Wednesday, 11th December 2024

ಅಪರಾಧಿಗಳ ಕೈಗೆ ಅಧಿಕಾರ ಕೊಡುತ್ತಿದ್ದೇವೆ, ಅರಿವಿಗೆ ಬರುತ್ತಿಲ್ಲ

ಅಭಿಪ್ರಾಯ

ಸಿದ್ದಾರ್ಥ ವಾಡೆನ್ನವರ

siddu1508@gmail.com

ಇಂದು ಅಜ್ಞಾನಿಗಳದ್ದೇ ಕಾರುಬಾರು ಆಗಿದೆ. ಜ್ಞಾನಿ ತಾನು ಇರುವಲ್ಲಿಯೇ ಸ್ವರ್ಗ ಸೃಷ್ಠಿಸಿಕೊಳ್ಳುತ್ತಾನೆ, ಅಜ್ಞಾನಿ ಸ್ವರ್ಗ ಮೇಲಿದೆ ಎಂದು ಹೇಳುತ್ತಾನೆ. ಜ್ಞಾನಿ ಹೇಳುತ್ತಾನೆ, ಸ್ವರ್ಗ-ನರಕ ಸೃಷ್ಟಿಸಿಕೊಳ್ಳುವ ಶಕ್ತಿ ನಿನ್ನ ಕೈಯಲ್ಲಿಯೇ ಇದೆ. ನೀನು ಜ್ಞಾನಿಯಾದರೆ ನಿನಗೆ ಇಲ್ಲೇ ಆಧ್ಯಾತ್ಮದ ಸಾಗರ ಸೃಷ್ಠಿಯಾಗುತ್ತದೆ. ಆ ಆಧ್ಯಾತ್ಮ ಸಾಗರದಲ್ಲಿ ಭಯ ಇರುವುದಿಲ್ಲ. ಅಲ್ಲಿನ ಜೀವನ ಉಲ್ಲಾಸದ ಜೀವನ. ಅಲ್ಲಿ ನೀವು ಸುಖ-ದುಃಖದಲ್ಲಿ ಸಮಚಿತ್ತದಿಂದ ನವೋಲ್ಲಾಸದಿಂದ ಇರಬಹುದು. ಈ ಆಧ್ಯಾತ್ಮ ಜೀವನ. ದುಃಖ, ನಿರಾಶೆ, ಚಿಂತೆಯಿಂದ ಸುತ್ತುವರಿಯುವುದಿಲ್ಲ. ಅರಿತು ಬದುಕುವ ಮಾನವ ನಾವಾಗಬೇಕು.

ಈಗ ಏನಾಗಿದೆ? ಭವಿಷ್ಯದ ಬಗ್ಗೆ ಚಿಂತಿಸಿ ಮನುಷ್ಯನೇ ಇನ್ನೊಬ್ಬ ಮನುಷ್ಯನಿಗೆ ಶತ್ರು ಆಗಿ ದ್ದಾನೆ. ನೂರಾರು ವರ್ಷಗಳ ಹಿಂದೆ ನಿರ್ದಿಷ್ಟ ಪಡಿಸಿದ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದಾನೆ. ಭೇದಗಳಿಗೆ ಇದೇ ಕಾರಣ ವಾಗಿದೆ. ಭೇದ ತರುವ ನಂಬಿಕೆಗಳಿಗೆ ಅಂತ್ಯ ಹೇಳುತ್ತಿಲ್ಲ. ಈಗ ಎಲ್ಲವೂ ಬದಲಾಗಿದೆ, ಶಿಲಾ ಯುಗದಲ್ಲಿ ಕಾದಾಟದ ಆಯುಧಗಳು ಇಂದು ಇಲ್ಲ, ಅಂದ ಮೇಲೆ ಆಗಿನ ನಂಬಿಕೆಗಳು ಏಕೆ ಬೇಕು? ಕಲ್ಲಿನ ಆಯುಧಗಳ ಬದಲು ಈಗ ಅಣ್ವಸ್ತ್ರಗಳಿವೆ. ಆಯುಧ ಗಳ ಉಪಯೋಗದಲ್ಲಿ ಬದಲಾಗಿದ್ದಾನೆ. ಆದರೆ ಬದುಕುವ ಚಿಂತನೆಗಳಲ್ಲಿ ಬದಲಾಗುತ್ತಿಲ್ಲ. ಅಂದರೆ ಹಲವು ಜನರ ಗುಣಗಳು ಬದಲಾಗಲೇ ಇಲ್ಲ.

