Thursday, 12th December 2024

ತೀವ್ರ ನಿಗೋಪಚಾರ ಘಟಕದ ಪರಿಚಯ

ಸ್ವಾಸ್ಥ್ಯ ಸಂಪದ

Yoganna55@gmail.com

ಹೃಧಯ ಸ್ನಾಯುವಿಗೆ ಪುನರುತ್ಪತ್ತಿ ಸಾಮರ್ಥ್ಯವಿಲ್ಲದ ಕಾರಣ ಸಾವಿಗೀಡಾದ ಸ್ನಾಯುಭಾಗದಲ್ಲಿ ನಾರಿನಂಶ ತುಂಬಿಕೊಂಡು ಅಪ್ರಯೋಜಕವಾಗುತ್ತದೆ. ಆದ್ದರಿಂದ ಹೃದಯ ಸ್ನಾಯುವಿನ ಸಾವಿನ ಪ್ರಮಾಣವನ್ನು ತಗ್ಗಿಸಿ ತಕ್ಷಣದ ಸಾವನ್ನು ತಪ್ಪಿಸಿ, ಸಂಭಾವ್ಯ ಅವಘಡಗಳನ್ನು ತಪ್ಪಿಸುವುದು ಅತ್ಯವಶ್ಯಕ.

ದಯಾಘಾತಕ್ಕೀಡಾದವರಿಗೆ ಹೃದಯಾಘಾತ ಸಂಭವಿಸಿದ ೪-೬ ಗಂಟೆಯೊಳಗೆ ಸಮಂಜಸವಾದ ಚಿಕಿತ್ಸೆ ನೀಡಿದಲ್ಲಿ ಸಾವಿಗೀಡಾಗುವ ಹೃದಯ ಸ್ನಾಯುವಿನ ಪ್ರಮಾಣವನ್ನು ತಡೆಗಟ್ಟಬಹುದು ಮತ್ತು ಸಂಭವಿಸ ಬಹುದಾದ ಘೋರ ದುಷ್ಪರಿಣಾಮಗಳನ್ನು ತಡೆಗಟ್ಟಿ ಸಾವಿನಿಂದ ಪಾರುಮಾಡಬಹುದು. ಹೃದಯಾ
ಘಾತದ ಚಿಕಿತ್ಸೆಗೆ ಜೀವರಕ್ಷಕ ಸಲಕರಣೆಗಳು, ತರಬೇತಿ ಪಡೆದ ಸಿಬ್ಬಂದಿಯನ್ನುಳ್ಳ ವ್ಯವಸ್ಥೆ ಅತ್ಯವಶ್ಯಕ. ಈ ಎಲ್ಲ ವ್ಯವಸ್ಥೆಗಳನ್ನುಳ್ಳ ಚಿಕಿತ್ಸಾ ಘಟಕವನ್ನು ‘ಹೃದ್ರೋಗ ತೀವ್ರ ನಿಗೋಪಚಾರ ಘಟಕ’ ಎಂದು ಕರೆಯ  ಲಾಗುತ್ತದೆ. ಈ ಘಟಕದಲ್ಲಿರುವ ಸಲಕರಣೆ ಗಳುಸಂಭವಿಸುವ ಅವಘಡಗಳನ್ನು ಗುರುತಿಸುವಿಕೆ ಮತ್ತು ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆ ಈ ಲೇಖನ ದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.

ಒಮ್ಮೆ ಹೃದಯದ ಸ್ನಾಯು ಸಾವಿಗೀಡಾದಲ್ಲಿ ಆ ಭಾಗ ಶಾಶ್ವತವಾಗಿ ನಿರ್ಜೀವವಾಗುತ್ತದೆ. ಹೃದಯ ಸ್ನಾಯುವಿಗೆ ಪುನರುತ್ಪತ್ತಿ ಸಾಮರ್ಥ್ಯವಿಲ್ಲದ ಕಾರಣ ಸಾವಿಗೀಡಾದ ಭಾಗ ನಾರಿನಂಶದಿಂದ ತುಂಬಿಕೊಂಡು ಅಪ್ರಯೋಜಕವಾಗುತ್ತದೆ. ಆದುದರಿಂದ ಹೃದಯ ಸ್ನಾಯುವಿನ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಿ ತಕ್ಷಣದ ಸಾವನ್ನು ತಪ್ಪಿಸಿ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅವಘಡಗಳನ್ನು ತಪ್ಪಿಸುವುದು ಅತ್ಯವಶ್ಯಕ. ಹೃದಯಾಘಾತದ ತೊಂದರೆಗಳು ಪ್ರಾರಂಭವಾದ ೪-೬ ಗಂಟೆಗಳವರೆಗೆ ರಕ್ತ ಕುಂದಿಕೆಗೀಡಾದ ಹೃದಯಸ್ನಾಯುವಿನ ಭಾಗವನ್ನು ಜೀವಂತಗೊಳಿಸುವ ಸಾಧ್ಯತೆ ಇರುವುದರಿಂದ ಈ ಅವಧಿಯೊಳಗೆ ಸಮಂಜಸ ಚಿಕಿತ್ಸೆ ಅತ್ಯವಶ್ಯಕ.

