Sunday, 15th December 2024

ಕೋಲಾಹಲ ಸೃಷ್ಟಿಸಿದ್ದ ಪ್ಲೇಬಾಯ್ ಪತ್ರಿಕೆಯಲ್ಲಿನ ನೆಹರು ಸಂದರ್ಶನ

ಇದೇ ಅಂತರಂಗ ಸುದ್ದಿ

vbhat@me.com

ಕೊನೆಗೂ ಸಂದರ್ಶನ ಪ್ರಕಟವಾಯಿತು. ಅದು ಆ ದಿನಗಳಲ್ಲಿ ಭಾರಿ ಕೋಲಾ ಹಲವನ್ನೇ ಸೃಷ್ಟಿಸಿತು. ಭಾರತದೊಳಗೆ ಆ ಸಂಚಿಕೆ ಪ್ರವೇಶಿಸದಂತೆ ನೋಡಿಕೊಳ್ಳಲಾಯಿತು. ಆ ಸಂಚಿಕೆಯನ್ನು ಎಲ್ಲಿಯೇ ಕಂಡರೂ ಪೊಲೀಸರು ಅದನ್ನು ವಶಪಡಿಸಿ ಕೊಂಡರು. ಕೆಲವರು ಅದನ್ನು ಸುಟ್ಟು ಹಾಕಿದರು. ಇನ್ನು ಕೆಲವರು ಅದನ್ನು ಹುದುಗಿಸಿ ಇಟ್ಟುಕೊಂಡರು. ಹಾಗೆ ಹುಡುಗಿಸಿಟ್ಟು ಕೊಂಡ ಪ್ರತಿಗಳು ಮೂವತ್ತು-ನಲವತ್ತು ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾದವು.

ಅಮೆರಿಕದ ‘ಪ್ಲೇಬಾಯ’ ನಿಯತಕಾಲಿಕ ಇಡೀ ಜಗತ್ತಿನೆಡೆ ಪ್ರಸಾರ ಹೊಂದಿದ ಏಕಮಾತ್ರ ಪತ್ರಿಕೆ ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಆ ಪತ್ರಿಕೆ 175 ಕ್ಕೂ ಅಧಿಕ ದೇಶಗಳಲ್ಲಿ ಲಭ್ಯವಿತ್ತು. ಆಗ ಮುದ್ರಣ ತಂತ್ರeನ ಈಗಿನಷ್ಟು ಮುಂದುವರಿದಿರಲಿಲ್ಲ. ಒಂದೆಡೆ ಮುದ್ರಿಸಿ, ಬೇರೆ ದೇಶಗಳಿಗೆ ಕಳಿಸಿಕೊಡಬೇಕಿತ್ತು.

ಅಮೆರಿಕದಲ್ಲಿ ಪ್ರಕಟವಾಗುತ್ತಿದ್ದ ಆ ಪತ್ರಿಕೆ, ಕಾರ್ಗೋ ವಿಮಾನದಲ್ಲಿ ಬಂದು, ಅಲ್ಲಿಂದ ಯೂರೋಪಿನ ಇತರ ದೇಶಗಳಿಗೆ ಸರಬರಾಜಾಗುತ್ತಿತ್ತು. ನಂತರ ಆ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಮತ್ತು ಪ್ರಕಾಶಕ ಹ್ಯೂ ಹೆಫ್ನರ್ ಬೇರೆ ಭಾಷೆಗಳಲ್ಲೂ, ಸ್ಥಳೀಯ ಆವೃತ್ತಿಗಳನ್ನು ತೆರೆದ. ಐದು ವರ್ಷಗಳ ಹಿಂದೆ, ತನ್ನ ತೊಂಬತ್ತೊಂದನೇ ವರ್ಷದಲ್ಲಿ ನಿಧನನಾದ ಹೆಫರ್, ಪತ್ರಿಕೋದ್ಯಮದಲ್ಲಿ ಮಾಡದ ಪ್ರಯೋಗಗಳು ಇರಲಿಕ್ಕಿಲ್ಲ.

