Sunday, 15th December 2024

ಮನಸುಗಳು ಬದಲಾದರೆ ಬದುಕುಗಳು ಬದಲಾಗುತ್ತವೆ

ಶ್ವೇತ ಪತ್ರ

shwethabc@gmail.com

ಮನಸುಗಳು ಬದಲಾದರೆ ಬದುಕುಗಳೂ ಬದಲಾಗುತ್ತವೆ. ಇದೊಂದು ಮ್ಯಾಜಿಕ್ ಮಂತ್ರ. ಈ ಮಂತ್ರ ನಮ್ಮ ಈ ಕ್ಷಣದ ಅನುಭವ ಗಳನ್ನು ಒಪ್ಪಿಕೊಂಡು ಬ್ಯಾಲೆನ್ಸ್ ಮಾಡುತ್ತ ಸರಿ ದೂಗಿಸುವ ಪ್ರಜ್ಞೆಯನ್ನು ನಮ್ಮಲ್ಲಿ ತುಂಬುತ್ತಲೇ ಇರುತ್ತದೆ. ಜತೆಗೆ ಮನಸ್ಸಿಗೆ ಸಾವಧಾನತೆಯನ್ನು ಕಲಿಸಿಕೊಡುತ್ತದೆ.

ಬದುಕಿನ ಪ್ರತಿ ಕ್ಷಣಗಳಿಗೆ ನಮ್ಮನ್ನು ನಾವು ಆಹ್ವಾನಿಸುತ್ತ ಸಂಪೂರ್ಣ ಎಚ್ಚರಿಕೆಯ ಪ್ರಜ್ಞೆಯ ಜತೆಗೆ ಜೀವಿಸುವ ನಿರಂತರತೆ ಯನ್ನು ನಾವೆಲ್ಲರೂ ಇಂದು ರೂಢಿಸಿಕೊಳ್ಳ ಬೇಕಿದೆ. ಏಕೆಂದರೆ ನಮ್ಮ ಬದುಕಲ್ಲಿ ಬರೀ ಕಾರಣಗಳಿವೆ, ಇಲ್ಲವೇ ಫಲಿತಾಂಶಗಳಿವೆ. ಸಾಮಾನ್ಯವಾಗಿ ನಮಗೆ ಸಿಗಬೇಕಾದ ಫಲಿತಾಂಶಗಳು ಸಿಗದೇ ಹೋದಾಗ ಅದನ್ನು ತರ್ಕಬದ್ದಗೊಳಿಸುವ ಎಲ್ಲ ಕಾರಣಗಳನ್ನು ನಾವು ಹುಡುಕುತ್ತಲೇ ಇರುತ್ತೇವೆ ಕಾರಣ ಮತ್ತು ಫಲಿತಾಂಶಗಳ ನಡುವೆ ಕಳೆದುಹೋಗುವ ಬದಲು ನಮ್ಮ ಸುತ್ತಮುತ್ತಲಿನ ಘಟನೆಗಳನ್ನು ವಾಸ್ತವವಾಗಿ ಹೊಸ ಕಣ್ಣುಗಳಿಂದ ನೋಡುವ ಪ್ರಯತ್ನ ಮಾಡೋಣ ದೃಷ್ಟಿಕೋನಗಳನ್ನು ಬದಲಾಯಿಸೋಣ ಸೃಜನಶೀಲರಾಗೋಣ.

