Sunday, 15th December 2024

ಹನುಮನ ಭಜನೆ ದೇಶವಿರೋಧಿಯೇ ?

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಬಾಳ ಠಾಕ್ರೆಯವರು ಜೀವನ ಪರ್ಯಂತ ಹಿಂದೂ ಧರ್ಮದ ರಕ್ಷಣೆಗಾಗಿ ಹಗಲು ರಾತ್ರಿಯೆನ್ನದೆ ದುಡಿದಿದ್ದರು, ಆದರೆ ಅವರ ಮಗ ಹಿಂದೂ ಧರ್ಮದ ಸಣ್ಣದೊಂದು ಕುರುಹನ್ನು ಉಳಿಸುವಂತೆ ಕಾಣಿಸುತ್ತಿಲ್ಲ.

ಹನುಮಾನ್ ಚಾಲೀಸ್ ಪಠಣೆ ಮಾಡುವುದು ದೇಶವಿರೋಧಿ ಕೆಲಸವೇ? ಹೌದೆಂದು ಮಹಾರಾಷ್ಟ್ರದ ಶಿವಸೇನಾ ಹಾಗೂ ಕಾಂಗ್ರೆಸ್ ನೇತೃತ್ವದ ಸರಕಾರ ಮುಂಬೈನ ನವನೀತ್ ರಾಣಾ ಹಾಗೂ ರವಿ ರಾಣಾರನ್ನು ಬಂಧಿಸಿದೆ. ಸರಕಾರದ ಆದೇಶಗಳಿಗೆ ಕಿಮ್ಮತ್ತು ನೀಡದೆ ಮುಂಜಾನೆ ಜೋರಾಗಿ ಆಜಾನ್ ಕೂಗಿದವರ ವಿರುದ್ಧ ದಾಖಲಾಗದ ಮೊಕದ್ದಮೆ ಹನುಮಾನ್ ಚಾಲೀಸ್ ಪಠಣೆ ಮಾಡಿದವರ ವಿರುದ್ಧ ದಾಖಲಾಗಿದೆ.

ಹುಲಿಯ ಹೊಟ್ಟೆಯಲ್ಲಿ ಇಲಿಯೊಂದು ಜನ್ಮತಳೆದಂತೆ ಬಾಳ ಠಾಕ್ರೆಯವರ ಕುಟುಂಬ ದಲ್ಲಿ ಉದ್ಧವ್ ಠಾಕ್ರೆ ಹುಟ್ಟಿದ್ದಾರೆ. ಬಾಳ ಠಾಕ್ರೆ ಯವರು ಜೀವನ ಪರ್ಯಂತ ಹಿಂದೂ ಧರ್ಮದ ರಕ್ಷಣೆಗಾಗಿ ಹಗಲು ರಾತ್ರಿಯೆನ್ನದೆ ದುಡಿದಿದ್ದರು, ಆದರೆ ಅವರ ಮಗ ಹಿಂದೂ
ಧರ್ಮದ ಸಣ್ಣದೊಂದು ಕುರುಹನ್ನು ಉಳಿಸುವಂತೆ ಕಾಣಿಸು ತ್ತಿಲ್ಲ. ತನ್ನ ಮನೆಯ ಮುಂದೆ ಹನುಮಾನ್ ಚಾಲೀಸ್ ಪಠಣೆ ಮಾಡಿದರೆ ಮುಖ್ಯಮಂತ್ರಿಗಳ ಭದ್ರತೆಗೆ ಲೋಪ ಬರುತ್ತದೆಂದು ದೇಶವಿರೋಽ ಆರೋಪದಡಿಯಲ್ಲಿ ನವನೀತ್ ರಾಣಾ ಹಾಗೂ ರವಿ ರಾಣಾರನ್ನು ಬಂಧಿಸಲಾಗಿದೆ. ಹನುಮಾನ್ ಚಾಲೀಸ್ ಪಠಣ ವಿಷಯದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭದ್ರತೆಯಲ್ಲಿ ದೊಡ್ಡ ಲೋಪ ಕಂಡು ಬಂದಿತಂತೆ.

