Thursday, 12th December 2024

ಕೆಲ ಹಿಂದೂಗಳ ನಾಚಿಕೆಗೇಡುತನವಿದು

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಹಿಂದೆ ಭಾರತಕ್ಕೆ ಕಾಲಿಟ್ಟ ಇಸ್ಲಾಂ ದಾಳಿಕೋರರು, ದರೋಡೆಕೋರರಿಗೆ ಮಸೀದಿ-ಸಮಾಧಿಗಳನ್ನು ಕಟ್ಟಲು ಹಿಂದೂಗಳ ಬೃಹತ್ ದೇವಾಲಯಗಳೇ ಪವಿತ್ರ
ಸ್ಥಳವಾಗಿದ್ದವು. ಆದರೆ ಈಗಿನ ಕೆಲ ಹಿಂದೂಗಳಿಗೆ ಉಳಿದಿರುವ ಗುಡಿಗಳನ್ನೂ ಕಾಪಾಡಿಕೊಳ್ಳುವಂಥ ಮೂಲಭೂತ ನೈತಿಕತೆಯೇ ಇಲ್ಲದಾಗಿದೆ.

ಹಿಂದೂಗಳಿಗಿದು ಕಾಲವಲ್ಲ ಎಂಬುದು ರಾಜ್ಯದ ಜನತೆಗೆ ಮನದಟ್ಟಾಗುವ ಕಾಲ ಬಂದಿದೆ. ಕಾರಣ ಇದನ್ನು ಪುಷ್ಟೀಕರಿಸುವ ಘಟನೆಯೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಮಹಾನಗರಿಯ ಉಪ್ಪಾರಪೇಟೆ ಪೊಲೀಸ್ ಠಾಣೆಯ ಬಳಿಯಿರುವ ಪುರಾತನ ನಾಗರಕಟ್ಟೆಯಲ್ಲಿ ಪೂಜೆ ಸಲ್ಲಿಸಬೇಕಾದರೆ, ಬಿಬಿಎಂಪಿ-ಪೊಲೀಸರ ಅಪ್ಪಣೆ ಪಡೆಯಬೇಕೆಂಬ ನೋಟಿಸ್ ಜಾರಿ ಮಾಡಲಾಗಿದೆ.