ಅನೇಕರು ‘ಪ್ಲೇಬಾಯ’ನ್ನು ಸೆಕ್ಸ್ ಮ್ಯಾಗಜಿನ್ ಎಂದು ಭಾವಿಸಿದ್ದರು. ಅದಕ್ಕೆ ಕಾರಣ ಅದರಲ್ಲಿ ಪ್ರಕಟವಾಗುತ್ತಿದ್ದ ಆಕರ್ಷಕ ತಾರೆಯರು, ರೂಪದರ್ಶಿಗಳ ನಗ್ನ ಮತ್ತು ಅರೆನಗ್ನ ಫೋಟೋಗಳು. ಸೆಂಟರ್ ಸ್ಪ್ರೆಡ್‌ನಲ್ಲಿ ಪ್ರಕಟವಾಗುತ್ತಿದ್ದ ಮಾದಕ
ಫೋಟೋಗಳು ಪಡ್ಡೆ ಹುಡುಗರ ರೂಮಿನ ಕೋಣೆಗಳನ್ನು ಅಲಂಕರಿಸುತ್ತಿದ್ದವು. ಹಾಲಿವುಡ್ ಚಿತ್ರರಂಗ ಪ್ರವೇಶಿಸಲು
ಅನೇಕ ಆಕಾಂಕ್ಷಿ ನಟಿಯರಿಗೆ ‘ಪ್ಲೇಬಾಯ’ ಮ್ಯಾಗಜಿನ್ ಒಳದಾರಿಯಾಗಿತ್ತು. ಅರ್ಧ ಶತಮಾನದ ಹಿಂದೆಯೇ, ಬಾಡಿಗೆ
ವಿಮಾನದಲ್ಲಿ ಆಕಾಶದಲ್ಲಿ ಮಾದಕ ಹುಡುಗಿಯರ ಫೋಟೋ ಶೂಟ್ ಮಾಡಿಸಿದ್ದ ಹೆಫ್ನರ್, ಪ್ರತಿ ಸಂಚಿಕೆಯನ್ನೂ
ಒಂದಿಂದು ಕಾರಣಕ್ಕೆ ವಿಶಿಷ್ಟವಾಗಿರುವಂತೆ ರೂಪಿಸುತ್ತಿದ್ದ.

ಆ ದಿನಗಳಲ್ಲಿ ಇಂಟರ್ನೆಟ್ ಪೋರ್ನೋಗ್ರಫಿ ಇರಲಿಲ್ಲ. ಹೀಗಾಗಿ ಜನ ‘ಪ್ಲೇಬಾಯ್’ ನಿಯತಕಾಲಿಕ ಓದಲು ಕಾತರಿಸು ತ್ತಿದ್ದರು. ಅನೇಕರು ಇಂದಿಗೂ ‘ಪ್ಲೇಬಾಯ್’ಯನ್ನು ಸೆಕ್ಸ್ ಮ್ಯಾಗಜಿನ್ ಎಂದೇ ಭಾವಿಸಿದ್ದಾರೆ. ಅದು ಭಾಗಶಃ ನಿಜ ಕೂಡ. ಕಾರಣ ಹೆಫ್ನರ್ ಯಾವ ಸಂಚಿಕೆಯನ್ನು ನಟಿಯರ, ರೂಪದರ್ಶಿಗಳ ಅರೆನಗ್ನ ಫೋಟೋಗಳಿಲ್ಲದೇ ರೂಪಿಸಿದ್ದು ಇಲ್ಲವೇ ಇಲ್ಲ. ಆದರೆ ಆ ಮ್ಯಾಗಜಿನ್ ಗಂಭೀರ ಸಂದರ್ಶನಗಳಿಗೂ ಪ್ರಸಿದ್ಧವಾಗಿತ್ತು. ಹಾಗೆಂದು ಆ ಪತ್ರಿಕೆಯನ್ನು ಮನೆಯಗಲಿ, ಆಫೀಸಿನಗಲಿ ಮುಕ್ತವಾಗಿ ಓದುವಂತಿರಲಿಲ್ಲ. ಕದ್ದು-ಮುಚ್ಚಿಯೇ ಓದಬೇಕಿತ್ತು. ಆದರೆ ಅದರಲ್ಲಿ ಪ್ರಕಟವಾಗುತ್ತಿದ್ದ ಸಂದರ್ಶನಗಳು ಅಪರೂಪದ್ದಾಗಿರುತ್ತಿದ್ದವು.

‘ಪ್ಲೇಬಾಯ್’ ಪತ್ರಿಕೆ ತಾನು ಪ್ರಕಟಿಸಿದ ಅಪರೂಪದ ಸಂದರ್ಶನಗಳನ್ನು ಆಯ್ದು ಪುಸ್ತಕಗಳನ್ನು ಪ್ರಕಟಿಸಿವೆ. ನನ್ನಲ್ಲಿರುವ ಅಂಥ ಒಂದು ಕೃತಿಯಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜಿಮ್ಮಿ ಕಾರ್ಟರ್, ಫಿಡೆಲ್ ಕ್ಯಾಸ್ಟ್ರೊ, ಮಾಲ್ಕಮ್ ಎP, ಹೆನ್ರಿ ಮಿಲ್ಲರ್, ಜಾರ್ಜ್ ವಾಲ್ಲಸ್, ಹ್ಯಾರಿ ಟ್ರೂಮನ್, ಚರ್ಡ್ ನಿಕ್ಸನ್, ಚಾರ್ಲಿ ಚಾಪ್ಲಿನ್, ಮರ್ಲಿನ್ ಮನ್ರೋ, ಕೆನಡಿ ಮುಂತಾ ದವರ ಸಂದರ್ಶನಗಳಿವೆ.