ಹಾಗಾಗಿ ಅವರನ್ನು ಐ.ಪಿ.ಸಿ ಕಾಯ್ದೆಯ ನಿಬಂಧನೆ ೧೨೪ಎ ಅಡಿಯಲ್ಲಿ ದೇಶವಿರೋಧಿ ಚಟುವಟಿಕೆಯ ಆಪಾದನೆಯ ಮೇರೆಗೆ ಬಂಧಿಸಲಾಗಿದೆ. ಈ ನಿಬಂಧನೆ ಬ್ರಿಟಿಷರ ಕಾಲದ್ದು, ಮೊದಮೊದಲು ಈ ನಿಬಂಧನೆ ಐ.ಪಿ.ಸಿ. ಕಾಯ್ದೆಯಲ್ಲಿರಲಿಲ್ಲ. ಬ್ರಿಟಿಷರ ವಿರುದ್ಧ ಯಾವಾಗ ಸ್ವಾತಂತ್ರ್ಯ ಹೋರಾಟಗಾರರ ಧ್ವನಿ ಹೆಚ್ಚಾಯಿತೋ, ಅದನ್ನಡಗಿಸಲು ಈ ನಿಬಂಧನೆಯನ್ನು ಸೇರಿಸಲಾಯಿತು.

೧೮೯೧ರಲ್ಲಿ ಮೊದಲ ಬಾರಿಗೆ ಈ ಕಾಯ್ದೆಯಡಿಯಲ್ಲಿ ಪತ್ರಿಕಾ ಸಿಬ್ಬಂದಿಯನ್ನು ಬ್ರಿಟಿಷ್ ಸರಕಾರವು ತಂದಿದ್ದ ಕಾನೂನಿನ ವಿರುದ್ಧ ಧ್ವನಿ ಎತ್ತಿದ್ದಾರೆಂಬ ವಿಷಯವಾಗಿ ಬಂಧಿಸಲಾಯಿತು. ನಂತರ ಇದೇ ನಿಬಂಧನೆಯಡಿಯಲ್ಲಿ ಗಾಂಧಿಯವರನ್ನು ೬ ವರ್ಷಗಳ ಕಾಲ ಬ್ರಿಟಿಷ್ ಸರಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಜೈಲಿಗೆ ಕಳುಹಿಸಲಾಯಿತು. ಸರ್ದಾರ ವಲ್ಲಭಾಯಿ ಪಟೇಲ್ ವಿರುದ್ಧ ದಾವೆ ಹೂಡಲಾಯಿತು. ಭಗತ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ಸ್ವತಂತ್ರ್ಯಾ ನಂತರ ಈ ಕಾಯ್ದೆಯು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಅದಕ್ಕಾಗಿ ತೆಗೆದು ಹಾಕಬೇಕೆಂಬ ಚರ್ಚೆಗಳು ಆರಂಭವಾದವು. ೧೯೪೭ ರಿಂದ ೨೦೨೨ರ ೭೫ ವರ್ಷಗಳ ಅವಧಿಯಲ್ಲಿ ಸುಮಾರು ೫೫ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಈ ನಿಬಂಧನೆಯನ್ನು ತೆಗೆದು ಹಾಕುವ ಒಂದು ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಬದಲಾಗಿ ಈ ನಿಬಂಧನೆಯನ್ನು ಮತ್ತಷ್ಟು ಕಠಿಣ ಗೊಳಿಸಿದ್ದು ಸರ್ವಾಧಿಕಾರಿ ಇಂದಿರಾ ಗಾಂಧಿ. ೧೯೭೨ರಲ್ಲಿ ಈ ನಿಬಂಧನೆಗೆ ತಿದ್ದುಪಡಿ ಮಾಡಿ ಜಾಮೀನು ರಹಿತ ಅಪರಾಧವೆಂಬ
ಕಾನೂನು ಜಾರಿಗೆ ತಂದರು. ಈ ತಿದ್ದುಪಡಿಯಾದ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಯಾವ ರೀತಿಯಲ್ಲಿ ಕಾನೂನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರೆಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ.

