Monday, 14th October 2024

ಅಂಬೇಡ್ಕರ್‌ರನ್ನು ಅವಮಾನಿಸಿದ ಹಿಜಾಬಿಗಳು !

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbn@gmail.com

ಶಾಲೆಯಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಮೂವರು ನ್ಯಾಯಾಧೀಶರನ್ನೊಳಗೊಂಡ ಕರ್ನಾಟಕದ ಉಚ್ಚ ನ್ಯಾಯ ಪೀಠ ತೀರ್ಪನ್ನು ನೀಡಿದೆ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ, ವಿದ್ಯಾರ್ಥಿಗಳ ಸಮವಸದ ಬಗ್ಗೆ ನಿಯಮಗಳನ್ನು ರೂಪಿಸುವ ಸಂಪೂರ್ಣ ಅಧಿಕಾರ ಶಾಲಾ ಆಡಳಿತ ಮಂಡಳಿಗಿದೆಯೆಂದು ಹೇಳಿದೆ.

ಹಿಜಾಬಿನ ವಿಚಾರದಲ್ಲಿ ಸಂವಿಧಾನದಲ್ಲಿನ ಹಲವು ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಪೀಠ ಕೇರಳ ಹಾಗೂ ಮಹಾರಾಷ್ಟ್ರ ನ್ಯಾಯಾಲಯಗಳು ನೀಡಿದ ತೀರ್ಪನ್ನು ಮಾದರಿಯಾಗಿ ಟ್ಟುಕೊಂಡಿದೆ. ಆದರೆ ಹಿಜಾಬ್ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ಮುಸಲ್ಮಾನ್ ವಿದ್ಯಾರ್ಥಿ ನಿಯರು ಸಂವಿಧಾನಾತ್ಮಕ ನ್ಯಾಯಪೀಠದ ತೀರ್ಪನ್ನು ಗೌರವಿಸಿದೇ, ಕೇವಲ ಸಂವಿಧಾನ ದಲ್ಲಿನ ಮೂಲ ಭೂತ ಹಕ್ಕುಗಳನ್ನಷ್ಟೇ ಕಂಠಪಾಠ ಮಾಡಿಕೊಂಡು ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ವಿಚಾರಣಾ ಹಂತದಲ್ಲಿರುವ ವಿಷಯದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ತೋರಿಸಬೇಕಿದ್ದಂತಹ ಪ್ರೌಢಿಮೆಯನ್ನು ವಿದ್ಯಾರ್ಥಿನಿಯರು ತೋರಿಸಿರ ಲಿಲ್ಲ. ತೀರ್ಪಿನ ನಂತರ ಪತ್ರಿಕಾಗೋಷ್ಠಿ ನಡೆಸಿ ತಮಗೆ ತೀರ್ಪಿನ ವಿರುದ್ಧ ಅಸಮಾ ಧಾನವಿದೆಯೆಂದು ಹೇಳಿ ಮತ್ತದೇ ಕಂಠಪಾಠ ಮಾಡಿದ ಸಂವಿಧಾನದ ಮೂಲಭೂತ ಹಕ್ಕಿನ ವಿಷಯ ಒಪ್ಪಿಸುತ್ತಿದ್ದಾರೆ. ಅಷ್ಟಕ್ಕೂ ಕೇವಲ ಸಂವಿಧಾನದಲ್ಲಿನ ಪರಿಚ್ಛೇದ 25ರಲ್ಲಿನ ಮೂಲಭೂತ ಹಕ್ಕುಗಳ ಬಗ್ಗೆಯಷ್ಟೇ ಪುಂಖಾನುಪುಂಖವಾಗಿ ಮಾತ ನಾಡುವ ವಿದ್ಯಾರ್ಥಿನಿಯರು ಸಂವಿಧಾನದ ಪರಿಚ್ಛೇದ 51(a) ರಲ್ಲಿ ಸೂಚಿಸಿರುವ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲವೇಕೆ? ತಮ್ಮ ಬೇಳೆ ಬೇಯಿಸಿ ಕೊಳ್ಳುವ ಸಲುವಾಗಿ ಸಂವಿಧಾನವನ್ನು ತಮ್ಮ ಮಾತಿನಲ್ಲಿ ಮುನ್ನೆಲೆಗೆ ತಂದು ಭಾವನಾ ತ್ಮಕವಾಗಿ ಜನರ ಮುಂದೆ ಅಮಾಯಕರಂತೆ ಬಿಂಬಿಸಿ ಕೊಳ್ಳುತ್ತಿದ್ದಾರೆ.

ಹತ್ತಾರು ಗಲಭೆ, ದೊಂಬಿಯಲ್ಲಿ ಭಾಗಿಯಾಗಿರುವ ’SDPI’ ಹಾಗೂ ’PFI’ ಸಂಘಟನೆಗಳು ಹೇಳಿಕೊಡುವ ಆತಂಕಕಾರಿ ವಿಷಯ ಗಳನ್ನು ತಲೆಯಲ್ಲಿ ತುಂಬಿಕೊಂಡು ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದಡಿಯೇ ಚುನಾಯಿತವಾದ ಸರಕಾರದ ಮೇಲೆ ನಂಬಿಕೆಯಿಲ್ಲ. ಕಾರ್ಯಂಗದ ಮೇಲೆ ನಂಬಿಕೆಯಿಲ್ಲ, ಕೊನೆಗೆ ನ್ಯಾಯಾಂಗದ ಮೇಲೂ ನಂಬಿಕೆ ಯಿಲ್ಲ. ಒಂದೊಮ್ಮೆ ನಿಜಕ್ಕೂ ಅವರಿಗೆ ಸಂವಿಧಾನದ ಮೇಲೆ ಗೌರವವಿದ್ದರೆ, ಸರಕಾರದ ಆದೇಶವನ್ನು ಒಪ್ಪಬೇಕಿತ್ತು. ಇಲ್ಲವೇ ಕೋರ್ಟ್ ತೀರ್ಪನ್ನು ಗೌರವಿಸಬೇಕಿತ್ತು. ಅದೂ ಇಲ್ಲವೆಂದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ವನ್ನೂ ನ್ಯಾಯಾಂಗ ವ್ಯವಸ್ಥೆಯಲ್ಲಿ ನೀಡಲಾಗಿದೆ.

ಕಾನೂನಾತ್ಮಕ ಹೋರಾಟ ನಡೆಸಲಿ; ಬೇಡವೆಂದವರು ಯಾರು? ಅದು ಬಿಟ್ಟು ನ್ಯಾಯಾಂಗ ವ್ಯವಸ್ಥೆಗೆ ಗೌರವ ನೀಡದೆ ಬಾಯಿಗೆ
ಬಂದಂತೆ ಮಾತನಾಡುವ ಔಚಿತ್ಯವಾದರೂ ಏನು? ಇದು ಅವರು ಪ್ರತಿಪಾದಿಸುವ ಸಂವಿಧಾನ, ಅಂಬೇಡ್ಕರ್ ಅವರಿಗೆ ಮಾಡುವ ಅವಮಾನವಲ್ಲವೇ? ಮುಸಲ್ಮಾನರ ಆಚಾರವಿಚಾರಗಳ ವಿಚಾರಣೆ ನ್ಯಾಯವ್ಯಾಪ್ತಿಗೆ ಬರುವುದೇ ಅನುಮಾನ ವೆಂಬಂತೆ ಕೆಲವು ಮುಸಲ್ಮಾ ನ್ ಮುಖಂಡರು ಹೇಳಿದ್ದಾರೆ.

ಖಂಡಿತಾ ಹೌದು, ಮನೆಗಳಲ್ಲಿನ ಆಚರಣೆಗಳ ಬಗ್ಗೆ ನ್ಯಾಯಾಲಯ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಶಾಲೆಯ ವಿಚಾರಗಳ ಬಗ್ಗೆ ವಿಚಾರಣೆ ನಡೆಸುವ ಸಂಪೂರ್ಣ ಹಕ್ಕನ್ನು ನ್ಯಾಯಾಲಯ ಹೊಂದಿದೆ. ಮಾತು ಮಾತಿಗೂ ಸಂವಿಧಾನವನ್ನು ಎಳೆತರುವ ವಿದ್ಯಾರ್ಥಿನಿಯರು ಇದೇ ಸಂವಿಧಾನದ ಕರ್ತೃ ಅಂಬೇಡ್ಕರರು ಹಿಜಾಬ್ ಹಾಗೂ ಬುರ್ಖಾ ಬಗ್ಗೆ ಏನು ಹೇಳಿದ್ದಾ ರೆಂಬುದನ್ನು ಮರೆ ತಂತಿದೆ ಅಥವಾ ಜಾಣ ಮರೆವಿನ ನಾಟಕವೋ? ಹಿಜಾಬಿನ ತೀರ್ಪು ಬಂದಾಕ್ಷಣ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದ ವಿದ್ಯಾರ್ಥಿನಿ ಯರು, ಅಂಬೇಡ್ಕರು ಈಗ ಬದುಕಿದ್ದರೆ ಈ ತೀರ್ಪನ್ನು ಒಪ್ಪುತ್ತಿರಲಿಲ್ಲವೆಂದು ಹೇಳುತ್ತಾರೆ.

