ಪ್ರಚಲಿತ
ಹೃತಿಕ್ ಕುಲಕರ್ಣಿ
ಭಾರತ ಬಾಂಧವ್ಯ ಕಾಪಾಡಿ ಕೊಳ್ಳುವುದಕ್ಕೆ ಕಷ್ಟಪಡಬೇಕಾಗಿಲ್ಲ, ಅದಕ್ಕಾಗಿ ಹೆಣಗಬೇಕಿಲ್ಲ. ಏಕೆಂದರೆ ಭಾರತದ ಕಣಕಣವೂ ‘ವಸುದೈವ ಕುಟುಂಬಕಂ’ ಎನ್ನುವ ಉನ್ನತ ತತ್ವ ಪ್ರತಿಪಾದನೆಯನ್ನು ಪರಿಪಾಲಿಸುತ್ತ ಬಂದಿದೆ.
ಅದನ್ನು ಪಾಲನೆ ಎನ್ನುವುದಕ್ಕಿಂತಲೂ ಸಂಸ್ಕೃತಿ ಮತ್ತು ಸಂಸ್ಕಾರದ ಮುಂದುವರಿಕೆ ಎಂದರೆ ಸೂಕ್ತವಾದೀತು. ಲೋಕದ ಸಮಸ್ತ ಜೀವಿಗಳು ನನ್ನ ಕುಟುಂಬ ಏಕೆಂದರೆ ನನ್ನವನಾದ ಭಗವಂತ ಇದರಲ್ಲಿಲ್ಲ ಅಂತಿಲ್ಲವಲ್ಲ ಅದಕ್ಕೆ. ಭಾರತದ ಸಾಮಾನ್ಯ ಪ್ರಜೆ ಎಂದೂ ದ್ವೇಷಕಾರಿಲ್ಲ, ಆದರೆ ತಾನು ನಂಬಿದ ತತ್ವಸಿದ್ಧಾಂತದ ಮೇಲೆ ದಾಳಿಯಾದಾಗ ಪ್ರತಿಕಾರ ಮಾಡದೆ ಬಿಟ್ಟಿಲ್ಲ. ಇದು ಒಂದು ರಾಷ್ಟ್ರ ಇರಬೇಕಾದ ರೀತಿ ಮತ್ತು ಅನುಸರಿಸಬೇಕಾದ ನೀತಿ.
ಯಾವ ರಾಷ್ಟ್ರ ಮತ್ತೊಂದು ರಾಷ್ಟ್ರವನ್ನು ಕಾರಣವಿರದೇ ದ್ವೇಷಿಸುತ್ತದೋ ಅದು ಸರ್ವನಾಶವಾಗಲೇಬೇಕು. ಹಾಗೆಯೇ ಯಾವ ರಾಷ್ಟ್ರ ತನ್ನ ಸಾಂಸ್ಕೃತಿಕ ಮತ್ತು ಭೌಗೋಳಿಕ ತಳಹದಿಯ ಮೇಲಾದ ದಾಳಿಗೊ, ಆಕ್ರಮಣಕ್ಕೋ, ಅತಿಕ್ರಮಣಕ್ಕೋ ಪ್ರತಿಕ್ರಿಯಿಸುವುದಿಲ್ಲವೊ ಪ್ರತಿಕಾರ ಮಾಡುವುದಿಲ್ಲವೊ ಅದೊಂದು ರಾಷ್ಟ್ರವಾಗಿರಲು ಅರ್ಹವಲ್ಲದ್ದರಿಂದ ವಿನಾಶವಾದೀತು. ಆದರೆ ಭಾರತ, ಅದರಲ್ಲೂ ಇಂದಿನ ನವ ಭಾರತ ಇಂತಹ ಎರಡೂ ಪರಿಸ್ಥಿತಿಯಲ್ಲೂ ತನ್ನ ಅಮೋಘ ಇಚ್ಛಾಶಕ್ತಿಯನ್ನು
ಮೆರೆದು ವಿಜೃಂಭಿಸುತ್ತಿದೆ.
