Wednesday, 11th December 2024

ಹೀಗಾದರೆ ಪ್ರಜಾಪ್ರಭುತ್ವದ ರಕ್ಷಣೆ ಹೇಗೆ ಸಾಧ್ಯ ?

ವಿಶ್ಲೇಷಣೆ

ಶಶಿಕುಮಾರ್‌ ಕೆ.

೧೮ ನೇ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಸರಕಾರವು ರಚನೆಯಾಗಿ ಖಾತೆಗಳ ಹಂಚಿಕೆಯು ಸಹ ಮುಗಿದಿದ್ದು ಇನ್ನೇನು ಮೊದಲನೇ ಅಽವೇಶನ ನಡೆಯುವುದು ಬಾಕಿ ಇದೆ. ಆದರೆ ಈ ಚುನಾವಣೆಯ ಫಲಿತಾಂಶದ ನಂತರ ಲೋಕಸಭೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಕೆಲವು ಘಟನೆಗಳನ್ನು ಗಮನಿಸುತ್ತಾ ಹೋದರೆ ನಿಜಕ್ಕೂ ಆಘಾತವೆನಿಸುತ್ತದೆ. ಬಿಜೆಪಿ ಗೆದ್ದರೆ ದೇಶದ ಪ್ರಜಾಪ್ರಭುತ್ವ, ಸಂವಿಧಾನವನ್ನು ನಾಶ ಮಾಡುತ್ತಾರೆ ಎಂದು ಬಾಯಿ
ಬಡಿದುಕೊಳ್ಳುತ್ತಿದ್ದ so called ಪ್ರಜಾಪ್ರಭುತ್ವ ರಕ್ಷಕರು ಈಗ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾರೆ.

ಮೊದಲನೆಯದಾಗಿ ನಾನು ಹೇಳಲು ಹೊರಟಿರುವುದು ಈ ಬಾರಿ ಸಂಸತ್ತಿಗೆ ಮೂರು ಜನ ಭಯೋತ್ಪಾದನೆಯ ಹಿನ್ನೆಲೆಯುಳ್ಳ ಪ್ರತ್ಯೇಕತಾವಾದಿಗಳು ಆಯ್ಕೆಯಾಗಿದ್ದಾರೆ. ದುರಂತವೆಂದರೆ ಇವರಲ್ಲಿ ಇಬ್ಬರು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ಒಂದು ದಿನವೂ ಸಹ ಪ್ರಚಾರ ನಡೆಸಿಲ್ಲ ಆದರೂ ಸಹ ಜನ ಇವರನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದಾರೆ ಎಂದರೆ ಇದಕ್ಕಿಂತಲೂ ದುರ್ದೈವದ ಸಂಗತಿ ಬೇರೆ ಇನ್ನೇನಿದೆ. ೨೦೦೧ರಲ್ಲಿ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆದರೆ ಈಗ ಭಯೋತ್ಪಾದನಾ ಹಿನ್ನೆಲೆಯುಳ್ಳವರೇ ಸಂಸತ್ತಿಗೆ ಪ್ರವೇಶಿಸುತ್ತಿದ್ದಾರೆ ಎಂದರೆ ನಮ್ಮ ಸಂವಿಧಾನದ ಕೆಲವು ಲೂಪ್ ಹೋಲ್ ಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮು ಕ್ಷೇತ್ರದಲ್ಲಿ ಅಲ್ಲಿನ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದು ಸ್ಪರ್ಧಿಸಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ರಶೀದ್ ಶೇಕ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು , ಈತ ಪಕ್ಷೇತರನಾಗಿ ಸ್ಪರ್ಧಿಸಿ ಬರೋಬ್ಬರಿ ೨ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದ್ದಾನೆ. ಈತನು ಒಟ್ಟು ನಾಲ್ಕು ಲಕ್ಷಕ್ಕೂ ಅಽಕ ಮತಗಳನ್ನು ಪಡೆದಿದ್ದನು ಎಂದರೆ ಜನರ ಮನಸ್ಥಿತಿ ಹೇಗೆ ಇದೆ ಎಂಬುದಕ್ಕೆ ಇದೇ ಉದಾಹರಣೆ. ಈತ ಪ್ರತ್ಯೇಕತಾವಾದಿಗಳ ಜೊತೆ ಸೇರಿಕೊಂಡು ಜಮ್ಮು ಮತ್ತು ಕಾಶ್ಮೀರದ ವಿವಿಧ ಕಡೆ ಕೂಲಿಗಾಗಿ ಕಲ್ಲು ತೂರಾಟ ನಡೆಸುವ ಯುವಕರಿಗೆ ಹಣ ಹಂಚುವು ದರಿಂದ ಹಿಡಿದು, ಐಎಸ್‌ಐ ಖಲಿಸ್ತಾನಿಗಳ ಜೊತೆ ಸೇರಿ ಪಾಕಿಸ್ತಾನದ ಉಗ್ರರಿಗೆ ಭಾರತದೊಳಕ್ಕೆ ನುಸುಳಲು ನೆರವು ನೀಡುತ್ತಿದ್ದ ಎಂಬಂತಹ ಗಂಭೀರ ಆರೋಪಗಳಿವೆ.

