Tuesday, 20th February 2024

ಒಲಿಂಪಿಕ್ ಕ್ರೀಡಾ ಪಟುಗಳಿಗೂ ಆರೋಗ್ಯ ಸಮಸ್ಯೆಗಳಿವೆಯೇ?

ವೈದ್ಯ ವೈವಿಧ್ಯ

ಡಾ. ಎಚ್.ಎಸ್. ಮೋಹನ್

drhsmohan@gmail.com

ಟೋಕಿಯೊದಲ್ಲಿ ಒಲಿಂಪಿಕ್ಸ್ ಈಗಷ್ಟೇ ಸಂಪನ್ನಗೊಂಡಿದೆ. ಒಲಿಂಪಿಕ್ಸ್ ಕ್ರೀಡಾಪಟುಗಳು ಮೈದಾನದಲ್ಲಿ ಓಡುವಾಗ, ಜಿಗಿಯುವಾಗ, ವಿವಿಧ ಆಟಗಳನ್ನು ಆಡುವಾಗ ಸಾಮಾನ್ಯ ಜನರಿಗೆ ಅವರು ಸೂಪರ್ ಮನುಷ್ಯರು, ನಮ್ಮ ನಿಮ್ಮೆಲ್ಲರಿಗಿಂತ ಗಟ್ಟಿಯಾಗಿದ್ದಾರೆ, ಅತಿ ವೇಗದಲ್ಲಿ ಓಡುತ್ತಾರೆ.

ಹಾಗೆಯೇ ತುಂಬಾ ಫಿಟ್ ಆಗಿದ್ದಾರೆ ಎನಿಸುತ್ತದೆ. ಎಲ್ಲಾ ದೃಷ್ಟಿಯಿಂದ ಇವರು ತುಂಬಾ ಆರೋಗ್ಯವಂತರು. ಇಲ್ಲದಿದ್ದರೆ ಈ ರೀತಿಯ ಪ್ರಪಂಚದಲ್ಲಿಯೇ ಮೇಲ್ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಸಾಧ್ಯವೇ ಎಂದು ಅನಿಸಿದರೆ ಆಶ್ಚರ್ಯವಿಲ್ಲ. ಆದರೆ ಅವರು ಕ್ರೀಡಾಂಗಣದ ಹೊರಗೆ ಬಂದಾಗ ವಸ್ತುಸ್ಥಿತಿ ಹಾಗಿಲ್ಲ. ಜಗತ್ತಿನ ಅತಿ ಮೇಲ್ಮಟ್ಟದ ಅಥ್ಲೀಟ್‌ಗಳು ಸಹಿತ ನಮ್ಮ ನಿಮ್ಮಂತಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೊಂದಿರು ತ್ತಾರೆ. ಅವುಗಳೆಂದರೆ ಮುಖ್ಯವಾಗಿ ಮಾನಸಿಕ ಖಿನ್ನತೆ (depression), ವಿಪರೀತ ಚಿಂತೆ ಹಚ್ಚಿಕೊಳ್ಳು ವುದು, ತೀವ್ರ ಆತಂಕಕ್ಕೆ ಒಳಗಾಗುವುದು, ವಿವಿಧ ಆಹಾರ ಸಮಸ್ಯೆಗಳು, ವಿವಿಧ ಔಷಧಗಳಿಗೆ ( Drugs ) ದಾಸರಾಗಿರುವುದು, ದೀರ್ಘಕಾಲೀನ ವಿವಿಧ ಕಾಯಿಲೆಗಳು, ವಿವಿಧ ಸೋಂಕು ಕಾಯಿಲೆಗಳು ಇತ್ಯಾದಿ.