ಅನೇಕ ದೇಶಗಳ ಪ್ರಧಾನಿ ಮತ್ತು ರಾಷ್ಟ್ರಾಧ್ಯಕ್ಷರ ಸಂದರ್ಶನಗಳನ್ನು ‘ಪ್ಲೇಬಾಯ’ ಪ್ರಕಟಿಸಿದೆಯೆಂಬುದು ಅನೇಕರಿಗೆ ಗೊತ್ತಿಲ್ಲ. ಅವರಾರೂ ಸಂದರ್ಶನಕ್ಕೆ ತಕ್ಷಣಕ್ಕೆ ಒಪ್ಪುತ್ತಿರಲಿಲ್ಲ. ‘ಪ್ಲೇಬಾಯ’ ಹೆಸರು ಕೇಳುತ್ತಿದ್ದಂತೆ ಬೆಚ್ಚುತ್ತಿದ್ದರು. ಆದರೆ ಹೆಫ್ನರ್ ಬಿಡುತ್ತಿರಲಿಲ್ಲ. ಪ್ರಧಾನಿ, ರಾಷ್ಟ್ರಾಧ್ಯಕ್ಷರನ್ನು ಒಪ್ಪಿಸುತ್ತಿದ್ದ. ಅದರ ವ್ಯಾಪಕ ಪ್ರಸಾರವೇ ಸಂದರ್ಶನಕ್ಕೆ ಒಪ್ಪುವಂತೆ ಮಾಡುತಿತ್ತು. ಇಂಟರ್ನೆಟ್ ಇಲ್ಲದ ಆ ದಿನಗಳಲ್ಲಿ, ಒಂದು ಪತ್ರಿಕೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪ್ರಸಾರ ಹೊಂದಿದೆ ಎಂಬ ಒಂದು ಕಾರಣಕ್ಕೆ ಸಂದರ್ಶನಕ್ಕೆ ಗಣ್ಯರು ಸಮ್ಮತಿಸುತ್ತಿದ್ದರು.

ಅಚ್ಚರಿಯೆನಿಸಬಹುದು, ‘ಪ್ಲೇಬಾಯ’ ಮ್ಯಾಗಜಿನ್‌ನಲ್ಲಿ ಒಂದು ದೇಶದ ಅಧ್ಯಕ್ಷ ಅಥವಾ ಪ್ರಧಾನಿಯ ಸಂದರ್ಶನ ಪ್ರಕಟ ವಾಗಿದಿದ್ದರೆ, ಅದು ಕ್ಯಾಸ್ಟ್ರೊ ಸಂದರ್ಶನ ಅಲ್ಲ, ಕಾರ್ಟರ್ ಅವರದ್ದೂ ಅಲ್ಲ. ಅದು ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಸಂದರ್ಶನ. ಸುಮಾರು ಅರವತ್ತು ವರ್ಷಗಳ ಹಿಂದೆ, ಅಂದರೆ 1963 ರ ಅಕ್ಟೋಬರ್ ಸಂಚಿಕೆಯಲ್ಲಿ, ಅ A candid conversation with the architect of modern India ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ಸಂದರ್ಶನದಲ್ಲಿ ನೆಹರು, ಅಣ್ವಸ, ಪ್ರಜಾಪ್ರಭುತ್ವದ ಲೋಪ-ದೋಷ, ಬಲಹೀನತೆ, ಗುಣಕಥನ, ಶೀತಲ ಸಮರ, ಅಂತಾರಾಷ್ಟ್ರೀಯ ಸಂಬಂಧ, ಸಾಮಾಜಿಕ ಪಿಡುಗು, ಹೆಚ್ಚುತ್ತಿರುವ ನಗರೀಕರಣ, ಜಾಗತಿಕ ಧರ್ಮ, ಭಾರತದ ಜನಸಂಖ್ಯಾ ಸಮಸ್ಯೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ದ್ದರು.

