ಅವಲೋಕನ
ಅಶ್ವತ್ಥ್’ನಾರಾಯಣ
ಪ್ರನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ೯ ವರ್ಷಗಳು ತುಂಬಿವೆ. ಕಾಂಗ್ರೆಸಿನವರು ಮೋದಿಯವರು ಬಂದ ಮೇಲೆ ದೇಶದ ಸಾಲ ಬಹಳಷ್ಟು ಏರಿಕೆಯಾಗಿದೆ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಸಾಲದ ಮೊತ್ತವು ಸುಮಾರು ೮೨ ಲಕ್ಷ ಕೋಟಿಯನ್ನು ದಾಟಿದೆಯೆಂದು ಹೇಳುತ್ತಿದ್ದಾರೆ. ಆದರೆ ಬಹುತೇಕ ಸಾಲದ ಹಣ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಬಳಕೆಯಾಗಿದೆಯೆಂಬುದನ್ನು ಮಾತ್ರ ಹೇಳುತ್ತಿಲ್ಲ. ಈ ಹ್ನಿಲೆಯಲ್ಲಿ ಒಂದು ಅವಲೋಕನ ಇಲ್ಲಿದೆ.
ಒಂದು ದೇಶ ನಡೆಸುವುದಕ್ಕೂ, ಕುಟುಂಬ ನಡೆಸುವುದಕ್ಕೂ ಬಹಳಷ್ಟು ಸಾಮ್ಯವಿದೆ. ಕುಟುಂಬದಲ್ಲಿ ಹೇಗೆ ದುಡಿಯುವ ಕೈಗಳು ಕಡಿಮೆ ಇರುತ್ತವೆಯೋ, ದೇಶದಲ್ಲಿಯೂ ದುಡಿಯುವ ಕೈಗಳು ಕಡಿಮೆಯೇ. ಕುಟುಂಬದಲ್ಲಯಂತೇ ವಯಸ್ಸಾಗಿ ದುಡಿಯಲಾಗದ
ಹಿರಿಯರು ಭಾರತದಲ್ಲಿದ್ದಾರೆ, ಶಾಲೆಗೆ ಹೋಗುತ್ತಿರುವ ಕೋಟ್ಯಂತರ ಮಕ್ಕಳಿದ್ದಾರೆ, ಮಾನಸಿಕ ಅಸ್ವಸ್ಥರಿದ್ದಾರೆ, ವಿಕಲಚೇತನ ರಿದ್ದಾರೆ, ನಿರುದ್ಯೋಗಿಗಳಿದ್ದಾರೆ, ವ್ಯವಹಾರ ದಲ್ಲಿ ಕೈ ಸುಟ್ಟಿಕೊಂಡಿರುವವರಿದ್ದಾರೆ. ಇವರೆಲ್ಲರನ್ನೂ ಒಂದೇ ಕುಟುಂಬದ ಮಕ್ಕಳಂತೆ ಒಟ್ಟಿಗೆ ಸರಿದೂಗಿಸಿಕೊಂಡು ಹೋಗುವ ಆರ್ಥಿಕ ನೀತಿ ಭಾರತದಲ್ಲಿದೆ.
ಕುಟುಂಬದವರಂತೆಯೇ ಭಾರತವೂ ಸಾಲ ಮಾಡಿದೆ, ಮಾಡಿದ ಸಾಲದ ಹಣವು ಸಾಮಾಜಿಕ ಭದ್ರತೆಯಲ್ಲಿಯೂ ಬಳಕೆಯಾಗಿದೆ, ದೇಶದ ಆಸ್ತಿಯನ್ನು ಸೃಷ್ಟಿ ಮಾಡುವುದರಲ್ಲಿಯೂ ಬಳಕೆಯಾಗಿದೆ. ಸಾಲ ಮಾಡುವುದು ತಪ್ಪಲ್ಲ, ಆದರೆ ಸಾಲದ ಹಣ ಎಲ್ಲಿ ಬಳಕೆಯಾಗಿದೆ ಎಂಬುದು ಮುಖ್ಯ. ಒಂದು ಅಂದಾಜಿನ ಪ್ರಕಾರ ೧೯೯೭ರ ವರೆಗೂ ಭಾರತದಲ್ಲಿ ಕೇವಲ ೩೩೭ ಕಿಲೋ ಮೀಟರುಗಳ ನಾಲ್ಕು ಪಥದ ರಸ್ತೆಗಳಿದ್ದವು.
