ಅಭಿಮತ
ಡಾ.ಜಯಂತಿಮನೋಹರ್
jaymanu@rediffmail.com
ಆಗ್ನೇಯ ಏಷ್ಯಾದಲ್ಲಿ ಭಾರತ ಹಾಗೂ ಪೆಸಿಫಿಕ್ ಸಾಗರಗಳಿರುವ ಇಂಡೋನೇಷ್ಯಾದಲ್ಲಿ 18 ಸಾವಿರಕ್ಕೂ ಮೇಲ್ಪಟ್ಟು ದ್ವೀಪಗಳಿವೆ. ಇಂಡೋನೇಷ್ಯಾ ಪದದ ಭಾಗವಾದ ‘ನೇಷ್ಯಾ’ ಎನ್ನುವುದಕ್ಕೆ ದ್ವೀಪಗಳ ಸಮೂಹ ಎನ್ನುವ ಅರ್ಥ ಕಾಣುತ್ತದೆ.
ಹಾಗಾಗಿ ಇದು ಇಂಡಿಯಾದ ದ್ವೀಪಗಳು ಎಂದೇ ಪ್ರಚಲಿತವಿದ್ದದ್ದು ತಿಳಿದು ಬರುತ್ತದೆ. ಪ್ರಸ್ತುತ ಯುಗದ 14 ನೇ ಶತಮಾನದಲ್ಲಿ ಇಂಡೋನೇಷ್ಯಾ ದಲ್ಲಿ ಇಸ್ಲಾಮ್ ಪ್ರವೇಶಿಸುವ ಮೊದಲು ಹಿಂದೂ ಹಾಗೂ ಬೌದ್ಧ ಧರ್ಮದ ರಾಜರು ದೀರ್ಘ ಕಾಲ ರಾಜ್ಯವಾಳಿದ್ದು ಕಾಣುತ್ತದೆ. ಇಂಡೋನೇಷ್ಯಾದಲ್ಲಿ ಹಿಂದೂ ರಾಜರ ಇತಿಹಾಸ ಕಾಲದ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಶಾಸನಗಳು ಬೆಳಕಿಗೆ ಬಂದಿವೆ.
17ನೇ ಶತಮಾನದಲ್ಲಿ ಪೋರ್ಚುಗೀಸರು, ೧೮ನೇ ಶತಮಾನದಲ್ಲಿ ಡಚ್ಚರು, ನಂತರ ಆಂಗ್ಲರು, 1942ರಲ್ಲಿ ಜಪಾನೀಯರಿಗೆ ವಶವಾಗಿದ್ದ ಈ ದೇಶ, 1945ರಲ್ಲಿ ಸ್ವತಂತ್ರವಾಯಿತು. ಇಸ್ಲಾಂ ಮತಕ್ಕೆ ಸೇರಿದ ಅಲ್ಲಿನ ಮೊದಲ ಅಧ್ಯಕ್ಷರ ಹೆಸರು ಸುಭಿಕರ್ಣೋ. ಮಹಾಭಾರತದ ಕರ್ಣನ ಪಾತ್ರವನ್ನು ಬಹುವಾಗಿ ಮೆಚ್ಚಿದ್ದ ಅವರ ತಂದೆ, ತಮ್ಮ ಮಗ ಒಳ್ಳೆಯ ಕರ್ಣನಂತಾಗಬೇಕು ಎಂಬ ಹಂಬಲದಿಂದ ‘ಸುಭಿಕರ್ಣೋ’ ಅಂದರೆ ‘ಒಳ್ಳೆಯಕರ್ಣ’
ಎಂಬ ಹೆಸರಿಟ್ಟರಂತೆ. ಅವರ ಪತ್ನಿಯ ಹೆಸರು ರತ್ನ ಸಾರಿಕಾ ದೇವಿ. ಇವರ ಮಗಳ ಹೆಸರು ‘ಮೇಘಾವತೀ ಸುಕರ್ಣೋ ಪುತ್ರಿ’.
