Wednesday, 9th October 2024

ಭಾರತ ಅಮೆರಿಕಕ್ಕಿಂತ ಯಾವುದರಲ್ಲಿ ಕಮ್ಮಿ ?

ಬುಲೆಟ್‌ ಪ್ರೂಫ್

ವಿನಯ್‌ ಖಾನ್‌

vinaykhan078@gmail.com

ಅದು 1998ರ ಬಿರು ಬಿಸಿಲಗಾಲ, ಇಡೀ ದೇಶ ತನ್ನದೇ ಆದ ಕೆಲಸದಲ್ಲಿ ನಿರತವಾಗಿತ್ತು. ಅದರಲ್ಲೂ ರಾಜಸ್ಥಾನದ
ಮರುಭೂಮಿಗಳಲ್ಲಂತೂ ಪ್ರಶಾಂತ ಮೌನ. ಅಲ್ಲಲ್ಲಿ ಸೈನಿಕರು ಓಡಾಡುವುದು, ಸೇನೆಯ ಗಾಡಿಯ ಸದ್ದನ್ನು ಬಿಟ್ಟರೆ ಅಲ್ಲಿದ್ದುದು ನೀರವಮೌನ. ಭಾರತದ ಮೇಲೆ ಒಂದು ಕಣ್ಣಿಟ್ಟಿದ್ದ ಅಮೆರಿಕ ಮತ್ತು ಅದರ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಜತೆಯಾಗಿ ಉಪಗ್ರಹಗಳ ಮೂಲಕ ಭಾರತದ ಮೇಲೆ ಗೂಢಚಾರಿಕೆ ನಡೆಯುತ್ತಿತ್ತು ಮತ್ತು ಅದು ನಮ್ಮ ಸೇನಾಽಕಾರಿಗಳಿಗೂ ಗೊತ್ತಿತ್ತು.

ಯಾವುದೇ ದೇಶದವರು ಏನೇ ಹೊಸದನ್ನು ಶುರುಮಾಡಬೇಕೆಂದರೂ ಅದಕ್ಕೆ ಅಮೆರಿಕದ ಅನುಮತಿ ಇರಲೇಬೇಕು ಎಂಬಂಥ ವಿಚಿತ್ರ ಪರಿಸ್ಥಿತಿ ರೂಪುಗೊಂಡಿದ್ದ ಕಾಲಘಟ್ಟವದು. ಜತೆಗೆ, ಅಮೆರಿಕ ತನ್ನ ಕೈಯನ್ನು ಪಾಕಿಸ್ತಾನದ ಹೆಗಲ ಮೇಲೆಯೇ ಹಾಕಿ ಸಾಕುತ್ತಿದ್ದ ಸಮಯ ಅದಾಗಿತ್ತು. ಒಟ್ಟಾರೆ ಹೇಳುವುದಾದರೆ, ಯಾವುದೇ ದೇಶ ಕೈಗೊಂಡ ಪ್ರತಿಯೊಂದು ಕೆಲಸದಲ್ಲೂ ತನ್ನ ಮೂಗು ತೂರಿಸಲು ಮುಂದಾಗುತ್ತಿತ್ತು ಅಮೆರಿಕ.

ಅದು ಅಮೆರಿಕದ ಹುಟ್ಟುಗುಣ ಬಿಡಿ. ಆದರೆ ಆ ಸಮಯದಲ್ಲಿ ಪರಮಾಣು ಬಾಂಬ್ ಹೊಂದಲೇಬೇಕಾದಂತ ದರದು ಭಾರತಕ್ಕೆ ಬಹಳವಾಗಿತ್ತು. ಹಾಗಂತ ಮತ್ತೊಂದು ದೇಶದ  ನಾವೇಕೆ ಮಂಡಿಯೂರಬೇಕು ಎಂಬ ಸ್ವಾಭಿಮಾನವೂ ಭಾರತದಲ್ಲಿಯೂ ಇತ್ತು. ಅದರ ಪರಿಣಾಮವಾಗಿ ಹುಟ್ಟಿಕೊಂಡ ಕಾರ್ಯಾಚರಣೆಯೇ ‘ಆಪರೇಷನ್ ಶಕ್ತಿ’. ಈ ಕಾರ್ಯಾಚರಣೆಯ ಅಂಗವಾಗಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ೧೯೯೮ರ ಮೇ ೧೧ರಂದು ಮೂರು ಬಾರಿ ಹಾಗೂ ೧೩ರಂದು ಎರಡು ಬಾರಿ ಸೋಟಿಸಿದ್ದು ಸಾಧಾರಣ ಬಾಂಬುಗಳೇನೂ ಆಗಿರಲಿಲ್ಲ. ಅವು ಪರಮಾಣು ಅಥವಾ ನ್ಯೂಕ್ಲಿಯರ್ ಬಾಂಬುಗಳಾಗಿದ್ದವು!

