ಪ್ರಸ್ತುತ
ವಿನಯ್ ಖಾನ್
ವಿದೇಶಗಳು ಭಾರತಕ್ಕೆ ನೀಡುತ್ತಿರುವ ಮರ್ಯಾದೆ, ಪುರಸ್ಕಾರಗಳನ್ನು ನೋಡುತ್ತಿದ್ದೇವೆ. ರಾಜತಾಂತ್ರಿಕತೆ, ವಿಜ್ಞಾನ-ತಂತ್ರಜ್ಞಾನಗಳಲ್ಲಿ ಜಾಗತಿಕ ವಾಗಿ ಗುರುತಿಸಿಕೊಳ್ಳುತ್ತಿರುವುದು. ಇನ್ನೂ ಅನೇಕ ವಿಚಾರಗಳಲ್ಲಿ ಏಳಿಗೆಯನ್ನು ಕಾಣುತ್ತಿರುವ ಭಾರತೀಯರಿಗೆ, ಆಂತರಿಕ ಭದ್ರತೆಯ ಸಮಸ್ಯೆ ಬರುತ್ತಿದೆ ಎಂದರೆ, ಭಾರತೀಯರು ಸುರಕ್ಷಿತವಾಗಿದ್ದಾರಾ ಎನ್ನುವ ಪ್ರಶ್ನೆ ಗಳೂ ಕೇಳುತ್ತಿವೆ.
ನಾವು ಯಾವುದೇ ದೇಶಕ್ಕೆ ಹೋಗಲು ವೀಸಾ, ಪಾಸ್‌ಪೋರ್ಟ್ ಬೇಕು. ಆ ದೇಶದಿಂದ ಒಪ್ಪಿಗೆ ಬೇಕು. ಅವರೇನಾದರೂ ಸಮ್ಮತಿಸದಿದ್ದರೆ, ನಮ್ಮ ವಿದೇಶ ಪ್ರವಾಸ ಕ್ಯಾನ್ಸಲ್! ಪ್ರಧಾನಿ ಮೋದಿ, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ವೀಸಾ ಸಿಗದೆ ಅಮೆರಿಕ ಪ್ರವಾಸ ಮಾಡದೆ ಇದ್ದಿದ್ದು ನಿಮಗೂ ಗೊತ್ತು. ವೀಸಾ ಕಳೆದುಕೊಂಡು ಬೇರೆ ದೇಶದಲ್ಲಿ ಜೈಲುವಾಸ ಅನುಭವಿಸಿ ದವರೂ ಇದ್ದಾರೆ.
ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಭದ್ರತಾ ಕಟ್ಟುಪಾಡುಗಳಿವೆ, ನೀತಿಗಳಿವೆ. ಅಕ್ರಮ ನುಸುಳುಕೋರರಿಗೆ ಕಠಿಣ ಶಿಕ್ಷೆ-ದಂಡವೂ ಇದೆ. ಆದರೆ, ಭಾರತಕ್ಕೆ ಬರಲು ವೀಸಾ, ಪಾಸ್‌ಪೋರ್ಟ್ ಬೇಡವೇ? ಅದೆಷ್ಟು ಜನ ಪಾಸ್‌ಪೋರ್ಟ್‌ಗಳಿಲ್ಲದೆ ಭಾರತದಲ್ಲಿದ್ದಾರೆ? ಅದಿಲ್ಲದೆಯೇ ಭಾರತಕ್ಕೆ ನುಸುಳಬಹುದಾದರೆ, ವೀಸಾದ ವ್ಯವಸ್ಥೆ ಏಕೆ ಬೇಕು? ಉಗ್ರರ ಚಟುವಟಿಕೆಗಳಿಗೆ ಕೊನೆ ಯಾವಾಗ? ನಡೆಯುತ್ತಿರುವ ಕೊಲೆಗಳು ನಿಲ್ಲುವುದ್ಯಾವಾಗ? ತನ್ನ ಜನರನ್ನೇ ರಕ್ಷಿಸಲಾಧ್ಯವಾಗಿದೆಯೇ ಭಾರತಕ್ಕೆ?
