ಸ್ಮರಣೆ
ಕಿರಣಕುಮಾರ ವಿವೇಕವಂಶಿ
ದೇವರಿಂದ ಸೃಷ್ಟಿಸಲ್ಪಟ್ಟ ಪ್ರತಿಯೊಂದು ಜೀವಿಗೆ ಬದುಕಲು ಬೇಕಾದ ಒಂದು ಪಾತ್ರವನ್ನು ದೇವರು ನೀಡಿದ್ದಾನೆ. ಈ ರಾಕೆಟ್ ಹಾಗೂ ಕ್ಷಿಪಣಿಗಳ ತಯಾರಿಕೆ ‘ಅವನು’ ಕಲಾಂ ಎಂಬ ಸಣ್ಣ ಮನುಷ್ಯನಿಂದ ಮಾಡಿಸಿzನೆ. ಈ ಮೂಲಕ ಹಲವು ಮಿಲಿಯನ್ ಜನರಿಗೆ, ನೀವಿಂದೂ ಕೀಳರಿಮೆ ಅಥವಾ ನಿರಾಸೆಯಿಂದ ಬಾಳಬೇಡಿರಿ ಎಂಬ ದೈರ್ಯ ತುಂಬಿದ್ದಾನೆ.
ಹುಟ್ಟಿನಿಂದಲೇ ನಾವೆ ಭಗವಂತನ ಶಕ್ತಿ ತುಂಬಿಕೊಂಡು ಈ ಜಗತ್ತಿಗೆ ಬಂದಿದ್ದೇವೆ. ಈ ಆಂತರಿಕ ‘ಅಗ್ನಿ’ಗೆ ರೆಕ್ಕೆಗಳನ್ನು ಕಟ್ಟಿ ಒಳ್ಳೆಯತನವೆಂಬ ಪ್ರಕಾಶವನ್ನು ಬೆಳಗುವ ಪ್ರಯತ್ನ ನಮ್ಮದಾಗಬೇಕು ಎಂದು ಹೇಳಿದ್ದು ಈ ರಾಷ್ಟ್ರದ ಮಾಜಿ ರಾಷ್ಟ್ರಪತಿ, ಭಾರತದ ಕ್ಷಿಪಣಿ ಮಾನವ, ಶ್ರೇಷ್ಠ ಶಿಕ್ಷಕ, ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ. ತಮ್ಮ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದ ಅವರು ಅಕ್ಷರಶಃ ಬದುಕಿದ್ದು ಹಾಗೆಯೇ…! ಯಾವೊಂದು ಧರ್ಮದವರೂ ದ್ವೇಶಿಸದ, ಸಾಕ್ಷಾತ್ ಸಂತನೆಂದು ಭಾವಿಸುವ ಬದುಕು ಅವರದ್ದಾಗಿತ್ತು.
ಅಂದಿನ ಮದ್ರಾಸ್ ರಾಜ್ಯ ಅಂದರೆ ಇಂದಿನ ತಮಿಳುನಾಡಿನ ರಾಮೇಶ್ವರಂನಲ್ಲಿ ೧೫ ಅಕ್ಟೋಬರ್ ೧೯೩೧ ರಂದು ಜೈನುಲಾಬ್ದೀನ್ ಹಾಗೂ ಆಶಿಯಮ್ಮರ ಮಗನಾಗಿ ಜನಿಸಿದ ಅಬ್ದುಲ್ ಕಲಾಂ ಬೆಳೆದದ್ದು ತೀರಾ ಸಾಮಾನ್ಯನಾಗಿ. ತಂದೆ ಹಾಗೂ ರಾಮೇಶ್ವರಂನ ಪ್ರಧಾನ ಅರ್ಚಕ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳ ವಿಚಾರ ವಿನಿಮ ಯದ ಕಾರಣಕ್ಕೆ ಧಾರ್ಮಿಕ ವಿಚಾರಗಳಲ್ಲಿ ಸಾಕಷ್ಟು ವೈಶಾಲ್ಯತೆ ಬೆಳೆಯಿತು. ಅಧ್ಯಾತ್ಮದ ಹೂರಣದ ರುಚಿ ದೊರೆತದ್ದು ಇಲ್ಲಿಯೇ! ಈ ಕಾರಣಕ್ಕಾಗಿಯೇ ಮುಂದೆ ಯಾವ ಸಂತನಿಗೂ ಕಡಿಮೆ ಇಲ್ಲದ ಜೀವನ ನಡೆಸಿದ್ದು ಕಲಾಮರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ೮ನೇ ವಯಸ್ಸಿಗೆ ಮನೆ ಮನೆಗೆ ಪತ್ರಿಕೆ ಹಂಚುವ ಕೆಲಸ ಆ ಹುಡುಗನಿಗೆ ಸಿಕ್ಕಿತು, ಈ ಸಮದಲ್ಲಿ ಅವರ ಮೇಲೆ ಪ್ರಭಾವ ಬೀರಿ ಜ್ಞಾನ ಹೆಚ್ಚಲು ಕಾರಣಾದವ ಆತನ ಸೋದರ ಸಂಬಂಧಿ ಶಮ್ಶುದ್ದೀನ. ಬಾಲ್ಯದಲ್ಲಿ ತಾಯಿಯಿಂದ ರಾಮಾಯಣದ ಹಾಗೂ ಪ್ರವಾದಿಗಳ ಕಥೆ ಕೇಳುತ್ತಿದ ಬಾಲಕ ಅದಾಗಲೇ ಜಾತಿ- ಧರ್ಮಗಳ ಚೌಕಟ್ಟು ಮೀರಿ ಬೆಳೆಯತೊಡಗಿದ್ದ. ಆತನನ್ನು ಉನ್ನತ ವ್ಯಾಸಂಗಕ್ಕಾಗಿ ರಾಮನಾಥಪುರಂದ ಶ್ಪರ್ಟ್ಜ್ ಹೈಸ್ಕೂಲಿಗೆ ಕಳುಹಿಸಿದರು.
ಇಲ್ಲಿ ಪ್ರಭಾವ ಬೀರಿದವರು ಅಯ್ಯದೊರೈ ಸೊಲೊಮನ್ ಎಂಬ ಗುರುಗಳು. ಅವರು ಜೀವನದಲ್ಲಿ ಯಶಸ್ಸು ಪಡೆದು ಏನನ್ನಾದರೂ ಸಾಧಿಸಬೇಕಾದರೆ ಆಕಾಂಕ್ಷೆ, ನಂಬಿಕೆ ಮತ್ತು ಭರವಸೆಗಳೆಂಬ ಮೂರು ಅಂಶಗಳು ಮುಖ್ಯವಾಗುತ್ತವೆ. ನಿರೀಕ್ಷೆಯಂತೆ ಏನಾದರೂ ಜರುಗಬೇಕಾದರೆ ಮೊದಲು ಆ ಬಗ್ಗೆ ಸ್ಪಷ್ಟ ಗುರಿಯಿರಬೇಕು. ಆ ಬಳಿಕ ಈ ದಾರಿಯಲ್ಲಿ ಛಲದಿಂದ ಸಾಗಬೇಕು ಆಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದ ಮಾತು ಕಲಾಮರಲ್ಲಿ ಅಚ್ಚಳಿಯದೆ ಉಳಿಯಿತು.
ಮುಂದೆ ತಿರುಚಿಯ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿ ಅಲ್ಲಿಂದ ವಿeನದಲ್ಲಿ ಪದವಿ ಪಡೆದ ಅಬ್ದುಲ್‌ಗೆ ತನ್ನ ಕನಸು ನನಸಗಬೇಕಾದರೆ ಇಂಜಿನಿಯರಿಂಗ್ ಸೇರಬೇಕು ಎನಿಸಿ, ೧೯೫೭ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಸೇರಿಕೊಂಡರು.
ಇಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಇರಿಸಿದ್ದ ಹಳೆಯ ವಿಮಾನಗಳನ್ನು ನೋಡಿ ತಾನು ಪೈಲೆಟ್ ಆಗಬೇಕೆಂಬ ಕನಸಿಗೆ ಪುಷ್ಟಿ ದೊರೆತಂತಾಗಿತ್ತು. ಪದವಿ ಶಿಕ್ಷಣ ಪೂರೈಸಿದ ನಂತರ ಎರಡು ಕೆಲಸದ ಅವಕಾಶಗಳು ಒಟ್ಟಿಗೆ ಬಂದವು. ಅವರು ಸಂದರ್ಶನಕ್ಕಾಗಿ ದೆಹಲಿಗೆ ಹೊರಟರು, ಅಲ್ಲಿಂದ ಡೆಹರಾಡೂನಿಗೆ ವಾಯುದಳದ ಕೆಲಸದ ಸಂದರ್ಶನಕ್ಕೆ ಪಯಣ ಬೆಳೆಸಿದರು. ಆದರೆ ಈ ಸಂದರ್ಶನದಲ್ಲಿ ತಿರಸ್ಕೃತ ರಾದ ಕಲಾಮರಿಗೆ ತೀರಾ ದುಃಖವಾಗಿ ಹೊರಟಿದ್ದು ಹೃಷಿಕೇಶದೆಡೆಗೆ. ಅಲ್ಲಿ ಗಂಗಾ ಸ್ನಾನ ಮಾಡಿ ಸ್ವಚ್ಛ ಭಾವದಿಂದ ಸಾಧು-ಸಂತರ ಮಧ್ಯ ಮನದ ತೊಳಲಾಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.
ಅಲ್ಲಿಯೇ ಸ್ವಾಮಿ ಶಿವಾನಂದರನ್ನು ಭೇಟಿಯಾಗಿ ಅವರಿಂದ ಸ್ಫೂರ್ತಿ ಪಡೆದು ಮತ್ತೆ ದೆಹಲಿಯತ್ತ ಹೊರಟರು, ಅಲ್ಲಿ ಸಂದರ್ಶನದ ಫಲಿತಾಂಶ ನೋಡಲಾಗಿ ಕೆಲಸಕ್ಕಾಗಿ ನಿರ್ದೇಶನ ಪತ್ರ ದೊರೆಯಿತು. ಸಂತೋಷದಿಂದ ೧೯೫೮ ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೇರಿದರು. ಅಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ಅಲ್ಲಿಂದ ಎಉI ಮಾದರಿ ತಯಾರಿಕೆಗೆ ನಿಯೋಜಿಸಿದರು. ಆದರೆ ರಕ್ಷಣಾ ಸಚಿವ ಎಂ.ಕೆ.ಮೆನನ್ ಅವರು ಅಧಿಕಾರದಿನಂದ
ಕೆಳಗಿಳಿದ ಮೇಲೆ ಈ ಬಗ್ಗೆ ಉಳಿದವರು ಅನಾಸಕ್ತಿ ತೋರಿ ಯೋಜನೆ ಕೈ ಬಿಡಬೇ ಕಾಯ್ತು. ಬೇಸರದಲ್ಲಿದ್ದ ಕಲಾಮರಿಗೆ ವಿಕ್ರಂ ಸಾರಭಾಯಿ ಅವರೊಂ ದಿಗೆ ಐಘೆಇuಖಅ ಸಂಸ್ಥೆಯಲ್ಲಿ ಕೆಲಸ ಮಾಡುವ ಸದವಕಾಶ ಒದಗಿಬಂತು.
