ಸಂಗತ
ವಿಜಯ್ ದರಡಾ
ಸೈನಿಕರು ಏಳು ಪದರಗಳ ವಿಶೇಷ ದಿರಿಸನ್ನು ಧರಿಸಿರುತ್ತಾರೆ. ಎದುರಾಳಿ ದೇಶದ ಸೈನಿಕರಿಗಿಂತ ಇಲ್ಲಿನ ಕಠಿಣ ಹವಾ ಮಾನವೇ ಮೊದಲ ಶತ್ರುವೆನಿಸುತ್ತದೆ. ಲೋಕಮತ ಫೌಂಡೇಶನ್ ಜನರಿಂದ ಸಂಗ್ರಹಿಸಿದ ನಿಽಯನ್ನು ಬಳಸಿ ನಿರ್ಮಿಸಲಾಗಿ ರುವ ಬೆಚ್ಚಗಿನ ಮನೆಗಳು ಪ್ರತಿಕೂಲ ಹವಾಮಾನದ ಕಾಲಮಾನದಲ್ಲಿ ದೇಹವನ್ನು ಬೆಚ್ಚಗಾಗಿಸಿಕೊಳ್ಳಲು ಇಲ್ಲಿ ಸಹಾಯಕ ವಾಗುತ್ತವೆ.
ಒಂದು ಬದಿಯಲ್ಲಿ ಆಳವಾದ ಕೊರಕಲು ಇದೆ. ಅಲ್ಲಿ ನಿಮ್ಮ ವಾಹನ ಕೆಳಕ್ಕುರುಳಿದರೆ ಬದುಕುಳಿವ ಸಾಧ್ಯತೆ ಇಲ್ಲವೆನ್ನುವಷ್ಟು ಆಳ. ಇನ್ನೊಂದು ಮಗ್ಗುಲಲ್ಲಿ ಆಗಸದೆತ್ತರದ ಪರ್ವತಶ್ರೇಣಿ. ಯಾವುದೇ ಸಂದರ್ಭದದರೂ ಕಲ್ಲುಗಳುರುಳಿ ಸಾವು ಸಂಭವಿಸ ಬಹುದಾದ ಅಪಾಯ.
ಯಾವ ಸಂದರ್ಭದಲ್ಲಿ ಕಲ್ಲು ರಸ್ತೆಗುರುಳಿ ಪ್ರಯಾಣ ಅಸಂಭವವೆಂಬ ಪರಿಸ್ಥಿತಿ ನಿರ್ಮಾಣವಾದೀತೋ ಬಲ್ಲವರಿಲ್ಲ. ರಸ್ತೆ ಕೆಟ್ಟದಾಗಿದೆ, ಹೊಂಡಗುಂಡಿಗಳಿಂದ ತುಂಬಿದೆ. ರಸ್ತೆಯ ಅಗಲ ೧೫ ಅಡಿಗಿಂತಲೂ ಕಿರಿದಾಗಿದೆ. ಈ ರೀತಿಯ ಹಾದಿಯಲ್ಲಿ ಸಾಗಬೇಕಾದ ದೂರ ೨೭ ಕಿಮೀ. ಗಳು. ವಿಶೇಷತಃ ಜೋಜೀಲಾನಿಂದ ಸೋನ್ ಮಾಗ್ ವರೆಗಿನ ಹಾದಿ ಹೆದರಿಕೆ ಹುಟ್ಟಿಸು ವಂತಿದೆ. ನಾನು ನನ್ನ ಸೋದರ ರಾಜೇಂದ್ರನ ಜತೆ ಅಲ್ಲಿದ್ದೆ.