ಹೆಚ್ಚು ಹೆಚ್ಚು ರಾಷ್ಟ್ರಗಳ ಸ್ಥಾಪನೆ ಆಗಿದ್ದು ಕೆಲವರ ಅಧಿಕಾರದ ಲಾಲಸೆ ಮತ್ತು ಅವರ ಅಹಂಕಾರವನ್ನು ತೃಪ್ತಿಪಡಿಸಲು. ಪಾಕಿಸ್ತಾನ ರಾಷ್ಟ್ರ ಸ್ಥಾಪನೆ ಆಗಿದ್ದು ಏತಕ್ಕಾಗಿ? ಅಧಿಕಾರದ ದಾಹಕ್ಕಾಗಿ ಅಲ್ಲದೇ ಮತ್ತೇನು? ಇದು ಬಿಟ್ಟರೆ ಮತ್ಯಾವ ಉದ್ದೇಶವೂ ಇರಲಿಲ್ಲ. ಜರ್ಮನಿಯೂ ಎರಡು ಭಾಗವಾಯಿತು, ಮತ್ತೆ ಒಂದಾಯಿತು. ಹೊರದೇಶವಾಸಿಗಳು ಬಂದು ನೆಲೆಸುವುದನ್ನು ಕಂಡು ಭಯಪಟ್ಟು ಹಲವು ಕಲಹ ಗಳಾದವು. ಈ ಭೂಮಿಯಲ್ಲಿ ಜನಸಂಖ್ಯೆ ಸ್ಪೋಟವಾಗುತ್ತಿರುವಾಗ ಈ ಭೂಮಿಗೆ ಕಂಡಿತ ನಷ್ಟ ಇದೆ. ಈ ಪ್ರಪಂಚಕ್ಕೆಲ್ಲಾ ಒಂದೇ ಸಂವಿಧಾನ, ಒಂದೇ ಸರಕಾರ, ಜನರನ್ನು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ವರ್ಗಾಯಿಸುವ ಕಾಯಿದೆ ಇದ್ದರೆ, ಜನಸಂಖ್ಯೆ ಹೆಚ್ಚು ಮಾಡುವ ಅಗತ್ಯವಿರುತ್ತಿರಲಿಲ್ಲ.

ಎಲ್ಲಿ ಜನರು ಕಡಿಮೆ ಇದ್ದಾರೋ ಅಲ್ಲಿಗೆ, ಹೆಚ್ಚಿನ ಜನಸಂಖ್ಯೆಯ ಪ್ರದೇಶದಿಂದ ಕಳಿಸಬಹುದಿತ್ತು, ಹೀಗಾಗುತ್ತಿಲ್ಲ. ನಮ್ಮಲ್ಲಿ ಭೂಮಿಯೇ ಇಲ್ಲ, ಅಷ್ಟು ಜನರಿದ್ದಾರೆ. ಹೆಣ ಹೂಳಲು ಸ್ಥಳ ಇಲ್ಲ. ಈ ಪರಿಸ್ಥಿತಿ ನಿರ್ಮಾಣ ಆಗಿದೆ. ಅದಕ್ಕೆ ಕಾರಣ ಅಜ್ಞಾನ ಮತ್ತು ಜಾತಿ-ಧರ್ಮ ವಿಸ್ತರಣೆ ಆಗಬೇಕು ಎನ್ನುವ ದುರಾಶೆ. ನನ್ನ ಸಮಯ ವನ್ನು ಮನುಷ್ಯನ ಪ್ರಜ್ಞೆಗಾಗಿ ಉಪಯೋಗಿಸಲು ಮೀಸಲಿರಿಸಿದ್ದೇನೆ. ಹೆಚ್ಚು ಹೆಚ್ಚು ಸಂತೋಷದಿಂದ ಇರಲು, ಯಾವ ಜೀವಿಗೂ ಹಾನಿ ಮಾಡದೆ, ಬದುಕಲು ಬೇಕಾದ ಸೂತ್ರಗಳನ್ನೂ ನಿರ್ಮಿಸಿಕೊಳ್ಳಬೇಕು. ಮನುಷ್ಯನ ಆನಂದಕ್ಕಾಗಿ ಬೇಕಾದ ವಿಚಾರಗಳ ವಿಶ್ಲೇಷಣೆ ವೈಜ್ಞಾನಿಕವಾಗಿ ಆಗಬೇಕು, ಕಲ್ಪಿತ ಊಹೆಗಳು, ಮೂಡನಂಬಿಕೆಗಳೇ ಆಧಾರ ಆಗಬಾರದು. ಇಂದು ಮನುಕುಲವು ಎದುರಿಸುತ್ತಿರುವ ಅಪಾಯಗಳ ಬಗ್ಗೆ ತೀವ್ರವಾದ ಚಿಂತನೆ ಆಗಬೇಕು.