ನೆನಪಿರಲಿ, ಬುರ್ಖಾ ಎಂಬುದು ಸಮಾಜದ ಅನಿಷ್ಟ ಪದ್ಧತಿಯೆಂದು ಸ್ವತಃ ಅಂಬೇಡ್ಕರರೇ ಹೇಳಿದ್ದರು. ಬಾಬಾಸಾಹೇಬರ ಮನಃಸ್ಥಿತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಇವರು ತಮ್ಮ ಸಮಾಜ ವಿರೋಧಿ ಧೋರಣೆಗಳಿಗೆ, ಮಾತುಗಳಿಗೆ ಗುರಾಣಿಯನ್ನಾಗಿ ಬಾಬಾ ಸಾಹೇಬರನ್ನೇ ಎಳೆದು ತರುವುದೇಕೆ? ಅಸಲಿಗೆ ಇವೆಲ್ಲವೂ ಕಮ್ಯುನಿಸ್ಟ್ ಪ್ರೇರಿತ ಹೋರಾಟಗಳು. ಮುಸಲ್ಮಾನರು ಹಾಗೂ ದಲಿತರನ್ನು ಸೇರಿಸಿಕೊಂಡು ಕಮ್ಯುನಿಸ್ಟರು ‘ಜೈ ಮೀಮ’ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕುವ ವಿಫಲ ಪ್ರಯತ್ನದಲ್ಲಿದ್ದಾರೆ.

ಅದಕ್ಕಾಗಿ ಹಿಜಾಬ್ ಮುಂದಿಟ್ಟುಕೊಂಡು ಒಂದಷ್ಟು ರೋಲ್‌ಕಾಲ್ ಹೋರಾಟಗಾರರ ಬೆಂಬಲದಿಂದ ಅಮಾಯಕ ದಲಿತ ಹಾಗೂ ಮುಸಲ್ಮಾನರ ತಲೆಯನ್ನು ಹಾಳುಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಇತ್ತ SDPI ರಾಜಕೀಯವಾಗಿ ಹಿಜಾಬಿನ ವಿಷಯವನ್ನು ಬಳಸಿಕೊಳ್ಳುತ್ತಿದೆ. ಅತ್ತ ಕಮ್ಯುನಿಸ್ಟರು ತಮ್ಮ ಸವೆದುಹೋಗಿರುವ ನೆಲೆ ಯನ್ನು ಪುನರ್ ನಿರ್ಮಾಣ ಮಾಡುವ ಸಲುವಾಗಿ ಹಿಜಾಬನ್ನು ಬಳಸಿಕೊಂಡು ‘ಜೈ ಮೀಮ’ ಹುಟ್ಟುಹಾಕುವಲ್ಲಿ ನಿರತರಾಗಿ ದ್ದಾರೆ. ಇದೂ ಸಾಲ ದೆಂಬಂತೆ ತಲೆಯಲ್ಲಿ ಏನೂ ಇಲ್ಲದೇ ತಲೆಬುಡವಿಲ್ಲದೆ ಮಾತನಾಡುವ ನಟ ಚೇತನ್ ಅಹಿಂಸಾ, ದಲಿತರ ಅಲ್ಪಸಂಖ್ಯಾತರ ಹೆಸರಿನಲ್ಲಿ ಇಲ್ಲಸಲ್ಲದ ರಾಜಕೀಯ ಮಾಡಲು ಹೋಗಿ ತಗಲ್ಹಾಕಿಕೊಂಡಿದ್ದಾನೆ. ಮಾದ್ಯಮದವರು ಚರ್ಚೆಗೆ ಕರೆದರೆ ಬರುವ ಧೈರ್ಯ ಈತನಿಗಿಲ್ಲ. ಹೊರಗೆ ಮಾತ್ರ ಬಡಬಡಿಸುತ್ತಾನೆ. ಮಾದ್ಯಮದೆದುರು ಚರ್ಚೆಗೆ ಹೋದರೆ ಎಲ್ಲಿ ತನ್ನ ಬಂಡವಾಳ ಬಯಲಾಗುತ್ತದೋ ಎಂಬ ಭಯ ಈತನಿಗೆ. ಹಿಜಾಬ್ ವಿಷಯದಲ್ಲಿ ಅಂಬೇಡ್ಕರ್ ಹೆಸರು ಹೇಳುತ್ತಿರುವುವರಿಗೆ ಗೊತ್ತಿರಲಿ, ಮುಸಲ್ಮಾನರ ರಾಷ್ಟ್ರೀಯತೆಯ ಮೇಲೆ ಅಂಬೇಡ್ಕರ ರಿಗೆ ಒಂದಿನಿತೂ ನಂಬಿಕೆ ಇರಲಿಲ್ಲ.