ಎಲ್ಲಿಗೆ ಬಂತು ಹಿಂದೂಗಳ ಸ್ಥಿತಿ! ಅದ್ಯಾವ ಪುಢಾರಿಗಳು ಒತ್ತಡ ಹೇರಿದರೋ, ತಿದಿ ಒತ್ತಿದರೋ ಆ ನಾಗದೇವತೆಗಳೇ ಬಲ್ಲರು. ಪಾಪ, ಪೊಲೀಸರು ಅದ್ಯಾವ ಒತ್ತಡಕ್ಕೆ ಮಣಿದೋ ಏನೋ ನೋಟಿಸ್ ಜಾರಿಮಾಡಿಬಿಟ್ಟರು. ಇದನ್ನು ಪ್ರಶ್ನಿಸಿ ಯಾರಾದರೂ ಪ್ರಜ್ಞಾವಂತ ವಕೀಲರು ನ್ಯಾಯಾಲಯದ ಮೊರೆ ಹೋದರೆ ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವುದು ಪೊಲೀಸರೇ ಎಂಬುದು ಸ್ಪಷ್ಟ. ಆಗಿನ್ನೂ ಬೆಂಗಳೂರಲ್ಲಿ ಮಹಾನಗರ ಪಾಲಿಕೆಯೂ, ಉಪ್ಪಾರಪೇಟೆ ಪೊಲೀಸ್ ಠಾಣೆಯೂ ಹುಟ್ಟಿರಲಿಲ್ಲ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಈ ನಾಗರಕಟ್ಟೆ ಸ್ಥಾಪನೆಗೊಂಡಿತ್ತು. ಪುರಾತನ ಬೆಂಗಳೂರು ಎಂದರೆ ಈಗಿನ ‘ಪೇಟೆ’ಗಳ ಸಮೂಹವಾಗಿತ್ತು. ವಿಶಾಲವಾದ ಧರ್ಮಾಂಬುಧಿ ಕೆರೆಯೂ ಜೀವಂತವಾಗಿತ್ತು. ಅದರ ಪಕ್ಕದ ಪ್ರದೇಶದಲ್ಲಿದ್ದ ಈ ನಾಗರಕಟ್ಟೆಗೆ ಸ್ಥಳೀಯರು ಪೂಜೆ-ವ್ರತ ಆಚರಿಸುತ್ತಿದ್ದರು. ಅಂದು ಬೆಂಗಳೂರಿಗೆ ಬಂದವರಿಗೆ ಅಣ್ಣಮ್ಮದೇವಿ ಗುಡಿ, ಧರ್ಮಾಂಬುಧಿ ಕೆರೆ, ಈ ನಾಗರಕಟ್ಟೆ, ತುಳಸೀತೋಟ ಆಶ್ರಮ ಯಾತ್ರಾ ಸ್ಥಳವಾಗಿದ್ದವು. ತುಳಸೀ ತೋಟದಲ್ಲಿ ಸ್ವಾಮಿ ವಿವೇಕಾನಂದರು ಕೆಲ ದಿನಗಳ ಕಾಲ ನೆಲೆಸಿದ್ದರು. ಒಂದೇ ಸ್ಥಳದಲ್ಲಿ ೭ ಅಶ್ವತ್ಥ ಮರಗಳಿದ್ದ ಈ ನಾಗರಕಟ್ಟೆಯಲ್ಲಿ ಅಂದು ಸುಮಾರು ೧೨೦ ನಾಗರಕಲ್ಲು ಗಳಿದ್ದವು.

ನಾಗದೇವತೆ ಎಂಬುದು ಬಲು ಸೂಕ್ಷ್ಮದೈವ. ಪಾಪ-ಶಾಪ ವಿಮೋಚನೆ, ವಧು-ವರರಿಗೆ ಕಂಕಣಬಲ, ಸಂತಾನ ಪ್ರಾಪ್ತಿಯಲ್ಲಿನ ದೋಷ ನಿವಾರಣೆಗಲ್ಲದೆ
ಚರ್ಮವ್ಯಾಧಿಗಳನ್ನು ವಾಸಿಮಾಡಿ ಕೊಳ್ಳುವುದಕ್ಕೆ ಈ ನಾಗದೇವತೆಗಳ ಅನುಗ್ರಹ ಬಹು ಮುಖ್ಯ. ಇಂಥ ನಾಗರಕಲ್ಲುಗಳ ಸಮೂಹವಿರುವ ಈ ಶ್ರದ್ಧಾಕೇಂದ್ರವು ಕಳೆದ ೪೦ ವರ್ಷದವರೆಗೂ ಪವಿತ್ರವಾಗಿತ್ತು. ಆದರೆ ಕಾಲಕ್ರಮೇಣ, ‘ಸ್ಥಳೀಯರು’ ಎನಿಸಿಕೊಂಡವರೆಲ್ಲ ವಲಸಿಗರಿಗೆ ತಮ್ಮ ಮನೆ/ಜಾಗಗಳನ್ನು ಮಾರಿಕೊಂಡು ಹೋಗಲಾರಂಭಿಸಿದರು. ಧರ್ಮಾಂಬುಧಿ ಕೆರೆ ಮೆಜೆಸ್ಟಿಕ್ ಬಸ್ ನಿಲ್ದಾಣವಾದರೆ, ಸುಭಾಷ್‌ನಗರ-ಗಾಂಧಿ ನಗರಗಳು ಚಿತ್ರೋದ್ಯಮಿಗಳು, ಚಿತ್ರಮಂದಿರ
ಗಳು, ಶಾಪಿಂಗ್ ಮಾಲ್‌ಗಳಿಂದ ತುಂಬಿಕೊಂಡು ವಾಣಿಜ್ಯಕೇಂದ್ರವಾಗಿ ಬದಲಾಗಿಹೋಯಿತು.

