ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಈ ಹಣಕಾಸು ವರ್ಷದ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿ ಸಿದ್ದು, ಒಟ್ಟಾರೆ ಶೇ.20ರಷ್ಟು ಠೇವಣಿ ಹೆಚ್ಚಳವಾಗಿದೆ. 4ನೇ ತ್ರೈಮಾಸಿಕಕ್ಕೆ ಬಟವಾಡೆಗಳು ಉಜ್ಜೀವನ್ ಇತಿಹಾಸದಲ್ಲೇ ಹೆಚ್ಚಾಗಿದ್ದು, ₹7,440 ಕೋಟಿ ಆಗಿದೆ. ತ್ರೈಮಾಸಿಕಕ್ಕೆ 39% ಗೆ ಮತ್ತು ವಾರ್ಷಿಕವಾಗಿ 11% ಗೆ ಏರಿದೆ. ಒಟ್ಟಾರೆ ಸಾಲ ಖಾತೆಯು ₹ 32,122 ಕೋಟಿಗೆ ತಲುಪಿದ್ದು, ತ್ರೈಮಾಸಿಕ ವಾಗಿ 5% ಗೆ ಏರಿದೆ ಮತ್ತು ವಾರ್ಷಿಕವಾಗಿ 8% ಗೆ ಏರಿದೆ


ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಈ ಹಣಕಾಸು ವರ್ಷದ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಒಟ್ಟಾರೆ ಶೇ.20ರಷ್ಟು ಠೇವಣಿ ಹೆಚ್ಚಳವಾಗಿದೆ. 4ನೇ ತ್ರೈಮಾಸಿಕಕ್ಕೆ ಬಟವಾಡೆಗಳು ಉಜ್ಜೀವನ್ ಇತಿಹಾಸದಲ್ಲೇ ಹೆಚ್ಚಾಗಿದ್ದು, ₹7,440 ಕೋಟಿ ಆಗಿದೆ. ತ್ರೈಮಾಸಿಕಕ್ಕೆ 39% ಗೆ ಮತ್ತು ವಾರ್ಷಿಕವಾಗಿ 11% ಗೆ ಏರಿದೆ. ಒಟ್ಟಾರೆ ಸಾಲ ಖಾತೆಯು ₹ 32,122 ಕೋಟಿಗೆ ತಲುಪಿದ್ದು, ತ್ರೈಮಾಸಿಕವಾಗಿ 5% ಗೆ ಏರಿದೆ ಮತ್ತು ವಾರ್ಷಿಕವಾಗಿ 8% ಗೆ ಏರಿದೆ. ಅಡಮಾನ ಸಹಿತ ಸಾಲ ಖಾತೆಯು ₹13,988 ಕೋಟಿ ದಾಟಿದ್ದು, ತ್ರೈಮಾಸಿಕಕ್ಕೆ 17% ಏರಿದೆ ಮತ್ತು ವಾರ್ಷಿಕವಾಗಿ 56% ಏರಿದೆ. ಹೊಸ ಉತ್ಪನ್ನಗಳ ಬಟವಾಡೆಗಳು 4ನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಬಟವಾಡೆಗಳಿಗೆ 11% ಕೊಡುಗೆ ನೀಡಿದೆ.
ಮೈಕ್ರೋ ಬ್ಯಾಂಕಿಂಗ್ ವಿಭಾಗವು 4ನೇ ತ್ರೈಮಾಸಿಕದಲ್ಲಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಿದ್ದು, ತ್ರೈಮಾಸಿಕದಲ್ಲಿ 38% ಏರಿದೆ. ಮೈಕ್ರೋ ಬ್ಯಾಂಕಿಂಗ್‌ನ ಒಳಗೆ, ವೈಯಕ್ತಿಕ ಸಾಲ ಖಾತೆಯು ತ್ರೈಮಾಸಿಕವಾಗಿ 5% ಏರಿದ್ದು, ರೂ. 5,182 ಕೋಟಿ ಆಗಿದೆ. 2025 ಮಾರ್ಚ್‌ಗೆ ಒಟ್ಟಾರೆ ಮೈಕ್ರೋ ಬ್ಯಾಂಕಿಂಗ್‌ನ 28% ಆಗಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಮ್‌ಡಿ ಮತ್ತು ಸಿಇಒ ಶ್ರೀ ಸಂಜೀವ್ ನೌಟಿಯಾಲ್ ಮಾತನಾಡಿ, "2025 ವಿತ್ತ ವರ್ಷವು ಅತ್ಯಂತ ಮಹತ್ವದ್ದಾಗಿದ್ದು, ಮೈಕ್ರೋ ಬ್ಯಾಂಕಿಂಗ್ ವಲಯ ದಲ್ಲಿನ ಸವಾಲಿನ ಉದ್ಯಮ ಪರಿಸರದಲ್ಲಿ ಉದ್ಯಮದ ಪೋರ್ಟ್‌ಫೋಲಿಯೋ ಗುಣಮಟ್ಟದಲ್ಲೇ ಉತ್ತಮವಾಗಿದೆ. ಅಡಮಾನ ಸಹಿತ ಸಾಲ ಖಾತೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ವೈವಿಧ್ಯತ ಗೊಳಿಸಲು ವ್ಯೂಹಾತ್ಮಕ ತಂತ್ರಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಸಾಲ ಪೋರ್ಟ್ ಫೋಲಿಯೋದ 44% ಕೊಡುಗೆ ನೀಡುತ್ತಿವೆ ಮತ್ತು ಕಳೆದ ವರ್ಷದಿಂದ 30% ಹೆಚ್ಚಳವಾಗಿದೆ.
ಬ್ಯಾಂಕಿಂಗ್ ಸಿಸ್ಟಮ್‌ನ ದ್ರವ್ಯತೆಯು ಸವಾಲುಗಳನ್ನು ಎದುರಿಸಿದ್ದು, ಕ್ರೆಡಿಟ್‌ನಿಂದ ಠೇವಣಿ ಅನುಪಾತವನ್ನು 85% ಕ್ಕೆ ಸುಧಾರಿಸುವ ಮೂಲಕ ಮತ್ತು ಎಲ್‌ಸಿಅರ್ ಅನ್ನು ಆರಾಮದಾಯಕ ವಾಗಿ 120% ರ ವರೆಗೆ ನಿರ್ವಹಿಸುವ ಮೂಲಕ ಸೂಕ್ತವಾಗಿ ನಿರ್ವಹಣೆ ಮಾಡಲಾಗಿದೆ. ಮುಂದು ವರಿದು, 2025 ಫೆಬ್ರವರಿಯಲ್ಲಿ ಬ್ಯಾಂಕ್ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಯೂನಿವರ್ಸಲ್ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳಲು ಆರ್‌ಬಿಐಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.