ವಿತ್ತಲೋಕ
ಡಾ.ಆರ್.ಎಚ್.ಪವಿತ್ರ
ಭಾರತದ ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ ೪.೮೩% ರಷ್ಟು ಇದ್ದು, ೧೧ ತಿಂಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ. ಆಹಾರ ಹಣದುಬ್ಬರದಲ್ಲಿ ಏರಿಕೆಯಾಗಿದ್ದರೂ, ಅಗತ್ಯ ಸರಕುಗಳ ಹೆಚ್ಚಿನ ಬೆಲೆಗಳಿಂದಾಗಿ, ಪ್ರಮುಖ ಮತ್ತು ಇಂಧನ ಹಣದುಬ್ಬರದ ಮೃದುತ್ವದಿಂದ ಒಟ್ಟಾರೆ ಹಣದುಬ್ಬರ ಒತ್ತಡ ಕಡಿಮೆಯಾಗಿದೆ.
ಏಪ್ರಿಲ್‌ನಲ್ಲಿ ಮೂಲ ಮತ್ತು ಇಂಧನ ಹಣದುಬ್ಬರ ಕೊಂಚ ಇಳಿದರೂ ಆಹಾರ ಪದಾರ್ಥಗಳ ಹಣದುಬ್ಬರ ಹೆಚ್ಚಳವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಏಪ್ರಿಲ್ ತಿಂಗಳಲ್ಲಿ ಎರಡು ಮೂಲ ಅಂಶಗಳಷ್ಟು ಇಳಿಕೆಯಾಗಿದ್ದು, ೧೧ ತಿಂಗಳ ಕನಿಷ್ಠವಾದ ಶೇ ೪.೮೩ಕ್ಕೆ
ತಲುಪಿದೆ. ಆಹಾರ ಪದಾರ್ಥಗಳ ಹಣದುಬ್ಬರ ಏರಿಕೆ ಕಂಡಿರುವುದರ ನಡುವೆಯೂ ಮೂಲ ಹಣದುಬ್ಬರ ಮತ್ತು ಇಂಧನ ಹಣದುಬ್ಬರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಚಿಲ್ಲರೆ ಹಣದುಬ್ಬರದ ಕುಸಿತಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿನ ಅಂಕಿ ಅಂಶಗಳು, ಮಾರ್ಚ್ ತಿಂಗಳಲ್ಲಿ ಶೇ ೮.೫೨ರಷ್ಟಿದ್ದ ಆಹಾರ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ ೮.೭ಕ್ಕೆ ಏರಿಕೆಯಾಗಿರುವುದನ್ನು ತೋರಿಸಿವೆ. ಆಹಾರ ಪದಾರ್ಥಗಳಾದ ಹಣ್ಣುಗಳು (ಶೇ ೫.೨೨), ಎಣ್ಣೆ (ಶೇ ೯.೪೩), ಏಕದಳ ಧಾನ್ಯಗಳು (ಶೇ ೮.೬೩), ಪ್ರೊಟೀನ್ ಅಂಶಗಳು ಹೆಚ್ಚಿರುವ ಮಾಂಸ ಮತ್ತು ಮೀನಿನಂತಹ ಪದಾರ್ಥಗಳ (ಶೇ ೮.೧೭) ಬೆಲೆಯಲ್ಲಿ ಏರಿಕೆ ಕಂಡು ಬಂದಿರುವುದರಿಂದ ಆಹಾರ ಪದಾರ್ಥಗಳ ಹಣದುಬ್ಬರ ಜಾಸ್ತಿಯಾಗಿದೆ.
ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಲ್ಲಿ ತರಕಾರಿಗಳು (ಶೇ ೨೭.೮) ಮತ್ತು ಬೇಳೆಕಾಳುಗಳ (ಶೇ ೧೬.೮೪) ಧಾರಣೆ ಇಳಿದಿದ್ದರೂ, ಆಹಾರ ಹಣದುಬ್ಬರ ಎರಡು ಅಂಕಿಗಳಷ್ಟು ಹೆಚ್ಚಾಗಿದೆ. ‘೨೦೨೩ರ ಡಿಸೆಂಬರ್‌ನಲ್ಲಿ ಆರಂಭವಾದ ಚಿಲ್ಲರೆ ಹಣದುಬ್ಬರ ಇಳಿಮುಖ ಪ್ರವೃತ್ತಿಯು ಏಪ್ರಿಲ್ ತಿಂಗಳಲ್ಲೂ ಮುಂದುವರಿದಿದೆ. ಹಣದುಬ್ಬರವು ಶೇ ೫ಕ್ಕಿಂತ ಕಡಿಮೆ ಇರುವ ಸಂದರ್ಭದಲ್ಲಿ ಸತತ ಎರಡನೇ ತಿಂಗಳೂ ಹಣದುಬ್ಬರ ಇಳಿಕೆಯಾಗಿದೆ’ ಎಂದು ಇಐ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ.ಶ್ರೀವಾಸ್ತವ ಹೇಳಿದ್ದಾರೆ.
