Saturday, 14th December 2024

ಭಾರತದ ಬಗೆಗೆ ಕೆನಡಾದ ಗೊಂದಲಮಯ ನಿಲುವೇಕೆ ?

ವಿಶ್ವವಿಹಾರ

ರಮಾನಂದ ಶರ್ಮಾ

ಭಾರತ ಮತ್ತು ಕೆನಡಾಗಳೆರಡೂ ಕಾಮನವೆಲ್ತ್ ಕೂಟದ ಸದಸ್ಯರು ಮತ್ತು ಜಿ-೨೦ ಹೆಸರಿನ ದೊಡ್ಡ ಆರ್ಥಿಕ ಶಕ್ತಿಗಳ ಸಂಘಟನೆಯಲ್ಲಿವೆ. ಈ ಎರಡೂ ದೇಶಗಳು ಬಹುವರ್ಷಗಳಿಂದ ದ್ವಿಪಕ್ಷೀಯ ಸೌಹಾರ್ದ ಸಂಬಂಧಲ್ಲಿವೆ. ಆದರೆ, ಇತ್ತೀಚೆಗೆ ಖಲಿಸ್ತಾನಿಗಳ ಸಂಚಿನಿಂದಲೇ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹದಗೆಟ್ಟಿದ್ದು, ಪರಸ್ಪರರು ತಮ್ಮ ರಾಜತಾಂತ್ರಿಕರನ್ನು ಹೊರಹಾಕುವವರೆಗೆ ಸಂಬಂಧ ಕ್ಷೀಣಿಸಿದೆ.

ತೆಲುಗರ ತಲೆಯಲ್ಲಿ ಮತ್ತು ಹೃದಯದಲ್ಲಿ ಸದಾ ಅಮೆರಿಕ ಇರುತ್ತದೆ. ಕೇರಳಿಗರಲ್ಲಿ ಮಧ್ಯಪ್ರಾಚ್ಯ ಇರುತ್ತದೆ. ಹಾಗೆಯೇ ಗುಜರಾತಿಗಳಲ್ಲಿ ಇಂಗ್ಲೆಂಡ್
ಮತ್ತು ದಕ್ಷಿಣ ಆಫ್ರಿಕಾ, ಕರ್ನಾಟಕದ ಕರಾವಳಿ ಜನರಲ್ಲಿ ಮುಂಬೈ-ದುಬೈ, ಮುಂಬೈ ಕರ್ನಾಟಕದ ಜನರಿಗೆ ಗೋವಾ, ತಮಿಳರಿಗೆ ಸಿಂಗಾಪುರ, ಮಲೇಷ್ಯಾ, ಜಪಾನ್ ಮತ್ತು ಶ್ರೀಲಂಕಾ ಕಾಣುತ್ತದೆ ಎನ್ನುವುದು ರೂಢಿಯಲ್ಲಿರುವ ಮಾತುಗಳು.

ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿ ಸತ್ಯವಿಲ್ಲದಿಲ್ಲ. ಹಾಗೆಯೇ ಪಂಜಾಬಿಗಳಿಗೆ ಕೆನಡಾ ದೇಶ ಕಾಣುತ್ತದೆ. ಬಹುತೇಕ ಪಂಜಾಬಿಗಳಿಗೆ ಕೆನಡಾವೇ ಎರಡನೇ ಮನೆಯಷ್ಟು. ಕೆನಡಾ ಅವರಿಗೆ ಹತ್ತಿರ. ಕೇರಳದಲ್ಲಿ ಬಹುತೇಕ ಪ್ರತಿ ಮನೆಯಲ್ಲಿ ಒಬ್ಬರಾದರೂ ಗಲ್ಫ್ ದೇಶಗಳಲ್ಲಿ ಇರುತ್ತಾರಂತೆ. ಅದೇ ರೀತಿ ಪಂಜಾಬ್‌ನ ಬಹುತೇಕ ಪ್ರತಿಯೊಂದು ಹಳ್ಳಿ ಮತ್ತು ಕುಟುಂಬದ ಒಬ್ಬರಾದರೂ ಕೆನಡಾದಲ್ಲಿ ಇರುತ್ತಾರಂತೆ. ಅಷ್ಟರಮಟ್ಟಿಗೆ ಕೆನಡಾ ಪಂಜಾಬ್‌ ಮಯವಾಗಿದೆ.