ಸ್ವಾತಂತ್ರ್ಯ ಬಂದು ೫೦ ವರ್ಷ ಕಳೆದಿದ್ದರೂ ಇಷ್ಟು ಕಡಿಮೆಯ ನಾಲ್ಕು ಪಥದ ರಸ್ತೆಗಳಿದ್ದವೆಂದರೆ ತೆರಿಗೆ ಹಾಗೂ ಸಾಲದ ಹಣ
ವನ್ನು ಕಾಂಗ್ರೆಸ್ ಸರಕಾರ ಯಾವ ಪುರುಷಾರ್ಥಕ್ಕೆ ಬಳಸುತ್ತಿತ್ತೆಂಬುದನ್ನು ಅರ್ಥ ಮಾಡಿಕೊಳ್ಳಿ. ‘ಅಟಲ್ ಬಿಹಾರಿ ವಾಜಪೇಯಿ’ ಯವರ ಅಧಿಕಾರಾವಧಿಯಲ್ಲಿ ಕೇವಲ ಐದು ವರ್ಷಗಳಲ್ಲಿ ‘ಸುವರ್ಣ ಚತುಷ್ಪಥ’ದ ಮೂಲಕ ದೇಶದ ನಾಲ್ಕು ಮಹಾನಗರ ಗಳನ್ನು ಸಂಪರ್ಕಿಸಲಾಯಿತು.
ಇಂದಿನ ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ರೂವಾರಿ ಸುವರ್ಣ ಚತುಷ್ಪಥ ಯೋಜನೆ. ಅವರದ್ದೇ ದಾರಿಯಲ್ಲಿ ಸಾಗುತ್ತಿರುವ ಮೋದಿಯವರು ಪ್ರತಿನಿತ್ಯ ಸುಮಾರು ೩೮ ಕಿಲೋಮೀಟರುಗಳ ಹೆದ್ದಾರಿ ಕಾಮಗಾರಿಗಳನ್ನು ನಿರ್ಮಿಸುವ ಮೂಲಕ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದ್ದಾರೆ. ಕರೋನ ಸಂದರ್ಭದಲ್ಲಿ ಜನರು ಭಯಬಿದ್ದು ಹೊರ ಬರಲಾಗದೆ ಖರ್ಚು ಮಾಡುವುದನ್ನು ಕಡಿಮೆ ಮಾಡಿದ್ದರು. ಇದರ ಪರಿಣಾಮ ಬ್ಯಾಂಕುಗಳಲ್ಲಿ ಉಳಿತಾಯದ ಹಣವು
ಹೆಚ್ಚಾಗಿತ್ತು. ಪರಿಣಾಮ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಬಹಳಷ್ಟು ಇಳಿಕೆ ಮಾಡಿದ್ದವು.