ನಾವು ಪ್ರತಿಕ್ಷಣವೂ ದೇವರ ಧ್ಯಾನ ಮಾಡುತ್ತಲೇ ಇದ್ದೆವು. ಎನ್.ಎಚ್-೧ ಎಂಬ ಹೆಸರಿನ ಈ ಹೆದ್ದಾರಿಯಲ್ಲಿ ಪ್ರಯಾಣ ಅಪಾಯಕಾರಿಯಾಗಿತ್ತು. ಲೇಹ್ನಲ್ಲಿ ನಡೆಯಲಿದ್ದ ಮಹಾಬೋಧಿ ಇಂಟರ್ ನ್ಯಾಶನಲ್ ಮೆಡಿಟೇಶನ್ ಸೆಂಟರ್ನವರು ಸಮಾರಂಭವೊಂದರಲ್ಲಿ ಪ್ರತಿಷ್ಠಿತ ‘ಮಹಾಕರುಣ ಪ್ರಶಸ್ತಿ’ಯನ್ನು ಸ್ವೀಕರಿಸಲು ನಾನು ಅಲ್ಲಿಗೆ ಹೋಗುತ್ತಿದ್ದೆ. ಅಲ್ಲಿಂದ ಮುಂದೆ ದ್ರಾಸ್ಗೆ ಹೆಲಿಕಾಪ್ಟರಿನಲ್ಲಿ ಹೋಗುವುದೆಂದು ನಿರ್ಧಾರವಾಗಿತ್ತು.
ಸಾರ್ವಜನಿಕರಿಂದ ಸಂಗ್ರಹಿತವಾದ ನಿಽಯೊಂದಿಗೆ ನಮ್ಮ ‘ಲೋಕಮತ ಫೌಂಡೇಶನ್’ ಸಹಯೋಗದೊಂದಿಗೆ ಅಲ್ಲಿ ನಿರ್ಮಾಣವಾಗಿರುವ ಕಾರ್ಗಿಲ್ ವಾರ್ ಮೆಮೋರಿಯಲ್ ಹೋಂ ವೀಕ್ಷಣೆ ಮಾಡಿ ಬರುವುದು ಯಾನದ ಉದ್ದೇಶವಾಗಿತ್ತು. ದ್ರಾಸ್ನಲ್ಲಿ ಪ್ರತಿಕೂಲ ಹವಾಮಾನವಿದೆ ಮತ್ತು ಹೆಲಿಕಾಪ್ಟರ್ ಇಳಿಸುವುದು ದುಸ್ತರವಾದೀತು ಎಂಬ ಸುದ್ದಿಯೂ ಬಂದಿತ್ತು. ಹಾಗಾಗಿ ೨೮೦ ಕಿಮೀ ದೂರವನ್ನು ರಸ್ತೆಮಾರ್ಗವಾಗಿ ಕ್ರಮಿಸಲು ಎಂಟು ಗಂಟೆಗಳ ಕಾಲಾವಽ ತಗಲಿತು.
ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಯಲ್ಲಿರುವ ದ್ರಾಸ್ ವಿಶ್ವದಲ್ಲಿಯೇ ಎರಡನೇ ಅತ್ಯಂತ ತಂಪುಪ್ರದೇಶ ಎಂದು ಹೆಸರಾಗಿದೆ. ರಷ್ಯಾದ ಒಮೈಕೋನ್ ಮೊದಲ ಸ್ಥಾನದಲ್ಲಿದೆ. ಚಳಿಗಾಲದಲ್ಲಿ ದ್ರಾಸ್ನಲ್ಲಿ ತಾಪಮಾನ ಕೆಳಕ್ಕಿಳಿದು ಮೈನಸ್ ೨೨ಅನ್ನು ತಲುಪುತ್ತದೆ. ಕಳೆದ ವರ್ಷವಂತೂ ಅದು ಮೈನಸ್ ೨೨.೭ ಡಿಗ್ರಿ ತಲುಪಿತ್ತು. ಇದುವರೆಗಿನ ದಾಖಲೆಗಳ ಪ್ರಕಾರ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದ್ದು ಜನವರಿ ೯, ೧೯೯೫ರಂದು. ಅದು ಮೈನಸ್ ೬೦ ಡಿಗ್ರಿ ಆಗಿತ್ತು. ೧೯೯೯ರಲ್ಲಿ ಕಾರ್ಗಿಲ್
ಯುದ್ಧದ ಕಾಲದಲ್ಲಿ ಮೈನಸ್ ೧೦ ಡಿಗ್ರಿ ತಾಪಮಾನವಿತ್ತು.