ಅಂದೇ ಮುಸಲ್ಮಾನರಿಗೆ ದೇಶಕ್ಕಿಂತಲೂ ತಮ್ಮ ಧರ್ಮವೇ ಮುಖ್ಯವಾಗಿತ್ತು ಎಂಬ ವಿಷಯ ಬಾಬಾಸಾಹೇಬರಿಗೆ ತಿಳಿದಿತ್ತು. ಆ ಕಾರಣಕ್ಕೇ 1947ರಲ್ಲಿ ಅಖಂಡ ಭಾರತ ವಿಭಜನೆಯಾದಾಗ ಸಂಪೂರ್ಣ ಜನಸಂಖ್ಯಾ ವಿನಿಮಯವಾಗಬೇಕೆಂದು ಅಂಬೇಡ್ಕರರು ಹೇಳಿದ್ದರು. ಮಾತ್ರವಲ್ಲ, ಅದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ತಮಗಾದ ಅನ್ಯಾಯಗಳ ಬಗ್ಗೆ ಬಹಳಷ್ಟು ನೊಂದಿದ್ದರೂ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲಿಲ್ಲ. ಇದಕ್ಕಾಗಿ ಹೈದರಾಬಾದ್ ನಿಜಾಮನ ಹಣದ ಆಮಿಷವನ್ನೂ ತಿರಸ್ಕರಿಸಿ ದ್ದರು.

ಒಂದೊಮ್ಮೆ ಅಂದು ಬಾಬಾಸಾಹೇಬರು ಅಪ್ಪೀ ತಪ್ಪಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರೆ ಇಂದು ದಲಿತ ಸಮುದಾಯದ ಬಹು ದೊಡ್ಡ ಜನಸಂಖ್ಯೆ ಇಸ್ಲಾಂ ಮತಾಂತರದ ಸುಳಿಗೆ ಸಿಲುಕಿ ಬಿಡುವ ಅಪಾಯವಿತ್ತು. ಬಾಬಾಸಾಹೇಬರ ದೂರದೃಷ್ಟಿ ಯಿಂದ ದೇಶದಲ್ಲಿ ಆಗಬಹುದಿದ್ದಂತಹ ಬಹು ದೊಡ್ಡ ಅನಾಹುತವೊಂದು ತಪ್ಪಿತು. ಅಂಬೇಡ್ಕರರು ಇಂದು ಜೀವಂತವಾಗಿ ದ್ದಿದ್ದರೆ ಹಿಜಾಬ್ ಬೆಂಬಲಿಸುವುದು ಹಾಗಿರಲಿ, ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಕಂಡು ಖಂಡಿತವಾಗಿ ಕಣ್ಣೀರು ಹಾಕಿರುತ್ತಿದ್ದರು. ಅಂಬೇಡ್ಕರರು ರಚಿಸಿರುವ ಸಂವಿಧಾನ ವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಹಿಜಾಬ್ ಬೆಂಬಲಿಗರು, ತಮ್ಮ ಧರ್ಮವೇ ಅಂತಿಮವೆನ್ನುವ ಮೂಲಕ ಅಂಬೇಡ್ಕರರಿಗೇ ನೇರವಾಗಿ ಅವಮಾನ ಮಾಡುತ್ತಿದ್ದಾರೆ.

