Wednesday, 11th December 2024

ಇಲ್ಲಿ ದೂರನಿಲ್ಲಿ, ಇದು ದೇವರ ಕಾಡು…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹಂದಳೆ

mehandale100@gmail.com

ಇದೋ ನೋಡಿ ಈ ಬಳ್ಳಿ ಜಗಿದರೆ ಎರಡೇ ನಿಮಿಷ ನೋವು ನಿವಾರಕ ಕೆಲಸ ಶುರು ಮಾಡುತ್ತದೆ. ಇದು ಉಳುಕಿಗೆ, ಇದನ್ನು ಹಿಂಡಿ ರಸ ಗಂಟಲಿಗೆ
ಹೋಗುವ ಮೊದಲೇ ಬುಡ ಬೇಧಿ ಬಂದ್, ತಪ್ಪಿಯೇನಾದರೂ ಈ ಬಳ್ಳಿ ಬೇರನ್ನು ಅರೆದು ಕುಡಿದಿರೋ ನೀವು ಕುಂಭಕರ್ಣನಾಗುತ್ತೀರಿ.

ಕನಿಷ್ಟ ನಾಲ್ಕೈದು ದಿನ ಬಿದ್ದುಕೊಳ್ಳೊದು ನಿಶ್ಚಿತ, ಇದು ಅನಸ್ತೇಷೀಯಾ ತರಹದ್ದು. ಇದನ್ನೆ ಮೊದಲೆಲ್ಲ ಬಳಸ್ತಾ ಇದ್ದಿದ್ದು, ಅದರ ಪಕ್ಕದ ಗೆರಟೆ ತರಹದ ಕಾಯಿಯಿದೆಯಲ್ಲ ಅದು ನಿಮ್ಮ ಹಸಿವು ಬಾಯರಿಕೆಯಿಂದ ರಕ್ಷಿಸುತ್ತದೆ, ಆದರೆ ದಿನವಿಡೀ ನೀರು ಕುಡಿಸುತ್ತದೆ. ಆ ಕಡುಕಪ್ಪಗಿನ ಬಳ್ಳಿ ಇದೆ ಯಲ್ಲ ಅದು ಮುಪ್ಪು ಮುಂದೂಡಿದರೆ, ಕೂದಲು ಕಪ್ಪಾಗಿಯೇ ಇರಲು ನಾವು ಇದೇ ಬೇರು ಬಳಸೋದು, ನೋಡಿ ನಾನು ಈಗಲೂ ಹೇಗಿದ್ದೇನೆ? ಎನ್ನುತ್ತಾ ನನಗಿಂತಲೂ ವೇಗವಾಗಿ ಸರಾಗವಾಗಿ ಬೆಟ್ಟವೇರುವ 79ರ ಹರೆಯದ ಆತನ ನಿಲುವು, ಬಣ್ಣ, ಬಿಗಿಯಾದ ಮುಖದ ಸ್ನಾಯುಗಳನ್ನು ಗಮನಿ ಸುತ್ತಿದ್ದರೆ ಅವನು ಹೇಳಿದ್ದೆಲ್ಲವೂ ಸತ್ಯ ಎನ್ನಲೇಬೇಕು. ಆದರೆ ಹಾಗಂತ ಹೌದಾ ಎಂದು ಆ ಬಳ್ಳಿಗಳ ರುಚಿ ನೋಡಲು ತಪ್ಪಲುಗಳನ್ನೆಲ್ಲ ಅರೆದು ಬಾಯಿಗಿಟ್ಟುಕೊಳ್ಳುವ ಮೀಟರೂ ಬೇಕಲ್ಲ. ಅದಾಗಲಿಲ್ಲ ಬಿಡಿ.

