Thursday, 12th December 2024

ಭಾರತವಾಗುತ್ತಿರುವುದು ಬೆದರಿಕೆಯಿಂದಲ್ಲ

-ಪ್ರವೀಣ್ ಕುಮಾರ್ ಮಾವಿನಕಾಡು

ಜಿ-೨೦ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗಾಗಿ ಭಾರತದ ರಾಷ್ಟ್ರಪತಿಯವರು ಆಯೋ ಜಿಸಿದ ಔತಣಕೂಟದ ಅಧಿಕೃತ ಆಹ್ವಾನದಲ್ಲಿ “President of India’ ಎನ್ನುವ ಬದಲಿಗೆ “President of Bharat’ ಎನ್ನುವ ಪದವನ್ನು ಮೊದಲ ಬಾರಿಗೆ ಬಳಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಇಂಡಿಯಾದ ಅಧ್ಯಕ್ಷರು’ ಎನ್ನುವ ಬದಲಿಗೆ ‘ಭಾರತದ ಅಧ್ಯಕ್ಷರು’ ಎಂದು ಉಲ್ಲೇಖಿಸಿರುವ ವಿಷಯವಾಗಿ Indian National Congress ಪಕ್ಷ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ನೇತೃತ್ವದ I.N.D.I.A ಕೂಟ ವನ್ನು ಕಂಡು ಬೆಚ್ಚಿಬಿದ್ದು India  ದೇಶಕ್ಕೆ ಭಾರತ ಎಂದು  ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅದು ಆರೋಪಿಸಿದೆ! ಇದೊಂದು ಉತ್ತಮ ಮತ್ತು ಐತಿಹಾಸಿಕ ನಿರ್ಧಾರ ಎಂದು ಮುಕ್ಕಾಲು ಪಾಲು ಭಾರತೀಯರು ಸಂತೋಷಪಡುತ್ತಿದ್ದರೂ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿದಂತೆ I.N.D.I.A ಕೂಟದ ಬಹುತೇಕ ಬೆಂಬಲಿಗರು ತೀವ್ರ ಆಕ್ರೋಶಗೊಂಡಿದ್ದಾರೆ. ಅದಕ್ಕೆ ವಿರೋಧ ಮಾಡುವುದೇ ವಿರೋಧ ಪಕ್ಷಗಳ ಕರ್ತವ್ಯ ಎಂದು ಸುಮ್ಮನಿರಬಹುದಾದರೂ, ಸಾಮಾಜಿಕ ಜಾಲತಾಣದಲ್ಲೂ ಕೆಲವು ಮುಗ್ಧರು Indiaವನ್ನು ಭಾರತ ಎಂದು ಮಾಡುತ್ತಿರುವುದು, ಮುಂದೆ ಬರಲಿರುವ ಚುನಾವಣೆಯ ಕಾರಣಕ್ಕಾಗಿ ಇರಬಹುದೇ ಎನ್ನುವ ಅನುಮಾನವನ್ನು ತೋಡಿಕೊಂಡಿರುವುದರಿಂದ ಅಂಥ ಮುಗ್ಧ ಮನಸ್ಸುಗಳಿಗಾಗಿ ಒಂದಷ್ಟು ವಿಷಯಗಳನ್ನು ನಾನಿಲ್ಲಿ ಹೇಳಲು ಇಚ್ಛಿಸುತ್ತೇನೆ.