ಸೂಪರ್ ಮಾನವ ಅಸ್ತಿತ್ವದಲ್ಲಿ ಬರುತ್ತಾನೆ, ಈ ಕಲ್ಪನೆ ಬೇರೆ. ಸಹಜ, ಸ್ವಾಸ್ಥ್ಯ, ಹೆಚ್ಚು ಆಧ್ಯಾತ್ಮಿಕ ಮಾನವ ಭವಿಷ್ಯದಲ್ಲಿ ಜನಿಸಬೇಕಾಗಿದೆ. ಅದಕ್ಕೆ ಬುನಾದಿ ನಾವೇ ಹಾಕಬೇಕಾಗಿದೆ. ಯುದ್ಧಗಳಿಲ್ಲದ. ರಾಷ್ಟ್ರಗಳಿಲ್ಲದ, ಧರ್ಮಗಳಿಲ್ಲದ ಪ್ರಪಂಚವನ್ನು ಸೃಷ್ಟಿಸುವ ಹೊಣೆಯನ್ನು ಜಗತ್ತಿನ ಮುಂಚೂಣಿ ನಾಯಕರು ತೆಗೆದುಕೊಳ್ಳಬೇಕಾಗಿದೆ. ಸತ್ಯವನ್ನರಿಸುವ, ಆನಂದ ಚೆಲ್ಲುವ ಸಂಭ್ರಮದ ಪ್ರಪಂಚವವನ್ನು ನಿರ್ಮಿಸಬೇಕಾಗಿದೆ. ಈಗಿರುವ ಭವಿಷ್ಯ ಕಲ್ಪಿತ ಚಿಂತನೆಗಳು ಬೇಡ. ಸಮಸ್ಯೆಗಳಿಗೆ ಶೀಘದಲ್ಲಿ ಪರಿಹಾರ ಕಂಡುಹಿಡಿದಲ್ಲಿ ಮಾನವ ಹೆಚ್ಚು ಹೆಚ್ಚು ಸಂತೋಷದಿಂದ ಇರಬಹುದು. ನನ್ನದೇ ಧರ್ಮ ಶ್ರೇಷ್ಠವೆಂದು ಮಾತನಾಡುತ್ತಾರೆ,
ಇದು ನನಗೆ ನೋವು ತರುತ್ತದೆ. ನಂಬಿಕೆಯಲ್ಲಿ ಬದುಕಿದರೆ ನಿಜವಾದ ಅಪರಾಽಗಳು ಯಾರು ಎಂಬುದು ತಿಳಿದು ಬರುವುದಿಲ್ಲ. ಸಮಸ್ಯೆ ಏನೆಂದರೆ, ನಾವು
ಅಪರಾಽಗಳ ಕೈಗೆ ಅಽಕಾರ ಕೊಡುತ್ತಿದ್ದೇವೆ. ಅದು ನಮ್ಮ ಅರಿವಿಗೆ ಬರುತ್ತಿಲ್ಲ, ನಿಜವಾದ ಅಪರಾಧಿಗಳು ಎಷ್ಟೊಂದು ಹಾನಿಯನ್ನು ವಿಶ್ವಕ್ಕೆ ಮಾಡುತ್ತಿದ್ದಾರೆ.
ಯಾರೋ ಒಬ್ಬ ಮತ್ತೊಬ್ಬನನ್ನು ಹತ್ಯೆ ಮಾಡುತ್ತಾನೆ, ಅಮೆರಿಕ ಜಗತ್ತಿಗೇ ತನ್ನ ಬಲಿಷ್ಠತೆ ತೋರಿಸಲು ಲಕ್ಷಾಂತರ ಜನರ ಹತ್ಯೆ ಮಾಡಿತು.

