ಮನದ ಮಾತು
ಅಂಜು ಬಾಬ್ಬಿ ಜಾರ್ಜ್
ಪ್ರಧಾನಮಂತ್ರಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ’ಮನ್ ಕಿ ಬಾತ್’ ನಲ್ಲಿ ಕ್ರೀಡೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಈ ಹಿಂದೆ ನಮ್ಮ ದೇಶದ ಕ್ರೀಡಾ ಸಾಧಕರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪತ್ರಿಕೆಗಳೇ ಏಕೈಕ ಮಾಧ್ಯಮ ವಾಗಿದ್ದವು.
ಭಾರತದಲ್ಲಿ ಕ್ರೀಡೆಗೆ ಇದು ಸಂಭ್ರಮದ ಸಮಯ. ಭಾರತವು ಯಾವಾಗಲೂ ಭರವಸೆಯ ಮತ್ತು ಬೃಹತ್ ಸಂಖ್ಯೆಯ ಕ್ರೀಡಾ ಪ್ರತಿಭೆಗಳನ್ನು ಹೊಂದಿದೆ. ಕ್ರೀಡೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನೀತಿಗಳನ್ನು ಮಾರ್ಪಡಿಸುವುದು ಮತ್ತು ಕ್ರೀಡಾ ಪಟುಗಳ ಅಗತ್ಯ ಮತ್ತು ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ಹೊಸ ನೀತಿಯನ್ನು ತರುವುದು ಅಗತ್ಯವಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಸರ್ಕಾರವು ತಳಮಟ್ಟದ ಪ್ರತಿಭೆ ಗುರುತಿಸುವಿಕೆ, ಕ್ರೀಡಾ ಮೂಲಸೌಕರ್ಯ ನಿರ್ಮಾಣ, ಗಣ್ಯ ಕ್ರೀಡಾಪಟುಗಳಿಗೆ ಬೆಂಬಲ ಮತ್ತು ಮಹಿಳೆಯರು, ದಿವ್ಯಾಂಗರು ಹಾಗು ದೇಶದ ಮೂಲೆ ಮೂಲೆಗಳ
ಯುವಕ ರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ದೇಶದ ಕ್ರೀಡಾ ಚಿತ್ರಣ ವನ್ನು ಪರಿವರ್ತಿಸುವ ಮಿಷನ್ ಮೋಡ್‌ನಲ್ಲಿದೆ.
ಯಶೋಗಾಥೆಗಳು ಹಾಗೂ ಎಲ್ಲ ವಯೋಮಾನದ ಕ್ರೀಡಾಪಟುಗಳ ಸ್ಥೈರ್ಯ, ಹೋರಾಟ ಮತ್ತು ದೃಢಸಂಕಲ್ಪದ ಕಥೆಗಳು ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಮತ್ತು ರಾಷ್ಟ್ರದ ಜನರ ಹೃದಯಗಳಲ್ಲಿ ಸ್ಥಾನ ಪಡೆದಿವೆ. ಖೇಲೋ ಇಂಡಿಯಾ ಬದಲಾವಣೆಯ ಒಂದು ಸಾಧನವಾಗಿದೆ. ವಾಸ್ತವವಾಗಿ, ಖೇಲೋ ಇಂಡಿಯಾ ಕ್ರೀಡಾಕೂಟ ಭಾರತದ ಮಿನಿ ಒಲಿಂಪಿಕ್ಸ್ ಆಗಿ ಮಾರ್ಪಟ್ಟಿದೆ. ರಾಷ್ಟ್ರಮಟ್ಟದಲ್ಲಿ ದೊರೆಯುತ್ತಿರುವ ಪ್ರೋತ್ಸಾಹವು ಯುವ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ರಾಜ್ಯಗಳು ತಮ್ಮದೇ ಆದ ದೃಢವಾದ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಉತ್ತೇಜನವನ್ನು ನೀಡಿದೆ.
ದೇಶದಲ್ಲಿ ಒಟ್ಟಾರೆ ಕ್ರೀಡಾ ಸಂಸ್ಕೃತಿಯ ಬೆಳವಣಿಗೆಯ ಹೊರತಾಗಿ, ಪ್ರತಿಯೊಬ್ಬ ಕ್ರೀಡಾಪಟು ಮತ್ತು ಅವರ ಪ್ರಗತಿಯನ್ನು
ತಿಳಿದುಕೊಳ್ಳಲು ಪ್ರಧಾನಿಯವರು ವಹಿಸುತ್ತಿರುವ ವೈಯಕ್ತಿಕ ಆಸಕ್ತಿಯು ನಮ್ಮ ದೇಶದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಅವರು ಅಂತಿಮ ಪಂದ್ಯಕ್ಕೂ ಮೊದಲು ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿ/ಕ್ರೀಡಾಕೂಟದ ನಂತರ ಭಾರತೀಯ ತಂಡದೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ಯಶಸ್ಸು ಅಥವಾ ಪ್ರಾಮಾಣಿಕ ಪ್ರಯತ್ನಗಳಿಗಾಗಿ ಅವರನ್ನು ಪ್ರೇರೇಪಿಸುತ್ತಾರೆ ಮತ್ತು ಅಭಿನಂದಿಸುತ್ತಾರೆ.