ಇದೆಲ್ಲ ದಕ್ಕುವುದು ಅಲೆಮಾರಿಯಾಗಿ ಮೇಘಾಲಯದ ದೇವರ ಕಾಡಿಗೆ ಚಪ್ಪಲಿ ಕಳಚಿ ಬರಿಗಾಲಲ್ಲಿ ಕಾಲಿಕ್ಕಿದಾಗ. ಅದಕ್ಕೆ ಹೇಳಿದ್ದು ಈ ಕಾಡಿಗೆ ಕಾಲಿ ಡುವಂತಿಲ್ಲ. ಏನಿದ್ದರೂ ಮೆತ್ತಗೆ ನಡೆಯಬೇಕು. ಕಾಲಿಟ್ಟಲೆಲ್ಲ ಹುಲ್ಲು ಹಾಸು ಮೇಲು ಸುಪ್ಪತ್ತಿಗೆಯ ಫೀಲು ಕೊಡುತ್ತವೆ. ಮಾವ್ ಎಂದರೆ ಹೆಬ್ಬಂಡೆ ಅಥವಾ ಭಾರಿ ಶಿಲಾ ಬೆಟ್ಟ ಎಂದರ್ಥ. ಮೇಘಾಲಯದ ಆದಿವಾಸಿಗಳ ಭಾಷೆಯಲ್ಲಿ. ಅಂತಹ ಕಲ್ಲಿನ ಅಗಾಧ ಸರಣಿಯ ಬೆಟ್ಟಗಳ ತುದಿಯಲ್ಲಿ
ಬೆಳೆದಿರುವ ಅತ್ಯಂತ ದಟ್ಟ ಮತ್ತು ಕಾಯ್ದಿಟ್ಟ ಕಾಡು ಪ್ರದೇಶವನ್ನು ಮೊದಲು ತಲುಪಿದ್ದು ೧೮೭೮ರ ಕಾಲಾವಧಿ ಯಲ್ಲಿ ಗ್ರಿಫಿತ್ ಗ್ರಾನ್ಮಾರ್ ಎಂಬ ಬ್ರಿಟೀಷ್ ಅಧಿಕಾರಿ.

ಕುದುರೆ ದೌಡಾಯಿಸುತ್ತಾ ನಡೆದೇ ನಡೆದ ಗ್ರಿಫಿತ್ ಗುಡ್ಡಗಳನ್ನು ಏರುತ್ತಲೇ, ತಟಕ್ಕನೆ ಮತ್ತೆ ಮೇಲಕ್ಕೆ ಏರಲಾರದೆ ನಿಂತು ಹೋದಾಗ ಸುತ್ತ ನೋಡಿ ದರೆ ಅಲ್ಲಿ ಆಗಿನ ಆದಿವಾಸಿಗಳ ತಂಡ ಅವನನ್ನು ಸುತ್ತುವರೆದಾಗಿತ್ತು. ಹಾಗೆ ಅಲ್ಲಿನ ಸಕಲ ನೈಸರ್ಗಿಕ ಸಂಪತ್ತನ್ನು ಚಪ್ಪಲಿ ಪಾದರಕ್ಷೆ ಇತ್ಯಾದಿ ಧರಿಸಿ ತುಳಿಯುವಂತಿಲ್ಲ ಎಂಬಷ್ಟು ವಗಾತಿಯಿಂದ ಕಾಯ್ದುಕೊಂಡದ್ದೇ ಮಾವ್ಪ್ಲಾಂಗ್ ಎಂಬ ದೇವರ ಕಾಡು. ಇವತ್ತು ಜಗತ್ತಿನ ಅತ್ಯಂತ ಖ್ಯಾತ ಆಯು ರ್ವೇದ ಮತ್ತು ನೈಜ ಚಿಕಿತ್ಸಾ ಸಂಶೋಧಕರೆಲ್ಲ ಚಪ್ಪಲಿ ಮಾತ್ರವಲ್ಲ ಪ್ಯಾಂಟೂ ಕಳಚಿಟ್ಟು (ಕಾರಣ ಪ್ಯಾಂಟಿನ ಜೇಬಿನಲ್ಲಿ ಕದ್ದು ಇಲ್ಲಿನ ಸೊಪ್ಪು ಸದೆ ಒಯ್ಯುತ್ತಾರೆಂದು ನಾಲ್ಕೈದು ದಶಕದ ಹಿಂದೆಯೇ ನಿಷೇಧಿಸಲಾಗಿದೆಯಂತೆ) ಮಿಣ್ಣಗೆ ಸದ್ದೇ ಮಾಡದೆ ಒಳಹೊಕ್ಕು ಕಣ್ಣಿಗೆ ಕಂಡದ್ದು ಅನುಭವಕ್ಕೆ ದಕ್ಕಿದ್ದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಹೋಗಿ ಪ್ರಯೋಗ ಮಾಡುತ್ತಿದ್ದರೆ ನಮ್ಮವರ ಕಣ್ಣಿಗೆ ಇದೆಲ್ಲ ಯಾಕೆ ಬಿದ್ದಿಲ್ಲವೋ ಗೊತ್ತಿಲ್ಲ.

