Thursday, 12th December 2024

ಬೆಳಗಿನ ಜಾವ ಎದುರಿನ ವಾಹನದ ಹೆಡ್ ಲೈಟ್ ಆನ್-ಆಫ್ ಆಗಿದ್ದರೆ ಏನರ್ಥ ?

ಇದೇ ಅಂತರಂಗ ಸುದ್ದಿ

vbhat@me.com

ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ನಿಮಗೆ ಈ ರೀತಿಯ ಅನುಭವ ಆಗಿರಬಹುದು. ನಿಮ್ಮ ಸಂಸ್ಥೆಗೆ ಹೊಸ ಬಾಸ್ ಬಂದಿದ್ದಾನೆ ಎಂದುಕೊಳ್ಳಿ. ಆತ ಸಂಸ್ಥೆಯಲ್ಲಿ ಇರುವವರಿಗಿಂತ ಭಿನ್ನವಾಗಿ ಯೋಚಿಸುತ್ತಾನೆ. ಆತ ಬರುತ್ತಿದ್ದಂತೆ, ಹೆಡ್‌ಲೈಟ್ ಇಲ್ಲದೇ ವಾಹನ ಚಲಾಯಿಸುತ್ತಾನೆ. ಸುತ್ತಲೂ ಬೆಳಕು ಸಾಕಷ್ಟಿರುವಾಗ ಹೆಡ್‌ಲೈಟ್ ಬೇಕಿಲ್ಲ ಎಂದು ಭಾವಿಸುತ್ತಾನೆ. ಆದರೆ ಸಂಸ್ಥೆಯಲ್ಲಿರುವ ಸಿಬ್ಬಂದಿಯೆಲ್ಲ ಆಗ ಹೆಡ್‌ಲೈಟ್ ಆನ್ ಮಾಡಿ ವಾಹನ ಚಲಾಯಿಸುತ್ತಿರುತ್ತಾರೆ.

ಅಂದು ಬೆಳಗಿನ ಆರೂ ಕಾಲು ಗಂಟೆ ಸಮಯ. ಅವರು ಕಾರನಲ್ಲಿ ಕುಳಿತು ಹೊರಟರು. ಆಗಿನ್ನೂ ಸೂರ್ಯೋದಯ ಆಗಿರ ಲಿಲ್ಲ, ಆದರೆ ಹೆಡ್‌ಲೈಟ್ ಇಲ್ಲದೇ ಡ್ರೈವ್ ಮಾಡಬಹುದಾದಷ್ಟು ಬೆಳಕಿತ್ತು. ಹೀಗಾಗಿ ಅವರು ಹೆಡ್‌ಲೈಟ್ ಆನ್ ಮಾಡಲಿಲ್ಲ.

ಮುಖ್ಯರಸ್ತೆ ಬರುತ್ತಿದ್ದಂತೆ ಕಾರಿನ ವೇಗವನ್ನು ಜಾಸ್ತಿ ಮಾಡಿದರು. ಆಗ ಅವರು ಒಂದು ವಿಚಿತ್ರವನ್ನು ಗಮನಿಸಿದರು. ಮುಂದಿನಿಂದ ಬರುವ ವಾಹನಗಳೆಲ್ಲ ಹೆಡ್‌ಲೈಟ್ ಆನ್ ಮಾಡಿಕೊಂಡು ಬರುತ್ತಿದ್ದವು. ಸುತ್ತಲೂ ಸಾಕಷ್ಟು ಬೆಳಕು ಇರುವಾಗ ಅವರೆಲ್ಲ ಹೆಡ್‌ಲೈಟ್ ಆನ್ ಮಾಡಿಕೊಂಡು ಬರುತ್ತಿರುವುದು ಏಕೆ ಎಂದು ಅವರಿಗೆ ತುಸು ಸೋಜಿಗವಾಯಿತು.

ಆಗ ಅವರ ಪತ್ನಿ ಅದಕ್ಕೆ ತನ್ನದೇ ಆದ ಕಾರಣಗಳನ್ನು ನೀಡಿದಳು. ‘ಎದುರಿ ನಿಂದ ಬರುತ್ತಿರುವ ವಾಹನಗಳ ಡ್ರೈವರುಗಳು ನಮಗಿಂತ ಮುಂಚೆಯೇ ಪ್ರಯಾಣ ಆರಂಭಿಸಿರಬೇಕು. ಆಗ ಇನ್ನೂ ಕತ್ತಲು ಇದ್ದಿರಬೇಕು. ಹೀಗಾಗಿ ಅವರು ಇನ್ನೂ ಕತ್ತಲು ಇದೆಯೆಂದೇ ಭಾವಿಸಿರಬಹುದು. ಆದರೆ ನಾವು ಬೆಳಕು ಹರಿದ ನಂತರ ಪ್ರಯಾಣ ಆರಂಭಿಸಿದ್ದರಿಂದ ಹೆಡ್‌ಲೈಟ್ ಆನ್ ಮಾಡುವ ಅಗತ್ಯವಿದೆಯೆಂದು ನಿಮಗೆ ಅನಿಸಲಿಲ್ಲ’ ಎಂದು ಹೇಳಿದಳು.

