Sunday, 15th December 2024

ಇನ್‌ ಫ್ಲೂಯೆಂಜಾ ಮಾರಿಯ ರೋಚಕ ಇತಿಹಾಸ

ವೈದ್ಯ ವೈವಿಧ್ಯ

drhsmohan@gmail.com

೧೯೧೮ರಿಂದ ೧೯೨೦ರವರೆಗೆ ಕಂಡುಬಂದ ಸ್ಪ್ಯಾನಿಷ್ ಫ್ಲೂ, ಇದುವರೆಗೆ ಜಗತ್ತನ್ನು ಕಾಡಿದ ಅಪಾಯಕಾರಿ ಸಾಂಕ್ರಾ ಮಿಕ. ಬಹುಶಃ ಎಚ್೧ ಎನ್೧ ವೈರಸ್‌ನಿಂದ ಆದ ಈ ಸಾಂಕ್ರಾಮಿಕವು ಅಮೆರಿಕದಲ್ಲಿ ಆರಂಭವಾಗಿ ಮೊದಲ ಮಹಾಯುದ್ಧದ ನಿಮಿತ್ತ ಸೈನಿಕರ ಸಂಚಾರದ ಕಾರಣದಿಂದ ಇಡೀ ಜಗತ್ತನ್ನೇ ಆವರಿಸಿತು.

ನಮಗೆ ಅತಿ ಸಾಮಾನ್ಯವಾಗಿ ಬರುವ ಕಾಯಿಲೆ ಎಂದರೆ – ಅಥವಾ ಇನ್ ಫ್ಲುಯೆಂಜಾ. ಇದು ಅದೇ ಹೆಸರಿನ ವೈರಸ್‌ನಿಂದ ಬರುವ ಕಾಯಿಲೆ. ಈ ವೈರಸ್ ಮನುಷ್ಯನಲ್ಲಿ ಮೊಟ್ಟಮೊದಲ ಬಾರಿಗೆ ಯಾವಾಗ ಕಾಯಿಲೆ ಉಂಟುಮಾಡಿತು ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ಹಾಗೆಯೇ ಮೊಟ್ಟಮೊದಲ – ಸಾಂಕ್ರಾಮಿಕ ಯಾವಾಗ ಆಯಿತು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಆದರೆ ಈಗಿನ ಲಭ್ಯ ಮಾಹಿತಿಯ ಪ್ರಕಾರ ಮೊದಲ ಇನ್ ಫ್ಲುಯೆಂಜಾ ಸಾಂಕ್ರಾಮಿಕ ಕ್ರಿ.ಪೂ. ೬೦೦೦ದ ಹೊತ್ತಿಗೆ ಚೀನಾದಲ್ಲಿ ಕಂಡುಬಂತು. ಕ್ರಿ.ಪೂ. ೫ನೇ ಶತಮಾನದ ಗ್ರೀಕ್ ಬರಹಗಳಲ್ಲಿ – ಕಾಯಿಲೆ ಬಗ್ಗೆ ಮಾಹಿತಿ ದೊರಕಿದೆ. ಕ್ರಿ.ಶ. ೧೧೭೩-೭೪ ಮತ್ತು ೧೩೮೭ ಈ ವರ್ಷಗಳಲ್ಲಿ ಯುರೋಪ್‌ನಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕಕ್ಕೆ ಇನ್ ಫ್ಲುಯೆಂಜಾ ಎಂದು ಹೆಸರಿಟ್ಟಿದ್ದರೂ ಅವು ಇನ್-ಯೆಂಜಾ ವೈರಸ್‌ನಿಂದಲೇ ಉಂಟಾಗಿದ್ದಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಏಕೆಂದರೆ ವೈರಸ್‌ಗಳನ್ನು ನಿಖರವಾಗಿ ಗುರುತಿಸುವ ಮತ್ತು ಹೆಸರಿಸುವ ವ್ಯವಸ್ಥೆ ಆಗ ಸರಿಯಾಗಿ ನಿರ್ಧಾರವಾಗಿರಲಿಲ್ಲ. ಈ ಇನ್ ಪ್ಲೂಯೆಂಜಾ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಎಂಬ ಸ್ಪಷ್ಟವಾದ ಚಿತ್ರಣವಿರಲಿಲ್ಲ. ಅದರ ನಂತರದ ಶತಮಾನಗಳಲ್ಲಿ ಆ ಬಗ್ಗೆ ಸ್ಪಷ್ಟತೆ ದೊರಕಿದೆ. ಅಮೆರಿಕ ಖಂಡಕ್ಕೆ ೧೪೯೩ರ ಹೊತ್ತಿಗೆ ಬಂದ ಇನ್ ಫ್ಲುಯೆಂಜಾ ಕಾಯಿಲೆ, ಆಗ ಬಹಳಷ್ಟು ಜನರನ್ನು ಬಲಿ ತೆಗೆದುಕೊಂಡಿತು. ಸರಿಯಾಗಿ ದಾಖಲಾದ ಮೊಟ್ಟಮೊದಲ ಇನ್ ಫ್ಲುಯೆಂಜಾ ಸಾಂಕ್ರಾಮಿಕ ೧೫೧೦ರಲ್ಲಿ ಕಾಣಿಸಿಕೊಂಡಿತು. ಅದು ಪೂರ್ವ ಏಷ್ಯಾದಲ್ಲಿ ಆರಂಭವಾಗಿ ಉತ್ತರ ಆಫ್ರಿಕಾ ಮತ್ತು ಯುರೋಪಿಗೆ ಹರಡಿತು.