ಬೇರೆಯವರ ಮಾತುಗಳು ಮನುಷ್ಯರಾಗಿ ನಮ್ಮ ಅರ್ಹತೆಯನ್ನು ರೂಪಿಸಬಲ್ಲವೇ? ಪ್ರತಿದಿನ ನಾವು ಯಾರಾದರೊಬ್ಬರ feedback ಗೆ ಒಳಗಾಗುತ್ತಲೇ ಇರುತ್ತೇವೆ. ಕೆಲವರು ನಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಬಹುದು, ನಮ್ಮನ್ನು ಇಷ್ಟ ಪಡಬಹುದು, ಅನುಮೋದಿಸಬಹುದು ಅಥವಾ ಟೀಕಿಸಬಹುದು, ವಿಮರ್ಶಿಸಲೂಬಹುದು. ಆದರೆ ಇಲ್ಲಿ ನಮಗೆ ನಾವು ಕೇಳಿ ಕೊಳ್ಳಬೇಕಾದ ಪ್ರಶ್ನೆ does it matter to us? Definetely not ಬೇರೆ ಯವರ ಮಾತುಗಳು ಮನುಷ್ಯರಾಗಿ ನಮ್ಮ ಅರ್ಹತೆಯ ಮೇಲೆ ಆತ್ಮಗೌರವದ ಮೇಲೆ ಯಾವುದೇ ಪರಿಣಾಮವನ್ನು ಬೀರಬಾ ರದು. ಈ ಆಂತರ್ಯದ ನಂಬಿಕೆ ನಮ್ಮೆಲ್ಲರದ್ದಾದರೆ ನೆಮ್ಮದಿ, ಖುಷಿಗಳು ನಮ್ಮದಾಗುತ್ತವೆ.

ಜತೆಗೆ ಎಲ್ಲವನ್ನೂ ಎಂಜಾಯ್ ಮಾಡುವ ಮನಃಸ್ಥಿತಿ ಕೂಡ ನಮ್ಮದಾಗುತ್ತದೆ. ನಮ್ಮ ಅರ್ಹತೆಯ ಬಗೆಗಿನ ನಂಬಿಕೆಗಳು ಸದ್ದಿಲ್ಲದೆ ನಮ್ಮೊಳಗೆ ಗಟ್ಟಿಯಾಗಬೇಕೇ ಹೊರತು ಬೇರೆಯವರ ಮಾತುಗಳು ಅವುಗಳನ್ನು define ಮಾಡುವಂತಾಗಬಾರದು.
Unfortunately ನಮ್ಮಲ್ಲಿ ಅನೇಕ ಜನ ತಮ್ಮ ಆತ್ಮಗೌರವ, ಆತ್ಮವಿಶ್ವಾಸವನ್ನು ಬೇರೆಯವರ ಮಾತುಗಳಿಗೆ ಮತ್ತು ಹೊರಗಿನ ಘಟನಾವಳಿಗೆ connect ಮಾಡಿಕೊಂಡು ಬದುಕುತ್ತಿರುತ್ತಾರೆ. ಹೊರಗಿನ ಘಟನಾವಳಿ ಪಾಸಿಟಿವ್ ಆಗಿದ್ದರೆ ಅವರ ಆತ್ಮ ವಿಶ್ವಾಸ, ಆತ್ಮಗೌರವ ಉಬ್ಬುತ್ತದೆ.

ನೆಗಟಿವ್ ಆಗಿದ್ದರೆ ಆತ್ಮವಿಶ್ವಾಸ, ಆತ್ಮಗೌರವಗಳು ಕುಸಿದು ಕುಗ್ಗಿ ಹೋಗುತ್ತವೆ. ನಮ್ಮೆಲ್ಲರಿಗೂ ಒಂದು ಮನಸ್ಸಿದೆ. ಅದು ಪ್ಯಾರಾ ಚ್ಯೂಟಿನಂತೆ ತೆರೆದರಷ್ಟೇ ಕೆಲಸ ಮಾಡುತ್ತದೆ. So, ನಿಮ್ಮ ಮನಸ್ಸಿಗೆ ನೀವೇ ಸೂಚನೆಯನ್ನು ಕೊಡುತ್ತ ಹೋಗಿ ನಿಮ್ಮ ಬಗ್ಗೆ ಯಾರೇ ಏನೇ ಮಾತನಾಡಿದರೂ ಅದು ನಿಮ್ಮ ಆತ್ಮವಿಶ್ವಾಸವನ್ನು ಆತ್ಮಗೌರವವನ್ನು ಅರ್ಹತೆಯನ್ನು ಅಲುಗಾಡಿಸ ಬಾರದೆಂದು. ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬ ಚಿಂತೆ ಬಿಟ್ಟುಬಿಡೋಣ.