ಕೆನಡಾದ ಜನಸಂಖ್ಯೆ ಸುಮಾರು ೪ ಕೋಟಿ ಇದ್ದು, ಇದು ಅಂದಾಜು ನಮ್ಮ ತೆಲಂಗಾಣದ ಜನಸಂಖ್ಯೆಗೆ ಸಮ. ಈ ಪೈಕಿ ಸುಮಾರು ೧೦ ಲಕ್ಷ ಜನರು ಪಂಜಾಬಿಗಳಾಗಿದ್ದು, ಇದು ಆ ದೇಶದ ಜನಸಂಖ್ಯೆಯ ಶೇ.೨.೮೬ರಷ್ಟು. ಇವರಲ್ಲೂ ಬಹುತೇಕರು ಸಿಖ್ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ. ಕೆನಡಾ ನಿವಾಸಿ ಸಿಖ್ಖರ ವಿಶೇಷವೆಂದರೆ ಸುಮಾರು ಶೇ.೩೦ ಮಂದಿ ಹುಟ್ಟಿನಿಂದಲೇ ಈ ದೇಶದ ನಾಗರಿಕರು. ಉಳಿದಂತೆ ಶೇ.೫೪ ಮಂದಿ
ವಲಸಿಗರು ಮತ್ತು ಶೇ.೧೫ ಸಿಖ್ಖರು ಕಾಯಂ ಅಲ್ಲದವರು. ಕೆನಡಾದಲ್ಲಿ ೨೫೦ ಗುರುದ್ವಾರಗಳಿದ್ದು, ಸುಮಾರು ೮ ಗುರುದ್ವಾರಗಳು ಖಾಲಿಸ್ತಾನಿಗಳ ನಿಯಂತ್ರಣದಲ್ಲಿದೆ.

ದೇಶದ ಸಂಸತ್ತಿನ ೩೩೮ ಸದಸ್ಯರಲ್ಲಿ ೧೯ ಭಾರತೀಯರಿದ್ದು, ಅವರಲ್ಲಿ ೧೮ ಮಂದಿ ಸಿಖ್ಖರು. ವಿಪರ್ಯಾಸವೆಂದರೆ ಸಿಖ್ಖರ ತಾಯಿನಾಡು ಭಾರತದಲ್ಲಿ ಕೇವಲ ೧೩ ಜನ ಆ ಸಮುದಾಯದವರು ಸಂಸತ್ತಿನಲ್ಲಿ ಇzರೆ. ಸಿಖ್ಖರ ಹೊರತಾಗಿ ಉಳಿದ ಭಾರತೀಯರು ಕೆನಡಾದಲ್ಲಿ ಇದ್ದರೂ ಪಂಜಾಬಿಗಳು ಕೆನಡಾದಲ್ಲಿ ಪ್ರಾಬಲ್ಯ ಸಾಧಿಸಿರುವುದು ವಿಶೇಷ. ಅದಕ್ಕೂ ಹೆಚ್ಚಾಗಿ ಅವರು ರಾಜಕೀಯ, ಕೃಷಿ, ಹೈನುಗಾರಿಕೆ ಮತ್ತು ಉದ್ದಿಮೆಗಳಲ್ಲೂ ಮೇಲುಗೈ
ಸಾದಿಸಿದ್ದಾರೆ.

ಇದರ ಹೊರತಾಗಿ, ಸುಮಾರು ೧.೩೦ ಮಿಲಿಯನ್ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಒದುತ್ತಿದ್ದು, ಕೆನಡಾ ಒಂದರ ೧.೮೩ ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಪ್ರತಿ ವರ್ಷ ೫೦ ಸಾವಿರ ಪಂಜಾಬ್ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಭಾರತೀಯರು ಹೋಗುವ ದೇಶಗಳಲ್ಲಿ ಅಮೆರಿಕದ ನಂತರ ಕೆನಡಾ ಎರಡನೇ ಸ್ಥಾನದಲ್ಲಿದೆ. ಕೆನಡಾದಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಶೆ.೪೭ ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ.

