Sunday, 15th December 2024

Hari Parak Column: ಸ್ಯಾಂಡಲ್‌ವುಡ್‌ ಕಳ್ಳಸಾಗಣೆ ಮಾಡಿದ್ದಕ್ಕೆ ಕನ್ನಡಿಗರೇ ಅರೆಸ್ಟ್‌ ಮಾಡಿದ್ದಾರೆ

ತುಂಟರಗಾಳಿ

ಸಿನಿಗನ್ನಡ

ಫೇಸ್‌ಬುಕ್‌ನಲ್ಲಿ ಯಾರೋ ಪೋಸ್ಟ್ ಹಾಕಿದ್ರು, ಅವರು ಪ್ರತಿ ದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ,‌ ಅಲ್ಲಿನ ಸೆಕ್ಯುರಿಟಿ, ‘ಸರ್, ನೀವು ಇ ಕೆಲಸ ಮಾಡೋದಾ?’ ಅಂತ ಕೇಳಿದ್ನಂತೆ. ಕೇಳೋಕೆ
ತಮಾಷೆಯಾಗಿದ್ದರೂ ಇದು ವಾಸ್ತವ. ಸಿನಿಮಾಪ್ರಿಯರ ಬಳಿ ಈಗ ನೋಡ್ಬೇಕು ಅಂತಿರುವ ಮತ್ತು ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾಗಿತ್ತು ಆದ್ರೆ ಆಗ್ಲಿಲ್ಲ ಅನ್ನೋ ಸಿನಿಮಾಗಳ ಪಟ್ಟಿಯೇ ದೊಡ್ಡದಾಗಿದೆ.

ಪ್ರತಿವಾರ 7-8 ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರಮಂದಿರಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ. ಹಾಗಾಗಿ ಅಪ್ಪಟ ಚಿತ್ರಪ್ರೇಮಿಗಳು, ‘ಅಯ್ಯೋ, ಆ ಸಿನಿಮಾ ನೋಡೋಕಾಗ್ಲಿಲ್ಲ, ಈ ಸಿನಿಮಾ ನೋಡೋಕಾಗ್ಲಿಲ್ಲ’ ಅಂತ ಕೊರಗೋದು ತಪ್ಪುತ್ತಿಲ್ಲ.

ಬರೀ ಸಿನಿಮಾ ಪ್ರೇಮಿಗಳು ಯಾಕೆ, ಸ್ವತಃ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರಿಗೇ ಎಲ್ಲ ಸಿನಿಮಾಗಳನ್ನು ನೋಡೋಕೆ ಆಗ್ತಿಲ್ಲ. ಹಾಗೊಂದು ವೇಳೆ ಹಠಕ್ಕೆ ಬಿದ್ದು ದಿನಕ್ಕೆರಡು ಸಿನಿಮಾ ನೋಡಿದರೂ ಕೊನೆಯ ಸಿನಿಮಾ ವಿಮರ್ಶೆ ಮಾಡುವ ಹೊತ್ತಿಗೆ ಮುಂದಿನ ವಾರದ ಸಿನಿಮಾಗಳು ಬಿಡುಗಡೆ ಆಗಿರುತ್ತವೆ. ಒಟ್ಟಿನಲ್ಲಿ ಕೆಲವು ಸಿನಿಮಾಗಳು ತಮ್ಮ ಕಳಪೆ ಕ್ವಾಲಿಟಿಯಿಂದ ಜನರನ್ನು ತಲುಪಲು ವಿಫಲವಾಗುತ್ತಿದ್ದರೆ, ಹಲವು ಸಿನಿಮಾಗಳು ಎಲ್ಲಾ ಇದ್ದರೂ ಓವರ್ ಕಾಂಪಿಟೇಶನ್‌ನಿಂದ ಜನರಿಗೆ ತಲುಪುತ್ತಿಲ್ಲ ಅನ್ನೋದಂತೂ ನಿಜ.

ಲೂಸ್‌ ಟಾಕ್:‌ ಅಲ್ಲು ಅರ್ಜುನ್
ಏನ್ ಅರ್ಜುನ್, ಪುಷ್ಪನ್ನ ಕಡೆಗೂ ಅರೆ ಮಾಡಿಬಿಟ್ರಲ್ಲ?