ಪ್ರೊ.ಮೆನನ್ ಹಾಗೂ ಪ್ರೋ.ವಿಕ್ರಂ ಸಾರಾಭಾಯಿಯವರ ಸಂಪರ್ಕದ ನಂತರ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಗೆ ನಾಂದಿ ದೊರೆಯಿತೆನ್ನಬಹುದು. ಮುಂದೆ ಶಬ್ದವೇಗಿ ರಾಕೇಟ್‌ಗಳ ಉಡ್ಡಯನ ತಂತ್ರಗಳ ಬಗ್ಗೆ ತರಬೇತಿ ಪಡೆಯುವ ನಿಮಿತ್ತ ಅಮೆರಿಕದ ವೈಜ್ಞಾನಿಕ ಸಂಶೋಧನಾ ಸಂಸ್ಥೆ ’ಘೆಅಖಅ’ಗೆ ತೆರಳಬೇಕಾಯ್ತು. ಅಲ್ಲಿಂದ ಮರಳಿದ ನಂತರ ಭಾರತದ ವಿದೇಶಿ ನಿರ್ಮಿತ ಮೊದಲ ರಾಕೆಟ್ ನವೆಂಬರ್ ೨೧, ೧೯೬೩ರಂದು
ಉಡ್ಡಯನಗೊಂಡಿತು. ಇಲ್ಲಿ ಭದ್ರತೆ ಮತ್ತು ಜೋಡಣೆಯ ಉಸ್ತುವಾರಿಯನ್ನು ಕಲಾಮರ ಹೆಗಲಿಗೆ ಹೊರಿಸಲಾಗಿತ್ತು. ಈ ರಾಕೆಟಿನ ಉಡಾವಣೆ ಸಂದರ್ಭದಲ್ಲಿ ಕ್ರೇನ್ ಕೆಟ್ಟ ಕಾರಣ ಸ್ವತಃ ವಿಜ್ಞಾನಿಗಳು ತಮ್ಮ ಸ್ನಾಯು ಬಲದಿಂದ ರಾಕೇಟ್ ಎತ್ತಿ ಲಾಂಚರ್‌ನಲ್ಲಿ ಇರಿಸಿದ್ದು ಸ್ಮರಣೀಯ.
ಅಂತರಿಕ್ಷ ವಿಜ್ಞಾನಿಯಾಗಿ ಕಲಾಂ ಅವರು ಭಾರತದ ಎರಡು ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. ಒಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಇನ್ನೊಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಭಾರತವು ತನ್ನದೇ ಆದ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಲ್‌ವಿ) ಕನಸು ಕಾಣದಿದ್ದ ಸಮಯದಲ್ಲಿ, ಡಾ.ಕಲಾಂ ಅವರ ಪ್ರಯತ್ನ ಮತ್ತು ಒಂದು ದಶಕದ ಪರಿಶ್ರಮದಿಂದಾಗಿ ನಮ್ಮ ಮೊದಲ ಸ್ವದೇಶಿ ಎಸ್
ಎಲ್‌ವಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಎಸ್‌ಎಲ್‌ವಿ ಐಐಐ ಜುಲೈ ೧೯೮೦ ರಲ್ಲಿ ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪದ ಕಕ್ಷೆಯಲ್ಲಿ ಕೂರಿಸಿ ಭಾರತವನ್ನು ವಿಶೇಷ ಸ್ಪೇಸ್ ಕ್ಲಬ್ ಸದಸ್ಯರನ್ನಾಗಿ ಮಾಡಿತು.
ಯಶಸ್ವಿ ಎಸ್ ಎಲ್‌ವಿ ಕಾರ್ಯಕ್ರಮದ ತಂತ್ರಜ್ಞಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದ ಎರಡು ಕ್ಷಿಪಣಿ ಯೋಜನೆಗಳಿಗೆ ಎಪಿಜೆ ಯೋಜನಾ ನಿರ್ದೇಶಕರಾದರು. ನಂತರ, ಡಾ.ಕಲಾಂ ಅವರನ್ನು ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ (ಐಜಿಎಂಡಿಪಿ) ಸಿಇಒ ಆಗಿ ನೇಮಿಸಲಾಯಿತು. ಅವರು ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಹಾಗೂ ಕಾರ್ಯಾಚರಣೆಯ ಹೊಣೆ ಹೊತ್ತಿದ್ದರು. ಇದು ಅವರಿಗೆ ‘ಭಾರತದ ಕ್ಷಿಪಣಿ ಮನುಷ್ಯ’ ಎಂಬ ಬಿರುದನ್ನೂ ತಂದುಕೊಟ್ಟಿತು.