ಹೀಗಾಗಿ, ಅಶ್ವತ್ಥಕಟ್ಟೆ/ನಾಗರಕಟ್ಟೆಗಳನ್ನು ಸುತ್ತುತ್ತಿದ್ದ ಸ್ಥಳೀಯ ಪರಂಪರೆ ಯಾವ ಮಟ್ಟದಲ್ಲಿ ನಶಿಸಿ ಹೋಯಿತೆಂದರೆ, ಅಷ್ಟೂ ನಾಗರಕಲ್ಲುಗಳು ಅಪ್ಪಟ
ತಿಪ್ಪೆಯಾಗಿಹೋದವು. ನಾಗರಕಟ್ಟೆಯ ಮುಂದೆ ಪಾದಚಾರಿಗಳು ಮೂತ್ರವಿಸರ್ಜನೆ ಮಾಡುವಂತಾಯಿತು. ಇನ್ನು, ಇತ್ತೀಚೆಗೆ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಕಾಮಗಾರಿ ಶುರುವಾದ ಮೇಲಂತೂ ಇನ್ನೂ ಹೆಚ್ಚು ಮಣ್ಣು ತುಂಬಿಕೊಂಡು ಮುಚ್ಚಿಯೇಹೋಯಿತು. ಆಗ ಯಾವ ಸರಕಾರವೂ, ಪೊಲೀಸರೂ, ಬಿಬಿಎಂಪಿ ಬಾಹುಬಲಿಗಳೂ ಇಂಥ ದೈವೀಸ್ಥಳವನ್ನು ಮೇಲೆತ್ತಲು ಯಾವನಿಗೂ ನೋಟಿಸ್ ಕೊಡಲಿಲ್ಲ. ಇಂಥ ಶ್ರದ್ಧಾಕೇಂದ್ರವನ್ನು ಉಳಿಸುವ ಪ್ರಜ್ಞೆ ಯಾರಲ್ಲೂ ಇರದೆ, ದೈವಸ್ಥಾನ ವನ್ನೇ ಜೀವಂತವಾಗಿ ಮಣ್ಣುಪಾಲು ಮಾಡಿಬಿಟ್ಟರು.

ಆದರೆ, ೨ ವರ್ಷಗಳ ಹಿಂದೆ ಚಿಕ್ಕಪೇಟೆಯ ಪಾಲಿಕೆಯ ಮಾಜಿ ಸದಸ್ಯ ಎ.ಎಲ್. ಶಿವಕುಮಾರ್ ಸ್ಥಳೀಯರೊಂದಿಗೆ ಈ ನಾಗರಕಟ್ಟೆಯನ್ನು ಉಳಿಸುವ ಕಾರ್ಯಕ್ಕೆ ಇಳಿದಾಗ ಜತೆಯಾಗಿದ್ದು ರಾಷ್ಟ್ರ ರಕ್ಷಣಾಪಡೆಯ ಪುನೀತ್ ಕೆರೆಹಳ್ಳಿಯವರ ತಂಡ. ಹೊಲಸು-ತಿಪ್ಪೆಯಲ್ಲಿ ಮುಳುಗಿಹೋಗಿದ್ದ ನಾಗರಕಟ್ಟೆಯ ಶುದ್ಧೀಕರಣಕ್ಕೆ ಅವರು ಸಂಕಲ್ಪಿಸಿದರು, ಶ್ರಮಿಸಿದರು. ಹಗಲುರಾತ್ರಿ ಲಾರಿಗಳಲ್ಲಿ ತಿಪ್ಪೆಯ ಸಂಗ್ರಹವನ್ನು ಸಾಗಿಸಿ ಪುನಶ್ಚೇತನದ ಕಾರ್ಯಕ್ಕಿಳಿದರು. ಭಗ್ನವಾಗಿದ್ದವನ್ನು ಹೊರತು ಪಡಿಸಿ ಸುಮಾರು ೭೦ ನಾಗಮೂರ್ತಿಗಳು ಪುನರ್ ಪ್ರತಿಷ್ಠಾಪನೆಗೆ ಯೋಗ್ಯವಾಗಿದ್ದವು. ಅವನ್ನೆಲ್ಲಾ ಸುಸ್ಥಿತಿಗೆ ತಂದು ಕಾಂಪೌಂಡ್ ಕಟ್ಟಿ ಬಣ್ಣ ಬಳಿದು
ಅಲಂಕರಿಸಿ ಮತ್ತೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಇವುಗಳೊಂದಿಗೆ ಗಣೇಶ-ಸುಬ್ರಹ್ಮಣ್ಯ- ಅಯ್ಯಪ್ಪ ಸೇರಿದಂತೆ ೪ ಮೂರ್ತಿಗಳನ್ನು ಶಿವಕುಮಾರ್ ಪ್ರತಿಷ್ಠಾಪಿಸಿದ್ದಾರೆ. ಇಂದು ಈ ನಾಗರಕಟ್ಟೆಗೆ ಆಸ್ತಿಕರು ಬಂದು ನೋಡಬೇಕು, ಕಾಲಿಟ್ಟರೆ ಬೇಗ ಹೊರಬರಲು ಮನಸ್ಸಾಗುವುದಿಲ್ಲ.