ಪ್ರತಿ ಸುರಕ್ಷಿತವಾಗಿರುವ ದೇಶದಂತೆಯೇ ಭಾರತಕ್ಕೂ ಅದರದ್ದೇ ಆದ ರಕ್ಷಣಾ ಮಾನದಂಡಗಳಿವೆ.
ಪೊಲೀಸ್ ವ್ಯವಸ್ಥೆಯಿದೆ, ಸೇನಾ ವ್ಯವಸ್ಥೆಯೂ ತುಂಬಾ ಬಲಶಾಲಿಯಾಗಿದ್ದಿದೆ. ಇಂಟೆಲಿಜೆನ್ಸ್ ಬ್ಯೂರೋಗಳು, ಸಿಬಿಐ,
ಸಿಐಡಿ ಅನ್ನುವ ವ್ಯವಸ್ಥೆಯಿದೆ. ಆದರೂ, ಹಲವು ಕಡೆ ಭಾರತ ತನ್ನ ಸುರಕ್ಷತೆಯಲ್ಲಿ ಹಿಂದೆ ಬಿದ್ದಿದೆ. ಮೊನ್ನೆ, ಬೆಂಗಳೂರಿನಲ್ಲಿ ಶಂಕಿತ ಉಗ್ರರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹಾಗೆಯೇ ಅದೇ ದಿನ, ಹಲವಾರು ನೈಜೇರಿಯಾದ ಅಕ್ರಮ ವಲಸಿಗರು ಸಿಕ್ಕಿ ಬೀಳುತ್ತಾರೆ.
ಇದೆಲ್ಲ ಹೊಸದಲ್ಲ ಬಿಡಿ. ತುಂಬಾ ದಿನ-ವರ್ಷಗಳಿಂದ ಇದೆಲ್ಲವನ್ನೂ ನೋಡುತ್ತಲೇ ಬಂದಿದ್ದೀವಿ. ಮೋದಿ ಸರಕಾರಕ್ಕೂ ಮೊದಲು, ಈಗಲೂ ನೋಡುತ್ತಲೇ ಇದ್ದೀವಿ. ಆದರೆ, 76.6 ಬಿಲಿಯನ್ ಡಾಲರ್‌ಗಳನ್ನು ಭದ್ರತೆಗೆ ವ್ಯಯ ಮಾಡುತ್ತಿರುವ ಭಾರತದಲ್ಲಿ ಹೇಗೆ ನುಸುಳುಕೋರರು ಆರಾಮವಾಗಿ ಬಂದು, ಜೀವನ ಸಾಗಿಸುತ್ತಾರೆ? ಇದಷ್ಟೇ ಅಲ್ಲ, ಸಿಕ್ಕಿಬಿದ್ದ ಉಗ್ರರು ಕರ್ನಾಟಕದ ಶೃಂಗೇರಿ, ರಾಮಚಂದ್ರಾಪುರ ಮಠ ಮತ್ತು ದೇಶದ ಹಲವು ಧಾರ್ಮಿಕ ಸ್ಥಳಗಳ ಸೋಟಕ್ಕೆ ಸಂಚನ್ನು ಹೂಡಿದ್ದು
ನಿನ್ನೆ ತಾನೆ ಗೊತ್ತಾಗಿದೆ.
ಅದೇ ಉಗ್ರರು ಆಲ್‌ಖೈದಾಗೆ ಸೇರುವ ಪ್ರಯತ್ತನದಲ್ಲಿಯೂ ಇದ್ದರು. ಎಲ್ಲದಕ್ಕಿಂತ ಟೆಲಿಗ್ರಾಂ ಆಪ್‌ನ ಮೂಲಕ ಮುಸ್ಲಿಂ ಯುವಕರನ್ನು ತಮ್ಮ ಸಂಘಟನೆಗೆ ಸೇರಿಸುವ ಯತ್ನವನ್ನು ರಾಜಾರೋಷವಾಗಿ ಮಾಡುತ್ತಾರೆಂದರೆ. ಪೊಲೀಸ್ ಇಂಟಲ್ಲಿಜೆನ್ಸಿ ಅವರು ಏನು ಮಾಡುತ್ತಿದ್ದರು? ಇದು ಬರೀ ಮೊನ್ನೆಯ ವಿಷಯ ಆಯ್ತು. ಅದಕ್ಕೂ ಮುಂಚೆ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ, ರೋಹಿಂಗ್ಯಗಳು ಹೀಗೆ… ಪಟ್ಟಿ ಮಾಡುತ್ತ ಹೋದರೆ, ಭಾರತದಲ್ಲಿ ಇವರುಗಳ ಆರ್ಭಟವೇ ಹೆಚ್ಚಾಗಿದೆ. ಅದೂ ಕೂಡ ವೋಟಿಂಗ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್‌ನಂತಹ ದಾಖಲೆಗಳ ಸಮೇತ. ಅಲ್ಲಾ ಸ್ವಾಮೀ!