ಇದು ಭಾರತದ ಭವ್ಯ ಪರಂಪರೆಯ ಮುಂದುವರಿಕೆ ಅಷ್ಟೇ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಸುಮಾರು ‘ಗಣನೀಯ’
ವರ್ಷಗಳು ಭಾರತ ತನ್ನ ತನವನ್ನು ಮರೆತಿತ್ತಾದರೂ ಈಗ ಮತ್ತೆ ಜಾಗೃತವಾಗುತ್ತಿದೆ. ಯಾರು ಶಕ್ತನೊ ಅವನು ಮಾತ್ರವೇ ಸಹಾಯ ಹಸ್ತ ಚಾಚಬಲ್ಲ ಹಾಗೆಯೇ ತನ್ನ ಅಂತಃಶಕ್ತಿಯನ್ನು ಅರಿಯುತ್ತಿರುವ ಭಾರತ ಜಗತ್ತಿಗೆ ಸಂಜೀವಿನಿಯಾಗಿ ಹೊಸ ಬೆಳಕನ್ನು ನೀಡುತ್ತಿದೆ. ಆದರೆ ದೇಶದ ಒಳಗಿರುವ ಕೆಲವರು ಸಂಜೀವಿನಿಯನ್ನು ಬೇರು ಸಹಿತ ಕಿತ್ತು ವಿಷಪೂರಿತ ಸಸಿ
ನೆಡಲು ಪ್ರಯತ್ನಿಸುತ್ತಿದ್ದಾರಾದರೂ ರಾಷ್ಟ್ರದ ಜನತೆಯ ಇಚ್ಚೆಯ ಮೇರೆಗೆ ರಾಷ್ಟ್ರನಾಯಕನಾಗಿರುವ ವ್ಯಕ್ತಿ ಕೀಳುವ ಕೈ ಮುರಿಯಲು ಸಮರ್ಥನಿದ್ದೇನೆ.
ಆದರೆ ನಿರ್ಲಕ್ಷ್ಯ ಮತ್ತು ಅಸಡ್ಡೆ ಸರಿಯಲ್ಲ. ಏಕೆಂದರೆ ಕುತಂತ್ರಿ ಕೈಗಳ ಕೈವಾಡದಿಂದ ಭಾರತ ಸಾಕ್ಷಿಯಾದ ಅವಾಂತರಗಳಿಗೆ ಇತಿಹಾಸ ಪ್ರಮಾಣವಾಗಿ ನಿಲ್ಲುತ್ತದೆ. ಏನೇ ಇರಲಿ ಭಾರತ ತನ್ನ ಸಂಸ್ಕ್ರತಿಯನ್ನು ಗಟ್ಟಿಯಾಗಿ ಹಿಡಿದುಕೊಂಡದ್ದರಿಂದ ಘನಘೋರ ದಾಳಿಗಳು ಆದಾಗ್ಯೂ ಹಿಂದೆಂದಿಗಿಂತಲೂ ಗಟ್ಟಿಯಾಗಿ ನಿಂತಿತು ಮುಂದೆಯೂ ಹಾಗೆಯೇ ಆಗುತ್ತದೆಂಬುದರಲ್ಲಿ
ಸಂಶಯಬೇಡ. ಪ್ರತಿ ನೂರು ವರ್ಷಕ್ಕೊಮ್ಮೆ ಜಗಜೀವನವನ್ನು ಜರ್ಜರಿತಗೊಳಿಸಲು ಸಾಂಕ್ರಾಮಿಕವೊಂದು ಬರುತ್ತದೆ
ಎಂಬ ಮಾತಿನಲ್ಲಿ ಅಥವಾ ವಾದದಲ್ಲಿ ಕಿಂಚಿತ್ ಸತ್ಯವಿದೆ, ಹುರುಳಿದೆ.
