಿದ್ದಾರೋ?’ ಅಂತ ಅನುಮಾನ ಬಂದರೂ ಬರಬಹುದು.

ಅಷ್ಟರ ಮಟ್ಟಿಗೆ ಕೋಮಲ್ ಅವರದ್ದು ನಿಜಕ್ಕೂ ಸೆನ್ಸೇಷ ನಲ್ ಅಭಿನಯ. ಮುಖಭಾವ, ನಗು, ಕೆನ್ನೆ ಅಡಿಸೋ
ರೀತಿ, ನಿ ಸ್ಟೈಲು, ನಡೆಯೋ ಸ್ಟೈಲು ಎಲ್ಲದರಲ್ಲೂ ಕೋಮಲ್ ಥೇಟ್ ವಜ್ರಮುನಿ. ಈ ಸಿನಿಮಾ ನೋಡಿದಾಗ
ನಿಮಗೆ ಕೇಡಿ ನಾಗಪ್ಪ ಆಗಿರೋ ಕೋಮಲ್ ಅವರ ಈ ಒಂದು ಎಪಿಸೋಡಿಗೇ ನಾನು ಕೊಟ್ಟ ಟಿಕೆಟ್ ಹಣ ತೀರಿತು
ಅಂತ ಅನ್ನಿಸಿದ್ರೆ ಅದರಲ್ಲಿ ತಪ್ಪೇನೂ ಇಲ್ಲ.

ಲೂಸ್‌ ಟಾಕ್‌ -ಬಿಗ್ ಬಾಸ್
ಏನ್ ಬಿಗ್ ಬಾಸ್, ನಮ್ ಜನ ಏನೇ ಆಡ್ಕೊಂಡ್ರೂ ಬಿಗ್ ಬಾಸ್‌ನ ನೋಡೋದು ಮಾತ್ರ ಬಿಡಲ್ಲ ಅಲ್ವಾ?

  • ಹೆಂಗ್ ಬಿಡೋಕಾಗುತ್ತೆ. ಎಷ್ಟೇ ಆದ್ರೂ ಇದು ಬಿಗ್ ಬಾಸ್, ಬಿಗ್ ಹೌಸ್, ದೊಡ್ಡಮನೆ ಅಲ್ವಾ?
  • ಹಂಗೆ ದೊಡ್ಡಮನೆ ಅನ್ಬೇಡ್ರೀ, ದೊಡ್ಡಮನೆ ಅಭಿಮಾನಿಗಳು ಸಿಟ್ಟಾಗ್ತಾರೆ..
  • ಅಯ್ಯೋ ಹಂಗ್ ಹೇಳಿದ್ದಲ್ಲ ಬಿಡಿ. ದೊಡ್ಡೋರ್ ವಿಷ್ಯ ನಮಗ್ಯಾಕೆ. ನಮ್ಮನೇಲೇ ಹಾಸಿ ಹೊದ್ಕೊಳ್ಳುವಷ್ಟು ಸಮಸ್ಯೆ ಇದೆ, ಬಿಗ್ ಬಾಸ್ ಹೋಗಿ ‘ಬಿಗ್ ಬ್ಯಾಷ್’ ಆದ್ರೆ ಕಷ್ಟ.
  • ಸರಿ, ಈ ಸಲ ಲಾಯರ್ ಜಗದೀಶ್ ಅವ್ರು ಮನೆ ಒಳಗೆ ಬಹಳ ವಿಚಿತ್ರವಾಗಿ ಆಡ್ತಾ ಇದ್ರಲ್ಲ?
  • ಅದಕ್ಕೇ ತಾನೇ ಹೇಳೋದು, ‘ಜಗದೀಶನಾಡುವ’ ಜಗವೇ ನಾಟಕ ರಂಗ ಅಂತ.
  • ಆದ್ರೂ ಅವರು ಬಿಗ್ ಬಾಸ್ ಬಂದ್ ಮಾಡಿಸ್ತೀನಿ ಅಂತ ಹೇಳಿದಾಗ ನಿಮಗೆ ಏನನ್ನಿಸಿತು?
  • ಸುದೀಪ್ ಬದಲು, ರಿಷಭ್ ಶೆಟ್ಟಿಯವರಿಂದ ಬಿಗ್ ಬಾಸ್ ಹೋ ಮಾಡಿಸ್ಬೇಕಿತ್ತು ಅನ್ನಿಸ್ತು. ಆಗ ನಮ್ ಶೆಟ್ರು, ಕಾಂತಾರ ಸ್ಟೈಲಲ್ಲಿ ‘ನಿಮ್ಮಪ್ಪನಿಗೆ ಹುಟ್ಟಿದ್ರೆ ಬಂದ್ ಮಾಡ್ಸ’ ಅಂತ ಡೈಲಾಗ್ ಹೊಡೀತಿದ್ರು.
  • ಅದೂ ನಿಜ ಬಿಡಿ. ಅಂದಂಗೆ, ಪ್ರತಿಸಲ ಬಿಗ್ ಬಾಸ್ ನಡೆಯುವಾಗ ಪೊಲೀಸ್ನೋರು ಬರ್ತಾರಲ್ಲ ಯಾಕೆ?
  • ಯಾರಾದ್ರೂ ಗಲಾಟೆ ಮಾಡಿದ್ರೆ ಒದ್ದು ಒಳಗಾಕೋಣ ಅಂತ ಬರ್ತಾರೆ. ನಾವು, ‘ಇ ಗಲಾಟೆ ಮಾಡೋರನ್ನ ನಾವೇ ಒದ್ದು ಮನೆಯಿಂದ ಹೊರಗಾಕ್ತೀವಿ ಬಿಡಿ’ ಅಂತ ಸಮಾಧಾನ ಮಾಡಿ ಕಳಿಸ್ತೀವಿ.
  • (ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇ‌ಮು ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟ ಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನ ಪಟ್ಟಮೇಲೂ ಹುಡುಗಿ ಖೇಮುವನ್ನು ಮದುವೆ ಆಗಲು ಒಪ್ಪಲಿಲ್ಲ. ಖೇಮುಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಖೇಮು ತೀರಾ ನಿರಾಸೆಗೊಳಗಾದ.‌