ಅವರಿಗೆ ಆಕೆಯ ವಾದ ಸರಿ ಎನಿಸಿತು. ಎದುರಿನಿಂದ ಬರುತ್ತಿರುವವರು ನಮಗಿಂತ ಮುಂಚೆಯೇ ಡ್ರೈವ್ ಮಾಡುತ್ತಿದ್ದುದರಿಂದ ಅವರಿಗೆ ಹೆಡ್‌ಲೈಟ್ ಅಗತ್ಯವಿದ್ದಿರಬೇಕು ಎಂದು ಅವರು ಯೋಚಿಸಿದರು. ಹಾಗಾದರೆ ‘ನಾನೇಕೆ ಹೆಡ್ ಲೈಟ್‌ನ್ನು ಆನ್ ಮಾಡಿ ಡ್ರೈವ್ ಮಾಡುತ್ತಿಲ್ಲ?’ ಎಂದು ಎದುರಿನಿಂದ ಬರುವವರು ಯೋಚಿಸುತ್ತಿರಬಹುದಲ್ಲ ಎಂದೂ ಅವರಿಗೆ ಅನಿಸಿತು.

ಈ ಅನುಭವ ನಿಮಗೂ ಆಗಿರಬಹುದು. ನೀವು ಹೆಡ್‌ಲೈಟ್ ಆನ್ ಮಾಡಿ ಕಾರನ್ನು ಡ್ರೈವ್ ಮಾಡಿದ್ದೀರೋ, ಆಫ್ ಮಾಡಿ
ಓಡಿಸುತ್ತಿದ್ದೀರೋ ನಿಮಗೆ ಬಿಟ್ಟಿದ್ದು. ನೀವು ಹೆಡ್‌ಲೈಟ್ ಆನ್ ಮಾಡಿ ಓಡಿಸುತ್ತಿರುವಾಗ, ಎದುರಿನಿಂದ ಬರುತ್ತಿರುವವರು
ಹೆಡ್‌ಲೈಟ್ ಆಫ್ ಮಾಡಿ ಬರುತ್ತಿದ್ದಾರಲ್ಲ ಎಂದು ನಿಮಗೆ ಅನಿಸಿರಬಹುದು. ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ
ನಿಮಗೆ ಈ ರೀತಿಯ ಅನುಭವ ಆಗಿರಬಹುದು. ನಿಮ್ಮ ಸಂಸ್ಥೆಗೆ ಹೊಸ ಬಾಸ್ ಬಂದಿದ್ದಾನೆ ಎಂದುಕೊಳ್ಳಿ. ಆತ ಸಂಸ್ಥೆಯಲ್ಲಿ
ಇರುವವರಿಗಿಂತ ಭಿನ್ನವಾಗಿ ಯೋಚಿಸುತ್ತಾನೆ. ಆತ ಬರುತ್ತಿದ್ದಂತೆ, ಹೆಡ್‌ಲೈಟ್ ಇಲ್ಲದೇ ವಾಹನ ಚಲಾಯಿಸುತ್ತಾನೆ. ಸುತ್ತಲೂ ಬೆಳಕು ಸಾಕಷ್ಟಿರುವಾಗ ಹೆಡ್‌ಲೈಟ್ ಬೇಕಿಲ್ಲ ಎಂದು ಭಾವಿಸುತ್ತಾನೆ. ಆದರೆ ಸಂಸ್ಥೆಯಲ್ಲಿರುವ ಸಿಬ್ಬಂದಿಯೆಲ್ಲ ಆಗ ಹೆಡ್‌ಲೈಟ್ ಆನ್ ಮಾಡಿ ವಾಹನ ಚಲಾಯಿಸುತ್ತಿರುತ್ತಾರೆ.

ಮುಂದೇನಾಗುತ್ತದೆ? ಹೊಸ ಬಾಸ್ ಆಗಾಗ ಆಫೀಸಿನಲ್ಲಿ, ತಾನು ಬಂದಾಗ, ಅಗತ್ಯವಿಲ್ಲದಿದ್ದರೂ ನೀವೆಲ್ಲ ಹೆಡ್‌ಲೈಟ್ ಆನ್
ಮಾಡಿಕೊಂಡು ಡ್ರೈವ್ ಮಾಡುತ್ತಿದ್ದುದನ್ನೇ ಎತ್ತಿ ಹೇಳುತ್ತಾನೆ. ಟೀಮ್ ಮೀಟಿಂಗ್‌ಗಳಲ್ಲೂ ಈ ಅಂಶವನ್ನೇ ಪ್ರಧಾನವಾಗಿ
ಹೇಳುತ್ತಾನೆ. ಇದೇ ಅವನಿಗೆ ಸಮಸ್ಯೆಯಾಗಿ ಕಾಣುತ್ತದೆ. ಬೆಳಗಾದರೂ ಹೆಡ್‌ಲೈಟ್ ಆನ್ ಮಾಡಿಕೊಂಡು ಡ್ರೈವ್ ಮಾಡುವ ಈ ಅಭ್ಯಾಸವನ್ನು ನಿಲ್ಲಿಸುವ ಅಗತ್ಯದ ಬಗ್ಗೆ ಆಗಾಗ ಪ್ರಸ್ತಾಪ ಮಾಡುತ್ತಾನೆ. ಆದರೆ ಆಫೀಸಿನಲ್ಲಿರುವ ಆತನ ಸಹೋದ್ಯೋಗಿ ಗಳೆಲ್ಲ , ‘ಹೊಸ ಬಾಸ್ ಯಾಕೆ ಇನ್ನೂ ಹೆಡ್ ಲೈಟ್ ಆಫ್ ಮಾಡಿಕೊಂಡಿದ್ದಾನೆ, ಆನ್ ಮಾಡಿಕೊಂಡು ಡ್ರೈವ್ ಮಾಡುತ್ತಿಲ್ಲ ವೇಕೆ?’ ಎಂದು ಯೋಚಿಸಲಾರಂಭಿಸುತ್ತಾರೆ.