ಆದರೆ ಈ ಪ್ರತಿ ಶತಮಾನದ ಮಾತು ಸಾಂಕ್ರಾಮಿಕವನ್ನು ತಡೆಗಟ್ಟುವುದರಲ್ಲಿ ಯಾವ ಸ್ವಲ್ಪ ಸಹಾಯವನ್ನೂ ಮಾಡಲಾರದು ಮತ್ತು ಇದು ಒಂದು ಆಶ್ಚರ್ಯಕರ, ಹುಬ್ಬೆರಿಸುವ ವಿಚಾರವಾಗಿ ಉಳಿಯಲು ಯೋಗ್ಯವಾದದ್ದು. ೨೦೧೯ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ ಈ ವೈರಾಣು ಕಂಡುಬಂದದ್ದೇ ತಡ ಇದು ಆ ನಗರವನ್ನೇ
ಸ್ಮಶಾನ ವಾಗಿಸಲು ಕಾತುರವಾಗಿ ನಿಂತುಬಿಟ್ಟಿತು. ಇದು ಚೀನಾ ದೇಶವನ್ನು ಆವರಿಸುತ್ತಲೇ ಹೆಣಗಳು ಉರುಳಲಾರಂಭವಾದವು. ಈ ವೈರಾಣುವಿನ ರೌದ್ರ ಪ್ರಭಾವ ಅರಿತ ಚೀನಾ ಸರಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿತು.
ಮೊದಲು ಇದು ಸಾಂಕ್ರಾಮಿಕವಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆ (WHO) ಜಗತ್ತನ್ನೆ ಆವರಿಸಿದ ಮೇಲೆ ಹೊ!! ಇದು epidemic (ಸಾಂಕ್ರಾಮಿಕ) ಎಂದು ಬೊಬ್ಬೆ ಹೊಡೆಯಲು ಶುರು ಮಾಡಿತು. ಅಷ್ಟೊತ್ತಿಗಾಗಲೇ ಮಾರ್ಚ್ ೧೧. ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶ ಏನಾಗಿತ್ತು ಎಂದು ಬಿಡಿಸಿ ಹೇಳುವ ಪರಿ ನಾನರಿಯೆ. ಅಥವಾ ಡಿಸೆಂಬರ್‌ನಲ್ಲಿ ಪತ್ತೆಯಾದ ಮತ್ತು ಚೀನಾದಲ್ಲಿ ಮಾರಣ ಹೋಮವನ್ನೇ ಹೊತ್ತಿಸಿದ ಈ ವೈರಾಣುವಿನ ನಿಜ ಬಣ್ಣ ಅರಿಯಲು ಒಂದು ವಿಶ್ವ ಸಂಸ್ಥೆಗೆ(WHO) ಮೂರು ತಿಂಗಳು ಬೇಕೆಂದರೆ ಅದರ ಕಾರ್ಯವೈಖರಿಯ ಬಗ್ಗೆ ಮತ್ತು ಅದರ ವಿಶ್ವ ಕಾಳಜಿಯ ಬಗ್ಗೆ ಸಂಶಯ ಸಂದೇಹ ಉಂಟಾಗದೆ ಇರದು.
ಇಲ್ಲಿ ಇನ್ನೊಂದು ಗಮನಾರ್ಹ ವಿಷಯ ಎಂದರೆ, ಚೀನಾ ಸರಕಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದು ಜನವರಿಯಲ್ಲಿ. ಜಗತ್ತಿನ ಒಂದು ಬಲಿಷ್ಠ ರಾಷ್ಟ್ರ ಅನೇಕ ಸಾವು ನೋವುಗಳನ್ನು ವೈರಾಣು ಕಂಡ ಒಂದು ತಿಂಗಳಲ್ಲಿ ಅನುಭವಿಸಿದೆ ಮತ್ತು ಆ ಕಾರಣ ಅದು ಲಾಕ್‌ಡೌನ್ ಘೋಷಿಸಿದೆ ಎಂದರೆ ಅದರ ತೂಕವನ್ನು ಅರಿಯದಷ್ಟು ನಿಷ್ಕ್ರಿಯವಾಗಿದೆಯೇ ವಿಶ್ವ ಆರೋಗ್ಯ ಸಂಸ್ಥೆ? ಇದು ವಿಚಾರಾರ್ಹ ವಿಷಯ!!