ಇದರ ನಂತರ ೧೫೫೭ ಮತ್ತು ೧೫೮೦ರಲ್ಲಿ ಕಂಡುಬಂದಿತು. ೧೫೫೭ರ – ಸಾಂಕ್ರಾಮಿಕವು ಗರ್ಭಿಣಿ ಸೀಯರಲ್ಲಿ ಗರ್ಭಸ್ರಾವ
ಮತ್ತು ಗರ್ಭಪಾತದೊಂದಿಗೆ ಮೊಟ್ಟಮೊದಲ ಬಾರಿಗೆ ಕಂಡುಬಂದಿತು. ೧೫೮೦ರ – ಸಾಂಕ್ರಾಮಿಕ ಬೇಸಿಗೆಯಲ್ಲಿ ಏಷ್ಯಾದಲ್ಲಿ ಆರಂಭವಾಗಿ ಆಫ್ರಿಕಾಕ್ಕೆ ಹರಡಿ ನಂತರ ಯುರೋಪ್‌ಗೂ ಹಬ್ಬಿತು. ೧೬ನೇ ಶತಮಾನದ ಕೊನೆಯ ಹೊತ್ತಿಗೆ ಈ ಕಾಯಿಲೆಯ
ಬಗ್ಗೆ ಸ್ಪಷ್ಟ ತಿಳಿವಳಿಕೆ ಬಂದಿತು. ಇದು ಸಾಂಕ್ರಾಮಿಕ ವಾಗಿಯೂ ಹರಡಬಲ್ಲದು, ಜನಾಂಗದಲ್ಲಿ ಎಂಡಮಿಕ್ ರೂಪದಲ್ಲಿಯೂ ಇರಬಲ್ಲದು ಎಂಬ ಸ್ಪಷ್ಟತೆ ಆಗ ಬರತೊಡಗಿತು. ೧೬೪೮ರ ಹೊತ್ತಿಗೆ ಕುದುರೆ ಗಳಿಗೂ ಈ ಕಾಯಿಲೆ ಬರುತ್ತದೆ ಎಂದು
ಗೊತ್ತಾಯಿತು.