ಜಪಾನ್ ಮೇಲೆ ಅಣುಬಾಂಬ್ ಹಾಕಿ ಜಗತ್ತಿಗೆ ದೊಡ್ಡಣ್ಣ ಆಯಿತು. ಚೀನಾ ವೈರಸ್ ಮೂಲಕ ದೊಡ್ಡಣ್ಣ ಆಗಲು ಹೊರಟಿತು, ಇದನ್ನು ಮಾನವೀಯತೆ ಅಂತಾ ಹೇಳಬೇಕೆ? ಹಿಟ್ಲರ್, ಸದ್ದಾಂ ಹುಸೇನ್, ಔರಂಗ್‌ಜೇಬ್ ಇಂತಹ ಅಧಿಕಾರಸ್ಥರು ಕೋಟ್ಯಂತರ ಜನರ ಹತ್ಯೆಗೆ ಕಾರಣವಾದವರು. ಆಧ್ಯಾತ್ಮ ನಾಯಕರು ದುರಾಸೆಯ ಕೆಲಸ ಮಾಡುವುದಿಲ್ಲ. ಎಲ್ಲವನ್ನೂ ಬೆಳಕಿಗೆಳೆಯಲೇಬೇಕು, ಏಕೆಂದರೆ, ರಾಜಕಾರಣಿ ಮತ್ತು ದೇವರ ಪ್ರತಿನಿಽಗಳು ಜನರನ್ನು ಕತ್ತಲೆಯಲ್ಲಿ ಇಡುತ್ತಿದ್ದಾರೆ.

ಶೇ.೧೦೦ರಷ್ಟು ನಂಬಿಕೆಯಲ್ಲಿ ಬದುಕುವವರು ತಮ್ಮದೇ ತತ್ವ ಶ್ರೇಷ್ಠ ಅನ್ನುತ್ತಾರೆ. ಕೆಲವರಿಗೆ ಧರ್ಮದ ನಾಯಕರಾಗಬೇಕು ಎಂಬ ಬಯಕೆ ಇರುತ್ತದೆ.
ಹೀಗಾಗಿ ಭೇದ ಸೃಷ್ಠಿಸುತ್ತಾರೆ. ಅಂದು ಈ ಜಗತ್ತು ಆಧ್ಯಾತ್ಮ ಆಧಾರಿತವಾಗಿ, ಮಾನವೀಯತೆ ಆಧಾರಿತವಾಗಿ ಸ್ಥಾಪಿತವಾಗಿದ್ದರೆ ನಾವೆಲ್ಲಾ ಒಂದು ಎಂಬ
ಭಾವನೆ ಬರುತ್ತಿತ್ತು. ಹಾಗಾಗದೇ ಅಹಂ ಪ್ರತಿರೂಪ ವಾಗಿ ನನ್ನದೇ ಶ್ರೇಷ್ಠ ಈ ಭಾವನೆ ಬೆಳೆದು ವಿವಿಧ ಧರ್ಮಗಳ ಸ್ಥಾಪನೆ ಆಯಿತು. ಧರ್ಮಗಳು ಜನರಿಗೆ
ಬ್ರಹ್ಮಚರ್ಯೆ ಪಾಲಿಸಬೇಕೆಂದು ಬೋಧಿಸುತ್ತವೆ. ಸತ್ಯವನ್ನು ಹುಡುಕಲು ಹೊರಟರೆ ಇದು ಈ ಸೃಷ್ಠಿಯ ವಿರುದ್ಧವಾಗಿ ಕಾಣಿಸುತ್ತದೆ. ಆ ಸೃಷ್ಠಿಕರ್ತ ನೀಡಿದ
ಗುಣಗಳ, ಬಯಕೆಗಳ ವಿರುದ್ಧ ಹೋಗುವುದು ಸರೀನಾ? ಇದರಲ್ಲಿ ಬುದ್ಧಿವಂತಿಕೆ ಬೇಕು, ಬ್ರಹ್ಮಚರ್ಯ ಇದು ಲೈಂಗಿಕತೆಯ ಅಡ್ಡದಾರಿಗಳಿಗೂ ಕೆಲವು
ಸಮಯದಲ್ಲಿ ಕಾರಣ ಆಗುತ್ತದೆ. ಅಂದು ಯಾರನ್ನಾದರೂ ಶಿಕ್ಷೆಗೆ ಗುರಿಪಡಿಸಬೇಕಾಗಿದ್ದಲ್ಲಿ ಧಾರ್ಮಿಕ ಮುಖಂಡರ ಆದೇಶವನ್ನು ಪಾಲಿಸುತ್ತಿದ್ದರು.