ಇದು WHO ವಿಶ್ವ ಕಾಳಜಿ. ಭಾರತದ ವಿಶ್ವ ಕಾಳಜಿ ಯಾವ ರೀತಿಯದು ಎಂದು ಮುಂದೆ ನೋಡುವ. ೧೩೫ ಕೋಟಿ ಜನಸಂಖ್ಯೆ ಯಿರುವ ಭಾರತ ಕರೋನಾ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದರೆ ಯಾರಾದರೂ ನಕ್ಕಾರು. ಹೌದು! ರಾಜಕೀಯ
ವಿರೋಧಗಳಿಗೆ ಈ ದೇಶ ಒಗ್ಗಿಕೊಂಡುಬಿಟ್ಟಿದೆ ಮತ್ತು ಅಧಿಕಾರದ ಚುಕ್ಕಾಣಿಯಲ್ಲಿರುವ ಪಕ್ಷ ತನ್ನ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಅವರ ಎಲ್ಲ ಕಾರ್ಯಗಳನ್ನೂ ವಿರೋಧಿಸುವ ಬುದ್ಧಿಹೀನ ವಿರೊಧಗಳಿಗೆ ಈ ರಾಷ್ಟ್ರ ಹಿಂದಿನಿಂದಲೂ ಸಾಕ್ಷಿಯಾಗಿ ನಿಂತಿದೆ. ಆದರೆ ಈ ಎಲ್ಲವನ್ನೂ ಲಕ್ಷಿಸದ ಈ ದೇಶದ ಪ್ರಜೆಗಳು ಕೊರೊನಾ ನಿಯಂತ್ರಣದಲ್ಲಿ
ಭಾರತ ಸರ್ಕಾರ ಯಶಸ್ವಿಯಾಗಿದೆ ಎಂದು ಒಪ್ಪಿ ಮತ್ತೊಮ್ಮೆ ಪ್ರಬುದ್ಧತೆ ಮೆರೆದಿದ್ದಾರೆ.
ಯಾರು ಒಪ್ಪುವುದಿಲ್ಲವೊ ಅವರು ಪ್ರಬುದ್ದರಲ್ಲವೆಂದು ನಾನೆಲ್ಲೂ ಹೇಳಿಲ್ಲ. ಅಮೆರಿಕ, ಬ್ರೆಜಿಲ್, ಇಟಲಿ, ಜರ್ಮನಿ, ಇಂಗ್ಲೆಂಡ್ ಇತ್ಯಾದಿ ಭಾರತದ ಅರ್ಧದಷ್ಟೂ ಜನಸಂಖ್ಯೆಯಿಲ್ಲದ ರಾಷ್ಟ್ರಗಳು ಕರೋನಾ ತಾಂಡವವನ್ನು ನಿಯಂತ್ರಿಸಲಾಗದೆ ತತ್ತರಿಸಿ
ಹೋಗಿವೆ. ಆದರೆ ಭಾರತ!! ನಿರೀಕ್ಷೆಗೂ ಮೀರಿದ ಪ್ರತಿಕಾರ ಒಡ್ಡಿತು. ಭಾರತ ಕಣ್ಣಿಗೆ ಕಾಣದ ವೈರಾಣುವಿನೊಂದಿಗೆ ಹೋರಾಡಿದ ಪರಿಯ ಅರಿಯಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ. ಕಾರಣ ಭಾರತದ ಹೋರಾಟ ಎಂದರೆ ನಮ್ಮ ಹೋರಾಟ, ಭಾರತೀಯರ ಹೋರಾಟ.
ಕರೋನಾ ಹಾವಳಿ ಭಾರತದಲ್ಲಿ ಪ್ರಾರಭವಾಗುತ್ತಿದೆ ಎನ್ನುವ ಸಣ್ಣ ಸೂಚನೆ ಸಿಗುತ್ತಿದ್ದಂತೆ, ದೇಶದ ಪ್ರಧಾನ ಮಂತ್ರಿಗಳು ಮಾರ್ಚ್ ೨೨ರಂದು ಜನತಾ ಕರ್ಫ್ಯೂಗೆ ಕರೆ ಕೊಟ್ಟರು. ಆ ಮೂಲಕ ಸಂಪೂರ್ಣ ಭಾರತದ ಲಾಕ್‌ಡೌನ್‌ಗೆ ಪೂರ್ವ ತಯಾರಿ, ಜನರಿಗೆ ಲಾಕ್‌ಡೌನ್ ನ ಪೂರ್ವಪರಿಚಯ ಮತ್ತು ಅದರ ಅನಿವಾರ್ಯತೆಯನ್ನು ಅರಿವುಮಾಡಿಸಿಕೊಟ್ಟರು.