೧೭೦೦ರ ನಂತರ ಈ ಕಾಯಿಲೆಯ ಮಾಹಿತಿ ಸ್ಪಷ್ಟವಾಗಿ ದೊರಕಿದೆ. ಹಾಗಾಗಿ ಇದರ ಬಗ್ಗೆ ನಮಗೆ ಸರಿಯಾಗಿ ಅರ್ಥವಾಗುತ್ತಾ ಹೋಯಿತು. ೧೮ನೇ ಶತಮಾನದ – ಸಾಂಕ್ರಾಮಿಕ ೧೭೨೯ರಲ್ಲಿ ರಷ್ಯಾದಲ್ಲಿ ಆರಂಭವಾಯಿತು. ನಂತರದ ೩ ವರ್ಷಗಳಲ್ಲಿ
ಇದು ಜಗತ್ತಿನಾದ್ಯಂತ ಒಂದು ಅಲೆಯ ರೀತಿಯಲ್ಲಿ ಹರಡಿತು. ನಂತರದ ಅಲೆ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ೧೮ನೇ ಶತಮಾನದ ೨ನೇ ಸಾಂಕ್ರಾಮಿಕ ೧೭೮೧- ೮೨ರಲ್ಲಿ ಚೀನಾದಲ್ಲಿ ಆರಂಭ ಗೊಂಡಿತು. ಇದರ ನಂತರ – ಕಾಯಿಲೆಯಲ್ಲಿ ಒಮ್ಮೆಲೇ ವಿಪರೀತ ಜ್ವರ ಕಾಣಿಸಿಕೊಳ್ಳುವ ಲಕ್ಷಣ ಆರಂಭವಾಯಿತು.

ನಂತರದ ಸಾಂಕ್ರಾಮಿಕ ೧೮೩೦-೩೩ರ ಮಧ್ಯೆ ಕಾಣಿಸಿಕೊಂಡಿತು. ಇದು ಆರಂಭವಾದದ್ದು ಚೀನಾದಲ್ಲಿ. ಈ ಸಾಂಕ್ರಾಮಿಕವು
ಹೆಚ್ಚು ಜನರನ್ನು ತೀವ್ರ ಅಸ್ವಸ್ಥಗೊಳಿಸಿದರೂ ಮರಣ ಹೊಂದಿದವರ ಸಂಖ್ಯೆ ಕಡಿಮೆಯಿತ್ತು ಎಂಬುದು ಸಮಾಧಾನದ ಅಂಶ.
೧೯೪೭-೧೯೫೧ರ ಸಮಯದಲ್ಲಿ ಒಂದು ಸಣ್ಣ – ಸಾಂಕ್ರಾಮಿಕ ಕಾಣಿಸಿಕೊಂಡಿತು. ಇದೇ ಅವಧಿಯಲ್ಲಿ ೩ನೇ ಕಾಲರಾ ಸಾಂಕ್ರಾಮಿಕ ಕಂಡುಬಂತು.

ಈ – ಸಾಂಕ್ರಾಮಿಕದಲ್ಲಿ ಕಾಯಿಲೆ ಬಂದವರ ಅಂಕಿ-ಸಂಖ್ಯೆಗಳನ್ನು ನಿಖರವಾಗಿ ದಾಖಲಿಸಿಕೊಳ್ಳಲಾಯಿತು. ಹಾಗಾಗಿ ಸಾಂಕ್ರಾಮಿಕದಿಂದ ಮಡಿದವರ ಸಂಖ್ಯೆ ಸ್ಪಷ್ಟವಾಗಿ ಗೊತ್ತಾಯಿತು. ೧೮೭೮ರಲ್ಲಿ ಬಹಳ ಗಂಭೀರವಾದ ಏವಿಯನ್ ಇನ್
-ಯೆಂಜಾ ಕಂಡುಬಂದು ಅದು ಮನುಷ್ಯರಿಗೂ ಹರಡತೊಡಗಿತು. ೧೮೮೯ರಲ್ಲಿ ಕಂಡುಬಂದ – ಸಾಂಕ್ರಾಮಿಕವು ಎಚ್೨ ಎನ್೨ ವೈರಸ್‌ನಿಂದ ಬಂದ ಬಗ್ಗೆ ಗೊತ್ತಾಯಿತು.