ನೀವು ಯಾವುದಾದರೂ ಆಫೀಸಿಗೆ ಹೊಸ ಬಾಸ್ ಆಗಿ ಹೊಣೆಗಾರಿಕೆ ವಹಿಸಿಕೊಂಡಾಗ, ಈ ಹೆಡ್‌ಲೈಟ್ ಪ್ರಸಂಗವನ್ನು
ನೆನಪಿಸಿಕೊಳ್ಳಿ. ನನಗೆ ಈ ಪ್ರಸಂಗವನ್ನು ಹೇಳಿದವರು ಸ್ನೇಹಿತರಾದ, ಮ್ಯಾನೇಜ್ಮೆಂಟ್ ಗುರು ಪ್ರಕಾಶ ಅಯ್ಯರ್. ಈ
ಸಣ್ಣ ಪ್ರಸಂಗ ನಿಮಗೆ ನಾಲ್ಕು ಸರಳ ಪಾಠಗಳನ್ನು ಕಲಿಸುತ್ತದೆ. ಮೊದಲನೆಯದು, ಬೇರೆಯವರಿಗೆ ನೀವು ಬದಲಾಗಿ ಎಂದು
ಹೇಳುವ ಮುನ್ನ, ಬದಲಾಗಬೇಕಿರುವವರು ಅವರಲ್ಲ, ನೀವು ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು. ಬೆಳಕು
ಸಾಕಷ್ಟಿದೆಯಾ, ಹೆಡ್‌ಲೈಟ್‌ನ್ನು ನಾನೇಕೆ ಆನ್ ಮಾಡಬಾರದು ಎಂದು ಕೇಳಿಕೊಳ್ಳಬೇಕು.

ಎರಡನೆಯದು, ಬೇರೆಯವರಿಗೂ ಪರಾನುಭೂತಿ ತೋರಿಸಬೇಕು. ನಮ್ಮ ಅನುಭವವನ್ನು ಆಧರಿಸಿ ನಮ್ಮ ವರ್ತನೆ
ರೂಪುಗೊಳ್ಳುತ್ತದೆ. ನಾವು ಯಾರು, ನಾವೆಲ್ಲಿಂದ ಬಂದಿದ್ದೇವೆ ಎಂಬ ಸಂಗತಿಗಳಿಂದ ಪ್ರಭಾವಿತರಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ನಾವು ಯಾವತ್ತೂ ಸರಿ. ನಾವು ತಪ್ಪು ಮಾಡಿದಾಗ, ತಪ್ಪು ಎಂದು ಎತ್ತಿ ಹೇಳುವುದನ್ನು ನಾವು ಇಷ್ಟಪಡುವುದಿಲ್ಲ.
ಮೂರನೆಯದು, ಯಾವುದಕ್ಕೇ ಆದರೂ ತುಸು ಸಮಯ ಕೊಡಬೇಕು. ಬೆಳಕು ಹೆಚ್ಚಿದಂತೆಲ್ಲ, ತನ್ನಷ್ಟಕ್ಕೆ ಹೆಡ್‌ಲೈಟ್ ಆಫ್
ಮಾಡುತ್ತಾರೆ.

‘ಅಂತೂ ಬೆಳಕು ಹರಿಯಿತು, ವಾವ್, ಈ ಬೆಳಗು ಎಷ್ಟು ಸುಂದರವಾಗಿದೆ’ ಎಂದು ಹೇಳುತ್ತಿರುವಂತೆ ವಾಹನ ಓಡಿಸುವವನು ತಕ್ಷಣ ಹೆಡ್ ಲೈಟನ್ನು ಆಫ್ ಮಾಡುತ್ತಾನೆ.ನಾಲ್ಕನೆಯದು, ನಾಯಕನಾದವನು ಪ್ರಮುಖವಾದ ಸಂಗತಿಗಳ ಕುರಿತು ಯೋಚಿಸಬೇಕೇ ಹೊರತು ಸಣ್ಣ-ಪುಟ್ಟ ವಿಷಯಗಳ ಬಗ್ಗೆ ಅಲ್ಲ. ಎಲ್ಲಿ ತನಕ ನೀವು ಅಪಘಾತ ಮಾಡದೇ ಸುರಕ್ಷಿತವಾಗಿ ವಾಹನ ಓಡಿಸುತ್ತೀರೋ, ಅಲ್ಲಿ ತನಕ ನೀವು ಹೆಡ್‌ಲೈಟ್ ಆನ್ ಮಾಡಿದ್ದೀರೋ ಆಫ್ ಮಾಡಿದ್ದೀರೋ ಎಂಬುದು ಮುಖ್ಯವಲ್ಲ.