ಈ ದೇಶದ ಪ್ರಜೆಗಳು ಜನತಾ ಕರ್ಫ್ಯೂ ಯಶಸ್ವಿಗೊಳಿಸಿದ್ದು ಒಂದು ಅದ್ಭುತ. ಮಾರ್ಚ್ ೨೪ರಿಂದ ಭಾರತದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಪ್ರಬಲ ರಾಜಕೀಯ ಇಚ್ಛಾಶಕ್ತಿಯುಳ್ಳ ವರಿಂದ ಮಾತ್ರ ಇಂಥ ಗಟ್ಟಿ ನಿರ್ಧಾರಗಳು ಸಾಧ್ಯ.
ಪ್ರಾರಂಭದಲ್ಲಿ ಪಿಪಿಇ ಕಿಟ್‌ಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಕೇವಲ ಎರಡು ತಿಂಗಳಲ್ಲಿ ಪಿಪಿಇ ಕಿಟ್‌ಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನಕ್ಕೆರಿದ್ದಲ್ಲದೆ ಬೇರೆ ದೇಶಗಳಿಗೂ ರಫ್ತು ಮಾಡುವ ಹಂತ ತಲುಪಿದ್ದು ಭಾರತದ ಅಂತಃ ಸಾಮರ್ಥ್ಯವನ್ನು ತೋರಿಸುತ್ತದೆ. ಭಾರತ ಸರಕಾರದ ಜವಳಿ ಇಲಾಖೆಯ ಅನವರತ ಶ್ರಮ ಮತ್ತು ಅನೇಕ ಟೆಕ್ಸ್‌ಟೈಲ್ ಸಂಸ್ಥೆಗಳ ಸಹಕಾರ ಮತ್ತು ಸಹಯೋಗದಿಂದ ಇದು ಸಾಧ್ಯವಾಯಿತು.
ಕೋವಿಡ್ ಪರೀಕ್ಷಾ ಪ್ರಯೋಗಾಯಗಳ ಸಂಖ್ಯೆ ೧ ರಿಂದ ೧೦೦೦ ಕ್ಕೆರಿದ್ದು ಭಾರತದಲ್ಲಿ ಸಾಂಕ್ರಾಮಿಕ ತಡೆಗಟ್ಟುವುದರಲ್ಲಿ
ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಒಮ್ಮಿಂದೊಮ್ಮಿಲೆ ಘೋಷಣೆಯಾದ ಲಾಕ್‌ಡೌನ್ ಪರಿಣಾಮ ಜನರು ಅನುಭವಿಸ ಬಹುದಾಗಿದ್ದಂತಹ ಕಷ್ಟಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನೀಗಿಸಲು ಭಾರತ ಸರಕಾರ ಅನೇಕ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಿತು.
೧. ದೇಶದ ೮೦ ಕೋಟಿ ಜನರಿಗೆ ಹತ್ತಿರರತ್ತಿರ ದೀಪಾವಳಿಯವರೆಗೂ ಉಚಿತ ರೆಷೇನ್ (ಅಕ್ಕಿ, ಗೋಧಿ; ಸಿಗುತ್ತಿದ್ದಿದ್ದಕ್ಕಿಂತ ದುಪ್ಪಟ್ಟು) ೨. ಜನ್ ಧನ್ ಖಾತೆ ಹೊಂದಿದ ೨೦ ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ ೫೦೦ ರುಪಾಯಿಯಂತೆ ಮೂರು ತಿಂಗಳು ನೇರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದು. ೩. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ೮ ಕೋಟಿ ಅರ್ಹ ಕುಟುಂಬಗಳಿಗೆ ಉಚಿತ ಗ್ಯಾಸ್ ವ್ಯವಸ್ಥೆ. ೪. ಕಾರ್ಯಪ್ರವೃತ್ತ ವೈದ್ಯಕೀಯ ವಲಯದ ಸಿಬ್ಬಂದಿಗೆ ಕೋವಿಡ್‌ನಿಂದ ಹೆಚ್ಚು
ಕಡಿಮೆಯಾದಲ್ಲಿ ಅದಕ್ಕಾಗಿ ೫೦ಲಕ್ಷ ವಿಮಾ ಭದ್ರತೆ. ಇದು ಭಾರತದ ಶಕ್ತಿ.