ಅರ್.ಎಫ್.ಜೆ ಫೈಜರ್ ಅವರು ೧೮೯೨ರಲ್ಲಿ, -ಗೆ ಕಾರಣವಾಗುವ ಸೂಕ್ಷ್ಮಜೀವಿಯು ‘ಹಿಮೋ ಫಿಲಸ್ ಇನ್ ಫ್ಲುಯೆನ್ಜೆ’ ಎಂಬ ಬ್ಯಾಕ್ಟೀರಿಯಾ ಎಂದು ತಪ್ಪಾಗಿ ಗುರುತಿಸಿದರು. ಅದರ ನಂತರದ ವರ್ಷಗಳಲ್ಲಿ ವೈರಾಲಜಿ ವಿಭಾಗ ಬೆಳವಣಿಗೆ ಹೊಂದ ತೊಡಗಿ, ಕಾಯಿಲೆ ಉಂಟುಮಾಡುವ ಹಲವು ವೈರಸ್‌ಗಳು ಗುರುತು ಹಚ್ಚಲ್ಪಟ್ಟವು. ೧೯೦೧- ೧೯೦೩ರ ಮಧ್ಯೆ ಇಟಲಿ ಮತ್ತು ಆಸ್ಟ್ರಿಯಾದ
ಸಂಶೋಧಕರು, ಏವಿಯನ್ ಇನ್ ಫ್ಲುಯೆಂಜಾ (ಹಕ್ಕಿ ಜ್ವರ) ಕಾಯಿಲೆಯು ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದಾದ ಸೂಕ್ಷ್ಮಜೀವಿ ಗಳಿಂದ ಉಂಟಾಗವ ಕಾಯಿಲೆ ಎಂದು ತೋರಿಸಿಕೊಟ್ಟರು. ಅವರು ಸಣ್ಣ ರಂಧ್ರಗಳನ್ನು ಉಪಯೋಗಿಸಿ, ಅದರಲ್ಲಿ ಬ್ಯಾಕ್ಟೀರಿ
ಯಾಗಳು ನುಸುಳಲು ಸಾಧ್ಯವಾಗುವುದಿಲ್ಲ ಎಂದು ತೋರಿಸಿಕೊಟ್ಟರು.

ಆದರೆ ವೈರಸ್‌ಗಳು ಹಾದು ಹೋಗುತ್ತಿದ್ದವು. ಆದರೂ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ನಡುವಣ ಸ್ಪಷ್ಟವಾದ ವ್ಯತ್ಯಾಸ
ವಿಜ್ಞಾನಿಗಳ ಅರಿವಿಗೆ ಬಂದಿರಲಿಲ್ಲ. ೧೯೧೮ರಿಂದ ೧೯೨೦ರವರೆಗೆ ಕಂಡುಬಂದ ಸ್ಪ್ಯಾನಿಷ್ -, ಇದುವರೆಗೆ ಜಗತ್ತನ್ನು ಕಾಡಿದ
ತುಂಬಾ ಅಪಾಯಕಾರಿ ಸಾಂಕ್ರಾಮಿಕ ಎಂದು ಹೇಳಲಾಗಿದೆ. ಬಹುಶಃ ಎಚ್೧ ಎನ್೧ ವೈರಸ್‌ನಿಂದ ಆದ ಈ ಸಾಂಕ್ರಾಮಿಕವು ಅಮೆರಿಕದಲ್ಲಿ ಆರಂಭವಾಗಿ ಮೊದಲ ಜಾಗತಿಕ ಮಹಾಯುದ್ಧದ ನಿಮಿತ್ತ ಸೈನಿಕರ ಸಂಚಾರದ ಕಾರಣದಿಂದ ಇಡೀ ಜಗತ್ತನ್ನೇ
ಆವರಿಸಿತು. ೧೯೧೮ರಲ್ಲಿ ಆರಂಭವಾದ ಮೊದಲ ಅಲೆ ಅಷ್ಟು ಅಪಾಯಕಾರಿಯಾಗಿರಲಿಲ್ಲ.