ಕಡಿಮೆ ಬಡ್ಡಿಯಲ್ಲಿ ಬ್ಯಾಂಕುಗಳು ಸಾಲ ನೀಡಲು ಮುಂದಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಕಾರವು ಬ್ಯಾಂಕುಗಳಿಂದ ಸಾಲ ಪಡೆದು ಕಡಿಮೆ ವೆಚ್ಚದಲ್ಲಿ ಅತ್ಯಂತ ವೇಗವಾಗಿ ಹೆzರಿಗಳನ್ನು ನಿರ್ಮಾಣ ಮಾಡುವ ಕಡೆಗೆ ಗಮನ ಹರಿಸಿತ್ತು. ತೆರಿಗೆಯ ಹಣ ಹಾಗೂ ಖಾಸಗೀ ಬಂಡವಾಳದ ಜತೆಗೆ ಕಡಿಮೆ ಬಡ್ಡಿಯ ಸಾಲಗಳ ಸಂಯೋಜನೆಯ ಪರಿಣಾಮ ಪ್ರತಿಯೊಂದು ರಾಜ್ಯ
ದಲ್ಲಿಯೂ ಇಂದು ಬೃಹತ್ ಮಟ್ಟದ ಹೆದ್ದಾರಿಗಳ ನಿರ್ಮಾಣವಾಗುತ್ತಿವೆ. ಹೆzರಿಗಳ ಜತೆಗೆ ನೂತನ ವಿಮಾನ ನಿಲ್ದಾಣಗಳು,
ರೈಲ್ವೆ ಸಂಪರ್ಕ ವ್ಯವಸ್ಥೆ, ಗಡಿಯಲ್ಲಿ ರಸ್ತೆಗಳು ನಿರ್ಮಾಣ ವಾಗುತ್ತಿವೆ. ಲಕ್ಷಾಂತರ ಕೋಟಿಯಷ್ಟು ಆಸ್ತಿಯನ್ನು ಮೋದಿ
ಯವರ ಆರ್ಥಿಕ ನೀತಿ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ.
ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿಯೇ ಸುಮಾರು ೯೭ಸಾವಿರ ಕೋಟಿಯ ಮೂಲಭೂತ ಸೌಕರ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಭಾರತದ ಶಕ್ತಿಯೆಂದರೆ ಇಲ್ಲಿನ ಮಾರುಕಟ್ಟೆ. ಭಾರತೀಯರಾದಂತಹ ನಾವು ನೂತನ ಆವಿಷ್ಕಾರಗಳಿಗೆ ಬಹುಬೇಗ ದಾಸರಾಗಿಬಿಡುತ್ತೇವೆ. ಕಳೆದ ಐದು ವರ್ಷಗಳಿಂದ ‘ಇಂಟರ್‌ನೆಟ್’ ಕ್ಷೇತ್ರದ ದಂತಹ ಕ್ರಾಂತಿಕಾರಿ ಬೆಳವಣಿಗೆಯನ್ನು ಪರಿಪೂರ್ಣ ಬಳಸಿ ಕೊಂಡಿರುವ ಭಾರತೀಯರು, ತಂತ್ರeನದ ಬಹುದೊಡ್ಡ ಮಾರುಕಟ್ಟೆಯನ್ನೇ ಭಾರತದಲ್ಲಿ ಸೃಷ್ಟಿಸಿzರೆ. ’ಡಿಜಿಟಲ್ ಇಂಡಿಯಾ’ ಅಡಿಯಲ್ಲಿ ತೆಗೆದುಕೊಂಡಂತಹ ಕ್ರಾಂತಿಕಾರಿ ಆರ್ಥಿಕ ನಿರ್ಧಾರಗಳು ‘ವಿದೇಶಿ ನೇರ ಬಂಡವಾಳ’ವನ್ನು ಭಾರತದೆಡೆಗೆ ಪ್ರತಿನಿತ್ಯ ಆಕರ್ಷಿಸುತ್ತಿದೆ.