ಎನ್‌ಐಎ ಈತನನ್ನು ಬಂದಿಸಿ ಈತನ ಎಲ್ಲ ಖಾತೆಗಳನ್ನು ಬಂದ್ ಮಾಡಿ, ಇವನನ್ನು ತಿಹಾರ್ ಜೈಲಿಗೆ ಅಟ್ಟಿದ್ದಾರೆ. ಕಾಶ್ಮೀರ್ ಅವಾಮಿ ಇತ್ತೇಹಾದ್ ಪಾರ್ಟಿ ಈತನ ಪಕ್ಷದ ಹೆಸರು. ಈ ಪಕ್ಷದ ಮುಖಾಂತರ ೨೦೦೮ ಮತ್ತು ೨೦೧೪ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದು ಶಾಸಕ ನಾಗಿದ್ದನು.  ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಈತ ಸ್ಪರ್ಧಿಸಿ ಸೋಲನ್ನ ಅನುಭವಿಸಿದ್ದನು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯನ್ನು ರದ್ದುಪಡಿಸಿದ್ದಷ್ಟೇ ಸಾಲದು ಅಲ್ಲಿನ ಜನರ ಮನಸ್ಥಿತಿಯನ್ನು ಭಾರತದ ಕಡೆಗೆ ತಿರುಗಿಸಲು ಇನ್ನೆಷ್ಟು ವರ್ಷ ಬೇಕಾಗಬಹುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಮತ್ತೊಬ್ಬ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ ಪಂಜಾಬಿನ ಕರ್ಡೂ ಸಾಹೀಬ್ ಎಂಬ ಲೋಕಸಭಾ ಕ್ಷೇತ್ರದಲ್ಲಿ ೧,೯೭,೦೦೦ ಮತಗಳ ಅಂತರದಲ್ಲಿ ಇವನು ಗೆದ್ದಿದ್ದಾನೆ, ಅದು ಜೈಲಿನಲ್ಲಿ ಇದ್ದುಕೊಂಡು. ಪ್ರಸ್ತುತ ಇವನು ಅಸ್ಸಾಂನ ದಿಬ್ರುಗಡ್ ಜೈಲಿನಲ್ಲಿ ಬಂದಿಯಾಗಿದ್ದಾನೆ. ಇವನು ತಾನು
ಜೂನಿಯರ್ ಬಿಂದ್ರನ್ ವಾಲಾ ಎಂದು ಹೇಳಿಕೊಂಡು ಅನಾಚಾರಗಳನ್ನು ಮಾಡಿದಂತವನು. ೨೦೨೦ರಲ್ಲಿ ದೆಹಲಿಯ ಹೊರಗೆ ರೈತರು ಹೆದ್ದಾರಿಯನ್ನು ಬಂದ್ ಮಾಡಿ ಒಂದು ವರ್ಷದ ಕಾಲ ಪ್ರತಿಭಟನೆ ನಡೆಸಿದಾಗ ದುಬೈನಿಂದ ಇವನು ಭಾರತಕ್ಕೆ ಬರುತ್ತಾನೆ. ಆಗಲೇ ರೈತ ಪ್ರತಿಭಟನೆಗಳಿಗೆ ಖಲಿಸ್ತಾನಿಗಳ ಲಿಂಕ್ ಆರಂಭವಾಗುವುದು. ದೀಪ್ ಸಿದು ಎಂಬ ಖಲಿಸ್ತಾನಿ ಹೋರಾಟಗಾರನ ‘ವಾರೀಸ್ ದೆ ಪಂಜಾಬ್’ ಎಂಬ ಸಂಘಟನೆಯನ್ನು ತನ್ನ ಸುಪರ್ದಿಗೆ
ತೆಗೆದುಕೊಂಡು ಪಂಜಾಬಿನಾದ್ಯಂತ ಅಲ್ಲಿನ ಯುವಕರನ್ನು ಮಾದಕ ವ್ಯಸನ ಮುಕ್ತರನ್ನಾಗಿ ಮಾಡಲು ಜಾಗೃತಿ ಮೂಡಿಸುತ್ತೇನೆ ಎಂದು ಹೇಳಿ ಈತ ಮಾಡುತ್ತಿದ್ದದ್ದು ಮಾತ್ರ ಮನೆಹಾಳು ಕೆಲಸ.