ಒಲಿಂಪಿಕ್ಸ್’ನಂತಹ ಉನ್ನತ ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುವಾಗ ಅವರುಗಳಿಗೆ ಮೇಲಿನ ಕಾಯಿಲೆಗಳು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಅವರಲ್ಲಿ ಈ ಥರದ ಸ್ಪರ್ಧೆಯಲ್ಲಿ ಸಽಸುವಾಗ ವಿಪರೀತವಾದ ಮಾನಸಿಕ ಒತ್ತಡ ಇರುತ್ತದೆ. ಹಾಗೆಯೇ ಒಂದೇ ಮಟ್ಟದ ದೈಹಿಕ ಚಟುವಟಿಕೆ ಮತ್ತು ಕಾರ್ಯಕ್ಷಮತೆಯ ವಿಪರೀತ ನಿರೀಕ್ಷೆ ಇರುವುದರಿಂದ ಇಂತಹವರಲ್ಲಿ ಮನಸ್ಸಿಗೆ ಮತ್ತು ದೇಹಕ್ಕೆ ವಿಪರೀತ ಒತ್ತಡ ಹೇರಲ್ಪಡುತ್ತದೆ ಎಂದು ತಜ್ಞರ ಅನಿಸಿಕೆ. ಇವೆ ಎಂದಿನ ಆರೋಗ್ಯ ಸಮಸ್ಯೆಗಳಾದರೆ, ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ ಕೋವಿಡ್ ೧೯ ಕಾಯಿಲೆ ಮತ್ತೊಂದು ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.

ಮೇಲೆ ತಿಳಿಸಿದಂತೆ ಒಲಿಂಪಿಕ್ಸ್ ಅಥ್ಲೀಟ್‌ಗಳು ಅಸಾಮಾನ್ಯ ರೀತಿಯ ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಜನಸಾಮಾನ್ಯರಿಗಿಂತ ಇವರ ಆರೋಗ್ಯ ಮಟ್ಟ ಮೇಲಿರಬೇಕು ಎಂದು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪಬ್ಲಿಕ್ ಹೆಲ್ತ್ ಪಾಲಿಸಿ ಪ್ರೊಫೆಸರ್ ಲಿಯಾನ್ ವೆಲ್ ಅಭಿಪ್ರಾಯ ಪಡುತ್ತಾರೆ. ಆದರೂ ಇವರುಗಳು ಯಾವುದೇ ರೀತಿಯ ಸೋಂಕು ರೋಗ, ಕ್ಯಾನ್ಸರ್‌ಗಳು ಹಾಗೂ ಅದಕ್ಕಿಂತ ಹೆಚ್ಚಾಗಿ ಮಾನಸಿಕ ಕಾಯಿಲೆಗಳಿಗೆ ಒಳಗಾಗಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದರಿಂದ ಅದರದ್ದೇ ಆದ stress  ಅಥವಾ ಮಾನಸಿಕ ಒತ್ತಡ ದೇಹದ ಮೇಲೆ ವಿಪರೀತ ಪ್ರಮಾಣದಲ್ಲಿ ಇರುತ್ತದೆ. ಹಾಗೆಯೇ ತರಬೇತಿ ಅವಧಿಯ ಕಟ್ಟಳೆಗಳು, ಮಾನಸಿಕವಾಗಿ ಸಿಗಬೇಕಾದ ಸಾಂತ್ವನ ಸಿಗದೆ ಇರುವುದು – ಇವೆ ವಿವಿಧ ಆರೋಗ್ಯದ ರಿಸ್ಕ್ ಅಂಶಗಳು. 

