Saturday, 23rd November 2024

ದೇವರ ಹೆಸರಲ್ಲಿ ಮಾಡೋ ಬ್ಯುಸಿನೆಸ್ – ಗುಡಿ ಕೈಗಾರಿಕೆ

ತುಂಟರಗಾಳಿ

ಸಿನಿ ಗನ್ನಡ

ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸ ಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಅವರ ಬಗೆಗಿನ ಒಂದು ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ. ರಾಜು ಅಂದ್ರೆ ನೆನಪಾಗೋದು ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು.

ಕೆವಿ ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾ ಗಳನ್ನು ಮಾಡಿದ ನಿರ್ದೇಶಕರ ಹೆಸರು. ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.1, ಬೆಳ್ಳಿ ಮೋಡಗಳು, ನವ ಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ಅದ್ಬುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ಅವರ ಹುಲಿಯಾ ಚಿತ್ರದಿಂದಲೇ.

ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ, ಅರ್ಚನಾ ಅಭಿನಯದ ಹುಲಿಯಾ. ಆದರೆ ಈಗಲೂ ಕೆವಿ ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ.

ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ದೌರ್ಜನ್ಯಕ್ಕೆ ಒಳಗಾದವರ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ. ಒಂದೇ ವ್ಯತ್ಯಾಸ ಅಂದ್ರೆ ಕೆವಿ ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು. ಅಂದರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆ ನಿಜ ಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆವಿ ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು.

ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿ ಬಂದಿತ್ತು. ಅದರಲ್ಲೂ ನಟ ವಿಷ್ಣುವರ್ಧನ್ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ‘ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ’ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು. ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆವಿ ರಾಜು ಕೇಳಲಿಲ್ಲ, ಅಂತ ಆರೋಪ ಹೊರಿಸುವ ಚಿತ್ರದ ನಿರ್ಮಾಪಕ ಗೋವಿಂದು ಕೂಡ, ಯಾರಾದ್ರೂ ನಿಮ್ಮ ಹೆಸರೇನು? ಅಂತ ಯಾರಾದ್ರೂ ಕೇಳಿದ್ರೆ ಗೋವಿಂದು, ಹುಲಿಯಾ ಗೋವಿಂದು ಅಂತಲೇ ಹೇಳ್ತಾರೆ. ಅದು ಆ ಚಿತ್ರದ ಮತ್ತು ಕೆವಿ ರಾಜು ಅವರ ತಾಕತ್ತು.

ಲೂಸ್ ಟಾಕ್
ಯೋಗಿ ಆದಿತ್ಯನಾಥ್ (ಕಾಲ್ಪನಿಕ ಸಂದರ್ಶನ)
ನಿಮ್ಮ ಅಮಿತ್ ಶಾ ಕಾಂಗ್ರೆಸ್‌ನ ಡಿಕೆ ಶಿವಕುಮಾರ್ ಅವರ ಬಗ್ಗೆ ಏನೋ ಮಸಲತ್ತು ಮಾಡ್ತಾ ಇದ್ದಾರೆ ಅಂತ ಸುದ್ದಿ ಇತ್ತಲ್ಲ
-ಅದೆಲ್ಲ ಸುಳ್ಳು, ಅಮಿತ್ ಶಾ ಏನ್ ಮಾಡ್ತಾರೆ ಪಾಪ, ನಂಗಾದ್ರೂ ಹೇಳಿದ್ರೆ ಬುಲ್ಡೋಜರ್ ತಗೊಂಡು ಬಂಡೆ ಒಡೆಯೋಕೆ ಟ್ರೈ ಮಾಡ್ತಾ ಇದ್ದೆ.

ಓಹೋ, ಸರಿ ನಿಮ್ಮ ಯುಪಿ ದೇಶದ ನಂಬರ್ ಒನ್ ಅಂತ ಎಲ್ಲಾ ಕಡೆ ಜಾಹೀರಾತು ಕೊಡ್ತಾ ಇದ್ದೀರಲ್ಲ, ಇದು ನಿಜ್ವಾಗ್ಲೂ ನಿಜನಾ?
-ನಂಬರ್ ಒನ್ ಅಂತ ಹೇಳಿದ್ದೀವಿ, ಯಾವುದರಲ್ಲಿ, ಯಾವ ಕಡೆಯಿಂದ ಅಂತೆ ಕೇಳಂಗಿಲ್ಲ.

ಆದ್ರೂ, ಯುಪಿಯಲ್ಲಿ ಕ್ರೈಮ್ ರೇಟ್ ಜಾಸ್ತಿ ಇದೆ ಅಂತ ವರದಿಗಳು ಹೇಳ್ತಾವಲ್ಲ?
-ಏನ್ ಮಾಡೋದು ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಅಂತ ಬದಲಾವಣೆ ಮಾಡಿದ ಮೇಲೆ, ನಮ್ಮ ಆಡಳಿತ ಪ್ರಯಾಸ್ ರಾಜ್ ಆಗಿಬಿಟ್ಟಿದೆ.