‘ಎಣ್ಣೆ ಹೊಡಿಬೇಕು ಬಾ’ ಅಂತ ಸ್ನೇಹಿತ ಸೋಮುವನ್ನು ಕರೆದು ತನ್ನ ಮನಸ್ಸಿನ ನೋವನ್ನೆ ತೋಡಿಕೊಂಡ. ಅದಕ್ಕೆ ತುಂಬಾ ಯೋಚನೆ ಮಾಡಿದ ಸೋಮು, ನೋಡು ಒಂದ್ ಕೆಲ್ಸ ಮಾಡು, ಅವಳನ್ನು ಮದ್ವೆ ಆಗ್ತಾ ಇರೋ
ಹುಡುಗನ ಹತ್ರ ಹೋಗಿ ನನಗೆ ಆ ಹುಡುಗಿ ಜತೆ ಅಫರ್ ಇತ್ತು ಅಂತ ಹೇಳು. ಆಗ ಮದುವೆ ಮುರಿದು ಬೀಳತ್ತೆ ಅಂದ. ಅವನು ಹೆಂಗ್ ನಂಬ್ತಾನೆ? ಅಂತ ಕೇಳಿದ ಖೇಮು.

ಅದಕ್ಕೆ ಸೋಮು, ನನ್ನ ಮೈ ಮೇಲೆ ಟೋಟಲ್ ೬ ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ.
ನೀನು ಸುಮ್ನೆ ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ
ಮುರಿದುಬೀಳುತ್ತೆ ಅಂತ ಹೇಳಿದ. ಸರಿ, ಖೇಮು ಮರುದಿನ ಸೋಮು ಹೇಳಿದ ಪ್ಲ್ಯಾನ್ ವರ್ಕ್‌ಔಟ್ ಮಾಡೋಕೆ
ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಸೋಮು, ಏನಾಯ್ತೋ ಅಂತ ಕೇಳಿದ. ಅದಕ್ಕೆ
ಖೇಮು, ಇ ಕಣೋ, ನಮ್ಮ ಪ್ಲ್ಯಾನ್ ವರ್ಕ್‌ಔಟ್ ಆಗ್ಲಿಲ್ಲ.

ನಾನು ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ ಆ ಹುಡುಗ, ಅದಕ್ಕೇನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ
ಹೇಳಿಬಿಟ್ಟ. ವಾಪಸ್ಸು ಬಂದೆ ಅಂತ ಹೇಳಿದ. ಅದಕ್ಕೆ ಸೋಮು, ಸರಿ ನೀನು ಏನಂತ ಹೇಳಿದೆ? ಅಂತ ಕೇಳಿದ. ಅದಕ್ಕೆ ಖೇಮುವಿನಿಂದ ಉತ್ತರ ಬಂತು- “ನಾನ್ ಒಂದ್ ಮಾತು ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್
ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ ಹೇಳಿದೆ”.