ಏಕೆಂದರೆ ವಾಸ್ತವದಲ್ಲಿ ಅವರು ನಾವು ಅವರ ಬಗ್ಗೆ ಏನು ಯೋಚಿಸುತ್ತಿದ್ದೇವೆ ಎಂಬ ಚಿಂತೆಯಲ್ಲಿ ಇರುತ್ತಾರೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಸರಳವಾದ fact ಇಷ್ಟೇ, ಬೇರೆಯವರ ಮಾತುಗಳು ವರ್ತನೆಗಳು ನಮ್ಮ ಮಾನಸಿಕ ಅಸ್ಥಿರತೆಗೆ ಕಾರಣವಾಗಬಾರದು. ನಾವೆಲ್ಲರೂ ಈ ಕ್ಷಣದಲ್ಲಿ ಬದುಕಿ ಈ ಕ್ಷಣದ ಖುಷಿಗಳನ್ನು ಕಂಡುಕೊಳ್ಳಬೇಕು. ನಾವೆಲ್ಲರೂ ಯೋಚಿ ಸುವ ಧಾಟಿಯಲ್ಲಿ ಒಂದು ತೆರನಾದ ಸಮಸ್ಯೆಯಿದೆ. ನಮಗಿಂತ ಬುದ್ಧಿವಂತರು, ಚಂದಕ್ಕೆ ಇರುವವರು, ಹೆಚ್ಚು ಸಂಬಳ ತೆಗೆದು ಕೊಳ್ಳುವವರು ನಮಗಿಂತ ಹೆಚ್ಚು ಪ್ರೀತಿ ಮತ್ತು ಗೌರವಕ್ಕೆ ಅರ್ಹರು ಎಂಬ ನಂಬಿಕೆಯನ್ನು ಮೈಗೂಡಿಸಿಕೊಂಡಿರುವುದು.

ಒಂದೇ ಒಂದು ನಿಮಿಷ ಸಾವಧಾನವಾಗಿ ಯೋಚಿಸೋಣ. ನಾವು ನಾವಾಗಿರುವುದೂ ಪ್ರೀತಿ ಮತ್ತು ಗೌರವಕ್ಕೆ ಅರ್ಹ ಮಾನ ದಂಡ. ಎಷ್ಟೋ ಸಲ ಸಿನಿಮಾ ನೋಡಿ ನಾವು ಕಣ್ಣೀರು ಹಾಕುತ್ತಾ ಇರ್ತೀವಿ. ಅಂದರೆ ಆಳದಲ್ಲಿ ನಮ್ಮಲ್ಲಿ ಕಾಳಜಿಯಿದೆ, ಪ್ರೀತಿ ಯಿದೆ, ನೋವುಗಳಿಗೆ ಸ್ಪಂದಿಸುವ ಸಂವೇದನೆಗಳಿವೆ. ಮನಸ್ಸಿನ ಮೂಲ ಗುಣಗಳನ್ನು ಅಕ್ಸೆಪ್ಟ್ ಮಾಡಿಕೊಳ್ಳೋಣ. ಆ ಮೂಲಕ ನಮ್ಮನ್ನು ನಾವು ಸರಿಯಾಗಿ ನೋಡಿಕೊಳ್ಳಬೇಕೆಂಬ ಎಚ್ಚರಿಕೆಯನ್ನು ನಾವೇ ಸೂಚಿಸಿಕೊಳ್ಳುತ್ತ ಮುಂದುವರಿ ಯೋಣ.