ಬಹುಶಃ ನೀವೆಲ್ಲರೂ ಗಮನಿಸಿರಬಹುದು. ಭಾರತದಲ್ಲಿರುವ ಬಹುತೇಕ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಅವಕ್ಕೆ ಸಂಬಂಧಿಸಿದ ಇತರ ಸಂಘಟನೆಗಳ ಹೆಸರುಗಳಲ್ಲಿಯೂ ಭಾರತ India ಆಗಿಯೇ ಇದೆ. ಉದಾಹರಣೆಗೆ: ಕಾಂಗ್ರೆಸ್ ಪಕ್ಷದ ಪೂರ್ಣ ಹೆಸರು ಕನ್ನಡದಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ಎಂದಾದರೂ, ಇಂಗ್ಲಿಷ್ ಭಾಷೆಯಲ್ಲಿ ಅದರ ಹೆಸರು Indian National Congress ಎಂದು ಬದಲಾಗುತ್ತದೆ. ಅದರ ವಿದ್ಯಾರ್ಥಿ ಸಂಘಟನೆಯ ಹೆಸರು National Students’ Union of India (NSUI) ಎನ್ನುವ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಅದರ ಕಾರ್ಮಿಕ ಸಂಘಟನೆ Indian National Trade Union Congress (INTUC) ಎಂದು ಹೆಸರಿಟ್ಟುಕೊಂಡಿದೆ. ಇದೇ ರೀತಿ ಕಮ್ಯುನಿಸ್ಟ್ ಪಕ್ಷದ ಕಡೆಗೆ ಗಮನ ಹರಿಸಿದರೆ, ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷವು Communist Party of India ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದೆ. ಹಾಗೆಯೇ ಅದರ ವಿದ್ಯಾರ್ಥಿ ಸಂಘಟನೆ All India Students’ Federation (AISF) ಎಂದು ಹೆಸರಿಟ್ಟು ಕೊಂಡಿದೆ. ಅದರ ಕಾರ್ಮಿಕ ಸಂಘಟನೆಯ ಹೆಸರು All India Trade Union Congress (AITUC) ಎನ್ನುವುದಾಗಿದೆ. ಅಂದರೆ ಕಾಂಗ್ರೆಸ್ ಪಕ್ಷವಾಗಲೀ ಅಥವಾ ಕಮ್ಯುನಿಸ್ಟ್ ಪಕ್ಷವಾಗಲೀ ಭಾರತವನ್ನು ಕರೆಯುವುದೇ INDIA ಎಂದು. Indiaಎನ್ನುವುದು ಹೇಗೆ ವಿದೇಶಿಯರು ಭಾರತವನ್ನು ಕರೆದ ಹೆಸರೋ, ಹಾಗೆಯೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳೂ ವಿದೇಶಿ ಮೂಲದ ಸ್ವದೇಶಿ ಪಕ್ಷಗಳು. ಹಾಗಾಗಿಯೇ ಆ ಪಕ್ಷಗಳಿಗೆ ಭಾರತವನ್ನು India ಎಂದು ಕರೆಯುವುದೇ ಹೆಚ್ಚು ಆಪ್ತವೆನಿಸುತ್ತದೆ.

ಈಗ ನಿಮಗೊಂದು ಆಶ್ಚರ್ಯಕರ ಮಾಹಿತಿಯನ್ನು ನೀಡುತ್ತೇನೆ. ಎಲ್ಲರಿಗೂ ತಿಳಿದಿರುವ ಹಾಗೆ ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ BJP ಒಂದು ಸಂಘಪರಿವಾರ ಮೂಲದ ಪಕ್ಷ. ಸಂಘ ಪರಿವಾರ ಎಂದರೆ RSSನ ಪರಿವಾರ ಸಂಘಟನೆಗಳು ಎನ್ನುವುದೂ ತಮಗೆಲ್ಲಾ ತಿಳಿದೇ ಇದೆ. INC ಯ ವಿಸ್ತೃತ ರೂಪ Indian National Congress ಎಂದಾದರೆ, CPIನ ವಿಸ್ತೃತ ರೂಪ Communist Party of India ಎಂದಾದರೆ,  BJPಯ ವಿಸ್ತೃತ ರೂಪ Bharatiya Janata Party ಎಂದಾಗುತ್ತದೆ. BJPಯ ಹೆಸರನ್ನು ಕನ್ನಡದಲ್ಲಿ ಬರೆಯಲಿ, ಹಿಂದಿಯಲ್ಲಿ ಬರೆಯಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಿ, ಅದರ ಹೆಸರಿನಲ್ಲಿರುವ ಭಾರತ India ಆಗುವುದೇ ಇಲ್ಲ! ಇದೇ ರೀತಿ BJPಯ ವಿದ್ಯಾರ್ಥಿ ಸಂಘಟನೆ Akhila Bharatiya Vidyarthi Parishadಕೂಡ. ಕನ್ನಡದಲ್ಲಿ ಬರೆಯಲಿ, ಹಿಂದಿಯಲ್ಲಿ ಬರೆಯಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಿ ಅಥವಾ ಇನ್ಯಾವುದೇ ಭಾಷೆಯಲ್ಲಿ ಬರೆಯಲಿ, ಅದರ ಹೆಸರಿನಲ್ಲಿರುವ ಭಾರತ Indiaಆಗು ವುದೇ ಇಲ್ಲ! ಹಾಗೆಯೇ ಆ ಪಕ್ಷದ ಕಾರ್ಮಿಕ ಸಂಘಟನೆ ಯಾದ Bharatiya Mazdoor Sangh ಎನ್ನುವ ಹೆಸರನ್ನೂ ನೋಡಿ. ಆಂಗ್ಲಭಾಷೆಯಲ್ಲೂ ಅದು ಭಾರತೀಯ ಎಂದೇ ಬಳಕೆಯಾಗುತ್ತದೆಯೇ ಹೊರತೂ Indian ಆಗಿ ಅಲ್ಲ.