ಪ್ರತಿ ವಿದ್ಯಾರ್ಥಿಗೆ ೨೫ರಿಂದ ೩೦ಲಕ್ಷ ರು. ಎಂದರೂ ಸುಮಾರು ೧೩ ಸಾವಿರ ಕೋಟಿ ರು. ಪಂಜಾಬ್‌ನಿಂದಲೇ ಕೆನಡಾಕ್ಕೆ ಹೋಗುತ್ತದೆ. ಭಾರತದಿಂದ ಒಟ್ಟೂ ಸುಮಾರು ೨೦ ಬಿಲಿಯನ್ ಡಾಲರ್‌ಗಳನ್ನು ಕೆನಡಾ ದೇಶವು ಶಿಕ್ಷಣದ ಹೆಸರಿನಲ್ಲಿ ಪಡೆಯುತ್ತದೆ. ೨೦೨೨-೨೩ರಲ್ಲಿ ಕೆನಡಾದೊಂದಿಗಿನ ದ್ವಿಪಕ್ಷೀಯ ವ್ಯಾಪಾರವು ೮೧೬೧.೦೨ ಮಿಲಿಯನ್ ಡಾಲರ್ ಆಗಿದ್ದು, ಇದು ಭಾರತದ ಅಂತಾರಾಷ್ಟ್ರೀಯ ವ್ಯಾಪಾರದ ಶೇ.೬.೪೭ ಪಾಲು ಆಗಿರುತ್ತದೆ. ಭಾರತವು ಕೆನಡಾಕ್ಕೆ ಜ್ಯುವೆಲರಿ, ಟೆಕ್ಸಟೈಲ್, ಔಷಧ, ರೆಡಿಮೇಡ್ ಬಟ್ಟೆಗಳು, ಕಾಫಿ, ಕಬ್ಬಿಣ-ಉಕ್ಕು, ಪಾದರಕ್ಷೆಗಳು, ಅಕ್ಕಿ, ಧಾನ್ಯ ಮತ್ತು
ಕಾರ್ಪೆಟ್‌ಗಳನ್ನು ರಫ್ತು ಮಾಡಿದರೆ, ಅಲ್ಲಿಂದ ನ್ಯೂಸ್ ಪ್ರಿಂಟ್, ಕಬ್ಬಿಣದ ಅದಿರು, ಕೈಗಾರಿಕಾ ರಾಸಾಯನಿಕಗಳು, ಲೋಹಗಳು, ಕಾಳುಗಳು ಮತ್ತು ಮರದ ತಿರುಳುಗಳನ್ನು ಆಮದು ಮಾಡಿಕೊಳ್ಳಲಾತ್ತದೆ.