ಮೊದಲು ನಮ್ಮ inner strengths ಗಳನ್ನ ನಾವು ಅರಿತು ಒಂದು ಪುಟ್ಟ ಅಭಿಮಾನವನ್ನು ನಮ್ಮೊಳಗೆ ನಾವೇ ಮೂಡಿಸಿ ಕೊಳ್ಳೋಣ. ಆಗ ಬೇರೆಯವರು ಕೂಡ ನಮ್ಮನ್ನು ಗೌರವಯುತವಾಗಿ ಕಾಣುತ್ತಾರೆ. ನಮ್ಮ ಬಗೆಗೆ ನಾವು ಅಭಿಮಾನವನ್ನು ಮೂಡಿಸಿಕೊಳ್ಳಬೇಕಾದರೆ ಆರೋಗ್ಯಕರ ಮತ್ತು ಸಕಾರಾತ್ಮಕವಾದ ವ್ಯಕ್ತಿ ಚಿತ್ರಣವನ್ನು ನಮ್ಮದಾಗಿಸಿಕೊಳ್ಳಬೇಕು. ಇವೆಲ್ಲವೂ ನಮ್ಮದಾಗಬೇಕಾದರೆ ನಮ್ಮ ವರ್ತನೆಯಲ್ಲಿ ವ್ಯಕ್ತಿತ್ವದಲ್ಲಿ ಕೆಲವು ಸುಧಾರಣೆಗಳಾಗಬೇಕು.

ನಮ್ಮ ಬಗ್ಗೆ ನಾವು ನೆಗೆಟಿವ್ ಆಗಿ ಮಾತನಾಡುವುದನ್ನು ಯೋಚಿಸುವುದನ್ನು ನಿಲ್ಲಿಸಬೇಕು. ಅಪರಾಧ ಪ್ರಜ್ಞೆ ನಮ್ಮನ್ನು ಕಾಡ ದಂತೆ ಎಚ್ಚರವಹಿಸಬೇಕು. ಅವಕಾಶ ಸಿಕ್ಕಾಗ ಬೇರೆಯವರನ್ನು ಅಭಿನಂದಿಸುವ ರೂಢಿಯನ್ನು ಬೆಳೆಸಿಕೊಳ್ಳಬೇಕು (ಉದಾ ಹರಣೆಗೆ ನಿಮ್ಮ ಸ್ಯಾರಿ ಚೆನ್ನಾಗಿದೆ, ನಿಮ್ಮ ಹೇರ್‌ಸ್ಟೈಲ್ ಚೆನ್ನಾಗಿದೆ…ಎಂಬಿತ್ಯಾದಿ ಪುಟ್ಟ ಕಾಂಪ್ಲಿಮೆಂಟ್ಸ್‌ಗಳು ಬೇರೆಯವರ ಮುಖದ ಮೇಲೆ ಒಂದು ಕಿರುನಗೆಯನ್ನು ಮೂಡಿಸುತ್ತ ಅವರ ದಿನವನ್ನು ಉಸಿತಗೊಳಿಸುತ್ತವೆ).

ನಿಮ್ಮ ಬಗೆಗಿನ ಕಂಪ್ಲೇಂಟ್‌ಗಳನ್ನು ಆಕ್ಸೆಪ್ಟ್ ಮಾಡಿಕೊಂಡು ಬದಲಾವಣೆ ಆಗುವುದರ ಕಡೆ ಗಮನ ಕೊಡಿ. ನಿಮ್ಮ ಅವಶ್ಯಕತೆ-ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಿ. ನಿಮಗೇನು ಬೇಕೋ ಅದರ ಪರಿಮಿತಿಯನ್ನು ಅರಿತು ನಿಮ್ಮದಾಗಿಸಿಕೊಳ್ಳಿ, ತಪ್ಪೇನಿಲ್ಲ. ಆದರೆ ನೆನಪಿಡಿ, ಅನವಶ್ಯಕವಾದ ಲಕ್ಸುರೀಸ್‌ಗಳನ್ನು ಚೇಸ್ ಮಾಡಬೇಡಿ. ಎಲ್ಲರೊಟ್ಟಿಗೂ ಆತ್ಮೀಯತೆ ಬೆಳೆಸಿಕೊಳ್ಳಿ. ಬೇರೆ ಯವರ ವಿಮರ್ಶೆಗಳನ್ನು recieve ಮಾಡಿಕೊಳ್ಳುವ ಮನಃಸ್ಥಿತಿ ಕೂಡ ನಿಮ್ಮದಾಗಲಿ.