ಈಗಲೂ ಕೆಲವೆಡೆ ಇದೆ. ಅವರಿಗೆ ಮಾನವೀಯತೆಯ ಅನುಭವ ಇರುವುದಿಲ್ಲ, ಹೀಗಾಗಿ ಉದ್ದೇಶ ನಿರ್ಣಯಗಳಲ್ಲಿ ಗಟ್ಟಿತನ ಇರುವುದಿಲ್ಲ. ಆಯ್ಕೆ ಮಾಡುವ ವಿಧಾನ ನಾಯಕರಿಗೆ ಅನುಕೂಲ ಕಲ್ಪಿಸಿ ಕೊಟ್ಟಿದೆ. ನಾಯಕರು ಜನರಿಗೆ ವಿರುದ್ಧವಾದುದನ್ನೇ ಮಾಡುತ್ತಿದ್ದಾರೆ, ಮನುಷ್ಯ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಪರಿಣಾಮ ಎಚ್‌ಐವಿ ರೋಗ ಬಂತು ಎಂಬ ಮಾತಿದೆ. ಹೆಂಗಸು ಸಿಗದಿದ್ದಲ್ಲಿ, ಗಂಡಸು ಸಿಗದಿದ್ದಲ್ಲಿ ಈ ಮನುಷ್ಯ ಹೀಗೆ ಮಾಡಿ ಈ ರೋಗ ತಂದಿದ್ದಾನೆ. ಇದು ಯಾವ ಕಾನೂನು ಅಡಿಯಲ್ಲಿ ಬರುವುದಿಲ್ಲ. ಹೀಗೆ ಅಡ್ಡದಾರಿಯನ್ನು ಹಿಡಿಯುವ ವ್ಯವಸ್ಥೆಯನ್ನು ಈ ಮನುಷ್ಯ ಮಾಡಿಕೊಳ್ಳುತ್ತಾನೆ.

ಇಂತಹವುಗಳನ್ನು ನಿಯಂತ್ರಿಸಲು ಪರಿಹಾರ ಹುಡುಕಬೇಕು. ಏಡ್ಸಗಿಂತಲೂ ಭೀಕರವಾದ ರೋಗಗಳು ಜನಿಸುವ ಸಾಧ್ಯತೆಗಳೂ ಇವೆ. ಉದಾ: ಕರೋನಾ ವೈರಸ್, ಇದರ ಪರಿಣಾಮ ಗೊತ್ತಾಯಿತು, ಮನೆ ಬಿಟ್ಟು ಹೊರಬರುವಂತಿಲ್ಲ, ಉದ್ಯೋಗ ನಿಂತಿತು, ಹಣಗಳಿಕೆ ನಿಂತಿತು, ನಿರಂತರ ವಾಗಿ ಸಾಗುತ್ತಿದ್ದ ಜನರನ್ನು ನಿಂತಲ್ಲೇ ನಿಲ್ಲಿಸಿಬಿಟ್ಟಿತು. ಪ್ರಕೃತಿಯ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲವೆಂಬುದು ಜನರ ಅರಿವಿಗೆ ಬಂತು, ಯಾರು ಪ್ರಕೃತಿಯ ವಿರೋಧವಾಗಿ ಹೋಗಿದ್ದಾರೆ ಅವರಿಗೆ ಆತ್ಮಸ್ಥೈರ್ಯ ಇಲ್ಲ, ಅವರ ಮೈಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ.