ನಾನು ದ್ರಾಸ್ ತಲುಪುವ ಮುನ್ನವೇ ನಾನು ೧೯೯೯ರ ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಳ್ಳುತ್ತಲೇ ಇದ್ದೆ. ಕಳೆದುಹೋಗಿದ್ದ ಯಾಕ್ ಹುಡುಕಲು ಬೆಟ್ಟ ಹತ್ತಿದ್ದ ಕುರಿಗಾಹಿ ತಾಶಿ ನಾಮಗ್ಯಲ್ ಅನೋ ಚಟುವಟಿಕೆ ನಡೆಯುತ್ತಿರುವುದನ್ನು ಗುರುತಿಸಿದ್ದ. ಅದು ೧೯೯೯ರ ಮೇ ೧೩ನೇ ತಾರೀಕು. ಆತ ಆರ್ಮಿಗೆ ಮಾಹಿತಿಯನ್ನು ಕೊಟ್ಟ. ಪಾಕಿಸ್ತಾನದ ಸೇನೆ ಆ ಭಾಗವನ್ನು ಗುಪ್ತವಾಗಿ ಆಕ್ರಮಿಸಿಕೊಂಡಿದೆ ಎಂಬುದನ್ನು ತಿಳಿಯಲು ಭಾರತೀಯ ಸೇನೆಗೆ ಇದು ಸಹಾಯಕವಾಯಿತು. ಅದು ಎತ್ತರದ ಪ್ರದೇಶವಾಗಿದ್ದು, ಅಲ್ಲಿಂದ ಭಾರತೀಯ ಸೇನೆಯ ಮೇಲೆ ದಾಳಿಗೆ ಟಾರ್ಗೆಟ್ ಮಾಡುವುದು ಅವರಿಗೆ ಸುಲಭವಾಗುತ್ತಿತ್ತು.
ಭಾರತೀಯ ಸೇನೆ ಇದನ್ನರಿತುಕೊಂಡು ಅಸಮಾನ ಶೌರ್ಯ ಪ್ರದರ್ಶನವನ್ನು ಮಾಡಿತು. ಕಾರ್ಗಿಲ್ ಯುದ್ಧದಲ್ಲಿ ಸರಿಸುಮಾರು ೨.೫ ಲಕ್ಷ ಬಾಂಬುಗಳು, ರಾಕೆಟ, ಶೆಲ್ ಗಳು ಬಳಕೆಯಾಗಿದ್ದವು. ಪಾಕಿಸ್ತಾನದ ಸೇನೆ ಸೋತು ಕಾಲ್ಕಿತ್ತಿತ್ತು.
ಜುಲಾಯಿ ೨೬ರಂದು ನಾನು ಮತ್ತು ರಾಜೇಂದ್ರ ಕಾರ್ಗಿಲ್ ವಿಜಯ ದಿವಸ್ ಸಂದರ್ಭದಲ್ಲಿ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಇದ್ದೆವು.