‘ಆಹಾರ ಹಣದುಬ್ಬರವು ಸ್ವಲ್ಪ ಜಾಸ್ತಿ, ಅಂದರೆ ಶೇ.೮.೭ರಷ್ಟಿದ್ದರೂ, ಇಂಧನ ಸೇರಿದಂತೆ ಪೆಟ್ರೋಲಿಯಂಗೆ ಸಂಬಂಧಿಸಿದ ಇಂಧನದಂತಹ ಉತ್ಪನ್ನಗಳು, ಸಾಗಣೆ ಮತ್ತು ದೂರಸಂಪರ್ಕ ಸೇವೆಗಳು ಚಿಲ್ಲರೆ ಹಣದುಬ್ಬರ ಇಳಿಕೆಯಾಗುವಂತಹ ಒತ್ತಡವನ್ನು ಸೃಷ್ಟಿಸಿವೆ. ಮೂಲ ಹಣದುಬ್ಬರ ಕೂಡ ಇಳಿಕೆಯಾಗಿದ್ದು, ಶೇ ೩.೨ರಷ್ಟಿದೆ. ೨೦೧೨ರ ಮೂಲಕ ಗ್ರಾಹಕ ಬೆಲೆ ಸೂಚ್ಯಂಕ ಸರಣಿಯಲ್ಲಿ ಇದು ಕನಿಷ್ಟ ಮಟ್ಟದ ಹಣದುಬ್ಬರವಾಗಿದೆ. ಒಂದು ವೇಳೆ ಇದೇ ಪ್ರವೃತ್ತಿ ಮುಂದುವರಿದಿದ್ದೇ ಆದರೆ, ೨೦೨೫ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವು ಆರ್‌ಬಿಐ ಅಂದಾಜಿಸಿರುವ ಶೇ ೪.೯ಕ್ಕಿಂತ ಸ್ವಲ್ಪ ಕಡಿಮೆ ಇರಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಬಿಸಿ ಗಾಳಿಯ ಪರಿಣಾಮವು ಮೇ ತಿಂಗಳಲ್ಲಿ ತರಕಾರಿಗಳ ಬೆಲೆಯನ್ನು ಹೆಚ್ಚಿಸಲಿವೆ. ಜೊತೆಗೆ ಮುಂದಿನ ಬೆಳೆಯ ಅವಧಿಯವರೆಗೂ ಧಾನ್ಯಗಳು ಮತ್ತು
ಬೇಳೆಕಾಳುಗಳ ಧಾರಣೆ ಏರುಮುಖವಾಗಿಯೇ ಇರಲಿದೆ’ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ಹೇಳಿzರೆ.
‘ಗ್ರಾಹಕ ಉತ್ಪನ್ನಗಳ ವಲಯವು ವರ್ಷದಿಂದ ಉತ್ಪನ್ನಗಳ ಬೆಲೆಯನ್ನು ಜಾಸ್ತಿ ಮಾಡಿರಲಿಲ್ಲ. ಈಗ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿರುವುದರಿಂದ ಇದುವರೆಗೂ ನಿಯಂತ್ರಣದಲ್ಲಿರುವ ಮೂಲ ಹಣದುಬ್ಬರದಲ್ಲಿ ಏರಿಕೆ ಕಂಡು ಬರಲೂಬಹುದು. ಶಾಲಾ ಕಾಲೇಜುಗಳ ಬೋಧನಾ ಶುಲ್ಕ ಮತ್ತು ಆಸ್ಪತ್ರೆ ಶುಲ್ಕಗಳು ಹೆಚ್ಚಾಗಿದ್ದು, ಇದರ ಮೂಲ ಪರಿಣಾಮವಾಗಿ ಶಿಕ್ಷಣ ಮತ್ತು ಆರೋಗ್ಯ ಹಣದುಬ್ಬರ ಕಡಿಮೆಯಾಗಿದೆ. ಔಷಧಿಯ ಉತ್ಪನ್ನಗಳ ವಿಚಾರದಲ್ಲೂ ಇದೇ ರೀತಿಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಕೇರ್’ (ಇಅಉ)ರೇಟಿಂಗ್ಸ್‌ನ ಮುಖ್ಯ ಆರ್ಥಿಕ ತಜ್ಞರಾದ ರಜನಿ ಸಿನ್ಹಾ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
‘ಆಹಾರ ಹಣದುಬ್ಬರ ಏರಿಕೆಯಾಗಿರುವುದು ಮಾತ್ರವಲ್ಲದೆ, ಜಾಗತಿಕ ಸರಕುಗಳ ಬೆಲೆಗಳಲ್ಲಿ ಆಗುತ್ತಿರುವ ಹೆಚ್ಚಳ ಕೂಡ ಹಣದುಬ್ಬರ ಏರುವ ಅಪಾಯವನ್ನು ಸೃಷ್ಟಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೈಗಾರಿಕಾ ಲೋಹಗಳ ಬೆಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇ ೨೦ರಷ್ಟು ಹೆಚ್ಚಾಗಿದೆ’ ಎಂದು ಅವರು ಹೇಳಿದ್ದಾರೆ.