ಕೆನಡಾ ದೇಶವು ಭಾರತ ದಲ್ಲಿ ೩.೬೦ ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಅದರಲ್ಲಿ ಸುಮಾರು ಶೇ.೪೦ರಷ್ಟು ಸೇವೆ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಇದೆ. ಭಾರತ ಮತ್ತು ಕೆನಡಾಗಳೆರಡೂ ಕಾಮನವೆಲ್ತ್ ಕೂಟದ ಸದಸ್ಯರು ಮತ್ತು ಜಿ-೨೦ ಹೆಸರಿನ ದೊಡ್ಡ ಆರ್ಥಿಕ ಶಕ್ತಿಗಳ ಸಂಘಟನೆ ಯಲ್ಲಿವೆ. ಈ ಎರಡೂ ದೇಶಗಳು ಬಹುವರ್ಷ ಗಳಿಂದ ದ್ವಿಪಕ್ಷೀಯ ಸೌಹಾರ್ದ ಸಂಬಂಧಲ್ಲಿವೆ. ಆದರೆ, ಇತ್ತೀಚೆಗೆ ಖಲಿಸ್ತಾನಿಗಳ ಸಂಚಿನಿಂದಲೇ ಉಭಯ ದೇಶ ಗಳ ನಡುವಿನ ಸಂಬಂಧವು ತೀರಾ ಹದಗೆಟ್ಟಿದ್ದು, ಪರಸ್ಪರರು ತಮ್ಮ ರಾಜತಾಂತ್ರಿಕರನ್ನು ಹೊರಹಾಕುವವರೆಗೆ ಸಂಬಂಧ ಕ್ಷೀಣಿಸಿದೆ. ಭಾರತವು ಜಗತ್ತಿನ ಎಲ್ಲ ರಾಷ್ಟ್ರ ಗಳೊಂದಿಗೆ ಸ್ನೇಹ ಸೌಹಾರ್ದ ಸಂಬಂಧ ಹೊಂದಿದೆ.

ಈವರೆಗೆ ಭಾರತ, ಕೇವಲ ಪಾಕಿಸ್ತಾನ ಮತ್ತು ಚೀನಾ ದೊಂದಿಗೆ ಮಾತ್ರ ರಾಜತಾಂತ್ರಿಕ ಸಂಬಂಧವನ್ನು ಕಡಿತ ಗೊಳಿಸಿಕೊಂಡಿಸಿದ್ದು, ಕೆನಡಾ ಈ ನಿಟ್ಟಿನಲ್ಲಿ ಮೂರನೇ ರಾಷ್ಟ್ರವಾಗಿದೆ. ಕೆಲವು ಅಂತಾರಾಷ್ಟ್ರೀಯ ಮತ್ತು ದ್ವಿಪಕ್ಷೀಯ ವಿಷಯಗಳಲ್ಲಿ ಭಾರತವು ಕೆಲವು ದೇಶ ಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ರಾಜ ತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿಕೊಳ್ಳುವ ಮಟ್ಟಕ್ಕೆ ಹೋಗಿರಲಿಲ್ಲ. ಆದರೆ, ಕೆನಡಾದೊಂದಿಗೆ ಸಂಬಂಧ ಸಂಪೂರ್ಣವಾಗಿ ಕ್ಷೀಣಿಸಿರುವುದು ತೀರಾ ಅಚ್ಚರಿ ಮೂಡಿಸಿದೆ.