ಮನದಾಳದ ಅನಿಸಿಕೆಗಳು
ಹಲವು ಅಥ್ಲೀಟ್‌ಗಳು ತಮ್ಮ ಮನದಾಳದ ಅನಿಸಿಕೆಗಳನ್ನು ಹೊರಗೆಡವಿದ್ದಾರೆ. ಉದಾ: ಹಲವು ಚಿನ್ನದ ಪದಕಗಳನ್ನು ಒಲಿಂಪಿಕ್ಸ್ ನಲ್ಲಿ ಗೆದ್ದಿರುವ ಜಗದ್ವಿಖ್ಯಾತ ಈಜು ಪಟು ಮಿಖಾಯಿಲ್ ಫೆಲ್ನ್ ಅವರು ಇತ್ತೀಚೆಗೆ ರೆಕಾರ್ಡ್ ಮಾಡಿದ ಒಂದು ಡಾಕ್ಯುಮೆಂಟರಿ ಸಿನಿಮಾದಲ್ಲಿ ಮಾನಸಿಕ ಆರೋಗ್ಯದ ಸವಾಲುಗಳ ಬಗ್ಗೆ ತಮ್ಮ ಅನಿಸಿಕೆ ಹೊರಗೆಡವಿದ್ದಾರೆ. ಜಗತ್ ಪ್ರಸಿದ್ಧ ಈ ಒಲಿಂಪಿಕ್ಸ್ ತಾರೆಗೆ ಆತ್ಮಹತ್ಯೆಯ ಯೋಚನೆ ಬರುತ್ತದೆ ಎಂದರೆ ಸುಲಭವಾಗಿ ನಂಬಲು ಸಾಧ್ಯವಿಲ್ಲ. ಹೌದು ಅವರೇ ಒಪ್ಪಿಕೊಂಡಂತೆ ತಾನು ತನ್ನ ಈಜು ಜೀವನದ ಉತ್ತುಂಗದಲ್ಲಿದ್ದಾಗಲೂ ತನಗೆ ಆಗಾಗ ಆತ್ಮಹತ್ಯೆಯ ಯೋಚನೆ ಬರುತ್ತಿತ್ತು ಎಂದಿದ್ದಾರೆ.

ಒಲಿಂಪಿಕ್ಸ್ ಕ್ರೀಡಾ ಪಟುಗಳಲ್ಲಿ ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆಯ ಯೋಚನೆ ಸರ್ವೇ ಸಾಮಾನ್ಯ ಎಂದು ಅವರ ಅಂಬೋಣ. ಮೇಲೆ ತಿಳಿಸಿದ ಡಾಕ್ಯು ಮೆಂಟರಿ ಸಿನಿಮಾದಲ್ಲಿ ಸ್ಕೆ ಯರ್ ಬೋಡೆ ಮಿಲ್ಲರ್, ವೇಗದ ಸ್ಕೇಟರ್ ಅಪೋಲೋ ಅಂಟಾನ್ ಓನೋ, ಸ್ನೋ ಬೋರ್ಡರ್ ಶಾನ್ ವೈಟ್, ಹರ್ಡಲರ್ ಲೋಲೋ ಜೋನ್ ಮತ್ತು ಫಿಗರ್ ಸ್ಕೇಟರ್ ಸಾಶಾ ಕೋಹೆನ್ – ಈ ಎಲ್ಲಾ ಒಲಿಂಪಿಕ್ಸ್ ಕ್ರೀಡಾಪಟುಗಳು ಈ ವಿಚಾರದಲ್ಲಿ ತಮ್ಮ ತಮ್ಮ ಮಾನಸಿಕ ಸಮಸ್ಯೆಯ ಹೋರಾಟಗಳನ್ನು ವಿವರವಾಗಿ ವ್ಯಕ್ತಪಡಿಸಿದ್ದಾರೆ.

ಈಗ ತಾನೇ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್’ಗೂ ಸ್ವಲ್ಪ ಮೊದಲು ಜಪಾನಿನ ಟೆನ್ನಿಸ್  ಚಾಂಪಿಯನ್ ನಯೋಮಿ ಒಸಾಕಾ, ಜನಪ್ರಿಯ
ಅಂತಾರಾಷ್ಟ್ರೀಯ ಟೈಮ್ ಮ್ಯಾಗಜಿನ್‌ನಲ್ಲಿ ಪ್ರಬಂಧ ಬರೆಯುತ್ತಾ ತನ್ನ ಸಾಮಾಜಿಕ ಆತಂಕ (Social Anxiety) ಯನ್ನು ವ್ಯಕ್ತಪಡಿಸಿದ್ದಾರೆ. ಆಕೆ ತನ್ನ
ಪ್ರಬಂಧಕ್ಕೆ It is OK , Not to be OK ಎಂಬ ವಿಚಿತ್ರ ಶೀರ್ಷಿಕೆ ಕೊಟ್ಟಿರುವುದನ್ನು ಗಮನಿಸಿ. ಹೆಚ್ಚಿನ ಎಲ್ಲಾ ಕ್ರೀಡಾ ಪಟುಗಳು ಮಾನಸಿಕ ತೊಂದರೆ ತಾವೇ ಅನುಭವಿಸುತ್ತಿದ್ದಾರೆ. ಒಂದು ವೇಳೆ ಹಾಗಿಲ್ಲದಿದ್ದರೆ ತಮ್ಮದೇ ರೀತಿಯ ಬೇರೆ ಕ್ರೀಡಾ ಪಟುಗಳು ಈ ರೀತಿಯ ಮಾನಸಿಕ ಆರೋಗ್ಯದಲ್ಲಿ ಏರು ಪೇರಾಗಿರುವು ದನ್ನು ಹತ್ತಿರದಿಂದ ನೋಡಿದ್ದಾರೆ. ಎಂದು ತನ್ನ ಪ್ರಬಂಧದಲ್ಲಿ ವಿವರಿಸಿದ್ದಾರೆ.

