Friday, 21st June 2024

ಪ್ರಧಾನಿಯಾಗಿ ಅಟಲ್’ಜೀ ಬದಲಾದರಾ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ನಂತರ ಅವರ ಸಹಜ ನಗು, ಹಾಸ್ಯ ಮತ್ತು ತಮಾಷೆ ಕಡಿಮೆಯಾಯಿತು ಎಂದು ಹೇಳುವವರಿದ್ಧಾರೆ. ಆದರೆ ವಾಜಪೇಯಿ ತಮ್ಮ ಮುಖಚಿಹ್ನೆಯಾದ ಹಾಸ್ಯಲಹರಿಯನ್ನುಮಾತ್ರ ಎಂದೂ  ಬಿಡಲಿಲ್ಲ ವಂತೆ. ಹಾಗೆಂದು ಇತ್ತೀಚೆಗೆ ನಿಧನರಾದ ಅವರ ಒಡನಾಡಿ ಮತ್ತು ಕೇಂದ್ರ ಸಚಿವರಾಗಿದ್ದ ಜಸ್ವಂತ್ ಸಿಂಗ್ ಒಂದು ಲೇಖನದಲ್ಲಿ ಬರೆದಿದ್ದರು.

ಪ್ರಧಾನಿಯಾದ ಬಳಿಕ, ವಾಜಪೇಯಿ ಹೆಚ್ಚು ಜನರಿಗೆ ಸಿಗುತ್ತಿರಲಿಲ್ಲ. ಭದ್ರತಾ ಸಿಬ್ಬಂದಿ ಸದಾ ಅವರನ್ನುಸುತ್ತುವರಿದಿರುತ್ತಿದ್ದರು. ಅಲ್ಲದೇ ಎಲ್ಲರ ಜತೆಗೆ ಲೋಕಾಭಿರಾಮ ಹರಟೆ, ಕುಶಲೋಪರಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರಿಗೆ ಆಸೆಯಿದ್ದರೂ, ಎಲ್ಲರ ಜತೆ ಮಾತುಕತೆ ವಿಷಯಕ್ಕಷ್ಟೇ ಸೀಮಿತವಾಗಿರುತ್ತಿದ್ದವು. ಹೀಗಾಗಿ ವಾಜಪೇಯಿ ಪ್ರಧಾನಿಯಾದ ನಂತರ ಸೀರಿಯಸ್ ಆಗಿದ್ಧಾರೆ ಎಂಬ ಭಾವನೆ ಬರುವಂತಾಗಿತ್ತು. ಆದರೆ ಅವರು ತಮ್ಮಎಂದಿನ ಹಾಸ್ಯ, ಮೊನಚು ನುಡಿಯನ್ನು ಎಂದೂ ಬಿಡಲಿಲ್ಲ. ‘ನನಗೇ ಅನಿಸುತ್ತಿದೆ, ಪ್ರಧಾನಿಯಾದ ಬಳಿಕ ನಾನು ಬದಲಾಗಿದ್ದೇನೆ ಎಂದು ಬೇರೆಯವರು ಭಾವಿಸಬಹುದು ಎಂದು. ಕಾರಣ ಎಲ್ಲರ ಜತೆ ಉಭಯಕುಶಲೋಪರಿ ಸಾಧ್ಯವಾಗುತ್ತಿಲ್ಲ. ಎಲ್ಲರ ಜತೆ ಮಾತುಕತೆ ಕೆಲವೊಮ್ಮೆ ಯಾಂತ್ರಿಕವಾಗುತ್ತಿದೆ. ಅದಕ್ಕೆ ನಾನಿರುವ ಈ ಹುzಯೂ ಕಾರಣವಾಗಿರಬಹುದು.

ಪ್ರಧಾನಿಯಾಗಿ ಹೀಗೆ ಹಾಸ್ಯಚಟಾಕಿ ಹಾರಿಸಬಹುದೇ ಎಂದು ಕೆಲವರಿಗೆ ಅನಿಸಬಹುದು. ಹೀಗಾಗಿ ನಾನು ಒಮ್ಮೊಮ್ಮೆ ಒಲ್ಲದ ಮನಸ್ಸಿನಿಂದ ಗಂಭೀರವಾಗಿ ಇರುತ್ತೇನೆ. ಆದರೆ ನನಗೆ ಅದು ಇಷ್ಟವಿಲ್ಲ’ ಎಂದು ಜಸ್ವಂತ್ ಸಿಂಗ್ ಅವರ ಹತ್ತಿರ ವಾಜಪೇಯಿ ಹೇಳಿಕೊಂಡಿದ್ದರಂತೆ. ‘ಪ್ರಧಾನಿಯಾದವರು ಯಾವತ್ತೂ ಗಂಭೀರವಾಗಿರಬೇಕು’ ಎಂಬ ತೂಗುಗತ್ತಿ ಅವರ ತಲೆ ಮೇಲೆ ಸದಾ ನೇತಾಡುತ್ತಿತ್ತು ಎಂಬುದಂತೂ ನಿಜ.