ನಿಮ್ಮ ಮತ್ತು ನಿಮ್ಮ ವರ್ತನೆಯ ನಡುವೆ ಒಂದು seperation ಇರಲಿ. ಕೆಲವು ಸಂದರ್ಭಗಳಲ್ಲಿ ನಮ್ಮ ವರ್ತನೆಯಲ್ಲಿ ತಪ್ಪು ಗಳಿರಬಹುದು, ನಮ್ಮ ವರ್ತನೆ ಸಿಲ್ಲಿಯಾಗಿ ಕೂಡ ಇರಬಹುದು. It does not mean  ನೀವೊಬ್ಬ ಕೆಟ್ಟ ವ್ಯಕ್ತಿಯೆಂದು. ಆ ಕ್ಷಣಕ್ಕೆ ನಿಮ್ಮಿಂದ ಸಣ್ಣ ತಪ್ಪೊಂದು ಆಗಿರಬಹುದು.ಇದರಿಮದ ನಿಮ್ಮ ವರ್ತನೆ ಆ ಕ್ಷಣಕ್ಕೆ ಸಿಲ್ಲಿ ಎನಿಸಿರಬಹುದು ಅಷ್ಟೇ. ತಪ್ಪನ್ನು ಸರಿಪಡಿಸಿ, ನಿಮ್ಮನ್ನು ಪ್ರೀತಿಸಿ. ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರವಹಿಸಿ.

ಸಾಧ್ಯವಾದಷ್ಟು positive ಆಗಿ ಯೋಚಿಸುವ ಜನರ ಜತೆ ಬೆರೆಯಿರಿ. ಅವರ ಪಾಸಿಟಿವ್ vibes ನಿಮ್ಮದಾಗಿಸಿಕೊಳ್ಳಿ. Guilt ಬೇಡ ಖುಷಿಗಳನ್ನು ಪಡೆಯುತ್ತ ಕೆಲಸ ಮಾಡಿ. ನನ್ನಲ್ಲಿ ಈ ತರಹದ ಬದಲಾವಣೆಗಳಾಗಬೇಕು ಎಂಬ ಪ್ರತಿಜ್ಞೆ ಮಾಡಿ. ನಂಬಿ, ಇದು magic ತರಹ work ಆಗತ್ತೆ. ನಿಮಗೆ ಸೂರ್ತಿ ಮತ್ತು ಪ್ರೇರಣೆ ತುಂಬಬಲ್ಲ ಪುಸ್ತಕಗಳನ್ನು ಓದಿ.

ನಿಮಗೆ ನೀವು ಹೇಗಿರಬೇಕೆಂದು ಮನಸ್ಸಲ್ಲಿ picturize ಮಾಡಿಕೊಳ್ಳಿ. ಈ ಚಿತ್ರಣ ನಿಮ್ಮಲ್ಲಿ ಪ್ರಬಲವಾದಷ್ಟು ನಿಮಗೆ ನೀವೇ ಹೆಚ್ಚು ಆಕರ್ಷಿತರಾಗುತ್ತ ಹೋಗುತ್ತೀರಿ. And very importantly ಯಾವತ್ತಿಗೂ ನಿಮ್ಮನ್ನು ನೀವು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಳ್ಳಲು ಹೋಗಬೇಡಿ. ಜೀವನದ ಹಾದಿ ತುಂಬಾ ಪುಟ್ಟದು ಲೆಟ್ಸ್ ಎಂಜಾಯ್ ದ ಜರ್ನಿ ಬದಲಾವಣೆ ಕಷ್ಟ.

