ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
adarsh.shetty207@gmail.com
ಶಾಲಾ ಪಠ್ಯ ಪುಸ್ತಕದ ಇತಿಹಾಸ ವಿಭಾಗದಲ್ಲಿ ನಮ್ಮ ದೇಶವನ್ನು ಮೊಘಲರು ಸೇರಿದಂತೆ ವಿದೇಶಿಯರು ಆಕ್ರಮಣಗೈದು ಅಪಾರ ಸಂಪತ್ತುಗಳನ್ನು ಕೊಳ್ಳೆ ಹೊಡೆದ, ಸುಲ್ತಾನ್, ನಿಜಾಮ, ಟಿಪ್ಪು, ಹೈದರಾಲಿ, ಬಾಬರ್‌ನ ಆಡಳಿತದಲ್ಲಿ ಅಪಾರ ಹಿಂದೂ ದೇವಾಲಯ ಗಳನ್ನು ನಾಶ ಗೊಳಿಸಿರುವ ವಿಚಾರಗಳನ್ನು ಓದಿ ತಿಳಿದುಕೊಂಡಿದ್ದೇವೆ.
ಇಂತಹುದೇ ಘಟನೆಯೊಂದಕ್ಕೆ ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಾಕ್ಷಿಯಾದಂತಿದೆ. ಸುಪ್ರೀಂಕೋರ್ಟ್ ಆದೇಶದ ನೆಪವೊಡ್ಡಿ ಜಿಲ್ಲಾಡಳಿತ ಸಾರ್ವಜನಿಕ ಸ್ಥಳಗಳಲ್ಲಿನ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಹಲವಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಮಂದಿರಗಳನ್ನು ನೆಲಸಮಗೊಳಿಸಿರುವ ಕ್ರಮ ಸರಕಾರದ ವಿರುದ್ಧ ಭಕ್ತಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ.
ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯ, ಮಸೀದಿ, ಚರ್ಚುಗಳನ್ನು ಯಾವುದೇ ನೋಟಿಸ್ ನೀಡದೆ ಆಡಳಿತ ವರ್ಗವು ಧ್ವಂಸ ಗೊಳಿಸಲು ಮುಂದಾಗಿರುವ ಕ್ರಮವು ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಂತೂ ಸುಳ್ಳಲ್ಲ. ಇದಲ್ಲದೆ ಅನಧಿಕೃತ ಕಟ್ಟಡದ ನೆಪವೊಡ್ಡಿ ರಾಜ್ಯಾ ದ್ಯಂತ ಸಾವಿರಾರು ದೇವಾಲಯಗಳನ್ನು ಕೆಡವಲು ಸಿದ್ದತೆ ನಡೆದಿದೆಯೆಂಬ ಕ್ರಮದ ವಿರುದ್ಧ ಹಿಂದೂಪರ ಸಂಘಟನೆಗಳು ಕೆಂಡಾ ಮಂಡಲವಾಗಿದ್ದು, ಹಿಂದುತ್ವದ ಹೆಸರಿನಲ್ಲಿ ಗದ್ದುಗೆಯೇರಿದ ಪಕ್ಷವೊಂದರ ಆಡಳಿತದಲ್ಲಿ ಹಿಂದೂ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ.
ಇದೇ ವೇಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ನಡೆಸಿದ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ದಾಖಲಾಗುತ್ತದೆ. ಆದರೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರ ಪುಂಡರ ಬಗ್ಗೆ ಸರಕಾರ ಮೃದುಧೋರಣೆ ತಳೆದಿದೆಯೆಂಬ ಆಕ್ರೋಶವು ಕೂಡ ಇದೇ ವೇಳೆ ಪ್ರತಿಧ್ವನಿಸಿದೆ. ಒಂದೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು, ಕಾಂಗ್ರೆಸ್ ಸರಕಾರ ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದರೆ ಇಡೀ ರಾಜ್ಯವ್ಯಾಪಿ ಬಿಜೆಪಿ ವತಿಯಿಂದ ಆಂದೋಲನ, ಹೋರಾಟ ಬಹು ದೊಡ್ಡ ಮಟ್ಟದಲ್ಲಿ ನಡೆದುಹೋಗುತ್ತಿತ್ತು. ಆದರೆ ತಾವೇ ಬೆವರು ಹರಿಸಿ, ರಕ್ತ ಸುರಿಸಿ ಗೆಲ್ಲಿಸಿದ ಬಿಜೆಪಿ ಪಕ್ಷದ ಕ್ರಮದ ವಿರುದ್ಧ ಮಾತನಾಡ ದಂತಹ ಸಂದಿಗ್ಧ ಪರಿಸ್ಥಿತಿಗೆ ಕಾರ್ಯಕರ್ತ ಸಿಲುಕಿದ್ದಂತೂ ಸುಳ್ಳಲ್ಲ.
ಇಂದು ರಾಜ್ಯದಲ್ಲಿ ಸಾವಿರಾರು ಕೆರೆಗಳನ್ನು, ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅನಽಕೃತ ಕಟ್ಟಡಗಳನ್ನು ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು ಕಬಳಿ ಸುತ್ತಿರುವುದು ಒಂದೆಡೆಯಾದರೆ ರಸ್ತೆಗಳನ್ನು ಆಕ್ರಮಿಸಿ, ಕಂಪೌಂಡ್ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುವ ನುಂಗಣ್ಣರಿದ್ದು, ಇವರೆಲ್ಲರ ಪ್ರಭಾವಕ್ಕೆ ಮಣಿದು ರಸ್ತೆ ಅಗಲೀಕರಣ ಸ್ಥಗಿತಗೊಳಿಸುವ, ಇಂತಹ ಮಂದಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಭಿವೃದ್ಧಿಯನ್ನು ಕುಂಠಿ ತಗೊಳಿಸಿದ,ಅನಽಕೃತ ಕಟ್ಟಡಗಳನ್ನು ತೆರವುಗೊಳಿಸದಿರುವ ಆಡಳಿತ ವರ್ಗಗಳು ಬಹುಕೋಟಿ ಮಂದಿ ಆರಾಧಿಸುವ ದೇವಾಲಯ, ಪ್ರಾರ್ಥನಾ ಮಂದಿರವನ್ನು ಕೆಡವಲು ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.