ಪ್ರಧಾನಮಂತ್ರಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ’ಮನ್ ಕಿ ಬಾತ್’ ನಲ್ಲಿ ಕ್ರೀಡೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಈ ಹಿಂದೆ ನಮ್ಮ ದೇಶದ ಕ್ರೀಡಾ ಸಾಧಕರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪತ್ರಿಕೆಗಳೇ ಏಕೈಕ ಮಾಧ್ಯಮ ವಾಗಿದ್ದವು. ಆದರೆ ಈಗ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಹೋಗುವ ಮುನ್ನವೇ ಕ್ರೀಡಾಪಟುಗಳನ್ನು ಸಂಭ್ರಮಿಸುತ್ತಿದ್ದೇವೆ. ಕಾಮನ್‌ವೆಲ್ತ್ ಅಥವಾ ಒಲಿಂಪಿಕ್ಸ್‌ಗೆ ಹೋಗುವ ಭಾರತೀಯ ತಂಡವಾಗಲಿ ಅಥವಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಭಾಗವಹಿಸುವ ಯುವಕರಿರಲಿ, ಮನ್ ಕಿ ಬಾತ್ ಕ್ರೀಡಾ ರಂಗದಲ್ಲಿ ದೇಶದ ಸಾಧನೆಗಳನ್ನು ಬೆಳಕಿಗೆ ತರುವ ವೇದಿಕೆಯಾಗಿದೆ.
೨೦೨೩ ರ ಏಪ್ರಿಲ್ ೩೦ ರಂದು ’ಮನ್ ಕಿ ಬಾತ್’ ತನ್ನ ಶತಕವನ್ನು ಬಾರಿಸುತ್ತಿದ್ದು, ಅದರ ಎಲ್ಲ ಸಂಚಿಕೆಗಳು, ಈ ಎಲ್ಲ
ವರ್ಷಗಳಲ್ಲಿ, ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಮತ್ತು ಕ್ರೀಡೆಗಳಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸೂರ್ತಿಯಾಗಿ ಕೆಲಸ ಮಾಡಿವೆ ಎಂದು ನನಗೆ ಖಾತ್ರಿಯಿದೆ. ನಾನು ವಿಶ್ವ ಚಾಂಪಿಯನ್‌ಶಿಪ್‌ನ ಮೊದಲ ಪದಕವನ್ನು ಗೆದ್ದ ಸಮಯದಲ್ಲಿ, ಪದಕ ಗೆದ್ದ ನನ್ನ ಸಹ ಆಟಗಾರ್ತಿಗೆ ಆಕೆಯ ದೇಶದ ಮುಖ್ಯಸ್ಥರಿಂದ ಕರೆ ಬಂದಿತ್ತು, ಅದನ್ನು ಕ್ರೀಡಾಂಗಣದ ಪರದೆಯ ಮೇಲೆ ಪ್ರದರ್ಶಿಸಲಾಯಿತು.
ಅಂತಹ ಅವಕಾಶ ನನಗೂ ಯಾವಾಗ ದೊರೆಯಬಹುದು ಎಂದು ನಾನು ಅಂದುಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ಮನ್
ಕಿ ಬಾತ್ ನಂತಹ ಮಹತ್ವದ ವೇದಿಕೆಯಲ್ಲಿ ಪ್ರಧಾನಿಯವರು ಇಂದಿನ ಯುವ ಕ್ರೀಡಾಪಟುಗಳ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಕ್ರೀಡಾಪಟುಗಳ ಅದೃಷ್ಟವೇ ಸರಿ. ಪ್ರಧಾನಿಯವರು ಕ್ರೀಡಾಪಟುಗಳ ವೈಯಕ್ತಿಕ ಹಿತಾಸಕ್ತಿಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಮತ್ತು ಕ್ರೀಡಾಪಟುಗಳಿಗೆ ಅದ್ದೂರಿ ಬೀಳ್ಕೊಡುಗೆ ಮತ್ತು ಹಿಂತಿರುಗಿದಾಗ ಅವರಿಗೆ ಅದ್ದೂರಿ ಸ್ವಾಗತಗಳನ್ನು ನೀಡುತ್ತಿದ್ದಾರೆ ಮತ್ತು ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನು ಇಡೀ ಭಾರತ ವಿಶೇಷವಾಗಿ ಯುವ ಪೀಳಿಗೆ ಗಮನಿಸುತ್ತಿದೆ.