ಅದು ಹಿಂದಿನ – ಸಾಂಕ್ರಾಮಿಕಗಳ ರೀತಿಯಲ್ಲೇ ಇತ್ತು. ಅದೇ ವರ್ಷದ ನಂತರದ ದಿನಗಳಲ್ಲಿ ಕಾಡಿದ ಮುಂದಿನ ಅಲೆಯು ತೀವ್ರವಾಗಿದ್ದು ಹೆಚ್ಚು ಜನರ ಮರಣಕ್ಕೆ ಕಾರಣವಾಯಿತು. ೨ನೇ ಅಲೆಯ ನಂತರ ಕಡಿಮೆ ಜನರ ಮರಣಕ್ಕೆ ಕಾರಣವಾದ ೩ನೇ ಅಲೆ ಜಗತ್ತಿನ ಕೆಲವೇ ಭಾಗಗಳಲ್ಲಿ ಕಂಡುಬಂದಿತು. ೧೯೨೦ರ ಕೊನೆಯ ಹೊತ್ತಿಗೆ ಜಗತ್ತಿನ ಅರ್ಧದಷ್ಟು ಅಥವಾ ೧/೩ ಭಾಗದಷ್ಟು ಜನರು ಈ ಸಾಂಕ್ರಾಮಿಕಕ್ಕೆ ತುತ್ತಾಗಿದ್ದು ಮಿಲಿಯನ್‌ಗಟ್ಟಲೆ ಜನರ ಮರಣಕ್ಕೆ ಅದರಲ್ಲೂ ಹದಿಹರೆಯದ ಯುವಕರ ಮರಣಕ್ಕೆ ಕಾರಣವಾಯಿತು ಎಂಬುದು ಖೇದಕರ ವಿಚಾರ.

೧೯೧೮ರ ಈ ಸಾಂಕ್ರಾಮಿಕದಲ್ಲಿ ಕಾಯಿಲೆ ಹರಡಿದ್ದು ಶ್ವಾಸಕೋಶದ ಅಂಗಗಳಿಂದಲೇ ಎಂಬುದು ಸಾಬೀತಾಯಿತು. ಈ ಸಾಂಕ್ರಾಮಿಕದ ನಂತರ ಎಚ್೧ ಎನ್೧ ವೈರಸ್ ಮನುಷ್ಯರಲ್ಲಿ ಹರಿದಾಡ ತೊಡಗಿತು. ಆಗಾಗ ಸೀಸನಲ್ ರೀತಿಯಲ್ಲಿ ಕಾಣಿಸಿ
ಕೊಳ್ಳುತ್ತಿತ್ತೇ ಹೊರತು ಸಾಂಕ್ರಾಮಿಕದ ರೀತಿ ಅಲ್ಲ. ೧೯೩೧ರಲ್ಲಿ ರಿಚರ್ಡ್ ಶೋಪ್ ಎಂಬ ವಿಜ್ಞಾನಿ ಹಂದಿಜ್ವರದ (ಖಡಿಜ್ಞಿಛಿ ಜ್ಞ್ಛ್ಝ್ಠಿಛ್ಞ್ಢಿZ) ವೈರಸ್ ಅನ್ನು ಗುರುತಿಸಿ ೩ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು. ಇವು ೧೯೧೮ರ ಎರಡನೇ ಅಲೆಯಲ್ಲಿ
ಕಾಣಿಸಿಕೊಂಡ ಸಾಂಕ್ರಾಮಿಕದ ವೈರಸ್‌ಗಳ ಕುರಿತಾಗಿದ್ದವು. ಈ ಸಂಶೋಧನೆಯ ನಂತರ ಇನ್ ಫ್ಲುಯೆಂಜಾ, ವೈರಾಲಜಿಯ ಹೊಸ ವಿಚಾರಗಳು, ಸೀರಾಲಜಿ, ಇಮ್ಯುನಾಲಜಿ, ಪ್ರಾಯೋಗಿಕ ಪ್ರಾಣಿಯ ಮಾಡೆಲ್‌ಗಳು, ವ್ಯಾಕ್ಸಿನಾಲಜಿ, ಇಮ್ಯುನೋಥೆರಪಿ ವಿಭಾಗಗಳು ಹೆಚ್ಚು ಮಹತ್ವ ಪಡೆದವು, ವಿಜ್ಞಾನಿಗಳ ಆಸಕ್ತಿ ಹೆಚ್ಚಿಸಿದವು.