ಯಾರು ಪ್ರಭಾವಿಗಳೋ ಅವರೇ ಅಸಹಾಯಕರಾದರು. ಇದು ಈ ಸೃಷ್ಟಿಯ ಆಶ್ಚರ್ಯ ಅಲ್ಲವೇ? ಭವಿಷ್ಯದ ಬಗ್ಗೆ ಚಿಂತಿಸಿ ಪ್ರಸ್ತುತ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಮನಸ್ಸು ಎಲ್ಲೆಲ್ಲೂ ತ್ವರಿತಗತಿಯಲ್ಲಿ ಹರಡುತ್ತದೆ. ವ್ಯವಸ್ಥೆ ಸ್ವಾರ್ಥ, ಕೆಟ್ಟ ಕೆಲಸಗಳಿಗೆ ಪ್ರಚಾರ ನೀಡುತ್ತದೆ. ವ್ಯಾಟಿಕನ್ ಸಿಟಿ, ಮೆಕ್ಕಾ ಮತ್ತು ಕಾಶಿ ಈ ಸ್ಥಳಗಳಲ್ಲಿ ಏನೇನು ಮಾಡಿದ್ದೇವೆ ಅದರ ಪುನರಾವರ್ತನೆ ಆಗಬಾರದು. ಜನಸಂಖ್ಯೆಯ ಸರಿಯಾದ ಅನುಪಾತದ ಬೆಳವಣಿಗೆ ಕುರಿತು ಚಿಂತಿಸಬೇಕು. ಕೇವಲ ಗಂಡು ಮಗು ಬೇಕೆಂದರೆ ಹೆಣ್ಣಿನ ಸಂತತಿ ಕಡಿಮೆ ಆಗುತ್ತವೆ.

ಜಗದ ಕಲ್ಯಾಣ ಆಗಲು ಈ ಪೃಥ್ವಿಯ ರಕ್ಷಣೆ ಅಗತ್ಯ. ಈ ಪೃಥ್ವಿಯ ಮೇಲಿರುವ ಪ್ರತಿ ಜೀವಿ ಯ ಬಗ್ಗೆ ಕಾಳಜಿ ಹೊಂದಬೇಕು. ಹಿಂಸಾರೂಪ ಪಡೆ ದರೆ ಯುದ್ಧ
ಸಾಮಗ್ರಿಗಳ ಅಗತ್ಯವಿರುತ್ತದೆ. ನಿಮ್ಮ ಸಂಪಾದನೆ ಈ ಪೃಥ್ವಿ ಮತ್ತು ಮಾನವ ಕುಲ ನಾಶಕ್ಕೆ ವಿನಿಯೋಗ ಆಗಬಾರದು. ಈವರೆಗೆ ಏನು ಮಾಡಿದ್ದರೂ ಅದನ್ನೇ
ಎಲ್ಲರೂ ಮಾಡಬಾರದು. ಆಧ್ಯಾತ್ಮ, ಧ್ಯಾನ ಮತ್ತು ವಿಜ್ಞಾನದ ನಿಜತ್ವ ಅರಿತುಕೊಳ್ಳಲೇ ಬೇಕು.

ರೋಗಗಳ ಬಗ್ಗೆ ಚಿಂತಿಸಿದಾಗ ಒತ್ತಡ, ನೋವು, ದುಃಖ ಬರದೇ ಇರಲು ಸಾಧ್ಯವೇ? ಒಂದು ಬೆಕ್ಕು ಸತತವಾಗಿ ಇಲಿಗಳನ್ನು ತಿನ್ನುತ್ತಿತ್ತು, ಇಲಿಗಳೆಲ್ಲ ಸಭೆ
ಸೇರಿ ಉಪಾಯ ಹುಡುಕಬೇಕೆಂದು ತೀರ್ಮಾನಿಸಿದೆವು. ಅನುಭವ ಇರದ ಒಂದು ಇಲಿ ಹೇಳಿತು, ಬೆಕ್ಕನ್ನು ನಿಯಂತ್ರಿಸುವ ಸುಲಭ ಉಪಾಯ ನನಗೆ ಗೊತ್ತಿದೆ. ಅದು ಹೇಗೆಂದರೆ ಬೆಕ್ಕಿನ ಕೊರಳಿಗೆ ಘಂಟೆ ಯೊಂದನ್ನು ಕಟ್ಟಿದರೆ ಸಾಕು ಅದು ಎಲ್ಲಿ ಹೋದರೂ ಆ ಘಂಟೆಯ ಶಬ್ದದಿಂದ ಬೆಕ್ಕು ಬರುತ್ತಿದೆ ಎಂಬುದು ನಮಗೆಲ್ಲ ರಿಗೂ ಗೊತ್ತಾಗುತ್ತದೆ. ಕೂಡಲೇ ನಾವೆಲ್ಲಾ ಎಚ್ಚರಗೊಂಡು ಬದುಕಬಹುದು.