ಪದಕಗಳನ್ನು ಗೆಲ್ಲುವುದರಲ್ಲಿ ಮತ್ತು ಭಾರತವನ್ನು ಜಾಗತಿಕ ಭೂಪಟದಲ್ಲಿ ಇರಿಸುವುದರಲ್ಲಿ ಕ್ರೀಡೆಯನ್ನು ತಡೆಯ ಲಾಗುವುದಿಲ್ಲ ಎಂಬ ಅಂಶವನ್ನು ಪ್ರಧಾನಿ ಪದೇ ಪದೇ ಒತ್ತಿಹೇಳಿದ್ದಾರೆ. ಇದು ಪ್ರಾಥಮಿಕವಾಗಿ ನಮ್ಮನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವ ಮೂಲಕ ವೈಯಕ್ತಿಕ ವ್ಯಕ್ತಿತ್ವಗಳ ಬೆಳವಣಿಗೆ, ಮಾನಸಿಕವಾಗಿ ಜಾಗ್ರತೆ ಮತ್ತು ಕ್ರೀಡಾ ಮನೋ ಭಾವವನ್ನು ಪೋಷಿಸುತ್ತದೆ. ಒಟ್ಟಾರೆಯಾಗಿ ಕ್ರೀಡೆಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದೆ. ಜನರು ಕ್ರಿಕೆಟ್ ಅನ್ನು ಮಾತ್ರ ಅನುಸರಿಸುವ ದಿನಗಳು ಮುಗಿದಿವೆ. ಇಂದು, ಪ್ರತಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಭಾಗವಹಿಸುವಿಕೆಯ ಬಗ್ಗೆ ರಾಷ್ಟ್ರೀಯ ಹೆಮ್ಮೆಯಿದೆ.
ಅದು ಬ್ಯಾಡ್ಮಿಂಟನ್, ಜಾವೆಲಿನ್ ಎಸೆತ, ಹ್ಯಾಂಡ್‌ಬಾಲ್ ಅಥವಾ ಫ್ಯಾನ್ಸಿಂಗ್ ಆಗಿರಲಿ ಮತ್ತು ಮಲ್ಲಕಂಬ ಮತ್ತು ಕಲರಿಪಯಟ್ಟುಗಳಂಥ ದೇಶೀಯ ಕ್ರೀಡೆಗಳಾಗಿರಲಿ, ಪ್ರಪಂಚದಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಕ್ರೀಡಾ ಪಟುಗಳಿಗೆ ಇಂದು ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ೨೦೨೦ ರ ಒಲಂಪಿಕ್ಸ್‌ಗೆ ಮೊದಲು, ಟೋಕಿಯೋಗೆ
ಹೋಗುವ ಕ್ರೀಡಾಪಟುಗಳನ್ನು ಅheeಡಿ೪Iಟಿಜಚಿ ಮೂಲಕ ಬೆಂಬಲಿಸುವಂತೆ ಪ್ರಧಾನಮಂತ್ರಿಯವರು ಮನ್ ಕಿ ಬಾತ್ ಕೇಳುಗರನ್ನು ಒತ್ತಾಯಿಸಿದರು. ಇದು ನಂತರ ಅಭಿಯಾನವಾಗಿ ಮಾರ್ಪಟ್ಟಿತು. ಕ್ರೀಡಾಪಟುಗಳಿಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ ಶಾಲಾ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಯಿತು.
ನಾವು ಒಂದು ದೇಶವಾಗಿ ನಮ್ಮ ಕ್ರೀಡಾ ಪಟುಗಳನ್ನು ಸಂಭ್ರಮಿಸಲು ಕಂಡುಕೊಳ್ಳುತ್ತಿರುವ ವಿಭಿನ್ನ ಮಾರ್ಗಗಳು ಆಸಕ್ತಿ ದಾಯಕ ವಾಗಿವೆ. ಕ್ರೀಡಾ ರಂಗದಲ್ಲಿನ ಈ ಆವೇಗವು ಭಾರತಕ್ಕೆ ಅಭೂತಪೂರ್ವವಾಗಿದೆ ಮತ್ತು ಕ್ರೀಡೆಗಳಿಗೆ ಹೊಸ
ಚೈತನ್ಯವನ್ನು ತುಂಬಿದ್ದಕ್ಕಾಗಿ ನಾನು ಪ್ರಧಾನ ಮಂತ್ರಿಯವರಿಗೆ ಕೃತಜ್ಞಳಾಗಿದ್ದೇನೆ.