ಎಲ್ಲ ಸರಿಯಾಗಿ ಇದ್ದು, ಭಾರತದಲ್ಲೇ ಹುಟ್ಟಿ, ಇಲ್ಲೇ ನೆಲೆಯೂರಿ, ಜೀವನ ಸಾಗಿಸುತ್ತಿರುವ ನಮಗೇ ಏನಾದರೂ ಆಧಾರ್ ಕಾರ್ಡ್ ತಿದ್ದುಪಡಿ, ರೇಷನ್ ಕಾರ್ಡ್‌ನಲ್ಲಿ ಬದಲಾವಣೆಯಂತಹ ಸಣ್ಣಪುಟ್ಟ ಕೆಲಸಗಳಿಗೂ ಗಂಟೆಗಟ್ಟಲೆ ಕಾಯಿಸಿ, ಸತಾಯಿಸಿ, ತಿಂಗಳುಗಟ್ಟಲೇ ಓಡಾಡಿಸಿದ ಮೇಲೆ ಕೆಲಸ ಮಾಡಿಕೊಡುವ ಅಧಿಕಾರಿಗಳು ಇವರಿಗೆ ಸರಿಯಾದ ದಾಖಲೆಗಳೇನೂ ಇಲ್ಲದೆ, ಅಷ್ಟಕ್ಕೂ ಅವರು ಭಾರತೀಯರೇ ಅಲ್ಲದೇ, ಅದು ಹೇಗೆ ಇವೆಲ್ಲ ದೊರಕಿಸಿದರು.
ಇದಕ್ಕೂ ಕೆಲ ತಿಂಗಳುಗಳ ಹಿಂದೆ, ಬೆಂಗಳೂರಿನಲ್ಲಿ ನೈಜೇರಿಯಾ ಪ್ರಜೆಗಳು ಮಾಡಿದ್ದ ರಾದ್ಧಾಂತವನ್ನು ನೋಡಿದ್ದೀರಿ. ಯಾರೋ ಡ್ರಗ್ ಪೆಡ್ಲರ್ ಅನ್ನು ಪೊಲೀಸರು ಬಂಧಿಸಿದಾಗ ಅವರ ವಿರುದ್ಧವೇ ಪ್ರತಿಭಟನೆಯನ್ನೂ ಮಾಡಿದರು. ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿದರು. ಆದರೆ, ಇದೇ ನೈಜೇರಿಯಾದ ಅಕ್ರಮ ವಲಸಿಗರಿಂದ 52 ಕೋಟಿ ರುಪಾಯಿಗಳ ಬೆಲೆ ಬಾಳುವ ಹೇರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದರು.
ಇವರುಗಳೆಲ್ಲ ಅದ್ಯಾವ ರೀತಿಯಿಂದ ಭಾರತಕ್ಕೆ ನುಸುಳಿದರೋ, ಅದ್ಯಾವ ರೀತಿಯಲ್ಲಿ ಡ್ರಗ್‌ಗಳನ್ನು ತಂದರೋ. ಆದರೆ, ನಮ್ಮ ದುರ್ವಿಧಿ ನೋಡಿ, ಅವರೆಲ್ಲ ಮೊದಲೇ ಅಕ್ರಮ ನಿವಾಸಿಗಳು, ಅವರ ಜತೆ ಕೇಜಿಗಟ್ಟಲೇ ಹೇರಾಯಿನ್ ಬೇರೆ !