ಒಂದು ಪ್ರಬಲ ರಾಜಕೀಯ ಇಚ್ಛಾಶಕ್ತಿ ಇದ್ದರೆ ಯಾವುದೇ ಪಕ್ಷಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಒಂದು ವೈರಾಣುವಿನಿಂದ ದೇಹಾರೋಗ್ಯದಲ್ಲಿ ಉಂಟಾಗಬಹುದಾದ ಏರುಪೇರಿಗೆ ಎರಡು ರೀತಿಯ ಔಷಧಗಳುಂಟು. ಒಂದು ನಮ್ಮ ದೇಹವೇ ಸೃಷ್ಟಿಸಿಕೊಳ್ಳುವಂತ ಇಮ್ಯೂನಿಟಿ ಎಂಬ ಔಷಧ. ಮತ್ತೊಂದು ವೈeನಿಕ ಪ್ರಯೋಗಾಲಗಳಲ್ಲಿ ತಯಾರಿಸಬಹು ದಾದಂತ ಔಷಧ (ಲಸಿಕೆ,ಗುಳಿಗೆ ಇತ್ಯಾದಿ). ಆದರೆ ಯಾವಾಗ ಒಂದು ರೋಗ ಮನುಷ್ಯನ ಪ್ರಾಣವನ್ನೇ ತೆಗೆಯಬಹುದಾದಷ್ಟು
ಶಕ್ತವಾಗಿರುತ್ತದೋ ಆಗ ಈ ಎರಡೂ ಔಷಧಗಳ (ಇಮ್ಯೂನಿಟಿ ಮತ್ತು ವೈದ್ಯಕೀಯ ಚಿಕಿತ್ಸೆ) ಅಗತ್ಯ ಇರುತ್ತದೆ. ಈ ಕರೋನಾ ವೈರಾಣು ಮಾನವ ಜನಾಂಗದ ಮೇಲೆ ಬೀರಬಹುದಾದ ಮಾರಕ ಪ್ರಭಾವವನ್ನು ಅರಿತ ಎಲ್ಲಾ ರಾಷ್ಟ್ರಗಳು ಅಗತ್ಯ
ಎಚ್ಚರಿಕೆ ವಹಿಸಿದವಾದರೂ ಕೆಲ ದೇಶಗಳು ಮಾತ್ರ ಲಸಿಕೆ ತಯಾರಿಕೆಯಲ್ಲಿ ತ್ವರಿತವಾಗಿ ತೊಡಗಿಕೊಂಡವು.
ಅದರಲ್ಲಿ ನಮ್ಮ ಭಾರತವೂ ಒಂದು. ಲಸಿಕೆ ಕಂಡುಹಿಡಿಯುವುದರಲ್ಲಿ ನಾ ಮೊದಲು ನೀ ಮೊದಲು ಎನ್ನುವ ಹುಚ್ಚು ಹಪಾಹಪಿ ಪ್ರತಿಷ್ಠೆಗೆ ಭಾರತ ದೇಶ ಬೀಳಲಿಲ್ಲ. ರಷ್ಯಾ, ಅಮೆರಿಕ, ಇಂಗ್ಲೆಂಡ್, ಚೀನಾ ಈ ರಾಷ್ಟ್ರಗಳ ಲಸಿಕೆಯ ನಂತರ ಭಾರತಕ್ಕಷ್ಟೇ ಅಲ್ಲದೆ ಜಗತ್ತಿಗೇ ಸಂಜೀವಿನಿಯಂತೆ ಬಂದದ್ದು ಭಾರತದ ಭಾರತೀಯ ವಿeನಿಗಳಿಂದೇ ಕಂಡುಹಿಡಿದ ಎರಡು
ಸ್ವದೇಶಿ ಲಸಿಕೆಗಳು.