ಕೇವಲ ಅಂಬಾನಿ, ಅದಾನಿ ಹಾಗೂ ಟಾಟಾ ಮಾತ್ರ ಭಾರತದ ಉದ್ಯಮಿಗಳಾಗಿ ಉಳಿದಿಲ್ಲ. ಇವರೊಮದಿಗೆ ೧೦೦ಕ್ಕೂ ಹೆಚ್ಚಿನ ’ಖಿಘೆಐಇuಘೆ’ ಕಂಪನಿಗಳು ಹುಟ್ಟಿಕೊಂಡಿವೆ. ಒಂದು ‘ಖಿಘೆಐಇuಘೆ’ ಸಂಸ್ಥೆ ಯ ಮೌಲ್ಯ ಒಂದು ಬಿಲಿಯನ್ ಅಮೆರಿಕನ್ ಡಾಲರ್, ಅಂದರೆ ಸುಮಾರು ೮ ಸಾವಿರ ಕೋಟಿ ರುಪಾಯಿಗಳು. ಭಾರತೀಯ ಕಂಪನಿಗಳು ಈ ಮಟ್ಟದ ಮೌಲ್ಯವನ್ನು ಸೆಳೆ
ಯಲು ಕಾರಣ, ಜಗತ್ತಿನ ಇತರ ದೇಶಗಳಿಗೆ ಭಾರತದ ಮೇಲಿರುವ ಆತ್ಮವಿಶ್ವಾಸ. ಬಂಡವಾಳ ಹೂಡಿಕೆಯಲ್ಲಿ ತಂದಿರುವ
ಅಮೂಲಾಗ್ರ ಆರ್ಥಿಕ ಬದಲಾವಣೆಯ ಫಲವಾಗಿ ಇಂದುಜಗತ್ತಿನ ದೊಡ್ಡ ದೊಡ್ಡ ಬಂಡವಾಳಶಾಹಿಗಳು ಭಾರತದೆಡೆಗೆ
ನೋಡುತ್ತಿದ್ದಾರೆ.
‘ಲೈಸನ್ಸ್ ರಾಜ್’ ನಿಂದ ಹೊರಬಂದು ವ್ಯವಹಾರ ಮಾಡಲು ಅನುಕೂಲಕರವಾದಂತಹ ಉತ್ತಮ ವಾತಾವರಣವನ್ನು ಕಂಪನಿಗಳಿಗೆ ನೀಡಲಾಗುತ್ತಿದೆ. ಓಲಾ, ಫ್ಲಿಪ್ ಕಾರ್ಟ್, ಅಮೆಜಾನ್, ಬೈಜುಸ್, ಬಿಗ್ ಬಾಸ್ಕೆಟ್, ಫೋನ್ ಪೇ, ಕ್ರೆಡ್, ವೇದಾಂತು, ಅಪ್ ಗ್ರಾಡ್ ಹೀಗೆ ನೂರಾರು ಕಂಪನಿಗಳು ಇಂದು ಒಂದು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ಪಡೆದಿವೆ. ಜುಲೈ
೨೦೨೧ರಿಂದ ಸೆಪ್ಟೆಂಬರ್ ೨೦೨೧ರ ಮೂರು ತಿಂಗಳ ಅವಧಿಯಲ್ಲಿ ‘ಖSಅSಖಿP’ ಗಳು ಸುಮಾರು ೧೧ ಬಿಲಿಯನ್ ಅಮೆರಿಕನ್ ಡಾಲರ್, ಅಂದರೆ ಸುಮಾರು ೮೨,೫೦೦ ಕೋಟಿಯಷ್ಟು ಹಣವನ್ನು ಬಂಡವಾಳದ ಮೂಲಕ ಪಡೆದಿವೆ.
‘ಅಇಇಉಘೆSಖ್ಕಿಉ’ ಕಂಪನಿಯು ಭಾರತದಲ್ಲಿ ಮತ್ತಷ್ಟು ಜನರಿಗೆ ಉದ್ಯೋಗ ನೀಡುವಲ್ಲಿ ನಿರತವಾಗಿದೆ. ಭಾರತದ ಯುವ ಶಕ್ತಿ, ಭಾರತದ ಮಾರುಕಟ್ಟೆ ಹಾಗೂ ಆರ್ಥಿಕ ನೀತಿಗಳ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುವ ಕಾರಣಕ್ಕಾಗಿ ಭಾರತಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ, ಇವೆಲ್ಲವೂ ಸಹ ದೀಘಕಾಲದ ಬಂಡವಾಳಗಳಾಗಿದ್ದು ಅಷ್ಟು ಸುಲಭವಾಗಿ ಹಿಂತೆಗೆದುಕೊಂಡು ಹೋಗಲಿಕ್ಕಾಗುವುದಿಲ್ಲ. ಶೇರು ಮಾರುಕಟ್ಟೆಯು ಅಷ್ಟೇ ಸರ್ವಕಾಲಿಕ ದಾಖಲೆಯನ್ನು ನಿರ್ಮಿಸಿ ಮುನ್ನುಗ್ಗುತ್ತಿದೆ.