ಪಂಜಾಬಿನ ಯುವಕರನ್ನು ಭಾರತದ ಸಾರ್ವಭೌಮತೆ ವಿರುದ್ಧ ಎತ್ತಿಗಟ್ಟುವ ಕೆಲಸ ಮಾಡಿದನು. ಭಾರತದ ವಿರುದ್ಧ ಸಶಸ ಹೋರಾಟಕ್ಕೆ ಬಹಿರಂಗ ವಾಗಿ ಕರೆ ನೀಡಿದ್ದನು. ಈತನ ನೇತೃತ್ವದಲ್ಲಿ ೨೦೨೩ರಲ್ಲಿ ಪಂಜಾಬಿನ ಹೊರವಲಯದ ಪೊಲೀಸ್ ಠಾಣೆಯಲ್ಲಿದ್ದಂತಹ ಅತ್ಯಾಚಾರದ ಆರೋಪಿ ಯನ್ನು ಬಿಡಿಸಿಕೊಳ್ಳಲು ತನ್ನ ಸಹಸ್ರಾರು ಜನ ಸಹಚರರೊಂದಿಗೆ ಶಸ್ತ್ರಾಸ್ತ್ರಧಾರಿಗಳಾಗಿ ಬಂದು ಠಾಣೆಯ ಮೇಲೆ ದಾಳಿ ಮಾಡಿ ಆತನನ್ನು ಬಿಡಿಸಿ ಕೊಂಡು ಹೋದ ಘಟನೆಯನ್ನು ದೇಶ ಇನ್ನೂ ಮರೆತಿಲ್ಲ. ಈತನ ಮೇಲೆ national security act ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು.

ಇವನನ್ನು ಬಂಧಿಸುವ ವೇಳೆ ಈತನು ವ್ಯಸನ ಮುಕ್ತ ಕೇಂದ್ರಗಳೆಂದು ಆರಂಭಿಸಿದ್ದ ಕೇಂದ್ರಗಳಲ್ಲಿ ಇದ್ದದ್ದು ಮಾತ್ರ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು.
ಇಂತಹ ಅಪಾಯಕಾರಿಯದಂತಹ ವ್ಯಕ್ತಿ ಈಗ ಸಂಸತ್ ಪ್ರವೇಶಿಸುತ್ತಿದ್ದಾನೆ. ಪಂಜಾಬಿನ ಫರೀದ್ ಕೋಟ್ ಲೋಕಸಭಾ ಕ್ಷೇತ್ರದಲ್ಲಿ ಸರಬ್ಜಿತ್ ಸಿಂಗ್ ಕಾಲ್ಸಾ ಎಂಬುವವನು ೭೦,೦೦೦ ಮತಗಳ ಅಂತರದಿಂದ ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾನೆ. ಈತನು ಇಂದಿರಾ ಗಾಂಧಿಯ ಹಂತಕ ಬಿಯಾಂತ್ ಸಿಂಗ್‌ನ ಮಗ. ಈತ ಸದಾ ಖಲಿಸ್ತಾನಿಗಳ ಪರ ಮಾತನಾಡುವ, ದೇಶದ ಸಮಗ್ರತೆಗೆ ಗಂಡಾಂತರಕಾರಿಯಾಗಿರುವ ಈತ, ಸಿಖ್ ಯುವಕರ ಮನಸ್ಸು ಕೆಡಿಸಿ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಮೂವರು ಸಹ ಈಗ ಸಂಸತ್ತು ಪ್ರವೇಶಿಸುತ್ತಾರೆ. ದೇಶಕ್ಕೆ ಸಂಬಂಧಿಸಿದಂತಹ ಸಾಕಷ್ಟು ದಾಖಲೆಗಳು ಇವರ ಬಳಿಗೆ ಬರುತ್ತವೆ. ದೇಶಕ್ಕೆ ಸಂಬಂಧಿಸಿದ ಕಾನಡೆನ್ಶಿಯಲ್ ವಿಷಯಗಳನ್ನು ಇವರು ಎಂತೆಂತಹ ಅನಾಚಾರಗಳಿಗೆ ಬಳಸಿಕೊಳ್ಳಬಹುದು ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ.
ಇವರು ನಮ್ಮ ದೇಶದ ಪ್ರಜಾಪ್ರಭುತ್ವ, ನಮ್ಮ ದೇಶದ ಸಂವಿಧಾನವನ್ನೇ ಬಳಸಿಕೊಂಡು ನಮ್ಮದೇ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಆತಂಕವಿದೆ. ಎಂತಹ ಅಪಾಯಕಾರಿ ಆದಂತಹ ಸಂದೇಶವನ್ನು ಈ ಮೂರು ಕ್ಷೇತ್ರಗಳ ಮತದಾರರು ದೇಶಕ್ಕೆ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳು ಬಂದಾಗ so called ಪ್ರಜಾಪ್ರಭುತ್ವ ರಕ್ಷಕರು ಬಾಯಿಗೆ ಬೀಗ ಹಾಕಿಕೊಂಡು ಕೂತಿರುತ್ತಾರೆ.