ಲೈನ್ ಮ್ಯಾನ್
ಅಕ್ವೇರಿಯಂನಲ್ಲಿ ಮೀನು ಸಾಕುವವರನ್ನು ಏನಂತಾರೆ?

ವೆಜಿಟೇರಿಯನ್

‘ದತ್ತು’ ಪುತ್ರ ಮದುವೆ ಆದಮೇಲೆ ಮೂರ್ನಾಲ್ಕು ಮಕ್ಕಳನ್ನ ಹುಟ್ಟಿಸಿದ್ರೆ ಅವರಪ್ಪ ಅಮ್ಮ ಏನು ಹೇಳ್ತಾರೆ?

  • ‘ಸಾಕು’ ಮಗ
  • ಕಲಿಯುಗ ಅಂದ್ರೆ ಯಾವುದು ?
  • ಜನ ಪ್ರೀತಿ ವಾಪಸ್ ಕೊಟ್ಟಷ್ಟೇ ನಿಯತ್ತಾಗಿ ಸಾಲನೂ ವಾಪಸ್ ಕೋಡೋ ಕಾಲ
  • ಶಾಲಾ ಕಾಲೇಜು ದಿನಗಳನ್ನು ಏನೆನ್ನಬಹುದು?
  • ‘ಕಲಿ’ಯುಗ
  • ಭಯಾನಕವಾಗಿ ಗೊರಕೆ ಹೊಡೆಯುವವನು
  • ‘ಖರ್ರಾಟೆ’ ಕಿಂಗ್

  • ಕ್ಲಬ್ ಹೌಸ್ ಹವಾ ಕಮ್ಮಿ ಆದಮೇಲೆ ಸೋಷಿಯಲ್ ಮೀಡಿಯಾ ಸ್ಟೇಟಸ್ ಗಳು
  • ಫೇಸ್‌ಬುಕ್: ನಂಗೆ ಕಡ್ಲೇಕಾಯಿ ಅಂದ್ರೆ ಇಷ್ಟ
  • ಟ್ವಿಟರ್: ನಾನು ಕಡ್ಲೇಕಾಯಿ ತಿಂತಾ ಇದ್ದೀನಿ
  • ಇನ್ಸ್ಟಾಗ್ರಾಮ: ನಾನು ಕಡ್ಲೇ ಕಾಯಿ ತಿಂತಿರೋ ಫೋಟೋ
  • ಯೂಟ್ಯೂಬ್: ನಾನು ಕಡ್ಲೇಕಾಯಿ‌ ತಿಂದ ವಿಡಿಯೋ
  • ಕ್ಲಬ್ ಹೌಸ್: ನಾನು ಕ್ಲಬ್ ಹೌಸ್ ಎಂಪ್ಲಾಯಿ. ಮಾಡಕೇನು ಕೆಲ್ಸ ಇಲ್ಲ, ಇನ್ನೇನ್ ಮಾಡೋದು.
    ಅದಕ್ಕೇ ಕಡ್ಲೇಕಾಯಿ ತಿಂತಾ ಇದ್ದೀನಿ.

  • ವರ್ಷಕ್ಕೊಂದು ಫೋನ್ ಬದಲಾಯಿಸಿದರೆ ಅದು
  • ‘ಇಯರ್’ ಪೋನ್
    ಎಂಬಿಎ ಮಾಡಿದವರು ಬುಕ್ ಮಾಡೋ ಫ್ಲೈಟ್ ಟಿಕೆಟ್
  • ಬ್ಯುಸಿನೆಸ್ ಕ್ಲಾಸ್
    ಬುದ್ಧನಂತೆ ಆಗೋಕೆ ಇರಬೇಕಾದ ಅರ್ಹತೆ ಏನು?
    • ಎಲ್ಲವನ್ನೂ ಬಿಟ್ಟು ಹೋಗೋಕೆ, ಏನಾದ್ರೂ ಇರಬೇಕು

ಇದನ್ನೂ ಓದಿ: Hari Parak Column: ಮಾಸ್ತರರಿಗೆ ಇಡೋ ಹೆಸರು – ಸರ್‌ ನೇಮ್