ಹೆಚ್ಚಿನ ಪ್ರವಾಸಿಗರಿಗೂ ಈ ದೇವರ ಕಾಡು ದಕ್ಕಿದ್ದು ಕಡಿಮೆಯೇ. ಶಿಂಗ್ನಿಂದ ಕೇವಲ 28-30 ಕಿ.ಮೀ. ದೂರ ಇರುವ ಮಾವ್ಪ್ಲಾಂಗ್ ಪೂರ್ವ ಖಾಸಿ ಹಿಲ್ಸ್ ಜಿಯ ಬಲಕ್ಕಿರುವ ಅಪ್ಪಟ ನಿತ್ಯ ಹರಿದ್ವರ್ಣದ ಕಾಡು. ಖಾಸಿ ಮತ್ತು ಪೈನ್ ವೃಕ್ಷಗಳ ಜೊತೆಗೆ ಅಗಾಧ ಬಿದಿರು ಕಾಡುಗಳು ಇದರ ದಟ್ಟತೆಯನ್ನು ಹೆಚ್ಚಿಸಿ ದ್ದರೆ ಹತ್ತಾರು ಕಿ.ಮೀ. ದೂರದವರೆಗೂ ಒಳಭಾಗಕ್ಕೆ ಚಾಚಿಕೊಂಡಿರುವ ದುರ್ಗಮ ಕಣಿವೆಯ ಉದ್ದಕ್ಕೂ ಹಸಿರು ಹಾಸು ಹುಲ್ಲಿ ಮೆತ್ತೆಯಂತೆ ಇರುತ್ತದೆ. ಯಾವ ರತ್ನಗಂಬಳಿಯೂ ನೀಡದ ಅನುಭವ ಕಾಲ ಕೆಳಗೆ.

ಬದುಕಿನ ಧಡಾಪಡಿಯ ಪ್ರವಾಹಕ್ಕೆ, ಜನರ ಹಪಾಹಪಿಯ ಕೈಗೆ ದಕ್ಕದಂತೆ ಆದಿವಾಸಿಗಳ ಮೂಲಕ ಕಾಯ್ದುಕೊಳ್ಳಲಾದ ಕಾರಣ ಪ್ರತಿ ಮರ ರೆಂಬೆ ಕೊಂಬೆಯಾದಿಯಾಗಿ ಎಲ್ಲೂ ಜೌಗು ಹಿಡಿದ ಪರಿಸರದಲ್ಲಿ ಹಾವಸೆ ಕಟ್ಟಿ, ಬಳ್ಳಿ ಕುರುಚಲು ಬೆಳೆದು ಎಲ್ಲೂ ಹಸಿರೋ ಹಸಿರು. ರಾಜಧಾನಿ ಶಿಲಾಂಗ್ನಿಂದ ಒಂದೂವರೆ ಗಂಟೆ ಪಯಣ ಬೇಡುವ ದಾರಿ ತೀರ ಏರಿಳಿತ ಮತ್ತು ಕೊರಕಲು. ಇವತ್ತಿಗೂ ಟಾರು ಸಾಯಲಿ ಸರಿಯಾಗಿ ಮಣ್ಣು ಕೆದಕಿ ಸರಿ
ಪಡಿಸಿದರೂ ದಕ್ಕಿದ್ದಿಲ್ಲ. ಆಗೀಗ ಇಳಿಯುತ್ತಲೇ ಕುಸಿಯುತ್ತಲೇ ಇರುತ್ತದೆ. ಅಲ್ಲಿಂದ ಒಂದಷ್ಟು ಬೆಟ್ಟ ಗುಡ್ಡ ಕಣಿವೆ ಕೊರಕಲು ನದಿ ಪಾತ್ರ ಹೀಗೆ ಏರಿಳಿ ಯುತ್ತ ಆಗಿದರೆ ಖಾಸಿ ಹಿಲ್ಸ್‌ನ ದೇವರ ಕಾಡು ಎದುರಿಗೆ ತೆರೆದುಕೊಳ್ಳಲಾರಂಭಿಸುತ್ತದೆ.