ಅಷ್ಟು ಸುಂದರ-ಭಕ್ತಿಪೂರ್ಣ ವಾತಾವರಣ ಇಲ್ಲಿದೆ. ಇಂಥ ಪುಣ್ಯದ ಕೆಲಸಗಳು ಶಿವಕುಮಾರ್, ಪುನೀತ್ ಕೆರೆಹಳ್ಳಿಯವರನ್ನು ಕಾಪಾಡಬಲ್ಲವು. ಜನರಿಗೆ ಆಮಿಷ ತೋರಿಸಿ ಗೆದ್ದುಬರುವ ರಾಜಕಾರಣಿಗಳಿರಬಹುದು, ಮತದಾರರೂ ತಮ್ಮ ಮನೆಯ ಮುಂದಿನ ಸುಸಜ್ಜಿತ ರಸ್ತೆ-ಮೋರಿಗಾಗಿ ಮತನೀಡಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಆದರೆ ನಮ್ಮ ಪರಂಪರೆಯನ್ನು ಸಾರುವ ಇಂಥ ದೊಡ್ಡ ನಾಗರಕಟ್ಟೆಯನ್ನೇ ನಿರ್ಲಕ್ಷಿಸಿ ಅದನ್ನು ತಿಪ್ಪೆಯಾಗಿಸುವಂಥ ಅಸಡ್ಡೆ ಮತ್ತು
ಸ್ವಾರ್ಥ ಮನೋಭಾವವಿದೆಯಲ್ಲಾ, ಅದು ನಿಜಕ್ಕೂ ನಾಗರಿಕರೆನಿಸಿಕೊಂಡವರ ಅನಾಗರಿಕತೆಯ ಪರಮಾವಧಿಯೂ ಹೌದು, ಹಿಂದೂಗಳ ಹೊಣೆಗೇಡಿತ
ನ-ನಾಚಿಕೆಗೇಡುತನಕ್ಕೆ ಸಾಕ್ಷಿಯೂ ಹೌದು!