ಇನ್ನೇನು ಆ ಸಂಚಿಕೆಯನ್ನು ಮುದ್ರಣಕ್ಕೆ ಕಳಿಸಬೇಕು ಎನ್ನುವಷ್ಟರಲ್ಲಿ, ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯ ಅಧಿಕಾರಿಗಳು, ‘ಪ್ಲೇಬಾಯ್’ ಮುಖ್ಯಸ್ಥ ಹೆಫ್ನರ್ ಅವರನ್ನು ಸಂಪರ್ಕಿಸಿ, ನೆಹರು ಅವರ ಸಂದರ್ಶನವನ್ನು ಪ್ರಕಟಿಸಕೊಡದು ಎಂದು ಹೇಳಿದರು. ‘ನಿಮ್ಮ ಪತ್ರಿಕೆಗೆ ನೆಹರು ಸಂದರ್ಶನವನನ್ನೇ ನೀಡಿಲ್ಲ, ಅವರು ಎಂದೋ ಹೇಳಿದ ಮಾತು, ಹೇಳಿಕೆ, ಭಾಷಣಗಳನ್ನು ಆಧರಿಸಿ, ಈ ಸದರಿ ಸಂದರ್ಶನವನ್ನು ಸಿದ್ಧಪಡಿಸಿ ಎಕ್ಸ್ ಕ್ಲೂಸಿವ್ ಸಂದರ್ಶನ ಎಂದು ಪ್ರಕಟಿಸುತ್ತಿದ್ದೀರಿ. ಆದ್ದರಿಂದ ಇದನ್ನು ಯಾವ ಕಾರಣಕ್ಕೂ ಪ್ರಕಟಿಸಕೂಡದು’ ಎಂದು ರಾಯಭಾರ ಕಚೇರಿ ಅಧಿಕಾರಿ ಹೆಫ್ನರ್ ಜತೆ ವಾದ ಮಾಡಿದ. ಆದರೆ ಹೆಫ್ನರ್ ಜಗ್ಗಲಿಲ್ಲ.

ಅದೇ ಸಂಚಿಕೆಯಲ್ಲಿ ಈ ಎಲ್ಲಾ ವಿಷಯಗಳನ್ನು ಸೇರಿಸಿ, ಸಂಪಾದಕರ ಟಿಪ್ಪಣಿಯಲ್ಲಿ, ‘ಪ್ಲೇಬಾಯ್‌ಗಾಗಿ ನೆಹರು ಅವರ
ಸಂದರ್ಶನವನ್ನು ಪ್ರಸಿದ್ಧ ಪತ್ರಕರ್ತ ಮತ್ತು ಪ್ರಕಾಶಕರೊಬ್ಬರು ಮಾಡಿದ್ದಾರೆ. ಈ ಪತ್ರಕರ್ತರು ಜಗತ್ತಿನ ಹಲವು ಗಣ್ಯ ವ್ಯಕ್ತಿಗಳ ಸಂದರ್ಶನಗಳನ್ನು ಪತ್ರಿಕೆಗಾಗಿ ಮಾಡಿದವರು. ಅವರು ನೆಹರು ಜತೆಗೆ ಸಂದರ್ಶನ ಮಾಡಿದ ಧ್ವನಿಮುದ್ರಿತ ಟೇಪುಗಳು ನಮ್ಮ ಬಳಿ ಇವೆ. ಆ ಪತ್ರಕರ್ತರು ನೆಹರು ಅವರನ್ನು ಸಂದರ್ಶನ ಮಾಡುವಾಗ ತೆಗೆದ ಫೋಟೋಗಳು ಸಹ ನಮ್ಮ ಬಳಿಯಿವೆ. ಈ ಸಂದರ್ಶನದ ಸಾಚಾತನವನ್ನು ಪ್ರಶ್ನಿಸುವ ಯಾವ ಕಾರಣಗಳೂ ಇಲ್ಲ.

ಇದನ್ನು ಒಬ್ಬ ಗಣ್ಯ ವ್ಯಕ್ತಿಯ ಖಾಸಗಿ ಸಂದರ್ಶನವೆಂದು ನಾವು ಸದುದ್ದೇಶದಿಂದ ಪ್ರಕಟಿಸುತ್ತಿದ್ದೇವೆ’ ಎಂದು ಬರೆದ.
ಕೊನೆಗೂ ಸಂದರ್ಶನ ಪ್ರಕಟವಾಯಿತು. ಅದು ಆ ದಿನಗಳಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು. ಭಾರತದೊಳಗೆ ಆ ಸಂಚಿಕೆ ಪ್ರವೇಶಿಸದಂತೆ ನೋಡಿಕೊಳ್ಳಲಾಯಿತು. ಆ ಸಂಚಿಕೆಯನ್ನು ಎಲ್ಲಿಯೇ ಕಂಡರೂ ಪೊಲೀಸರು ಅದನ್ನು ವಶಪಡಿಸಿ ಕೊಂಡರು.

ಕೆಲವರು ಅದನ್ನು ಸುಟ್ಟು ಹಾಕಿದರು. ಇನ್ನು ಕೆಲವರು ಅದನ್ನು ಹುದುಗಿಸಿ ಇಟ್ಟುಕೊಂಡರು. ಹಾಗೆ ಹುಡುಗಿಸಿಟ್ಟುಕೊಂಡ
ಪ್ರತಿಗಳು ಮೂವತ್ತು-ನಲವತ್ತು ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾದವು. ಈ ಸಂಚಿಕೆಯನ್ನು ಹೇಗೋ ಗಿಟ್ಟಿಸಿಕೊಂಡಿದ್ದ ಪತ್ರಕರ್ತ ಖುಷವಂತ್ ಸಿಂಗ್, ಎಷ್ಟೋ ವರ್ಷಗಳ ಬಳಿಕ ತಮ್ಮ ಅಂಕಣದಲ್ಲಿ, The issue of Playboy valued higher than a bottle of Chivas Regal ಎಂದು ಬರೆದಿದ್ದರು.

