ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ವಿಶ್ವದ ಯಾವುದೇ ಮೂಲೆಯಲ್ಲಿ ಉತ್ಖನನ ನಡೆದರೂ ಅಲ್ಲಿ ಹಿಂದೂ ಮೂರ್ತಿಗಳು ಹಿಂದೂ ದೇವರುಗಳ ಭಗ್ನಮೂರ್ತಿಗಳ
ಅವಶೇಷಗಳು ಮೇಲೇಳುತ್ತವೆ. ಸನಾತನ ಧರ್ಮದ ಅಸ್ತಿತ್ವದ ಕುರುಹುಗಳು ಕಂಡುಬರುತ್ತಿವೆ.
ವಿಶ್ವದ ಅಲ್ಪಸಂಖ್ಯಾತರು, ಭಾರತದ ಬಹುಸಂಖ್ಯಾತ ಹಿಂದೂಗಳು ಧಾರ್ಮಿಕ ಅನಾಥರಲ್ಲ. ವೇದ ಉಪನಿಷತ್ತು ಪುರಾಣಗಳ ಅಡಿಪಾಯದ ಬೇರಿನಲ್ಲಿ ಅರಳಿದ ಪರಧರ್ಮ ಸಹಿಷ್ಣುಹಿಗಳು. ಶತಮಾನಗಳಿಂದ ತಮ್ಮ ಧರ್ಮದ ಮೇಲೆ ನಿರಂತರ ದಾಳಿ
ನಡೆಯುತ್ತಿದ್ದರೂ ಅದನ್ನು ಸಹಿಸಿಕೊಂಡು ನಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡವರು.
ಇತಿಹಾಸದಲ್ಲಿ ಯಾವೊಬ್ಬ ರಾಜನೂ ಮಸೀದಿ ಅಥವಾ ಅನ್ಯ ಧರ್ಮಿಯರ ಕಟ್ಟಡಗಳನ್ನು ನಾಶ ಮಾಡಿ ಅದರ ಮೇಲೆ ಸಮಾಧಿಯನ್ನು ಕಟ್ಟಿದವರಲ್ಲ. ವಿಶ್ವದಲ್ಲಿ ಇದುವರೆಗೂ ಧರ್ಮಾಂಧತೆಯಿಂದ ಯಾವುದೇ ಹಿಂದೂ ಸಂಘಟನೆಯು ಭಯೋತ್ಪಾದನೆಯ ಮೂಲಕ ಜನರ ಸಾವಿಗೆನೋವಿಗೆ ಕಾರಣರಾಗಿಲ್ಲ. ಅನ್ಯಧರ್ಮಿಯರನ್ನು ಅಣುಕಿಸಿದವರಲ್ಲ ಪರ ಧರ್ಮವನ್ನು ನಿಂದಿಸಿ ಪುಸ್ತಕದ ಬದನೆಕಾಯಿ ಬೆಳೆದವರಲ್ಲ. ತಾಯಿಯನ್ನು ಒಂದು ಹೆಣ್ಣೆಂದು, ರಾಷ್ಟ್ರದ್ವಜವನ್ನು ತುಂಡು ಬಟ್ಟೆಯೆಂದು ಗಂಗೆತುಂಗೆ ಕಾವೇರಿಯನ್ನು ಕೇವಲ ನೀರೆಂದು ಹಾಲುಣಿಸುವ ಗೋವನ್ನು ಪ್ರಾಣಿ ಎಂದು ಭಾವಿಸುವವನಲ್ಲ.
ತನಗೆ ಉಪಕರಿಸುವ ಮಣ್ಣು ಊರು ಮನೆ ವಿದ್ಯೆ ವಾಹನ ಕೊನೆಗೆ ಅತಿಥಿದೇವೋಭವ ಎಂದು ಅತಿಥಿಗಳನ್ನೂ ಸಹ ದೈವಿಕವಾಗಿ ಭಾವನೆಯಲ್ಲಿ ಗೌರವಿಸಿ ನಡೆದುಕೊಳ್ಳುವುದೇ ಹಿಂದೂಧರ್ಮ. ಇದನ್ನೇ ಸರ್ವೋಚ್ಚ ನ್ಯಾಯಾಲಯವು ಹಿಂದೂ ಎಂಬುದು
ಒಂದು ಧರ್ಮವಲ್ಲ ಅದು ಬದುಕುವ ಒಂದು ಶೈಲಿ ಅಥವಾ ರೀತಿ ಎಂದು ವ್ಯಾಖ್ಯಾನಿಸಿದೆ. ಇಂಥ ಧರ್ಮ ಇನ್ನಿತರ ಧರ್ಮಗಳಂತೆ ಯಾವುದೇ ಒಬ್ಬ ವ್ಯಕ್ತಿಯಿಂದ ಆರಂಭಗೊಂಡಂತೆ ಸನಾತನ ಧರ್ಮಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ವಿಶ್ವಕ್ಕೆ ಜ್ಞಾನ ವಿಜ್ಞಾನ ಸಂಸ್ಕೃತಿ ಯೋಗ ಧ್ಯಾನ ಸಹಿಷ್ಣುತೆ ಹೀಗೆ ಎಲ್ಲವನ್ನೂ ನೀಡಿದ ಸನಾತನ ಧರ್ಮದಂತೆ
ಜಗತ್ತಿನಲ್ಲಿ ಮತ್ತೊಂದಿಲ್ಲ.