ಈ ನಿಟ್ಟಿನಲ್ಲಿ ಜಾಗತಿಕ ಅಭಿಪ್ರಾಯಗಳು ಏನೇ ಇರಲಿ, ಇದಕ್ಕೆ ಮುಖ್ಯಕಾರಣ ಕೆನಡಾ ಎನ್ನಲೇಬೇಕು. ಖಾಲಿಸ್ತಾನಿ ಉಗ್ರ ನಿರ್ಜರ್ ಹತ್ಯೆಗೆ ಭಾರತವೇ ಕಾರಣ ಎನ್ನುವ ಕೆನಡಾದ ಸರಿಯಾದ ಸಾಕ್ಷಿ ಪುರಾವೆ ಇಲ್ಲದ ಆರೋಪ. ಈ ನಿರಾಧಾರ ಅರೋಪಕ್ಕೆ ಮೋದಿ ಸರಕಾರವು ತಕ್ಕ ಉತ್ತರ ನೀಡಿದೆ. ಸಂತ ಜರ್ನೇಲ್ ಸಿಂಗ್ ಬಿಂದ್ರನ್ ವಾಲೆಯ ಸಾವಿನ ಬಳಿಕ ಭಾರತದಲ್ಲಿ ಖಲಿಸ್ತಾನಿ ಚಳವಳಿ ತಗ್ಗಿದ್ದು, ಇತ್ತೀಚೆಗೆ ಕೆನಡಾದಲ್ಲಿ ತಲೆ ಎತ್ತಿ ಕ್ರಿಯಾಶೀಲವಾಗಿದೆ.
ದುರ್ದೈವದಿಂದ ಕೆಲವು ಅಲ್ಲಿನ ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಅವರಿಗೆ ಬೆಂಬಲ ನೀಡುತ್ತವೆ ಎನ್ನಲಾಗುತ್ತದೆ. ಅಲ್ಲಿನ ಪ್ರಧಾನಿ ಟ್ರುಡೋ ಭಾಷಣ ಸ್ವಾತಂತ್ರ್ಯದ ಹೆಸರಿನಲ್ಲಿ ಖಲಿಸ್ತಾನಿಗಳ ಹಿಂದೂ ವಿರೋಧಿ ಮತ್ತು ಭಾರತ ವಿರೋಽ ಭಾಷಣಗಳನ್ನು ಸಮರ್ಥಿಸಿಕೊಳ್ಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ವಿಪರ್ಯಾಸವೆಂದರೆ ಭಾರತದ ಪರಮ ಮಿತ್ರ ಅಮೆರಿಕ ಕೂಡ ಈ ನಿಟ್ಟಿನಲ್ಲಿ ದೃಢವಾದ ನಿಲುವು ತಳೆಯದೇ ಕೆನಡಾವನ್ನು ಪರೋಕ್ಷವಾಗಿ ಬೆಂಬಲಿಸಿದಂತೆ ಕಾಣುತ್ತದೆ. ಮಾನವ ಹಕ್ಕು, ಸ್ವಾತಂತ್ರ್ಯ, ಶಾಂತಿ ಮತ್ತು ಸೌಹಾರ್ದದ ಬಗೆಗೆ ಉದ್ದುದ್ದ ಪಾಠಮಾಡುವ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಭಾರತದ ಪರ ನಿಲ್ಲದೇ, ಮೌನವಾಗಿವೆ. ಟ್ರುಡೋ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಬಾಂಬ್ ಸ್ಫೋಟ ನಡೆಸಿದ ಆರೋಪ ಹೊತ್ತ ಅತಂಕವಾದಿಗಳಿಗೆ ಪೌರತ್ವ ನೀಡಿದ ಆಪಾದನೆ ಎದುರಿಸುತ್ತಿದ್ದಾರೆ.

೧೯೮೨ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನವಾದಿ ತಲ್ವಿಂದರ್ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿದ್ದಾಗ, ಪ್ರಸ್ತುತ ಪ್ರಧಾನಿ ಟ್ರುಡೋ ಅವರ ತಂದೆ ಅಲ್ಲಿನ ಪ್ರಧಾನಿ ಯಾಗಿದ್ದು, ಭಾರತದ ಕೋರಿಕೆಯನ್ನು ನಿರಾಕರಿಸಿದ್ದರು. ಈ ಆತಂಕವಾದಿ ನಡೆಸಿದ ವಿಮಾನ ಬಾಂಬ್ ಸ್ಪೋಟದಿಂದ ಸುಮಾರು ೩೩೦ ಜನರು ಸಾವಿಗೀಡಾಗಿದ್ದು ಈಗ ಇತಿಹಾಸ. ವಿಚಿತ್ರವೆಂದರೆ ಕೆನಡಾ ಮಾಧ್ಯಮಗಳ ಪ್ರಕಾರ ಭಾರತ ವನ್ನು ಎದುರು ಹಾಕಿಕೊಂಡಿರುವ ಟ್ರುಡೋ ನಿಲುವಿನ ಬಗೆಗೆ ಆ ದೇಶದಲ್ಲಿ ಒಲವಿಲ್ಲ ಎನ್ನಲಾಗುತ್ತದೆ. ಭಾರತದ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ದಟ್ಟವಾಗಿದೆ. ಟ್ರುಡೋ ಸರಕಾರಕ್ಕೆ ಬೆಂಬಲ ನೀಡಿರುವ ಎನ್‌ಡಿಪಿ ನಾಯಕ ಜಗಮೀತ್ ಸಿಂಗ್ ಖಲಿಸ್ತಾನವಾದಿಯಾಗಿರುವುದು ಸಹ ಇದಕ್ಕೆ ಕಾರಣವೇ ಎನ್ನುವ ಜಿeಸೆ ಕೂಡ ಕೇಳಿ ಬರುತ್ತಿದೆ. ಇತ್ತೀಚೆಗೆ ಕೆನಡಾ ದಲ್ಲಿ ಹಿಂದೂಗಳ ಪೂಜಾಸ್ಥಳಗಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸುತ್ತಿದ್ದು, ಭಾರತವು ಇಂಥ ಕೃತ್ಯಗಳನ್ನು ಬಲವಾಗಿ ಖಂಡಿಸಿದರೂ ಟ್ರುಡೋ ಸರಕಾರ ಯಾವುದೇ ಕ್ರಮ ತೆಗೆದುಕೊಂಡಂತಿಲ್ಲ.

