Saturday, 14th December 2024

ರಾಜ್ಯದಲ್ಲಿ ಈಗಲೂ ಆಗಬೇಕಿದೆ ಕೈಗಾರಿಕಾ ಕ್ರಾಾಂತಿ

ಅಶ್ವತ್ಥಕಟ್ಟೆೆ
ರಂಜಿತ್ ಎಚ್. ಅಶ್ವತ

‘ಸಿಲಿಕಾನ್ ಸಿಟಿ… ಉದ್ಯಮ ಸ್ನೇಹಿ ರಾಜ್ಯ…ಹೂಡಿಕೆದಾರರ ನೆಚ್ಚಿನ ಸ್ಥಳ..’ ಹೀಗೆ ಕರ್ನಾಟಕವನ್ನು ನಾವೆಲ್ಲ ಕರೆಯುವುದು ರೂಢಿ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಹೂಡಿಕೆ ಮಾಡಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಬೀಗುತ್ತೇವೆ. ಆದರೆ ನಿಜವಾಗಿಯೂ ಇದು ಹೌದೇ ಎನ್ನುವ ಪ್ರಶ್ನೆೆಗೆ ಈಸ್ ಆಫ್ ಡೂಯಿಂಗ್ ರ್ಯಾಾಂಕಿಂಗ್ ಪಟ್ಟಿ ‘ಇಲ್ಲ’ ಎನ್ನುವ ಉತ್ತರ ಸಿಕ್ಕಿದೆ.

ಕೈಗಾರಿಕಾ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಸರಕಾರ ಪ್ರತಿವರ್ಷ ನೀಡುತ್ತಿದೆ. ಈ ಪಟ್ಟಿಯಲ್ಲಿ ಆರಂಭದಿಂದಲೂ
ಕರ್ನಾಟಕ ಟಾಪ್ 5ರೊಳಗೆ ಬರಬೇಕೆಂದು ಪ್ರಯತ್ನಿಸುತ್ತಲೇ ಇದೆ. ಹಲವು ಕೈಗಾರಿಕಾ ಸ್ನೇಹಿ ನಿಲುವುಗಳನ್ನು ಸರಕಾರ
ತಗೆದುಕೊಂಡಿದ್ದರೂ, ಟಾಪ್ 5 ಮಾತ್ರ ಕರ್ನಾಟಕದ ಮಟ್ಟಿಗೆ ಗಗನಕುಸುಮವಾಗಿಯೇ ಉಳಿದಿದೆ. ಎಲ್ಲ ‘ಸವಲತ್ತು’
ನೀಡಿದ್ದೇವೆ ಎಂದು ಹೇಳಿದ್ದರೂ, ಕರ್ನಾಟಕ ಉತ್ತಮ ಸಾಧನೆ ತೋರದಿರಲು ಕಾರಣವೇನು ಎಂದು ನೋಡಿದರೆ, ಇಲ್ಲಿಯ
ವ್ಯವಸ್ಥೆೆಗಳೇ ರ್ಯಾಾಂಕ್ ಕುಸಿಯಲು ಕಾರಣ ಎನ್ನುವ ಉತ್ತರ ಕೇಂದ್ರದಿಂದ ಬರುತ್ತಿದೆ.

ಆದರೆ ನೆರೆ ರಾಜ್ಯ ಆಂಧ್ರಪ್ರದೇಶ ಕಳೆದ ಐದು ವರ್ಷದಿಂದಲೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದೆ. ಆಂಧ್ರದೊಂದಿಗೆ ಇದೀಗ ತೆಲಂಗಾಣವೂ ಇದೇ ಮಾದರಿಯಲ್ಲಿ ಸಾಗಿದ್ದು, ಮೂರನೇ ಸ್ಥಾನದಲ್ಲಿ ಬಂದು ಕೂತಿದೆ. ಈ ಎರಡರ ನಡುವೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಎರಡನೇ ಸ್ಥಾನಕ್ಕೆೆ ಏರಿದೆ. ಕೇಂದ್ರ ನೀಡುವ ಈ ರ್ಯಾಾಂಕಿಂಗ್‌ನ ಪ್ರಮುಖ ಉದ್ದೇಶವೇ, ವಿಶ್ವಮಟ್ಟದ ಉದ್ಯಮಿಗಳು ಭಾರತದ ಯಾವ ಭಾಗದಲ್ಲಿ ಹೂಡಿಕೆಗೆ ಉತ್ತಮ ಅವಕಾಶವಿದೆ ಎನ್ನುವದನ್ನು ಎತ್ತಿ ತೋರಿಸಲು.