ಸಮಯವನ್ನು ವ್ಯಯಮಾಡದೆ ಕ್ಯಾಥ್‌ಲ್ಯಾಬ್ ಸೌಲಭ್ಯವಿರುವ ಆಸ್ಪತ್ರೆಗೆ ರೋಗಿಯನ್ನು ಬಹುಬೇಗ ಕರೆದೊಯ್ಯಬೇಕು. ೪-೬ ಗಂಟೆಯೊಳಗಿದ್ದಲ್ಲಿ ಆಂಜಿಯೋ ಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಕೆ ಚಿಕಿತ್ಸೆಯಿಂದ ರಕ್ತ ಸ್ಥಗಿತವಾದ ಹೃದಯಸ್ನಾಯುವಿನ ಭಾಗಕ್ಕೆ ರಕ್ತ ಪೂರೈಕೆಯನ್ನು ಪುನರ್ ಸ್ಥಾಪಿಸುವುದರಿಂದ ಸಂಬಂಽಸಿದ ಹೃದಯಸ್ನಾಯುವಿನ ಸಾವನ್ನು ಪೂರ್ಣವಾಗಿ ತಡೆಗಟ್ಟಬಹುದು ಅಥವಾ ಹೃದಯ ಸ್ನಾಯುವಿನ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸ ಬಹುದು. ತಕ್ಷಣ ಆಸ್ಪರಿನ್ ೩೦೦ ಗ್ರಾಂ, ಕ್ಲೊಪಿಡೋಗ್ರಿಲ್ ೧೫೦ ಮಿ.ಗ್ರಾಂ ಮತ್ತು ಅಟರ್ವಾ ಸ್ಟಾಟಿನ್ ೪೦ ಮಿ.ಗ್ರಾಂ ಔಷಧಗಳನ್ನು ಬಾಯಿ ಮೂಲಕ ನೀಡಬೇಕು.