ಮೂಲ ಹಣದುಬ್ಬರವೂ ಇಳಿಕೆ
ಆಹಾರ ಮತ್ತು ಇಂಧನಗಳನ್ನು ಹೊರತಾದ ಮೂಲ ಹಣದುಬ್ಬರವು ಏಪ್ರಿಲ್‌ನಲ್ಲೂ ಶೇ ೩ಕ್ಕಿಂತ ಕಡಿಮೆ ದಾಖಲಾಗಿದೆ. ಬಟ್ಟೆ, ಪಾದರಕ್ಷೆಗಳು (ಶೇ.೨.೮೫), ಗೃಹ (ಶೇ.೨.೬೮), ಮನೋರಂಜನೆ (ಶೇ.೨.೬೪) ಶಿಕ್ಷಣ (ಶೇ.೪.೨), ಆರೋಗ್ಯ (ಶೇ.೪.೩) ಮತ್ತು ಸಾಗಣೆಯಂತಹ (ಶೇ.೧.೦೯) ಸೇವೆಗಳ
ಬೆಲೆ ಏಪ್ರಿಲ್ ತಿಂಗಳಲ್ಲಿ ಕಡಿಮೆಯಾಗಿರುವುದು ಒಟ್ಟಾರೆ ಹಣದುಬ್ಬರವನ್ನು ಕಡಿಮೆಯಾಗುವಂತೆ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಸತತ ಏಳನೇ ಬಾರಿಯೂ ರೆಪೊ ದರ ಶೇ.೬.೫ರಷ್ಟಲ್ಲಿ ಬದಲಾವಣೆ ಮಾಡದೆ, ಯಥಾಸ್ಥಿತಿ ಕಾಯ್ದುಕೊಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣದುಬ್ಬರದ ದರ ಶೇ ೪.೫ರಷ್ಟು ಇರಲಿದೆ ಎಂದು ಅದು ಅಂದಾಜಿಸಿದೆ.
ಅಂತಿಮವಾಗಿ, ಭಾರತದ ಚಿಲ್ಲರೆ ಹಣದುಬ್ಬರ ಏಪ್ರಿಲ್ ನಲ್ಲಿ ೪.೮೩% ರಷ್ಟು ಇದ್ದು, ೧೧ ತಿಂಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ. ಆಹಾರ ಹಣದುಬ್ಬರದಲ್ಲಿ ಏರಿಕೆಯಾಗಿದ್ದರೂ, ಅಗತ್ಯ ಸರಕುಗಳ ಹೆಚ್ಚಿನ ಬೆಲೆಗಳಿಂದಾಗಿ, ಪ್ರಮುಖ ಮತ್ತು ಇಂಧನ ಹಣದುಬ್ಬರದ ಮೃದುತ್ವದಿಂದ ಒಟ್ಟಾರೆ
ಹಣದುಬ್ಬರ ಒತ್ತಡ ಕಡಿಮೆಯಾಗಿದೆ. ಆರ್ಥಿಕ ತಜ್ಞರ ಪ್ರಕಾರ, ಹಣದುಬ್ಬರವು ಸ್ಥಿರವಾಗಿದ್ದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ೪.೯% ಗಿಂತ ಕಡಿಮೆಯಾಗಬಹುದು.
ಆದಾಗ್ಯೂ, ಶಾಖದ ಮಾರುತಗಳ ಪರಿಣಾಮ ಬೀರುವ ತರಕಾರಿ ಬೆಲೆ ಮತ್ತು ಜಾಗತಿಕ ಸರಕು ಬೆಲೆ ಈ ಸಮತೋಲನದ ಸೂಕ್ಷ್ಮತೆಯನ್ನು ಒತ್ತಿಹೇಳುತ್ತದೆ.
ಆರ್ ಬಿಐನ ಸ್ಥಿರ ನೀತಿ ದರ ಮತ್ತು ವಸತಿ ನಿಲುವಿನೊಂದಿಗೆ, ಹಣದುಬ್ಬರದ ಅಪಾಯಗಳ ವಿರುದ್ಧ ಎಚ್ಚರಿಕೆಯ ಆಶಾವಾದವನ್ನು ಪ್ರತಿಬಿಂಬಿಸುತ್ತದೆ. ಭಾರತವು ಈ ಆರ್ಥಿಕ ಪ್ರವಾಹಗಳನ್ನು ನವೀಕರಿಸಿರುವುದರಿಂದ, ಪ್ರಮುಖ ಹಣದುಬ್ಬರದಲ್ಲಿ ಸರಾಗಗೊಳಿಸುವ ಪ್ರವೃತ್ತಿ ಮುಂದುವರೆದಿದೆ, ಆರ್ಥಿಕ ಚೇತರಿಕೆ ಮತ್ತು ಬೆಳವಣಿಗೆಗೆ ಸ್ಥಿರವಾದ ಮತ್ತು ಅನುಕೂಲಕರ ವಾತಾವರಣವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರಂತರ ಜಾಗರೂಕತೆ ಮುಖ್ಯವಾಗಿದೆ.
(ಲೇಖಕರು: ಅರ್ಥಶಾಸ್ತ್ರ ಪ್ರಾಧ್ಯಾಪಕರು)