ಇದೆಲ್ಲದರ ಹಿಂದೆ ಮೌಖಿಕ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ ಕಮ್ಯುನಿಸ್ಟರಿದ್ದಾರೆ. ‘ಸಂವಿಧಾನ’ ಹಾಗೂ ‘ಅಂಬೇಡ್ಕರ್’ ಎಂಬ ಪದ ಬಳಕೆಯನ್ನು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು. ಹಿಜಾಬ್ ವಿಚಾರದಲ್ಲೂ ಈ ಎರಡೂ ಪದಗಳನ್ನು ವಿದ್ಯಾರ್ಥಿನಿಯರ ಬಾಯಲ್ಲಿ ಹೇಳಿಸುತ್ತಿರುವುದೂ ಅವರೇ. ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ ವೆಂಬ ಗಾದೆಯಂತೆ ಸಂವಿಧಾನಕ್ಕೆ ಗೌರವ ನೀಡದೆ ನ್ಯಾಯಾಲಯದ ತೀರ್ಪನ್ನೂ ಒಪ್ಪದೇ, ನಂತರ ಸಂವಿಧಾನ ಹಾಗೂ ಅಂಬೇಡ್ಕರ್‌ರ ಹೆಸರಿನಡಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಭಾವನಾತ್ಮಕವಾಗಿ ಮುಸ್ಲಿಂ ಜನರನ್ನು ಕಟ್ಟಿಹಾಕಿ ಅವರ ವಿದ್ಯಾಭ್ಯಾಸವನ್ನು ಹಾಳುಮಾಡುತ್ತಿರುವ ಕಮ್ಯುನಿಷ್ಟರಿಗೆ ಮುಖ್ಯ ವಾಹಿನಿ ಯಡೆಗೆ ಆ ಸಮುದಾಯ ಸಾಕ್ಷಿಯಾಗುವುದು ಇಷ್ಟವಿಲ್ಲ. ಇಸ್ಲಾಂ ಮೂಲಭೂತವಾದವನ್ನು ಪ್ರೋತ್ಸಾಹಿಸುವ ’SDPI’ ಸಹ ಇದೇ ದಾರಿಯಲ್ಲಿದ್ದು ಮುಸಲ್ಮಾನ್ ಹೆಣ್ಣು ಮಕ್ಕಳ ಶಿಕ್ಷಣ ವಂಚನೆಯಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ. ‘ಇಸ್ಲಾಮಿನ ಮಹಿಳಾ ಸಬಲೀ ಕರಣ’ದ ಬಗ್ಗೆ ಮಾತನಾಡುವ ಕಮ್ಯುನಿಷ್ಟರು, ತಾವೇ ಗುತ್ತಿಗೆ ತೆಗೆದುಕೊಂಡಂತೆ ಆಡುವ ಬಾಬಾಸಾಹೇಬರೇ ಇಸ್ಲಾಮ್ ಮಹಿಳಾ ಸಬಲೀಕರಣದ ವಿಚಾರದಲ್ಲಿ ಅವರು ಪ್ರತಿಪಾದಿಸಿದ್ದನ್ನು ಗಾಳಿಗೆ ತೂರಿದ್ದಾರೆ.