ಬಹುತೇಕ ಕೈಗಾರಿಕೋದ್ಯಮಿಗಳು ಈ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಉದ್ಯಮ ಸ್ಥಾಪನೆಗೆ ಸ್ಥಳವನ್ನು  ನಿಗದಿ ಮಾಡುತ್ತಾರೆ. ಇಂತಹ ಮಹತ್ವದ ಪಟ್ಟಿಯಲ್ಲಿ ಕರ್ನಾಟಕ 2019ನೇ ಸಾಲಿನಲ್ಲಿ 17 ಸ್ಥಾನ ಪಡೆದಿದೆ. ಅಂದ ಮಾತ್ರಕ್ಕೆೆ ಕರ್ನಾಟಕ ದಲ್ಲಿ ಕೈಗಾರಿಕಾ ಸ್ನೇಹಿ ಕೆಲಸಗಳು ಆಗುತ್ತಿಲ್ಲ ಎಂದಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಲ್ಲದ ಮನಸಿನಿಂದಲೇ, ಡಾವೋಸ್‌ಗೆ ಹೋಗಿ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ, ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ಬಳಿಕ ಕರೋನಾ ಸಮಯದಲ್ಲಿ ಚೀನಾದಿಂದ ಹಲವು ಕಂಪನಿಗಳು ಕಾಲ್ಕಿಳುವುದು ಖಚಿತವಾಗು ತ್ತಿದ್ದಂತೆ, ಆ ಕೈಗಾರಿಕೆಗಳನ್ನು ಕರ್ನಾಟಕದತ್ತ ಸೆಳೆಯಲು ಪ್ರತ್ಯೇಕ ಟಾಸ್‌ಕ್‌ ಫೋರ್ಸ್ ಅನ್ನು ಆರಂಭಿಸಿದರು.

ವಿಶ್ವಮಟ್ಟದ ಹೂಡಿಕೆದಾರರನ್ನು ಸೆಳೆಯಲು ಎಸ್.ಎಂ ಕೃಷ್ಣ ಅವರ ಕಾಲ ದಿಂದಲೂ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಸರಕಾರ ಆಯೋಜಿಸುತ್ತ ಬಂದಿದೆ. ಆದರೂ ಕರ್ನಾಟಕ ಈ ಪಟ್ಟಿಯಲ್ಲಿ ಮಾತ್ರ ಮೇಲಕ್ಕೆ ಏಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆೆ ಕಾರಣವನ್ನು ನೋಡುವುದಾದರೆ, ಭೂಮಿ ವ್ಯಾಜ್ಯ, ಪರವಾನಗಿ ನೀಡುವುದಕ್ಕೆೆ ಆಗುವ ವಿಳಂಬ,
ಬೆಂಗಳೂರಿನಾಚೆ ಕೈಗಾರಿಕೋದ್ಯಮಿಗಳು ಕೇಳುವ ಮೂಲಸೌಕರ್ಯಗಳ ಕೊರತೆ ಹಾಗೂ ಹಲವು ರಾಜಕೀಯ ಕಾರಣಗಳೂ ಇರಬಹುದು.