ಕಾಂಗ್ರೆಸ್ ಅವಧಿಯಲ್ಲಿ ತನ್ನ ಸರಕಾರದ ವಿರುದ್ಧ ಮಾತನಾಡಿದ ಹಲವರನ್ನು ಈ ನಿಬಂಧನೆಯಡಿಯಲ್ಲಿ ಬಂಧಿಸಲಾಯಿತು. ನೆಹರು ಕಾಲದಲ್ಲಿ ಅವರ ಸರಕಾರದ ವಿರುದ್ಧ ಧ್ವನಿ ಎತ್ತಿದ ಜನಸಂಘದ ಕಾರ್ಯಕರ್ತರ ವಿರುದ್ಧ ಈ ನಿಬಂಧನೆಯನ್ನು ಜಾರಿ ಮಾಡಿ ಬಂಽಸ ಲಾಗಿತ್ತು. ಈ ನಿಬಂಧನೆ ಯಡಿಯಲ್ಲಿ ಜೀವಾವಽ ಶಿಕ್ಷೆಯನ್ನು ನೀಡಬಹುದಾಗಿದೆ. ಸ್ವಾತಂತ್ರ್ಯಾ ನಂತರ ಕಮ್ಯುನಿಸ್ಟರು ಭಾರತದ ವಿರುದ್ಧ ಹಲವು ಸಂಚುಗಳನ್ನು ಮಾಡಿದ್ದರು. ಕೆಲವು ಕಮ್ಯುನಿಸ್ಟ್ ನಾಯಕರು ದೇಶದ್ರೋಹದ ಹೇಳಿಕೆಗಳನ್ನು ನೀಡುತ್ತಲಿದ್ದರೂ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಈ ನಿಬಂಧನೆಯಡಿಯಲ್ಲಿ ಕ್ರಮ ಕೈಗೊಂಡಿದ್ದು ವಿರಳ.

ಹನುಮಾನ್ ಚಾಲೀಸ್ ಪಠಣ ವಿಷಯದಲ್ಲಿ ಮಹಾರಾಷ್ಟ್ರ ಸರಕಾರದ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆಯೆಂದು ರಾಣಾ ದಂಪತಿ ಗಳನ್ನು ಬಂಽಸಲಾಗಿದೆ. ೨೦೧೬ ರಲ್ಲಿ ’ಒಘೆಖಿ’ ವಿಶ್ವವಿದ್ಯಾಲಯದಲ್ಲಿ ಪಾರ್ಲಿಮೆಂಟ್ ದಾಳಿಯ ರೂವಾರಿಯಾಗಿದ್ದ ಅ-ಲ್ ಗುರುವನ್ನು ನೇಣಿಗೆ ಹಾಕ್ಕಿದ್ದರ ವಿರುದ್ಧ ಪ್ರತಿಭಟನೆಯೊಂದು ನಡೆಯಿತು. ಈ ಪ್ರತಿಭಟನೆಯಲ್ಲಿ ಅಫ್ಜಲ್ ಗುರುವಿನ ಪರವಾಗಿ ಮಾತನಾಡಿದ ಕನ್ನಯ್ಯ ಕುಮಾರ್ ವಿರುದ್ಧ ಈ ಕಾಯ್ದೆಯಡಿಯಲ್ಲಿ ಕೇಸು ದಾಖಲಾಯಿತು. ಆತನನ್ನು ಬಂಧಿಸಿದ ಕೂಡಲೇ ಕಾಂಗ್ರೆಸ್ಸಿನ ಮಾಜಿ ಸಚಿವ ಪಿ.ಚಿದಂಬರಂ ಕನ್ನಯ್ಯ ಕುಮಾರ್ ಬಂಧನ ಮೂಲಭೂತ ಹಕ್ಕುಗಳ ಉಲ್ಲಂಘನೆಯೆಂದು ಹೇಳಿದರು. ಚಿದಂಬರಂ ಹೇಳಿಕೆಯಿಂದ ಕಾಂಗ್ರೆಸ್ಸಿನ ಇಬ್ಬಗೆಯ ನೀತಿ ಬಯಲಾಯಿತು. ನೆಹರು ಹಾಗೂ ಇಂದಿರಾ ಗಾಂಧಿ ಮಾಡಿದ ಕೆಲಸವನ್ನೇ ಚಿದಂಬರಂ ಹಾಗೂ ಸೋನಿಯಾ ಗಾಂಽ ಮುಂದುವರೆಸಿಕೊಂಡು ಬಂದರು. ಕಮ್ಯುನಿಸ್ಟ್ ಪತ್ರಕರ್ತೆ ಅರುಂಧತಿ ರಾಯ ಸದಾ ಭಾರತ ವಿರುದ್ಧದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ.