ಪರಿಣಾಮವಾಗಿ, ಅದೇ ತಿಂಗಳ ೧೩ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ‘ಭಾರತ ಪರಮಾಣು ಶಕ್ತಿ ಹೊಂದಿದ ರಾಷ್ಟ್ರ’ ಎಂಬುದಾಗಿ ಜಾಗತಿಕ ಸಮುದಾಯದ ಮುಂದೆ ಘೋಷಿಸಿಯೇಬಿಟ್ಟರು. ತನ್ಮೂಲಕ ಭಾರತ ಪರಮಾಣು ಶಕ್ತಿ ಹೊಂದಿದ ೬ನೇ ರಾಷ್ಟ್ರವಾಗಿ ಪ್ರಪಂಚದ ಮುಂದೆ ತಲೆಯೆತ್ತಿ ನಿಂತಿದ್ದೇನೋ ಹೌದು. ಆ ಖುಷಿಯನ್ನು ಇಡೀ
ದೇಶವಾಸಿಗಳು ಅದನ್ನು ಒಪ್ಪಿ- ಅಪ್ಪಿಕೊಂಡಿದ್ದೂ ಆಯ್ತು.

ಅದು ಆರ್ಥಿಕತೆಯ ಮೇಲೂ ಒಳ್ಳೆಯ ಪ್ರಭಾವವನ್ನೇ ಬೀರಿ ಸೆನ್ಸೆಕ್ಸ್ ಕೂಡ ಮೇಲೆದ್ದಿದ್ದೂ ಆಯ್ತು. ಆದರೆ, ಇಷ್ಟಕ್ಕೇ ಕಥೆ ಮುಗಿದಿರಲಿಲ್ಲ! ಅದಾಗಲೇ ಅಮೆರಿಕಕ್ಕೆ ಭಾರತದ ಮೇಲೆ ವಿಪರೀತ ಸಿಟ್ಟುಬಂದಿತ್ತು. ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಮೂಲಕ ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಅಮೆರಿಕ ಖಂಡಿಸಿತು, ವಿರೋಧಿಸಿತು. ಭಾರತಕ್ಕೆ ತಾನು ನೀಡುತ್ತಿದ್ದ ಸವಲತ್ತುಗಳನ್ನು ಅಮೆರಿಕ ಅಲ್ಲಿಗೇ ನಿಲ್ಲಿಸಿದ್ದರ ಜತೆಗೆ, ಇಂಥದೇ ಕ್ರಮಕ್ಕೆ ಮುಂದಾಗುವಂತೆ ಇತರ ದೇಶಗಳಿಗೂ ಕುಮ್ಮಕ್ಕು ನೀಡಿತು. ಅದರ ಆಜ್ಞೆಯನ್ನು ಪಾಲಿಸಿದ ಜಪಾನ್, ಕೆನಡಾ ಮತ್ತಿತರ ದೇಶಗಳು ಭಾರತದ ಮೇಲೆ ನಿರ್ಬಂಧ ಹೇರಿದವು.

ಪೋಖ್ರಾನ್ ಟೆಸ್ಟ್ ಭಾರತ ವಿಶ್ವಸಂಸ್ಥೆಯ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಭಾರತವು
ಆರ್ಥಿಕ ಸ್ವಾವ ಲಂಬನೆಯ ಪಥದಲ್ಲಿ ಬಿರುಸಿನ ಹೆಜ್ಜೆಹಾಕುತ್ತಿದ್ದ ಕಾರಣ, ಈ ಎಲ್ಲ ದೇಶಗಳ ನಿರ್ಬಂಧಗಳು ಒಂದೇ ವರ್ಷಕ್ಕೆ ಸಡಿಲಗೊಂಡವು. ಹಾಗೆ ಈ ನಿರ್ಬಂಧಗಿಂದ ಭಾರತಕ್ಕೆ ತೊಂದರೆಯೂ ಆಗಲಿಲ್ಲ. ಮುಂದೆ ಅಮೆರಿಕ ಕೂಡ
ಹೇಳಿಕೊಳ್ಳುವಂಥ ಯಾವ ತಾಪತ್ರಯವನ್ನೇನೂ ನೀಡಲಿಲ್ಲ.

