Roopa Gururaj Column: ಗರ್ಭದಲ್ಲಿದ್ದಾಗಲೇ ತಂದೆಯ ತಪ್ಪನ್ನು ಗ್ರಹಿಸಿದ !
ಪತಿ ಕಹೋಡ ಮಹರ್ಷಿಗೆ ಸಮಸ್ತ ವಿಷಯವನ್ನು ತಿಳಿಸುತ್ತಾಳೆ. ಆದರೆ ವಿದ್ಯೆಯ ಮದವೇರಿದ್ದ ಕಹೋಡರಿಗೆ ತಮ್ಮ ತಪ್ಪಿನ ಅರಿವಾಗುವದಿಲ್ಲ. ಬದಲಾಗಿ ತಮ್ಮನ್ನು ಎಂಟು ಸಲ ಗೇಲಿ ಮಾಡಿ ನಕ್ಕ ಗರ್ಭದಲ್ಲಿನ ಮಗುವಿನ ಮೇಲೆ ಅಸಾಧ್ಯ ಕೋಪ ಬರುತ್ತದೆ. ತಕ್ಷಣವೇ ಸುಜಾತೆಯ ಗರ್ಭಕ್ಕೆ ‘ಎಂಟು ಸಲ ನನ್ನನ್ನು ಅವಮಾನಿಸಿದ ನಿನ್ನ ಎಂಟು ಅಂಗಗಳು ಕೂಡ ಊನವಾಗಲಿ..’ ಅಂತ ಶಪಿಸುತ್ತಾರೆ. ಹಾಗೆ ಎಂಟು ಅಂಗಗಳನ್ನು ಹೊತ್ತುಕೊಂಡು ಹುಟ್ಟಿದವನೇ ಅಷ್ಟಾವಕ್ರ


ಒಂದೊಳ್ಳೆ ಮಾತು
ಅಷ್ಟಾವಕ್ರ ಪ್ರಾಚೀನ ಭಾರತದ ಋಷಿ. ಈತ ಕಹೋಡ ಮಹರ್ಷಿ ಮತ್ತು ಸುಜಾತೆಯ ಮಗ. ಜನ್ಮತಃ ಅಸಾಧಾರಣ ಬುದ್ಧಿಶಕ್ತಿಯುಳ್ಳ ಪ್ರತಿಭಾವಂತ. ದೇಹದ ಎಂಟು ಅಂಗಗಳಲ್ಲಿ ವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ್ದರಿಂದ ಅಷ್ಟಾವಕ್ರನೆಂದು ಪ್ರಖ್ಯಾತನಾದ. ಉದ್ಧಾಲಕನೆಂಬ ಮಹರ್ಷಿ ಆಶ್ರಮವೊಂದರಲ್ಲಿ ವೇದೋಪನಿಷತ್ತನ್ನು ಕಲಿಸುತ್ತಿದ್ದರು. ಬಾಲಕ ಕಹೋಡ ಅವರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದನು. ಮುಂದೆ ಕಹೋಡನ ಸೇವೆಯಿಂದ ಸಂತೃಪ್ತರಾದ ಉದ್ಧಾಲಕರು ತಮ್ಮ ಮಗಳಾದ ಸುಜಾತಳನ್ನು ಕಹೋಡನಿಗೆ ಕೊಟ್ಟು ಮದುವೆ ಮಾಡಿಸುತ್ತಾರೆ. ಒಂದು ದಿನ ಕಹೋಡ ಮುನಿ ತಮ್ಮ ವೇದಾಧ್ಯಯನವನ್ನು ಮಾಡುತ್ತಿರುವಾಗ ಗರ್ಭಿಣಿ ಸುಜಾತೆಯು ಅಲ್ಲಿಗೆ ಬಂದು ಗಂಡನ ಅಧ್ಯಯನವನ್ನು ಗಮನಿಸುತ್ತಿರುತ್ತಾಳೆ.