ಬೆಕ್ಕಿಗೆ ಗಂಟೆಕಟ್ಟು ವವರ‍್ಯಾರು? ಚಿಂತನೆ ಏನೆಂದರೆ ಈ ಭೂಮಿಯ ಮೇಲೆ ದುಃಖ ನಿರಾಶೆ, ಒತ್ತಡ ಕಡಿಮೆ ಮಾಡಲು ಆಸೆಗಳನ್ನು ಬಿಟ್ಟು ಬಿಡುವುದು ಸಾಧ್ಯನಾ? ಬೆಕ್ಕಿಗೆ ಘಂಟೆ ಕಟ್ಟುವವರು ಯಾರು? ಅಂದರೆ ತಮ್ಮ ದುರಾಸೆ ಪೂರೈಕೆಗಾಗಿ ನಂಬಿಕೆಗಳನ್ನು ಬಿಡುವವರು ಯಾರು? ತಿನ್ನುವ ರೀತಿ, ತೊಡುವ ಬಟ್ಟೆ, ಓದಲು ಬಳಸುವ ಮಾಧ್ಯಮ ನೋಡಿದರೆ ಜನ ಆಸೆ ಬಿಡುವ ಲಕ್ಷಣಗಳಿಲ್ಲ. ಬೆಕ್ಕಿಗೆ ಘಂಟೆ ಕಟ್ಟುವವರ‍್ಯಾರು? ಆ ಧೈರ್ಯ ಯಾರಿಗಿದೆ? ಯಾರಿಗೆ ಆಸೆ ಗಳನ್ನು ಬಿಡುವ ಧೈರ್ಯ ಇದೆ. ದ್ವಂದ್ವಗಳಿಗೆ ದಾರಿ ತೋರಿಸುವ ಉದ್ದೇಶ ಬೇಡ, ಧರ್ಮಗಳು ಒಂದು ರೀತಿಯ ಧ್ವಂದ್ವಗಳು ಸೃಷ್ಟಿಸಿವೆ.

ಅದೊಂದು ಸಮಸ್ಯೆ ಅಲ್ಲವೇ ಅಲ್ಲ! ನಾವು ೨೧ನೇ ಶತಮಾನದಲ್ಲಿದ್ದೇವೆ. ಬೆಕ್ಕಿಗೆ ಗಂಟೆಕಟ್ಟುವವರ‍್ಯಾರು? ಜೀವನದಲ್ಲಿ ಆಧ್ಯಾತ್ಮ ಅಳವಡಿಸಿಕೊಂಡು ಬದುಕುವ ಒಂದು ಇಲಿ ಹೇಳಿತು, ನಾನು ಘಂಟೆ ಕಟ್ಟುತ್ತೇನೆ, ಆ ಇಲಿ ಆಧ್ಯಾತ್ಮ, ಧ್ಯಾನ, ವಿಜ್ಞಾನದಲ್ಲಿ ಪರಿಣಿತಿ ಹೊಂದಿತ್ತು. ನಾನು ಬೆಕ್ಕಿಗೆ ಘಂಟೆ ಕಟ್ಟುತ್ತೇನೆ ಎಂದಾಗ ಎಲ್ಲಾ ಇಲಿಗಳು ನಗಲು ಪ್ರಾರಂಭಿಸಿದವು. ನೀನು ಘಂಟೆ ಕಟ್ಟಲು ಹೋದರೆ ಆ ಬೆಕ್ಕು ನಿನ್ನನ್ನು ತಿಂದು ಬಿಡುತ್ತದೆ ಅಂದವು. ಅಂದರೆ ಧರ್ಮದ ಅಮಲು ಇರುವ
ಇಲಿಗಳು ಹೀಗೆ ಹೇಳಿದವು. ಆದರೆ ಆಧ್ಯಾತ್ಮ-ಧ್ಯಾನ- ವಿಜ್ಞಾನದ ಅನುಭವದಿಂದ ಕಲಿತ ಆ ಇಲಿ ಹೇಳಿತು, ನೋಡಿ ಇಂದು ವಿಜ್ಞಾನ ಮುಂದುವರೆದಿದೆ, ನಾನೊಂದು ಕೆಲಸ ಮಾಡುತ್ತೇನೆ, ಔಷಧ ಅಂಗಡಿಗೆ ಹೋಗಿ ಒಂದು ನಿದ್ರೆ ಮಾತ್ರೆ ತರುತ್ತೇನೆ. ಆ ಬೆಕ್ಕು ಬರುವ ದಾರಿಯಲ್ಲಿ ಇಡುತ್ತೇನೆ. ಆ ಬೆಕ್ಕು ಅದನ್ನು ಆಹಾರ ಎಂದು ತಿನ್ನುತ್ತದೆ. ಅದು ನಿದ್ರೆಗೆ ಜಾರಿದಾಗ ಆ ಬೆಕ್ಕಿಗೆ ನಾನು ಘಂಟೆ ಕಟ್ಟುತ್ತೇನೆ. ಎಲ್ಲಾ ಇಲಿಗಳಿಗೆ ದಿಗ್ಬ್ರಮೆ!