ಅದ್ಸರಿ, ಯುಪಿಯಲ್ಲಿ ಏನ್ ತೊಂದರೆ ಆದ್ರೂ ಅದಕ್ಕೆ ಹಿಂದಿನ ಸರಕಾರಗಳೇ ಕಾರಣ ಅಂತ ಹೇಳ್ತಾ ಇರ್ತೀರಲ್ಲ?
-ಏನ್ ಮಾಡೋದು ಹಿಸ್ಟರಿ ಕ್ರಿಯೇಟ್ ಮಾಡೋದು ಕಷ್ಟ, ಅದಕ್ಕಿಂತ ಹಿಸ್ಟರಿ ತಿದ್ದೋದೇ ಸುಲಭ ಅನ್ನಿಸ್ತು. ತಿದ್ದುತ್ತಾ ಇದ್ದೀವಿ.

ಸರಿ, ನೀವು ಪೇಪರ್ ಓದ್ತೀರಾ ಅಂತ ಗೊತ್ತು. ಪೇಪರ್‌ಗಳಲ್ಲಿ ನಿಮ್ಮ ಇಷ್ಟದ ಸೆಕ್ಷನ್ ಯಾವುದು?
-ಹೆಸರು ಬದಲಾವಣೆ

ನೆಟ್ ಪಿಕ್ಸ್
ಖೇಮು ಜಟಕಾ ಗಾಡಿ ಓಡಿಸ್ತಾ ಜೀವನ ಮಾಡ್ತಾ ಇದ್ದ. ಒಂದಿನ ಅವನು ಹೈ ವೇನಲ್ಲಿ ಹೋಗುವಾಗ ಅವನ ಗಾಡಿಗೆ ಕಾರೊಂದು ಬಂದು ಗುದ್ದಿ, ಖೇಮು ಗಂಭೀರವಾಗಿ ಗಾಯಗೊಂಡ, ಅವನ ಜಟಕಾದ ಕುದುರೆ ಸತ್ತು ಹೋಯಿತು. ಖೇಮುಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರಾದ ಮೇಲೆ ಕೋರ್ಟ್‌ಗೆ ಮೊರೆ ಹೋದ. ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಕೂಡ ಸಿಕ್ಕಾಪಟ್ಟೆ ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ ಅಂತ.

ಕೋರ್ಟ್‌ನಲ್ಲಿ ವಿಚಾರಣೆ ಶುರುವಾಯ್ತು. ಕೇಸಿನಲ್ಲಿ ಇನ್‌ವಾಲ್ವ ಆಗಿದ್ದ ಪೊಲೀಸ್ ಇಪೆಕ್ಟರ್ ಕೋರ್ಟಿನಲ್ಲಿ ಬಂದು, ಖೇಮು ಸುಳ್ಳು ಹೇಳ್ತಾ ಇದ್ದಾನೆ. ಆಕ್ಸಿಟೆಂಟ್ ಆಗಿ ಬಿದ್ದಿದ್ದಾಗ ನಾನೇ ಅವನನ್ನು ಹೋಗಿ ಆರ್ ಯೂ ಓಕೆ? ಅಂತ ಕೇಳಿದೆ. ಆಗ ಅವನು ಐ ಆಮ್ -ನ್ ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾ ಇದ್ದಾನೆ ಅಂತ ವಾದಿಸಿದ. ಅದಕ್ಕೆ ಖೇಮು, ಅ ಸಾರ್ ನನ್ನ ಕುದುರೆ… ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ ಪೆಕ್ಟರ್ ಬಾಯ್ ಮುಚ್ಚು ಅಂತ ಬೈತಾ ಇದ್ರು. ಹಾಗಾಗಿ ಖೇಮು ಎಷ್ಟೇ ಕಷ್ಟಪಟ್ಟರೂ ಹೇಳಬೇಕಾದ್ದನ್ನು ಹೇಳೋಕಾಗಲಿಲ್ಲ.

ಆಗ ಅವನ ಪಾಡು ನೋಡಿದ ಜq ಅವನೇನೋ ಹೇಳ್ತಾ ಇದ್ದಾನೆ ಹೇಳೋಕ್ ಬಿಡಿ ಅಂದ್ರು. ಆಗ ಖೇಮು ಹೇಳೋಕ್ ಶುರು ಮಾಡಿದ. ‘ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ. ನಾನು ಬದುಕ್ತೀನಿ ಅನ್ನೋ ನಂಬಿಕೆನೂ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನ ಆರ್ ಯೂ ಓಕೆ? ಅಂತ ಮಾತಾಡಿಸಿದ್ರು. ಅದು ಅಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ವು. ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇಪೆಕ್ಟರ್, ನೀನು ಬದುಕಿದ್ದು ಕಷ್ಟ ಪಡೋಕ್ಕಿಂತ ಸಾಯೋದೇ ಮೇಲು ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು.

