Sunday, 24th November 2024

‌Hari Parak Column: ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ

ತುಂಟರಗಾಳಿ

ಹರಿ ಪರಾಕ್

ಜಸ್ಪ್ರೀತ್ ಬುಮ್ರಾ

ಏನ್ ಕ್ಯಾಪ್ಟನ್ ಸಾಹೇಬ್ರೇ, ಆಸ್ಟ್ರೇಲಿಯಾಗೆ ಗವಾಸ್ಕರ್ ಕಡೆಯಿಂದ ಹೋಗಿದ್ದೀರ, ಬಾರ್ಡರ್ ವಿಷ್ಯ ಏನು?

  • ಅಯ್ಯೋ, ಬಾರ್ಡರ್ ಸಮಸ್ಯೆ ಬರೋದೇನಿದ್ರೂ ಪಾಕಿಸ್ತಾನಕ್ಕೆ ಹೋದಾಗ. ಇದು ಆಸ್ಟ್ರೇಲಿಯಾ.
  • ಅದೂ ಸರಿನೇ ಬಿಡಿ. ಅದಿರ್ಲಿ ನಮ್ ಹ್ಯಾಟ್ರಿಕ್ ಹೀರೋ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
  • ಯಾರ್ರೀ ಅದು. ನನಗೂ ಅವರಿಗೂ ಏನ್ ಸಂಬಂಧ
  • ಅಲ್ಲ, ನೀವು ಬೋಲರ್ ಅಲ್ವಾ, ಅದಕ್ಕೇ ಹ್ಯಾಟ್ರಿಕ್ ವಿಷ್ಯದ ಬಗ್ಗೆ ಏನಂತೀರಾ ಅಂತ ಕೇಳ್ದೆ..
  • ನೋಡ್ರೀ ನಮಗೆ ಕುಮಾರಸ್ವಾಮಿ ಮಗ ನಿಖಿಲ್ ಎಲ್ಲ ಗೊತ್ತಿಲ್ಲ. ಗೊತ್ತಿರೋದು ಒಬ್ಬರೇ ಕ್ರಿಕೆಟರ್ ಕಮ್ ಆಕ್ಟರ್. ಎಸ್.ನಾರಾಯಣ್
    ಮಗ ಪಂಕಜ್ ನಾರಾಯಣ್.
  • ಸರಿಹೋಯ್ತು. ಹೋಗ್ಲಿ, 150ಕ್ಕೆ ಔಟ್ ಆದ ನಮ್ಮೋರಿಗೆ 5 ವಿಕೆಟ್ ತೆಗೆದು – ಇನ್ನಿಂಗ್ಸ್ ಲೀಡ್ ಕೊಡಿಸಿಬಿಟ್ರಲ್ಲ?
  • ಮತ್ತೆ, ಟೀಮ್ ಲೀಡ್ ಮಾಡ್ತಾ ಇರೋದು ಚಂದಕ್ಕಾ?
  • ಓಕೆ, ಓಕೆ… ಲೀಡಿಂಗ್ ಫ್ರಮ್ ದಿ ಫ್ರಂಟ್. ಸರಿ, ನಿಮ್ಮ ಯಾರ್ಕರ್‌ಗಳಿಗೆ ಒಂದು ಹೆಸರು ಇಡೋದಾದ್ರೆ ಏನಿಡ್ತೀರಾ?
  • ಬೂಮರ್ಯಾಂಗ್
  • (ಕಾಲ್ಪನಿಕ ಸಂದರ್ಶನ)

ಲೈನ್ ಮ್ಯಾನ್

ಹೆಂಡ್ತಿ ಊರಿಗೆ ಹೋದಾಗ ಆನ್ ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವ ಗಂಡನಿಗೆ ಅದು

  • ‘ಸ್ವಿಗ್ಗಿ’ ಕಾಲ

  • ಕ್ವೆಶ್ಚನ್ ಪೇಪರ್ ಲೀಕ್ ಮಾಡಿ ಸಿಕ್ಕಿ ಹಾಕಿಕೊಂಡವರ ಕಥೆ
  • ಪೊಲೀಸ್ನೋರು ಕೇಳೋ ಪ್ರಶ್ನೆಗಳನ್ನೂ ಯಾರಾದ್ರೂ ಲೀಕ್ ಮಾಡಿದ್ದಿದ್ರೆ ಬಚಾವ್ ಆಗ್ತಾ ಇದ್ವಿ
    ಮತ್ತೆ ಮತ್ತೆ ಫಾರಿನ್ನಿಗೆ ಟ್ರಿಪ್ ಹೋಗೋ ಹುಚ್ಚು ಇರುವವರು
  • ಅಬ್ರಾಡ್ ಮೈಂಡೆಡ್
    ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಉಪಯೋಗಿಸುವ ದೇಶ
  • ಉಜ್ಬೇಕಿಸ್ತಾನ್
    ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು
  • ‘ಬೂಸ್ಟ್‌’ ಈಸ್ ದ ಸೀಕ್ರೆಟ್ ಆಫ್‌ ಮೈ ಎನರ್ಜಿ
    ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
  • ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
    ಗಾಂಧಾರಿಗೆ ನೂರು ಮಕ್ಕಳಾದಾಗ ಆಗಿದ್ದು
  • ‘ಬಸಿರು’ ಕ್ರಾಂತಿ
    ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಹೆಸರು
  • ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ
    ಇನ್ನೊಬ್ಬರನ್ನ ಕನ್ವಿ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?
  • ‘ಸಮಾಧಾನಕರ’ ಬಹುಮಾನ
    ಕುಡಿದು ‘ಹೈ’ ಆಗಿರುವವರ ಹಾಡು
  • ‘ಇಳಿಸು’ ಬಾ, ತಾಯಿ ಇಳಿಸು ಬಾ
    ಇಸ್ಪೀಟ್ ‘ಕಾರ್ಡ್’ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತ ಹೇಳೋದು
  • ‘ಎಲೆ’ಕ್ಷನ್
  • ಇದನ್ನೂ ಓದಿ: #Harihara