ಇದ್ಯಾವುದರ ಅರಿವಿಲ್ಲದ ಕಹೋಡಮುನಿಗಳು ತಮ್ಮ ಮಂತ್ರೋಚ್ಛಾರಣೆಯನ್ನು ಜೋರಾಗಿ ಹೇಳಿಕೊಳ್ಳುತ್ತಿರುತ್ತಾರೆ. ಮಧ್ಯೆ ಒಂದೆರಡು ಕಡೆ ತಪ್ಪಾಗಿ ಮಂತ್ರ ಉಚ್ಛರಿಸುತ್ತಾರೆ. ಆಗ ಸುಜಾತೆಯ ಗರ್ಭದಲ್ಲಿದ್ದ ಮಗು ಗೇಲಿ ಮಾಡಿ ನಗುತ್ತದೆ. ಸುಜಾತೆಗೆ ಗರ್ಭದಲ್ಲಿರುವ ಮಗುವಿನ ಗೇಲಿ ಅರ್ಥ ವಾಗುತ್ತದೆ. ಆದರೆ ಪತಿಗೆ ಹೇಳುವದಿಲ್ಲ. ಆದರೆ ಕಹೋಡ ಮಹರ್ಷಿ ಎಂಟು ಸಲ ಮಂತ್ರವನ್ನು ತಪ್ಪಾಗಿ ಉಚ್ಛರಿಸುತ್ತಾರೆ. ಪ್ರತೀಸಲವೂ ಮಗು ನಕ್ಕು ಗೇಲಿ ಮಾಡುತ್ತದೆ. ಆದರೆ ಎಂಟನೇ ಸಲ ಮಾತ್ರ ಸುಜಾತಳಿಗೆ ತಡೆಯಲಾಗುವದಿಲ್ಲ.
ಇದನ್ನೂ ಓದಿ: Roopa Gururaj Column: ನಳ ದಮಯಂತಿಯನ್ನು ಸೇರಿಸಿದ ಅಕ್ಷ ಹೃದಯ ವಿದ್ಯೆ
ಪತಿ ಕಹೋಡ ಮಹರ್ಷಿಗೆ ಸಮಸ್ತ ವಿಷಯವನ್ನು ತಿಳಿಸುತ್ತಾಳೆ. ಆದರೆ ವಿದ್ಯೆಯ ಮದವೇರಿದ್ದ ಕಹೋಡರಿಗೆ ತಮ್ಮ ತಪ್ಪಿನ ಅರಿವಾಗುವದಿಲ್ಲ. ಬದಲಾಗಿ ತಮ್ಮನ್ನು ಎಂಟು ಸಲ ಗೇಲಿ ಮಾಡಿ ನಕ್ಕ ಗರ್ಭದಲ್ಲಿನ ಮಗುವಿನ ಮೇಲೆ ಅಸಾಧ್ಯ ಕೋಪ ಬರುತ್ತದೆ. ತಕ್ಷಣವೇ ಸುಜಾತೆ ಯ ಗರ್ಭಕ್ಕೆ ‘ಎಂಟು ಸಲ ನನ್ನನ್ನು ಅವಮಾನಿಸಿದ ನಿನ್ನ ಎಂಟು ಅಂಗಗಳು ಕೂಡ ಊನ ವಾಗಲಿ..’ ಅಂತ ಶಪಿಸುತ್ತಾರೆ. ಹಾಗೆ ಎಂಟು ಅಂಗಗಳನ್ನು ಹೊತ್ತುಕೊಂಡು ಹುಟ್ಟಿದವನೇ ಅಷ್ಟಾವಕ್ರ.
ಈತ ‘ಅಷ್ಟಾವಕ್ರ ಗೀತಾ’ ಎಂಬ ಗ್ರಂಥವನ್ನು ಬರೆದಿದ್ದಾನೆ. ಜನಕರಾಜನ ಸಭೆಯಲ್ಲಿ ವಂದಿ ಎಂಬ ದುಷ್ಟ ಪಂಡಿತ ತನ್ನ ಕುತಂತ್ರದಿಂದ ಅಲ್ಲಿ ವಾದಕ್ಕೆ ಬಂದವರನ್ನೆಲ್ಲ ಸೋಲಿಸಿ, ನೀರಿನಲ್ಲಿ ಹಾಕಿ ಕೊಲ್ಲುತ್ತಿದ್ದರು. ಅದೇ ರೀತಿ ಅಷ್ಟಾವಕ್ರನ ತಂದೆ ಯಾದ ಕಹೋಡ ಮಹರ್ಷಿಯನ್ನು ಸಹ ನೀರಿಗೆ ಎಸೆದು ಕೊಂದಿದ್ದರು. ವಯಸ್ಸಿಗೆ ಬಂದಂತಹ ಅಷ್ಟಾವಕ್ರ ಜನಕನ ಸಭೆಗೆ ಹೋಗಿ ವಾಗ್ವಾದದಲ್ಲಿ ವಂದಿಯನ್ನು ಸೋಲಿಸಿ, ಅವನನ್ನೇ ನೀರಿಗೆ ಎಸೆದು, ಹಿಂದೆ ನೀರಿಗೆ ಬಿದ್ದು ಸಾಯಿಸಿದವರನ್ನು ಬದುಕಿಸಿ ತಂದನಂತೆ.