ಮೊಬೈಲ್ ಕಳ್ಳನಿಗೆ ಶಾಸ್ತಿ 

ಇದೊಂದು ವಿಚಿತ್ರ ಘಟನೆ. ಕೆಲ ತಿಂಗಳ ಹಿಂದೆ ನಾನು ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯಲ್ಲಿ ಓದಿದ್ದೆ. ಪ್ರಾಯಶಃ ಇಂಥ
ಪ್ರಸಂಗಗಳು ಭಾರತದಲ್ಲಿ ಮಾತ್ರ ನಡೆಯುತ್ತವಾ? ಗೊತ್ತಿಲ್ಲ. ಬಿಹಾರದಲ್ಲಿ ಬೇಗುಸರೈ ಜಿಯಲ್ಲಿ ಸಾಹೇಬಪುರ್ ಕಮಾಲ್ ಎಂಬ ರೈಲು ನಿಲ್ದಾಣವಿದೆ. ಆ ನಿಲ್ದಾಣ ಪಿಕ್ ಪಾಕೆಟ್ ಮಾಡುವವರ ಸ್ವರ್ಗ. ಅಲ್ಲಲ್ಲಿ ಪ್ರಯಾಣಿಕರ ಗಮನ ಸೆಳೆಯಲು, ‘ಪಿಕ್ ಪಾಕೆಟ್ ಮಾಡುವವರಿದ್ದಾರೆ, ಎಚ್ಚರ’ ಎಂಬ ಫಲಕವನ್ನು ಹಾಕಿದ್ದಾರೆ.

ಆದರೂ ಪಿಕ್ ಪಾಕೆಟ್ ಮಾಡುವವರು ತಮ್ಮ ಕೈಚಳಕ ತೋರುತ್ತಾರೆ. ಆ ನಿಲ್ದಾಣಕ್ಕೆ ರೈಲು ಬಂದು ನಿಲ್ಲುತ್ತಿದ್ದಂತೆ, ಜೇಬುಗಳ್ಳರು ಜಾಗೃತರಾಗುತ್ತಾರೆ. ಪ್ರಯಾಣಿಕರು ಎಷ್ಟೇ ಎಚ್ಚರವಾಗಿದ್ದರೂ, ಮಿಂಚಿನಂತೆ ಬಂದು ಮೊಬೈಲ, ಪರ್ಸ್, ಸರ, ಚೈನುಗಳನ್ನು ಎಗರಿಸಿ ಬಿಡುತ್ತಾರೆ. ಈ ಸರಗಳ್ಳರು, ಜೇಬುಗಳ್ಳರು ಪೊಲೀಸರೊಂದಿಗೆ ಶಾಮೀಲಾಗಿರಲೂಬಹುದು. ಇಲ್ಲದಿದ್ದರೆ ಅದೊಂದು ರೈಲು ನಿಲ್ದಾಣದಲ್ಲಿ ಅಷ್ಟೊಂದು ಕಳ್ಳತನ ನಡೆಯಲು ಸಾಧ್ಯವೇ ಇಲ್ಲ. ಕೆಲವು ದಿನ ನೂರಕ್ಕೂ ಹೆಚ್ಚು ಪ್ರಕರಣಗಳು ಜರುಗುವು ದುಂಟು. ಯಾರೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದಿಲ್ಲ.

ಕಾರಣ, ಅವರೆಲ್ಲರೂ ರೈಲು ಪ್ರಯಾಣಿಕರಾಗಿರುತ್ತಾರೆ. ತಮ್ಮ ಜೇಬನ್ನು ಕತ್ತರಿಸಲಾಗಿದೆ, ಪರ್ಸನ್ನು ಎಗರಿಸಲಾಗಿದೆ, ಸರ ಕಳ್ಳತನವಾಗಿದೆ ಎಂಬುದು ಗೊತ್ತಾಗುವುದು ರೈಲು ಆ ನಿಲ್ದಾಣದಿಂದ ಹೊರಟ ನಂತರವೇ. ಹೀಗಾಗಿ ಜೇಬುಗಳ್ಳರ ವಿರುದ್ಧ ಯಾರೂ ದೂರು ನೀಡುವುದಿಲ್ಲ. ಹೀಗಾಗಿ ಅನೇಕರಿಗೆ ಇದು ಲಾಭದಾಯಕ ದಂಧೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಕಳ್ಳತನ ಜಾಸ್ತಿಯಾಗಿದೆ. ಇನ್ನೇನು ರೈಲು ನಿಧಾನವಾಗಿ ನಿಲ್ದಾಣದಿಂದ ಹೊರಡುತ್ತಿದ್ದಂತೆ, ರೈಲಿನ ಕಿಟಕಿ ಮತ್ತು ಬಾಗಿಲ ಬಳಿ ಇರುವ ಪ್ರಯಾಣಿಕರಿಂದ ಮೊಬೈಲನ್ನು ಎಗರಿಸಿಕೊಂಡು ಓಡಿ ಹೋಗಿಬಿಡುತ್ತಾರೆ. ಆಗ ರೈಲನ್ನು ನಿಲ್ಲಿಸುವುದು ಕಷ್ಟ. ಕಿಟಕಿಯ ಬಳಿ ಕುಳಿತಿರುವ ಪ್ರಯಾಣಿಕರನ್ನೇ ಇವರು ಟಾರ್ಗೆಟ್ ಮಾಡುತ್ತಾರೆ.