ಅಮೆರಿಕದ ಮ್ಯಾರಥಾನ್ ಓಟಗಾರ್ತಿ ಮೋಲ್ಲಿ ಸೀಡೆಲ್ ತನ್ನ ಆಹಾರದ ಸಮಸ್ಯೆಯ ಬಗ್ಗೆ ಮುಚ್ಚುಮರೆಯಿಲ್ಲದೆ ತಿಳಿಸಿದ್ದಾರೆ. 2016ರ ಒಲಿಂಪಿಕ್ಸ್’ನಲ್ಲಿ ನಾನು ಒಲಿಂಪಿಕ್ಸ್ ಟ್ರಯಲ್‌ನಲ್ಲಿ ಸ್ಪಽಸುವ ಬದಲು ನನ್ನ ಆಹಾರ ಸಮಸ್ಯೆಯ ಬಗ್ಗೆ ಚಿಕಿತ್ಸಾ ಶಿಬಿರಕ್ಕೆ ನೊಂದಾಯಿಸಿಕೊಳ್ಳಬೇಕಾಯಿತು. ಕೆಲವೊಮ್ಮೆ ನಮ್ಮ ಯೋಜನೆ ಹೇಗೆ ಅನಿರೀಕ್ಷಿತವಾಗಿ ಕೆಟ್ಟದಾಗಿ ಪರಿಣಮಿಸುತ್ತದೆ ನೋಡಿ ಎಂಬುದು ಆಕೆಯ ಅಳಲು. ತಮ್ಮ 25 ವರ್ಷದ ಕ್ರೀಡಾ ಜೀವನದಲ್ಲಿ 12 ಒಲಿಂಪಿಕ್ಸ್ ಪದಕ ಗೆದ್ದ ಅಮೆರಿಕದ ಈಜು ಪಟು ಡಾರಾ ಟೋರೆಸ್ ಮತ್ತು ಕೆನಡಾದ DIVE ಫಾಂಕೋವಿಸ್ ಇಂಬೂ – ಡುಲಾಕ್ ಅವರುಗಳು ತಾವೂ ಇದೇ ತರಹ ಅನಿರೀಕ್ಷಿತವಾಗಿ
ಒಲಿಂಪಿಕ್ಸ ನಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ಆಹಾರದ ಸಮಸ್ಯೆಯ ಚಿಕಿತ್ಸಾ ಕ್ರಮಕ್ಕೆ ಒಳಗಾಗಬೇಕಾಯಿತು ಎಂದು ಮೋಲ್ಲಿ ಸೀಡೆಲ್ ಅಭಿಪ್ರಾಯವನ್ನು
ಅನುಮೋದಿಸುತ್ತಾರೆ. ಅಮೆರಿಕದ ಜಿಮ್ನಾ  ಸೈಬೋನ್ ಬೈಲ್ಸ ತಮಗೆ ಲೈಂಗಿಕ ಶೋಷಣೆ ಆದ ನಂತರ ಮಾನಸಿಕ ನೋವು ಮತ್ತು ನಂತರ ಕಾಣಿಸಿಕೊಳ್ಳುವ  Post Traumatic Stress Disorder  ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಒಲಿಂಪಿಕ್ಸ್ ಕ್ರೀಡಾ ಪಟುಗಳಲ್ಲಿ ಹೆಚ್ಚಿನವರ ಸಮಸ್ಯೆ ಮೇಲೆ ತಿಳಿಸಿದಂತೆ ಮಾನಸಿಕ ಸಮಸ್ಯೆಗಳು ಹೌದಾದರೂ ಅವರೂ ಸಹಿತ ಬೇರೆಯ ಎಲ್ಲರಿಗೆ
ಬರುವಂತಹ ದೈಹಿಕ ಕಾಯಿಲೆಗಳಿಗೂ ಒಳಗಾಗುತ್ತಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದ ಅಮೆರಿಕದ ಓಟಗಾರ್ತಿ ಗ್ಯಾಬಿ ಥಾಮಸ್ ಅವರಿಗೆ ಲಿವರ್‌ನಲ್ಲಿ ಕ್ಯಾನ್ಸರ್ ಅಲ್ಲದ ಗೆಡ್ಡೆ ಇದ್ದದ್ದು ಆಕೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಪೂರ್ವಭಾವಿ ಪರೀಕ್ಷೆಯ ಮೊದಲೇ ಗೊತ್ತಾಗಿತ್ತು. ಟೆನ್ನಿಸ್‌ನ ಮೇರು ಪಟು ವೀನಸ್
ವಿಲಿಯಮ್ಸ ಅವರಲ್ಲಿ ಜೋಗ್ರನ್ ಸಿಂಡ್ರೋಮ್ ( Sjogren’s Syndrome  ) ಎಂಬ ಆಟೋ ಇಮ್ಯೂನ್ ಕಾಯಿಲೆ ಇದ್ದದ್ದು ಗೊತ್ತಾಯಿತು. ಹಾಗೆ ಗೊತ್ತಾದ ಮೇಲೂ ಆಕೆ 2016ರ ರಯೋ ಡಿ ಜಾನೆರೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದಳು.