೧.ಪುಣೆಯ ಸೆರಮ್ ಇನ್ಸ್ಟಿಟ್ಯೂಟ್‌ನ ಕೋವಿಶೀಲ್ಡ್ (covishield) ಮತ್ತು ೨.ಹೈದರಾಬಾದ್‌ನ ಭಾರತ್ ಬಯೋಟೆಕ್‌ನ
ಕೊವ್ಯಾಕ್ಸಿನ್(Covaxin) ಜನವರಿ ೧೬, ೨೦೨೧ರಂದು ಪ್ರಧಾನಮಂತ್ರಿಗಳು ಲಸಿಕಾ ವಿತರಣೆಯ ಮಹಾಯಜ್ಞಕ್ಕೆ ಚಾಲನೆ
ನೀಡಿದರು. ಆದ್ಯತೆಯ ಮೇರೆಗೆ ಮುಂಚುಣಿಯಲ್ಲಿ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ ಎಲ್ಲಾ ಆರೋಗ್ಯ ವಲಯದ ಸಿಬ್ಬಂದಿಗಳಿಗೆ, ಸ್ವಚ್ಚತಾ ಸಿಬ್ಬಂದಿಗಳಿಗೆ ಮೊದಲು ಲಸಿಕೆ ನೀಡಲಾಯಿತು. ಈ ಲಸಿಕಾ ವಿತರಣೆ ಭಾರತ ಸರಕಾರ ಮತ್ತು ರಾಜ್ಯ
ಸರಕಾಗಳಿಗೆ ಅತಿ ದೊಡ್ಡ ಸವಾಲಾಗಿತ್ತು ಆದರೆ ಇದನ್ನು ಸಾಧಿಸುವ ಮೂಲಕ ಸರಕಾರಗಳು ಯಶಸ್ವಿಯಾಗಿವೆ.
ಕೇವಲ ೧೩ ದಿನಗಳಲ್ಲಿ ೩೦ ಲಕ್ಷ ಮಂದಿಗೆ ಕೊವಿಡ್ ಲಸಿಕೆಯನ್ನು ವ್ಯವಸ್ಥಿತವಾಗಿ ನೀಡಲಾಯಿತು. ಆ ಮೂಲಕ ಭಾರತ ವಿಶ್ವದ ಅತಿ ವೇಗವಾಗಿ ಲಸಿಕೆ ನೀಡಿದ ದೇಶವಾಗಿ ಹೊರಹೊಮ್ಮಿತು. ಆರೊಗ್ಯ ಇಲಾಖೆ ಮಾಹಿತಿ ಪ್ರಕಾರ ಮೂವತ್ತು ಲಕ್ಷ ಮಂದಿಗೆ ಲಸಿಕೆ ನೀಡಲು ಅಮೆರಿಕ ೧೮ ದಿನಗಳು, ಇಸ್ರೇಲ್ ೩೩ ದಿನಗಳು, ಬ್ರಿಟನ್ ದೇಶವು ೩೬ ದಿನಗಳನ್ನು ತೆಗೆದುಕೊಂಡಿವೆ.
ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಈಗ ಪ್ರಸ್ತಾಪಿಸಿದಂತೆ ಹೇಗೆ ಭಾರತ ಸಂಜೀವಿನಿಯಾಗಿ ಅನ್ಯ ರಾಷ್ಟ್ರಗಳನ್ನು ರಕ್ಷಿಸುತ್ತಿದೆ? ಕೆಲ ದಿನಗಳ ಹಿಂದೆ ಬ್ರೆಜಿಲ್ ದೇಶದ ಅಧ್ಯಕ್ಷ ಸಂಜೀವಿನಿ ಹೊತ್ತು ತಂದ ಮಾಹಾಬಲಿ ಹನುಮನನ್ನು ಸ್ಮರಿಸುತ್ತಾ ಭಾರತಕ್ಕೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.