ಆ ದಿನ ಮೊಬೈಲ್ ಕಳ್ಳನ ಗ್ರಹಚಾರ ಕೆಟ್ಟಿತ್ತು. ರೈಲು ಹೊರಡುತ್ತಿದ್ದಂತೆ ಜಾಗೃತನಾದ ಆ ಕಳ್ಳ, ಕಿಟಕಿಯ ಬಳಿ ಕುಳಿತ
ಪ್ರಯಾಣಿಕನ ಜೇಬಿನಿಂದ ಮೊಬೈಲ್ ಎಗರಿಸಲು ಪ್ಲಾಟ್ ಫಾರ್ಮ್‌ನಿಂದಲೇ ಕೈ ಹಾಕಿದ. ಪ್ರಯಾಣಿಕ ಭಲೇ ಕಟ್ಟುಮಸ್ತಾದ
ಆಸಾಮಿ. ಆತ ಛಕ್ಕನೆ ಆ ಕಳ್ಳನ ಕೈಯನ್ನೇ ಹಿಡಿದುಕೊಂಡು ಬಿಟ್ಟ. ಆತ ಅದೆಷ್ಟು ಬಿಗಿಯಾಗಿ ಹಿಡಿದುಕೊಂಡನೆಂದರೆ, ಕಳ್ಳ
ಅದೆಷ್ಟೇ ಕೊಸರಿಕೊಂಡರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರೈಲು ನಿಲ್ದಾಣ ಬಿಟ್ಟು ಹೊರಟಿತು.

ಕಳ್ಳ ಪರಿಪರಿಯಾಗಿ ಬೇಡಿಕೊಂಡರೂ ಪ್ರಯಾಣಿಕ ಬಿಡಲಿಲ್ಲ. ಕಿರುಚಿಕೊಂಡರೂ ಯಾರೂ ಆತನ (ಕಳ್ಳನ) ಸಹಾಯಕ್ಕೆ ಬರಲಿಲ್ಲ. ಅಕ್ಷರಶಃ ಕಳ್ಳ ರೈಲಿನ ಹೊರಗೆ ನೇತಾಡುತ್ತಿದ್ದ! ಪ್ರಯಾಣಿಕನ ಕೈಗೆ ಕಚ್ಚಲು ಪ್ರಯತ್ನಿಸಿದ. ತನಗೆ ಕಚ್ಚಿದರೆ, ಸೇತುವೆ ಬರುತ್ತಿದಂತೆ ಮೇಲಿಂದ ಕೆಳಕ್ಕೆ ಬಿಸಾಡುವುದಾಗಿ ಎಚ್ಚರಿಕೆ ನೀಡಿದ.

ಆದರೆ ಕಳ್ಳ ಜೀವ ಭಯದಿಂದ ಕಿರುಚಿಕೊಳ್ಳುವುದನ್ನು ನಿಲ್ಲಿಸಲಿಲ್ಲ. ಆದರೆ ಪ್ರಯಾಣಿಕನೂ ಜಗ್ಗಲಿಲ್ಲ. ಅದೊಂಥರಾ ಸಿನಿಮಾ ದೃಶ್ಯದಂತಿತ್ತು. ಅಷ್ಟರೊಳಗೆ ರೈಲು ಸುಮಾರು ಹತ್ತು ಕಿ.ಮೀ. ದೂರ ಕ್ರಮಿಸಿತ್ತು. ನಂತರ ಖಗಾರಿಯಾ ರೈಲು ನಿಲ್ದಾಣ ಬಂತು. ಆಗ ರೈಲಿನ ಪಕ್ಕ ಜೋತಾಡುತ್ತಿದ್ದ ಕಳ್ಳನನ್ನು ಅಲ್ಲಿ ಸೇರಿದ ಜನತೆಯ ಸುಪರ್ದಿಗೆ ಕೊಟ್ಟು, ತಾನು ಕೆಳಗಿಳಿದು
ಬಂದು ಆತನಿಗೆ ಚೆನ್ನಾಗಿ ಥಳಿಸಿದ. ಸುತ್ತಲಿದ್ದವರೆಲ್ಲ ಆತನಿಗೆ ಧರ್ಮದೇಟು ಕೊಟ್ಟರು. ಹತ್ತು ಕಿಮಿ ದೂರ ಕಳ್ಳನನ್ನು
ಅನಾಮತ್ತಾಗಿ ಎತ್ತಿಕೊಂಡು ಬಂದ ಆ ಪ್ರಯಾಣಿಕನನ್ನು ಎಲ್ಲರೂ ಅಭಿನಂದಿಸಿದರು.

ಟೊಯೋಟಾ ಕಾರಿನ ಜಾಹೀರಾತು
ಕೆಲ ದಿನಗಳ ಹಿಂದೆ, ಟೊಯೋಟಾ ಕಂಪನಿಯ ಒಂದು ಜಾಹೀರಾತನ್ನು ನೋಡಿದೆ. ಅದು ಕೇವಲ ಮೂವತ್ತೆರಡು ಸೆಕೆಂಡು ಗಳ ಜಾಹೀರಾತು. ಆದರೆ ಅದರಲ್ಲಿನ ಸಂದೇಶ ಅತ್ಯಂತ ಪರಿಣಾಮಕಾರಿ ಮತ್ತು ಪ್ರಭಾವಯುತವಾಗಿತ್ತು. ಆ ಕಂಪನಿಯ ಕಾರುಗಳ ಗುಣಮಟ್ಟ ಎಂಥದು ಎಂಬುದನ್ನು ಆ ಪುಟ್ಟ ಜಾಹೀರಾತು ಹೇಳಿತ್ತು.