ಒಮ್ಮೆ ‘ಔಟ್‌ಲುಕ್’ ನಿಯತಕಾಲಿಕ ಸಂಪಾದಕ ವಿನೋದ್ ಮೆಹ್ತಾ, ವಾಜಪೇಯಿ ಅವರನ್ನು ಭೇಟಿ ಮಾಡಲು ಅವರನಿವಾಸಕ್ಕೆ ಹೋಗಿದ್ದರು. ವಾಜಪೇಯಿ ಜತೆಗೆ ಅವರ ಆಪ್ತವಾದ ಸಂಬಂಧವಿತ್ತು. ಆಗಾಗ ವಾಜಪೇಯಿ, ಮೆಹತಾ ಅವರನ್ನು ಕರೆಯಿಸಿ ಕೊಳ್ಳುತ್ತಿದ್ದರು. ಒಂದು ಸಲ ಮೆಹ್ತಾ ಪ್ರಧಾನಿ ನಿವಾಸಕ್ಕೆ ಹೋದಾಗ, ವಾಜಪೇಯಿ ಗಂಭೀರಮುಖಮುದ್ರೆ ಹೊತ್ತು ಕುಳಿತಿದ್ದರು. ಮೆಹ್ತಾಗೆ ಆಶ್ಚರ್ಯ. ವಾಜಪೇಯಿ ಯಾವಾಗಲೂ ಅವರನ್ನು ಆ ರೀತಿ ಸ್ವಾಗತಿಸಿದ್ದೇ ಇಲ್ಲ. ಮೊದಲ ಮಾತಿನಲ್ಲಿ ಹಾಸ್ಯ ಚಿಮ್ಮಿಸುವುದು ವಾಜಪೇಯಿ ವೈಖರಿ. ಆದರೆ ಅಂದು ವಾಜಪೇಯಿ ಮ್ಲಾನವದನ.

‘ಅಟಲ್ ಜೀ, ನೀವು ಎಂದಿನಂತಿಲ್ಲ’ ಎಂದು ಮೆಹ್ತಾ ಹೇಳಿದರು. ಅದಕ್ಕೆ ವಾಜಪೇಯಿ ಒಂದು ಕ್ಷಣ ಸಾವರಿಸಿ ಮೆಲ್ಲಗೆ ಹೇಳಿದರು – ‘ನಿಮಗೆ ನನ್ನ ಸಂಕಷ್ಟವೇನು ಎಂಬುದು ಗೊತ್ತು, ನೀವು ಹೊರಡುತ್ತಿದ್ದಂತೆ, ಜಯಲಲಿತಾ ಬರಲಿದ್ಧಾರೆ.’ ಎ ಊರಿನ ಟೇಲರೂ ಒಂದೇ ! ಸಾಮಾನ್ಯವಾಗಿ ಟೇಲರ್ ಬಗ್ಗೆ ಎಲ್ಲರ ಅನುಭವವೂ ಒಂದೇ. ಹೇಳಿದ ದಿನದಂದು ಬಟ್ಟೆ ಕೊಟ್ಟ ದಾಖಲೆ ಇಲ್ಲವೇ ಇಲ್ಲ.
ವಿಮಾನ ನಿಲ್ದಾಣದಲ್ಲಿ ಕನ್ವೇಯರ್ ಬೆಲ್ಟನಲ್ಲಿ ಬರುವ ಮೊದಲ ಬ್ಯಾಗ್ ನಮ್ಮದಾಗಿರುವುದಿಲ್ಲವಂತೆ.

ಹಾಗೆ ಟೇಲರ್ ಹೊಲಿಯುತ್ತಿರುವ ಬಟ್ಟೆ ಎಂದೂ ನಮ್ಮದಾಗಿರುವುದಿಲ್ಲವಂತೆ. ಎಂಥ ವೃತ್ತಿಪರ ಟೇಲರ್ ಆಗಿರಲಿ, ನೀವು ಅವೆಷ್ಟೋ ವರ್ಷಗಳಿಂದ ಅವನ ಖಾಯಂ ಗಿರಾಕಿಯಾಗಿರಲಿ, ಯಾರೂ ಹೇಳಿದ ದಿನದಂದು ಬಟ್ಟೆ ಹೊಲಿದು ಕೊಡುವುದಿಲ್ಲ.
ತನ್ನಸಾಮರ್ಥ್ಯಕ್ಕಿಂತ ಹೆಚ್ಚಿನ ಜನರಿಂದ ಬಟ್ಟೆಗಳನ್ನು ತೆಗೆದುಕೊಳ್ಳುವುದರಿಂದ, ಕೆಲಸ ಜಾಸ್ತಿಯಾಗಿ ಹೇಳಿದ ದಿನದಂದು ಕೊಡಲಾಗುವುದಿಲ್ಲವೋ ಅಥವಾ ಹೇಳಿದ ದಿನದಂದು ಕೊಡಬಾರದು ಎಂಬುದು ವ್ಯಾಪಾರದ ಒಳಗುಟ್ಟೋ ಅಥವಾ ತನಗಾಗಿ ಕಾಯಲಿ ಎಂಬ ಗುಣವೋ ಗೊತ್ತಿಲ್ಲ. ಯಾವ ಟೇಲರೂ ಹೇಳಿದ ದಿನದಂದು ಕೊಡುವುದಿಲ್ಲ ಮತ್ತು ಎಲ್ಲಾ ಊರಿನ ಟೇಲರು ಗಳೂ ಹೀಗೇ ಎಂಬುದು ಮಾತ್ರ ಸತ್ಯ.