ಆದರೂ ಈ ಮುಂದುವರಿದ ರಾಷ್ಟ್ರಗಳೇ ಹಾಗೆ; ಬೇರೆ ದೇಶಗಳು ಮುನ್ನೆಲೆಗೆ ಬರಬಾರದು, ಅವು ಶಸಾಸಗಳನ್ನು
ತಮ್ಮಿಂದಲೇ ಖರೀದಿಸಬೇಕು, ರೋಗಗಳಿಗೆ ಲಸಿಕೆಗಳನ್ನೂ ತಮ್ಮಿಂದಲೇ ಪಡೆದು ತಮ್ಮ ಮಾತಿಗೆ ‘ಜೀ ಹುಜೂರ್’
ಎನ್ನುತ್ತ ಕೈಕಟ್ಟಿ ನಿಲ್ಲಬೇಕು ಎಂಬುದೇ ಅವುಗಳ ಧೋರಣೆ. ಆಗಲೂ ಈಗಲೂ ಈ ಧೋರಣೆಯಲ್ಲಿ ಕಿಂಚಿತ್ತೂ ಬದಲಾವಣೆ ಯಾಗಿಲ್ಲ ಬಿಡಿ. ಇದಕ್ಕೂ ಸಾಕಷ್ಟು ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ವಿವರಿಸಲೇಬೇಕು. ಆಗಿನ್ನೂ ದೇಶಕ್ಕೆ ಸ್ವಾತಂತ್ರ್ಯ ದಕ್ಕಿ ಬಹಳ ವರ್ಷಗಳೇನೂ ಆಗಿರಲಿಲ್ಲ.

ಪ್ರತಿದಿನವೂ ಪಾಕಿಸ್ತಾನದ ಕಿರಿಕಿರಿ, ಹಿಂದೂಗಳ ನರಮೇಧ ಅವ್ಯಾಹತವಾಗಿತ್ತು. ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಮಹಾರಾಷ್ಟ್ರದಲ್ಲೂ ನಡೆದ ನರಮೇಧಗಳಿಂದ ದೇಶದಲ್ಲಿ ಸೂಕ್ಷ್ಮ ಪರಿಸ್ಥಿತಿ ರೂಪುಗೊಂಡಿತ್ತು. ೧೯೫೯ರ ಟಿಬೆಟ್ ದಂಗೆಯ ನಂತರ ಟಿಬೆಟಿ ಯನ್ನರಿಗೆ, ಬೌದ್ಧ ಭಿಕ್ಷುಗಳಿಗೆ, ದಲೈಲಾಮಾ ಅವರಿಗೆ ಆಶ್ರಯ ಕೊಟ್ಟಿದ್ದಕ್ಕಾಗಿ ‘ಕೆಂಪ’ಗಾದ ಚೀನಾ,
ಭಾರತದ ವಿರುದ್ಧ ಸಮರವನ್ನೇ ಸಾರಿತು. ಆಗ ದಿಕ್ಕುತೋಚದ ಪ್ರಧಾನಿ ನೆಹರು ಅವರು ಅಮೆರಿಕದ ಸಹಾಯವನ್ನು ಕೋರಿ
ದಾಗ, ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್.ಕೆನಡಿ ಭಾರತಕ್ಕೆ ಯುದ್ಧೋಪಕರಣ ಗಳ ಸಹಾಯವನ್ನೇನೋ ನೀಡಿದರು.

ಆದರೆ ನಮ್ಮ ಸೈನಿಕರಿಗೆ ಅವನ್ನು ಸರಿಯಾಗಿ ಬಳಸುವುದರ ಮಾಹಿತಿಯಿರದ ಕಾರಣ ಯುದ್ಧವನ್ನು ಕೈಚೆಲ್ಲಬೇಕಾಗಿ ಬಂತು. ಇದು ೧೯೬೨ರ ಭಾರತ-ಚೀನಾ ಯುದ್ಧದ ಸ್ಥೂಲ ಚಿತ್ರಣ. ಇವನ್ನೆಲ್ಲ ಈಗ ಹೇಳುವುದಕ್ಕೆ ಕಾರಣವಿದೆ. ಭಾರತದಿಂದ
ಅಮೆರಿಕಕ್ಕೆ ತೆರಳಲು ಬೇಕಾಗುವ ವೀಸಾಕ್ಕೆ ಸುಮಾರು ೨ ವರ್ಷ ಕಾಯಬೇಕಿತ್ತು ಎಂಬ ಸುದ್ದಿಯೊಂದು ಕೆಲದಿನಗಳ
ಹಿಂದೆ ಮುನ್ನೆಲೆಗೆ ಬಂದಿತ್ತು. ಎಷ್ಟೋ ಜನ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, “ಅಮೆರಿಕದವರು ಭಾರತಕ್ಕೆ ಯಾವ ರೀತಿಯಲ್ಲೂ ಸಹಕರಿಸುತ್ತಿಲ್ಲ.