ಇಬ್ಬರು ಸೋದರರು ಕಾರನ್ನು ಡ್ರೈವ್ ಮಾಡಿಕೊಂಡು ಕಿರಿದಾದ ರಸ್ತೆಯ ಎರಡೂ ಕಡೆಗಳಲ್ಲಿರುವ ಹಸುರಾದ ಹೊಲದಲ್ಲಿ ಸಾಗುತ್ತಿರುತ್ತಾರೆ. ಅವರಿಗೆ ರಸ್ತೆಯ ಪಕ್ಕದಲ್ಲಿ ಕಾರಿನ ಬಾನೆಟ್‌ನ್ನು ಓಪನ್ ಮಾಡಿಕೊಂಡು ನಿಂತ ಸುಂದರ ಹುಡುಗಿ ಕಾಣುತ್ತಾಳೆ. ಆಕೆ ಕನಿಷ್ಠ ಉಡುಗೆ ತೊಟ್ಟಿದ್ದಾಳೆ. ಬಾನೆಟ್ ಓಪನ್ ಮಾಡಿರುವುದನ್ನು ನೋಡಿದರೆ ಆಕೆಯ ಕಾರು ಕೆಟ್ಟು
ನಿಂತಿದೆ.

ಆ ಹುಡುಗಿಯ ಬಳಿ ಬಂದು ಕಾರನ್ನು ನಿಲ್ಲಿಸಬಹುದೆಂದು ತಮ್ಮ ಅಂದುಕೊಳ್ಳುತ್ತಾನೆ. ಆದರೆ ಡ್ರೈವರ್ ಸೀಟಿನಲ್ಲಿ ಕುಳಿತ
ಅಣ್ಣ, ಕಾರನ್ನು ನಿಲ್ಲಿಸದೇ ಜೋರಾಗಿ ಓಡಿಸಿಕೊಂಡು ಹೋಗುತ್ತಾನೆ. ಇದಕ್ಕೆ ತಮ್ಮ ಜೋರಾಗಿ, ‘ಹೀಗೇಕೆ ಮಾಡಿದೆ?
ಆ ಯುವತಿಗೆ ಸಹಾಯ ಮಾಡಬಹುದಿತ್ತಲ್ಲ?’ ಎಂದು ಕೇಳುತ್ತಾನೆ.

ಆಕೆಯ ಕಾರನ್ನು ದಿಟ್ಟಿಸಿದ್ದ ಅಣ್ಣ ಹೇಳುತ್ತಾನೆ – ‘ಇದೊಂದು ಟ್ರ್ಯಾಪ್. ನೀನೆಂದಾದರೂ ಟೊಯೋಟಾ ಕಾರು ರಸ್ತೆಯಲ್ಲಿ
ಕೆಟ್ಟು ನಿಂತಿದ್ದನ್ನು ನೋಡಿದ್ದೀಯಾ?’ ಸಹಾಯ ಬಯಸಿ ನಿಲ್ಲಿಸುವಂತೆ ಕೈ ಅಡ್ಡ ಹಾಕಿದರೂ, ನಿಲ್ಲಿಸದೇ ಹೋದ ಕಾರನ್ನೇ ಆಕೆ ಹಿಂದಿನಿಂದ ದಿಟ್ಟಿಸುತ್ತಾಳೆ. ನಂತರ ತನ್ನ ಮುಖವಾಡ ತೆಗೆಯುತ್ತಾಳೆ. ನೋಡಿದರೆ ಗಂಡಸು! ‘ಆತ ಒಬ್ಬ ಪಕ್ಕಾ ಕಸುಬಿ ಹೈವೇ ದರೋಡೆಕೋರ.’ ಈ ಜಾಹೀರಾತಿನ ಮುಖ್ಯ ಸಂದೇಶವೇನೆಂದರೆ, ಏನೇ ಆದರೂ ಟೊಯೋಟಾ ಕಾರು ರಸ್ತೆಯಲ್ಲಿ ಕೆಟ್ಟು ನಿಲ್ಲುವುದಿಲ್ಲ. ಅಂದರೆ ಟೊಯೋಟಾ ಕಾರಿನ ಮೇಲೆ ಆ ಭರವಸೆಯನ್ನು ಇಡಬಹುದು.

ಟೊಯೋಟಾ ಕಾರಿನ ಕುರಿತು ನಿಮ್ಮ ಅನುಭವ ಏನೋ ಗೊತ್ತಿಲ್ಲ. ನಾನು ಕಳೆದ ಹದಿಮೂರು ವರ್ಷಗಳಿಂದ ಆ ಕಂಪನಿಯ ಇನ್ನೋವಾ ಮತ್ತು ಕ್ರಿಸ್ಟಾ ಕಾರನ್ನು ಬಳಸುತ್ತಿದ್ದೇನೆ. ಈ ಅವಧಿಯಲ್ಲಿ ಏನಿಲ್ಲವೆಂದರೂ ಸುಮಾರು ಐದು ಲಕ್ಷ ಕಿ.ಮೀ. ಪ್ರಯಾಣ ಮಾಡಿರಬಹುದು. ಆದರೆ ಒಂದು ಸಲವೂ ಕಾರು ರಸ್ತೆಯಲ್ಲಿ ಕೆಟ್ಟು ನಿಂತಿಲ್ಲ!