1950, ಜನವರಿ 26 ರಂದು ನಡೆದ ಭಾರತದ ಮೊದಲ ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿಯೂ ಸುಕರ್ಣೋ ಭಾಗವಹಿಸಿದ್ದರು. ಇಂದು ಇಂಡೋನೇಷ್ಯಾ ಅಧಿಕೃತವಾಗಿ ಇಸ್ಲಾಮಿಕ್ ದೇಶ. ಆದಾಗ್ಯೂ ಅಲ್ಲಿ ಎಡೆ ಹಿಂದೂ ಹಾಗೂ ಬೌದ್ಧಧರ್ಮಗಳ ಆಚರಣೆಗಳು ಕಾಣುತ್ತವೆ. ಬಾಲಿದ್ವೀಪ ದಲ್ಲಿರುವ ಶೇ.80ರಷ್ಟು ಹಿಂದೂಗಳು (ಒಟ್ಟು ಸಂಖ್ಯೆಯ ಶೇ.1.7) ಪಾಲಿಸುವ ಹಿಂದೂ ಧರ್ಮವನ್ನು ಇಂಡೋನೇಷ್ಯಾ ಸರಕಾರ ಅಧಿಕೃತವಾಗಿ ಮಾನ್ಯ ಮಾಡಿದೆ. ರಾಮಾಯಣ – ಮಹಾಭಾರತಗಳು ಅಲ್ಲಿನ ಹಲವಾರು ವಿಶ್ವವಿದ್ಯಾಲಯ ಗಳಲ್ಲಿ ಇಂದು ಕಡ್ಡಾಯವಾಗಿ ಬೋಧನಾ ವಿಷಯಗಳು. ಜೋಗಿಯ ಕರ್ತದ (ಯೋಗ್ಯಕರ್ತ) ಸುಲ್ತಾನ ತನ್ನಅರಮನೆಯ ಅಂಗಳದಲ್ಲಿ ರಾಮಾಯಣ / ಮಹಾ ಭಾರತಗಳ ನೃತ್ಯರೂಪಕಗಳ ಪ್ರದರ್ಶನವನ್ನು ಏರ್ಪಡಿಸು ತ್ತಾನೆ.
ಪ್ರಾಂಬಣಂ(ಪರಂಬ್ರಹ್ಮ)ನ ಪ್ರಸಿದ್ಧ ದೇಗುಲದ ಮುಂದೆ ನಿರ್ಮಿಸಿರುವ ವಿಸ್ತಾರವಾದ ಭವ್ಯನೃತ್ಯಾಂಗಣದಲ್ಲಿ ಮಳೆಗಾಲವನ್ನು ಹೊರತುಪಡಿಸಿ, ಪ್ರತಿನಿತ್ಯವೂ ರಾಮಾಯಣದ ನೃತ್ಯ ರೂಪಕವಿರುತ್ತದೆ. ಕಲಾವಿದರ ವಿಶಿಷ್ಟ ವೇಶ ಭೂಷಣಗಳೊಂದಿಗೆ ಗ್ಯಾಮೆಲನ್ ಸಂಗೀತ, ನೃತ್ಯ, ಕಲೆ ಹಾಗೂ ನಟನಾ ಕೌಶಲಗಳು ಒಂದರಳಗೊಂದು ಸುಂದರವಾಗಿ ಹೆಣೆದು ಕೊಂಡು ಎರಡರಿಂದ ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧ ರನ್ನಾಗಿಸುತ್ತದೆ. ಈ ನೃತ್ಯರೂಪಕದ ಇನ್ನೂರಕ್ಕೂ ಮೇಲ್ಪಟ್ಟ ಎಲ್ಲ ಕಲಾವಿದರೂ ಮುಸಲ್ಮಾನರು. ಇಸ್ಲಾಮ್ ನಮ್ಮ ಧರ್ಮ ಮತ್ತು ರಾಮಾಯಣ ನಮ್ಮ ಸಂಸ್ಕೃತಿ ಎಂದು ಅವರು ಹೇಳುತ್ತಾರೆ.