ಇದು ಎಲ್ಲರಿಗೂ ಸಲ್ಲುವ ಕಸುಬು ಒಂದು ಕಾಲವಿತ್ತು, ಕ್ಷೌರಿಕರೇ ತಲೆಗೂದಲು ಕತ್ತರಿಸುತ್ತಿದ್ದರು. ಈಗ ಹಾಗೇನಿಲ್ಲ, ಯಾರು ಬೇಕಾದರೂ ಆ ಉದ್ಯೋಗವನ್ನು ಮಾಡಬಹುದು. ತಲೆಗೂದಲನ್ನು ಕತ್ತರಿಸುವುದನ್ನು ಕಲಿಸುವ ಅನೇಕ ಸಂಸ್ಥೆಗಳು ಹುಟ್ಟಿ ಕೊಂಡಿವೆ. ಅಲ್ಲಿ ಕಲಿತವರು ತಾವೇ ಕ್ಷೌರದ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ನನಗೆ ಪರಿಚಯವಿರುವ ಅಯ್ಯರ್ (ಬ್ರಾಹ್ಮಣರು) ಎಂಬುವವರು ರಾಜರಾಜೇಶ್ವರಿನಗರದಲ್ಲಿ ಸಲೂನ್ ಮತ್ತು ಸ್ಪಾ ಆರಂಭಿಸಿದ್ದಾರೆ.

ಹತ್ತಾರು ಜನರನ್ನು ಕೆಲಸಕ್ಕೆ ಇಟ್ಟುಕೊಂಡು ಸಲೂನ್ ಆರಂಭಿಸಿದ್ದಾರೆ. ಅಂದರೆ ಈ ಉದ್ಯೋಗ ಈಗ ಒಂದು ಜಾತಿಯವರ
ಕಸುಬಾಗಿ ಉಳಿದಿಲ್ಲ. ಹಿಂದಿನ ತಿಂಗಳು ನಾನು ಒಂದು ಹೇರ್ ಕಟಿಂಗ್ ಸಲೂನ್ ಶಾಪ್ ಉದ್ಘಾಟಿಸಲು ಹೋಗಿದ್ದೆ. ಅದರ ಮಾಲೀಕರು ತಮ್ಮ ಭಾಷಣದಲ್ಲಿ, ತಮ್ಮ ಅಂಗಡಿಯಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ ಎಂದು ಅಭಿಮಾನದಿಂದ ಹೇಳಿದರು. ಇದು ಎಲ್ಲಾ ಉದ್ಯೋಗದಂತೆ ಒಂದು ಗೌರವಾನ್ವಿತ ಮತ್ತು ಅಗತ್ಯ ಸೇವೆಯ ಉದ್ಯೋಗ ಮತ್ತು ಕೇವಲ ಒಂದು ಜಾತಿಗೆ ಸೇರಿದ ಉದ್ಯೋಗವಾಗಿ ಉಳಿದಿಲ್ಲ.

ಹೇರ್ ಕಟಿಂಗ್ ಮಾಡುವುದನ್ನು ಕಲಿಸುವ ಸಂಸ್ಥೆಗಳಲ್ಲೂ, ಎಲ್ಲಾ ಜಾತಿಯ ಹುಡುಗರೂ ಸೇರುತ್ತಿರುವುದು ಒಂದು ಆರೋಗ್ಯ ಕರ ಬೆಳವಣಿಗೆ. ಬೆಂಗಳೂರಿನಲ್ಲಿ ಹದಿನೈದು ದಿನ ಮತ್ತು ಒಂದು ತಿಂಗಳಲ್ಲಿ ಹೇರ್ ಕಟಿಂಗ್ ಕಲಿಸುವ ಹಲವಾರು ತರಬೇತಿ ಕೇಂದ್ರಗಳಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲು ಹೊತ್ತಿನಲ್ಲಿ ಎರಡು-ಮೂರು ಗಂಟೆ ಸಲೂನ್‌ಗಳಲ್ಲಿ ಕಟಿಂಗ್ ಮಾಡುವ ಪ್ರವೃತ್ತಿ ಜಾಸ್ತಿಯಾಗಿದೆ. ನಾನು ವಾಸಿಸುವ ರಾಜರಾಜೇಶ್ವರಿ ನಗರವೊಂದರ, ಏನಿಲ್ಲವೆಂದರೂ ಐವತ್ತಕ್ಕೂ ಹೆಚ್ಚು ಸಲೂನ್ ಗಳಿವೆ ಮತ್ತು ಎ ಸಲೂನ್‌ಗಳಲ್ಲೂ ಕಾಯಲೇಬೇಕು.

ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರ ಮಗ ಒಂದು ಸಲೂನ್ ಆರಂಭಿಸಿದ. ನನ್ನ ಸ್ನೇಹಿತರು ಆಹ್ವಾನ ಪತ್ರ
ನೀಡಿದರು. Crazy Coiffure ಎಂಬ ಹೆಸರಿನಲ್ಲಿ ಅವರ ಮಗ ಸಲೂನ್ ಆರಂಭಿಸಿದ್ದ. ನನಗೆ ಆ ಹೆಸರಿನ ಬಗ್ಗೆ ಅತೀವ
ಸೋಜಿಗವಾಯಿತು. Coiffure ಅಂದ್ರೆ ಎಷ್ಟು ಜನರಿಗೆ ಅರ್ಥವಾದೀತು ಎಂಬ ಜಿಜ್ಞಾಸೆ ಕಾಡಲಾರಂಭಿಸಿತು. ನನ್ನ
ಸ್ನೇಹಿತ ರಿಗೆ, Coiffure ಅಂದ್ರೆ ಏನು ಅಂತ ಕೇಳಿದೆ. ಅದಕ್ಕೆ ಅವರು, ‘ಸರ್, ನನಗೆ ಗೊತ್ತಿಲ್ಲ. ನನ್ನ ಮಗ ಎಪ್ಪತ್ತೈದು ಲಕ್ಷ
ರುಪಾಯಿ ಕೊಡು. ಒಂದು ಸಲೂನ್ ಇಡ್ತೀನಿ ಅಂತ ಹೇಳಿದ.

ನಾನು ಹಣ ಕೊಟ್ಟಿದ್ದೇನೆ, ಅಷ್ಟೇ. ಈಗಿನ ಮಕ್ಕಳು ಗೊತ್ತಲ್ಲ, ಏನೇನೋ ಹೆಸರು ಇಡ್ತಾವೆ’ ಎಂದು ಹೇಳಿ ನಕ್ಕರು.
ನನಗೆ ಅವರ ಮಗನ ಬಗ್ಗೆ ಅಚ್ಚರಿಯಾಯಿತು. ಸಾಮಾನ್ಯ ಜನರಿಗೆ ಅರ್ಥ ಗೊತ್ತಿರದ ಒಂದು ಪದವನ್ನು ಅಂಗಡಿಯ
ಹೆಸರನ್ನಾಗಿ ಬಳಸಿದ ಬಗ್ಗೆ ಅಷ್ಟೇ ಕುತೂಹಲವೂ ಆಯಿತು. Coiffure  ಅಂದ್ರೆ ಸರಳವಾಗಿ ಹೇಳಬೇಕೆಂದರೆ ‘ಹೇರ್ ಸ್ಟೈಲ್’
ಎಂದರ್ಥ. ಅದನ್ನು ‘ಕ್ವಾಹ್ -ರ್’ ಎಂದು ಉಚ್ಚರಿಸುತ್ತಾರೆ. ಈ ಬಗ್ಗೆ ನಾನು ನನ್ನ ಸ್ನೇಹಿತರ ಮಗನನ್ನೇ ಕೇಳಿದೆ. ಅದಕ್ಕೆ
ಆತ ಹೇಳಿದ ಉತ್ತರ ಕೇಳಿ ಇನ್ನೂ ಆಶ್ಚರ್ಯವಾಯಿತು.

‘ಸಾರ್, Coiffure  ಅರ್ಥ ಎಲ್ಲರಿಗೂ ಗೊತ್ತಿರುವುದಿಲ್ಲ ನಿಜ, ಒಪ್ಪುತ್ತೇನೆ. ಅದರ ಅರ್ಥ ಗೊತ್ತಿರುವವರೇ ಬರಬೇಕು ಎಂಬುದು ಮೂಲ ಆಶಯ. ಆ ಕ್ಲಾಸಿನ ಕಸ್ಟಮರುಗಳಿಗೆಂದೇ ಈ ಸಲೂನ್. ಸುಮ್ಮನೆ ನಾನು Crazy Hairstyle ಎಂದು ಹೆಸರಿಟ್ಟಿದ್ದಿದ್ದರೆ ಯಾರು ಬೇಕಾದರೂ ಬರುತ್ತಾರೆ. ನಮ್ಮದು ಎಲ್ಲಾ ಕ್ಲಾಸಿನ ಜನರಿಗೆ ಸಲ್ಲುವ ಸಲೂನ್ ಅಲ್ಲ’ ಎಂದು ಸಮರ್ಥಿಸಿಕೊಂಡ. ಆತ ಹೇಳಿದ್ದರಲ್ಲಿ ಅರ್ಥವಿದೆ ಮತ್ತು ಬಿಜಿನೆಸ್ ಸಂದೇಶವಿದೆ ಅನಿಸಿತು.

e.g.ಮತ್ತುi.e.