ಒಂದು ಪ್ರದೇಶದ ಆವರಣ ನಮ್ಮನ್ನು ಹೇಗೆ ಪ್ರಭಾವಕ್ಕೆ ಸಿಲುಕಿಸುತ್ತದೆ ಎನ್ನುವುದಕ್ಕೆ ಇದು ಅತ್ಯಂತ ಸ್ಪಷ್ಟ ಉದಾಹರಣೆ. ಕಾರಣ ಕಾಡಿನ ಅಲ್ಲಲ್ಲಿ ನೈಜ ಶಬ್ದ ಬಿಟ್ಟರೆ ಇರುವ ನಿಶಬ್ಧತೆ ನಮ್ಮನ್ನು ಕೂಡಲೇ ಪಿಸುಗುಡುತ್ತಾ ಮಾತನಾಡಲು ಪ್ರೇರೇಪಿಸಿದರೆ ಕ್ರಮೇಣ ಒಳಭಾಗದಲ್ಲಿ ಅಕ್ಷರಶಃ ಬಾಯಿ ಮುಚ್ಚಿ ಕೊಂಡು ನಡೆಯತೊಡಗುತ್ತೇವೆ. ನೀರವತೆಯ ನಿಶಬ್ಧತೆಗೆ ಮನಸ್ಸು ಅಧ್ಯಾತ್ಮ ಭಾವ ಪಡೆಯುತ್ತದೆ. ಅಗಾಧ ಸೈಜಿನ ಮರಮಟ್ಟುಗಳ ಜೊತೆಗೆ ಕಪ್ಪು ಶಿಲಾ ಸಾಲುಗಳ ಮೇಲೆಲ್ಲ ಎಂದರಲ್ಲಿ ಹಸಿರು ಹರಿದ್ವರ್ಣ ಆವರಿಸಿಕೊಂಡ ರೀತಿ ಮೂಕವಿಸ್ಮಿತರನ್ನಾಗಿಸುತ್ತದೆ.

ಬಳ್ಳಿಗಳು ಆವರಿಸಿದ ಕಾರಣ ಎಡೆಯೂ ಚಪ್ಪರದಂತಾಗಿ ಅಲ್ಲಲ್ಲಿ ನೆಲಕ್ಕೂ ವಾಪಸ್ಸು ನೆಲೆಯೂರಿ ಪ್ರದೇಶವನ್ನೆಲ್ಲ ಯಾವಾಗಲೂ ಕತ್ತಲಡರಿದಂತೆ ಮಾಡಿರುವುದರಿಂದ ಎಂಥಾ ಹೊತ್ತಿನಲ್ಲೂ ಒಳಾವರಣ ಛಾಯಾಗ್ರಹಣ ವಿಫಲವಾಗುತ್ತದೆ. ಉತ್ತಮ ಕೆಮೆರಾಗೆ ಅದೆಲ್ಲ ಸಾಧ್ಯವೇನೋ. ಆದರೆ ಆಗ ಇದ್ದುದರ ಒಳ್ಳೆಯ ರೀಲು ಕೆಮೆರಾದ ಕಾಲಾವಧಿ. ಈಗಿನ ಅದರ ಕಸರತ್ತು ಮಾಡುತ್ತಿದ್ದೆ. ಅದಕ್ಕೆಲ್ಲ ದಕ್ಕದ ವ್ಯಾವಹಾರ ಇದು. ಇದನ್ನೆಲ್ಲ ನೋಡಿ ಅನುಭವಿಸಬೇಕಾಗುವ ಜಗತ್ತಿಗೆ ಕೆಮೆರಾ ಕಣ್ಣು ಹೇಳಿ ಮಾಡಿಸಿದ್ದಲ್ಲ. ಕಣ್ಣಿಗೆ ದಕ್ಕುವ ಆ ದೃಶ್ಯ ವೈಭವ ಉಹೂಂ ರೆಕಾರ್ಡಿಂಗ್ ಸಾಧ್ಯವಿಲ್ಲ. ಈಗೀನ
ಜಗತ್ತಿಗೂ ಸಾಧ್ಯವಿಲ್ಲ. ಆದರೆ ನೇರ ನೋಟದ ಆ ವಾಸನೆ ಅದರ ಘಮ ಹನಿಯುತ್ತಲೆ ಇರುವ ಮಂಜಿನಂತೆ ಒz ಒz ಫೀಲು ಅದರ ಒಳಗಿನ ತೇವದೊ ಡನೆ ಸೇರಿದಾಗ ಬರುವ ಹೊಸ ಹಸಿರ ಘಮಲು ಉಹೂಂ.. ಅದಕ್ಕೆಲ್ಲ ಮತ್ತೊಮ್ಮೆ ಹೋಗಲೇ ಬೇಕು.