ಹಾಗೇ ನೋಡಿದರೆ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅನ್ನು 2016ರಿಂದ ಕೇಂದ್ರ ಸರಕಾರ ಜಾರಿಗೆ ತಂದಿದೆ. ಈಸ್ ಡೂಯಿಂಗ್ ಬ್ಯುಸಿನೆಸ್ ರ್ಯಾಾಂಕಿಂಗ್ ನೀಡುವ ಪ್ರಕ್ರಿಯೆ ಆರಂಭವಾದ ದಿನದಿಂದಲೂ, ಕರ್ನಾಟಕ ಹೇಳಿಕೊಳ್ಳುವ ಸಾಧನೆಯನ್ನು ಏನು ಮಾಡಲಿಲ್ಲ. ಮೊದಲ ವರ್ಷದಲ್ಲಿ ಟಾಪ್ 10ನಲ್ಲಿದ್ದ ಕರ್ನಾಟಕ ನಂತರದ ದಿನದಲ್ಲಿ ಕುಸಿಯುತ್ತೇ ಸಾಗಿತ್ತು. ಬಿಜೆಪಿ ಅಥವಾ ಕಾಂಗ್ರೆೆಸ್ ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ, ಆಡಳಿತ ನಡೆಸುವ ಸರಕಾರಗಳು ನಮ್ಮಲ್ಲಿ ಉದ್ಯಮ ಸ್ನೇಹಿ  ಯೋಜನೆ ಗಳನ್ನು ರೂಪಿಸಲಾಗಿದೆ. ಆದ್ದರಿಂದ ನಮ್ಮಲ್ಲಿ ಸಾವಿರಾರೂ ಕೋಟಿ ಬಂಡವಾಳ ಹೂಡಿಕೆ ಹಲವು ಸಂಸ್ಥೆೆಗಳು ಆಸಕ್ತಿ ತೋರುತ್ತಿವೆ ಎನ್ನುವ ಮಾತನ್ನು ಪ್ರತಿವರ್ಷ ಹೇಳುತ್ತವೆ. ಬಳಿಕ ಬರುವ ರ್ಯಾಾಂಕಿಂಗ್‌ನಲ್ಲಿ ಮಾತ್ರ ರಾಜ್ಯ ಸಾಧನೆ
ಹೇಳಿಕೊಳ್ಳುವಂತಿರುವುದಿಲ್ಲ.

ಈ ಹಿಂದೆ ಇದ್ದ ಕಾಂಗ್ರೆಸ್ ಸರಕಾರ ಹಾಗೂ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ ರಾಜ್ಯ ಕುಸಿದಾಗಲೆಲ್ಲ, ‘ಈ ರೀತಿ ರ್ಯಾಾಂಕಿಂಗ್ ಕುಸಿಯಲು ಕೇಂದ್ರ ಬಿಜೆಪಿ ಸರಕಾರ ಕಾರಣ. ಅಗತ್ಯ ದಾಖಲೆಗಳನ್ನು ನೀಡಿದರೂ, ಅಂಕಗಳನ್ನು ನೀಡದೇ ನಮ್ಮ ರ್ಯಾಾಂಕಿಂಗ್ ಕುಸಿಯುವಂತೆ ಮಾಡಿದ್ದಾರೆ’ ಎಂದು ಆರೋಪಿಸುತ್ತಲೇ ಬಂದರು. ಕಳೆದ ಬಾರಿ ರ್ಯಾಾಂಕಿಂಗ್ ನೀಡುವ ವೇಳೆ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ ಅವರು ಒಂದು ಹೆಜ್ಜೆೆ ಮುಂದೆ ಹೋಗಿ, ‘ಈ ವಿಷಯವಾಗಿ ನಾವು ಮೇಲ್ಮನವಿ’ ಸಲ್ಲಿಸುವುದಾಗಿಯೂ ಹೇಳಿದ್ದರು. ಆದರೆ ನಮ್ಮ ರಾಜ್ಯದ ಸ್ಥಾನ ಮಾತ್ರ 12ರಿಂದ ಕದಲಲಿಲ್ಲ.

ಹಾಗೇ ನೋಡಿದರೆ ರಾಜಕೀಯ ವಿಷಯಕ್ಕಾಗಿ ಅಂಕ ಕಡಿತ ಮಾಡಲು ಅಥವಾ ಕಡಿಮೆ ರ್ಯಾಾಂಕಿಂಗ್ ಕೊಡಲು ಇದನ್ನು ಪ್ರಧಾನಿ ನರೇಂದ್ರ ಮೋದಿ ಆಗಲಿ ಅಥವಾ ಅವರ ಸಂಪುಟ ಸಹೋದ್ಯೋಗಿಗಳು ಮಾಡುವುದಿಲ್ಲ. ಸರಳವಾಗಿ ಈಸ್ ಡೂಯಿಂಗ್ ಬ್ಯುಸಿನೆಸ್‌ನ ಅಂಕಪಟ್ಟಿಯನ್ನು  ನೋಡುವುದಾದರೆ, ಇದು ಒಂದು ರೀತಿ ಮಲ್ಟಿಪಲ್ ಚಾನ್‌ಸ್‌ ಪ್ರಶ್ನೆೆ ಇದ್ದಂತೆ.