ಇದು ಬರೀ ಬೆಂಗಳೂರಿನ ಸಮಸ್ಯೆ ಅಲ್ಲ. ಇಡೀ ದೇಶದ ಸಮಸ್ಯೆ ಕೂಡ. ಎಲ್ಲೋ ನಾಲ್ಕು ಜನ ಬೇರೆ ದೇಶದವರು ಬಂದು ಭಾರತದಲ್ಲಿ ನೆಲೆಯೂರಿದ್ದಾರೆ ಅಂತ ನೀವೆನಾದರೂ ಅಂದುಕೊಂಡರೆ, ಅದು ನಿಮ್ಮ ದೊಡ್ಡ ತಪ್ಪು ಕಲ್ಪನೆ.
ಏಕೆಂದರೆ ಕೇಂದ್ರ ಸರಕಾರದ ಮಾಹಿತಿ ಪ್ರಕಾರ ಭಾರತದಲ್ಲಿ ಹೆಚ್ಚೂ ಕಡಿಮೆ 20 ಮಿಲಿಯನ್ (2 ಕೋಟಿ) ಅಕ್ರಮ ವಲಸಿಗ ರಿದ್ದಾರೆ. ಅವರಿಂದ ನಮಗೇನು ತೊಂದರೆ, ನಾವು ಆರಾಮವಾಗೇ ಇದ್ದೆವಲ್ಲ ಎಂದುಕೊಳ್ಳಲೇ ಬೇಡಿ. ಏಕೆಂದರೆ, ಈ ಅಕ್ರಮ ವಲಸಿಗರಿಂದ ನಮ್ಮ ಆಹಾರ, ಕೆಲಸ, ವೈದ್ಯಕೀಯ ವ್ಯವಸ್ಥೆಗಳೆಲ್ಲವನ್ನು ಕಸಿದುಕೊಂಡು, ಹಲವಾರು ಅಪರಾಧಗಳನ್ನೂ ಮಾಡಿ, ದೇಶದ ಆಂತರಿಕ, ಬಾಹ್ಯ ಭದ್ರತೆಗೆ ಮತ್ತು ಆರ್ಥಿಕ ವ್ಯವಸ್ಥೆಗಳಿಗೂ ಧಕ್ಕೆ ಮಾಡುತ್ತಿರುವುದು ಇವರೇ!
ಕೆಲವು ತಿಂಗಳಗಳ ಹಿಂದೆ ‘ದಿ ಕಾಶ್ಮೀರ ಫೈಲ್ಸ್’ ಅನ್ನುವ ಚಿತ್ರ ಬಿಡುಗಡೆ ಆಯ್ತು. ಅದಕ್ಕೆ ಪರ, ವಿರೋಧಗಳೂ ಬಂದವು, ಇರಲಿ. ಆದರೆ, ಕಾಶ್ಮೀರದಲ್ಲಿ ಅಲ್ಲಿರುವಂತಹ ಹಿಂದೂಗಳನ್ನು ಓಡಿಸಲು ಶುರುಮಾಡಿದ್ದೇ ಅಕ್ರಮ ವಲಸಿಗರು ಮತ್ತು ಉಗ್ರರು. ಹಾಗೆಯೇ, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಇನ್ನೀತರ ರಾಜ್ಯಗಳಲ್ಲೂ ಅಕ್ರಮ ವಲಸಿಗರದ್ದೇ ಪಾರುಪಥ್ಯ. ಮತ್ತವರ ವೋಟ್ ಬ್ಯಾಂಕ್! ಪಶ್ಚಿಮ ಬಂಗಾಳದಲ್ಲಿ ಗಲಭೆಗಳು, ಕೊಲೆ, ದೊರೋಡೆಗಳೆಲ್ಲ ಆಗುತ್ತಿರುವುದು ಅಕ್ರಮ ವಲಸಿಗರಿಂದಲೇ. ಇಂತಹ ಅಕ್ರಮ ವಲಸಿಗರು ಮಾಡುವ ಕುಕೃತ್ಯಗಳ ಬಗ್ಗೆ ಹಲವಾರು ಪುಸ್ತಕಗಳು, ಸಿನಿಮಾಗಳೂ
ಬಂದವು. ಆದರೂ ಅವರ ಆರ್ಭಟ ನಿಲ್ಲುತ್ತಿಲ್ಲ.