ಪ್ರವಾದಿ ಮೊಹಮ್ಮದರು ತಾವು ಕೊನೆಯುಸಿರೆಳೆಯುವ 6 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಂತಹ ಮಹಿಳೆ ಯರನ್ನು ಗೌರವಿಸುವ ಸಲುವಾಗಿ ಹಿಜಾಬ ವಸ್ತ್ರ ಸಂಹಿತೆಯನ್ನು ತಂದಿದ್ದ ಸಂಗತಿಯನ್ನು ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ 63ನೇ ಪುಟದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಬ್ದು ಯೂಸ- ಅಲಿಯವರ ಪವಿತ್ರ ಖುರಾನ್ ನಲ್ಲಿಯೇ ಹಿಜಾಬ ಬಗ್ಗೆ ಸ್ಪಷ್ಟವಾಗಿ ಹೇಳಿರುವಾಗ, ಈ ವಿದ್ಯಾರ್ಥಿನಿಯರು ಯಾವ ಇಸ್ಲಾಂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ? ಈ ಎಲ್ಲ ಅಂಶಗಳ ಸುದೀರ್ಘ ಚರ್ಚೆಯ ನಂತರವಷ್ಟೇ ಸಂವಿಧಾನದಲ್ಲಿನ ಹಿಜಾಬ ಬಗೆಗಿನ ಅಂಶವನ್ನೂ ಪರಿಗಣಿಸಿ ತೀರ್ಪನ್ನು ನೀಡಲಾಗಿದೆ. ನ್ಯಾಯಾಲಯದ ಇಡೀ ಪ್ರಕ್ರಿ ಯನ್ನು ಯೂಟ್ಯೂಬನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ಹಿಜಾಬಿನ ಪರವಾಗಿ ಕೋರ್ಟಿಗೆ ಹೋದಂತಹ ವಿದ್ಯಾರ್ಥಿನಿಯರು ಈಗ ಮಾಧ್ಯಮಗಳ ಮುಂದೆ ಕುಳಿತು ಶಾಲೆಯಲ್ಲಿಯೇ ವಿವಾದವನ್ನು ಬಗೆಹರಿ ಸುವ ಪ್ರಯತ್ನವನ್ನು ಆಡಳಿತ ಮಂಡಳಿ ಮಾಡಬಹುದಿತ್ತೆಂದು ಹೇಳುತ್ತಾರೆ.

ಶಾಲಾ ಆಡಳಿತ ಮಂಡಳಿಯ ಮೇಲೆ ನಂಬಿಕೆಯಿಲ್ಲದೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದವರು ಇವರೇ, ಈಗ ಇವರೇ ನ್ಯಾಯಾ ಲಯದ ತೀರ್ಪನ್ನು ಪ್ರಶ್ನಿಸುತ್ತಿದ್ದಾರೆ. ಸಂವಿಧಾನದಲ್ಲಿನ ‘ಜಾತ್ಯತೀತ’ವೆಂಬ ಪದಬಳಕೆಯ ನಿಜ ವ್ಯಾಖ್ಯಾನ ಸಾಮಾನ್ಯ ಜನರಿಗೆ ಅರ್ಥವಾಗುವು ದಿಲ್ಲವೆಂಬ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕಮ್ಯುನಿಸ್ಟರಿಗೆ, ಇಂದಿನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸುಳ್ಳುಗಳು ವೇಗವಾಗಿ ಬೆತ್ತಲಾಗುತ್ತಿರುವ ಅಂಶವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯ ಕರನ್ನು ಬಳಸಿಕೊಳ್ಳುವವರು ‘ಮೌಖಿಕ ಭಯೋತ್ಪಾದನೆ’ಯ ಮೂಲಕ ಅಮಾಯಕರ ಭಾವನೆಗಳ ಜತೆಯಲ್ಲಿ ಆಟವಾಡು ತ್ತಿರುತ್ತಾರೆ.

ತಮ್ಮ ತಪ್ಪುಗಳನ್ನು ಮರೆಮಾಚುವ ದೃಷ್ಟಿಯಿಂದ ‘ಸಂವಿಧಾನ’, ‘ಅಂಬೇಡ್ಕರ್’, ‘ಜಾತ್ಯತೀತ’, ‘ಆಜಾದಿ’ ಪದಗಳನ್ನು ಸದಾ ಬಳಸು ತ್ತಲೇ ಇರುತ್ತಾರೆ. ಸಂವಿಧಾನದಲ್ಲಿನ ಮೂಲ ಭೂತ ಕರ್ತವ್ಯಗಳಿಗೆ ಬೆಲೆ ನೀಡದೆ, ಹಕ್ಕುಗಳನ್ನು ಮಾತ್ರ ತಮಗಿಷ್ಟ ಬಂದಂತೆ ಅರ್ಥೈಕೊಂಡು ಮೊಂಡುವಾದ ಮಾಡುತ್ತಿರುವ ವಿದ್ಯಾರ್ಥಿನಿಯರು ಅಂಬೇಡ್ಕರರನ್ನು ಅವಮಾನಿಸಿದ್ದಾರೆ.