ಈ ವಿಷಯದಲ್ಲಿ ಒಂದು ಪೂರ್ಣ ಅಂಕ ಇಲ್ಲವೇ ಶೂನ್ಯ ಸಾಧನೆ ಮಾತ್ರ ಸಾಧ್ಯ. ಇನ್ನು ಈ ಅಂಕ ಪಟ್ಟಿಯ ಮೌಲ್ಯಮಾಪನ ಕೇಂದ್ರ ಕೈಗಾರಿಕಾ ಸಚಿವಾಲಯ ಸಿದ್ಧಪಡಿಸಿರುವ ಮಾರ್ಗಸೂಚಿಯ ಅನ್ವಯವೇ ಆಗಲಿದೆ. ವಿಶ್ವಮಟ್ಟದಲ್ಲಿ ಸಿದ್ಧಗೊಳಿಸಿರುವ ಪ್ಯಾರಾಮೀಟರ್ (ಅಂಶಗಳನ್ನೇ) ಯಥಾವತ್ ಅಲ್ಲದಿದ್ದರೂ, ಬಹುತೇಕ ಅಂಶಗಳನ್ನು ಪರಿಗಣಿಸಲಾಗಿದೆ. ಆದ್ದರಿಂದ ಇದರಲ್ಲಿ ರಾಜ್ಯ ಸರಕಾರಗಳು ಸೂಕ್ತ ದಾಖಲೆ ನೀಡಿದ್ದರೂ, ಅಂಕ ಕಡಿತಗೊಳಿಸುವ ಪ್ರಮೇಯವೇ ಇಲ್ಲ.

ಕಳೆದ ಬಾರಿ 300ಕ್ಕೂ ಹೆಚ್ಚು ಅಂಶಗಳಲ್ಲಿ ಶೇ.95ರಷ್ಟು ಅಂಶಗಳಿಗೆ ದಾಖಲೆಗಳನ್ನು ಕರ್ನಾಟಕ ಸರಕಾರ ನೀಡಿತ್ತು. ಇದರಲ್ಲಿ ಕೆಲವೊಂದು ಅಂಶಗಳು ತಿರಸ್ಕೃತಗೊಂಡಿತ್ತು. ಆದ್ದರಿಂದ 12 ಸ್ಥಾನಕ್ಕೆೆ ಕುಸಿಯಿತು. ಆದರೆ 2019ನೇ ಸಾಲಿನ ರ್ಯಾಾಂಕಿಂಗ್ ಪಟ್ಟಿಯಲ್ಲಿ ಪುನಃ ಐದು ಸ್ಥಾನಗಳು ಸಿತವಾಗಿದೆ. ಈ ರೀತಿ ಪುನಃ ಐದು ಸ್ಥಾನ ಕುಸಿಯಲು ಹಲವು ಕಾರಣಗಳಿರಬಹುದು. ರ್ಯಾಾಂಕಿಂಗ್ ಘೋಷಿಸಲು ಕೇಂದ್ರ ಸರಕಾರ ನೀಡಿದ್ದ ಕಾಲವಧಿಯಲ್ಲಿ 2016ರಲ್ಲಿ ನೀಡಿದ್ದ ರ್ಯಾಾಂಕಿಂಗ್ ಪಟ್ಟಿಯಲ್ಲಿ ಶೇ.88.39 ಅಂಕದೊಂದಿಗೆ 13ನೇ ಸ್ಥಾನದಲ್ಲಿದ್ದ ಕರ್ನಾಟಕ, 2018ರ ವೇಳೆಗೆ ಶೇ.96.42 ಅಂಕದೊಂದಿಗೆ ಎಂಟನೇ ಸ್ಥಾನಕ್ಕೆೆ ಲಗ್ಗೆ ಇಟ್ಟಿತ್ತು.