ಜಿ-೨೦ ಸಮ್ಮೇಳನದಲ್ಲಿ ಭಾರತದಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ ಎನ್ನುವ ಸಂಶಯ ಕೂಡ ವ್ಯಕ್ತವಾಗುತ್ತಿದೆ. ಈ ಸಮ್ಮೇಳನದ
ನಂತರ ಅವರ ವಿಮಾನದಲ್ಲಿ ತಾಂತ್ರಿಕ ತೊಂದರೆಯಾಗಿ ಅವರು ತಮ್ಮ ದೇಶಕ್ಕೆ ಹಿಂತಿರುಗಲು ವಿಳಂಬವಾಯಿತು. ಮೋದಿಯವರು ಹೃದಯ ವೈಶಾಲ್ಯದಿಂದ ವಿಮಾನ ಒದಗಿಸಲು ಮುಂದೆ ಬಂದರೂ, ಅದನ್ನು ಸ್ವೀಕರಿಸಲು ಒಪ್ಪದೇ ಎರಡು ದಿನ ತಡೆದು ತಮ್ಮ ದೇಶದಿಂದ ವಿಮಾನವನ್ನು ತರಿಸಿಕೊಂಡು ಹಿಂತಿರುಗಿದ್ದರು. ಟ್ರುಡೋ ತಂದೆ ಮಕ್ಕಳಿಗೆ ಯಾಕಿಷ್ಟು ಭಾರತದ ವಿರುದ್ಧ ದ್ವೇಷ ಎನ್ನುವುದು ರಾಜಕೀಯ ವಿಶ್ಲೇಷ ಕರಿಗೆ ಅರ್ಥ
ವಾಗುತ್ತಿಲ್ಲ. ನಿಜ್ಜರ್ ಕೊಲೆ ಮತ್ತು ಪನ್ನು ಹತ್ಯೆ ಪ್ರಯತ್ನ ಗಳನ್ನು ಸದಾ ಜೀವಂತ ಇಡಲು ಪ್ರಯತ್ನಿಸುತ್ತಿದ್ದು, ಭಾರತವನ್ನು ಅರೋಪಿ ಸ್ಥಾನನದಲ್ಲಿ ನೋಡುತ್ತಿದ್ದಾರೆ.