ಅನೇಕ ಸಂದರ್ಭಗಳಲ್ಲಿ ನಾವು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಹೋಗುವುದಿಲ್ಲ. ಉದಾಹರಣೆಗೆ, ಆಹ್ವಾನ ಪತ್ರಿಕೆಯಲ್ಲಿ ಕೆಳಗೆ ನಮೂದಿಸಿರುವ RSVP ಅಂದ್ರೆ ಏನು ಅನ್ನುವುದು ಬಹುತೇಕರಿಗೆ ಗೊತ್ತು. ಆದರೆ ಅದರ ಪೂರ್ಣ ಸ್ವರೂಪ (R‚pondez s’il vous plat. ಅದರ ಅರ್ಥ Respond, if you please ಎಂದು) ಗೊತ್ತಿರುವುದಿಲ್ಲ. ಅದೇ ರೀತಿ, ಇಂಗ್ಲಿಷಿನ e.g. ಹೀಗಂದ್ರೆ for example ಎಂಬುದು ಅನೇಕರಿಗೆ ಗೊತ್ತು. ಆದರೆ e.g.-ಲ್
-ರ್ಮ್ ಅಥವಾ ಪೂರ್ಣ ಸ್ವರೂಪ ಗೊತ್ತಿರುವುದಿಲ್ಲ.

ಬೇಕಾದರೆ ಕೇಳಿ ಪರೀಕ್ಷಿಸಬಹುದು. ಒಂದು ವಾಕ್ಯ ಬರೆದು, ನಂತರ ಉದಾಹರಣೆಗೆ, ಎಂದು ಹೇಳುವಾಗ ಛಿ.ಜ.ಎಂದು
ಬರೆಯುವುದು ಸಂಪ್ರದಾಯ. We could show you some of the sights, e.g. Mysuru Palace and
Chamundi Hill.. ಅಂದ ಹಾಗೆ, e.g. ದೀರ್ಘ ಸ್ವರೂಪ exampli gratia. ಕೆಲವರು e.g. ಎಂದು ಬರೆಯುವಲ್ಲಿ i.e. ಎಂದು ಬರೆಯುತ್ತಾರೆ. ಅವೆರಡೂ ಒಂದೇ ಅರ್ಥದಲ್ಲಿ ಬಳಕೆಯಾಗುವುದುಂಟು. ಆದರೆ ಅವೆರಡೂ ಬೇರೆ ಬೇರೆ. i.e. ಅಂದ್ರೆ that is ಎಂದರ್ಥ. ಒಂದು ವಾಕ್ಯವನ್ನು ನಿದರ್ಶನವಾಗಿ ಗಮನಿಸೋಣ – They were vegans, i.e. vegetarians who also avoid eggs and dairy products. ಅಂದ ಹಾಗೆ i.e.ಪೂರ್ಣ ಸ್ವರೂಪ id est. ಅಷ್ಟಕ್ಕೂ ಇದು ಲ್ಯಾಟಿನ್ ಪದ. ನಿಮಗೆ ಗೊತ್ತಿರಲಿ ಎಂದು ಹೇಳಿದೆ.

ಗಿಬ್ಸ್ ಹೇಳಿದ ಆ ಮಾತು ನೀವು ಲಾ ಗಿಬ್ಸ್ ಹೆಸರನ್ನು ಕೇಳಿರಬಹುದು ಎಂದು ಭಾವಿಸುತ್ತೇನೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಯಶಸ್ವಿ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ನನ್ನ ತಲೆಮಾರಿನವರು ಕ್ರಿಕೆಟ್ ಮ್ಯಾಚುಗಳನ್ನು ನೋಡಲು ಆರಂಭಿಸಿದಾಗ, ಗಿಬ್ಸ ನಿವೃತ್ತರಾಗಿದ್ದರು. ಆದರೂ ನಾನು ಗಿಬ್ಸ ಆಟವನ್ನು ನೋಡಿದ್ದಕ್ಕಿಂತ, ಅವರ ಬಗ್ಗೆ ಓದಿದ್ದು, ಕೇಳಿದ್ದು ಜಾಸ್ತಿ. ಟೆಸ್ಟ್ ಪಂದ್ಯಗಳಲ್ಲಿ ೩೦೯ ವಿಕೆಟ್ ಪಡೆದ ಗಿಬ್ಸ್, ರನ್ ಕೊಡುವುದರಲ್ಲಿ ಅತ್ಯಂತ ಜುಗ್ಗ. ಅವರು ಒಂದು ಓವರ್‌ಗೆ
ಕೊಟ್ಟಿದ್ದು ಸರಾಸರಿ ಎರಡು ರನ್ ಮಾತ್ರ. ಟೆಸ್ಟ್ ಮ್ಯಾಚಿನಲ್ಲಿ ೧೮ ಸಲ ಐದು ಮತ್ತು ಹೆಚ್ಚು ವಿಕೆಟ್ ಮತ್ತು ಎರಡು ಸಲ ಹತ್ತು
ವಿಕೆಟ್ ವಿಕೆಟ್ ಪಡೆದವರು. ಅವರು ಕೊನೆಯ ಪಂದ್ಯ ಆಡಿದ್ದು ೧೯೭೫-೭೬ ರಲ್ಲಿ. ೭೯ ಟೆಸ್ಟ್ ಪಂದ್ಯಗಳಲ್ಲಿ ಆಡಿದ ಗಿಬ್ಸ್, ಒಂದು ಸಲವೂ ಅರ್ಧ ಶತಕ ಹೊಡೆದವರಲ್ಲ. ಅಷ್ಟು ಪಂದ್ಯಗಳಿಂದ ಅವರು ಹೊಡೆದಿದ್ದು ಐನೂರಕ್ಕಿಂತ ಕಡಿಮೆ ರನ್.
ಇಂದಿಗೂ ವೆಸ್ಟ್ ಇಂಡೀಸ್‌ನ ಸಾರ್ವಕಾಲಿಕ ಐವತ್ತು ಕ್ರಿಕೆಟರುಗಳಲ್ಲಿ ಅವರ ಹೆಸರಿದೆ.