ಮುಂಬೈ ಷೇರು ಸೂಚ್ಯಂಕ ೬೨,೦೦೦ ದಾಟಿದೆ. ‘ವಿದೇಶಿ ಸಾಂಸ್ಥಿಕ ಬಂಡವಾಳಶಾಹಿ’ಗಳು ಪ್ರತಿನಿತ್ಯ ನೂರಾರು ಕೋಟಿಯ ಹಣವನ್ನು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಭಾರತದ ಮಾರುಕಟ್ಟೆ ವಿಸ್ತಾರವಾಗುತ್ತಿದೆ, ಬೆರಳ ತುದಿಯಲ್ಲಿ ವ್ಯವಹರಿಸುವ ತಂತ್ರಜ್ಞಾನಗಳು ಹಳ್ಳಿಹಳ್ಳಿಗಳನ್ನು ತಲುಪಿದೆ, ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಕೆಲಸ ಬಿರುಸಿನಲ್ಲಿ ನಡೆಯುತ್ತಿದೆ.
ಇವೆಲ್ಲವನ್ನೂ ಕಂಡಂತಹ ವ್ಯವಹಾರಸ್ಥರಿಗೆ ಸಂಪೂರ್ಣ ವಾಗಿ ಬಳಕೆಯಾಗದ ‘ಹಳ್ಳಿಯ ಮಾರುಕಟ್ಟೆ’ ಕಾಣುತ್ತಿದೆ. ಅತ್ತ
ಬ್ಯಾಂಕುಗಳು ಹೆಚ್ಚಿನ ಸಾಲವನ್ನು ಮಾರುಕಟ್ಟೆಯಲ್ಲಿ ನೀಡುವುದರಿಂದ ಆರ್ಥಿಕತೆಯ ವೇಗಕ್ಕೆ ಮತ್ತಷ್ಟು ಚಾಲನೆ ಸಿಗುತ್ತಿದೆ. ಕಾಂಗ್ರೆಸ್ ಸರಕಾರದ ಕಾಲದಲ್ಲಿ ‘ಫೋನ್ ಬ್ಯಾಂಕಿಂಗ್’ ಮೂಲಕ ಸರಕಾರವು ಹೇಳಿದವರಿಗೆ ಸಾಲ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಾಲ ಪಡೆದು ದೇಶ ಬಿಟ್ಟು ಓಡಿ ಹೋದರು. ಆದರೆ ಈಗ ಹಾಗಾಗುತ್ತಿಲ್ಲ, ಸರಿಯಾದ ಭದ್ರತೆ ಹಾಗೂ ಆತ್ಮವಿಶ್ವಾಸವಿಲ್ಲದವರಿಗೆ ಅಷ್ಟು ಸುಲ ಭವಾಗಿ ಸಾಲ ನೀಡಲಾಗುತ್ತಿಲ್ಲ.