ಬಾಹ್ಯಾಕಾಶ ನೌಕೆ ಅಥವಾ ಉಪಗ್ರಹವನ್ನು ಹೇಳಿದ ದಿನವೇ, ನಿಗದಿತ ಸಮಯಕ್ಕೇ ಹಾರಿಸುತ್ತಾರೆ. ಆದರೆ ಟೇಲರ್ ಮಾತ್ರ
ಹೇಳಿದ ದಿನ ಕೊಡುವುದಿಲ್ಲ. ಬಾಹ್ಯಾಕಾಶ ವಿಜ್ಞಾನಿಯಿಂದ ಆಗುವಂಥದ್ದು ಒಬ್ಬ ಟೇಲರ್‌ನಿಂದ ಆಗುವುದಿಲ್ಲ. ಇದು ಒಬ್ಬರ
ಅನುಭವವಲ್ಲ. ಟೇಲರ್ ಜತೆ ಎಲ್ಲರ ಅನುಭವವೂ ಇದೇ. ‘ಇಲ್ಲ, ನನ್ನ ಟೇಲರ್ ಹಾಗಲ್ಲ, ಹೇಳಿದ ದಿನದಂದೇ ಕೊಡುತ್ತಾನೆ’ ಎಂದು ಹೇಳಿದವರನ್ನು ನಾನಂತೂ ನೋಡಿಲ್ಲ ಅಥವಾ ಅಂಥವರನ್ನು ನಾನು ಭೇಟಿಮಾಡಿಲ್ಲ. ಒಮ್ಮೆ ಟೇಲರ್‌ಗೆ ಒಬ್ಬ ಮದುವೆ ಡ್ರೆಸ್ ಹೊಲಿಯಲು ಕೊಟ್ಟ. ಮದುವೆಗೆ ಇನ್ನೂ ಹದಿನೈದು ದಿನ ಇತ್ತು. ಮದುವೆಗೆ ಇನ್ನು ಎರಡು ದಿನ ಇರುವಾಗ ಮದುಮಗ ಟೇಲರ್ ಹತ್ತಿರ ಹೋದ. ನಾಳೆ ಕೊಡ್ತೇನೆ ಅಂದ. ನಾಳೆ ಹೋದರೆ, ‘ಎಲ್ಲಾ ಕೆಲಸ ಮುಗಿದಿದೆ, ಬಟನ್ ಅಷ್ಟೇ ಹೊಲಿದು ಕೊಡಬೇಕು, ಮದುವೆಗೆ ಎರಡು ಗಂಟೆ ಮುನ್ನ ಕೊಡ್ತೇನೆ, ಪ್ರಾಮಿಸ್’ ಎಂದ ಟೇಲರ್.

ಆದರೆ ಅದೇನಾಯಿತೋ ಏನೋ? ಕೊಡಲೇ ಇಲ್ಲ. ಮದುಮಗ ಟೇಲರ್‌ಗೆ ಶಪಿಸುತ್ತಾ, ರೆಡಿಮೇಡ್ ಕೋಟ್ ಹಾಕಿಕೊಂಡು ಮದುವೆಯಾದ. ತನ್ನ ಮದುವೆಗೆ ಸಿಗದ ಕೋಟ್ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಸುಮ್ಮನಾದ. ಟೇಲರ್  ಬಳಿ ಹೋಗಲಿಲ್ಲ. ಸುಮಾರು ಇಪ್ಪತ್ತು ವರ್ಷ ಕಳೆದು ಹೋದವು. ಅವನ ಮಗನ ಮದುವೆ ನಿಶ್ಚಯವಾಯಿತು. ಆಗ ತಾನು ಇಪ್ಪತ್ತು ವರ್ಷಗಳ ಹಿಂದೆ ಕೋಟ್ ಹೊಲಿಸಲು ಬಟ್ಟೆಕೊಟ್ಟಿದು ನೆನಪಾಯಿತು. ಟೇಲರ್ ಹತ್ತಿರ ಹೋಗಿ, ‘ನೀನಂತೂ ನನ್ನ ಮದುವೆಗೆ ಕೋಟ್ ಹೊಲಿದು ಕೊಡಲಿಲ್ಲ.

ಇನ್ನು ಹದಿನೈದು ದಿನಕ್ಕೆ ನನ್ನ ಮಗನ ಮದುವೆಯಿದೆ. ಅವನ ಮದುವೆಗಾದರೂ ಕೋಟ್ ಹೊಲಿದುಕೊಡು. ನಾಳೆ ಅವನನ್ನು ಕಳಿಸಿಕೊಡುತ್ತೇನೆ, ಅಳತೆ ತೆಗೆದುಕೊಳ್ಳುವಿಯಂತೆ. ಮಗನ ಮದುವೆಗಾದರೂ ಹೇಳಿದ ದಿನ ಕೋಟ್ ಹೊಲಿದುಕೊಡು. ನನ್ನ ಮದುವೆಗೆ ಮಾಡಿದಂತೆ ಮಾಡಬೇಡ’ ಎಂದ. ಆಯಿತು ಎಂದ ಟೇಲರ್. ಮಗ ಬಂದು ಅಳತೆ ಕೊಟ್ಟುಹೋದ. ಮದುವೆಗೆ ಇನ್ನು ಎರಡು ದಿನ ಇರುವಾಗ, ಹೋಗಿ ಕೇಳಿದರೆ, ‘ನಾಳೆ ಕೊಡ್ತೇನೆ’ ಎಂದ.