ಕಳೆದ ಎರಡು ವರ್ಷದ ಬಗ್ಗೆೆ ಇನ್ನಷ್ಟು ನೋಡುವುದಾದರೆ, 2016ರ ಪಟ್ಟಿಯಲ್ಲಿ ಕೇಂದ್ರ ಸರಕಾರ ನೀಡಿದ್ದ 340 ಅಂಶಗಳ
ಪಟ್ಟಿಯಲ್ಲಿ 297ಕ್ಕೆೆ ಸರಿಯಾದ ಮಾಹಿತಿ ಹಾಗೂ ಅನುಷ್ಟಾನಗೊಳಿಸಿರುವ ಬಗ್ಗೆೆ ಮಾಹಿತಿಯನ್ನು ಹಂಚಿಕೊಂಡಿತ್ತು. 2018ರವೇಳೆಗೆ ಈ ಅಂಶಗಳ ಪಟ್ಟಿಯನ್ನು 374  ಅಂಶಗಳನ್ನು ಸೇರಿಸಲಾಯಿತು. ಇದರಲ್ಲಿ 364ಕ್ಕೆೆ ಸೂಕ್ತ ದಾಖಲೆಗಳನ್ನು ನೀಡಿದರೆ, ಐದಕ್ಕೆೆ ಉತ್ತರಿಸಲಿಲ್ಲ. ಇನ್ನುಳಿದ ಮೂರು ತಿರಸ್ಕೃತಗೊಂಡಿದ್ದವು. ಆದ್ದರಿಂದ ಶೇ.96.42 ರದೊಂದಿಗೆ ಎಂಟನೇ ಸ್ಥಾನದಲ್ಲಿ ಕರ್ನಾಟಕವಿತ್ತು. ಆದರೆ 2019ರ ವೇಳೆಗೆ ಎಂಟನೇ ಸ್ಥಾನದಿಂದ 17 ಸ್ಥಾನಕ್ಕೆೆ ಕುಸಿದಿದೆ.

ಒಂದು ವರ್ಷದ ಅವಧಿಯಲ್ಲಿ 11 ಸ್ಥಾಾನ ಕುಸಿಯಲು ಕಾರಣವೇನು ಎಂದು ನೋಡಿದರೆ, ಕಳೆದ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ನಡೆದ ರಾಜಕೀಯ ಹೊಯ್ದಾಟವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. ಜೆಡಿಎಸ್ -ಕಾಂಗ್ರೆೆಸ್ ಸರಕಾರದ ಅವಧಿಯಲ್ಲಿ ನಡೆದ ಹಲವು ರಾಜಕೀಯ ತೊಳಲಾಟ, ಗದ್ದಲ, ಗಲಾಟೆಯಿಂದ ಅನೇಕ ಹೂಡಿಕೆದಾರರು ಕರ್ನಾಟಕದ ಬದಲು ಇತರೆ ರಾಜ್ಯಗಳತ್ತ ಹೆಚ್ಚು ಗಮನಹರಿಸಿದ್ದಾರೆ. ಈ ವೇಳೆ ಕೇಂದ್ರ ಸರಕಾರ ನೀಡಿರುವ ಹಲವು ಅಂಶಗಳನ್ನು ಪೂರೈಸಲು ರಾಜ್ಯದಿಂದ ಆಗಿಲ್ಲ. ಆದ್ದರಿಂದಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ರ್ಯಾಾಂಕಿಂಗ್‌ನಲ್ಲಿ ಹಿಂದೆ ಉಳಿಯಬೇಕಾಗಿದೆ.

ಇದೀಗ ಅನೇಕರು ಪ್ರಶ್ನಿಸಬಹುದು, ರಾಜ್ಯ ರಾಜಕಾರಣಕ್ಕೂ, ಕೈಗಾರಿಕೆಗಳ ಸ್ಥಾಪನೆಗೂ ಏನು ಸಂಬಂಧ? ರಾಜ್ಯದಲ್ಲಿ ಆಪರೇಷನ್ ಕಮಲವಾದರೆ, ಕೈಗಾರಿಕೋದ್ಯಮಿಗಳಿಗೇಕೆ ಹೆದರಿಕೆ? ಎನ್ನುವ ಪ್ರಶ್ನೆೆ ಇರಬಹುದು. ಆದರೆ ಸೂಕ್ಷ್ಮವಾಗಿ ನೋಡಿ; ಯಾವ ರಾಜ್ಯ ಅಥವಾ ದೇಶದಲ್ಲಿ ಸ್ಥಿರ ಸರಕಾರಗಳು ಇರುವುದೋ ಅಲ್ಲಿಯೇ ಅತಿಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗುವುದು. ಇದಕ್ಕೆೆ ಕಾರಣವೇನು ಎಂದು ನೋಡುವುದಾದರೆ, ಯಾವುದೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆಯಾಗ ಬೇಕಾದರೆ, ಅಲ್ಲಿನ ಸರಕಾರಗಳು ಹೂಡಿಕೆದಾರರಿಗೆ ಬೇಕಿರುವ ಅಗತ್ಯ ನೆರವು ಹಾಗೂ ಮೂಲಸೌಲಭ್ಯಗಳನ್ನು ಒದಗಿಸ ಬೇಕಾಗುತ್ತದೆ. ಈ ಮೂಲ ಸೌಲಭ್ಯ ಒದಗಿಸಲು ಉನ್ನತ ಮಟ್ಟದ ಸಭೆಯಾಗಿ, ಅವುಗಳಿಗೆ ಅನುಮೋದನೆ ನೀಡಬೇಕಾಗುತ್ತದೆ.