ಶಾನನ್ ಬಾಕ್ಸ್ ಎಂಬ ಅಮೆರಿಕದ ಮಹಿಳಾ ಕ್ರೀಡಾಪಟುವಿಗೆ ಸುಸ್ತು, ಸಂದುಗಳಲ್ಲಿ ನೋವು, ಮಾಂಸಖಂಡಗಳು ಊದಿಕೊಳ್ಳುವುದು – ಈ ರೀತಿಯ ಲಕ್ಷಣ ತೋರುವ ಉರಿಯೂತದ (inflammatory) ಕಾಯಿಲೆ ಲೂಪಸ್ ಎರಿತಮಟೋಸಿಸ್ ಕಾಯಿಲೆ ಇತ್ತು. ಅದರ ಜತೆಗೆ ಹೋರಾಟ ನಡೆಸಿ ಅಮೆರಿಕದ ಮಹಿಳಾ ಫುಟ್ ಬಾಲ್ ಟೀಂ 2004, 2008, 2012ರ ಒಲಿಂಪಿಕ್ಸ್ಗಳಲ್ಲಿ ಪದಕ ಗೆಲ್ಲುವಲ್ಲಿ ಆಕೆ ಮುಖ್ಯ ಪಾತ್ರ ವಹಿಸಿದ್ದಳು. ಈಗ ಪ್ರಸ್ತುತ ಆಕೆ ಅಮೆರಿಕದ ಲೂಪಸ್ ಫೌಂಡೇಶನ್‌ನಲ್ಲಿ ಆ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಕಳಾಗಿ ಸೇವೆ ಸಲ್ಲಿಸುತ್ತಿದ್ದಾಳೆ.