ಇದರ ಮದ್ಯೆ ‘ಘೆPಅ’ ಆಗಿದ್ದಂತಹ ಸುಮಾರು ೩ ಲಕ್ಷ ಕೋಟಿಯಷ್ಟು ಹಳೆಯ ಸಾಲವನ್ನು ವಸೂಲಿ ಮಾಡಲಾಗಿದೆ. ವಿಜಯ್ ಮಲ್ಯನ ಸುಮಾರು ೬೫೦೦ ಕೋಟಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಈ ಹಿಂದೆ ‘ದಿವಾಳಿ’ಯಾಗುತ್ತಿದ್ದಂತಹ ಕಂಪನಿಗಳ ಸಹಾಯಕ್ಕೆ ಯಾರೂ ಬರುತ್ತಿರಲಿಲ್ಲ, ವರ್ಷಗಟ್ಟಲೆ ನ್ಯಾಯಾ ಲಯದಲ್ಲಿ ಹೋರಾಡುತ್ತ ಕಂಪನಿಗಳು ಮುಳುಗಿ ಹೋಗುತ್ತಿದ್ದವು. ಆದರೆ ನೂತನವಾಗಿ ಜಾರಿಗೆ ತಂದಂತಹ ‘ದಿವಾಳಿ ತನದ ಕಾಯ್ದೆ’ಯಡಿಯಲ್ಲಿ ಪ್ರತಿಯೊಂದಕ್ಕೂ ಸಮಯದ ಅವಧಿಯನ್ನು ನಿಗದಿಗೊಳಿಸಲಾಗಿದ್ದು, ದಿವಾಳಿಯಾದಂತಹ ಕಂಪನಿಯನ್ನು ಪುನಶ್ಚೇತನಗೊಳಿಸುವ ಅವಕಾಶವನ್ನು ನೀಡಲಾಗಿದೆ.
ಈ ಕಾಯಿದೆಯಡಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದ್ದಂತಹ ನೂರಾರು ಕಂಪನಿಗಳು ಪುನಶ್ಚೇತನಗೊಂಡಿವೆ. ‘ಈಏಊಔ’
ಕಂಪನಿಯು ದಿವಾಳಿಯ ಅಂಚಿನಲ್ಲಿzಗ, ಈ ಕಾಯ್ದೆಯಡಿ ಯಲ್ಲಿ ೩೪,೨೫೦ ಕೋಟಿ ರು.ಗಳನ್ನು ನೀಡಿ ’PಐಅIಉಔ’
ಕಂಪನಿ ಯು ಖರೀದಿ ಮಾಡಿದೆ. ಈ ಕಾಯಿದೆ ಇರದಿದ್ದರೆ ಬಹುಶಃ ‘ಈಏಊಔ’ ಕಂಪನಿಗೆ ಒಂದೇ ಒಂದು ರುಪಾಯಿಯೂ
ಬರುತ್ತಿರಲಿಲ್ಲವೇನೋ. ಇದು ಕೇವಲ ಒಂದು ಉದಾಹರಣೆಯಷ್ಟೇ, ಹಲವು ಸ್ಟೀಲ್ ಕಂಪನಿಗಳು, ರಿಯಲ್ ಎಸ್ಟೇಟ್
ಕಂಪನಿಗಳು, ಗ್ರಾಹಕ ಕೇಂದ್ರಿತ ಕಂಪೆನಿಗಳು, ಆಹಾರೋ ದ್ಯಮಕ್ಕೆ ಸೇರಿದ ಕಂಪನಿಗಳು ತಮ್ಮ ಅಸ್ತಿತ್ವನ್ನುಉಳಿಸಿಕೊಳ್ಳಲು
ಸಾಧ್ಯವಾಗಿದೆ. ಭಾರತದ ಆರ್ಥಿಕ ನೀತಿಯಲ್ಲಿ ‘ದಿವಾಳಿತನದ ಕಾಯ್ದೆ’ ಬಹುದೊಡ್ಡ ಯಶಸ್ಸನ್ನು ಕಂಡಿದೆಯೆಂದರೆ ತಪ್ಪಿಲ್ಲ.
ನರೇಂದ್ರ ಮೋದಿಯವರ ಅಂತಾರಾಷ್ಟ್ರೀಯ ಪ್ರವಾಸಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಕಾಂಗ್ರೆಸಿಗರಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಕಂಡಿರುವ ಯಶಸ್ಸಿನ ಬಗ್ಗೆ ಮಾತನಾಡಲಾಗುವುದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಮೋದಿಯ ವರು ಯಶಸ್ವಿಯಾಗಿzರೆ. ವಿದೇಶಾಂಗ ಆರ್ಥಿಕ ನೀತಿಯ
-ಲವಾಗಿ ಇಂದು ಭಾರತಕ್ಕೆ ಬಂಡವಾಳಗಳ ಸುರಿಮಳೆಯಾ ಗುತ್ತಿದೆ. ನೋಡನೋಡುತ್ತಲೇ ಚೀನಾ ದೇಶಕ್ಕೆ ಆರ್ಥಿಕವಾಗಿ ಶಾಕ್ ನೀಡಿದ ಮೋದಿ, ಚೀನಾ ದೇಶದಲ್ಲಿದಂತಹ ಹಲವು ಕಂಪನಿಗಳು ಭಾರತಕ್ಕೆ ತಮ್ಮ ವ್ಯವಹಾರವನ್ನು ಸ್ಥಳಾಂತರಿಸುವಂತೆ ಮಾಡಿದ್ದರು.