ಅದೇ ಮುಸಲ್ಮಾನರನ್ನು ನೋಡಿ, ತಮ್ಮ ಪೂಜಾ ಸ್ಥಳದ ಗೋಡೆಗೆ ಒಂದು ಗೆರೆ ಬಿದ್ದರೂ ನೂರು ಜನ ಬಂದು ಮುಂದೆ ನಿಂತು ಸರಿಪಡಿಸುತ್ತಾರೆ. ಸ್ಥಳೀಯ
ಶಾಸಕ ಓಡಿಬಂದು ಕೆಲಸ ಮಾಡಿಕೊಡುವಂಥ ‘ಹವಾ’ ಇಟ್ಟಿರುತ್ತಾರೆ. ತಮ್ಮಿಚ್ಛೆಯಂತೆ ಮಸೀದಿ- ದರ್ಗಾಗಳನ್ನು ನಿರ್ಮಿಸಿಕೊಂಡು ಮೈಕುಗಳನ್ನು
ಕಟ್ಟಿ ‘ಅಜಾನ್’ ಮೂಲಕ ಭಕ್ತಿಭಾವ ಹೊಮ್ಮಿಸಿ ತಮ್ಮವರನ್ನು ಜಾಗೃತಗೊಳಿಸಿಕೊಳ್ಳುತ್ತಾರೆ. ಇನ್ನು ಕ್ರಿಶ್ಚಿಯನ್ನರಲ್ಲಿ ಮಿಷನರಿಗಳ ಏಜೆಂಟರು ಒಂದು ಪ್ರದೇಶಕ್ಕೆ ಕಾಲಿಟ್ಟರೆಂದರೆ, ಗುಡಿಸಲೋ ಮತ್ತೊಂದೋ ಅಲ್ಲೊಂದು ‘ದಿಢೀರ್ ಚರ್ಚ್’ ಸ್ಥಾಪಿಸಿಬಿಡುತ್ತಾರೆ.

ಅಮಾಯಕ ಹಿಂದೂಗಳ ಮನೆಮನೆಗೂ ತೆರಳಿ, ಹಿಂದೂದೈವಗಳ ಫೋಟೋ ಬದಲಾಗಿ ಏಸುವಿನ ಶಿಲುಬೆಯನ್ನು ನೆಟ್ಟು ಬರುತ್ತಾರೆ. ಆದರೆ ತಥಾಕಥಿತ ಹಿಂದೂಗಳು ಇರುವ ದೇವಾಲಯಗಳಲ್ಲಿನ ಗಂಟೆಗಳ ನಾದದಿಂದ ಸುತ್ತಮುತ್ತಲಿನಲ್ಲಿ ‘ಬದುಕುತ್ತಿರುವ’ ಹಿಂದೂಗಳಿಗೇ ಭಂಗ ವಾಗುತ್ತದೆಂದು ಅವಕ್ಕೆ ಬಟ್ಟೆ ಸುತ್ತಿ
‘ಸೌಂಡ್‌ಲೆಸ್’ ಮಾಡಿಟ್ಟಿರುತ್ತಾರೆ. ಇಂಥ ನಾಗರಕಟ್ಟೆಯಲ್ಲಿ ಧಾರ್ಮಿಕ ಆಚರಣೆ- ಸಂಘಟನೆ ಕೈಗೊಂಡರೆ, ಹಿಂದೂಗಳಲ್ಲಿನ ಧರ್ಮದ್ರೋಹಿಗಳೇ ಪಿತೂರಿ ಮಾಡಿ, ಅಧರ್ಮಿ ಹಿಂದೂ ನಾಯಕರಿಗೇ ಬಕೆಟ್ ಹಿಡಿದು ಅದನ್ನು ತಡೆಯಲು ಯತ್ನಿಸುವುದೂ ಇದೆ. ಅದರಲ್ಲೂ, ಸಂವಿಧಾನದ ಆಶಯವನ್ನು, ಸಂವಿಧಾನ ನೀಡಿರುವ ಹಕ್ಕುಗಳನ್ನು ಹತ್ತಿಕ್ಕಲು ಹಿಂದೂಗಳೇ ಸಂವಿಧಾನ-ವಿರೋಽ ಆಕ್ರಮಣವನ್ನು ತೋರುವುದಿದೆಯಲ್ಲಾ, ಅದು ಭವಿಷ್ಯಹೀನ ಮನಸ್ಥಿತಿಯ ದ್ಯೋತಕ.