ಖಾಸಿ ಹಿಲ್ಸ್ ಡೆವಲಪ್‌ಮೆಂಟ್ ಅಥಾರಿಟಿ ಇದನ್ನೆಲ್ಲ ನಿಂತು ನೋಡಲು ಮತ್ತು ಶೆಲ್ಟರಿಂಗ್‌ಗೆ ಎಂದು ಸಣ್ಣ ಸಣ್ಣ ಆದಿವಾಸಿಗಳ ಸಿದ್ಧ ಮಾದರಿಯ ಅಟ್ಟಣಿಗೆ ಮನೆ ನಿರ್ಮಿಸಿ ಇಟ್ಟಿದೆ. ಅದಕ್ಕಾಗಿ ಶಿಲಾಂಗ್ನ ಬುಕಿಂಗ್ ಮತ್ತು ಎಲ್ಲ ಸಕಲ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಮಾವ್‌ಪ್ಲಾಂಗ್‌ನಲ್ಲೂ
ಅಽಕಾರಿ ವರ್ಗ ಇದ್ದರೂ ಒಳ ಭಾಗದ ಪ್ರವೇಶ ಈಗೀಗ ಕೆಲವೇ ಕೆಲವು ಸೀಮಿತ ಪ್ರದೇಶಕ್ಕೆ ಎಂದು ಕೇಳಿದ್ದೇನೆ. ಮೊದಲೆಲ್ಲ ಆದಿವಾಸಿಗಳ ಗೈಡ್ನಲ್ಲಿ (ಈಗಲೂ ಅವರೇ ಗೈಡ್ ಗಳು) ಎಷ್ಟೆಲ್ಲ ದೂರ ಒಳ ಸಂಚಾರ ಸಾಧ್ಯವಿತ್ತು. ನೆಲಕ್ಕೆ ಕಾಲಿಟ್ಟಲೆಲ್ಲ ಅನೂಹ್ಯ ಅನುಭವಕ್ಕೆ ಮಾವ್‌ಪ್ಲಾಂಗ್ ಈಡು
ಮಾಡುತ್ತಿದ್ದುದು ಸುಳ್ಳಲ್ಲ. ಆದರೆ ಆಧುನಿಕ ಪ್ರಪಂಚದ ದಾಳಿ ಮತ್ತು ನೈಜ ಶಕ್ತಿಯ ನಿಸರ್ಗ ಸಂಪತ್ತನ್ನು ರಕ್ಷಿಸಲು ಮಾವ್‌ಪ್ಲಾಂಗ್‌ನ ಬಾಗಿಲು ಮುಚ್ಚುವ ಅನಿವಾರ್ಯತೆ ಇದ್ದೇ ಇತ್ತು. ಅದಾಗಿದೆ ಅನ್ನಿಸುತ್ತದೆ.