ದಕ್ಷಿಣ ಕೊರಿಯಾದ ‘ಖಅIಖಖಿಘೆಎ’ ಮೊಬೈಲ್ ಸಂಸ್ಥೆಯು ತನ್ನ ಘಟಕವನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸುತ್ತಿದೆ. ‘ಓಐಅ’ ಆಂಧ್ರಪ್ರದೇಶದ ಪೆನುಕೊಂಡ ಬಳಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ, ‘ಅPPಔಉ’ ತನ್ನ ಉತ್ಪಾದನಾ ಘಟಕವನ್ನು ಕೋಲಾರದ ನರಸಾಪುರದಲ್ಲಿ ಸ್ಥಾಪಿಸಿದೆ. ಚೀನಾ ದೇಶದ ‘ಗಿಐuIಐ’ ಮೊಬೈಲ್ ಉತ್ಪಾದನಾ ಘಟಕವು ವಿಶಾಖಪಟ್ಟಣದಲ್ಲಿದೆ. ‘Sಉಖಔಅ’ ಕಂಪನಿಯು ಬೆಂಗಳೂರಿನಲ್ಲಿ ಕಂಪನಿಯನ್ನು ನೋಂದಣಿ ಮಾಡಿದೆ.
‘ಅIಅಘuಘೆ ಹಾಗೂ Sಉಖಔಅ ಕಂಪನಿಯ ಸಂಸ್ಥಾಪಕರು ಉಪಗ್ರಹಗಳ ಮೂಲಕ ದೇಶದ ಮೂಲೆ ಮೂಲೆಗಳನ್ನು ತಲುಪುವ ಅಂತರ್ಜಾಲ ಸೇವೆಯನ್ನು ನೀಡಲು ಸರಕಾರದ ಬಳಿ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿzರೆ. ಇವೆಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಸಾಧಿಸಿರುವ ಆರ್ಥಿಕತೆಯ ನೀತಿಯ ಯಶಸ್ಸನ್ನು ಎತ್ತಿ ತೋರಿಸಿವೆ. ತನ್ನ ಗಡಿಯನ್ನು ಸುತ್ತುವರಿದಿರುವ ಸಣ್ಣ ಪುಟ್ಟ ದೇಶಗಳಿಗೆ ಸಹಾಯ ಮಾಡುವ ಮೂಲಕ ಭಾರತವು ಪಕ್ಕದ ಚೀನಾ ಹಾಗೂ ಪಾಕಿಸ್ತಾನಗಳ ನರಿ ಬುದ್ಧಿಯ ಆಸೆಗೆ ತಣ್ಣೀರೆರೆಚಿದೆ.
ಪಕ್ಕದ ಭೂತಾತ್‌ಗೆ ದೇಶಕ್ಕೆ ೫ ಸಾವಿರ ಕೋಟಿ ರುಪಾಯಿ ಆರ್ಥಿಕ ಸಹಾಯ ಮಾಡುವ ಮೂಲಕ ‘ದೋಖ್ಲಾಂ’ ವಿಷಯದಲ್ಲಿ
ಚೀನಾ ದೇಶವನ್ನು ಕಟ್ಟಿಹಾಕಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದ್ದರೂ ಪ್ರತಿ ತಿಂಗಳ ಹಣದುಬ್ಬರವನ್ನು ನಿಯಂತ್ರಿಸುವುದಲ್ಲಿ ಮೋದಿ ಯವರ ಆರ್ಥಿಕ ನೀತಿ ಯಶಸ್ವಿಯಾಗಿದೆ. ಕಳೆದ ೫ ವರ್ಷ ಗಳಿಂದ ರಿಯಲ್ ಎಸ್ಟೇಟ್ ಬೆಲೆಯಲ್ಲಿ ಆ ಮಟ್ಟದ ಏರಿಕೆಯಾಗಿಲ್ಲ.