ನಮ್ಮ ಸಂಪಾದಕೀಯ ವಿಭಾಗದ ಸಹವರ್ತಿ ಸುರೇಶ್ ಭೂಸಾರಿ ಮತ್ತು ಫೋಟೋಗ್ರಾಫರ್ ರಾಜೇಶ್ ಟಿಕ್ಲಿ ನನ್ನ ಜತೆಗಿ
ದ್ದರು. ನನ್ನ ಮುಂಭಾಗದಲ್ಲಿ ೫೫೯ ಹಮಮದಿ ಹುತಾತ್ಮ ಯೋಧರ ಹೆಸರುಳ್ಳ ಫಲಕಗಳಿದ್ದವು. ಆ ದೃಶ್ಯವನ್ನು ಕಂಡು ನನ್ನ ಕಣ್ಣುಗಳು ಆರ್ದ್ರವಾಗಿದ್ದವು. ನನ್ನ ಹೃದಯ ಭಾವನೆಗಳ ಮಹಾಪೂರವಾಗಿತ್ತು. ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ನನ್ನ ಕೈಗಳು ಹುತಾತ್ಮ ಯೋಧರಿಗೆ ನಮಿಸಿದವು. ಸೈನಿಕರು ಗಡಿಕಾಯುತ್ತಾರೆಂಬ ಕಾರಣದಿಂದ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆ.
ಅವರಿಂದಾಗಿ ನಾವು ನಮ್ಮ ದೇಶ ಸುರಕ್ಷಿತವಾಗಿದೆ. ಅವರು ನಮ್ಮ ದೇಶದ ಹಿರಿಮೆ ಮತ್ತು ತ್ರಿವರ್ಣಧ್ವಜದ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ. ನನ್ನ ಪಕ್ಕದಲ್ಲಿದ್ದ ಆರ್ಮಿ ಅಧಿಕಾರಿಗಳ ಜತೆ ಮಾತನಾಡುತ್ತ ನಾನು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದೆ. ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನಗುಪ್ತ, ಮೇಜರ್ ಜನರಲ್ ನಾಗೇಂದ್ರ ಸಿಂಗ್, ಬ್ರಿಗೇಡಿಯರ್ ಯು.ಎಸ್.
ಆನಂದ್ ಮತ್ತು ಬ್ರಿಗೇಡಿಯರ್ ಬಿ.ಎಸ್. ಮುಲ್ತಾನಿ ಇವರುಗಳೊಂದಿಗೆ ಮಾತನಾಡುತ್ತ ದ್ರಾಸ್ನ ಏಕೆ ಯುದ್ಧ ಸ್ಮಾರಕ ನಿರ್ಮಿಸಲಾಗಿದೆ ಎಂದು ಕೇಳಿದೆ.
ಇದು ಎತ್ತರದ ಪ್ರದೇಶ. ಇಲ್ಲಿಂದಲೇ ಯುದ್ಧದ ಪ್ರಮುಖ ಘಟ್ಟ ನಡೆದಿತ್ತು. ಮತ್ತು ೫೫೯ ಹುತಾತ್ಮರನ್ನು ಇಲ್ಲಿಂದಲೇ ಕೆಳಕ್ಕೆ
ಒಯ್ಯಲಾಗಿತ್ತು ಎಂಬೆಲ್ಲ ಸಂಗತಿಗಳನ್ನು ಅವರು ವಿವರಿಸಿದ್ದರು. ಯುದ್ಧದ ಶೇ.೭೦ ಕಾರ್ಯಾಚರಣೆ ನಡೆದಿದ್ದೇ ಡ್ರಾಸ್, ಟೊಲೊಲಿಂಗ್, ಟೈಗರ್ ಹಿಲ್ ಮತ್ತು ಬಾತ್ರಾ ಶಿಖರಗಳಿಂದ ಎಂದವರು ವಿವರಿಸಿದರು. ಚಳಿಗಾಲದ ದಿನಗಳಲ್ಲಿ ಅಲ್ಲಿ ತಾಪಮಾನ ಮೈನಸ್ ೬೦ ಡಿಗ್ರಿ ಆಗಿರುತ್ತದೆ. ಈ ಶಿಖರಗಳನ್ನು ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿತು.