ಶತಮಾನಗಳಿಂದ ಹಿಂದೂಗಳ ಆತ್ಮಾಭಿಮಾನದ ಕನಸಾಗಿದ್ದ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರವು ನಿರ್ಮಾಣಗೊಳ್ಳುತ್ತಿದೆ. ಮಹಾ ಸೋಜಿಗವೆಂದರೆ ಶ್ರೀರಾಮನ ಮಂದಿರಕ್ಕೆ ಶಂಕುಸ್ಥಾಪನೆ ಮಾಡುವ ಕಾಲಕ್ಕೆ ಇಡೀ ವಿಶ್ವವೇ
ಕಿಷ್ಕಿಂದೆಯ ವಾನರರಂತೆ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದು. ಕರೋನಾ ಕಂಟಕ ದಿಂದ ವೈರಾಣುಗಳು ಸಾಂಕ್ರಾಮಿಕವಾಗುವುದನ್ನು ತಡೆಯಲು ವಿಶ್ವದ ಎಲ್ಲಾ ದೇಶದ ನಾಗರಿಕರು ಮುಖಕ್ಕೆ ಮಾಸ್ಕ್ ಧರಿಸಲೇ ಬೇಕಾಯಿತು.
ಕಾಕತಾಳೀಯವೆಂದರೆ ಹೀಗೆ ಬಣ್ಣಬಣ್ಣದ ಮುಖಗವಚವನ್ನು ಧರಿಸಿದಾಗ ನಮ್ಮ ಮುಖಗಳು ಹನುಮನ ಮೂತಿಯಂತೆ ಕಾಣುತ್ತಿದ್ದದ್ದು ಸುಳ್ಳಲ್ಲ. ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರು ಅಡಿಗಲ್ಲಿನ ಪೂಜೆ ಶಾಸದಲ್ಲಿ ಪಾಲ್ಗೊಂಡಾಗ ಅವರು
ಧರಿಸಿದ್ದ ಮುಖಗವಚಿನಿಂದಾಗಿ ಅವರ ಮುಖ ಹನುಮನ ಮುಖವನ್ನು ಹೋಲುತ್ತಿತ್ತು. ಎಲ್ಲಕ್ಕಿಂತ ವಿಚಿತ್ರವೆಂದರೆ ಅಂದು ಲಾಕ್‌ಡೌನ್‌ನಿಂದಾಗಿ ಮನುಷ್ಯರು ಪರಿಶುದ್ಧರಾಗಿ ಮನೆಯೊಳಗೆ ಕುಳಿತು ಕೊಂಡರೆ ಕಾಡಿನ ಪ್ರಾಣಿಪಕ್ಷಿಗಳು ಮಹದಾನಂದ
ದಿಂದ ನಲಿದಾಡಿದವು.
ಪ್ರಧಾನಿ ಮೋದಿಯವರ ಪ್ರಬುದ್ಧ ರಾಜತಾಂತ್ರಿಕತೆಯ ಪರಿಣಾಮದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಎಂಬ ಮುಸ್ಲಿಂ ಶೇಖ್ ಅಧಿಪತಿಗಳ ದೇಶದಲ್ಲಿ ಬರೋಬ್ಬರಿ ೧೬.೭ ಎಕರೆ ಪ್ರದೇಶದಲ್ಲಿ ಬೃಹತ್ ಹಿಂದೂ ದೇವರುಗಳ ದೇವಾಲಯ ತಲೆ ಯೆತ್ತುತ್ತಿದೆ. ಇದು ಯಾವುದೇ ಒತ್ತಡ ಬೆದರಿಕೆ ತಂತ್ರದಿಂದಲ್ಲ. ಅದು ಅರಬ್ ದೇಶದ ಹೃದಯ ಶ್ರೀಮಂತಿಕೆ ಮತ್ತು ಪರಮ ಪರಧರ್ಮ ಸಹಿಷ್ಣುಗಳಾದ ಹಿಂದೂಗಳಿಗೆ ಅವರು ನೀಡುತ್ತಿರುವ ಮಹಾಗೌರವದ ಸಂಕೇತ. ಹೀಗೆ ಜಗತ್ತಿನಾದ್ಯಾಂತ
ಹಿಂದೂಗಳು ಗೌರವಿಸಲ್ಪಡುತ್ತಿದ್ದಾರೆ.