ಕೇವಲ ಇವಿಷ್ಟೇ ಅಲ್ಲ. ಸಂಘಪರಿವಾರದ ಯಾವ ಸಂಘಟನೆಯ ಹೆಸರಿನಲ್ಲೂ ಭಾರತ ಅಥವಾ ರಾಷ್ಟ್ರೀಯ ಎನ್ನುವುದು India ಅಥವಾ Nationalಎಂದು ಬದಲಾಗುವುದೇ ಇಲ್ಲ. ಉದಾಹರಣೆಗೆ ಸಂಘಪರಿವಾರದ ಇನ್ನು ಕೆಲವು ಸಂಘಟನೆಗಳಾದ Bharatiya Vichara Kendra, Bharatiya Yuva Seva Sangh (BYSS), Bharatiya Kisan Sangh ಇತ್ಯಾದಿಗಳ ಹೆಸರು ಗಳನ್ನೂ ನೀವು ಗಮನಿಸಬಹುದು. ಇಂಗ್ಲಿಷ್ ಭಾಷೆಯಿರಲಿ ಅಥವಾ ಇನ್ಯಾವುದೇ ಭಾಷೆಯಿರಲಿ ಆ ಸಂಘಟನೆಗಳ ಹೆಸರಿ ನಲ್ಲಿರುವ ಭಾರತೀಯ ಎಂಬುದು Indian ಆಗುವುದೇ ಇಲ್ಲ! ಸಂಘ ಪರಿವಾರದ ಎಲ್ಲ ಆಂತರಿಕ ಸಂವಹನಗಳಲ್ಲೂ ಭಾರತವನ್ನು ಭಾರತ ಎಂದೇ ಕರೆಯಲಾಗುತ್ತದೆಯೇ ಹೊರತೂ, ಯಾರೊಬ್ಬರೂ ಭಾರತವನ್ನು Indian ಎಂದು ಕರೆಯುವುದಿಲ್ಲ. ಇದರಿಂದ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ಕೇಂದ್ರ ಸರಕಾರ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸುತ್ತಿಲ್ಲ. I.N.D.I.A ಕೂಟವನ್ನು ಕಂಡು ಬೆಚ್ಚಿಬಿದ್ದು ಬದಲಾಯಿ ಸುತ್ತಿರುವುದೂ ಅಲ್ಲ. ಸಂಘಪರಿವಾರದ ಒಂದು ಭಾಗವಾಗಿ BJP ನೇತೃತ್ವದ ಕೇಂದ್ರ ಸರಕಾರ ತನ್ನ ಎರಡನೇ ಅವಧಿ ಪೂರ್ಣಗೊಳ್ಳುವ ಮೊದಲು RSS ಸೇರಿದಂತೆ ಇಡೀ ಸಂಘಪರಿವಾರದ ಸುದೀರ್ಘ ಆಶಯವೊಂದನ್ನು ಈಡೇರಿಸಬೇಕೆನ್ನುವ ಕಾರಣಕ್ಕಾಯೇ India ಎನ್ನುವ ಹೆಸರನ್ನು ಅಧಿಕೃತವಾಗಿ ತಾನು ಮೊದಲಿನಿಂದಲೂ ಕರೆಯುತ್ತಾ ಬಂದಿರುವ ‘ಭಾರತ’ವನ್ನಾಗಿ ಬದಲಾಯಿಸುವ ಪ್ರಯತ್ನಕ್ಕೆ ಕೈಹಾಕಿದೆ ಮತ್ತು ಅದು ಆ ಪಕ್ಷದ ಹಕ್ಕೂ ಹೌದು.  India  ಭಾರತವಾಗುವ ಮೂಲಕ ಮತ್ತೊಮ್ಮೆ ಸ್ವತಂತ್ರಗೊಳ್ಳುತ್ತಿದೆ.