ಐಸಿಸಿ ‘ಕ್ರಿಕೆಟ್ ಹಾಲ್ ಆಫ್ ಫೇಮ್’ ನಲ್ಲಿ ಗಿಬ್ಸ ಕೂಡ ಸೇರಿದ್ದಾರೆ. ಗಿಬ್ಸ್ ಮುನ್ನೂರು ವಿಕೆಟ್ ಗಳಿಸಿದ ಅತ್ಯಂತ ಹಿರಿಯ ಆಟಗಾರರಬ್ಬರು. ಅವರು ಕೊನೆಯ ಪಂದ್ಯ ಆಡುವಾಗ ಅವರಿಗೆ ನಲವತ್ತೊಂದು ವರ್ಷ ಆಗಿತ್ತು. ವೆಸ್ಟ್ ಇಂಡೀಸಿನ ಖ್ಯಾತ ಆಟಗಾರ ಮತ್ತು ಒಂದು ಕಾಲದ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ಮೇಲೆ ಗಿಬ್ಸ್ ಪ್ರಭಾವ ಇದೆ. ಗಿಬ್ಸ ಅವರು ಲಾಯ್ಡ ಚಿಕ್ಕಪ್ಪ. ಅವರಿಬ್ಬರೂ ಒಟ್ಟಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಆಡಿದವರು.

ನಿವೃತ್ತಿಯ ಬಳಿಕ ಗಿಬ್ಸ ಅಮೆರಿಕಕ್ಕೆ ಹೋಗಿ ನೆಲೆಸಿದರು. ಆದರೆ ಅಲ್ಲಿ ಕ್ರಿಕೆಟ್ ಬಿಟ್ಟು ಜೀವಿಸಲು ಅವರಿಗೆ ಸಾಧ್ಯವಾಗಲೇ
ಇಲ್ಲ. ತಾಯ್ನಾಡಿಗೆ ಬಂದು ಕೆಲಕಾಲ, ವೆಸ್ಟ್ ಇಂಡೀಸ್ ತಂಡದ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು. ಇತ್ತೀಚೆಗೆ ನಾನು
ಲಂಡನ್‌ಗೆ ಹೋದಾಗ, ಕ್ರಿಕೆಟ್ ತವರು ಎಂದು ಕರೆಯಿಸಿಕೊಂಡ ಲಾಯ್ಡ್ ಮೈದಾನಕ್ಕೆ ಹೋಗಿದ್ದೆ. ಅಲ್ಲಿನ ಮ್ಯೂಸಿಯಮ್ಮಿನಲ್ಲಿ ಖ್ಯಾತ ಕ್ರಿಕೆಟ್ ಆಟಗಾರರ ಪ್ರಸಿದ್ಧವಾದ ಒಂದು ವಾಕ್ಯ ಅಥವಾ  ಹೇಳಿಕೆಯನ್ನು ಸಂಗ್ರಹಿಸಿ ಇಟ್ಟಿದ್ದಾರೆ. ನನಗೆ ಗಿಬ್ಸ ಹೇಳಿದ ಒಂದು ಪುಟ್ಟ ವಾಕ್ಯ ಗಮನ ಸೆಳೆಯಿತು.

ಗಿಬ್ಸ್ ಹೇಳಿದ ಆ ಮಾತು – Any time the West Indies lose, I cry.