ಕಾರಣ ಇಲ್ಲಿ ಸಂಜೀವಿನಿ ಇದೆ ಎನ್ನುವವರೆಗೂ ಕತೆಗಳಿವೆ. ಅಮೆರಿಕದ ಮೆಡಿಕಲ್ ಫೌಂಡೆಷನ್ ಪ್ರಕಾರ ಇದೊಂದೇ ಕಾಡಿನಲ್ಲಿ ಆರು ಸಾವಿರ ಔಷಧಿಯ ಪ್ರಭೇದಗಳಿದ್ದರೆ, ಇಲ್ಲಿ ಬಂದು ಸಂಶೋಧನೆಗಾಗಿ ಉಳಿದು ಇ ಮುದಕನಾದರೂ ಊರು ಬಿಡಲೊಲ್ಲದ ಅಸ್ಟ್ರೇಲಿಯಾದ ಗೋವ್ಹಾಡ್ಸ್ ಪಕ್ಕದ ಚಿನಾಂಗ್ ಎಂಬ ಹಳ್ಳಿಯಲ್ಲಿ ಜೀವ ತೆಗೆಯುತ್ತಿದ್ದರೆ, ಇತ್ತ ಅಮೆರಿಕ ಅರ್ಧ ಸತ್ಯ ನುಡಿಯುತ್ತಿದೆ. ಇಲ್ಲಿ ಅದರ ಎರಡರಷ್ಟು ಗುರುತಿಸಬಹುದಾದ ಪ್ರಭೇದಗಳಿದ್ದರೆ ಲೆಕ್ಕಕ್ಕೆ ಸಿಗದಿರುವುದೇ ಶೇ.೯೦ಕ್ಕೂ ಹೆಚ್ಚು ಎನ್ನುತ್ತಾರೆ ಹಾಡ್ಸ್. ಇವನೊಂಥರಾ ಮಾವ್‌ಪ್ಲಾಂಗ್‌ನ ನಡೆದಾಡುವ ವಿಶ್ವ ಕೋಶ. ಅಸೆಂಟೂ ಕ್ಲೀಯರ್ ಇಂಡಿಯನ್ ಶೈಲಿ ಹಾಗಾಗಿ ಮಾತುಕತೆ ಮುಗಿಯುವುದೇ ಬೇಡ ಎನ್ನಿಸುತ್ತದೆ ಹಾಡ್ಸ್‌ನ ಜೊತೆಗೆ ಕೂತರೆ.

ಅವನು ವಿವರಿಸುತ್ತಾ ಇದ್ದರೆ ಹೌದೇ ಹೇಗೆ ನಂಬುವುದು ಏನು ಪ್ರಶ್ನೆ ಕೇಳುವುದು ಗೊತ್ತಾಗದೆ ತಬ್ಬಿಬ್ಬಾಗುತ್ತೇವೆ ಇದು ಪಕ್ಕಾ. ಅವನ ನಡೆ ನುಡಿ ಮತ್ತು ನಮ್ಮ ಗೈಡ್‌ಗಳ ದೇಹ ಪ್ರಕೃತಿ ಕಲರು ಖದರು ಛಾಮು ನೋಡುತ್ತಿದ್ದರೆ ಇ ಇದ್ದು ಬಿಟ್ಟರೆ ಅನ್ನಿಸಿದಿರಲಾರುದು. ಅಪ್ಪಟ ಒದ್ದೆ ಮರುಭೂಮಿ ಮೇಘಾ ಲಯದಲ್ಲಿ ಸಾಮಾನ್ಯವಾಗಿ ಕಾಡು ನಿಲುವುದಿಲ್ಲ. ಏನಿದ್ದರೂ ತೊಳೆದು ಹೋಗುವುದೇ ಜಾಸ್ತಿ ಆದರೂ ಪೂರ್ವ ಖಾಸ್ಸಿ ಯಕೆ ದೇವರಕಾಡು ತಡೆದಿದೆ? ಕಾರಣ ಮೌಸನ್ ರ್ಯಾಮ್ ಮತ್ತು ಅದರ ಬೆನ್ನಿಗೆ ಇರುವ ಇಳಿಜಾರ ನಂತರದ ಪರಿಧಿಯಲ್ಲಿ ಇದು ಬರುವುದರಿಂದ ಹೊಡೆತ ತಪ್ಪಿಸ್ಕೊಳ್ಳುವ ಮಾವ್‌ ಪ್ಲಾಂಗ್‌ಗೆ ದೇವರ ಶ್ರೀರಕ್ಷೆಯೂ ಇದೆಯಂತೆ, ಎಷ್ಟೆಂದರೂ ದೇವರ ಕಾಡಲ್ಲವೇ? ಇರಬಹುದೆನ್ನುತ್ತಾ ನನ್ನ ಬರಿಗಾಲನ್ನು ಅಂಗೈನಿಂದ ನೇವರಿಸಿ ಕೊಳ್ಳುತ್ತಾ ಆ ತೇವಕ್ಕೆ ಮುದವಾಗುತ್ತಾ ಹೊರಕ್ಕೆ ಹೆಜ್ಜೆ ಇಟ್ಟಿದ್ದೆ.