ಒಕ್ಟೋಥೋರ್ಪ್ ಅಂದ್ರೆ ಏನು?
ಅರವತ್ತರ ದಶಕದಲ್ಲಿ ಬೆಲ್ ಲ್ಯಾಬರೇಟರಿಸ್ ಕಂಪ್ಯೂಟರ್ ಕೀಬೋರ್ಡಿನಲ್ಲಿ (ಟಚ್ ಟೋನ್ ಕೀ) ಎರಡು ಕೀಗಳನ್ನು
ಸೇರಿಸಿದರು. ಅವೆರಡೂ ಟ್ಞ್ಞ್ಠಞಚಿಛ್ಟಿಕೀಗಳು. ಅವು ಯಾವವೆಂದರೆ, ಒಂದು ಹ್ಯಾಶ್ ಟ್ಯಾಗ್ (), ಹಾಗೂ ಇನ್ನೊಂದು ಸ್ಟಾರ್ (*). ಆದರೆ ಹ್ಯಾಶ್ ಟ್ಯಾಗ್‌ಗೆ ಬೆಲ್ ಲ್ಯಾಬರೇಟರಿಸ್ ಎಂಜಿನಿಯರುಗಳು ಇಟ್ಟ ಹೆಸರು ಒಕ್ಟೋಥೋರ್ಪ್ (uಠಿಟಠಿeಟ್ಟmಛಿ). ಬಹಳ ವರ್ಷಗಳವರೆಗೆ ಆ ಕೀಯನ್ನು ಒಕ್ಟೋಥೋರ್ಪ್ ಎಂದೇ ಕರೆಯಲಾಗುತ್ತಿತ್ತು.

ಬಹುತೇಕ ಮಂದಿಗೆ ಆ ಕೀಯನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಎಂಬುದು ಗೊತ್ತಿರಲಿಲ್ಲ. ಇನ್ನು ಕೆಲವರು ಆ
ಕೀಯನ್ನು ಲೈನ್ ಎಳೆಯಲು ಬಳಸುತ್ತಿದ್ದರು. ಅದೊಂಥರಾ ರೈಲು ಹಳಿಯಂತೆ, ಬೇಲಿ ಹಾಕಿದಂತೆ ಕಾಣುತ್ತಿತ್ತು. ಇದರ
ಹೊರತಾಗಿ ಆ ಕೀಯನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದುದು ತೀರಾ ಕಡಿಮೆ.

ಆದರೆ ಟ್ವಿಟರ್ ಬಂದಿದ್ದೇ ಬಂದಿದ್ದು, ಹ್ಯಾಷ್ ಟ್ಯಾಗ್ ಅದೃಷ್ಟವೇ ಬದಲಾಗಿ ಹೋಯಿತು. ಹ್ಯಾಷ್ ಟ್ಯಾಗ್ ಬಳಸಿದರೆ, ಒಂದು ವಿಷಯಕ್ಕೆ, ಒಂದು ಪದಕ್ಕೆ ಸಂಬಂಧಿಸಿದ ಟ್ವೀಟ್‌ಗಳೆಲ್ಲ ಒಂದೆಡೆ ಗ್ರೂಪ್ ಆಗುವಂತಾಯಿತು. ಹೀಗಾಗಿ ಇದನ್ನು ಹೆಚ್ಚು ಮಂದಿ ಬಳಸಲಾರಂಭಿಸಿದರು. ಹ್ಯಾಷ್ ಟ್ಯಾಗ್ ಬಳಸಿದರೆ, ತಮ್ಮ ಟ್ವೀಟ್ ಹೆಚ್ಚು ಮಂದಿಯನ್ನು ತಲುಪುವುದು ಸಾಧ್ಯವಾಗುವು ದರಿಂದ, ಅದನ್ನು ಬಳಸುವುದಕ್ಕೆ ಬಲವಾದ ಕಾರಣ ಸಿಕ್ಕಂತಾಯಿತು. ಈಗಂತೂ ಹ್ಯಾಷ್ ಟ್ಯಾಗ್ ಅತಿ ಹೆಚ್ಚು
ಬಳಕೆಯಾಗುವ ಕೀಗಳಂದು. ಒಂದು ಕಾಲದಲ್ಲಿ ಹ್ಯಾಷ್ ಟ್ಯಾಗ್ ಹೆಸರು ಒಕ್ಟೋಥೋರ್ಪ್ ಅಂತ ಇತ್ತು ಎಂಬುದೂ ಅನೇಕರಿಗೆ ಗೊತ್ತಿಲ್ಲ. ಅಷ್ಟರಮಟ್ಟಿಗೆ ಹ್ಯಾಷ್ ಟ್ಯಾಗ್ ಪ್ರಸಿದ್ಧವಾಗಿದೆ.