ಫಲಿತಾಂಶಗಳನ್ನು ಎಲ್ಲರೂ ನೋಡಬಹುದು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಏಳು ಮತ್ತು ಪ್ಯಾರಾಲಿಂಪಿಕ್ ನಲ್ಲಿ ೧೯ ಪದಕಗಳೊಂದಿಗೆ ಭಾರತ ನಾಲ್ಕು ದಶಕಗಳಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ೨೨ ಚಿನ್ನದ ಪದಕಗಳು ಸೇರಿದಂತೆ ಒಟ್ಟು ೬೧ ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿತು. ಪ್ರತಿಷ್ಠಿತ ಅಂತಾರಾಷ್ಟ್ರೀಯ ಥಾಮಸ್ ಕಪ್ (ಬ್ಯಾಡ್ಮಿಂಟನ್) ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತೀಯ ಪುರುಷರ ತಂಡವು ೧೪ ಬಾರಿ ವಿಶ್ವ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ
ಮೂಲಕ ಚಾಂಪಿಯನ್‌ಶಿಪ್ ಗೆದ್ದಿದೆ.
ಬ್ರೆಜಿಲ್‌ನ ಡೆಫ್ಲಿಂಪಿಕ್ಸ್ ನಲ್ಲಿ ಭಾರತೀಯ ತಂಡವು ೧೬ ಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಯುವ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಇಡೀ ರಾಷ್ಟ್ರವು ಅವರ ಗೆಲುವುಗಳನ್ನು ಆನಂದಿಸುತ್ತಿದೆ. ಮನ್ ಕಿ ಬಾತ್ ಒಂದು ವೇದಿಕೆಯಾಗಿ ನಾಗರಿಕರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ, ದೇಶದಲ್ಲಿ ಕ್ರೀಡೆಯ ಬಗ್ಗೆ ಸಾಮೂಹಿಕ ಉತ್ಸಾಹವನ್ನು ಪ್ರೇರೇಪಿಸಿದೆ. ಮನ್ ಕಿ ಬಾತ್‌ನ ಹಲವಾರು ಸಂಚಿಕೆಗಳಲ್ಲಿ, ಪ್ರಧಾನ ಮಂತ್ರಿಯವರು ಯುವ ಪೀಳಿಗೆಗೆ ಕ್ರೀಡೆಯನ್ನು ತಮ್ಮ
ಜೀವನದ ಪ್ರಮುಖ ಭಾಗವನ್ನಾಗಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅವರು ತಮ್ಮ ರೇಡಿಯೋ ಕಾರ್ಯಕ್ರಮದ ಮೂಲಕ, ಭಾರತದ ಸಮಗ್ರ ಅಭಿವೃದ್ಧಿಗೆ ಕ್ರೀಡೆಯನ್ನು ಪ್ರಮುಖ ಅಂಶವನ್ನಾಗಿ ಮಾಡಲು ಸಬ್ಕಾ ಪ್ರಯಾಸ್‌ನ ಭಾವನೆಯನ್ನು ಹುಟ್ಟುಹಾಕಿದ್ದಾರೆ.
ಜನರು, ಸರ್ಕಾರಗಳು, ಕ್ರೀಡಾಪಟುಗಳು ಮತ್ತು ಸಂಘಟನೆಗಳು ಒಟ್ಟಾಗಿ ನವ ಭಾರತದ ಈ ದೃಷ್ಟಿಕೋನವನ್ನು ಸಾಕಾರ ಗೊಳಿಸಲು ಶ್ರಮಿಸುತ್ತಿವೆ. ಮನ್ ಕಿ ಬಾತ್‌ನ ಮುಂಬರುವ ೧೦೦ ನೇ ಸಂಚಿಕೆಗಾಗಿ ನಾನು ಎದುರು ನೋಡುತ್ತಿದ್ದೇನೆ. ನಮ್ಮ ಪ್ರಧಾನ ಮಂತ್ರಿಯವರ ಪ್ರೇರಣೆಯ, ಪ್ರೋತ್ಸಾಹದ ಮಾತುಗಳನ್ನು ಕೇಳಲು ಮತ್ತು ಇತರರ ಜೀವನದಲ್ಲಿ ದೊಡ್ಡ ಬದಲಾವಣೆ ಯನ್ನು ತಂದ ಸಾಮಾನ್ಯ ಜನರ ಬಗ್ಗೆ ಮಾತನಾಡುವುದನ್ನು ಕೇಳಲು ಎದುರು ನೋಡುತ್ತಿದ್ದೇನೆ.
(ಲೇಖಕರು : ಭಾರತೀಯ ಒಲಿಂಪಿಯನ್ ಮತ್ತು
ಭಾರತ ಅಥ್ಲೆಟಿಕ್ಸ್ ಒಕ್ಕೂಟದ ಉಪಾಧ್ಯಕ್ಷೆ)