  • ಏನ್ ಮಾಡೋದು, ಅಲ್ಲಿ ಯಾರೋ ಕಾಲ್ತುಳಿತಕ್ಕೆ ಸಿಕ್ಕು ಸತ್ರೆ ಇವ್ರು ನನ್ನ ಕೈಗೆ ಕೋಳ ಹಾಕಿಬಿಟ್ರು.
  • ಪೊಲೀಸ್ನೋರು ನಿಮ್ಮನ್ನ ಅರೆ ಮಾಡೋಕೆ ಮನೆಗೆ ಬಂದಾಗ ಏನನ್ನಿಸಿತು?
  • ಪೊಲೀಸ್ನೋರು ಸಾಮಾನ್ಯವಾಗಿ ಸಿನಿಮಾದ ಕೊನೆಯಲ್ಲಿ ಬರೋರು, ಈಗ ಸಿನಿಮಾ ಮುಗಿದ ಮೇಲೆ
    ಬಂದ್ರಲ್ಲ ಅಂತ ಆಶ್ಚರ್ಯ ಆಯ್ತು.
  • ಆದ್ರೂ, ನೀವು ಅರೆ ಆಗಿದ್ದಕ್ಕೆ ನಿಮ್ಮ ವಿರೋಧಿಗಳಿಗೆ ಖುಷಿ ಆಗಿರಬೇಕಲ್ಲ?
  • ಯಾರಿಗೆ ಖುಷಿ ಆಗಿದೆಯೋ ಇಲ್ವೋ, ನಮ್ಮ ಪುಷ್ಪ ಸಿನಿಮಾದ ಶೆಕಾವತ್ ಸಾಹೇಬ, ಫಹಾದ್ ಫಾಜಿಲ್ ಮಾತ್ರ ಫುಲ್ ಖುಷಿ ಆಗಿರ್ತಾನೆ
  • ಅಂದಹಾಗೆ, ನಿಮ್ಮ ಪುಷ್ಪ 2 ಸಿನಿಮಾ ಬಾಲಿವುಡ್ ನಲ್ಲೂ ಒಳ್ಳೆ ಕಲೆಕ್ಷನ್ ಮಾಡಿದೆಯಂತೆ?
    • ಹೌದು ಮತ್ತೆ ನಾನು ಅರ್ಜುನ. ಸೋಲಿಲ್ಲದ ಸರದಾರ. ನಾನು ಇಲ್ಲೂ ಅರ್ಜುನ್, ಅಲ್ಲೂ ಅರ್ಜುನ್.
  • ನಿಮ್ಮನ್ನ ಅರೆ ಮಾಡಿದ್ದರ ಹಿಂದೆ ಯಾರ ಕೈವಾಡವಿದೆ ಅಂತ ನಿಮಗೆ ಅನುಮಾನ?
  • ಅನುಮಾನ ಏನಿಲ್ಲ, ಫುಲ್ ಕನಫರ್ಮ್. ನಿಮ್ಮ ಕರ್ನಾಟಕದವರೇ ನನ್ನ ಅರೆಗೆ ಕಾರಣ. ಪುಷ್ಟ
    ಸಿನಿಮಾದಲ್ಲಿ ನಾನು ಸ್ಯಾಂಡಲ್‌ವುಡ್ ಕಳ್ಳಸಾಗಣೆ ಮಾಡ್ತೀನಿ ಅಂತ ಸ್ಯಾಂಡಲ್ ವುಡ್‌ನವರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ.

ನೆಟ್‌ ಪಿಕ್ಸ್

ಖೇಮು ಒಂದು ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೊರಗೆ ಅಂಗಳದಲ್ಲಿ ಕಸದ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸಿಲನ್ನೂ ತೊಳೆದಿರಲಿಲ್ಲ. ಎ ಧೂಳುಮಯ. ಮನೆಯೊಳಗೆ ಅಡಿಯಿಡುತ್ತಿದ್ದಂತೆ ಖೇಮುಗೆ ಮಕ್ಕಳು ಆಡುವ ಸದ್ದು ಕೇಳಿಸಿ ಆ ಕಡೆ ತಿರುಗಿ ನೋಡಿದ. ಮಕ್ಕಳು ಮನೆಯ ಸಾಮಾನುಗಳನ್ನೆ ಎಲ್ಲೆಂದ್ರಲ್ಲಿ ಹರಡಿ ರಾಡಿ ಮಾಡಿಟ್ಟಿದ್ದರು. ಮೊದಲು ನೀರು ಕುಡಿಯೋಣ ಅಂತ ಅಡುಗೆ ಮನೆಗೆ ಹೋದ ಖೇಮುಗೆ ಅಲ್ಲೂ ಶಾಕ್ ಕಾದಿತ್ತು. ಬೆಳಗ್ಗೆ ಮಾಡಿದ ತಿಂಡಿ ಪಾತ್ರೆಗಳು, ತಿಂದ ಪ್ಲೇಟ್, ಕಾಫಿ ಗ್ಲಾಸ್ ಎಲ್ಲವೂ ಎಂದರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು.
ಖೇಮುಗೆ ಒಂದು ಕ್ಷಣ ಗಾಬರಿ ಆಯ್ತು. ಬೆಡ್‌ರೂಮಿಗೆ ಹೋಗಿ ನೋಡಿದರೆ ಅಲ್ಲಿ ಖೇಮುಶ್ರೀ ಇರಲಿಲ್ಲ.