ಅವರು ಅಲ್ಲಿಂದ ಶ್ರೀನಗರ-ಲೇಹ್ ರಸ್ತೆಯನ್ನು ತಡೆಯುವ ಉದ್ದೇಶವನ್ನಿಟ್ಟಿದ್ದರು. ಈ ಮಾರ್ಗದ ಮೂಲಕವಾಗಿಯೇ ಆರು ತಿಂಗಳಿಗೆ ಬೇಕಾಗುವಷ್ಟು ಸೇನಾ ಉಪಕರಣಗಳು ಮತ್ತು ಇತರ ವಸ್ತುಗಳ ಸಾಗಣೆಯಾಗುತ್ತದೆ. ಒಂದೊಮ್ಮೆ ಆ ಮಾರ್ಗ ವನ್ನು ಪಾಕಿಸ್ತಾನ ತನ್ನ ವಶಕ್ಕೆ ಪಡೆದುಕೊಂಡಿದ್ದರೆ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆಗ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರನ್ನು ಶಿಖರ ೫೧೪೦ನ್ನು ವಶಪಡಿಸಿಕೊಳ್ಳುವ ಸವಾಲಿನೊಂದಿಗೆ ನೇಮಿಸಲಾಗಿತ್ತು. ಅದು ಅತ್ಯಂತ ಕಠಿಣ ಮತ್ತು ದುರ್ಗಮವಾಗಿತ್ತು. ಆದಾಗ್ಯೂ ವಿಕ್ರಮ್ ಬಾತ್ರಾ ಅದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಅವರ ಗೆದ್ದಾಗಿನ ಉದ್ಗಾರ ಯೇ ದಿಲ್ ಮಾಂಗೇ ಮೋರ್ ವಿಶ್ವಾದ್ಯಂತ ಪ್ರತಿಧ್ವನಿಸಿತು. ಈ ಪರಿಕ್ರಮದಲ್ಲಿ ಅವರ ಗುಪ್ತನಾಮ ಶೇರ್ ಶಾ ಎಂಬುದಾಗಿತ್ತು. ಹಾಗಾಗಿ ಕಾರ್ಗಿಲ್ ಕದನದಲ್ಲಿ ಕ್ಯಾಪ್ಟನ್ ಬಾತ್ರಾರನ್ನು ಕಾರ್ಗಿಲ್ ಸಿಂಹ ಎಂದು ಕರೆಯಲಾಯ್ತು. ತಮ್ಮ ಧೈರ್ಯಶಾಲಿತ್ವದಿಂದ ಅಸಾಧ್ಯವಾಗಿದ್ದ ಕಾರ್ಯವನ್ನು ಅವರು ಸಾಧಿಸಿ ತೋರಿಸಿದರು. ಆದರೆ ಗಂಭೀರವಾದ ಗಾಯಗಳಿಂದ ಅವರು ಹುತಾತ್ಮರಾದರು. ಶಿಖರ ೪೮೭೫ ಈಗ ಬಾತ್ರಾ ಪೀಕ್ ಎಂದೇ ಹೆಸರಾಗಿದೆ.
ಯುದ್ಧದ ಮಾತನ್ನು ಪಕ್ಕಕ್ಕಿಡಿ. ಸಾಮಾನ್ಯರಿಗೆ ಇಂತಹ ಅನೂಹ್ಯ ಸಂಗತಿಗಳನ್ನು ಪ್ರತಿಕೂಲ ಹವಾಮಾನದ ಕಾಲದಲ್ಲಿ ಗೆಲ್ಲುವುದು ಸಾಧ್ಯವಿಲ್ಲದ ಮಾತು. ಯೋಚಿಸುತ್ತಿದ್ದಂತೆ ಮೈನವಿರೇಳುತ್ತದೆ. ಸೈನಿಕರು ಏಳು ಪದರಗಳ ವಿಶೇಷ ದಿರಿಸನ್ನು ಧರಿಸಿರುತ್ತಾರೆ. ಎದುರಾಳಿ ದೇಶದ ಸೈನಿಕರಿಗಿಂತ ಇಲ್ಲಿನ ಕಠಿಣ ಹವಾಮಾನವೇ ಮೊದಲ ಶತ್ರುವೆನಿಸುತ್ತದೆ. ಲೋಕಮತ ಫೌಂಡೇಶನ್ ಜನರಿಂದ ಸಂಗ್ರಹಿಸಿದ ನಿಽಯನ್ನು ಬಳಸಿ ನಿರ್ಮಿಸಲಾಗಿರುವ ಬೆಚ್ಚಗಿನ ಮನೆಗಳು ಪ್ರತಿಕೂಲ ಹವಾಮಾನದ ಕಾಲಮಾನದಲ್ಲಿ ದೇಹವನ್ನು ಬೆಚ್ಚಗಾಗಿಸಿಕೊಳ್ಳಲು ಇಲ್ಲಿ ಸಹಾಯಕವಾಗುತ್ತವೆ.