ಗರುಡಪಂಚಶೀಲ ಚಿಹ್ನೆ: ಎರಡು ಬಣ್ಣಗಳಿರುವ ಅವರ ಧ್ವಜದ ಹೆಸರು ‘ದ್ವಿವರ್ಣ’. ಹೊಸದಾಗಿ ಬಾಲಿಗಾಗಿ ರಚಿಸಿರುವ ಚಿಹ್ನೆ, ಓಂಶಾಂತಿಃ ಶಾಂತಿಃ ಶಾಂತಿ.ತ್ರಿಕೋಣ ಭೂರ್ಭುವ ಸ್ವರ್ಲೋಕಗಳು, ಬ್ರಹ್ಮ, ವಿಷ್ಣು, ಶಿವ ಸಮತೋಲನ ಸಾಧಿಸುವ ಸಂಕೇತ. ವಿಷ್ಣುವಿನ ವಾಹನವಾದ ಗರುಡನಿಗೆ ಇಂಡೋನೇಷ್ಯಾದಲ್ಲಿ ವಿಹಂಗಮಗಳ ಒಡೆಯನೆಂಬ ಪ್ರಮುಖ ಸ್ಥಾನ ಕಾಣುತ್ತದೆ. ಹದ್ದಿನತಲೆ, ಕೊಕ್ಕು ಹಾಗೂ ರೆಕ್ಕೆಗಳಿರುವ ಗರುಡನನ್ನು ಅವರ ಪರಂಪರೆ ಮಾನವ ಶರೀರದೊಂದಿಗೆ ಚಿತ್ರಿಸುತ್ತದೆ. ವಿಷ್ಣುವಿನಂತೆಯೇ ಗರುಡನೂ ವಿಶ್ವದಲ್ಲಿ ಶಿಷ್ಟ ರಕ್ಷಣೆಯನ್ನು ಮಾಡುವನೆಂಬ ಅವರ ಪಾರಂಪರಿಕ ನಂಬಿಕೆಯಿಂದಾಗಿ ಆಧುನಿಕ ಯುಗದಲ್ಲಿಯೂ ಅಲ್ಲಿ ಅವನಿಗೆ ‘ರಾಷ್ಟ್ರೀಯ ಚಿಹ್ನೆ’ (national insignia), ಎಂಬ ಅತ್ಯಂತ ಗೌರವದ ಅಗ್ರಸ್ಥಾನ.
ಇಂಡೋನೇಷ್ಯಾದ ಸಂವಿಧಾನದ ಹೆಸರು ಪಂಚಶೀಲ. ಗರುಡನ ಎದೆಯ ಮೇಲಿರುವ ಗುರಾಣಿಯ ಲಾಂಛನದಲ್ಲಿ ಕಾಣುವ ಐದು ಸಂಕೇತಗಳು ಇಂಡೋನೇಷ್ಯಾದ ಐದು ತತ್ವಗಳನ್ನು ಪ್ರತಿನಿಧಿಸುವ ‘ಪಂಚಶೀಲ’. ಗರುಡ ತನ್ನ ಪಂಜದಲ್ಲಿ ಹಿಡಿದಿರುವ ಸುರಳಿಯಲ್ಲಿ ‘ಭಿನ್ನತೆಯಲ್ಲಿ ಏಕತೆ’ (ಭಿನ್ನೇಕತುಂಗಲಇಕ) ಎಂಬ ರಾಷ್ಟ್ರೀಯ ಧ್ಯೇಯವಾಕ್ಯವಿದೆ. 1950ರಲ್ಲಿ, ಇಂಡೋ ನೇಷ್ಯಾದ ಪ್ರಥಮ ಅಧ್ಯಕ್ಷ ಸುಕರ್ಣೊರವರ ಆಶಯದಂತೆ
‘ಗರುಡ ಪಂಚಶೀಲ’ವನ್ನುರೂಪಿಸಿದ್ದು ಪೋಂತಿಯಾಕ್‌ನ 2 ನೇಸುಲ್ತಾನ್ ಹ್ಹಮೀದ್. ಅವರ ರಾಜ್ಯಾಂಗದ ಮೊದಲವಾಕ್ಯ ‘ಧರ್ಮೋ ರಕ್ಷತಿ ರಕ್ಷಿತಃ’. ಭಾರತೀಯ ಮೂಲದ ಶಕ ಸಂವತ್ಸರವನ್ನು ಅವರು ಇಂದಿಗೂ ಅನುಸರಿಸುತ್ತಾರೆ.