ಅದರ ಬದಲಾಗಿ ರೂಮ್ ತುಂಬಾ ಚೆಪಿಲ್ಲಿಯಾಗಿ ಹರಡಿದ್ದ ಬಟ್ಟೆಗಳು ಬಿದ್ದಿದ್ದವು. ಹಾಸಿಗೆಯ ಮೇಲಿನ ದಿಂಬು, ಬೆಡ್‌ಶೀಟ್‌ಗಳು ಅಗಸರ ಅಂಗಡಿಯನ್ನು ನೆನಪಿಸುತ್ತಿದ್ದವು. ಹಾಲಿನಲ್ಲಿ ಹಾಕಿದ ಟಿವಿ ಹಾಗೇ ಇತ್ತು. ಯಾರೂ ನೋಡುತ್ತಿರಲಿಲ್ಲ. ದೇವರ ಮನೆಯ ದೀಪ ಹಚ್ಚಿರಲಿಲ್ಲ. ಬಚ್ಚಲು ಮನೆಯ ನಲ್ಲಿಯಿಂದ ನೀರು ಸೋರಿ ಹೋಗುತ್ತಿತ್ತು. ಆ- ಮಾಡುವವರೇ ಇರಲಿಲ್ಲ. ಇದನ್ನೆ ನೋಡಿದ ಖೇಮುಗೆ ಪಿತ್ತ ನೆತ್ತಿಗೇರಿತು. ಮನೆಯನ್ನು ಹೀಗೆ ಅಧ್ವಾನ ಮಾಡಿ ಖೇಮುಶ್ರೀ ಎಲ್ಲಿಗೆ ಹೋದಳು ಅಂತ ಹುಡುಕಿಕೊಂಡು ಹೊರಟ. ಆಗ ಹೆಂಡತಿ ಲಿವಿಂಗ್ ರೂಮ್‌ನಲ್ಲಿ ಇzಳೆ ಅಂತ ಗೊತ್ತಾಯ್ತು. ಅಲ್ಲಿಗೆ ಹೋಗಿ ನೋಡಿದರೆ ಖೇಮುಶ್ರೀ ಯಾವುದೋ ಹಳೆಯ ನೈಟಿ ಹಾಕಿಕೊಂಡು ಮ್ಯಾಗಝೀನ್ ಓದುತ್ತಾ ಅಡ್ಡಾದಿಡ್ಡಿಯಾಗಿ ಮಲಗಿದ್ದಳು.

ಖೇಮುಗೆ ಸಿಟ್ಟು ಇನ್ನಷ್ಟು ಜಾಸ್ತಿಯಾಗಿ, ‘ಏನಿದು, ಮನೆ ಹೀಗಿದೆ, ಏನಾಗಿದೆ ನಿಂಗೆ?’ ಅಂತ ಜೋರುದನಿಯಲ್ಲಿ ಅವಳನ್ನು ಕೇಳಿದ. ಅದಕ್ಕೆ ಖೇಮುಶ್ರೀ ಶಾಂತವಾಗಿ, ‘ಪ್ರತಿದಿನ ನೀನು ಆಫೀಸಿನಿಂದ ಮನೆಗೆ ಬಂದಾಗ, ನಂಗೆ ಆಫೀಸಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಎಲ್ಲಾ ಕೆಲಸ ಇರುತ್ತೆ ಗೊತ್ತಾ. ಎಷ್ಟು ಸುಸ್ತಾಗಿರ್ತೀನಿ, ನೀನೇನು ಇಡೀ ದಿನ ಮನೆಯಲ್ಲಿ ಕಡಿದು ಕಿತ್ತಾಕುವಂಥ ಕೆಲಸ ಮಾಡ್ತೀಯಾ? ಅಂತ ಕೇಳ್ತೀಯ ಅಲ್ವಾ’ ಅಂತ ಕೇಳಿದಳು. ಅದಕ್ಕೆ ಖೇಮು, ‘ಹೌದು ಕೇಳ್ತೀನಿ ಅದಕ್ಕೇನೀಗ?’ ಅಂದ. ಅದಕ್ಕೆ ಖೇಮುಶ್ರೀ ಹೇಳಿದಳು, ‘ಇವತ್ತು ಮನೇಲಿದ್ಕೊಂಡು ನಾನು ಏನೂ ಕಡಿದು ಕಿತ್ತಾಕಲಿಲ್ಲ’.