ಮೇಲೆ ತಿಳಿಸಿದ ಒಲಿಂಪಿಕ್ಸ್ ಅಥ್ಲೀಟ್ ಗಳು ತಮ್ಮ ಆರೋಗ್ಯ ಸಮಸ್ಯೆ ಮತ್ತು ಹೋರಾಟವನ್ನು ಜನರ ಅರಿವಿನ ಪ್ರಚಾರಕ್ಕೆ ಯಶಸ್ವಿಯಾಗಿ ಬಳಸುತ್ತಿದ್ದಾರೆ.
ಇದೇ ತರಹ ಇನ್ನೂ ಹಲವು ಅಥ್ಲೀಟ್ ಗಳನ್ನು ಹೆಸರಿಸುವುದಾದರೆ ವೃಷಣಗಳ (  Testis) ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲಾ ಆರ್ಮ್ ಸ್ಟ್ರಾಂಗ್, ಏಡ್ಸ್
ಕಾಯಿಲೆ ಹೊಂದಿದ್ದ ಗ್ರೆಗ್ ಲೌಗಾನಿಸ್, ಸ್ತನದ ಕ್ಯಾನ್ಸರ್ ಹೊಂದಿದ್ದ ಪೆಗ್ಗಿ ಫ್ಲೆಮಿಂಗ್. ಇವರುಗಳ ಈ ಕಾಯಿಲೆ ಬಗ್ಗೆ ವಿಶ್ಲೇಷಿಸುವುದಾದರೆ ಇಂತಹ ಉನ್ನತ ಮಟ್ಟದ ಅಥ್ಲೀಟ್‌ಗಳು ಮತ್ತು ಕ್ರೀಡಾ ಪಟುಗಳಿಗೆ ಈ ತರಹದ ಕಾಯಿಲೆ ಇತ್ತೇ ಎಂದು ಯಾರೂ ಉದ್ಗಾರ ತೆಗೆಯುವ ಹಾಗಿದೆ. ಹಾಗಾಗಿ ದಿಢೀರ್ ಕಾಣಿಸಿ ಕೊಳ್ಳುವ ಅಥವಾ ದೀರ್ಘಕಾಲ ವ್ಯಕ್ತಿಯನ್ನು ಹೈರಾಣಾಗಿಸುವ ಮಾನಸಿಕ ಅಥವಾ ದೈಹಿಕ ಕಾಯಿಲೆಗಳು ಯಾರಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ನಾವು ತೀರ್ಮಾನಿಸಬಹುದು.

ಈ ಕಾರಣಗಳಿಂದ ತುಂಬಾ ಜನಪ್ರಿಯ, ಕೀರ್ತಿವಂತ ಅಥ್ಲೀಟ್ ಅಥವಾ ಕ್ರೀಡಾ ಪಟುಗಳು ಅವರವರ ವೈದ್ಯರಿಗಿಂತ ಕಾಯಿಲೆ ಬಗ್ಗೆ ತಿಳಿಸುವಲ್ಲಿ ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲರು ಎಂಬುದು ಆರಂಭದಲ್ಲಿ ತಿಳಿಸಿದ ಲಿಯನಾ ವೆನ್ ಅಭಿಪ್ರಾಯ ಪಡುತ್ತಾರೆ. ಈ ತರಹದ ಕ್ರೀಡಾಪಟುಗಳು ತಮ್ಮ ತಮ್ಮ ಆರೋಗ್ಯದ ಬಗೆಗಿನ ಹೋರಾಟದ ಕತೆಯನ್ನು ಜನರ ಜತೆ ಮಾಧ್ಯಮಗಳ ಮೂಲಕ ಮುಕ್ತವಾಗಿ ಹಂಚಿಕೊಂಡರೆ ಸಾಮಾನ್ಯ ಜನರು ಆಯಾಯಾ ಕಾಯಿಲೆಗಳ ಬಗ್ಗೆ ಸೂಕ್ತ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆಗೆ ಒಳಗಾದರೆ ಹಲವಾರು ವ್ಯಕ್ತಿಗಳ ಜೀವವನ್ನು ಉಳಿಸಬಹುದು.