ಜಿ-೨೦ ಸಮ್ಮೇಳನದಲ್ಲಿ ಮೋದಿಯವರು ಕೆನಡಾದಲ್ಲಿ ಖಲಿಸ್ತಾನಿಗಳನ್ನು ನಿಯಂತ್ರಿಸುವಂತೆ ಟ್ರಡೋಗೆ ಖಡಕ್ಕಾಗಿ ಸೂಚಿಸಿದ್ದು ಹಾಗೂ ಅವರು ದೇಶಕ್ಕೆ ಮರಳಿದಾಗ ಮೋದಿ ಯವರು ಜಾಗತಿಕ ವೇದಿಕೆಯಲ್ಲಿ ನೇರವಾಗಿ ಕ್ಲಾಸ್ ತೆಗೆದುಕೊಂಡಿದ್ದು ಅವರಿಗೆ ಮುಜುಗರ ಉಂಟು ಮಾಡಿವೆ. ಆ ಬಳಿಕ ಅವರು ಭಾರತ ವಿರೋಧಿ ನಿಲುವನ್ನು ಇನ್ನೂ ಹೆಚ್ಚಿಸಿzರೆ ಎನ್ನಲಾಗುತ್ತದೆ. ಅಮೆರಿಕನ್ ಉಪಖಂಡದ ದೇಶ ಒಂದು ಭಾರತದ ವಿರುದ್ಧ ಇಂತಹ ಕಠಿಣ ಧೋರಣೆ ವ್ಯಕ್ತ ಮಾಡಿರುವುದು ಅಚ್ಚರಿ ಎನಿಸಿದರೂ, ಅದು ಪರೋಕ್ಷವಾಗಿ ಭಾರತ ವಿರುದ್ಧ ಇರುವ ಖಲಿಸ್ತಾನವನ್ನು ಬೆಂಬಲಿಸುವುದು ಚಿಂತೆಗೀಡು ಮಾಡಿದೆ ಮತ್ತು ಅತಂಕಕಾರಿ ಯಾಗಿದೆ.

ಇಡೀ ದೇಶವು ಇಸ್ರೇಲ್-ಪ್ಯಾಲೆಸ್ಟೀನ್ ಯುದ್ಧದಲ್ಲಿ ಹಮಾಸ್ ವಿರುದ್ಧ ನಿಲುವು ಹೊಂದಿದರೂ, ನಮ್ಮ ದೇಶದಲ್ಲಿ ಕೆಲವು ರಾಜಕಾರಿಣಿಗಳು ಹಮಾಸ್ ಪರ ಮಾತನಾಡುವಂತೆ, ಕೆನಡಾದಲ್ಲೂ ಜನರು ಭಾರತದ ಪರ ಇದ್ದಾರೆ. ಅಲ್ಲಿನ ಕೆಲವು ರಾಜಕಾರಣಿಗಳು ಖಲಿಸ್ತಾನ ಪರವೂ ಇರಬಹುದು. ಇದು ಖಲಿಸ್ತಾನ ಮೊಟ್ಟೆಗೆ ಕಾವು ಕೊಡಲು ಸಾಕು ಎನ್ನುವುದಲ್ಲಿ ಅರ್ಥವಿದೆ. ಮಾಧ್ಯಮಗಳ ಸಮೀಕ್ಷೆ ವರದಿ ಪ್ರಕಾರ ಕೆನಡಾದಲ್ಲಿ ಟ್ರುಡೋಗೆ ಬೆಂಬಲ ಕ್ಷೀಣಿಸುತ್ತಿದ್ದು, ಇತ್ತೀಚಿನ ಒಂದು ಸಮೀಕ್ಷೆಯಲ್ಲಿ ಶೇ.೬೯ರಷ್ಟು ಜನ ಅವರನ್ನು ವಿರೋಧಿಸಿದ್ದಾರಂತೆ.

ಅವರ ಆಧಿಕಾರ ಅವಧಿ ೨೦೨೫ ಅಕ್ಟೋಬರ್ ವರೆಗೆ ಇದ್ದು, ೨೦೨೪ರಲ್ಲಿಯೇ ಚುನಾವಣೆ ನಡೆಯಲಿ ಎಂದು ಆಶಿಸಿzರಂತೆ. ಹೀಗಾಗಿ ಅವರು ಅಧಿಕಾರ ಅವಧಿ ಬೇಗ ಮುಗಿಯುವ ಸಾಧ್ಯತೆ ಕಾಣುತ್ತಿದ್ದು, ಅದೇಶ ದೊಂದಿಗೆ ಬಾಂಧವ್ಯ ಬಲಾವಾಗಬಹುದು ಎನ್ನುವ ಆಶಾಭಾವನೆ ಕಾಣುತ್ತಿದೆ.

(ಲೇಖಕರು ಹವ್ಯಾಸಿ ಬರಹಗಾರರು)