‘ಹೌಡಿ ಮೋದಿ’, ‘ಕೇಮ್ ಚೋ ಟ್ರಂಪ್’ ಅಂತ ಮಾಡಿದ ಕಾರ್ಯಕ್ರಮಗಳೆಲ್ಲ ತೋಪೆದ್ದವು” ಅಂತ ಡಂಗುರ ಸಾರುತ್ತಿದ್ದರು. ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಇದೇ ವೀಸಾ ಸಂಬಂಧಿತ ಪ್ರಶ್ನೆಯನ್ನು ಅಲ್ಲಿಯ ಸಚಿವ ಡಾನ್ ಹೆಫ್ಲಿನ್ ಅವರಿಗೆ ಕೇಳಿದರು. ಅದಕ್ಕೆ ಹೆಫ್ಲಿನ್, ‘ನಿಮ್ಮಲ್ಲಿ ಕೆಲವರಿಗೆ ಕಾಯುವ ಸಮಯದ ಬಗ್ಗೆ ನೈಜ ಕಾಳಜಿಗಳಿವೆ ಎಂದು ನನಗೆ ಗೊತ್ತು.

ಪ್ರಾಮಾಣಿಕವಾಗಿ ಹೇಳುವುದಾದರೆ, ವೀಸಾಕ್ಕಾಗಿ ದೀರ್ಘಕಾಲ ಕಾಯುವ ಪರಿಸ್ಥಿತಿ ಉಂಟಾಗಿದ್ದಕ್ಕೆ ಕಾರಣ ಕೋವಿಡ್ ಅಪ್ಪಳಿಸಿದಾಗ ಉಂಟಾದ ಸಿಬ್ಬಂದಿ ಸಮಸ್ಯೆ. ಎಲ್ಲ ರೋಗ- ರುಜಿನಗಳಿಂದ ಚೇತರಿಸಿಕೊಂಡ ಮೇಲೆ ಅದನ್ನು ನಿಭಾಯಿಸ ಲಾಗುತ್ತಿದೆ’ ಎಂದರು. ಅಮೆರಿಕದ ಸಚಿವರು ಹೇಳಿದ ಹಾಗೆ, ಇದಕ್ಕೆಲ್ಲ ಕೋವಿಡ್ ಕಾರಣ. ಮತ್ತೆ ಕೆಲವು ಅಂತಾರಾಷ್ಟ್ರೀಯ ಸುದ್ದಿಮಾಧ್ಯಮಗಳ ಪ್ರಕಾರ, ಕೋವಿಡ್ ನಂತರದ ಕಾಲಘಟ್ಟದಲ್ಲಿ ವೀಸಾಗೋಸ್ಕರ ಗಣನೀಯ ಸಂಖ್ಯೆಯಲ್ಲಿ ಭಾರತೀಯರು ಅರ್ಜಿ ಸಲ್ಲಿಸಿದ್ದರಿಂದ ವೀಸಾ ನೀಡಿಕೆಗೆ ದೀರ್ಘಸಮಯ ಹಿಡಿಯಿತು ಎಂದೂ ಹೇಳಲಾಗುತ್ತದೆ.