ಇಸ್ಕಾನ್ ಸಂಸ್ಥೆಯ ಮಹಾಕಾರ್ಯದಿಂದಾಗಿ ಇಂದು ಭಗವದ್ಗೀತೆಯನ್ನು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅದರ ಸಾರವನ್ನು ಮನಗಂಡು ಅದನ್ನು ಅರಿತುಕೊಂಡು ಬದುಕನ್ನು ಬದಲಿಸಿಕೊಳ್ಳುತ್ತಿದ್ದಾರೆ. ಆದರೆ ಹಿತ್ತಲಿನ ಗಿಡ ಮದ್ದಲ್ಲ ಎಂಬಂತೆ ಭಾರತ
ದೇಶದೊಳಗೆ ದೇವಾಲಯಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇದೆ. ಆಂಧ್ರಪ್ರದೇಶದಲ್ಲಿ ಕಳೆದ ಆರು ತಿಂಗಳು ಗಳಿಂದ ಅನೇಕ ದೇವಾಲಯಗಳ ಮೇಲೆ ದಾಳಿಗಳಾಗಿವೆ. ಮೊದಲಿಗೆ ದೇವಾಲಯದ ಹೊರಗೆ ನಿಲ್ಲಿಸಲಾಗಿದ್ದ ರಥಗಳಿಗೆ ಬೆಂಕಿಯಿಟ್ಟು ಸುಡಲಾಯಿತು. ಈಗ ಏಕಾಏಕಿ ಪವಿತ್ರವಾದ ಗರ್ಭಗುಡಿಯೊಳಗೇ ನುಗ್ಗಿ ಶತಮಾನಗಳ ಹಿಂದಿನ ಅಮೂಲ್ಯ ವಾದ ವಿಗ್ರಹಗಳನ್ನು ಹೊಡೆದುರುಳಿಸಲಾಗುತ್ತಿದೆ.
ಇದು ಹಿಂದೂಗಳ ಅತಿಯಾದ ಸಹಿಷ್ಣುತೆ ಒಳಗೊಂಡ ಸ್ವಾಭಿಮಾನಹೀನ ಮತ್ತು ಸ್ವಯಂಕೃತ ಅಪರಾಧದ ಪ್ರತಿಫಲ. ಅಲ್ಲಿನ ಮುಖ್ಯಮಂತ್ರಿ ಯಾದವನು ಯಾವುದೇ ಮುಸ್ಲಿಂ ಮೂಲಭೂತವಾದಿಯಲ್ಲ ಅನ್ಯಧರ್ಮಿಯ ಸರ್ವಾಧಿಕಾರಿಯೂ ಅಲ್ಲ. ಆತ ಹಿಂದೂ ಮನೆತನದವನಾಗಿದ್ದು, ಕೇವಲ ಇತ್ತೀಚೆಗಷ್ಟೇ ಅವನಪ್ಪ ತನ್ನ ಪಕ್ಷದ ಅದಿನಾಯಕಿಯ ಪಾದನೆಕ್ಕುವ ಗುಲಾಮಗಿರಿಯ ಸಂಕೇತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವ. ಅಂಥವರನ್ನೇ ಆರಿಸಿ ಅಧಿಕಾರ ನೀಡಿ ಈಗ ವಿರೋಧಿಸುತ್ತಿದ್ದಾರೆ.
ಈಗ ನೋಡಿ ಮತಾಂತರದ ದಾಳಿ ಏಕಾಏಕಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೇ ವಕ್ಕರಿಸಿಬಿಟ್ಟಿದೆ. ಅಲ್ಲಿನ ತೆಲುಗರು ಎಂಥ ಅವಿವೇಕಿಗಳೆಂದರೆ ಅಲ್ಲಿನ ಸಿನಿಮಾಗಳಲ್ಲೂ ಮತಾಂತರದ ಮಹಾತಾಯಿ ಮದರ್ ಥೆರೆಸರನ್ನು ವೈಭವಿಕರಿಸುವ ಮತ್ತು
ಮುಸ್ಲಿಂರನ್ನು ಓಲೈಸುವ ಪಾತ್ರಗಳನ್ನು ಸನ್ನಿವೇಶಗಳನ್ನು ಅನವಶ್ಯಕವಾಗಿ ತುರುಕುತ್ತಾರೆ. ರಾಜಕಾರಣಿಗಳ ವೋಟ್‌ಬ್ಯಾಂಕ್ ನಂತೆ ಅಲ್ಲಿನ ಕಲಾವಿದರಿಗೂ ಓಲೈಕೆಯ ತೆವಲು. ಆದರೀಗ ದೇವಾಲಯಗಳ ಮೇಲಿನ ದಾಳಿಗಳಿಂದ ಕಂಗೆಟ್ಟು ಪಕ್ಷಭೇದವಿಲ್ಲದೆ
ಜಗನ್ಮೋಹನರೆಡ್ಡಿಯ ಮತಾಂತರಿ ಗಂಡಾಂತರಕಾರಿ ಸರಕಾರದ ಮೇಲೆ ಮುಗಿಬಿದ್ದಿವೆ.