ಒಘೆಖಿ ವಿಶ್ವವಿದ್ಯಾಲಯದಲ್ಲಿ ಭಾರತ ವಿರೋಧಿ ಪ್ರತಿಭಟನೆಯ ಮುಂದಿನ ಸಾಲಿನಲ್ಲಿ ಈಕೆಯ ವಾಸ್ತವ್ಯವಿರುತ್ತದೆ. ತನ್ನ ಮೌಖಿಕ ಭಯೋತ್ಪಾದನೆಯ ಮೂಲಕ ವಿದ್ಯಾರ್ಥಿಗಳ ತಲೆಯನ್ನು ಹಾಳುಮಾಡುವ ಕಲೆ ಈಕೆಯ ಜೀವಮಾನದ ಸಾಧನೆ. ೧೯೮೦ ಹಾಗೂ ೧೯೯೦ರ ದಶಕದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಜತೆ ಸಂಪರ್ಕದಲ್ಲಿದ್ದಂಥ ಅರುಂಧತಿ ರಾಯ  ಞರುದ್ಧ ಕಾಂಗ್ರೆಸ್ ಅವಽಯಲ್ಲಿ ದೇಶ ವಿರೋಽ ಚಟುವಟಿಕೆಯಡಿಯಲ್ಲಿ ೧೨೪ಎ ನಿಬಂಧನೆಯಡಿಯಲ್ಲಿ ಕೇಸ್ ದಾಖಲಾಗಿದ್ದ ಉದಾಹರಣೆಯಿಲ್ಲ. ಆದರೆ ೨೦೧೦ರಲ್ಲಿ
ಕಾಶ್ಮೀರ ಪ್ರತ್ಯೇಕತೆಯ ಪರವಾಗಿ ಮಾತನಾಡಿದಳೆಂದು ಅದೇ ನಿಬಂಧನೆಯಡಿಯಲ್ಲಿ ಕೇಸ್ ದಾಖಲಾಯಿತು.

ಜನರ ಕೂಗು ಹೆಚ್ಚಾದರೆ ಮಾತ್ರ ಕಾಂಗ್ರೆಸ್ ಕ್ರಮ ಕೈಗೊಳ್ಳುವಂತೆ ಈ ಪ್ರಕರಣ ಕಂಡುಬಂದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಹೋರಾಟದಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಈ ನಿಬಂಧನೆಯಡಿಯಲ್ಲಿ ಕೇಸ್ ದಾಖಲಾಯಿತು.
ಇಂದಿಗೂ ಸಹ ಈ ತಿದ್ದುಪಡಿಯಿಂದ ಯಾವ ಮುಸಲ್ಮಾನನಿಗೆ ತೊಂದರೆಯಾಯಿತೆಂದು ಕೇಳಿದರೆ ಹೇಳುವ ಒಬ್ಬ ಭೂಪನೂ ಸಿಗುವುದಿಲ್ಲ.

ಅಸ್ಸಾಂ ರಾಜ್ಯದ ಪತ್ರಕರ್ತೆ ಒಬ್ಬರನ್ನು ಪೌರತ್ವ ತಿದ್ದುಪಡಿಯ ಕಾಯ್ದೆಯ ವಿರುದ್ಧ ಸುಳ್ಳು ಸುದ್ದಿ ಹರಡಿಸಿದ್ದರ ಆರೋಪದಡಿಯಲ್ಲಿ ೧೨೪ಎ ನಿಬಂಧನೆಯಡಿಯಲ್ಲಿ ದಾವೆ ಹೂಡಲಾಯಿತು. ಮತ್ತದೇ ಹಳೆಯ ಕಮ್ಯುನಿಸ್ಟ್ ಗ್ಯಾಂಗ್ ಮೂಲಭೂತ ಹಕ್ಕುಗಳಡಿಯಲ್ಲಿ ಸರಕಾರದ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್ ಅವಽಯಲ್ಲಿ ದೇಶ ವಿರೋಽ ಹೇಳಿಕೆಗಳನ್ನು ನೀಡಿ ಸುಲಭವಾಗಿ ಬಚಾವಾಗುತ್ತಿದ್ದಂಥ
ಗಂಜಿ ಗಿರಾಕಿಗಳಿಗೆ ಕಳೆದ ೮ ವರ್ಷಗಳಿಂದ ಬೆಂಕಿ ಬಿದ್ದಿದೆ.