ಇಷ್ಟಕ್ಕೂ, ಈ ನಾಗರಕಟ್ಟೆಯಲ್ಲಿ ಪೂಜಿಸಲು ಅಪ್ಪಣೆ ಪಡೆಯ ಬೇಕೆಂಬ ತಿಕ್ಕಲುವಾದ ಯಾವ ಮುಸಲ್ಮಾನರ ಬೇಡಿಕೆಯಲ್ಲ; ಅದು ಕೆಲ ಹಿಂದೂಗಳದ್ದೇ
ಹುನ್ನಾರವಾಗಿರುವುದು ಹಿಂದೂಗಳ ಅಧೋಗತಿಯ ಮಹಾದಿಕ್ಸೂಚಿ. ಹಿಂದೆ ಭಾರತಕ್ಕೆ ಕಾಲಿಟ್ಟ ಇಸ್ಲಾಂ ದಾಳಿಕೋರರು, ದರೋಡೆಕೋರರಿಗೆ ಮಸೀದಿ-ಸಮಾಧಿಗಳನ್ನು ಕಟ್ಟಲು ಹಿಂದೂಗಳ ಬೃಹತ್ ದೇವಾಲಯಗಳೇ ಪವಿತ್ರ ಸ್ಥಳವಾಗಿದ್ದವು. ಆದರೆ ಈಗಿನ ಕೆಲ ಹಿಂದೂಗಳಿಗೆ, ಉಳಿದಿರುವ ಗುಡಿಗಳನ್ನೂ ಕಾಪಾಡಿಕೊಳ್ಳುವಂಥ ಮೂಲಭೂತ ನೈತಿಕತೆಯೇ ಇಲ್ಲದಾಗಿದೆ.

ಮುಸಲ್ಮಾನ ಬಂಧುಗಳು ಪ್ರತಿ ಶುಕ್ರವಾರ ಸರಕಾರಿ ಮೈದಾನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಗಳಂದು ಮೈಸೂರು ರಸ್ತೆಯಂಥ ಹೆದ್ದಾರಿಯಲ್ಲೇ ನಮಾಜು ಮಾಡಲು ಅವಕಾಶ ಪಡೆಯುತ್ತಾರೆ. ಅವರನ್ನು ಪೊಲೀಸರೇ ನಿಂತು ಕಾಯುತ್ತಾರೆ. ದುರಂತವೆಂದರೆ, ದಶಕಗಳಿಂದ ಪೂಜಿಸಲ್ಪಡುತ್ತಿದ್ದ ಮತ್ತು ಕಾರಣಾಂತರಗಳಿಂದ ನಾಶವಾಗುತ್ತಿದ್ದ ದೇವಸ್ಥಾನವನ್ನು ಪುನಶ್ಚೇತನಗೊಳಿಸಿ ಧಾರ್ಮಿಕ ಆಚರಣೆ ಮಾಡುವುದಕ್ಕೆ ದೊಣೆನಾಯಕರ ಅಪ್ಪಣೆ ಪಡೆಯಬೇಕು! ಹಿಂದೆ ನಮ್ಮದೇ ಆಗಿದ್ದ ಪಾಕಿಸ್ತಾನ-ಬಾಂಗ್ಲಾದೇಶಗಳಲ್ಲಿ ಇಂಥ ದೌರ್ಜನ್ಯಗಳು ನಡೆಯುತ್ತಿವೆ; ಆದರೆ ಇಲ್ಲಿನ ಹಿಂದೂಗಳಿಗೂ ಅದು ಅನ್ವಯಿಸುವಂತಾಗಿರುವುದು ಕೆಲ ನರಸತ್ತ ಹಿಂದೂಗಳ ‘ಮಹಾಸಾಧನೆ’.