ಕಾರ್ಗಿಲ್ ಯುದ್ಧದ ನಂತರದಲ್ಲಿ ಇಂತಹ ನಿರ್ಮಿತಿ ಗಳನ್ನು ಮಾಡುವಲ್ಲಿ ಲೋಕಮತ -ಂಡೇಶನ್ ಸಹಭಾಗಿ ಯಾಗಿದ್ದು ನನಗೆ ಖುಷಿತರುವ ಸಂಗತಿ. ಈ ಬೆಚ್ಚಗಿನ ಮನೆಗಳ ನಿರ್ಮಾಣದಲ್ಲಿ ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನಗುಪ್ತ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಹುತಾತ್ಮ ಸೇನಾನಿಗಳಿಗೆ ವಂದನೆ ಸಲ್ಲಿಸಿದ ನಂತರದಲ್ಲಿ ನಾವು ಶ್ರೀನಗರಕ್ಕೆ ಹೊರಟೆವು. ಅದು ಕೂಡ ೨೭ ಕಿಮೀ ದೂರದ ರಸ್ತೆಯಾನ. ಸಮುದ್ರಮಟ್ಟದಿಂದ ೧೧೫೭೫ ಅಡಿ ಎತ್ತರದಲ್ಲಿರುವ ಪ್ರದೇಶವದು. ಅಲ್ಲೂ ಜೋಜೀಲಾ ಪಾಸ್ನಿಂದ ಸೋನಮಾರ್ಗದವರೆಗಿನ ಪ್ರಯಾಣ ಅತ್ಯಂತ ದುರ್ಭರವಾಗಿತ್ತು.
ಇದನ್ನೀಗಾಗಲೇ ಹೇಳಿದ್ದೇನೆ. ಅತಿ ಎತ್ತರದಲ್ಲಿ ಪ್ರಯಾಣಿಸುವಾಗ ಆಮ್ಲಜನಕದ ಕೊರತೆಯೂ ಎದುರಾಗುತ್ತದೆ. ನನಗೆ ಎರಡುಬಾರಿ ಮೂಗಿನಿಂದ ರಕ್ತ ಒಸರಿತು, ನನ್ನ ಜತೆಗಿದ್ದವರು ಹಲವಾರು ಬಾರಿ ವಾಂತಿ ಮಾಡಿಕೊಂಡರು. ಎನ್.ಎಚ್.-೧ ಮಿಲಿಟರಿ ಉದ್ದೇಶದ ಕಾರಣಕ್ಕಾಗಿ ಪ್ರಮುಖವಾಗಿದ್ದರೂ ಅದರ ಸ್ಥಿತಿ ಏಕಿಷ್ಟು ಕೆಟ್ಟದಾಗಿದೆ ಎಂದು ನಾನು ಯೋಚಿಸುತ್ತಲೇ
ಇದ್ದೆ.
ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಎಡೆ ರಸ್ತೆ ಸಂಪರ್ಕವನ್ನು ಬಲಯುತಗೊಳಿಸುವಲ್ಲಿ ಸಕ್ರಿಯ ರಾಗಿದ್ದಾರೆ. ರೋಹಟಂಗ್ ಪ್ರಾಂತ್ಯದಲ್ಲಿ ಅಟಲ್ ಸುರಂಗವನ್ನು ಬಹುತೇಕ ಅವಧಿಗೆ ಮುನ್ನವೇ ಅವರು ಪೂರ್ಣ ಗೊಳಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಭಾಗದಲ್ಲಿಯೂ ಕೂಡ ಸುರಂಗ ಮಾರ್ಗಗಳ ನಿರ್ಮಾಣ ಅಗುತ್ತಿದೆ. ಈ ವಿಚಾರದಲ್ಲಿ ನಾನು ಗಡ್ಕರಿಯವರನ್ನು ಅಭಿನಂದಿಸುತ್ತೇನೆ. ಜೊತೆಗೆ ಅವರು ಈ ಎನ್.ಎಚ್.೧ ರಸ್ತೆಯ ಮಟ್ಟವನ್ನು ಉತ್ತಮಪಡಿಸುವಲ್ಲಿ ಶೀಘ್ರ ಕಾರ್ಯೋನ್ಮುಖರಾಗಬೇಕೆಂದು ಬಯಸುತ್ತೇನೆ.
ಯಾಕೆ ನಮ್ಮಿಂದ ಇದೆಲ್ಲ ಸಾಧ್ಯವಾಗುವುದಿಲ್ಲವೋ ನಾನರಿಯೆ. ಉತ್ತಮ ರಸ್ತೆ ನಿರ್ಮಾಣ ನಮ್ಮ ಪ್ರಥಮ ಆದ್ಯತೆ ಯಾಗಿರಬೇಕು. ಇಲ್ಲಿ ಇನ್ನೊಂದು ಸಂಗತಿಯನ್ನು ನಿಮಗೆ ಹೇಳಲೇಬೇಕಿದೆ. ನಾನು ಈ ಪ್ರಯಾಣದಲ್ಲಿ ಮರಾಠಾ ಲೈಟ್
ಇನ್-ಂಟ್ರಿಯ ಅಽಕಾರಿ ಮೋಖಾ ಅವರನ್ನು ಭೇಟಿಯಾಗಿದ್ದೆ. ಅವರು ಸರದಾರಜೀ. ಆದರೆ ಅವರು ನನ್ನೊಂದಿಗೆ ಸುಲಲಿತ ವಾಗಿ ಮರಾಠಿಯಲ್ಲಿ ಸಂಭಾಷಿಸಿದ್ದು ನನಗೆ ಅಚ್ಚರಿಯ ಸಂಗತಿಯಾಗಿತ್ತು. ಈ ಬಗ್ಗೆ ನಾನು ಅವರಲ್ಲಿ ಕೇಳಿದಾಗ, ನಾನು ಯಾವ ರೆಜಿಮೆಂಟಿಗೆ ಸೇರಿದ್ದೇನೋ ಅವರ ಭಾಷೆಯನ್ನು ಮಾತನಾಡದಿದ್ದರೆ, ನಾನು ನನ್ನ ಸಹೋದ್ಯೋಗಿ ಗಳೊಂದಿಗೆ ಸಮರ್ಥ ಸಂವಹನ ಮಾಡುವುದಾದರೂ ಹೇಗೆ? ಎಂದರು.
ಅಂತೆಯೇ ಒಬ್ಬ ತಮಿಳು ಅಧಿಕಾರಿ ನನ್ನೊಂದಿಗೆ ಉತ್ತಮವಾದ ಹಿಂದಿಯಲ್ಲಿ ಮಾತನಾಡಿದರು. ನಿಜವಾದ ಭಾರತ ಸ್ಥಿತವಾಗಿರುವುದು ನಮ್ಮ ಸೇನಾ ವ್ಯವಸ್ಥೆಯಲ್ಲಿ. ಅಲ್ಲಿ ಜಾತಿ, ಧರ್ಮ, ಭಾಷೆಗಳ ಕುರಿತಾಗಿ ಗೊಂದಲವೇ ಇಲ್ಲ. ಜೈ ಹಿಂದ್.