ಭಾರತದಲ್ಲಿ ಹಲವಾರು ಉಗ್ರ ಚಟುವಟಿಕೆಗಳು ನಡೆಯುತ್ತಿವೆ. ಅದರ ಬಗ್ಗೆ ವರದಿಗಳೂ ಆಗಿವೆ. ಅವರನ್ನು ಬಂಧಿಸಿಯೂ ಆಗಿದೆ. ಹೀಗೆಲ್ಲ ಇದ್ದೂ ಹೊಸ ಕ್ರಿಮಿಗಳು ಹುಟ್ಟುತ್ತಿರುವುದು ಎಲ್ಲಿಂದ? ಭಾರತೀಯರೇ ಉಗ್ರರಾಗುತ್ತದ್ದಾರೆಂದರೆ, ಉಗ್ರ ಸಂಘಟನೆಗಳ ಜತೆ ಇವರ ಸಂಪರ್ಕ ಹೇಗೆ ಸಾಧ್ಯವಾಯಿತು? ಈ ಉಗ್ರ ಹಿಂದೆ ಯಾರೆಲ್ಲ ಇದ್ದಾರೆ ಅನ್ನುವುದು ಗೊತ್ತಾಗಲೇ
ಬೇಕಿದೆ. ಮತ್ತೇ ಇತ್ತೀಚಿನ ದಿನಗಳಲ್ಲಿ ಎಲ್ಲೂ ದೊಡ್ಡ ಬಾಂಬ್ ಸೋಟಗಳಾಗದೇ ಇರಬಹುದು.
ಆದರೆ, ಆಗೋದೆ ಇಲ್ಲ ಅನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಉಗ್ರರು ಇದ್ದಾರೆಂದರೆ ಅವರ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇನ್ನು, ಬೆಂಗಳೂರು, ದೆಹಲಿ, ಮುಂಬೈ ಮಹಾನಗರಗಳಲ್ಲಿ ಅದೆಷ್ಟು ಬಾರಿ ಬಾಂಬ್ ಬ್ಲಾಸ್ಟ್‌ಗಳು
ಆಗಿಲ್ಲ. ಅದೆಷ್ಟು ಬಾರಿ ಉಗ್ರರು ಪೊಲೀಸರಿಗೆ ಸಿಕ್ಕಿಲ್ಲ? ಉಗ್ರರ ನಂಟಿರುವವರು ನಮ್ಮ ದೇಶದಲ್ಲಿ ಎಷ್ಟೆಲ್ಲ ಇದ್ದಾರೆ, ಹಾಯಾಗಿ ತಿರುತ್ತಲೇ ಇದ್ದಾರೆಂದರೆ ನಮ್ಮ ದೇಶದ ಭದ್ರತೆಯನ್ನು ಎಷ್ಟರ ಮಟ್ಟಿಗೆ ಉಗ್ರರು, ಅಕ್ರಮ ನುಸುಳುಕೋರರು ಹಗುರವಾಗಿ ತೆಗೆದುಕೊಂಡಿರಬಹುದು? ಇತ್ತೀಚೆಗೆ ನಡೆಯುತ್ತಿರುವುದನ್ನೂ ನೋಡಿ ನೂಪುರ್ ಶರ್ಮಾ ಕೇಸ್ ಆದಮೇಲೆ ನಡೆದ ಕೊಲೆಗಳು, ಸೈದ್ಧಾಂತಿಕ ಹಿನ್ನೆಲೆಯಲ್ಲೂ ನಡೆಯುತ್ತಿರುವ ಕೊಲೆಗಳು.