ಅವರು ಉದಾ: ಕೊಡುತ್ತಾ ಎಷ್ಟೋ ವ್ಯಕ್ತಿಗಳಿಗೆ ಕ್ಯಾನ್ಸರ್ ಬಗ್ಗೆ ಹಲವು ಸ್ಕ್ರೀನಿಂಗ್ ಪರೀಕ್ಷೆಗಳನ್ನು ವೈದ್ಯರು ಸಲಹೆ ಮಾಡಿದರೆ ಅದನ್ನು ನಿರ್ಲಕ್ಷ್ಯ ಮಾಡುವ ರೋಗಿಗಳು ತಮ್ಮ ಇಷ್ಟದ ಅಥ್ಲೀಟ್ ಅಥವಾ ಕ್ರೀಡಾಪಟು ಹೀಗೆ ಸ್ಕ್ರೀನಿಂಗ್ ಒಳಗಾಗಿದ್ದಾರೆ ಎಂದು ಗೊತ್ತಾದರೆ ಅವರು ಅಂತಹಾ ಪರೀಕ್ಷೆಗಳಿಗೆ ಮನಸ್ಸು ಮಾಡಬಹುದು. ಒಂದು ಮುಖ್ಯ ವಿಚಾರ ಎಂದರೆ ಗಂಭೀರವಾದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಅಸಾಮಾನ್ಯ ಆರಂಭಿಕ ಲಕ್ಷಣಗಳ ಬಗ್ಗೆ ಎಚ್ಚರದಿಂದ ಗಮನಿಸುತ್ತಿರಬೇಕು. ಹಾಗಾಗಿ ಆರೋಗ್ಯ ಲಕ್ಷಣಗಳ ಬಗ್ಗೆ ಸಂದೇಹ ಇರುವಾಗ ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿರಬೇಕು, ಕಾಯಿಲೆ
ಬರದಿರುವಂತೆ ಕ್ರಮ ತೆಗೆದುಕೊಳ್ಳುವುದು ಹಾಗೂ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು.

ಹಾಗಾಗಿ ಅಂತಹವರಲ್ಲಿ ನಿಯಮಿತವಾದ ವ್ಯಾಯಾಮ, ಸರಿಯಾ ದ ಮತ್ತು ಸಮತೋಲನ ಆಹಾರ ಕ್ರಮ, ಶುದ್ಧ ನೀರು ಸೇವನೆ, ಅಗತ್ಯವಿರುವಷ್ಟು ಅವಧಿ ನಿದ್ರೆ ಮಾಡುವುದು, ಧೂಮಪಾನ ಮಾಡದೆ ಇರುವುದು, ಅತಿ ಕಡಿಮೆ ಪ್ರಮಾಣದ ಆಲ್ಕೊಹಾಲ್ ಸೇವನೆ – ಈ ರೀತಿಯ ಜೀವನ ಕ್ರಮ ಅಳವಡಿಸಿಕೊಳ್ಳಬೇಕು.
ಮಕ್ಕಳು ಮತ್ತು ಯುವ ಅಥ್ಲೀಟ್ ಗಳು ಹೆಚ್ಚು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಅಂತಹವರಿಗೆ ಸರಿಯಾದ ಬೆಂಬಲ ಮತ್ತು ಪ್ರಾತಿನಿಽತ್ವ ಸಿಗುವುದಿಲ್ಲ
ಎಂಬುದು ದೌರ್ಭಾಗ್ಯದ ಸಂಗತಿ. ಫೆಲ್ಸ್, ಒಸಾಕಾ ತರಹದ ತೀರಾ ಮೇಲ್ಮಟ್ಟದ ಅಥ್ಲೀಟ್‌ಗಳು ಮಾನಸಿಕ ತೊಂದರೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಆ ತರಹದ
ಸಮಸ್ಯೆಗಳು ತಮಗೂ ಇತ್ತು ಎಂದು ಒಪ್ಪಿಕೊಂಡು, ಹಾಗಾಗಿ ಯಾರಿಗೂ ಬರಬಹುದು ಎಂದು ಮುಕ್ತವಾಗಿ ಮಾಧ್ಯಮಗಳ ಮುಂದೆ ತಿಳಿಸಿದರೆ ಅವರು ಒಂದು
ಉತ್ತಮ ಸಮಾಜ ಸೇವೆ ಮಾಡಿದಂತೆ ಎಂದು ಗಣಿಸಬಹುದು

Leave a Reply

Your email address will not be published. Required fields are marked *

error: Content is protected !!