ಅಲ್ಲಿನ ನೊಂದ ಹಿಂದೂಗಳು ನೀನೂ ನಿನ್ನಪ್ಪನಂತೆ ಕಾಡಿನ ಹೆಣವಾಗುತ್ತೀಯ ಎಂದು ಶಪಿಸಲಾರಂಭಿಸಿದ್ದಾರೆ. ಸಮೀಕ್ಷೆ ಯೊಂದರ ಪ್ರಕಾರ ಭಾರತದಲ್ಲಿ ದಿನಕ್ಕೆ ೧೪ ಸಾವಿರಮಂದಿ ಹಿಂದೂಗಳು ಅಕ್ರಮವಾಗಿ ಮತಾಂತರಕ್ಕೆ ಒಳಗಾಗುತ್ತಿದ್ದಾರೆ.
ಇಂಥ ಕೃತ್ಯಗಳನ್ನು ಹಿಂದೂಗಳು ಗಂಭೀರವಾಗಿ ಪರಿಗಣಿಸಿ ಸಹಿಷ್ಣುತೆಯನ್ನು ಕಡಿಮೆ ಮಾಡಿಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂಗಳ ಮನೆಯೊಳಗೆ ನುಗ್ಗಿ ದ್ವಂಸ ಮಾಡಿದರೂ ಆಗಲೂ ಸಹಿಷ್ಣುತೆಯೇ ಗೆಲ್ಲುತ್ತದೆ.
ಹಾಸನದಲ್ಲಿ ರಾಜ ವಿಷ್ಣುವರ್ಧನ ಕಾಲದ ಕಾಳಿಕಾ ದೇವಾಲಯದ ಅತ್ಯಮೂಲ್ಯವಾದ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನ ಗೊಳಿಸಿರುವುದನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕಿದೆ. ಮೊದಲು ಭಾರತೀಯರ ಸಂಸ್ಕೃತಿಯನ್ನು ಹಾಳುಗೆಡವಿದರೆ ನಂತರ ಅವರ ಧರ್ಮವೇ ನಶಿಸುತ್ತದೆ ಎಂಬ ಬ್ರಿಟಿಷರ ಸೂತ್ರದಂತೆ ಈಗ ದೇವಾಲಯಗಳ ಮೇಲೆ ದಾಳಿಮಾಡಿ ಧ್ವಂಸ ಮಾಡುವ ಯತ್ನಗಳು ಆರಂಭವಾಗಿದೆ. ಒಂದು ಧರ್ಮದ ಪುರಾತನ ಕುರುಹುಗಳು ಅದರ ಅಸ್ತಿತ್ವದ ಅಸ್ಮಿತೆಯಾಗಿರುತ್ತದೆ.
ಅಂಥದನ್ನೇ ನಾಶ ಮಾಡುತ್ತಾ ಹೊರಟರೆ ಮಾನಸಿಕವಾಗಿ ಬಲಹೀನರನ್ನಾಗಿಸಿ ಬಹುಬೇಗ ಧರ್ಮವನ್ನು ನಾಶಮಾಡಿ ಬಿಡಬಹು
ದಲ್ಲವೇ?. ಆದರೆ ಆಸ್ತಿಕ ಹಿಂದೂಗಳು ಇವೆಲ್ಲವನ್ನು ಸಹಿಸಿಕೊಂಡಿರುತ್ತಾನೆಯೇ ಹೊರತು ದುಷ್ಕೃತ್ಯಕ್ಕೆ ಇಳಿಯುವವನಲ್ಲ. ಏಕೆಂದರೆ ಧರ್ಮ ಸಂಸ್ಥಾಪನಾ ರ್ಥಾಯ ಸಂಭವಾಮಿ ಯುಗೇಯುಗೇ ನೀತಿನಷ್ಟೇ ನಂಬಿಕೊಂಡು ಶ್ರೀಕೃಷ್ಣನೇ ಅವತರಿಸಿ ಬರಲಿಬಿಡು ನಮಗ್ಯಾಕೆ ಉಸಾಬರಿ ಎನ್ನುತ್ತಾನೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಂಪಿ ಬೇಲೂರು ಹಳೇಬೀಡು ಗಳಂಥ ಐತಿಹಾಸಿಕ ದೇಗುಲಗಳು ಸ್ಮಾರಕಗಳಿಗೆ ಅಹರ್ನಿಶಿ ಸರ್ಪಗಾವಲಿನ ವ್ಯವಸ್ಥೆ ಮಾಡಬೇಕಿದೆ.