ಮಾಧ್ಯಮ ಕ್ಷೇತ್ರವನ್ನು ತಮ್ಮ ಕೈಗೊಂಬೆಯಂತೆ ಆಡಿಸುತ್ತಿದ್ದ ಕಮ್ಯುನಿಸ್ಟ್ ಪತ್ರಕರ್ತರಿಗೆ ತಾವು ನೀಡುತ್ತಿರುವ ಹೇಳಿಕೆಗಳಿಗೆ
ಮೋದಿ ನೇತೃತ್ವದ ಸರಕಾರ ಸೊಪ್ಪು ಹಾಕುತ್ತಿಲ್ಲವೆಂಬ ಸತ್ಯದ ಅರಿವಾಗಿದೆ. ದೇಶ ಭಕ್ತರ ಧ್ವನಿ ಅಡಗಿಸಲು ಬಳಸುತ್ತಿದ್ದಂಥ
ನಿಬಂಧನೆ ೧೨೪ಎ ದೇಶ ವಿರೋಧಿಗಳ ವಿರುದ್ಧ ಬಳಕೆಯಾಗುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ತಮ್ಮ ಈ ನಿಬಂ ಧನೆಯನ್ನು ತೆಗೆದು ಹಾಕಬೇಕೆಂಬ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಕಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಈ ನಿಬಂಧನೆಯನ್ನು ಪುನರ್ ಪರಿಶೀಲಿಸಲು ಹೇಳಿದೆ. ಸುಮಾರು ೨೫೦೦ ಹಳೆಯ ಕಾನೂನುಗಳನ್ನು ತೆಗೆದು ಹಾಕಿದ್ದ ಮೋದಿ ಸರಕಾರಕ್ಕೆ ಈ ಕಾನೂನನ್ನು ತೆಗೆದು ಹಾಕುವುದು ಕಷ್ಟವಾಗಿರಲಿಲ್ಲ. ಆದರೆ ಕಮ್ಯುನಿಸ್ಟರ ದೇಶ ವಿರೋಧಿ ಹೇಳಿಕೆಗಳು, ದೇಶವಿರೋಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದ್ದರೆ ಈ ನಿಬಂಧನೆಯ ಅವಶ್ಯಕತೆ ಇತ್ತು.

ಬಹಿರಂಗವಾಗಿ ಭಯೋತ್ಪಾದಕರ ಪರ ನಿಲ್ಲುವವರ ವಿರುದ್ಧ ದೇಶ ವಿರೋಧಿ ಕೇಸ್ ದಾಖಲು ಮಾಡದೇ ಮತ್ತೇನು ಮಾಡಬೇಕು? ಪೊಲೀಸ್ ಠಾಣೆಗೆ ಕಲ್ಲು ತೂರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು? ಸುಳ್ಳು ಸುದ್ದಿಯನ್ನು ಪ್ರಚರಿಸಿ ದೇಶಾದ್ಯಂತ ಗಲಭೆ ಸೃಷ್ಟಿಸುವವರನ್ನು ಈ ಕಾಯ್ದೆಯಡಿಯಲ್ಲಿ ಬಂಽಸುವುದರಲ್ಲಿ ಯಾವ ತಪ್ಪಿದೆ? ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಇದೇ
ರೀತಿಯ ನಿಬಂಧನೆಯನ್ನು ತೆಗೆದು ಹಾಕಿವೆ.