೧೯೩೩ ರಲ್ಲಿ, ಮಾನವ ಇನ್ ಫ್ಲುಯೆಂಜಾ ಕಾಯಿಲೆಗೆ ಐಎವಿ ವೈರಸ್ ಕಾರಣ ಎಂದು ಪತ್ತೆಹಚ್ಚಲಾಯಿತು. ೧೯೩೦ರ ದಶಕದಲ್ಲಿ ಈ ಐಎವಿ ಸಬ್‌ಟೈಪ್‌ಗಳು ಪತ್ತೆ ಹಚ್ಚಲ್ಪಟ್ಟವು. ೧೯೪೦ರಲ್ಲಿ ಐಬಿವಿ ತಳಿ ಗುರುತು ಹಚ್ಚಲ್ಪಟ್ಟಿತು. ೨ನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ಸರಕಾರವು – ವೈರಸ್‌ಗೆ ವ್ಯಾಕ್ಸಿನ್ ಹುಡುಕಾಟದಲ್ಲಿ ತೊಡಗಿತು. ೧೯೪೫ರಲ್ಲಿ ಮೊಟ್ಟಮೊದಲ ಇನ್
ಫ್ಲುಯೆಂಜಾ ವ್ಯಾಕ್ಸಿನ್‌ಗೆ ಅಮೆರಿಕದಲ್ಲಿ ಲೈಸೆನ್ಸ್ ಕೊಡಲಾಯಿತು. ೧೯೪೭ರಲ್ಲಿ ಐಸಿವಿ ತಳಿ ಗುರುತಿಸಲಾಯಿತು. ೧೯೫೫ರಲ್ಲಿ ಹಕ್ಕಿಜ್ವರವು ಐಎವಿ ವೈರಸ್ ನಿಂದ ಬರುತ್ತದೆ ಎಂದು ಸಾಬೀತಾಯಿತು. ೨ನೇ ಮಹಾಯುದ್ಧದ ನಂತರ ೪ – ಸಾಂಕ್ರಾಮಿಕಗಳು
ಕಂಡುಬಂದವು. ಅವೆಲ್ಲವೂ ೧೯೧೮ರ ಸಾಂಕ್ರಾಮಿಕ ಕ್ಕಿಂತ ತುಂಬಾ ಕಡಿಮೆ ಪ್ರಮಾಣದವು.

ಮೊದಲನೆಯದು ೧೯೫೭-೫೮ರ ಎಚ್೨ ಎನ್೨ ಇಂದ ಉಂಟಾದ ಏಷ್ಯನ್ -, ಇದು ಚೀನಾದ ಯುನಾನ್ ಪ್ರಾಂತದಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ೧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಮರಣ ಹೊಂದಿದರು. ಮುಖ್ಯವಾಗಿ ಕಡಿಮೆ ವಯಸ್ಸಿ ನವರು ಮತ್ತು ಹೆಚ್ಚು ವಯಸ್ಸಾದವರು. ೧೯೬೬ರಲ್ಲಿ ಇನ್ ಫ್ಲುಯೆಂಜಾ ವಿರುದ್ಧ ಮೊದಲ ಆಂಟಿವೈರಲ್ ಔಷಧ ಅಮಂಟ ಡೀನ್ ಅನ್ನು ಚಿಕಿತ್ಸೆಗೆ ಒಪ್ಪಲಾಯಿತು. ೧೯೯೦ರ ನಂತರ ವೈರಸ್ ವಿರುದ್ಧದ ಹಲವು ಔಷಧಗಳು ಬಳಕೆಗೆ ಬಂದವು. ೧೯೬೮ ರಲ್ಲಿ ಮೊಟ್ಟಮೊದಲ ಬಾರಿಗೆ ಎಚ್೩ ಎನ್೨ ರೀತಿಯ ವೈರಸ್ ಕಂಡುಬಂದಿತು.