ಋಷಿ ಮೂಲ ಗ್ರಂಥದಲ್ಲಿ ಸಿಗುವ ಈ ಕಥೆ ಗರ್ಭದಲ್ಲಿರುವ ಶಿಶು ಹೇಗೆ ತನ್ನ ಹೊರಗಿನ ವಾತಾ ವರಣದಲ್ಲಿ ಇರುವ ಒಳ್ಳೆಯದು ಕೆಟ್ಟದ್ದು ಎರಡನ್ನೂ ಗ್ರಹಿಸುವ ಶಕ್ತಿ ಹೊಂದಿದೆ ಎಂದು ತಿಳಿಸು ತ್ತದೆ. ಆದ್ದರಿಂದಲೇ ಗರ್ಭಿಣಿ ಸ್ತ್ರೀಯರು ಒಳ್ಳೆಯ ವಾತಾವರಣದಲ್ಲಿ, ಸದ್ವಿಚಾರಗಳನ್ನು ಯೋಚಿಸುತ್ತ ಆದಷ್ಟು ತಮ್ಮ ಗರ್ಭದಲ್ಲಿರುವ ಶಿಶುವಿಗೆ ಸಕಾರಾತ್ಮಕ ವಿಷಯಗಳನ್ನು ತಲುಪಿ ಸುವ ವಿಚಾರ ಮಾಡಬೇಕು.
ಗರ್ಭ ಧರಿಸಿದ ಹೆಣ್ಣು ಮಗಳು ಆತಂಕ, ಅಸಹನೆ, ಅನುಮಾನ ಮುಂತಾದ ಗುಣಗಳಿಂದ ಭಾದಿತ ಳಾಗಿದ್ದರೆ ಹೊಟ್ಟೆಯಲ್ಲಿರುವ ಮಗು ಕೂಡ ಅವುಗಳನ್ನು ಗ್ರಹಿಸುತ್ತಾ ಬೆಳೆಯುತ್ತದೆ. ಹುಟ್ಟಿದ ನಂತರ ಅದರ ಗುಣದಲ್ಲಿ ಖಂಡಿತಾ ಅವುಗಳ ಪ್ರಭಾವ ಕಂಡೇ ಕಾಣುತ್ತದೆ. ನಮ್ಮ ಹಿರಿಯರು ಆದ್ದ ರಿಂದಲೇ ಗರ್ಭಿಣಿ ಹೆಣ್ಣುಮಗಳು ಶಾಂತವಾದ ವಾತಾವರಣದಲ್ಲಿ ಒಳ್ಳೆಯ ಆರೈಕೆಯಿಂದ ಒಂಬತ್ತು ತಿಂಗಳನ್ನು ಕಳೆಯಬೇಕು ಎಂದು ಅವಳನ್ನು ತಾಯಿಯ ಮನೆಯ ಆರೈಕೆಯಲ್ಲಿ ಇಡುತ್ತಾರೆ.
ಇಂದಿನ ದಿನಗಳಲ್ಲಿ ಉದ್ಯೋಗಗಳಲ್ಲಿ ಇರುವ ಹೆಣ್ಣು ಮಕ್ಕಳಿಗೆ ಅಷ್ಟೊಂದು ಸಮಯ ತವರು ಮನೆಯ ಆರೈಕೆ, ವಿಶ್ರಾಂತಿ ಸಿಗದೇ ಹೋದರೂ, ಯೋಗ, ಧ್ಯಾನ, ಒಳ್ಳೆಯ ವಿಚಾರಗಳನ್ನು ಓದುವುದರಿಂದ ಮಾನಸಿಕ ಸಮತೋಲನವನ್ನ ಕಾಪಾಡಿಕೊಳ್ಳಬಹುದು. ಕುಟುಂಬದವರು ಕೂಡ ಆ ಹೆಣ್ಣು ಮಗಳಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡಬೇಕು.
ಪತಿ, ಮನೆಯವರು ಎಲ್ಲರ ಪ್ರೀತಿಯಾದರಗಳಿಂದ ಆ ಹೆಣ್ಣು ಮಗಳು ನವ ವಸಂತಗಳನ್ನು ಕಳೆದು ಮಗುವಿಗೆ ಜನ್ಮ ನೀಡಿದಾಗ ತಾಯ್ತನದ ಎಲ್ಲ ಜವಾಬ್ದಾರಿಗಳನ್ನು ಹೊರಲು ಆಕೆಯೂ ಒಳ್ಳೆಯ ಮನಸ್ಸಿನಿಂದ ಸಜ್ಜಾಗಿರುತ್ತಾಳೆ. ಇಂತಹ ಆರೈಕೆ ಪ್ರೀತಿ ಎಲ್ಲ ತಾಯಂದಿರಿಗೂ ಸಿಗುವಂತಾಗಲಿ. ಹುಟ್ಟುವ ಪ್ರತಿ ಮಗುವೂ ತೇಜಸ್ವಿಯಾಗಲಿ.