ಆದರೆ ಅದಕ್ಕೆ ಪರ್ಯಾಯವಾಗಿ ನೂತನ ಕಾನೂನನ್ನು ಜಾರಿಗೆ ತರಲಾಗಿದೆ. ಮುಸಲ್ಮಾನರು ತಮ್ಮ ಧರ್ಮದ ವಿಚಾರದಲ್ಲಿ ಷರಿಯಾ ಕಾನೂನನ್ನು ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ತಮ್ಮ ಧರ್ಮದ ಪುಂಡರು ನಡೆಸುವ ದೇಶವಿರೋಧಿ ಕೃತ್ಯಗಳ ವಿರುದ್ಧ ಈ ನಿಬಂಧನೆಯಡಿಯಲ್ಲಿ ಕೇಸು ದಾಖಲಾದರೆ ಒಪ್ಪಿಕೊಳ್ಳಲು ತಯಾರಿಲ್ಲ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲ ಐಪಿಸಿಯ ೧೨೪ಎ ನಿಬಂಧನೆಯಡಿಯಲ್ಲಿ ಕೇಸುಗಳು ದಾಖಲಾಗುವುದು ಹೆಚ್ಚಾಗಿದೆ.

ಮೂಲಭೂತ ಹಕ್ಕಿನ ನೆಪದಲ್ಲಿ ಬಾಯಿಗೆ ಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತಕ್ಕೆ ಅಪಮಾನವಾಗುವ ವಿಷಯಗಳ ಬಗ್ಗೆ ಚರ್ಚೆ ಮಾಡಬಾರದು. ಆದರೆ ವಿರೋಧ ಪಕ್ಷಗಳು ತಮ್ಮ ರಾಜಕೀಯ ಓಲೈಕೆ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರ ಬಗೆಗಿನ ತಮ್ಮ ಇಬ್ಬಗೆಯ ನೀತಿಯಿಂದ ದೇಶಪ್ರೇಮಿಗಳು ಹಾಗೂ ಹಿಂದೂ ಧರ್ಮದ ಕಾರ್ಯಕರ್ತರ ವಿರುದ್ಧ  ಬಂಧನೆ ೧೨೪ಎ ಬಳಸಿಕೊಳ್ಳುತ್ತಾ ಬಂದಿರುವುದು ದುರದೃಷ್ಟಕರ.

ಕರ್ನಾಟಕದಲ್ಲಿ ೨೦೧೩ ರಿಂದ ೨೦೧೮ರ ನಡುವೆ ಹಿಂದೂ ಕಾರ್ಯಕರ್ತರ ವಿರುದ್ಧ ಹಲವು ಪ್ರಕರಣಗಳು ಈ ನಿಬಂಧನೆಯಡಿಯಲ್ಲಿ ದಾಖಲಾಗಿವೆ. ಈಗ ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್ ಸರಕಾರ ರಾಣಾ ದಂಪತಿಗಳು ಹನುಮಾನ್ ಚಾಲೀಸ್ ಪಠಣೆ ಮಾಡಿದರೆಂಬ
ಕಾರಣಕ್ಕೆ ಈ ನಿಬಂಧನೆಯಡಿಯಲ್ಲಿ ದೇಶ ವಿರೋಧಿ ಕೇಸ್ ದಾಖಲೆ ಮಾಡಿದೆ. ಆಂಜನೇಯ, ರಾಮ, ಲಕ್ಷ್ಮಣ, ಸೀತಾ, ಶ್ರೀಕೃಷ್ಣರ ನಾಡಿನಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವುದನ್ನು ದೇಶ ವಿರೋಧಿ ಕೃತ್ಯವೆಂದು ಕಾಂಗ್ರೆಸ್ ಸರಕಾರ ಪರಿಗಣಿಸಿ ಕೇಸು ದಾಖಲು ಮಾಡುತ್ತದೆಯೆಂದರೆ ನಿಬಂಧನೆ ೧೨೪ಎ ಯಾವ ರೀತಿಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ದುರ್ಬಳಕೆಯಾಗಿರಬೇಕೆಂದು ನೀವೇ ಊಹಿಸಿಕೊಳ್ಳಿ.