ಇದು ಅಲ್ಲಿಯವರೆಗೆ ಇದ್ದ ಏವಿಯನ್ ಎಚ್೩ ಎನ್೨ ತಳಿ ಹಾಗೂ ಎಚ್೨ ಎನ್೨ ತಳಿಯ ಮಿಶ್ರಣ ಎನ್ನಲಾಗಿದೆ. ಇದು ಹಾಂಗ್‌ ಕಾಂಗ್‌ನಲ್ಲಿ ಆರಂಭವಾಗಿ ಜಗತ್ತಿನಾದ್ಯಂತ ಹರಡಿತು. ಈ ಹಾಂಗ್‌ಕಾಂಗ್ – ಸಾಂಕ್ರಾಮಿಕ ೫೦೦,೦೦೦-೨೦,೦೦,೦೦೦ ಜನರ ಮರಣಕ್ಕೆ ಕಾರಣವಾಯಿತು. ಇದು ವಿಮಾನದ ಹಾರಾಟದ ಮೂಲಕ ಜಗತ್ತಿನಾದ್ಯಂತ ಹರಡಿದ ಮೊಟ್ಟಮೊದಲ ಸಾಂಕ್ರಾಮಿಕ. ೧೯೭೭ರಲ್ಲಿ ಮನುಷ್ಯರಲ್ಲಿ ಪುನಃ ಎಚ್೧ ಎನ್೧ ಕಂಡುಬಂದಿತು.

ಲ್ಯಾಬ್‌ನ ಫ್ರಿಜ್‌ನಿಂದ ಅಕಸ್ಮಾತ್ತಾಗಿ ಹೊರಬಂದ ವೈರಸ್‌ನಿಂದ ಉಂಟಾದ ಈ ಸಾಂಕ್ರಾಮಿಕವನ್ನು ಸುಳ್ಳು ಸಾಂಕ್ರಾಮಿಕ ಎಂದು ಕರೆಯಲಾಯಿತು. ೧೯೭೭ರ ನಂತರ ಎಚ್೧ ಎನ್೧ ಮತ್ತು ಎಚ್೩ ಎನ್೨ ತಳಿಗಳು ಮನುಷ್ಯರಲ್ಲಿ ಪ್ರತಿ ಸೀಸನ್‌ನಲ್ಲಿ
ಕಂಡುಬರುವ – ರೀತಿ ಕಂಡವು. ೧೯೯೬ರಲ್ಲಿ ಎಚ್‌ಪಿಎಐ ಎಚ್೫ ಎನ್೧ ತಳಿ ಚೀನಾದ ಗುವಾನ್ ಡಾಂಗ್‌ನಲ್ಲಿ ಕಂಡುಬಂದಿತು. ೧ ವರ್ಷದ ನಂತರ ಹಾಂಗ್‌ಕಾಂಗ್‌ನ ಪೌಲ್ಟ್ರಿಯಲ್ಲಿ ಕಂಡುಬಂದು ಅಲ್ಲಿಂದ ನಿಧಾನವಾಗಿ ಜಗತ್ತಿನಾದ್ಯಂತ ಹರಡಿತು.

