Friday, 13th December 2024

ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯೇ?!

ಪ್ರತಿಕ್ರಿಯೆ

ಟಿ. ದೇವಿದಾಸ್

ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯೇ? ಛೆ…ಎಂಥಾ ಮಾತು ಕೇಳುವ ಪರಿಸ್ಥಿಿತಿ ಬಂದೋಯ್ತು! ಮಾನ್ಯ ಕೇಂದ್ರ ಸಚಿವರಾದ ಸದಾನಂದ ಗೌಡರು ಹೇಳಿದರೆನ್ನಲಾದ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಿದ್ದಾಗ ಒಮ್ಮೆೆಲೇ ದಿಗಿಲು ಬಡಿದ ಅನುಭವವಾದಂತಾಯಿತು. ಅಯ್ಯೋ ಇದೆಂಥಾ ಹೀನವಾದ ದುಸ್ಥಿಿತಿ ಅಧಿಕಾರ ರಾಜಕೀಯಕ್ಕೆೆ ಹಿಡಿದೋಯ್ತು!

ಅಷ್ಟಕ್ಕೂ ಚಕ್ರವರ್ತಿಯವರು ಕೇಳಿದ್ದೇನು? ಬರ ಪರಿಹಾರಕ್ಕೆೆ ಸಂಬಂಧಿಸಿ ನಮ್ಮ ಸಂಸದರು ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದು ಸಾಕಾಗಲಿಲ್ಲ, ಒತ್ತಡ ತಂದಿದ್ದು ಏನೂ ಸಾಲದು, ಬೇರೆ ರಾಜ್ಯದ ಸಂಸದರನ್ನು ನೋಡಿ ನಮ್ಮ ಸಂಸದರು ಕಲಿಯಬೇಕಿದೆ. ಮೂರು, ನಾಕು, ಐದಾರು ಬಾರಿ ಗೆದ್ದವರು ಈ ಸಂದರ್ಭದಲ್ಲಿ ಯಾವ ಪ್ರತಿಕ್ರಿಿಯೆಯನ್ನು ಈ ಕುರಿತಾಗಿ ನೀಡದೆ ಸಂತ್ರಸ್ತರ ಬೆಂಬಲಕ್ಕೆೆ ನಿಲ್ಲಲಿಲ್ಲ, ಅವರು ಮಾಡಿದ್ದು ತಪ್ಪುು, ಅವರು ಜನರ ನೋವಿಗೆ ಸ್ಪಂದಿಸಬೇಕಿತ್ತು, ಕೇಂದ್ರದಲ್ಲಿ ಮಂತ್ರಿಿಯಾದವರು ಮೋದಿಯವರನ್ನು ಆಗ್ರಹಪಡಿಸಬೇಕಿತ್ತು, ಕರ್ನಾಟಕದ ಕಣ್ಣೀರು ಸಂಸದರಿಗೇಕೆ ಕಾಣುತ್ತಿಿಲ್ಲ- ಎಂದು ಮಾಧ್ಯಮಗಳಲ್ಲಿ, ಅವರ ಅಂಕಣದಲ್ಲಿ ಪ್ರಸ್ತಾಾಪಿಸಿದ್ದಾರೆ. ಇದನ್ನೇ ತಪ್ಪುು ಎನ್ನಲು ಸಾಧ್ಯವೇ? ಅಥವಾ ಯಾರಿಗಾದರೂ ಸಾಧ್ಯವಾಗುತ್ತದೆ ಎಂದಾದರೆ ಅದು ಮತಿಭ್ರಮಣೆಯೇ ಸರಿ! ಇಲ್ಲ, ಅಧಿಕಾರದ ದರ್ಪವೆಂದೇ ಅರ್ಥೈಸಬೇಕಾಗುತ್ತದೆ.