ಹಿಂದೂಗಳಿಗಿರುವ ಏಕೈಕ ಭಾರತ ದೇಶದಲ್ಲಿ ಹಿಂದೂ ದೇವಾಲಯಗಳಿಗೇ ಈ ಗತಿ ಬಂತೆಂದರೆ ಇನ್ನು ಪಾಕಿಸ್ತಾನ ಬಾಂಗ್ಲದೇಶ ದಲ್ಲಿರುವ ದೇವಾಲಯಗಳ ಗತಿಯೇನು?. ಅದೇ ಇಂಥ ದಾಳಿಗಳು ಚರ್ಚ್ಗಳ ಮೇಲಾಗಿದ್ದರೆ ಅಥವಾ ಮಸೀದಿಗಳ ಮೇಲಾಗಿದ್ದರೆ ಇಡೀ ದೇಶಕ್ಕೇ ಬೆಂಕಿ ಹಚ್ಚುತ್ತಿದ್ದರು. (ಅದೂ ವೋಟ್ ಬ್ಯಾಂಕ್ ಹೊಲಸು ತಿನ್ನುವ ಹಿಂದೂ ಧರ್ಮದ ರಾಜಕೀಯದಲ್ಲಿನ ಗುಲಾಮರೇ) ಭಾರತ ಅಸಹಿಷ್ಣುಗಳ ದೇಶ ಎಂಬ ಕಳಂಕವನ್ನು ಜಗತ್ತಿಗೇ ಮುಟ್ಟಿಸುತ್ತಿದ್ದರು.
ಹಿಂದೆ ೨೦೦೮ರಲ್ಲಿ ನಮ್ಮ ನಾಡಿ ಚರ್ಚ್‌ಗಳ ಮೇಲಿನ (ಮತಾಂತರಗಳ ಅಡ್ಡ ಪರಿಣಾಮದಿಂದ) ದಾಳಿಗಳು ಅಂತಾರಾಷ್ಟ್ರೀಯ
ಸುದ್ದಿಯಾಗಿ ಅಂದಿನ ಯಡಿಯೂರಪ್ಪನವರ ಬಿಜೆಪಿ ಸರಕಾರದ ಮೇಲೆ ದೊಡ್ಡ ಗೂಬೆಯಾಗಿ ಅಲಂಕರಿಸಿತು. ಆದರೀಗ ಆಂಧ್ರ ದಗುತ್ತಿರುವ ದೇವಾಲಯಗಳ ಮೇಲಿನ ದುಷ್ಕೃತ್ಯವನ್ನು ಯಾವುದೇ ಅಡ್ಡಕಸುಬಿ ನಾಯಕನೂ ಖಂಡಿಸುತ್ತಿಲ್ಲ. ಅಸಲಿಗೆ ಈ ವಿಚಾರವಾಗಿ ನಮ್ಮ ಮಾಧ್ಯಮಗಳು ರಾಹುಲ್ ಗಾಂಧಿ, ಸೋನಿಯಾಗಾಂಧಿ, ಮಲ್ಲಿಕಾರ್ಜುನಖರ್ಗೆ, ಸಿದ್ದರಾಮಯ್ಯನಂಥ
ಭಯಾನಕ ಜಾತ್ಯಾತೀತ ನಾಯಕರನ್ನು ಪ್ರಶ್ನಿಸುವ ಗೋಜಿಗೂ ಹೋಗಲಿಲ್ಲ.
ಇಂಥ ದೇಶವನ್ನು ಬಾಲಿವುಡ್‌ನ ಖಾನ್‌ಗಳು ಅಸಹಿಷ್ಣು ರಾಷ್ಟ್ರ ಎಂದು ಎದೆಬಡಿದುಕೊಳ್ಳುತ್ತಾರೆ. ಗಂಜಿಗಿರಾಕಿಗಳು ಪ್ರಶಸ್ತಿ
ಗಳನ್ನು ವಾಪಸ್ಸು ನೀಡುತ್ತಾರೆ. ಕ್ರಿಶ್ಚಿಯನ್ನರು ಎಲ್ಲರಿಗೂ ಏಸು ಒಬ್ಬನೇ ಎಂದು ಪ್ರಾರ್ಥಿಸುವುದು ಅವರ ನಂಬಿಕೆಯಾಗುತ್ತೆ.
ಮುಸಲ್ಮಾನರು ಸಂಪೂರ್ಣ ಜಗತ್ತು ಇಸ್ಲಾಂಗೆ ಶರಣಾಗಬೇಕು ಎಂದು ಬಯಸಿದರೆ ಅದು ಅವರ ಪವಿತ್ರ ಪ್ರಾರ್ಥನೆಯಾಗುತ್ತೆ. ಆದರೆ ಸ್ವಾಮಿ ವಿವೇಕಾನಂದರಂತೆ ನಾನೊಬ್ಬ ಹಿಂದೂ ಎನ್ನಲು ಹೆಮ್ಮೆ ಎಂದರೆ ಮುಸಲ್ಮಾನರಲ್ಲ ಕ್ರೈಸ್ತರಲ್ಲ ಖುದ್ದು
ಜನ್ಮತಃ ಹಿಂದೂಗಳೇ ಆತನನ್ನು ಕೋಮುವಾದಿ ಹಿಂದೂವಾದಿ ಎಂದು ದೂಷಿಸುತ್ತಾರೆ.