ಕರ್ನಾಟಕದಲ್ಲಿ ಹರ್ಷ, ಪ್ರವೀಣ್ ಮತ್ತಿತರ ಹತ್ಯೆಯಿರಬಹುದು. ಹೋರಾಟದ ಹೆಸರಲ್ಲಿ ನಡೆಯುತ್ತಿರುವ ರಾದ್ಧಾಂತ ಗಳು, ಕೆಲವು ರಾಜ್ಯಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿರುವ ನಡೆಯುತ್ತಿರುವ ದಾಂದಲೆಗಳನ್ನೆಲ್ಲ ನೋಡಿದರೆ ನಮ್ಮ ದೇಶದ ಭದ್ರತೆ ಎಷ್ಟು ಸುರಕ್ಷಿತವಾಗಿದೆ? ಇಂಥವೆಲ್ಲ ಪ್ರಶ್ನೆಗಳು ಜನಸಾಮಾನ್ಯರಿಗೆ ಹುಟ್ಟವುದು ಸಹಜ. ಹಾಗೆಯೇ, ಮಹಿಳೆಯರು, ಶಾಂತಿ ಮತ್ತು ಭದ್ರತಾ ಸೂಚಂಕ್ಯದಲ್ಲಿ ೧೪೮ ನೇ ಸ್ಥಾನದಲ್ಲಿ ಭಾರತವಿದೆ!
ಭಾರತೀಯರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನೋಡಿದೆವು. ವಿದೇಶಗಳು ಭಾರತಕ್ಕೆ ನೀಡುತ್ತಿರುವ ಮರ್ಯಾದೆ, ಪುರಸ್ಕಾರ ಗಳನ್ನು ನೋಡುತ್ತಿದ್ದೇವೆ. ರಾಜತಾಂತ್ರಿಕತೆ, ವಿಜ್ಞಾನ-ತಂತ್ರಜ್ಞಾನಗಳಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿರುವುದು. ಇನ್ನೂ ಅನೇಕ ವಿಚಾರಗಳಲ್ಲಿ ಭಾರತದ ಏಳಿಗೆಯನ್ನು ಕಾಣುತ್ತಿರುವ ಭಾರತೀಯರಿಗೆ, ಆಂತರಿಕ ಭದ್ರತೆಯ ಸಮಸ್ಯೆ ಬರುತ್ತಿದೆ ಎಂದರೆ, ಭಾರ ತೀಯರು ಸುರಕ್ಷಿತವಾಗಿದ್ದಾರಾ ಎನ್ನುವ ಪ್ರಶ್ನೆಗಳೂ ಕೇಳುತ್ತಿವೆ.
ದೇಶದ ಎಲ್ಲ ಮಹಾನಗರಗಳಲ್ಲಿ ಲಕ್ಷಾಂತರ ಜನ ಅಕ್ರಮ ವಲಸಿಗರಿದ್ದಾರೆ, ಉಗ್ರರಿದ್ದಾರೆ. ದಾಂದಲೆಗಳನ್ನೂ ಮಾಡುತ್ತಿದ್ದಾರೆ. ವಿಷಯ ದೊಡ್ಡದಾಗಿ ಸುದ್ದಿ ಆಗಿದ್ದಷ್ಟೇ ನಮಗೆ ಗೊತ್ತಾಗುತ್ತಿರುವುದು. ಸುದ್ದಿ ಆಗದೇ ಇರುವುದು ಇನ್ನೆಷ್ಟಿವೆ? ಯಾವುದೋ ಮೂಲೆಯಲ್ಲಿ ಕುಳಿತು ಸಾಮಾನ್ಯ ಭಾರತೀಯನ ರೀತಿಯಲ್ಲೇ ಇದ್ದು ಬಾಂಬ್ ಬ್ಲಾಸ್ಟ್ ಮಾಡಲು ಸ್ಕೆಚ್ ಹಾಕು ತ್ತಿರುವವರು ದೇಶಾದ್ಯಂತ ಎಷ್ಟು ಜನರಿದ್ದಾರೆ? ಸುರಕ್ಷತಾ ಸೂಚ್ಯಂಕ ದಲ್ಲಿ 148 ಸ್ಥಾನದಲ್ಲಿರುವ ಭಾರತ ಮೊದಲನೇ ಮೇಲಕ್ಕೇರುವುದು ಯಾವಾಗ? ಗಾಂಧಿ ಕಾಣುತ್ತಿದ್ದ ರಾಮರಾಜ್ಯದ ಕನಸು ಈಡೇರುವುದು ಯಾವಾಗ? ಭಾರತ ಅತೀ ಸುರಕ್ಷಿತ ರಾಷ್ಟ್ರ ಆಗುವುದು ಯಾವಾಗ?