ಅದರಲ್ಲೂ ಬಿಜೆಪಿ ಸಂಸದರೇ ಹೀಗೆ ಮಾತಾಡಿದ್ದನ್ನು ಕಣ್ಣಾಾರೆ ಕೇಳಿದ ಮೇಲೂ ಬಹು ಅಚ್ಚರಿಯಾಗುತ್ತದೆ! ಕೈಯಿಂದ ಯಾರೂ ಹಣ ಕೊಡಲ್ಲ, ಪರಿಹಾರ ನಿಧಿಯನ್ನು ಕೊಡೋದು ಅಷ್ಟೆೆ, ಅದೇನು ಕೈಯಿಂದ ಕೊಡೋಕ್ಕಾಾಗುತ್ತಾಾ? ಮೋದಿ ಅಮೆರಿಕಾಕ್ಕೆೆ ಹೋಗಿದ್ದಾರೆ, ನೆಲೆ ಕಳಕೊಂಡವರ ವಿವರಗಳ ಯಾದಿ ಸಿದ್ಧವಾಗುತ್ತಿಿದೆ, ಅದಾದ ಕೂಡಲೇ ಪರಿಹಾರ ಕೊಡುತ್ತೇವೆ- ಹಾಗೆ ಹೀಗೆ ಅಂತ ಒಬ್ಬೊೊಬ್ಬ ಸಂಸದರು ಒಂದೊಂದು ಹೇಳಿಕೆಯನ್ನು ನೀಡಿದ್ದನ್ನು ಕೊಟ್ಟ ಮೇಲಂತೂ ಪರಿಹಾರ ಬಂದೀತು ಎಂಬ ಎಲ್ಲ ಬಗೆಯ ನಿರೀಕ್ಷೆಗಳು ಒಂದೇ ಸಲಕ್ಕೆೆ ಸತ್ತುಹೋಯ್ತೇನೋ ಎನ್ನುವಂತಾಯ್ತು! ನಮ್ಮ ರೂಢಿಯಲ್ಲಿ ಒಂದು ಮಾತಿದೆ: ಹೂವು ಕೊಡದಿದ್ದರೂ ಹೂವಿನಂಥ ಮಾತನ್ನಾಾದರೂ ಆಡಬಹುದಲ್ವೆೆ ಎಂದು. ನಮ್ಮ ಸಂಸದರಿಗೆ ಇದೂ ಸಾಧ್ಯವಾಗದೇ ಹೋಯಿತೆ?

ಸೂಲಿಬೆಲೆಯವರನ್ನು ಕುರಿತು ಯಾರು ಯಾರಿಗೂ ಪರಿಚಯಿಸುವ ಅಥವಾ ವ್ಯಕ್ತಿಿ ಚಿತ್ರಣವನ್ನು ಕೊಡುವ ಅಗತ್ಯವಾಗಲೀ ಅನಿವಾರ್ಯತೆಯಾಗಲೀ ಈ ರಾಜ್ಯದಲ್ಲಿ ಇಲ್ಲವೇ ಇಲ್ಲ! ಅಷ್ಟರಮಟ್ಟಿಿಗೆ ಅವರು ಸುಪ್ರಸಿದ್ಧರು, ಜನಮಾನ್ಯರು, ಜನಪ್ರಿಿಯರು. ರಾಷ್ಟ್ರೀಯತೆಯ ವಿಚಾರದಲ್ಲಿ ಅವರ ನಿಲುವುಗಳೇನು, ಬದ್ಧತೆಗಳೇನು, ದೂರದೃಷ್ಟಿಿಯೇನು ಎಂಬುದನ್ನು ಯಾರೂ ಸಾಬೀತು ಮಾಡುವ ಅಗತ್ಯವಂತೂ ಖಂಡಿತವಾಗಿಯೂ ಇಲ್ಲವೇ ಇಲ್ಲ. ್ಛ ್ಚಟ್ಠ್ಟಛಿ ಅವರು ರಾಜಕಾರಣಿಯಲ್ಲ, ಮೇಲಾಗಿ ಅವರು ಯಾವುದೇ ಪಕ್ಷದ ವಕ್ತಾಾರರಲ್ಲ.