ಉತ್ತಮ ಕಾಫಿ ಮೇಕರ್
ಇತ್ತೀಚೆಗೆ ಯೋಗಿ ದುರ್ಲಭಜೀ ಅವರು ಒಂದು ಸಣ್ಣ ಪ್ರಸಂಗವನ್ನು ಹೇಳಿದರು. ಅದು ಅವರ ಸ್ನೇಹಿತ ಯೋಗಿಜೀಗೆ ಹೇಳಿದ್ದು.
ನನ್ನ ಹೆಂಡತಿ ಒಂದು ಕಾಫಿಮೇಕರನ್ನು ಇಟ್ಟುಕೊಂಡಿದ್ದಾಳೆ. ಅವಳು ಹಾಸಿಗೆಯಿಂದ ಏಳುವ ಮೊದಲೇ ಆ ಕಾಫಿ ಮೇಕರ್
ಅವಳಿಗೆ ಕಾಫಿ ಸಿದ್ಧ ಮಾಡಿಟ್ಟಿರುತ್ತದೆ. ಆ ಕಾಫಿ ಮೇಕರ್‌ಗೆ ಒಂದು ಸೆನ್ಸಾರನ್ನು ಅಳವಡಿಸಲಾಗಿದೆ. ಹೆಂಡತಿ ಏಳುವ ಹತ್ತು
ನಿಮಿಷ ಮುನ್ನ ಅದಕ್ಕೆ ಹೇಗೋ ಗೊತ್ತಾಗಿಬಿಡುತ್ತದೆ. ಹೀಗಾಗಿ ಇನ್ನೇನು ಹಾಸಿಗೆಯಿಂದ ಏಳುತ್ತಾಳೆ ಎನ್ನುವಷ್ಟರಲ್ಲಿ ಬಿಸಿಬಿಸಿ
ಕಾಫಿ ತಯಾರಾಗಿ ಬರುತ್ತದೆ. ಈ ಕಾಫಿ ಮೇಕರ್ ನಮ್ಮ ಮದುವೆಯಾದಂದಿನಿಂದ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ.

ನಿನ್ನೆ ಆ ದರಿದ್ರ ಕಾಫಿ ಮೇಕರ್‌ಗೆ ಏನಾಗಿತ್ತೋ? ನನ್ನ ಪತ್ನಿ ಹಾಸಿಗೆಯಿಂದ ಎದ್ದು ಬಂದರೂ ಕಾಫಿ ಸಿದ್ಧ ಮಾಡಿರಲೇ ಇಲ್ಲ.
ಕಾರಣ, ಕಾಫಿ ಮೇಕರ್ ಇನ್ನೂ ನಿz ಮಾಡುತ್ತಾ ಪಕ್ಕದಲ್ಲಿ ಮಲಗಿತ್ತು !

ಒಂದು ಟ್ವೀಟ್ ಮತ್ತು ಕಾಮೆಂಟು
ಮೊನ್ನೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಈ ಸಲದ ವಿಧಾನಸಭಾ ಚುನಾವಣೆಯ
ಹೈಲೈಟ್‌ಗಳಂದು. ಸತತ ಮೂರ್ನಾಲ್ಕು ಗಂಟೆ ಸಾರ್ವಜನಿಕರತ್ತ ಕೈ ಬೀಸುವುದು ಸುಲಭವಲ್ಲ. ಮೋದಿಯವರ
ರೋಡ್ ಶೋ ಅವರ ರಾಜಕೀಯ ವಿರೋಧಿಗಳ ಕಣ್ಣು ಕುಕ್ಕಿರಲಿಕ್ಕೂ ಸಾಧ್ಯ. ನಮ್ಮ ಅಂಕಣಕಾರ ಮೋಹನ್ ವಿಶ್ವ
ಅವರು ಪೋ ಮಾಡಿದ್ದರು – ‘ಈ ದಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವುಗಳೆ ಖಾಲಿ ಮತ್ತು ಮೆಡಿಕಲ್ ಸ್ಟೋರ್ಸುಗಳಲ್ಲಿ ಬರ್ನಾಲ್ ಖಾಲಿ !’

ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನ ಸೆಳೆದ ಇನ್ನೊಂದು ಟ್ವೀಟ್ ಮತ್ತು ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ. ಕಾಂಗ್ರೆಸ್ಸಿನ
ಮಾಜಿ ವಕ್ತಾರ ಸಂಜಯ ಝಾ ಒಂದು ಟ್ವೀಟ್ ಮಾಡಿದ್ದರು – ‘ಒಬ್ಬ ವ್ಯಕ್ತಿ ನಾಲ್ಕು ಸಾವಿರ ಕಿ.ಮೀ. ದೂರದ ಮ್ಯಾರಥಾನ್
ಪಾದಯಾತ್ರೆ ಮಾಡುತ್ತಾರೆ. ಆದರೆ ಒಬ್ಬ ವಿವಿಐಪಿ ಬರೀ ರೋಡ್ ಶೋ ಮಾಡುತ್ತಾರೆ.’ ಅದಕ್ಕೆ ರೂಪಾ ಮೂರ್ತಿ ಎಂಬುವವರು ಕಾಮೆಂಟ್ ಮಾಡಿದ್ದರು – ‘ನಿಜ, ಏಕೆಂದರೆ ನೀವು ಹೇಳಿದ ಆ ಒಬ್ಬ ವ್ಯಕ್ತಿ ನಿರುದ್ಯೋಗಿ ಮತ್ತು ಜಗತ್ತಿನಲ್ಲಿರುವ ಎಲ್ಲ ಸಮಯವೂ ಆ ವ್ಯಕ್ತಿಗೆ ಇದೆ.

ನೀವು ಹೇಳಿದ ವಿವಿಐಪಿಗೆ, ಆ ನಿರುದ್ಯೋಗಿ ವ್ಯಕ್ತಿ ಮತ್ತು ಅವರ ಬಂಟರನ್ನು ಕ್ರಿಯಾಶೀಲರನ್ನಾಗಿರಿಸುವುದರ ಜತೆಗೆ ಬೇರೆಯ ಜವಾಬ್ದಾರಿಯಿದೆ, ಮಾಡಲು ಸಾಕಷ್ಟು ಕೆಲಸಗಳಿವೆ.