ನಾಳೆ ಹೋದರೆ, ‘ಮದುವೆಗೆ ಇನ್ನೂ ಹನ್ನೆರಡು ಗಂಟೆಯಿದೆ. ಈಗಲೇ ಕೋಟ್ ಧರಿಸುವುದಿಲ್ಲವ? ಸರಿಯಾದ ಸಮಯಕ್ಕೆ ನಿಮ್ಮ ಕೋಟ್ ಬರುತ್ತದೆ. ಕಾಳಜಿ ಬೇಡ’ ಎಂದ. ಮದುವೆ ಆರತಕ್ಷತೆ ಸಮಯ ಬಂತು. ಕೊನೆಗೂ ಟೇಲರ್ ಬರಲೇ ಇಲ್ಲ. ಕೋಟ್ ಕೊಡಲೇ ಇಲ್ಲ. ಅಪ್ಪ ಮತ್ತು ಮಗ ಇಬ್ಬರಿಗೂ ಟೇಲರ್ ಬಗ್ಗೆ ಬಹಳ ಕೋಪ ಬಂದಿತು. ನನ್ನ ಮದುವೆಗಂತೂ ಹೇಳಿದ ದಿನ ಕೊಡಲಿಲ್ಲ. ತನ್ನ ಮಗನ ಮದುವೆಗೂ ಹಾಗೆ ಮಾಡಿದನ ಎಂದು ಸಿಕ್ಕಾಪಟ್ಟೆ ಸಿಟ್ಟು ಬಂದಿತು. ಯಾವುದೂ ಒಂದು ನಿರ್ಧಾರ ವಾಗಬೇಕು ಎಂದು ಅಪ್ಪ, ಟೇಲರ್ ನ ಮನೆಗೆ ಹೋಗಿ, ಏರಿದ ದನಿಯಲ್ಲಿ ಬೈಯಲಾರಂಭಿಸಿದ.

ಆಗ ಹೊರಬಂದ ಟೇಲರ್ ಹೆಂಡತಿ, ‘ಊರಲ್ಲಿ ಒಂದೇ ದಿನ ಹತ್ತಾರು ಮದುವೆಗಳಿರುತ್ತವೆ, ಎಲ್ಲರೂ ನಮ್ಮ ಯಜಮಾನರು ಹೊಲಿದ ಕೋಟನ್ನೇ ಹಾಕಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಎರಿಗೂ ಅವಸರ. ಇಂದೇ ಬೇಕು ಎಂದು ಒತ್ತಡ ಹೇರು ತ್ತಾರೆ. ಟೇಲರ್‌ಗೆ ಹೀಗೆ ಒತ್ತಡ ಹೇರಬಾರದು. ಹೊಲಿದು ಕೊಡ್ತಾರೆ, ಸ್ವಲ್ಪ ತಾಳ್ಮೆ ಇರಲಿ’ ಎಂದಳು.

ಆಕೆಯ ಮಾತನ್ನು ಕೇಳಿ ಗಿರಾಕಿಯೊಬ್ಬನೇ ಅಲ್ಲ, ಟೇಲರ್ ಕೂಡ ಗರಬಡಿದವನಂತೆ ನಿಂತಿದ್ದ ! ಕೆಲವು ಆಣಿಮುತ್ತುಗಳು
ಇದನ್ನು ಹೇಳಿದವರು ಯಾರೋ? ಅವರ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ. ಬೇಕಾದರೆ, ನಾನೇ ಅಂದುಕೊಳ್ಳಿ. ಆದರೆ ಪ್ರತಿ ಮಾತಿನಲ್ಲಿಯೂ ಒಂದು ಮಿಂಚಿದೆ, ಒಂದು ನೀತಿಯಿದೆ. ಅಂಥ ಕೆಲವು ಆಣಿಮುತ್ತುಗಳು: ಆನಂದದ ದಾಂಪತ್ಯ ಮತ್ತು ಸುದೀರ್ಘ ಆಯುಷ್ಯದ ಒಳಗುಟ್ಟು, ಕನಿಷ್ಠ ಐವತ್ತು ವರ್ಷಗಳ ಕಾಲ ನೆಮ್ಮದಿಯಿಂದ ಬಾಳಲು ಸಹಕರಿಸುವ ವ್ಯಕ್ತಿಯನ್ನು ಮದುವೆಯಾಗುವುದಷ್ಟೇ ಅಲ್ಲ, ಆ ವ್ಯಕ್ತಿ ಇಲ್ಲದಿದ್ದರೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬುವವರನ್ನು ಹುಡುಕಿ, ಆಯ್ಕೆ ಮಾಡುವುದು.