ಆದರೆ ಕಳೆದ ವರ್ಷ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲಿಯೇ ಅತಿಹೆಚ್ಚು
ಸಮಯ ಕಳೆದರೇ ಹೊರತು, ಈ ರೀತಿಯ ಸಭೆಗಳ ಬಗ್ಗೆೆ  ಹೆಚ್ಚು ಆಸಕ್ತಿವಹಿಸಲಿಲ್ಲ. ಆಸಕ್ತಿ ವಹಿಸಲು ಸಮಯವೂ ಇರಲಿಲ್ಲ.
ಆದ್ದರಿಂದ ಹೂಡಿಕೆದಾರರಿಗೆ ಅಗತ್ಯವಿದ್ದ ಭೂಮಿ ಹಸ್ತಾಾಂತರ, ತೆರಿಗೆ ವಿನಾಯಿತಿ, ಅಗತ್ಯ ಪರವಾನಗಿ ನೀಡಲು ಸಾಧ್ಯವಾಗಲಿಲ್ಲ. ಸಿಂಗಲ್ ವಿಂಡೋ ಕ್ಲಿಯರೆನ್‌ಸ್‌ ಎಂದು ಹೆಸರಿಗೆ ಸರಕಾರ ಮಾಡಿದ್ದರೂ, ಅದು ಸಾಧ್ಯವಾಗಲಿಲ್ಲ.

ಆದ್ದರಿಂದ ಅನೇಕ ಕೈಗಾರಿಕೋದ್ಯಮಿಗಳು, ರಾಜ್ಯದಲ್ಲಿ ಸ್ಥಿರ ಸರಕಾರ ಬರುವ ತನಕ ಹೂಡಿಕೆ ಮುಂದೂಡಿದರು. ಇಲ್ಲವೇ
ಇತರ ರಾಜ್ಯಗಳತ್ತ ತಮ್ಮ ಕಣ್ಣು ಹಾಯಿಸಿದರು. ಕೇವಲ ಭೂಮಿ ಹಂಚಿಕೆ ಮಾತ್ರವಲ್ಲದೇ, ಸಬ್ಸಿಡಿ, ವಿದ್ಯುತ್, ಕೈಗಾರಿಗೆ ಸ್ಥಾಪನೆಗೆ ಅಗತ್ಯವಿರುವ ಕಟ್ಟಡ ಕಾಮಗಾರಿಗಳಿಗೆ ರಾಜ್ಯ ಸರಕಾರದ ನೆರವು, ಕಾರ್ಮಿಕ ಕಾಯಿದೆ ಸೇರಿದಂತೆ ಹಲವು ಅಂಶಗಳು ಇದರಲ್ಲಿ ಸೇರಿರುತ್ತವೆ.

ಕೋಟ್ಯಂತರ ರುಪಾಯಿ ಹೂಡಿಕೆಗಳಿಗೆ ಅನೇಕ ಬಾರಿ ಕಾಯಿದೆಗಳನ್ನೇ ತಿದ್ದುಪಡಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ 2019 ರಾಜಕೀಯ ತೊಳಲಾಟದ ವರ್ಷದಲ್ಲಿ ಈ ಯಾವ ಕ್ರಿಯೆಗಳು ಆಗಲಿಲ್ಲ. ಆದ್ದರಿಂದಲೇ 11 ಸ್ಥಾನ ಕುಸಿದು 17 ಸ್ಥಾನದಲ್ಲಿ ಕರ್ನಾಟಕ ಬಂದು ನಿಂತಿದೆ. ಆದರೆ ಇದೇ ಅವಕಾಶವನ್ನು ಬಳಸಿಕೊಂಡ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ತಮ್ಮ ರಾಜ್ಯಗಳಿಗೆ ಹೂಡಿಕೆದಾರರು ಬರುವಂತೆ ನೋಡಿಕೊಂಡರು.