ಹೃದಯಾಘಾತದ ಸಂಭವವಿರುವವರು ಈ ಔಷಧಗಳನ್ನು ತಮ್ಮೊಡನೆ ಸದಾ ಇಟ್ಟುಕೊಂಡು ತೊಂದರೆಗಳು ಪ್ರಾರಂಭವಾದ ತಕ್ಷಣ ಸೇವಿಸಿದಲ್ಲಿ ಕಾಯಿಲೆಯ ತೀವ್ರತೆಯನ್ನು ಕಡಿಮೆಗೊಳಿಸಬಹುದಾಗಿದೆ. ರಕ್ತಹೆಪ್ಪನ್ನು ಕರಗಿಸುವ ಹೆಪ್ಯಾರಿನ್ ಇತ್ಯಾದಿ ಔಷಧಗಳನ್ನು ರಕ್ತಕ್ಕೆ ನೀಡಲಾಗುತ್ತದೆ. ಹೃದಯದ ಕಾರ್ಯಗಳು,
ಬಿ.ಪಿ., ಉಸಿರಾಟ ಇತ್ಯಾದಿಗಳನ್ನು ನಿರಂತರವಾಗಿ ನಿಯಂತ್ರಿಸುವ ಹೃದ್ರೋಗದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಜತೆಗೂಡಿದ ಕಾಯಿಲೆಗಳಿಗೆ ಚಿಕಿತ್ಸೆ
ಸಕ್ಕರೆಕಾಯಿಲೆ, ಏರುರಕ್ತ ಒತ್ತಡ, ರಕ್ತದ ಜಿಡ್ಡೇರಿಕೆ ತೊಂದರೆಗಳನ್ನು ನಿಯಂತ್ರಿಸಲು ಸೂಕ್ತ ಚಿಕಿತ್ಸೆ ಅತ್ಯವಶ್ಯಕ.
? ಹೃದ್ರೋಗ ತೀವ್ರ ನಿಗೋಪಚಾರ ಘಟಕ (ಇಂಟೆನ್ಸಿವ್ ಕಾರ್ಡಿಯಾಕ್ ಕೇರ್ ಯೂನಿಟ್ -ಐಸಿಸಿಯು)
ಹೃದಯಾಘಾತವಾದ ರೋಗಿಗಳಿಗೆ ಅವಶ್ಯಕವಿರುವ ಮತ್ತು ಸಂಭವನೀಯ ಎಲ್ಲ ಅವಘಡಗಳನ್ನು ಸಮರ್ಥವಾಗಿ ನಿರ್ವಹಿಸಲು ಅವಶ್ಯಕವಿರುವ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿ ಗಳಿರುವ ಸುಸಜ್ಜಿತ ಹವಾನಿಯಂತ್ರಣ ಚಿಕಿತ್ಸಾ ಘಟಕವಿದು. ರೋಗಿಯ ಹೃದಯದ ಕಾರ್ಯದ ನಿರಂತರ ಕ್ರಿಯೆಯನ್ನು ಪ್ರದರ್ಶಿಸುವ ಇಸಿಜಿ ಮಾನಿಟರ್, ಹೃದಯದ ವಿದ್ಯುತ್ ಅಸ್ಥಿರತೆಗಳನ್ನು ದಮನಮಾಡುವ ಡಿಫಿಬ್ರಿಲೇಟರ್, ಉಸಿರಾಟದ ಸಮಸ್ಯೆಗಳುಂಟಾದಲ್ಲಿ ಅಳವಡಿಸಲಾಗುವ ವೆಂಟಿ
ಲೇಟರ್, ಹೃದಯದ ಮಿಡಿತಾeಗಳ ಅವ್ಯವಸ್ಥೆಯನ್ನು ಸರಿಪಡಿಸುವ ಪೇಸ್‌ಮೇಕರ್, ಆಂಜಿ ಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿಗಳನ್ನು ಮಾಡಲು ಅವಶ್ಯಕವಿರುವ ಕ್ಯಾಥ್‌ಲ್ಯಾಬ್, ಆಮ್ಲ ಜನಕದ ಪ್ರಮಾಣವನ್ನು ಅಳೆಯುವ ಪಲ್ಸ್ ಆಕ್ಸಿಮೀಟರ್, ಔಷಧಗಳನ್ನು ನಿಗದಿತ ಪ್ರಮಾಣದಲ್ಲಿ ಬೇಕೆಂದಾಗ ನೀಡುವ ಸಿರಿಂಜ್ ಪಂಪ್‌ಗಳು ಮತ್ತು ಅವಶ್ಯಕ ಎಲ್ಲ ಹೃದ್ರೋಗದ ಔಷಧಗಳನ್ನು ಶೇಖರಿಸಿ ಟ್ಟಿರುವ ಪೆಟ್ಟಿಗೆ ಇವೆಲ್ಲವುಗಳಿಂದ ಸುಸಜ್ಜಿತವಾದ ಘಟಕವಿದು. ಯಾವುದೇ ಅವಘಡಗಳುಂಟಾದಲ್ಲಿ ತಕ್ಷಣ ಗಮನಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಪೇಸ್‌ಮೇಕರ್
ಹೃದ್ರೋಗ ತೀವ್ರ ನಿಗಾ ಘಟಕದಲ್ಲಿ ಜೀವ ಉಳಿಸುವ ಯಂತ್ರವಿದು. ಹೃದಯದ ರವಾನಾ ಅಡಚಣೆಗಳುಂಟಾದಲ್ಲಿ ಇದನ್ನು ಅಳವಡಿಸಲಾಗುತ್ತದೆ. ಎದೆಗೋಡೆಗೆ ಯಂತ್ರಭಾಗವನ್ನು ಅಳವಡಿಸಿ ಎಲೆಕ್ಟ್ರೋಡ್ ಅನ್ನು ಹೃದಯಕ್ಕೆ ಜೋಡಿಸಲಾಗುತ್ತದೆ. ಈ ಯಂತ್ರದಿಂದ ಉತ್ಪತ್ತಿಯಾಗುವ ಹೃದಯದ ಮಿಡಿತಾಜ್ಞೆಗಳು ಹೃದಯದ ಕಾರ್ಯಚಕ್ರವನ್ನು ನಿಯಂತ್ರಿಸುತ್ತವೆ.