ಈ ಹಿಂದೆಯೂ ಸಹ ಇಂತಹ ಘಟನೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಕುಖ್ಯಾತ ಗ್ಯಾಂಗ್ ಸ್ಟಾರ್ ಅಜಮ್ ಖಾನ್‌ನನ್ನು ಉತ್ತರ ಪ್ರದೇಶದಲ್ಲಿ ೨೦೧೭ ರಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಬಂದ ನಂತರ ಈತನನ್ನು ಜೈಲಿಗೆ ಅಟ್ಟಲಾಗಿತ್ತು. ಆದರೆ ೨೦೨೧ ರಲ್ಲಿ ನಡೆದಂತಹ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈತನು ಜೈಲಿನಲ್ಲಿ ಇದ್ದುಕೊಂಡೇ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ಸಹ ಸಾಧಿಸಿದ್ದನು. ಆದರೆ ನಂತರ ಈತನ ದುಷ್ಕೃತ್ಯಗಳು ಸಾಬೀತಾಗಿ ಕೋರ್ಟ್ ತೀರ್ಪಿನಲ್ಲಿ ಈತನಿಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಆಗ ಈತನ ವಿಧಾನಸಭಾ ಸ್ಥಾನವು ಸಹ ರzಯಿತು. ಒಂದು ವೇಳೆ ವಿಧಾನಸಭೆ ಪ್ರವೇಶಿಸಿದ್ದರೆ ಇಡೀ ದೇಶಕ್ಕೆ ಎಂತಹ ಸಂದೇಶ ಹೋಗುತ್ತಿತ್ತು? ಇದಕ್ಕಿಂತಲೂ ಘೋರವಾದಂತಹ ಸಂಗತಿ ಏನೆಂದರೆ ಲೋಕಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಬಿಜೆಪಿಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸುತ್ತಿದ್ದಾರೆ.

ಇವರಿಗೆ ಹೆದರಿ ಪ್ರಾಣಭಯದಿಂದ ಸುಮಾರು ೪೦೦೦ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿಯಲ್ಲಿಯೇ ಆಶ್ರಯ ಪಡೆದಿದ್ದಾರೆ. ಈ ಕುರಿತು ರಾಜ್ಯಪಾಲ ರಿಗೆ ಮನವಿ ಸಲ್ಲಿಸಲು ಹೋಗಿದ್ದ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುಬೇಂದು ಅಧಿಕಾರಿಯನ್ನು ರಾಜ ಭವನ ಪ್ರವೇಶಿಸ ದಂತೆ ಪೊಲೀ ಸರು ತಡೆದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತಾರೆ, ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದು ಗಂಟಲು ಹೋಗುವಂತೆ ಕಿರುಚುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರವೇ ಮುಂದೆ ನಿಂತು ಈ ದುಷ್ಟ ಕಾರ್ಯಗಳನ್ನು ನಡೆಸುತ್ತಿದೆ.