ಇಂಥ ವಿಪರ್ಯಾಸಗಳು ಜಗತ್ತಿನಲ್ಲೂ ಕಾಣಲು ಸಾಧ್ಯವಿಲ್ಲ. ಹಿಂದೂಗಳು ಆರಾಧಿಸುವ ಬದುಕಿನ ಭಾವನಾತ್ಮಕ ಸಂಬಂಧ ಹೊಂದಿರುವ ಹಿಂದೂ ದೇವತೆಗಳನ್ನು ಧರ್ಮಗ್ರಂಥಗಳನ್ನು ಅವಮಾನಿಸಿ ಅವಹೇಳನ ಮಾಡುವುದು ಇಲ್ಲಿ ವ್ಯಕ್ತಿಸ್ವಾತಂತ್ರ.
ಪಾಕಿಸ್ತಾನದಲ್ಲಿ ಮುಸಲ್ಮಾನ ವ್ಯಾಪಾರಸ್ಥನೊಬ್ಬ ಕುರಾನನ್ನು ಸುಡಬೇಕು ಎಂದು ಹೇಳಿದ ಕಾರಣಕ್ಕೆ ಆತನ ಲಕ್ಷಾಂತರ ಬೆಲೆ ಬಾಳುವ ಕಾರ್ಖಾನೆಯನ್ನು ಬೆಂಕಿ ಇಟ್ಟು ಸುಟ್ಟರು.
ಆದರೆ ಇಲ್ಲಿ ಭಗವದ್ಗೀತೆಗೆ ಬೆಂಕಿ ಇಡಿ ಎನ್ನುವ ಹಿಂದೂ ಎನಿಸಿರುವ ಅವಿವೇಕಿಗಳನ್ನು ಸುಡುವ ಅಸಹಿಷ್ಣುಹಿಗಳು ಹಿಂದೂ ಗಳಲ್ಲ ಎಂಬ ನಂಬಿಕೆಯೇ ಇವರ ಅತಿರೇಕಕ್ಕೆ ಇರುವ ಭಂಡ ಧೈರ್ಯ. ನಮ್ಮ ದೇಶದ ಸಂವಿಧಾನ ಬರೆದ ಡಾ.ಅಂಬೇಡ್ಕರ್ ಅವರನ್ನೂ ದೇವರೆಂದೇ ಭಾವಿಸುತ್ತಾರೆ. ಬಸವಣ್ಣನ ಕನಕಪುರಂದರರು ವಿಶ್ವೇಶ್ವರಯ್ಯನವರು ಧಾರ್ಮಿಕ ಪೀಠಾಧಿಪತಿಗಳನ್ನು ಸಾಕ್ಷಾತ್ ದೇವರೆಂದೇ ಪೂಜಿಸುತ್ತಾರೆ. ಅಷ್ಟೇ ಏಕೆ ರಾಜ್ ವಿಷ್ಣು ಅಂಬರೀಶ್ ರಂಥ ಕಲಾವಿದರನ್ನು ಐಎಎಸ್ ಅಧಿಕಾರಿ ಡಿ.ಕೆ.
ರವಿಯಂಥ ಪ್ರಾಮಾಣಿಕರ ಸಮಾಧಿಗಳನ್ನು ಸ್ಮಾರಕವನ್ನಾಗಿಸುವ ಅಭಿಮಾನಿಗಳು ಅವರನ್ನೆ ದೇವರೆಂದೇ ಭಾವಿಸಿ ಪೂಜ್ಯಸ್ಥಾನವನ್ನು ನೀಡುವುದು ಸಹಜ ಮನಸ್ಥಿತಿಯಾಗಿರುತ್ತದೆ.
ಆದರೆ ಒರ್ವ ಪ್ರೊಫೆಸರ್ ಶ್ರೀಕೃಷ್ಣನಿಗೆ ಎಷ್ಟು ಪತ್ನಿಯರಿದ್ದರು, ಏನು ಕುಡಿಯುತ್ತಿದ್ದರು, ಹನುಮ ಗುಲಾಮ, ಗಣೇಶ ವಿಕಾರ ಎಂಬ ವಿಕೃತ ವಾದ ಮಂಡಿಸುವ ಮನೋವಿಕೃತಿಗಳಿದ್ದಾರೆ. ಇವರಿಗೆ ಸಂಶೋಧನೆಯ ತೆವಲುಗಳಿದ್ದರೆ ರಾಜಕಾರಣಿಗಳಿಗೆ ಎಷ್ಟು ಅಕ್ರಮ ಸಂಬಂಧಗಳಿವೆ ಅವರಿಗೆ ಎಷ್ಟು ಅಧಿಕೃತ ಎಷ್ಟು ಅನಧಿಕೃತ ಪತ್ನಿಯರಿದ್ದಾರೆ ಸಮಾಜಕ್ಕೆ ವಂಚಿಸಿ ಯಾರ‍್ಯಾರು ಎಷ್ಟೆಷ್ಟು ಅಕ್ರಮ ಹಣ ಸಂಪಾದಿಸಿದ್ದಾರೆ ಎಷ್ಟೆಷ್ಟು ಅಕ್ರಮ ಅನೈತಿಕಗಳನ್ನು ನಡೆಸಿದ್ದಾರೆ ಎಂದು ಕಂಡುಹಿಡಿದು ಜಾಹೀರಾತುಪಡಿಸಲಿ.