ಇತ್ತೀಚಿನ – ಎಂದರೆ ೨೦೦೯ರ ಹಂದಿಜ್ವರದ ಸಾಂಕ್ರಾಮಿಕ. ಇದು ಮೆಕ್ಸಿಕೋದಲ್ಲಿ ಆರಂಭವಾಗಿ ಸಾವಿರಾರು ಜನರ ಮರಣಕ್ಕೆ ಕಾರಣವಾಯಿತು. ಇದು ಎಚ್೧ ಎನ್೧ ತಳಿಯ ಬದಲಾದ ತಳಿ. ಇದರಲ್ಲಿ ಮಾನವ, ಹಂದಿ, ಹಕ್ಕಿ ಈ ಪ್ರಾಣಿಗಳ – ವೈರಸ್‌ನ ಮಿಶ್ರಣವಿತ್ತು. ಹಾಗೆಯೇ ೨೦೦೯ರ ನಂತರ ಎಚ್೧ ಎನ್೧, ಎಚ್೩ ಎನ್೨ ಮತ್ತು ಐಬಿವಿ ಲೈನೇಜ್‌ನಲ್ಲಿ ಎರಡು ರೀತಿ ಇವು ಸೀಸನಲ್ ವೈರಸ್ ಆಗಿ ಹರಡಿಕೊಳ್ಳುತ್ತಿವೆ. ೨೦೧೧ರಲ್ಲಿ ಐಬಿವಿ ತಳಿ ಅಮೆರಿಕದ ಓಕ್ಲಹೋಮದಲ್ಲಿ ಹಂದಿಗಳಲ್ಲಿ ಕಂಡು ಬಂದಿತು. ನಂತರ ಹಸುಗಳು ಇದರ ಮಧ್ಯಂತರ ಆಶ್ರಯತಾಣ ಎಂದು ಗೊತ್ತಾಯಿತು.

ಅದೇ ವರ್ಷ ಏವಿಯನ್ ಎಚ್೯ ಎನ್೯ ತಳಿ ಚೀನಾದಲ್ಲಿ ಗುರುತಿಸಲ್ಪಟ್ಟಿತು. ೨೦೧೩ರ ನಂತರ ಇದು ಮನುಷ್ಯರಲ್ಲಿ ಸೋಂಕಿಗೆ ಕಾರಣವಾಯಿತು. ಈ ಸೋಂಕು ಚೀನಾದಲ್ಲಿಯೇ ಹೆಚ್ಚು ಕಂಡು ಬಂದವು. ಇನ್-ಯೆಂಜಾ ಶಬ್ದ ಇಟಲಿಯ ಮೂಲದಿಂದ
ಬಂದದ್ದು. ಇದರ ಅರ್ಥ ‘ಪ್ರಭಾವ’ ಎಂದು. ಶೀತದ ಪ್ರಭಾವ ಎಂದು ೧೪ನೇ ಶತಮಾನದಲ್ಲಿ ಅರ್ಥೈಸಲಾಯಿತು. ೧೮೦೦ರ ನಂತರ ಈ ಶಬ್ದವು ವಿಪರೀತ ಶೀತಕ್ಕೂ ಅನ್ವರ್ಥಕವಾಗಿ ಬಳಸಲ್ಪಡುತ್ತಿದೆ.

೧೮೩೯ರಲ್ಲಿ ಇದನ್ನು ಸಂಕ್ಷಿಪ್ತಗೊಳಿಸಿ – ಎಂದು ಕರೆಯಲಾಯಿತು. ೧೮೯೩ರ ನಂತರ – ಅಕ್ಷರಗಳಲ್ಲಿ ಇದು ಕಾಯಂ ಆಗಿ ಉಳಿಯಿತು. -ಗೆ ಬಳಸುವ ಇನ್ನಿತರ ಹೆಸರುಗಳೆಂದರೆ ಎಪಿಡಮಿಕ್ ಕೆಟರಾ, ಫ್ರೆಂಚ್‌ನಲ್ಲಿ ಲಾ ಗ್ರಿಪ್, ಬೆವರುವ ಕಾಯಿಲೆ (ಖಡಿಛಿZಠಿಜ್ಞಿಜ oಜ್ಚಿhಛಿoo) ಮತ್ತು ಸ್ಪ್ಯಾನಿಷ್ ಜ್ವರ.