ಚುನಾವಣಾ ಸಂದರ್ಭದಲ್ಲಿ ನಾನು ಪ್ರಜಾಪ್ರಭುತ್ವದ ರಕ್ಷಕ ಎಂದು ಕೈಯಲ್ಲಿ ಕೆಂಪು ಪುಸ್ತಕ (ಇದನ್ನು ಚೀನಾ ಸಂವಿಧಾನ ಎಂತಲೂ ಕೆಲವರು
ಹೇಳುತ್ತಿzರೆ) ಹಿಡಿದು ಭಾಷಣವನ್ನು ಮಾಡುತ್ತಿದ್ದ ಪ್ರಸ್ತುತ ಲೋಕಸಭೆಯ ವಿರೋಧ ಪಕ್ಷದ ನಾಯಕನ ರೇಸ್ ನಲ್ಲಿರುವ ವ್ಯಕ್ತಿಗೆ ಇದ್ಯಾವುದೂ ಸಹ ಕಣ್ಣಿಗೆ ಕಾಣುತ್ತಿಲ್ಲ. ಕಂಡರೂ ಸಹ ನಮ್ಮ ಒಕ್ಕೂಟದ ಪಕ್ಷ ಅಧಿಕಾರದಲ್ಲಿರುವ ರಾಜ್ಯ ಇಂತಹ ಅಸಡ್ಡೆ. ಒಂದು ವೇಳೆ ಇವರ ಒಕ್ಕೂಟವೇ ಅಧಿಕಾರಕ್ಕೆ
ಬಂದಿದ್ದರೆ ದೇಶದಾದ್ಯಂತ ಇಂತಹ ಹಿಂಸಾಚಾರ ಭುಗಿಲೆದ್ದಿದ್ದರೂ ಸಹ ಆಶ್ಚರ್ಯ ಪಡಬೇಕಾಗಿರಲಿಲ್ಲ. ಆದರೆ ದೇವರ ದಯೆಯಿಂದ ಅದು ಆಗಲಿಲ್ಲ. ಈ ಹಿಂದೆಯೂ ಸಹ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರೀತಿಯ ರಾಜಕೀಯ ಉದ್ದೇಶಗಳಿಗಾಗಿ ಗಲಭೆಗಳು ನಡೆದಿವೆ.

೨೦೨೧ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿzಜಿದ್ದಿನ ಪೈಪೋಟಿ ಏರ್ಪಟ್ಟಿತ್ತು,
ಆದರೆ ಅಂತಿಮವಾಗಿ ಟಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಆದರೆ ಫಲಿತಾಂಶದ ದಿನದ ಸಂಜೆಯಿಂದಲೇ ಬಿಜೆಪಿ ಕಚೇರಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಟಿಎಂಸಿ ಕಾರ್ಯಕರ್ತರು ಗೂಂಡಾಗಳ ರೀತಿ ದಾಳಿ ನಡೆಸಲು ಆರಂಭಿಸಿದರು. ಈ ದಾಳಿಗಳಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾದರು. ೨೦೦೦ ಜನರು ಪ್ರಾಣ ಭಯದಿಂದ ಅಸ್ಸಾಮಿಗೆ ಪಲಾಯನ ಮಾಡಿ
ದರು. ಆದರೆ ಮಮತಾ ಬ್ಯಾನರ್ಜಿ ಇದೆಲ್ಲವೂ ಕಟ್ಟುಕಥೆ ಎಂದು ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದರು. ಇಂಥವರೆಲ್ಲರೂ ಸಹ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಕರಾಗಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವುದು ಬಿಜೆಪಿ ಅಲ್ಲ, ಬದಲಾಗಿ ಇಂತಹ ಭಯೋತ್ಪಾದನೆ
ಹಿನ್ನಲೆಯುಳ್ಳ ವ್ಯಕ್ತಿಗಳು ಚುನಾವಣೆಯಿಂದ ಆರಿಸಿ ಬರುವುದು ಹಾಗೂ ಚುನಾವಣೆಯ ನಂತರ ರಾಜಕೀಯ ವಿಚಾರಗಳನ್ನು ಮುಂದೆ ಇಟ್ಟುಕೊಂಡು ಒಂದು ನಿರ್ದಿಷ್ಟ ಪಕ್ಷದ ಜನರ ಮೇಲೆ ದಬ್ಬಾಳಿಕೆ ನಡೆಸುವುದಾಗಿದೆ.

(ಲೇಖಕರು: ಹವ್ಯಾಸಿ ಬರಹಗಾರರು)