ಹೌದು, ಪ್ರತಿ ಸಾರಿ ನೀವು ಬದಲಾಗಬೇಕೆಂದು ಯೋಚಿಸಿದಾಗಲೂ ‘ಅಯ್ಯೋ ಈಗ ಹೆಂಗಿದಿನೋ ಹಂಗೆ ಇದ್ದುಬಿಡೋಣ’ ಎನ್ನುವ ಯೋಚನೆಗಳು ಮನಸ್ಸಿಗೆ ಮುತ್ತಿಗೆ ಹಾಕುತ್ತ ನಿಮ್ಮನ್ನು ಮತ್ತೆ ಮತ್ತೆ ವೀಕ್ ಮಾಡತೊಡಗುತ್ತವೆ. ನಮ್ಮ ಮನಸ್ಸನ್ನು energize ಗೊಳಿಸುತ್ತ ಬದಲಾವಣೆಯ ಹಾದಿಯಲ್ಲಿ ಸಾಗೋಣ. ನಮ್ಮೊಳಗಿನ ನಮ್ಮನ್ನು ಪ್ರತಿದಿನ ಬೆಟ್ಟರ್ ಆಗಿಸುತ್ತಾ ಬೆಸ್ಟ್
ಆಗಿಸುವ ಪ್ರಯತ್ನ ಮಾಡೋಣ. ಈ ಬೆಸ್ಟ್ ಆಫ್ ದ ಬೆಸ್ಟ್ ಕ್ರಿಯೆಗೆ ಸ್ವಲ್ಪ ಅಡ್ಜಸ್ಟ್ಮೆಂಟ್ ಸ್ವಲ್ಪ ಮನಸ್ಸು ಮಾಡಬೇಕಷ್ಟೇ. ನಾವು ಬದಲಾಗಬೇಕಾದರೆ ಉತ್ತಮ ಕೇಳುಗರಾಗಬೇಕು ಕೂಡ. ನಾವು ಉತ್ತಮ ಕೇಳುಗರಾದಷ್ಟು ಬೇರೆಯವರ ಮಾತಿನ ಮಧ್ಯೆ ಬಾಯಿ ಹಾಕುವ ಕೆಟ್ಟ ಸ್ವಭಾವವನ್ನು ನಿಲ್ಲಿಸುತ್ತೇವೆ. ಎದುರಿಗಿರುವ ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನು ಬೆಳೆಸಿ ಕೊಳ್ಳುತ್ತೇವೆ. ನಮ್ಮಲ್ಲಿ ಅನೇಕರು ಎದುರಿಗಿರುವವರು ಮಾತು ಮುಗಿಸಿ ನಾವು ಮಾತನಾಡುವುದಕ್ಕೆ ಯಾವಾಗ ಚಾನ್ಸ್ ಸಿಗುತ್ತದೆ ಎಂಬುದಕ್ಕಷ್ಟೇ ಕೇಳಿಸಿಕೊಳ್ಳುವ ಪ್ರಹಸನ ಮಾಡಿರುತ್ತಾರೆ.

ಇದೊಂದು ಕೆಟ್ಟ ಅಭ್ಯಾಸ. ನಾವು react ಮಾಡುವುದಕ್ಕಾಗಿ ಕೇಳಿಸಿಕೊಳ್ಳಬಾರದು. respond ಮಾಡುವುದಕ್ಕಾಗಿ ಕೇಳಿಸಿಕೊಳ್ಳ ಬೇಕು. ಇದು ಒಬ್ಬ good listener ನ ಲಕ್ಷಣ. ಹೆಚ್ಚು ಕೇಳಿಸಿಕೊಂಡಷ್ಟೂ ತತ್‌ಕ್ಷಣ react ಮಾಡಿ ಬಿಡಬೇಕೆಂಬ ನಮ್ಮ ಹಂಬಲ ಕ್ರಮೇಣ ಕಡಿಮೆಯಾಗುತ್ತ ಮನಸ್ಸಿನಲ್ಲಿ ಶಾಂತತೆ ಮೂಡುತ್ತದೆ. ಇದು ನಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಗೊಳಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಮಾತುಗಳನ್ನು ಯಾರಾದರು ಕೇಳಿಸಿಕೊಳ್ಳಲಿ ಎಂಬ ಹಂಬಲವಿರುತ್ತದೆ.