ಒಬ್ಬ ಪ್ರಭಾವಿ ವ್ಯಕ್ತಿಗೆ ಹೆಂಡತಿ ಮಕ್ಕಳಿದ್ದರೂ ಅನಾಯಾಸವಾಗಿ ಚಿತ್ರನಟಿಯೊಬ್ಬಳು ತನ್ನ ಹೆಸರಿನ ಜತೆಗೆ ಪ್ರಭಾವಿ
ರಾಜಕಾರಣಿಯ ಹೆಸರನ್ನು ಹೇಗೆ ಸೇರಿಸಿಕೊಳ್ಳುತ್ತಾಳೆ, ಆತನೊಂದಿಗೆ ಆಕೆಯ ವಿವಾಹ ಯಾವ ಕಲ್ಯಾಣ ಮಂಟಪದಲ್ಲಿ ಯಾರ ಪೌರಹಿತ್ಯದಲ್ಲಿ ನಡೆಯಿತು ಎಂಬ ಸಂಶೋಧನೆಯನ್ನು ಮಾಡಲಿ. ಸರಕಾರದ ಆದಾಯ ವೆಚ್ಚಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಲಿ. ಅಥವಾ ಸಿಬಿಐ ಲೋಕಾಯುಕ್ತರಂಥ ಅಧಿಕಾರಿಗಳಿಗೆ ಮಾರ್ಗದರ್ಶರಾಗಲಿ. ಸಮಾಜಕ್ಕೆ ಕಿಂಚಿತ್ತಾ ದರೂ ಉಪಯೋಗವಾಗುತ್ತದೆ. ಅದನ್ನು ಬಿಟ್ಟು ನರಸತ್ತ ಹಿಂದೂಗಳ ಧಾರ್ಮಿಕ ವಿಚಾರಗಳನ್ನೇ ಆಗಾಗ ಕೆದಕುತ್ತಾ ಸಾರ್ವಜನಿಕರಿಂದ ಶಪಿಸಿಕೊಳ್ಳುತ್ತಾರಷ್ಟೆ.
ಈಗ ಕೆಲ ಸ್ವಾಮೀಜಿಗಳು ಸನಾತನವೇ ಬೇರೆ ಬಸವತತ್ತ್ವವೇ ಬೇರೆ ಎರಡಕ್ಕೂ ಸಂಬಂಧವೇ ಇಲ್ಲ. ವೇದಗಳೇ ಬೇರೆ ವಚನಗಳೇ ಬೇರೆ ಎಂಬ ಆಧುನಿಕ ವಾದ ಮಂಡಿಸುತ್ತಿದ್ದಾರೆ. ವೀರಶೈವರ ವೇದಿಕೆಗಳ ಸಮಾರಂಭಗಳ ಆರಂಭದಲ್ಲಿ ಸಹಜವಾದ ಗಣೇಶ
ಸರಸ್ವತಿಯ ಶ್ಲೋಕ ಕೈಬಿಟ್ಟು ಗಿಡಕ್ಕೆ ನೀರೆರೆದು ಆರಂಭಿಸುವುದು ಪದ್ಧತಿಗಳಾಗುತ್ತಿದೆ. ಪ್ರಭಾಕರ ಕೋರೆಯಂಥ ಶೈಕ್ಷಣಿಕ ಮುಖಂಡರು ರಾಜ್ಯಸಭಾ ಸ್ಥಾನ ಕೈತಪ್ಪಿದ ನಂತರ ನನ್ನದು ಬಸವತತ್ತ್ವ. ಶ್ರೀರಾಮನ ವಿಷಯ ನನಗೇಕೆ ಎಂಬಂತೆ ಪ್ರತಿಕ್ರಿಯಿ
ಸುತ್ತಾರೆ.