ಫೆಬ್ರವರಿ ೨ರಂದು ಇಂಗ್ಲೆಂಡ್ ದೇಶದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ತಮ್ಮ ಟ್ವಿಟ್ ಒಂದರಲ್ಲಿ ಭಾರತದ ಉದಾರತೆ ಮತ್ತು ಕರುಣೆ ಪ್ರತಿ ದಿನವೂ ಹೆಚ್ಚಾಗುತ್ತದೆ. ಪ್ರೀತಿಯ ದೇಶ (The Indian Generosity and kindness grows more and more every single day. The beloved country) ಎಂದು ಬರೆದುಕೊಂಡಿದ್ದಾರೆ, ಏಕೆ? ವೆ ಇಂಡೀಸ್ ಕ್ರಿಕೆಟ್ ತಂಡದ ಇಬ್ಬರು ಸ್ಪೋಟಕ ಬ್ಯಾಟ್ಸ್‌ಮ್ಯಾನ್‌ಗಳು ಭಾರತವನ್ನು ಶ್ಲಾಘಿಸಿ ಧನ್ಯವಾದಗಳನ್ನು ತಿಳಿಸಿದ್ದಾದರೂ ಏಕೀರಬಹುದು? ಜಗ್ಗತ್ತಿನ ದೊಡ್ಡಣ್ಣ ಎಂದು
ಕರೆಸಿಕೊಳ್ಳಲು ಇಷ್ಟಪಡುವ ಅಮೆರಿಕ ಭಾರತದ ಈ ಕೆಲಸಕ್ಕೆ ಮೆಚ್ಚಿ India is a true friend using its pharma to help the global community ಎಂದಿದೆ. ಹೌದಾ! ಏಕೆ? ಭಾರತ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು WHO ದ ಡೈರೆಕ್ಟರ್ ಜನರಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು ಭಾರತಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ!!
ಏಕೆ? ಅಷ್ಟಕ್ಕೂ ಈ ಎಲ್ಲಾ ’ಏಕೆ’ಗಳಿಗೆ ಏನು ಉತ್ತರ? ’ವಸುದೈವ ಕುಟುಂಬಕಂ’ ಎಂಬ ತನ್ನ ಸಿದ್ಧಾಂತವನ್ನು ಭಾರತ ಸಿದ್ಧಾಂತವಾಗಷ್ಟೇ ನೋಡದೆ ಕಾರ್ಯರೂಪಕ್ಕೆ ತಂದದ್ದು ಮೇಲಿನ ಎಲ್ಲಾ ’ಏಕೆ’ಗಳಿಗೆ ಉತ್ತರ. ಭಾರತ ಹೇಗೆ ತನ್ನ ಪ್ರಜೆಗಳಿಗೆ
ಲಸಿಕೆಕೊಡುವುದರಲ್ಲಿ ಅಗ್ರದಲ್ಲಿದೆಯೋ ಹಾಗೇ ಹೊರದೇಶಗಳಿಗೂ ಲಸಿಕೆ ನೀಡುವುದರಲ್ಲಿ ಭಾರತಕ್ಕೆ ಪ್ರಥಮ ಸ್ಥಾನ. ಒಂದೋ ಎರಡೋ ಅಥವಾ ಹತ್ತು ರಾಷ್ಟ್ರಗಳಲ್ಲೇ ೧೦೦ಕ್ಕೂ ಹೆಚ್ಚು ದೇಶಗಳಿಗೆ ಭಾರತ ಲಸಿಕೆ ಕೊಡುತ್ತಿದೆ ಅದರಲ್ಲಿ ಅರ್ಧಕ್ಕೂ ಅಧಿಕ ದೇಶಗಳಿಗೆ ಈಗಾಗಲೇ ಲಸಿಕೆ ತಲುಪಿದೆ.
ನೆನಪಿರಲಿ, ಪಾಕಿಸ್ತಾನವೂ ಈ ಎಲ್ಲ ದೇಶಗಳಲ್ಲಿ ಒಂದು. ಏನು ಮಹಾನ್ ನಮ್ಮ ಭಾರತ. ಅಂದ ಹಾಗೆ ಕರೋನಾ ಎರಡನೇ ಅಲೆ ಏಳುತ್ತಿರುವ ಈ ಸಂದರ್ಭದಲ್ಲಿ ಮರೆಯದೆ ಮುಖಗವಚನ್ನು (Mask) ಧರಿಸೋಣ, ಶುಚಿತ್ವ ಕಾಪಾಡಿಕೊಳ್ಳೊಣ ಮತ್ತು ಅವಶ್ಯವಾಗಿ ಸಾಮಾಜಿಕ ಅಂತರ ಬೇಕೇಬೇಕು.