ನಮಗೆ advice ಗಳು ಬೇಡ ಕೇಳಿಸಿಕೊಳ್ಳುವ ಕಿವಿಗಳು ಬೇಕು. ಹೇಳಿಕೊಂಡು ಹಗುರಾಗುವ ಖುಷಿ ಅವರದ್ದಾದರೆ ನೋವಿಗೆ ಸ್ಪಂದಿ ಸಿದ ನಿರಾಳತೆ ನಮ್ಮದು. ನೀವು ಏನೇ ಮಾಡಬೇಕೆಂದರೂ ಅದರ ಆಯ್ಕೆ ನಿಮ್ಮದಾಗಿರಲಿ. ಆಗ ಗೊಣಗಾಟಗಳಿರುವುದಿಲ್ಲ. ನಾವೆಲ್ಲ ಅರಿತುಕೊಳ್ಳಬೇಕಾದ ಮುಖ್ಯ ವಿಚಾರವೆಂದರೆ ನಮ್ಮ ಬದುಕು ನಮಗೆ ಸೇರಿದ್ದು ಬೇರೆಯವರ ನಿರೀಕ್ಷೆ- ಬೇಡಿಕೆ ಗಳಿಗಲ್ಲ.

ಹಾಗಾಗಿ ನಿಮಗೆ ನೀವೇ ಹೀಗೆ ಹೇಳಿಕೊಳ್ಳುತ್ತ ಬನ್ನಿ. ನಾನು ಏನೋ ಮಾಡಿ ಬಿಡಬೇಕಾಗಿಲ್ಲ. ಆಯ್ಕೆಮಾಡಿಕೊಂಡಿದ್ದನ್ನು
ಅಚ್ಚುಕಟ್ಟಾಗಿ ಮಾಡಿಕೊಂಡು ಹೋದರೆ ಸಾಕೆಂದು. ಇನ್ನು ಮೂಡ್‌ಗಳ ಬಗ್ಗೆ ಒಂದಿಷ್ಟು ಮಾತು. ನಿಮ್ಮ ಮೂಡ್ (ಮನಸ್ಸಿನ ಸ್ಥಿತಿ )ನಿಮ್ಮನ್ನು ವಿಪರೀತವಾಗಿ ಮೋಸಗೊಳಿಸಿಬಿಡಬಹುದು. ನಿಮ್ಮ ಬದುಕು ವಾಸ್ತವದಲ್ಲಿ ಇರುವುದಕ್ಕಿಂತ ಕೆಟ್ಟದಾಗಿದೆ ಎಂಬುದನ್ನು ನಿಮ್ಮ ಕೆಟ್ಟ ಮೂಡ್ ನಿರ್ಧರಿಸುತ್ತದೆ. ಬದುಕು ತುಂಬಾ ಚೆನ್ನಾಗಿದೆ ಎಂಬುದನ್ನು ನಿಮ್ಮ ಗುಡ್‌ಮೂಡ್ ನಿರ್ಧ ರಿಸುತ್ತದೆ. ಇವುಗಳ ಆಧಾರದಲ್ಲಿ ಬದುಕಿನ ಬಗೆಗಿನ ನಮ್ಮ perspective ಗಳು ಕೂಡ ಬದಲಾಗುತ್ತ ಹೋಗುತ್ತವೆ.

ಖುಷಿಯ ಮೂಡ್ ನಿಮ್ಮಲ್ಲಿ ಎಲ್ಲವನ್ನೂ ಎಲ್ಲರನ್ನು ಗೆಲ್ಲುವ ವಿಶ್ವಾಸ ತುಂಬಿದರೆ ಕೆಟ್ಟ ಮೂಡ್ ಬದುಕನ್ನು ಅತ್ಯಂತ ಗಂಭೀರ
ಮತ್ತು ಕ್ಲಿಷ್ಟಕರವಾಗಿಸಿಬಿಡುತ್ತದೆ. ಇಲ್ಲಿ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ನಮ್ಮ ಮೂಡ್ ಗಳು ಸ್ಥಿರವಲ್ಲ. ಒಳ್ಳೆಯ ಮೂಡ್ ನಲ್ಲಿ ಇಷ್ಟವಾಗಿದ್ದ ಹೆಂಡತಿ, ಕೆಲಸ, ಕಾರು ಕೆಟ್ಟ ಮೂಡ್ ನಲ್ಲಿದ್ದಾಗ ನ್ಯೂಸೆನ್ಸ್ ಅನಿಸಲಿಕ್ಕೆ ಶುರುವಾಗ ತೊಡಗುತ್ತವೆ.