ತಿಂಗಳ ಬಾಡಿಗೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ, ದಿನನಿತ್ಯ ಬಳಸುವ ಹಲವು ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ,
ಇಂಟರ್ನೆಟ್ ದರದಲ್ಲಿ ಭಾರಿ ಇಳಿಕೆಯಾಗಿದೆ, ಬಟ್ಟೆಗಳ ಬೆಲೆ ಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ, ಬಡವರಿಗೆ ಕಡಿಮೆ ದರದಲ್ಲಿ ಔಷಧ ಸಿಗುತ್ತಿದೆ, ಆದಾಯ ತೆರಿಗೆಯ ಮಿತಿ ಕಾಂಗ್ರೆಸ್ ಸರಕಾರದ ಅವಽಯಲ್ಲಿ ೨,೫೦,೦೦೦ ರು.ಇತ್ತು, ಈಗ ಅದರ ಮಿತಿಯನ್ನು ೭ಲಕ್ಷ ರು.ಗೆ ಏರಿಸುವ ಮೂಲಕ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ.
ಒಂದು ಕುಟುಂಬದ, ಒಂದು ತಿಂಗಳ ಒಟ್ಟಾರೆ ಬೆಲೆ ಏರಿಕೆಯನ್ನು ತುಲನೆ ಮಾಡಿ ನೋಡಬೇಕೆ ಹೊರತು ಕೇವಲ ಬೆಲೆ ಏರಿಕೆಯಾದಂತಹ ವಸ್ತುಗಳನ್ನು ತುಲನೆ ಮಾಡಿ ನೋಡುವುದು ಅರ್ಥಶಾಸವಲ್ಲ. ಸಾಮಾನ್ಯ ಜನಜೀವನವನ್ನು ಆರ್ಥಿಕವಾಗಿ ಉತ್ತಮಗೊಳಿಸುವ ‘ಆರ್ಥಿಕ ನೀತಿ’ಗಳು ಭಾರತದಲ್ಲಿ ಚಾಲ್ತಿಯಲ್ಲಿರುವ ಕಾರಣಕ್ಕಾಗಿ, ಪ್ರಪಂಚದ ಅನೇಕರು ಭಾರತದೆಡೆಗೆ ತಮ್ಮ ವ್ಯವಹಾರವನ್ನು ಸ್ಥಳಾಂತರಿಸುತ್ತಿದ್ದಾರೆ. ಒಂದನ್ನಂತೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು, ‘ಬಂಡವಾಳವಾದ’ವಿಲ್ಲದೆ ‘ಸಮಾಜವಾದವಿಲ್ಲ’, ಬಂಡವಾಳ ಶಾಹಿಗಳು ಸಂಪತ್ತನ್ನು ಸೃಷ್ಟಿಸಿದರೆ ಮಾತ್ರ ಸಮಾಜದಲ್ಲಿನ ಪ್ರತಿಯೊಂದು ವರ್ಗಕ್ಕೂ ಹಂಚಲು ಸಾಧ್ಯ. ಸಂಪತ್ತನ್ನೇ ಸೃಷ್ಟಿಸದೇ, ಇರುವ ಸಂಪತ್ತನ್ನು ಹಂಚಲು ಹೋದ ಕಮ್ಯುನಿಸ್ಟ್ ನೀತಿ ನಂಬಿದ ದೇಶಗಳು ಇಂದು ಮುಳುಗಿಹೋಗಿವೆ.
(ಲೇಖಕರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ
ವಿಧಾನಪರಿಷತ್ ಸದಸ್ಯರು)