ಎಲ್ಲರಿಗೂ ಒಳ್ಳೆಯವರಾಗಿರಿ. ಎಲ್ಲವರಿಗೂ ಒಳ್ಳೆಯದನ್ನೇ ಮಾಡಿ. ಸಾಧ್ಯವಾದರೆ ನಿಮ್ಮ ಕಾಫಿಯನ್ನು ನೀವೇ ಮಾಡಿಕೊಳ್ಳಿ.
ನಿಮಗೆಂಥ ಸ್ವಾದ ಬೇಕೆಂಬುದು ಬೇರೆಯವರಿಗೆ ಗೊತ್ತಿಲ್ಲದಿರಬಬಹುದು. ಯಾವುದರದರೂ ಓರೆಕೋರೆ ಕಂಡರೆ, ಪತ್ರಕರ್ತರಂತೆ,
-ಸ್ ಬುಕ್ ವೀರರಂತೆ ಕಾಮೆಂಟ್ ಮಾಡಿ ಸುಮ್ಮನಾಗಬೇಡಿ. ಓರೆಕೋರೆ ಸರಿ ಮಾಡಲು ನಾನೇನು ಮಾಡಬಹುದು ಯೋಚಿಸಿ,
ಸರಿ ಮಾಡಿ. ಇಲ್ಲದಿದ್ದರೆ ನೀವು ಅವ್ಯವಸ್ಥೆಯ ಭಾಗವೇ ಆಗುತ್ತೀರಿ.

ರೂಲ್ಸ್ ಗಳೆಂದರೆ, ಬೀದಿ ದಾರಿಗಳಿದ್ದಂತೆ. ಅವು ನಿಮ್ಮನ್ನು ನಿಮಗೆ ಗೊತ್ತಿರುವ ಜಾಗಕ್ಕೇ ಕರೆದುಕೊಂಡು ಹೋಗುತ್ತವೆ.
ಈ ಕಾರಣದಿಂದ ಉಲ್ಲಂಘಿಸಬೇಡಿ. ಪ್ರತಿ ದಿನವೂ ಕನಿಷ್ಠ ಒಂದು ಸಲವಾದರೂ ಅದೃಷ್ಟವನ್ನು ಪರೀಕ್ಷಿಸಿ. ಪ್ರತಿದಿನವೂ ನಿಮಗೆ ನೀವು ಅದೃಷ್ಟವಂತ ಎಂಬ ಭಾವನೆ ಆವರಿಸಿರುತ್ತದೆ. ನಿಮ್ಮ ಕಂಫರ್ಟ್ ಜೋನ್, ಕಂಫರ್ಟ್ ಜೋನ್ ಆಚೆ ಇದೆ ಎಂದು ಭಾವಿಸಿ. ನೀವು ಸದಾ ಕ್ರಿಯಾಶೀಲರಾಗಿರುತ್ತೀರಿ, ಹೊಸತನಕ್ಕಾಗಿ ತುಡಿಯುತ್ತಿರುತ್ತೀರಿ.

ತೀವ್ರ ಒತ್ತಡದಲ್ಲಿದ್ದಾಗ (tension) ನಿಮಗೆ ಎಂದೂದ್ದಾ ಬಾರದ ವಿಚಿತ್ರ ಯೋಚನೆಗಳು ಬರುತ್ತವೆ. ಆಗಾಗ ಟೆನ್ಷನ್
ಮಾಡ್ಕೋಳ್ಳಿ, ತಪ್ಪೇನಿಲ್ಲ. ಕುಲದೀಪ್ ನಯ್ಯರ್ ಬರೆಯುತ್ತಾರೆ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರು ತೀರಿಕೊಂಡ
ನಂತರ, ಅವರು ಮೊದಲೇ ಬರೆದಿಟ್ಟಿದ್ದ ಪುಸ್ತಕ ಬಿಡುಗಡೆ ಯಾಗಿದೆ. ಅದರ ಹೆಸರು On Leaders And Icons : From Jinnah To Modi . ಈ ಕೃತಿಯಲ್ಲಿ ಅವರು ಜಿನ್ನಾ  ಅವರಿಂದ ಮೋದಿ ಅವರ ತನಕ ತಮ್ಮ ಒಡನಾಟ, ಸಂಬಂಧ ಮತ್ತು ಪ್ರಸಂಗಗಳನ್ನು ವಿವರಿಸಿದ್ದಾರೆ. ನಯ್ಯರ್ ಅವರು ಡಾ.ಮನಮೋಹನ ಸಿಂಗ್ ಅವರನ್ನು ಮೊದಲ ಬಾರಿಗೆ ಭೇಟಿ ಆದಾಗ ಅವರು ಕೇಂದ್ರ ಸರಕಾರಕ್ಕೆ ಆರ್ಥಿಕ ಸಲಹೆಗಾರರಾಗಿದ್ದರಂತೆ. ಅದಕ್ಕೂ ಮೊದಲು ನಯ್ಯರ್, ಡಾ.ಸಿಂಗ್ ಅವರನ್ನು ಇಂಡಿಯಾ ಇಂಟರ್ ‌ನ್ಯಾಷನಲ್ ಸೆಂಟರ್ ಮತ್ತು ಗೋಲೆ ಮಾರ್ಕೆಟ್ ಸನಿಹವಿರುವ ಭಾಯ್ ವೀರ್ ಸಿಂಗ್ ಸಾಹಿತ್ಯ ಸದನದಲ್ಲಿ ಆಗಾಗ ನೋಡುತ್ತಿದ್ದ ರಂತೆ. ಆದರೆ ಡಾ.ಸಿಂಗ್ ಜತೆ ಮಾತಾಡುವ ಅವಕಾಶ ಸಿಕ್ಕಿರಲಿಲ್ಲವಂತೆ.