ಡಾ.ಎಪಿಜೆ ಅಬ್ದುಲ್ ಕಲಾಂ ಅವರು ೧೯೯೨ ಮತ್ತು ೧೯೯೯ ರ ನಡುವೆ ಭಾರತದ ಪೋಖ್ರಾನ್ನಲ್ಲಿ ಅಣ್ವಸ್ತ್ರ ಸ್ಫೋಟಗಳನ್ನು ನಡೆಸಿದಾಗ ಭಾರತದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿದ್ದರು. ಅವರು ಈಈuನ ಸಿ.ಇ.ಓ ಆಗಿ ಪೋಖ್ರಾನ್-ಐಐ ಸ್ಫೋಟಗಳನ್ನು ಮೇಲ್ವಿಚಾರಣೆ ಮಾಡಿದರು. ನಂತರ ಅವರು ಕ್ಯಾಬಿನೆಟ್ ಮಂತ್ರಿ ಹುದ್ದೆಯೊಂದಿಗೆ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ (೧೯೯೯-೨೦೦೧) ಸೇವೆ ಸಲ್ಲಿಸಿದರು. ದೇಶದ ೧೯೯೮ ಪರಮಾಣು ಶಸಾಸ ಪರೀಕ್ಷೆಗಳಲ್ಲಿ ಅವರ ಪ್ರಮುಖ ಪಾತ್ರವು ಭಾರತವನ್ನು ಪರಮಾಣು ಶಕ್ತಿಯಾಗಿ ಗಟ್ಟಿಗೊಳಿಸಿತು ಮತ್ತು ಕಲಾಂ ಅವರನ್ನು ರಾಷ್ಟ್ರೀಯ ನಾಯಕನನ್ನಾಗಿ
ಸ್ಥಾಪಿಸಿತಾದರೂ ಪರೀಕ್ಷೆಗಳು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹೆಚ್ಚಿನ ಕಳವಳವನ್ನು ಉಂ ಟುಮಾಡಿದ್ದು ಸತ್ಯ.
೧೯೯೮ರಲ್ಲಿ ಕಲಾಂ ‘ವಿಷನ್ ೨೦೨೦’ ಎಂಬ ದೇಶವ್ಯಾಪಿ ಯೋಜನೆಯನ್ನು ಮುಂದಿ ಟ್ಟರು, ಇದು ೨೦ ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಮಾರ್ಗ ಸೂಚಿ ಎಂದು ವಿವರಿಸಿದರು. ಈ ಯೋಜನೆಯು ಇತರ ಕ್ರಮಗಳ ಜತೆಗೆ, ಕೃಷಿ ಉತ್ಪಾದ ಕತೆ ಯನ್ನು ಹೆಚ್ಚಿಸುವುದು, ತಂತ್ರಜ್ಞಾನವನ್ನು ಆರ್ಥಿಕ ಬೆಳವಣಿ ಗೆಯ ಸಾಧನವಾಗಿ ಒತ್ತಿಹೇಳುವುದು, ಆರೋಗ್ಯ, ರಕ್ಷಣೆ ಮತ್ತು ಶಿಕ್ಷಣದ
ಪ್ರವೇಶವನ್ನು ವಿಸ್ತರಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿದ್ದ ಈ ಯೋಜನೆ ಕಲಾಂ ಅವರ ದೂರ ದೃಷ್ಠಿತ್ವವನ್ನು ಎತ್ತಿ ತೋರಿಸುತ್ತದೆ.
ಅಣ್ಣಾ ವಿಶ್ವವಿದ್ಯಾನಿಲಯದ ಸುಂದರ ಪರಿಸರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಕಲಾಂರದ್ದು ಪ್ರತಿದಿನದಂತೆಯೇ ೧೦ ಜೂನ್ ೨೦೦೨ ರ ಬೆಳಿಗಿನ ಜಾವ ಇರಲಿಲ್ಲ!