ಇಲ್ಲಿ ನೀಡಲಾಗಿರುವ ಚಿತ್ರಗಳನ್ನು ಗಮನಿಸಿದರೆ ಹೇಗಿದ್ದ ನಾಗರ ಕಟ್ಟೆ ಈಗ ಹೇಗಾಗಿದೆ ಎಂಬುದು ಗೊತ್ತಾಗುತ್ತದೆ. ಇಂಥ ಪುಣ್ಯದ ಕೆಲಸವನ್ನು ಯಾರೋ ಒಬ್ಬರು ಮಾಡಿರುವುದಕ್ಕೆ ಪ್ರತಿಯೊಬ್ಬ ಹಿಂದುವೂ ಹೆಮ್ಮೆ ಪಡಬೇಕು. ಅಷ್ಟಕ್ಕೂ, ಪುನೀತ್ ಕೆರೆಹಳ್ಳಿ ಅವರು ‘ನಾಗರಕಟ್ಟೆಯಲ್ಲಿ ಧಾರ್ಮಿಕ ಆಚರಣೆಗಾಗಿ
ಹಿಂದೂ ಕಾರ್ಯಕರ್ತರು ಕುಟುಂಬ ಸಮೇತರಾಗಿ ಬನ್ನಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡರೆ, ಅಲ್ಲಿಗೆ ಬರುವವರೇನು ಡಿ.ಜೆ.
ಹಳ್ಳಿ-ಕೆ.ಜೆ. ಹಳ್ಳಿಯಂತೆ ಪೊಲೀಸ್ ಠಾಣೆಗೇ ಬೆಂಕಿ ಹಚ್ಚಲು ಪೆಟ್ರೋಲ್ ಸಮೇತ ಬರುತ್ತಾರೆಯೇ?! ‘ಸಂಕಲ್ಪ ಹಿಂದೂ ರಾಷ್ಟ್ರ’ ಎಂಬುದು ಹಿಂದೂ
ಕಾರ್ಯಕರ್ತರ ಒಂದು ಬೌದ್ಧಿಕವಾದ ‘ಸಂಕಲ್ಪ’ ಮಾತ್ರವಷ್ಟೇ; ಅದೇನೂ ಜಿಹಾದಿಗಳಂತೆ ಪರಧರ್ಮದ ಮೇಲಿನ ಆಕ್ರಮಣವಲ್ಲ.

ಅಷ್ಟಕ್ಕೂ, ನೊಂದ-ಪ್ರಜ್ಞಾವಂತ ಹಿಂದೂಗಳ ಚಿಂತನೆಯಲ್ಲಿ ‘ಹಿಂದೂ ರಾಷ್ಟ್ರ’ದ ಬಯಕೆ ಚಿಗುರೊಡೆಯಲು, ಕಾಲಕಾಲಕ್ಕೆ ಹೇರಲಾದ ವಿದೇಶಿ ಸಿದ್ಧಾಂತಗಳು ಮತ್ತು ಹಿಂದೂ-ವಿರೋಧಿ ನೀತಿಗಳೇ ಕಾರಣ. ೧೯೪೭ರಲ್ಲಿ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಗಿ ಕಿತ್ತುಹೋದ ಮೇಲೆ, ಪುಣ್ಯಾತ್ಮ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರು ‘ಭಾರತ ಹಿಂದೂಗಳ ರಾಷ್ಟ್ರ’ದ ಬುನಾದಿ ಮೇಲೆ ಯೇ ಸಂವಿಧಾನವನ್ನು ರಚಿಸಿದ್ದರು. ಆದರೆ ೧೯೭೬ ರಲ್ಲಿ ಪ್ರಧಾನಿ ಇಂದಿರಾಗಾಂಽ ಅವರ ಕಾಂಗ್ರೆಸ್ ಸರಕಾರ ಸಂವಿಧಾನದ ೪೨ನೇ ತಿದ್ದುಪಡಿಯಲ್ಲಿ ‘ಸೆಕ್ಯುಲರ್’ ಪದವನ್ನು ಸೇರಿಸಿ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಭಾರತವನ್ನು ‘ಜಾತ್ಯತೀತ’  ರಾಷ್ಟ್ರವಾಗಿ ಬದಲಾಯಿಸಿತು.