ಡಿಫಿಬ್ರಿಲೇಟರ್
ಹೃದಯಸ್ತಂಭನವನ್ನು ಪುನರ್ಜೀವಗೊಳಿಸಿ ಸಾವಿನಿಂದ ಪಾರುಮಾಡುವ ಜೀವರಕ್ಷಕ ಯಂತ್ರವಿದು. ಹೃದಯಸ್ತಂಭನವನ್ನು ತಕ್ಷಣ ಗಮನಿಸಿ ಈ ಯಂತ್ರದಿಂದ ವಿದ್ಯುತ್ ಶಾಕ್ ಅನ್ನು ನೀಡಿದಲ್ಲಿ ಅವ್ಯವಸ್ಥಿತವಾದ ಹೃದಯದ ವಿದ್ಯುತ್ ವ್ಯವಸ್ಥೆ ಪುನರ್ ಸಹಜ ವ್ಯವಸ್ಥೆಗೆ ಬಂದು ಹೃದಯದ ಕಾರ್ಯ ಪುನರಾರಂಭವಾಗುತ್ತದೆ. ಹೃದಯ ಸ್ತಂಭನವಾದ ತಕ್ಷಣ ೨-೩ ನಿಮಿಷದಲ್ಲಿ ನೀಡಿದಲ್ಲಿ ಮಾತ್ರ ಇದು ಫಲಕಾರಿ. ಈ ಯಂತ್ರ ಲಭ್ಯವಿಲ್ಲದ ಸಂದರ್ಭಗಳಲ್ಲಿ ಎದೆಯ ಮೇಲೆ ಎರಡು ಕೈಗಳನ್ನು ಅದುಮಿ ಹೃದಯವನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಕೆಲವೊಮ್ಮೆ ಫಲಕಾರಿಯಾಗುತ್ತದೆ.

ಅವಘಡಗಳು
ಹೃದಯಾಘಾತದಲ್ಲುಂಟಾಗುವ ಅವಘಡಗಳು ಸಾವಿಗೀಡಾದ ಭಾಗ, ಗೋಡೆ ಮತ್ತು ವಿಸ್ತಾರಗಳನ್ನು ಹಾಗೂ ಉಂಟಾಗಬಹುದಾದ ವಿದ್ಯುತ್ ಅಸ್ಥಿರತೆ
ಗಳನ್ನು ಅವಲಂಬಿಸಿರುತ್ತವೆ. ಹೃದಯಾಘಾತ ದಲ್ಲುಂಟಾಗುವ ವಿದ್ಯುತ್ ಅಸ್ಥಿರತೆ ದಿಢೀರ್ ಸಾವಿಗೆ ಬಹುಮುಖ್ಯ ಕಾರಣವಾದುದರಿಂದ ಇದನ್ನು ಸಕಾಲದಲ್ಲಿ ಗುರುತಿಸುವಿಕೆ ಮತ್ತು ಸೂಕ್ತ ಚಿಕಿತ್ಸೆ ಅತ್ಯವಶ್ಯಕ. ಹೃದಯದ ವಿಫಲತೆ, ಹೃದಯ ಮಿಡಿತಾಜ್ಞೆಯ ರವಾನಕ ಅಡಚಣೆಗಳು, ಹೃತ್ಕುಕ್ಷಿಯ ಮಿಡಿತೇರಿಕೆ ಮತ್ತು ಹೃತ್ಕುಕ್ಷಿಯ ಕಂಪನ ಸಂಭವಿಸಬಹುದಾದ ಬಹುಮುಖ್ಯ ಅವಘಡಗಳು. ರೋಗಿಯ ಸಾವಿಗೆ ಈ ಅವಘಡಗಳೇ ಮುಖ್ಯ ಕಾರಣಗಳಾದುದರಿಂದ ಇವು ಗಳನ್ನು ತಡೆಗಟ್ಟುವುದರಿಂದ, ಕಾಣಿಸಿಕೊಂಡಾ ಕ್ಷಣ ಸೂಕ್ತ ಚಿಕಿತ್ಸೆ ನೀಡುವುದರಿಂದ ರೋಗಿ ಬದುಕುಳಿಯುತ್ತಾನೆ.