ಸಂಸ್ಕೃತ ಮೂಲದ ಹೆಸರುಗಳು: ಇಂಡೋನೇಷ್ಯಾ ದೇಶದ ಸರಕಾರೀ ಕಟ್ಟಡಗಳ ಹೆಸರುಗಳು: ಕ್ರೀಡಾ ಮಂತ್ರಾಲಯ – ‘ಕ್ರೀಡಾಭಕ್ತಿ’, ರಕ್ಷಣಾ ಮಂತ್ರಾಲಯ – ‘ಯುದ್ಧಗೃಹ’, ಬಾಗಿಲಿನಲ್ಲಿ ಕೆತ್ತಿರುವ ಘೋಷಣೆ – ಚತುರ್ಧರ್ಮ, ಏಕಕರ್ಮ. ಮಿಲಿಟರಿ ಗುಪ್ತಚರ ಸಂಸ್ಥೆಯ ಲಾಂಛನ, ಮಸ್ಕಾಟ್ – ‘ಹನುಮಾನ್’. ಜಕಾರ್ತ ನಗರದಲ್ಲಿರುವ ಬ್ಯಾಂಕ್- ‘ಅರ್ಥಗೃಹ’, ವಿಶ್ವವಿದ್ಯಾಲಯವೊಂದರ ಹೆಸರು – ‘ಆತ್ಮ ಜಯ’, ಔಷಧಾಲಯ – ಜೀವಾಶ್ರಯ, ಆಭರಣದಂಗಡಿಯ ಹೆಸರು – ‘ಗೃಹ ಮುತ್ತಿನ ಹಾರ’, ‘ಭೂಮಿಭಕ್ತಿ’, ‘ಅಂತರ ಪ್ಲಾಜಾ’, ‘ಕುಸುಮ ಚಂದ್ರ’, ‘ದೀರ್ಘಾಯು ಪ್ಲಾಜಾ’, ‘ಮಹಾಕಾಯ’ ಮುಂತಾದ ದೊಡ್ಡದೊಡ್ಡ ಅಂಗಡಿ, ಕಚೇರಿ ಸಮುಚ್ಚಯಗಳ ಹೆಸರುಗಳು ಅಲ್ಲಿ ರಾರಾಜಿಸುತ್ತಿವೆ.
ನೋಟಿನ ಮೇಲೆ ಮುದ್ರಿತವಾಗಿರುವ ಗಣೇಶನ ಚಿತ್ರ ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ಅವರಿಗಿರುವ ಒಲವನ್ನು ಸೂಚಿಸುತ್ತದೆ. ಅಲ್ಲಿನ ಅಧ್ಯಕ್ಷರ ಅರಮನೆಂಬ ಮುಂಭಾಗದಲ್ಲಿಯೂ ಗಣೇಶ ಕಾಣುತ್ತಾನೆ. ಅನೇಕ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳ ಬಾಗಿಲಿನಲ್ಲಿ ಹಿಂದೂ ದೇವಾಲಯಗಳಲ್ಲಿ ರುವಂತಹ ದ್ವಾರಪಾಲಕರ ವಿಗ್ರಹಗಳು ಕಾಣುವುದು ಸಾಮಾನ್ಯ ಸಂಗತಿ.
ಅಮೆರಿಕದಲ್ಲಿ ಸರಸ್ವತಿ ಮೂರ್ತಿ: 2013 ರಲ್ಲಿ ಇಂಡೋನೇಷ್ಯಾದ ದೂತಾವಾಸದವರು ಅಮೆರಿಕದ ರಾಜಧಾನಿ, ವಾಷಿಂಗ್ಟನ್ ಡಿ.ಸಿ.ಯಲ್ಲಿ ಧಾರ್ಮಿಕ ಸಹಿಷ್ಣುತೆಯ ಪ್ರತೀಕವಾಗಿ ದೇವಿ ಸರಸ್ವತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿzರೆ. ಗೊಂಬೆ ಯಾಟ- ಸಂಗೀತ-ನೃತ್ಯ ಕಲಾವಿದರಿಗೂ, ಕವಿಗಳಿಗೂ ಸೂರ್ತಿ ನೀಡುವ ಸರಸ್ವತಿ ಮೂರ್ತಿಯ ಶುದ್ಧೀಕರಣ ವಿಧಿಯನ್ನು ಬಾಲಿಯಿಂದ ಬಂದ ಪುರೋಹಿತರು ನೆರವೇರಿಸಿದರು. ಆ ಸಂದರ್ಭ ದಲ್ಲಿ ಇಂಡೋನೇಷ್ಯಾದ ಅಂದಿನ ಹಾಗೂ ಹಿಂದಿನ ಅಧ್ಯಕ್ಷರು ಮತ್ತು ರಾಯಭಾರಿಗಳು ಸೇರಿದ್ದರು. ಇಂಡೋನೇಷ್ಯಾದಲ್ಲಿ ಬಹುಸಂಖ್ಯಾತ ರಾಗಿರುವ ಇಸ್ಲಾಮ್ ಮತಾನುಯಾಯಿಗಳು ಮೂಲ ಹಿಂದೂ ಸಂಸ್ಕೃತಿಯ ಸಾರವನ್ನು ಆಚರಣೆಯಲ್ಲಿ ಅಳವಡಿಸಿಕೊಂಡಿರುವುದು ಅನುಕರಣೀಯ.