ಲೈನ್ ಮ್ಯಾನ್

ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?

‘ತೇಗ’ದ ಮರವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು

ಆಪತ್ ಬಂದು ಚಾಪೆ ಸುತ್ಕೊಂಡೋಗ ಅನ್ನೋದನ್ನು ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು

  • ‘ಮ್ಯಾಟ್’ ‘ಫಿನಿಷ್’
  • ಕೂದಲಿಗೆ ಒಳ್ಳೆ ಟ್ರೀಟ್‌ಮೆಂಟ್ ಕೊಡುವವಳು
  • ಹೇರ್ ಹೋಸ್ಟೆಸ್

  • ಕಡಿಮೆ ಕೂದಲು ಇರುವವನು
  • ‘ಲೋ’ಕೇಶ

  • ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ?
  • ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ‘ಕೊಡಲಿ’?
    ಸ್ಟಾರ್ ನಟರ ಲೈಫು
  • ಎಲ್ಲಾ ಚೆನ್ನಾಗಿದ್ದಾಗ: ಲಕ್ಸುರಿ ಕ್ಯಾರವಾನ್
  • ವಯಸ್ಸಾಗಿ ಅವಕಾಶಗಳೇ ಇಲ್ಲದಾಗ: ಯಾದೋಂ ಕಿ ಕಾರ್‌ವಾನ್
    ಪರೀಕ್ಷಾ ಟಿಪ್ಸ್
  • ಎಕ್ಸಾಮ್ ಸಮಯದಲ್ಲಿ ಒZಜ್ಝಿ ಚ್ಟಿಛಿZh ಸಿನಿಮಾಗಳನ್ನ ನೋಡ್ಬೇಡಿ, ಟೆಂ ಆಗುತ್ತೆ. ಓದೋದ್ ಬಿಟ್ಟು ಏನಾದ್ರೂ ಮಾಡಿ ಮನೆಯಿಂದ ಹೊರಗ್ ಹೋಗ್ಬೇಕು ಅಂತ.
  • ಆಸ್ತಿಕತೆ ನಾಸ್ತಿಕತೆ ನಡುವಿನ ಗುದ್ದಾಟ
  • ದೇವಸ್ಥಾನ ಬೀಗ ಹಾಕಿದೆ ಅಂದ್ರೆ, ದೇವರು ಒಳಗಿಲ್ಲ ಅಂತ ಅರ್ಥಾನಾ?
  • ಉರಿಗೌಡರ ಟಿಪ್ಸ್
  • ನಮ್ಮ ಅಂಡು ಉರೀತಿದೆ‌ ಅಂದಾಗ ಇನ್ನೊಬ್ಬರ ಅಂಡು ತಣ್ಣಗಿದೆ ಅಂತ ಹೊಟ್ಟೆ ಕಿಚ್ಚು ಪಟ್ರೆ. ಅಂಡಿನ ಜತೆ ಹೊಟ್ಟೇನೂ ಉರಿಯುತ್ತೆ.

  • ಕ್ರಿಕೆಟ್ ಆಟದಲ್ಲಿ ೫ ಬಾಲ್‌ ಬೋಲ್ ಮಾಡಿ, ೬ ಬಾಲ್ ಆಯ್ತು ಅಂತ ಅಂದ್ಕೊಳ್ಳೋದು
  • ‘ಓವರ್’ ಕಾನಿಡೆನ್ಸ್

ಇದನ್ನೂ ಓದಿ: hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್‌