ಹೃದಯದ ವಿಫಲತೆ
ಎಡ ಹೃತ್ಕುಕ್ಷಿಯ ಹೃದಯಸ್ನಾಯು ಸಾವಿನಲ್ಲಿ ಎಡಹೃತ್ಕುಕ್ಷಿಯ ವಿಫಲತೆ, ಬಲ ಹೃತ್ಕುಕ್ಷಿಯ ಸಾವಿನಲ್ಲಿ ಬಲ ಹೃತ್ಕುಕ್ಷಿಯ ವಿಫಲತೆಗಳುಂಟಾಗುತ್ತವೆ. ಎಡ ಹೃತ್ಕುಕ್ಷಿಯ ವಿಫಲತೆಯಿಂದ ದೇಹದ ವಿವಿಧ ಭಾಗಗಳಿಗೆ ಶುದ್ಧ ರಕ್ತ ಸರಬರಾಜಾಗುವಿಕೆ ಕುಗ್ಗಿ ಮಾರಣಾಂತಿಕ ಪರಿಣಾಮಗಳುಂಟಾಗುತ್ತವೆ. ಒಂದಕ್ಕಿಂತ ಹೆಚ್ಚು ಗೋಡೆಗಳ ಸಾವಿನಲ್ಲಿ, ಮುಂಭಾಗದ ಮತ್ತು ಹೊರಭಾಗದ ಗೋಡೆಗಳ ಸಾವಿನಲ್ಲಿ ಈ ಸಾಧ್ಯತೆ ಹೆಚ್ಚು. ಹೃದಯದ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುವ ಔಷಧಗಳನ್ನು ನೀಡಿ ವಿಫಲತೆಯನ್ನು ನಿಯಂತ್ರಿಸಲಾಗುತ್ತದೆ. ಬಲ ಹೃತ್ಕುಕ್ಷಿಯ ವಿಫಲತೆ ಅಪರೂಪ. ಇದರಲ್ಲಿ ಹದೆಲ್ಲೆಡೆಯ ಅಶುದ್ಧರಕ್ತ ಬಲ ಹೃದಯಕ್ಕೆ
ಬಾರದೆ ಅಲ್ಲಲ್ಲಿಯೇ ನಿಲುಗಡೆಯಾಗುತ್ತದೆ.

? ಹೃದಯದ ವಿದ್ಯುತ್ ಅಸ್ಥಿರತೆಯ ಅವಘಡಗಳು

ಹೃದಯ ಮಿಡಿತಾe ರವಾನಕ ವ್ಯವಸ್ಥೆಗೆ ರಕ್ತ ಕೊರತೆ ಯುಂಟಾದಲ್ಲಿ ಈ ವ್ಯವಸ್ಥೆಯ ಸಹಜ ವಿದ್ಯುತ್ ಕಾರ್ಯವ್ಯವಸ್ಥೆ ಅವ್ಯವಸ್ಥೆಗೊಂಡು ಹೃದಯದ
ಮಿಡಿತಾಜ್ಞೆ ಉತ್ಪತ್ತಿ ರವಾನೆಯಲ್ಲಿ ಗಂಭೀರ ಸ್ವರೂಪದ ಅವ್ಯವಸ್ಥೆಗಳುಂಟಾಗುತ್ತವೆ. ಹೃದಯಾಘಾತದಲ್ಲುಂಟಾಗುವ ಸಾವುಗಳಿಗೆ ಈ ಅವ್ಯವಸ್ಥೆಗಳೇ
ಪ್ರಮುಖ ಕಾರಣವಾದುದರಿಂದ ಇವುಗಳಿಗಾಗಿ ನಿರಂತರವಾಗಿ ಗಮನಿಸುತ್ತಿರಬೇಕು.