ಮೊದಲ ಸಲ ಭೇಟಿ ಆದಾಗ, ಡಾ.ಸಿಂಗ್ ಹೇಳಿದರಂತೆ – ಮಿಸ್ಟರ್ ನಯ್ಯರ್, ನೀವು ಭಾರತ ರತ್ನ ಪ್ರಶಸ್ತಿಗೆ ಅರ್ಹರು’ ಅವು ಹಿಂದೂ – ಸಿಖ್ ಧರ್ಮೀಯರ ನಡುವೆ ಕಂದಕ ಮೂಡಿದ ದಿನಗಳು. ನಯ್ಯರ್ ಅವರು ಸರಕಾರದ ಪರವಾಗಿ ಮತ್ತು ಸಿಖ್
ಸಮುದಾಯದ ಪರವಾಗಿ ಸಂಧಾನಕಾರರಾಗಿ ಮಾತುಕತೆಗೆ ನೆರವಾಗುತ್ತಿದ್ದರು. ನಯ್ಯರ್ ಅವರು ಲಂಡನ್ನಿನಲ್ಲಿ ಭಾರತದ ಹೈ
ಕಮಿಷನರ್ ಆದಾಗ ಎರಡೂ ಸಮುದಾಯಗಳನ್ನು ಹತ್ತಿರ ತರಲು ಬಹಳ ಶ್ರಮಿಸಿದರು. ಆದರೆ ಅವರನ್ನು ಅಲ್ಲಿ ಮುಂದು ವರಿಯಲು ಕೆಲವರು ಬಿಡಲಿಲ್ಲ.

ಆದರೆ ಡಾ.ಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಇದ್ದರೂ ಒಂದೇ ಒಂದು ಸಲ ನಯ್ಯರ್ ಅವರನ್ನು ಕಾಫಿಗೂ
ಆಹ್ವಾನಿಸಲಿಲ್ಲವಂತೆ. ತಮ್ಮನ್ನು ಚಹಾ ಅಥವಾ ಕಾಫಿಗೆ ಕರೆದರೆ ಸೋನಿಯಾ ಗಾಂಧಿ ಅವರಿಗೆ ಬೇಸರವಾಗಬಹುದೆಂದು ಅವರು ಹಾಗೆ ಮಾಡಿದ್ದಿರಬಹುದು ಎಂಬುದು ನಯ್ಯರ್ ಇಂಗಿತ. ನಯ್ಯರ್ ಅವರು ಇಂದಿರಾ ಗಾಂಧಿಯ ಟೀಕಾಕಾರರಾಗಿದ್ದರು
ಎಂಬುದು ಸೋನಿಯಾಗೆ ಗೊತ್ತಿತ್ತು. ನಯ್ಯರ್ ಅವರನ್ನು ಕಾಫಿಗೆ ಕರೆದರೆ ಸೋನಿಯಾ ಮುನಿಸಿಕೊಳ್ಳಬಹುದೆಂದು ನಯ್ಯರ್ ಹತ್ತಿರ ಸಹ ಡಾ.ಸಿಂಗ್ ಸುಳಿಯಲಿಲ್ಲ.

ಡಾ.ಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಸುಮಾರು ಎಂಬತ್ತು ದೇಶಗಳಿಗೆ ಹೋಗಿದ್ದರು. ಅವರು ವಿದೇಶಯಾತ್ರೆಯನ್ನು ಇಷ್ಟಪಡುತ್ತಿದ್ದರು. ಪ್ರತಿ ಸಲ ವಿದೇಶಗಳಿಗೆ ಹೋಗುವಾಗ ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ವಿದೇಶಗಳಿಗೆ ಹೋದರೆ ಪತ್ನಿ ಜತೆ ಹೆಚ್ಚು ಹೊತ್ತು ಕಳೆಯಬಹುದು ಎಂಬುದು ಅವರ ಇರಾದೆಯಾಗಿದ್ದಿರಬಹುದು. ಅಲ್ಲದೆ ಡಾ.ಸಿಂಗ್ ವಿದೇಶಗಳಲ್ಲಿ ಹೆಚ್ಚು ನಿರುಮ್ಮಳವಾಗಿ, ಹಾಯಾಗಿ ಇರುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೋನಿಯಾ ಗಾಂಧಿ ಜತೆ ಭಾಗವಹಿಸುವ ಸಂದಭ ಬಂದಾಗ ಡಾ.ಸಿಂಗ್ ಎಂದೂ ತಾವೇ ಮೊದಲು ಕುಳಿತುಕೊಳ್ಳುತ್ತಿರಲಿಲ್ಲವಂತೆ. ತಮ್ಮನ್ನು ಪ್ರಧಾನಿ ಮಾಡಿದ ಸೋನಿಯಾ ಆಸೀನರಾದ ಬಳಿಕವೇ ತಾವು ಕುಳಿತುಕೊಳ್ಳುತ್ತಿದ್ದರಂತೆ.