ವೀಸಾಗಾಗಿ ಕಾಯುವ ಸಮಯವನ್ನು ತಗ್ಗಿಸಲು ಅಮೆರಿಕ ಕಳೆದ ಕೆಲದಿನಗಳಿಂದ ಯತ್ನಿಸುತ್ತಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸಿದ ೧ ಲಕ್ಷ ಜನರಿಗೆ ಮೊನ್ನೆಮೊನ್ನೆಯಷ್ಟೇ ಸಂದರ್ಶನಕ್ಕೆ ಕರೆಯಲಾಗಿದೆ. ಹಾಗಾದರೆ, ಈ ಪ್ರಕರಣದಲ್ಲಿ ಭಾರತ ಸೋತಿತಾ ಅಥವಾ ಗೆದ್ದಿತಾ ಎಂಬುದು ಒಂದು ಪ್ರಶ್ನೆ. ಏಕೆಂದರೆ, ಅಮೆರಿಕದಲ್ಲಿ ಭಾರತೀಯ ಮೂಲದ ಸರಿಸುಮಾರು ೪೨ ಲಕ್ಷಕ್ಕೂ ಹೆಚ್ಚು ಮಂದಿಯಿದ್ದಾರೆ. ಪ್ರತಿವರ್ಷವೂ ಏನಿಲ್ಲವೆಂದರೂ ೫೦ ಸಾವಿರಕ್ಕಿಂತಲೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ನೆಲೆ
ಕಂಡುಕೊಳ್ಳಲು ಹೋಗುತ್ತಾರೆ (ಅಷ್ಟೇಕೆ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯ ಮೂಲದವರೇ).

ಹೀಗಿರುವಾಗ, ಭಾರತೀಯರು ಅಮೆರಿಕಕ್ಕೆ ತುಂಬಾನೇ ಜಿಞmಟ್ಟಠಿZಠಿ! ಭಾರತೀಯರನ್ನು ಉಳಿಸಿಕೊಳ್ಳಲೇಬೇಕಾದಂಥ ಸನ್ನಿವೇಶ ಅಮೆರಿಕದಲ್ಲಿದೆ. ಅಲ್ಲಿಯ ಕಂಪನಿಗಳಿಗೆ ಭಾರತೀಯ ಮೂಲದ ಸಿಇಒಗಳಿರುವುದೂ ಇದಕ್ಕೆ ಕಾರಣವಿರಬಹುದು. ಅಲ್ಲಿ ರಾಜತಾಂತ್ರಿಕತೆಯೂ ಸೋತಿಲ್ಲ, ಮಣ್ಣೂ ಇಲ್ಲ. ಅಮೆರಿಕದ ವೀಸಾ ನೀಡಿಕೆಯಲ್ಲಿ ವಿಳಂಬ ವಾಗಿದ್ದು ನಿಜವೇ, ಅದಕ್ಕೆ ಕೋವಿಡ್ ಪ್ರಮುಖ ಕಾರಣವಾಗಿತ್ತು. ಆದರೆ ಈ ಕುರಿತು ಭಾರತ ಪ್ರಶ್ನೆ ಎತ್ತಿದಾಗ ಅಮೆರಿಕದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ, ಭಾರತೀಯರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ವೀಸಾ ನೀಡುವ ನಿಟ್ಟಿನಲ್ಲಿ ಅದು ಯತ್ನಿಸುತ್ತಿದೆ.

ಆದರೆ ವೀಸಾ ನೀಡಿಕೆಯಲ್ಲಿನ ವಿಳಂಬವನ್ನೇ ಬಳಸಿಕೊಂಡು ಕೆಲವು ರಾಜಕಾರಣಿಗಳು ಮೋದಿ ವಿರುದ್ಧ ಅಪಪ್ರಚಾರಕ್ಕೆ ಯತ್ನಿಸಿದ್ದರು; ಆದರೆ ಏನು ಮಾಡೋದು ಹೇಳಿ, ಅದೂ ವಿಫಲವಾಯಿತು. ಅದೆಲ್ಲ ಬಿಟ್ಟರೂ, ಭಾರತ ಅಮೆರಿಕಕ್ಕಿಂತ ಯಾವುದರಲ್ಲಿ ಕಡಿಮೆಯಿದೆ ಎಂಬ ನಿಜವಾದ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ಅವರಷ್ಟು ದುಡ್ಡು ಇಲ್ಲದಿರಬಹುದು, ಶಕ್ತಿಯೂ ಕೊಂಚ ಕಡಿಮೆಯಿರಬಹುದು. ಅಲ್ಲಿನ ಥರದ ಬಹುರಾಷ್ಟ್ರೀಯ ಕಂಪನಿಗಳ ಸಂಖ್ಯೆಯೂ ನಮ್ಮಲ್ಲಿ
ಕಮ್ಮಿಯೇ. ಆದರೆ ಅಮೆರಿಕದ ಎಷ್ಟೋ ಕಂಪನಿಗಳಿಗೆ ಸಿಇಒ ರೀತಿಯ ಉನ್ನತ ಅಧಿಕಾರದಲ್ಲಿರುವವರು ಭಾರತೀಯ
ಮೂಲದವರೇ.