ಆ ನಂತರ ನನ್ನತ್ರ ಬಂದು ಆರ್ ಯೂ ಓಕೆ? ಅಂತ ಕೇಳಿದ್ರು. ನೀವೇ ಹೇಳಿ ಮಹಾಸ್ವಾಮಿ ಆ ಸಮಯದಲ್ಲಿ ನನಗೆ ಐ ಆಮ್ ಓಕೆ ಅಂತ ಹೇಳದೆ ಬೇರೆ ಆಪ್ಶನ್ ಇತ್ತಾ?’

ಲೈನ್ ಮ್ಯಾನ್

ಈಶ್ವರಪ್ಪ ವಿರೋಧಿಗಳ ಕುಹಕ -ಎಲೆಕ್ಷನ್ ಪ್ರಚಾರದ ರೆಡಿಮೇಡ್ ವಾಯ್ಸ್ ಮೆಸೇಜ್ ಬಂದಿದ್ದಕ್ಕೆ, ಮೋದಿನೇ ಕಾಲ್
ಮಾಡಿದ್ದಾರೆ ಅಂದ್ಕೊಂಡು, ಈಶ್ವರಪ್ಪ ಅಷ್ಟೊತ್ತು ಮಾತಾಡಿದ್ದಂತೆ, ಹೌದಾ? ಭೂಗೋಳದ ಬಗ್ಗೆ ಹೆಚ್ಚು ತಿಳಿದುಕೊಂಡವ
-‘ಅರ್ಥ್’ಶಾಸ್ತ್ರಜ್ಞ ಶಾಸಕರಿಗೆ ಹಣ ಕೊಟ್ರೆ: ಆಪರೇಷನ್ ಕಮಲ ಪತ್ರಕರ್ತರಿಗೆ ಹಣ ಕೊಟ್ರೆ: ಕೋ-ಆಪರೇಷನ್ ಕಮಲ
ದೇವರ ಹೆಸರು ಬಳಸಿಕೊಂಡು, ದೇವಸ್ಥಾನಗಳನ್ನು ಉದ್ಯಮವನ್ನಾಗಿ ಮಾಡಿಕೊಂಡಿರೋರ ಉದ್ಯೋಗ -‘ಗುಡಿ’ ಕೈಗಾರಿಕೆ

ಪೊಲಿಟಿಕಲ್ ಡೌಟ್

-ದೇಶದ ೧೩೦ ಕೋಟಿ ಜನರ ಪರವಾಗಿ ಕೇಳ್ತಾ ಇದ್ದೀನಿ ಅಂತ ಮಾತಾಡ್ತಾರಲ್ಲ, ಇವ್ರಿಗೆಲ್ಲ ನಮ್ಮನ್ನು ಕೇಳದೇ, ನಮ್ಮ ಪರವಾಗಿ ಮಾತಾಡೋ ಅಽಕಾರ ಕೊಟ್ಟೋರು ಯಾರು?

ಭಾಷಾವಾರು ವಿಂಗಡನೆ
ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸೋ ನಟ- ಚತುರ್ಭಾಷಾ ನಟ
ನಾಲ್ಕು ಜನ ಮೆಚ್ಚುವಂಥ ಕನ್ನಡ ಮಾತಾಡೋ ನಟ-ಚತುರ ಭಾಷಾ ನಟ
ಒಂದೇ ಘಟನೆಯನ್ನು ಮತ್ತೆ ಮತ್ತೆ ತೋರಿಸಿ ಕಿರಿಕಿರಿ ಮಾಡುವ ಟಿವಿ ಚಾನೆಲ್‌ಗಳ
ವರದಿ
-ಘಟ‘ನಾವಳಿ’
‘ವೆಯ್ಟ್ ಲಿಫ್ಟರ್’ ಅಂದ್ರೇನು?
-ತೂಕ ‘ಹೆಚ್ಚಿಸಿಕೊಳ್ಳುವವನು’
ಬಂದರುಗಳಿಗೆ ಇನ್ನೊಂದು ಹೆಸರು
-‘ಹಡಗು’ ದಾಣ
·Nothing is impossible ಅನ್ನೋದಕ್ಕೆ ಉದಾಹರಣೆ
-ಒಂದು ಕಾಲದಲ್ಲಿ ಮೀಸೆ, ಗಡ್ಡ ಬರೋದೇ ಡೌಟು ಅನ್ನುವಷ್ಟು ಅಮುಲ್ ಬೇಬಿ ಥರ ಇದ್ದ ಪಾರ್ಥಿವ್ ಪಟೇಲ್‌ಗೆ ಬಿಳಿ ಗಡ್ಡ ಬಂದಿದೆ ಎಲ್ಲಾ ಪಕ್ಷಗಳ ಹೈ ಕಮ್ಯಾಂಡ್ ಇರೋದು ದಿಲ್ಲಿಯಲ್ಲಿ
-ಆದ್ರೆ ಈ ಬಾರಿ ಐಪಿಎಲ್‌ನಲ್ಲಿ ಮಾತ್ರ ದಿಲ್ಲಿಯದ್ದು ಲೋ ಕಮ್ಯಾಂಡ್