ಆದ್ದರಿಂದ ಕರ್ನಾಟಕದ ರಾಜಕಾರಣಿಗಳಿಗೆ ಅವರ ಪರಿಚಯ ಇಲ್ಲದಿರಬಹುದು! ಅಥವಾ ಇದ್ದರೂ ಅವರ ಜನಪ್ರಿಿಯತೆಯನ್ನೋೋ ಅಥವಾ ಜನಮಾನ್ಯತೆಯನ್ನೋೋ ಸಹಿಸಲು ಆಗದೇ ಎಲ್ಲ ಗೊತ್ತಿಿದ್ದರೂ ಗೊತ್ತಿಿಲ್ಲದಂತೆ ಕಪಟದ ವರ್ತನೆ ಅಥವಾ ಮಾತನ್ನು ಆಡಬಹುದು! ಈ ಎರಡೂ ಸಾಧ್ಯತೆಗಳನ್ನು ಅನೇಕ ಸಂದರ್ಭಗಳಲ್ಲಿ ನಾವು ಕಂಡಿದ್ದೇವೆ. ಚಕ್ರವರ್ತಿಯವರು ಆಡಿದ ಮಾತುಗಳಲ್ಲಿ ಅಥವಾ ಪ್ರಶ್ನೆೆಯಲ್ಲಿ ಯಾರ ಪರ ಅಥವಾ ವಿರೋಧವಿರಲು ಸಾಧ್ಯ ಇಲ್ಲ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಯಾಕೆಂದರೆ ಅವರ ಮಾತುಗಳಲ್ಲಿ ಸ್ವಾಾರ್ಥ ಇಲ್ಲ. ಇರಲು ಸಾಧ್ಯವೂ ಇಲ್ಲ.

ಮುಖ್ಯವಾಗಿ ಅವರು ಮಾಡುವ ಸಾಮಾಜಿಕ ಕಾರ್ಯಗಳಲ್ಲಿ ಸ್ವಾಾರ್ಥವಾಗಲೀ, ಹೊಲಸು ರಾಜಕೀಯದ ದುರ್ವಾಸನೆಯಾಗಲೀ ಇರುವುದಿಲ್ಲ. ಬಯಸಿದ್ದರೆ ಅವರು ಎಂದೋ ಎಂಪಿಯೂ ಆಗಬಹುದಿತ್ತು, ಎಂಎಲ್ಲೆ ಆಗಬಹುದಿತ್ತು. ಒಮ್ಮೆೆ ರಾಜಕಾರಣಿ ಆದರೆ ತನ್ನ ಕಾರ್ಯಕ್ಷೇತ್ರದ ವ್ಯಾಾಪ್ತಿಿ ಮತ್ತು ವಿಸ್ತಾಾರಕ್ಕೆೆ ಅನಿವಾರ್ಯವಾಗಿ ಬಂದೊದಗುವ ಇತಿ ಮತ್ತು ಮಿತಿಯನ್ನು ಅಳೆದು ತೂಗಿ ನೋಡಿ ಅವರು ರಾಜಕೀಯದಿಂದಲೇ ದೂರವುಳಿದವರು. ಜನರಿಂದ ತಾನು ದೂರವಾಗುವ ಯಾವ ಸಂದರ್ಭವನ್ನೂ ಅವರು ಬಯಸಲಾರರು. ಈ ಹಿನ್ನೆೆಲೆಯಲ್ಲಿ ಅವರು ಈಗ ಆಡಿದ ಮಾತುಗಳಲ್ಲೂ ಅದೇ ಜನಪರ ದನಿಯಿದೆ ಎಂಬುದನ್ನು ನಾವೆಲ್ಲ ಗುರುತಿಸಬೇಕು. ಅದೊಂದೇ ಇರುವುದು ಗಮನಾರ್ಹ! ಇದನ್ನೇ ದೇಶದ್ರೋಹವೆಂದು ಬಿಟ್ಟರೆ ಏನರ್ಥ? ಮೇಲ್ಮುಖವಾಗಿ ಉಗಿದರೆ ನಮ್ಮ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಚಕ್ರವರ್ತಿಯವರಿಗೆ ಇಲ್ಲ ಎಂಬ ಮಾತೂ ಕೇಳಿ ಬಂತು. ಕರ್ನಾಟಕದಲ್ಲಿ 25 ಬಿಜೆಪಿಯ ಸಂಸದರು ಗೆದ್ದುಬರುವಲ್ಲಿ ಚಕ್ರವರ್ತಿಯವರ ಶ್ರಮವಿಲ್ಲವೇ! ಆ ಶ್ರಮಕ್ಕೆೆ ಬೆಲೆಯಿಲ್ಲವೇ? ಇದೆಂಥಾ ಸಭ್ಯತೆ, ಸಜ್ಜನಿಕೆ ಬಿಜೆಪಿ ಸಂಸದರದು?!