ಬೆರಗುಗಣ್ಣು ಇಲ್ಲದಿದ್ದರೆ…
ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಮ್ಮ ಪತ್ನಿಯೊಂದಿಗೆ ಯುರೋಪ್ ಪ್ರವಾಸಕ್ಕೆ ಹೋಗಿದ್ದರು. ಇಪ್ಪತ್ನಾಲ್ಕು ದಿನಗಳಲ್ಲಿ
ಹದಿನೇಳು ದೇಶಗಳಿಗೆ ಹೋಗಿದ್ದರು. ಅವರು ಹೋದ ದೇಶಗಳ ಹೆಸರುಗಳನ್ನೆಲ್ಲ ಹೇಳಿದರು. ಆ ಎಲ್ಲಾ ದೇಶಗಳನ್ನು ನಾನೂ
ನೋಡಿದ್ದೆ. ನೀವು ಬೆಲ್ಜಿಯಂ ಗೆ ಹೋಗಿzವು ಅಂತ ಹೇಳಿದಿರಿ, ಅದರ ರಾಜಧಾನಿ ಬ್ರುಸೆಲ್ಸ್‌ ಹತ್ತಿರವಿರುವ ಅಂಟ್ವಾರ್ಪ್‌ಗೆ
ಹೋಗಿದ್ರಾ?’ ಎಂದು ಕೇಳಿದೆ. ಇಲ್ಲ, ಇಲ್ಲ, ಕೇವಲ ಬ್ರುಸೆಲ್ಸ್’ಗೆ ಮಾತ್ರ ಹೋಗಿದ್ದೆವು ಅಂದರು. ಹೌದಾ ? ನೀವು ಬ್ರೂಶ್ (Bruges)ಗೆ ಹೋಗಿದ್ರಾ ಅಂತ ಕೇಳಿದೆ. ಅದಕ್ಕೂ ಇಲ್ಲ, ಇಲ್ಲ…ಅಲ್ಲಿಗೆ ಹೋಗಬೇಕೆಂದಿದ್ದೆವು.. ಆದರೆ ಆಗಲಿಲ್ಲ’ ಎಂದರು.

ಅಯ್ಯೋ ನೀವು ಬ್ರುಸೆಲ್ಸ್’ಗೆ ಹೋಗಿ ಬ್ರೂಶ್ ಗೆ ಹೋಗದಿದ್ದರೆ ಹೇಗೆ ?’ ಎಂದು ಕೇಳಿದೆ. ಅದ್ಸರಿ, ಫ್ರಾನ್ಸ್’ಗೆ ಹೋದವರು ಅಲ್ಲಿನ ಬರ್ಗಂಡಿ ಪ್ರದೇಶದಲ್ಲಿರುವ ಮಾಂಟ್ಸೆಂಟ್ ಮಿಚೆಲ್ ಎಂಬ ಊರಿಗೇನಾದರೂ ಹೋಗಿದ್ರಾ ? ಎಂದು ಕೇಳಿದೆ. ಫ್ರಾನ್ಸ್’ನಲ್ಲಿ
ಪ್ಯಾರಿಸ್ ಬಿಟ್ಟರೆ ಮತ್ತೆಲ್ಲೂ ಹೋಗಿಲ್ಲ’ ಎಂದರು. ಜರ್ಮನಿಗೆ ಹೋದವರು ಬರ್ಲಿನ್, ಹ್ಯಾಂಬರ್ಗ್ ಹಾಗೂ ಮ್ಯುನಿಕ್ ಗೆ
ಹೋಗಿರಬೇಕು ಆಲ್ವಾ ?’ ಅಂತ ಕೇಳಿದೆ. ಇಲ್ಲ ಸರ್, ನಾವು ಜರ್ಮನಿಯ.ಲಿ ಫ್ರಾಕ್ ಫರ್ಟ್ ಮಾತ್ರ ನೋಡಿದ್ದು’ ಎಂದರು.