ಧರ್ಮದ ಅಮಲಿಗೆ ಅಂತ್ಯ ಹಾಡಲು ಆಧ್ಯಾತ್ಮದ ದಾರಿಯೇ ಉತ್ತಮ, ಅಲ್ಲವೇ? 21ನೇ ಶತಮಾನದಲ್ಲಿ ಎಲ್ಲವೂ ಲಭ್ಯ ಇವೆ, ಅವುಗಳ ಉಪಯೋಗ ತಿಳಿದು ಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಧ್ಯಾತ್ಮ ನಾಯಕರ ಚಿಂತನೆ ಜನರಿಗೆ ಜ್ಞಾನೋದಯ ಮಾಡಿಸುತ್ತದೆ. ‘ಮಾನವ ಜಾತಿ ಒಂದೇ’ ಭೇದ ತರುವುದು ಬೇಡ, ಈ ಜ್ಞಾನ ಬಂದರೆ ಸಾಕು, ಆಧ್ಯಾತ್ಮ ಪ್ರಾರಂಭ ಆದಂತೆ. ಬೆಕ್ಕಿಗೆ ಘಂಟೆ ಕಟ್ಟುವವರ‍್ಯಾರು ಕಥೆಯನ್ನು ಬದಲಾಯಿಸಿ ಹೇಳುವು ಅಗತ್ಯವಿದೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವ ಪರಿಹಾರ ವನ್ನು ಸೂಚಿಸಿದ ಆ ಆಧ್ಯಾತ್ಮ ಇಲಿ ಪುನಃ ತನ್ನ ತಂಡಕ್ಕೆ ಹೇಳಿತು, ಬಹಳ ಹಿಂದಿನಿಂದಲೂ ಈ ಕಥೆ ಮುಂದುವರೆದು ಕೊಂಡೇ ಬಂದಿದ್ದರು. ಅದಕ್ಕೆ ಅಂತ್ಯ ಇಲ್ಲವೆಂದು ಕೊಂಡಿದ್ದೆವು, ಆದರೆ ಅಧ್ಯಯನದಿಂದ ಪರಿಹಾರ ಸಿಕ್ಕಿದೆ. ಮನುಷ್ಯ ಬದಲಾಗದ ಹೊರತು ದಾರಿ ಕಾಣು
ವುದಿಲ್ಲ. ಬದಲಾಗಲು ಅವನಿಗೆ ಎಲ್ಲ ಧರ್ಮಗಳ ಲ್ಲಿರುವ ಆಧ್ಯಾತ್ಮ ಅಂಶಗಳ ಅಳವಡಿಕೆ ಅಗತ್ಯ.

ಭೇದ ತರುವ ಶ್ಲೋಕಗಳ ತಿರಸ್ಕಾರ ಅಗತ್ಯವಾಗಿ ಆಗಬೇಕಿದೆ. ಸಮಾನ ಇರುವ ಶ್ಲೋಕಗಳ ಆರಾಧನೆ ನಿಜತ್ವ ಪ್ರತಿಬಿಂಭಿಸುವ ಶ್ಲೋಕಗಳ ಪುನರಾವರ್ತನೆ ಆಗಿದ್ದಾಗ ನಾವೆಲ್ಲ ಒಂದು ಮಾನವ ಜಾತಿ ಒಂದು ಈ ಭಾವನೆ ಎಲ್ಲರಲ್ಲಿ ಬರುತ್ತದೆ. ಅಂದು ನಾವೆಲ್ಲಾ ಕಲ್ಪಿತ ಲೋಕ ತ್ಯಜಿಸುತ್ತೇವೆ, ವಾಸ್ತವಲೋಕವನ್ನು ಅಪ್ಪಿಕೊಳ್ಳುತ್ತೇವೆ.