ಹಾಗೇ ನೋಡಿದರೆ 2015-16ರಲ್ಲಿ 33ನೇ ಸ್ಥಾನದಲ್ಲಿದ್ದ ಡಿಯು ದಮಾನ್, ಲಕ್ಷದೀಪಗಳು ಈ ಬಾರಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಿ, ಟಾಪ್ 15ರಲ್ಲಿ ಕಾಣಿಸಿಕೊಂಡಿವೆ. 13 ಸ್ಥಾನದಲ್ಲಿದ್ದ ತೆಲಂಗಾಣ ಮೂರನೇ ಸ್ಥಾನಕ್ಕೆೆ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿ ಬಂದು ಕೂತಿವೆ. ಇನ್ನು ರ್ಯಾಾಂಕಿಂಗ್‌ನಲ್ಲಿ ಕುಸಿತವಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಈಗಿರುವ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರದಿಂದಲೇ ರ್ಯಾಾಂಕಿಂಗ್ ಕುಸಿಯಲು ಕಾರಣ ಎನ್ನುವ ಹೇಳಿಕೆಗಳನ್ನು ನೀಡಿದರು.

ರಾಜಕೀಯವಾಗಿ ಈ ರೀತಿಯ ಆರೋಪ ಮಾಡುವುದು ಸಹಜವೂ ಕೂಡ. ಆದರೆ ಈ ರೀತಿಯ ಹೇಳಿಕೆ ನೀಡುವ ಮೊದಲು 2019ರ ಈಸ್ ಡೂಯಿಂಗ್ ಬ್ಯುಸಿನೆಸ್‌ನ ಸಮೀಕ್ಷೆೆಯ ಫಲಿತಾಂಶ ಎನ್ನುವುದನ್ನು ಮರೆತು ರಾಜಕೀಯ ಹೇಳಿಕೆಯನ್ನು ನೀಡುತ್ತಾ ಹೋದರು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಾಡಿರುವ ಸಾಧನೆ ಅಥವಾ ವೈಫಲ್ಯಗಳ ಪರೀಕ್ಷೆೆಯಾಗು ವುದೇ ಮುಂದಿನ ವರ್ಷ. ಒಂದು ವೇಳೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳುತ್ತಿರುವಂತೆ ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ನಿಜವಾಗಿಯೂ ಗಂಭೀರ ಪ್ರಯತ್ನವನ್ನು ಮಾಡಿದರೆ, ಕರ್ನಾಟಕ ತನ್ನ ಹಿಂದಿನ ಸ್ಥಾನಕ್ಕೆೆ ಮರಳುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರೂ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ.

ಸಾಫ್‌ಟ್‌‌ವೇರ್ ವಲಯದಲ್ಲಿ ಬೆಂಗಳೂರು ದೇಶದ ಇತರ ನಗರಗಳಿಗಿಂತ ಮುಂದಿದೆ. ಆದ್ದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನಷ್ಟು ಸಾಫ್‌ಟ್‌‌ವೇರ್ ಹೂಡಿಕೆದಾರರನ್ನು ಸೆಳೆಯುವುದು ದೊಡ್ಡ ವಿಷಯವಲ್ಲ. ಆದರೆ ಕರ್ನಾಟಕ ಮೊದಲಿನಿಂದ ಹಿಂದುಳಿದಿರುವುದು ಉತ್ಪಾದನಾ ಕ್ಷೇತ್ರದಲ್ಲಿ. ಈ ನಿಟ್ಟಿನಲ್ಲಿ, ಸರಕಾರ ಇನ್ನಷ್ಟು ಶ್ರಮಿಸಬೇಕಾದ ಅನಿವಾರ್ಯತೆಯಿದೆ.

ಇದಕ್ಕೆೆ ಕೇವಲ ಬೆಂಗಳೂರನ್ನು ವಿಶ್ವಕ್ಕೆೆ ತೋರಿಸುವುದರಿಂದ ಮಾತ್ರ ಹೆಚ್ಚು ಕೈಗಾರಿಕೋದ್ಯಮಿಗಳು ಬರುತ್ತಾರೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಬೆಂಗಳೂರು ನಂತರ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಪ್ರಶಸ್ತ ಸ್ಥಳಗಳ ಬಗ್ಗೆೆಯೂ ಸರಕಾರ ಗಮನಹರಿಸಬೇಕಿದೆ. ಇದು ರಾಜ್ಯದ ಮಾತಾಯಿತು, ದೇಶದ ವಿಷಯದಲ್ಲಿ ರ್ಯಾಾಂಕಿಂಗ್ ನೋಡುವುದಾದರೆ, ಭಾರತದ ಕಳೆದ ಐದಾರು ವರ್ಷದಿಂದ ಉತ್ತಮ ರೀತಿಯಲ್ಲಿಯೇ ಸಾಧನೆ ತೋರುತ್ತಿದೆ. 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ ಇದೀಗ 63ನೇ
ಸ್ಥಾನಕ್ಕೆೆ ಬಂದು ನಿಂತಿದೆ.