ಅಂದಿನಿಂದ ಇಸ್ಲಾಂ ದಾಳಿಕೋರರ ಮುಂದುವರಿದ ಸಂತಾನಗಳಂತೆ, ಹಿಂದೂಗಳನ್ನು ದಿಕ್ಕಿಲ್ಲದವರಂತೆ ಕಂಡಿದ್ದಲ್ಲದೆ ಅಗತ್ಯಕ್ಕಿಂತಲೂ ಅತಿಯಾಗಿ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು, ಅತ್ತ ಅವರನ್ನೂ ಉದ್ಧಾರ ಮಾಡದೆ, ಕೇವಲ ಅಽಕಾರಕ್ಕಾಗಿ ಬಳಸಿಕೊಂಡ ರಾಜಕಾರಣಿಗಳು ಸಾವಿರಾರು ಕೋಟಿಗಳ ಒಡೆಯ ರಾದರೇ ಹೊರತು, ದೇಶದ ಪುರಾತನ ನಿವಾಸಿ ಗಳಾದ ಸನಾತನಿ ಹಿಂದೂಗಳಿಗೆ ಸಿಗಬೇಕಾದ ಪಾರಂಪರಿಕ ಮೌಲ್ಯಗಳು, ಪ್ರಾಶಸ್ತ್ಯ, ಆದ್ಯತೆ,
ಘನತೆ, ಗೌರವವನ್ನು ಕೊಡಲೇ ಇಲ್ಲ. ಜತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ನಡೆಯುತ್ತಿರುವ ಅಮಾನವೀಯ ಮತ್ತು ಭಯಾನಕ ಸ್ಥಿತಿ
ಗಳನ್ನು ದಿನವೂ ಮನಗಾಣುತ್ತಿರುವ ಹಿಂದೂಗಳಲ್ಲಿ ‘ಹಿಂದೂ ರಾಷ್ಟ್ರ’ದ ಕನಸು ಮಾತ್ರವಲ್ಲದೆ, ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ
ಕಾಯ್ದೆಗಳ ಅವಶ್ಯಕತೆಯ ಜಾಗೃತಿ ಮೂಡುತ್ತಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ‘ಭಾರತ ಹಿಂದೂರಾಷ್ಟ್ರವಾಗೇ ಇದೆ, ಆದರೆ ನೀನು ಹಿಂದೂ ಆಗುವುದು ಯಾವಾಗ?’ ಎಂಬ ಮುತ್ತಿನಂಥ ಪ್ರಶ್ನೆಯನ್ನು ಕೇಳಿ ದ್ದಾರೆ. ಹಿಂದೂಗಳೆನಿಸಿಕೊಂಡರು ಇದರ ಸೂಚ್ಯಾರ್ಥವನ್ನು ಆದಷ್ಟು ಬೇಗ ಗ್ರಹಿಸಿದರೆ ಒಳಿತು. ಒಟ್ಟಿನಲ್ಲಿ ನಾಗದೇವತೆಗಳ ಶಾಪವಂತೂ ಕೆಲ ಪಾಪಿಗಳಿಗೆ ತಟ್ಟದೇ ಬಿಡುವುದಿಲ್ಲ. ಅದಕ್ಕಾಗಿ ಕುಕ್ಕೆ-ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ, ಆಶ್ಲೇಷಬಲಿ, ಸರ್ಪದೋಷ ಪರಿಹಾರ ಮಾಡಿಕೊಂಡು ಬಂದರೂ ಮಾಡಿದ ಪಾಪಕ್ಕೆ ಕರ್ಮ ಬಲಿಹಾಕದೇ ಬಿಡುವುದಿಲ್ಲ. ಇದು ಆಸ್ತಿಕನ ನಂಬಿಕೆ!