ಏಕೆಂದರೆ ಅಂದು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಿದ್ದರು ವಾಜಪೇಯಿ! ಹೌದು, ಅಂದಿನ ಎನ್‌ಡಿಎ ನೇತೃತ್ವ ಸರ್ಕಾರದ ಪ್ರಧಾನಿಯಾಗಿದ್ದ
ಅಟಲ್ ಬಿಹಾರಿ ವಾಜಪೇಯಿ ಕರೆಮಾಡಿ ಈ ವಿಚಾರ ತಿಳಿಸಿದಾಗ ಕಲಾಂ ಜಿ ಬೆರಗಾದರು, ತುಂಬಾ ವಿಚಾರ ಮಾಡಿ ತಮಗಿದ್ದ ಸ್ನೇಹಿತ ವಲಯದ ಚರ್ಚಿಸಿ ನಂತರ ರಾಷ್ಟ್ರಪತಿ ಸ್ಥಾನಕ್ಕೆ ಸ್ಪಽಸಲು ನಾನು ಸರ್ವಪಕ್ಷಗಳ ಅಭ್ಯರ್ಥಿಯಾಗಲು ಇಚ್ಛಿಸುತ್ತೇನೆ ಎಂದು ಹೇಳಿ ಒಪ್ಪಿಕೊಂಡರು. ಇವರ ಗಣನೀಯ ಸಾಧನೆಗಾಗಿ ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ, ವೀರ ಸಾವರ್‌ಕರ್ ಪ್ರಶಸ್ತಿ ಮತ್ತು ರಾಮಾನು ಜನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ನಾಗರಿಕ ಜೀವನಕ್ಕೆ ಮರಳಿದ ನಂತರ, ಕಲಾಂ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಲು ಬದ್ಧರಾಗಿದ್ದರು ಮತ್ತು ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಜುಲೈ ೨೭, ೨೦೧೫ ರಂದು ಶಿಂಗ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಉಪನ್ಯಾಸ ನೀಡುತ್ತಿರುವಾಗಲೇ ಈ ಪುಣ್ಯಾತ್ಮ ಕುಸಿದುಬಿದ್ದು ಮತ್ತು ಶೀಘ್ರದ ಹೃದಯಾಘಾತದಿಂದ ಸಾವನ್ನಪ್ಪಿದರು. ಇದೊಂದು ಈ ರೀತಿಯ ಪುಣ್ಯದ ಸಾವು ಎನ್ನಬಹುದೇನೋ! ಎಷ್ಟು ಜನಕ್ಕೆ ಹೀಗೆ ಪ್ರೀತಿಸುವ ವೃತ್ತಿ ನಿರ್ವಹಿಸುತ್ತಿರುವಾಗಲೇ ಸಾವು ಬರುವುದು ಹೇಳಿ?
ಹೀಗೆ ಸಾಮಾನ್ಯ ಹಳ್ಳಿಯೊಂದರಲ್ಲಿ ಜನಿಸಿ, ಅತ್ಯಂತ ಸಾಮಾನ್ಯ ಬದುಕನ್ನು ಬದುಕಿ ಶ್ರೇಷ್ಠ ವಿಜ್ಞಾನಿಯಾಗಿ, ಮಾನವತಾವಾದಿಯಾಗಿ, ಶ್ರೇಷ್ಠ ಆಧ್ಯಾತ್ಮಿಕ ಜೀವಿಯಾಗಿ, ಸ್ವಭಾವತಃ ಸಂತನಾಗಿ, ಜನ ಮೆಚ್ಚಿದ ಗುರುವಾಗಿ, ಜಗತ್ತು ಮೆಚ್ಚಿದ ವಿeನಿಯಾಗಿ, ಕೊನೆಗೆ ದೇಶವೇ ಮೆಚ್ವಿದ ರಾಷ್ಟ್ರಪತಿಯಾಗಿ ನಡೆದವರು ಅಬ್ದುಲ್ ಕಲಾಂ. ಅವರ ಜನ್ಮದಿನ ವನ್ನು ರಾಷ್ಟ್ರೀಯ ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಗುವುದು ಅವರಿಗೆ ನೀಡಿದ ಬಹುದೊಡ್ಡ ಗೌರವ. ನಮಗೆ ಕಲಾಂ ಅವರ ಜೀವನ ಸದಾ ಪ್ರೇರಣೆಯಾಗಲಿ.