ಕಳೆದ ಹಲವು ವರ್ಷಗಳಿಂದ ಕೈಗಾರಿಕಾ ಸ್ನೇಹಿ ಪಟ್ಟದಲ್ಲಿರುವ ನ್ಯೂಜಿಲ್ಯಾಾಂಡ್ ಈಗಲೂ ಮೊದಲನೇ ಸ್ಥಾನದಲ್ಲಿ ಮುಂದುವರಿದಿರಿದೆ. ನೆರೆ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣದಿಂದ ನಾವು ಕಲಿಯಬೇಕಿರುವುದು ಸಾಕಷ್ಟಿದೆ. ಅಖಂಡ ಆಂಧ್ರ ಪ್ರದೇಶ ವಿಭಜನೆಯಾದರೂ ಕೈಗಾರಿಕಾ ವಲಯಕ್ಕೆೆ ಇದರ ಹೊಡೆತ ಬೀಳದಂತೆ ಅಲ್ಲಿನ ಸರಕಾರಗಳು ನಿಗಾವಹಿಸಿವೆ. ಕರ್ನಾಟಕ
ಸರಕಾರವೂ ಹಲವು ಹೂಡಿಕೆದಾರರ ಸಮಾವೇಶವನ್ನು ಮಾಡಿದೆ. ಸಮಾವೇಶದಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗಿದೆ ಎನ್ನುವ ಮಾತನ್ನು ಆಡಳಿತ ಮಾಡುವ ಸರಕಾರಗಳು ಹೇಳುತ್ತಲೇ ಬಂದಿವೆ. ಆದರೆ ನಂತರ ಏನಾಯಿತು ಎನ್ನುವುದಕ್ಕೆ ಫಾಲೋಅಪ್ ಮಾಡುವ ಕೆಲಸ ರಾಜ್ಯದಲ್ಲಿ ಆಗುತ್ತಿಲ್ಲ. ಇದರೊಂದಿಗೆ ಬಹುತೇಕ ರಾಜ್ಯಗಳು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ನಲ್ಲಿರುವ ಅಂಶಗಳನ್ನು ಮೊದಲು ಅನುಷ್ಟಾನಗೊಳಿಸುವ ಕೆಲಸವನ್ನು ಮಾಡುತ್ತಿವೆ.

ಆದ್ದರಿಂದಲೇ ತೀರಾ ಹಿಂದುಳಿದ ಲಕ್ಷದ್ವೀಪದಂತಹ ಕೇಂದ್ರಾಡಳಿತ ಪ್ರದೇಶವೂ ಪಟ್ಟಿಯಲ್ಲಿ ಮೇಲಿದೆ. ಈ ಎಲ್ಲದರೊಂದಿಗೆ ಎಲ್ಲ ಕ್ಷೇತ್ರವನ್ನು ಸೆಳೆಯುವ ಬದಲು, ಕರ್ನಾಟಕದಲ್ಲಿ ಯಾವ ಕ್ಷೇತ್ರಗಳಿಗೆ ಹೂಡಿಕೆ ಮಾಡಲು ಪ್ರಸಶ್ತ ಎನ್ನುವುದನ್ನು
ನೋಡಿ, ಆ ಕ್ಷೇತ್ರಗಳಿಗೆ ಒತ್ತು ನೀಡುವ ಕೆಲಸವನ್ನು ಮಾಡಬೇಕಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ನ ರ್ಯಾಾಂಕಿಂಗ್ ‌ನಿಂದಲೇ ಕರ್ನಾಟಕವನ್ನು ಗುರುತಿಸಬೇಕಿಲ್ಲ ಎಂದು ನಾವು ಹೇಳಿಕೊಳ್ಳಬಹುದಾದರೂ, ದೊಡ್ಡ ದೊಡ್ಡ ಹೂಡಿಕೆದಾರರು ನೋಡುವುದು, ಕೇವಲ ಪಟ್ಟಿಯಲ್ಲಿರುವ ಟಾಪ್ 10 ರಾಜ್ಯಗಳನ್ನು ಎನ್ನುವುದನ್ನು ಮರೆಯುವಂತಿಲ್ಲ.