ಈ ಅವ್ಯವಸ್ಥೆಗಳನ್ನು ಇಸಿಜಿಯಲ್ಲಿ ಗಮನಿಸ ಬಹುದಾಗಿದ್ದು, ಗುರುತಿಸಿದಾಕ್ಷಣ ಚಿಕಿತ್ಸೆ ನೀಡಿದಲ್ಲಿ ಸಾವಿನಿಂದ ಪಾರುಮಾಡಬಹುದು. ಹೃದಯಾಘಾತ
ಕ್ಕೊಳಗಾದವರಿಗೆ ಚಿಕಿತ್ಸೆ ನೀಡುವಾಗ ಈ ಜಟಿಲತೆ ಗಳನ್ನು ಗಮನಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುವ ಇಸಿಜಿ ಮಾನಿಟರ್ ಸಲಕರಣೆಯನ್ನು ರೋಗಿಗೆ ಅಳವಡಿಸಲಾಗುತ್ತದೆ. ಔಷಧಗಳು ಮತ್ತು ಅವಶ್ಯಕತೆ ಬಿದ್ದಲ್ಲಿ ಇಲೆಕ್ಟ್ರಿಕ್ ಶಾಕ್ ಚಿಕಿತ್ಸೆಯಿಂದ ಇವುಗಳನ್ನು ಶಮನ ಮಾಡಲಾಗುತ್ತದೆ.

? ಅಲ್ಪ ಛೇದಿತ ಹೃದಯದ ಶಸಕ್ರಿಯೆ (ಮಿನಿಮಲ್ ಇನ್ವೇಸೀವ್ ಕಾರ್ಡಿಯಾಕ್ ಸರ್ಜರಿ- ಎಂಐಸಿ) ಬದಲಿ ಶುದ್ಧರಕ್ತನಾಳಗಳನ್ನು ಹೃದಯಕ್ಕೆ ಜೋಡಿ
ಸಲು ಈ ಹಿಂದೆ ಎದೆಯನ್ನು ಉದ್ದವಾಗಿ ಸೀಳಿ ಶಸಕ್ರಿಯೆ ಮಾಡಲಾಗುತ್ತಿದ್ದು, ಇದರಿಂದ ರೋಗಿಗೆ ಅತೀವವಾದ ದೈಹಿಕ ಶ್ರಮ ಉಂಟಾಗುತ್ತಿತ್ತಲ್ಲದೆ ಗುಣಮುಖರಾಗಲು ದೀರ್ಘಕಾಲ ಹಿಡಿಯುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ಎದೆಯನ್ನು ಹೆಚ್ಚು ಸೀಳದೆ, ರಂಧ್ರಗಳನ್ನು ಮಾಡಿ ಅವುಗಳ ಮೂಲಕ ಸಲಕರಣೆಗಳನ್ನು ಹೃದಯಕ್ಕೆ
ತೂರಿಸಿ ಹೃದಯಕ್ಕೆ ಹೆಚ್ಚು ಜಖಂ ಆಗದೆ ಹೊರ ಪದರದ ಮೇಲೆ ಹೃದಯಭಾಗಗಳನ್ನು ವೀಕ್ಷಿಸುತ್ತ ಮಾಡಲಾಗುವ ಅತಿ ಶ್ರೇಷ್ಠ ಮಟ್ಟದ ಕೌಶಲವುಳ್ಳ
ಶಸಕ್ರಿಯೆ ಮಾಡಲಾಗುತ್ತಿದೆ. ಇದನ್ನು ‘ಅಲ್ಪ ಛೇದಿತ ಹೃದಯದ ಶಸಕ್ರಿಯೆ’ ಎನ್ನಲಾಗುತ್ತದೆ. ಈ ಶಸಕ್ರಿಯೆಗೆ ಒಳಗಾದವರು ೪-೫ ದಿನಗಳ ನಂತರ
ತಮ್ಮ ದೈನಂದಿನ ಕಾರ್ಯಗಳಿಗೆ ಮರಳಬಹುದು. ಬದಲೀ ಹೃದಯ ಶುದ್ಧರಕ್ತನಾಳಗಳ ಜೋಡಣಾ ಶಸಕ್ರಿಯೆಯನ್ನೂ ಇಂದು ಈ ತಂತ್ರಜ್ಞಾನದಿಂದಲೇ
ಮಾಡಲಾಗುತ್ತಿದೆ.

(ಮುಂದುವರಿಯುವುದು)