Star Fashion: ಕಾನ್ಸ್ ಸ್ಟ್ರೀಟ್ನಲ್ಲಿ ಪ್ರಿಂಟೆಡ್ ಸೂಟ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ಸ್ಟಾರ್ ಡೈರೆಕ್ಟರ್ ಕರಣ್ ಜೋಹರ್
Star Fashion: ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬಾಲಿವುಡ್ನ ಸ್ಟಾರ್ ನಿರ್ದೇಶಕ ಕರಣ್ ಜೋಹರ್, ಕಲರ್ಫುಲ್ ಪ್ರಿಂಟೆಡ್ ಪ್ಯಾಂಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಯಾ ಮೆನ್ಸ್ ಫ್ಯಾಷನ್ ಲುಕ್ಸ್ಗೆ ನಾಂದಿ ಹಾಡಿದ್ದಾರೆ. ಅವರ ಈ ಲುಕ್ಸ್ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳಿದ್ದಾರೆ ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಕರಣ್ ಜೋಹರ್, ಬಾಲಿವುಡ್ ನಿರ್ದೇಶಕ


ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬಾಲಿವುಡ್ನ ಸ್ಟಾರ್ ನಿರ್ದೇಶಕ ಕರಣ್ ಜೋಹರ್, ಕಲರ್ಫುಲ್ ಡಿಸೈನರ್ ಪ್ರಿಂಟೆಡ್ ಪ್ಯಾಂಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೆನ್ಸ್ ಪ್ರಿಂಟೆಡ್ ಸೂಟ್ ಲುಕ್ಗೆ ಸೈ ಎಂದಿದ್ದಾರೆ.

ಮಾಡೆಲ್ನಂತೆ ಪೋಸ್ ನೀಡಿದ ಕರಣ್
ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ ಕರಣ್ ಜೋಹರ್, ಎರಡೂ ದಿನವೂ ಕೂಡ ಅತ್ಯಾಕರ್ಷಕ ಕಲರ್ಫುಲ್ ಸೂಟ್ಗಳಲ್ಲಿ ಕಾಣಿಸಿಕೊಂಡು ಮಾಡೆಲ್ನಂತೆ ಪೋಸ್ ನೀಡಿದ್ದಾರೆ. ಈ ಚಿತ್ರಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ ಕೂಡ.

ಕರಣ್ ಜೋಹರ್ ಫ್ಯಾಷನ್ ಹೈಲೈಟ್ ಮಾಡಿದ ಪ್ರಿಂಟೆಡ್ ಸೂಟ್ಗಳಿವು
ಅಂದಹಾಗೆ, ನಿರ್ದೇಶಕ ಕರಣ್ ಜೋಹರ್ ಮುಂಬಯಿ ಮೂಲದ ಬ್ರ್ಯಾಂಡ್ ಲೆಬೆಲ್ ಕ್ರೆಸ್ಟೆಲ್ಲಿಯ ಪ್ಯಾಂಟ್ ಸೂಟ್ನಲ್ಲಿ, ಇಕಾ ಲಖಾನಿ ಸ್ಟೈಲಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ದಿನ, ಕಾನ್ಸ್ ಫೆಸ್ಟಿವಲ್ ನಡೆಯುವ ಸ್ಟ್ರೀಟ್ಗಳಲ್ಲಿ ಕಾಣಿಸಿಕೊಂಡ ಕರಣ್, ಕಂಪ್ಲೀಟ್ ಚೆಕ್ಸ್ ಪ್ರಿಂಟ್ ಇರುವ ಮೂರು ಪೀಸ್ ಸೂಟ್ ಧರಿಸಿದ್ದಾರೆ. ಪೀಚ್ ಶೇಡ್ನ ಈ ಸೂಟ್ಗೆ ಬ್ಲ್ಯಾಕ್ ಕಲರ್ನ ಶರ್ಟ್ ಧರಿಸಿ, ಸನ್ಗ್ಲಾಸ್ ಮ್ಯಾಚ್ ಮಾಡಿದ್ದಾರೆ. ಇದು ಅವರನ್ನು ಹೈ ಲೈಟ್ ಮಾಡಿದೆ. ನೋಡಲು ಮೆಚ್ಯೂರ್ಡ್ ಲುಕ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.

ಪ್ರಿಂಟೆಡ್ ಕೋಟ್ ಜತೆ ಸ್ಟೋಲ್ಸ್
ಇನ್ನೊಂದು ದಿನ, ಕರಣ್ ಧರಿಸಿರುವ ಸೂಟ್ ವೂಲ್ ಸಿಲ್ಕ್ನದ್ದಾಗಿದೆ. ನೋಡಲು ಶೆರ್ವಾನಿ ಪ್ರಿಂಟ್ಸ್ಗೆ ಬಳಸುವ ಫ್ಯಾಬ್ರಿಕ್ನಂತೆ ಕಾಣಿಸುತ್ತದೆ. ಆದರೆ, ಅದಲ್ಲ! ಪ್ರಿಂಟೆಡ್ ಕೋಟ್ ಜತೆ ಸ್ಟೋಲ್ ಧರಿಸಿದ್ದು, ಔಟ್ಫಿಟನ್ನು ಹೈಲೈಟ್ ಮಾಡಿದೆ ಎನ್ನಬಹುದು. ಇದಕ್ಕೆ ಕಾಲರ್ ಇನ್ನರ್ ಬ್ಲ್ಯಾಕ್ ಶರ್ಟ್ ಹಾಗೂ ಪ್ಯಾಂಟನ್ನು ಧರಿಸಿರುವುದು ಇಡೀ ಲುಕ್ಕನ್ನು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಕರಣ್ ಫ್ಯಾಷನ್ ಸೆನ್ಸ್
ಬಾಲಿವುಡ್ ಸಿನಿಮಾ ಡೈರೆಕ್ಷನ್ ಮಾಡುವುದಷ್ಟೇ ಅಲ್ಲ, ಕರಣ್ ಜೋಹರ್ ಅವರು, ತಮ್ಮ ಫ್ಯಾಷನ್ ಲುಕ್ಕನ್ನು ಆಗಾಗ ನಾನಾ ಬಗೆಯಲ್ಲಿ ಪ್ರಯೋಗಿಸುತ್ತಲೇ ಇರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಅವರ ಮನೆಯಲ್ಲಿ ಸಾಕಷ್ಟು ವಾರ್ಡ್ರೋಬ್ಗಳಿವೆ. ಡಿಸೈನರ್ವೇರ್ ಹಾಗೂ ಶೂಗಳು ಇರಿಸಲೆಂದೇ ಒಂದು ಫ್ಲ್ಯಾಟ್ನಷ್ಟು ಜಾಗವನ್ನು ಮೀಸಲಿರಿಸಿದ್ದಾರಂತೆ.