ಅ ಸಾರ್, ನೀವು ಯಾವ ಊರನ್ನು ನೋಡಬೇಕಿತ್ತೋ, ಅವನ್ನೇ ನೋಡಿಲ್ಲವಲ್ಲ. ಬರ್ಲಿನ್, ಹ್ಯಾಂಬರ್ಗ್, ಮ್ಯುನಿಕ್ ನೋಡದೇ, ಜರ್ಮನಿಯನ್ನು ನೋಡಲು ಹೇಗೆ ಸಾಧ್ಯ? ಎಂದು ಕೇಳಿದೆ. ಅದಕ್ಕೆ ಅವರ ಬಳಿ ಉತ್ತರ ಇರಲಿಲ್ಲ. ಯುರೋಪಿನಲ್ಲಿರುವ ಪ್ರತಿ ಊರು ಸಹ ಒಂದೊಂದು ಕಾರಣಕ್ಕೆ ವೈಶಿಷ್ಟ್ಯವೇ. ಎಲ್ಲಾ ಊರುಗಳಿಗೆ ಹೋಗಲಾಗುವುಡಿದಿಲ್ಲ, ನಿಜ. ಆದರೆ ಕೆಲವು ಊರು ಗಳಿಗೆ ಹೋಗಲೇಬೇಕು. ಊರು ನೋಡುವ ತರಾತುರಿಯಲ್ಲಿ ಬೇಕಾಬಿಟ್ಟಿ ನೋಡುವ ಬದಲು, ಒಂದೇ ದೇಶದಲ್ಲಿರುವ ಪ್ರಮುಖ ಊರುಗಳನ್ನು ನೋಡುವುದು ಹೆಚ್ಚು ಕ್ರಮಬದ್ಧ.

ಸಾಮಾನ್ಯವಾಗಿ ಫ್ರಾನ್ಸ್’‌ನಲ್ಲಿ ಎಲ್ಲರೂ, ಪ್ಯಾರಿಸ್‌ಗೆ ಹೋಗಿ ಬರುತ್ತಾರೆ. ಆದರೆ ಅಲ್ಲಿ ನೋಡಲೇಬೇಕಾದ ಹಲವಾರು
ಊರಿಗಳಿವೆ. ಮಾರ್ಸೆಇ, ಲಿಯೋನ್, ಸ್ಟ್ರಾಸ್ಬರ್ಗ್, ಲೋಯ್ರ್ ವ್ಯಾಲಿ, ಬೋರ್ಡೆಕ್ಸ್, ಲ್ಯೂಬೆರೊನ್, ಡೊರಡೊನ್, ಫ್ರೆಂಚ್ ರಿವೀರಾ, ರೋಚಮಾರ್ದೌ, ಸೈನ್ಟ್ ಎಮಿಲಿಓನ್, ಫ್ರೆಂಚ್ ಆಲ್ಪ್ಸ್, ನೀಮ್ಸ, ಲಿ ಮುಂತಾದ ನಗರಗಳನ್ನು ನೋಡಲೇ ಬೇಕು. ಪ್ಯಾರಿಸ್ ಬೇರೆ ಕಾರಣಕ್ಕೆ ಈ ಊರುಗಳು ಪ್ರಸಿದ್ಧ. ಇವುಗಳನ್ನು ನೋಡದೇ ಫ್ರಾನ್ಸ್ ನೋಡಿ ಬಂದೆ ಅಂದರೆ ಅದಕ್ಕೆ ಅರ್ಥವೇ ಇಲ್ಲ. ಹತ್ತಾರು ದೇಶಗಳನ್ನು ನೋಡುವ ಬದಲು ಒಂದೇ ದೇಶವನ್ನು ಇಡಿಯಾಗಿ ನೋಡುವುದು ವಾಸಿ.

ಬಫೆ ಆಹಾರದಲ್ಲಿ ನೂರಾರು ಭಕ್ಷ್ಯ – ಭೋಜನ, ಪದಾರ್ಥಗಳನ್ನು ಇಟ್ಟಿರುತ್ತಾರೆ. ಅವೆಲ್ಲವುಗಳನ್ನು ನೋಡಿದ ಮಾತ್ರಕ್ಕೆ ಸೇವಿಸಿದಂತಲ್ಲ. ಅವುಗಳನ್ನು ಸವಿದರೆ ಮಾತ್ರ ರುಚಿ ಗೊತ್ತಾಗಲು ಸಾಧ್ಯ. ಈ ಮಾತು ನಾವು ನೋಡುವ ಪ್ರತಿಊರಿಗೂ ಅನ್ವಯ ವಾಗುತ್ತದೆ. ದೇಶ ನೋಡುವುದಕ್ಕೂ ವಿಶೇಷ ಕಣ್ಣು, ನೋಟ ಬೇಕು. ಅಪರಿಮಿತ ಆಸಕ್ತಿ ಬೇಕು. ಅನಿದೆ ಮಣ್ಣು ಎಂಬ ಭಾವ ಇರುವವರು ಮನೆಯ ಇರುವುದು ವಾಸಿ. ಪ್ರತಿ ನೋಟವನ್ನೂ ಕಣ್ಣರಳಿಸಿಕೊಂಡು ಕಣ್ತುಂಬಿಕೊಳ್ಳುವ ಹಪಾಹಪಿ ಇಲ್ಲದಿದ್ದರೆ ಹೊಸ ಸಂಗತಿ ಕಾಣುವುದೇ ಇಲ್ಲ. ಹೊಸ ಅನುಭವ ಆಗುವುದಿಲ್ಲ. ಯಾವುದೇ ಊರಿಗೂ ಹೋದರೂ, ಮಗುವಿ ನಂಥ ಬೆರಗು ಗಣ್ಣು ಇರದಿದ್ದರೆ ಎಲ್ಲವೂ ಒಂದೇ ರೀತಿ ಕಂಡೀತು.

Leave a Reply

Your email address will not be published. Required fields are marked *

error: Content is protected !!