ನಮ್ಮೆಲ್ಲರಿಗೂ ಹಾಗೆಯೇ ಕೆಟ್ಟ ಮೂಡ್ ಧಾವಂತಗಳನ್ನು ತಂದೊಡ್ಡುತ್ತವೆ. ಮೂಡ್‌ಗಳನ್ನು ಅರ್ಥೈಸುವುದರಲ್ಲಿ ಸೋತಿದ್ದೇವೆ. ನಮ್ಮ ಮನಃಸ್ಥಿತಿಯಲ್ಲಿ ವ್ಯತ್ಯಾಸವಾದಾಗ ಅದರ ಬಗ್ಗೆ ಸೂಕ್ತವಾಗಿ ಯೋಚಿಸುವುದನ್ನು ಬಿಟ್ಟು ಬದುಕೇ ದುರಂತವೆಂದು ಭಾವಿಸುತ್ತೇವೆ. ಸತ್ಯವೆಂದರೆ ನಾವು ಅಂದುಕೊಂಡದ್ದಕ್ಕಿಂತ ಬದುಕು ಯಾವತ್ತಿಗೂ ಕೆಟ್ಟದಾಗಿರುವುದಿಲ್ಲ. ಮೂಡ್‌ಗಳಲ್ಲಿ ಕಳೆದು ಹೋಗುವ ಬದಲು ನಮ್ಮ ಆಲೋಚನೆಗಳನ್ನು ನಾವೇ ಪ್ರಶ್ನಿಸಿಕೊಳ್ಳೋಣ. ಮತ್ತೆ ನಮಗೆ ನಾವೇ ನೆನಪಿಸಿಕೊಳ್ಳೋಣ. ಇವತ್ತು ನನ್ನ ಮೂಡ್ ಸರಿ ಇಲ್ಲ ಬೇಜಾರಾಗಿದೆ, ಕೋಪ ಬಂದಿದೆ, ನಿರಾಶೆಯಾಗಿದೆ stress ಆಗಿದೆ… ಹೀಗೆ ನನ್ನ ಮೂಡ್ ಕೆಟ್ಟಾಗ ಲೆಲ್ಲ ನನ್ನಲ್ಲಿ ನೆಗೆಟಿವಿಟಿ ತುಂಬುತ್ತದೆ ಮತ್ತು ಇದೊಂದು ಹ್ಯೂಮನ್ ಕಂಡಿಶನ್.

ಇದನ್ನ stress ಮಾಡಲು ಆಗಲ್ಲ ಸಮಯದ ಜತೆ ಇದು ಸರಿ ಹೋಗುತ್ತೆ ಎನ್ನುವ ತಿಳುವಳಿಕೆಯನ್ನು ನಮ್ಮದಾಗಿ ಸಾಕೊಳ್ಳೋಣ. ಹೀಗೆ ಖಾಲಿಬಿಟ್ಟ ಬದುಕಿನ ಜಾಗಗಳನ್ನ ಹೊಸ ಹೊಸ ತಿಳುವಳಿಕೆಯ ಮೂಲಕ ಕಲಿಕೆಯ ಮೂಲಕ refill ಮಾಡುತ್ತ ಹೋಗೋಣ. ಎಲ್ಲ ತಿಳುವಳಿಕೆ ಕಲಿಕೆಗೂ ನಾವು ಮನಸ್ಸು ಮಾಡಬೇಕಷ್ಟೇ ಮನಸ್ಸು ಬದಲಾದರೆ ಬದುಕು ಬದಲಾಗುತ್ತದೆ.