ತ್ರಿಮೂರ್ತಿಗಳಬ್ಬರಾದ ಲಯಕಾರ ಶಿವನ ಅಸ್ತಿತ್ವವೇ ಬದಲಾಗುತ್ತಿದೆ. ದಲಿತರ ಒಂದು ವರ್ಗ ಬುದ್ಧನೇ ಬೇರೆ ಮಹಾವಿಷ್ಣುವೇ ಬೇರೆ ಎಂಬ ತಿಳಿವಳಿಕೆಗೆ ಒಳಗಾಗಿದ್ದಾರೆ. ನಾಳಿನ ಗಣರಾಜ್ಯೋತ್ಸವವನ್ನು ಕುರುಬ ಸಮುದಾಯದವರು ದೇಶಕ್ಕಿಂತ
ರಾಯಣ್ಣನ ಬಲಿದಾನವನ್ನೇ ಪ್ರಮುಖವಾಗಿ ಪರಿಗಣಿಸುತ್ತಾರೆ. ಹಿಂದೂ ಧಾರ್ಮಿಕ ದೇವತೆಗಳಾದ ದೇವಿ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಸಾಮಾನ್ಯ ಪರಿಕಲ್ಪನೆ ಮರೆಯಾಗಿ ಆಯಾ ಜಾತಿಯ ಇತಿಹಾಸಿಕ ಪುರುಷರನ್ನೇ ದೇವರಾಗಿಸಿಕೊಂಡು ಜಾತಿಯನ್ನು ಗಟ್ಟಿಗೊಳಿಸುವ ಪ್ರಜ್ಞೆ ಮತ್ತು ಧಾವಾಂತ ಹೆಚ್ಚುತ್ತಿದೆ.
ಇವೆಲ್ಲವೂ ತಪ್ಪೇನಲ್ಲ. ಆದರೆ ಯಾವುದೋ ಒಂದು ದಿಕ್ಕಿನಲ್ಲಿ ಧರ್ಮ ದುರ್ಬಲಗೊಳ್ಳುತ್ತಿರುವುದು ಮಾತ್ರ ಸ್ಪಷ್ಟ. ಜಾತಿ ಮಠಗಳು ಜಾತಿ ನಾಯಕರುಗಳು ಹಿಂದೂ ಸಮಾಜವನ್ನು ಜಾತಿಯಾಧಾರಿತ ಕವಲುಗಳನ್ನಾಗಿಸುತ್ತಿರುವುದು ಶೋಚನೀಯ.
ಬ್ರಾಹ್ಮಣರು ಒಕ್ಕಲಿಗರು ಕೆಲ ಹಿಂದುಳಿದ ಜಾತಿಗಳವರಿಗೆ ಮಾತ್ರ ಶೈವ ವೈಷ್ಣವ ಗಣೇಶ ಹನುಮ ಅಯ್ಯಪ್ಪ ತಿರುಪತಿ ಧರ್ಮಸ್ಥಳ ಕುಕ್ಕೆ ಶೃಂಗೇರಿಯ ಅನುಭೂತಿ ಹೊಂದಿದೆ. ಜಗತ್ತಿಗೇ ತಾಯಿಬೇರು ಆಗಿರುವ ಸನಾತನ ಧರ್ಮಕ್ಕೆ ಇಂಥ ಬೆಳವಣಿಗೆಗಳು ನಿಜಕ್ಕೂ ಅಪಾಯಕಾರಿ.
ಆದರೆ ದುರಂತ ನೋಡಿ ಹಿಂದುತ್ವದ ಮುಖವಾಣಿಯಾಗಿರುವ ಸಂಘ ಪರಿವಾರ ಕೂಸಾದ ಬಿಜೆಪಿಯಲ್ಲಿ ವೀರಶೈವ
ಸಮು ದಾಯದ ಬಸವನ ಗೌಡ ಯತ್ನಾಳ್ ಪಾಟೀಲ್ ರಂಥ ಕಟ್ಟರ್ ಹಿಂದೂ ವಾದಿಯನ್ನು ಕಡೆಗಣಿಸಲಾಗುತ್ತಿದೆ. ಅನಂತ ಕುಮಾರ ಹೆಗಡೆಯಂಥವರ ಬಾಯಿಮುಚ್ಚಿಸಿ ಕೂರಿಸಿದೆ. ಪ್ರಮೋದ್ ಮುತಾಲಿಕ್ ರಂಥವರನ್ನು ದೂರವಿಡುತ್ತದೆ. ನಾಗೇಶ್, ಎಂಟಿಬಿ, ಗೋಪಾಲಯ್ಯರಂಥ ವರನ್ನು ಗೆಲ್ಲಿಸಿಕೊಂಡು ಮಂತ್ರಿಗಿರಿ ನೀಡುತ್ತದೆ. ನಮ್ಮ ದೇಶದ ಸಂವಿಧಾನ ಯಾವುದೇ ಧರ್ಮಕ್ಕೆ ವಿರೋಧ ವಾಗಿಲ್ಲ. ಹಿಂದೂ ಧರ್ಮ ಸಂಸ್ಕೃತಿಯ ಉಳಿವಿಗೆ ಅನೇಕ ಅವಕಾಶ ಆದ್ಯತೆಗಳನ್ನು ನೀಡಿದೆ. ಆದರೆ ರಾಜಕಾರಣಿಗಳ ಭಾವಕ್ಕೆ ಧಾರ್ಮಿಕ ಯಂತ್ರಗಳಾದ ಮಠ ಮಂದಿರಗಳೇ ದಿಕ್ಕೆಟ್ಟಿರುವುದು ದುರಂತ.