ಆದರೂ ಅಮೆರಿಕ ಭಾರತಕ್ಕೆ ಸಂಪೂರ್ಣವಾಗಿ ಸಹಕರಿಸಿಲ್ಲ. ಅಥವಾ ವಿರೋಧಿಸಲೂ ಇಲ್ಲ. ಅದು ಆಯಾ ಸಮಯ, ಸಂದರ್ಭಕ್ಕನುಗುಣ ವಾಗಿ ವರ್ತಿಸಿತು. ಮತ್ತೆ ೧೯೬೩ರಲ್ಲಿ ಕಾನ್‌ಪೂರ್ ಐಐಟಿಗೆ ಕಂಪ್ಯೂಟರ್‌ಗಳನ್ನು ಸ್ನೇಹಪೂರ್ವಕವಾಗಿ ಕೊಟ್ಟಿದ್ದು ಇವರೆ ತಾನೇ? ಹಾಗೆಯೇ ಕೆಲ ವರ್ಷಗಳ ಹಿಂದೆ ಅಮೆರಿಕದಲ್ಲಿ ಎಷ್ಟೋ ಜನ ಭಾರತೀಯರ ಕೊಲೆಯಾಗುತ್ತಿತ್ತು. ಆದರೀಗ ಪರಿಸ್ಥಿತಿ ಹಾಗಿಲ್ಲ. ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲೇ ಹೆಚ್ಚು ಬೇಡಿಕೆ ಇರೋದು. ಅದಕ್ಕೆ ಇಲ್ಲಿನ ಜನಸಂಖ್ಯೆಯೂ ಕಾರಣವಾಗಿರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್ ಕಾಲಘಟ್ಟದಲ್ಲಿ ಭಾರತ ಕಳುಹಿಸಿಕೊಟ್ಟ ಔಷಧ ಉತ್ಪನ್ನಗಳ ಕಾರಣದಿಂದಲೂ ಅಮೆರಿಕನ್ನರಿಗೆ ಭಾರತೀಯರ ಮೇಲೆ ಪ್ರೀತಿ ಸ್ವಲ್ಪ ಜಾಸ್ತಿಯೇ ಇರಬಹುದು. ಕೆಲ ದಿನಗಳ ಹಿಂದೆ ಬಿಲ್ ಗೇಟ್ಸ್ ಅವರು ಟೈಮ್ಸ್ ಆ- ಇಂಡಿಯಾದಲ್ಲಿ “At G20, India can show the way: PM Modi’s welfare, empowerment schemes should be a blueprint for many countries’ ಶೀರ್ಷಿಕೆಯ ಅಂಕಣವೊಂದನ್ನು ಬರೆದಿದ್ದನ್ನು ಬಹುತೇಕರು ಗಮನಿಸಿರಬಹುದು. ಅಷ್ಟಿಲ್ಲದೆಯೇ ಅಮೆಜಾನ್‌ನ ಜೆಫ್  ಬೆಜೋಸ್ ‘21st century be the Indian
centuary’’ ಅಂತ ಹೇಳುತ್ತಾರಾ? ಭಾರತದ ಮರ್ಯಾದೆ ಯಾವುದೇ ರಾಷ್ಟ್ರಕ್ಕಿಂತ ಕಡಿಮೆಯೇನಿಲ್ಲ.

ಆದರೆ, ಭಾರತದಲ್ಲಿದ್ದೂ ಭಾರತದ ಮರ್ಯಾದೆ ತೆಗೆಯುವವರ ಸಂಖ್ಯೆಗೂ ನಮ್ಮಲ್ಲಿ ಕಡಿಮೆಯಿಲ್ಲ. ಇಂಥವರಿಗೆ ಭಾರತದ ಏಳಿಗೆಗಿಂತ ಕಣ್ಣಲ್ಲಿ ತುಂಬಿಕೊಂಡಿ ರುವುದು ಮೋದಿ ವಿರೋಧವೇ. ಆದರೂ ನರೇಂದ್ರ ಮೋದಿ ಯವರನ್ನು ವಿರೋಽಸುವ ಭರದಲ್ಲಿ ಭಾರತದ ಹೆಸರಿಗೆ ಸಂಚಕಾರ ತರಬಾರದು, ಅಲ್ಲವೇ?!