Sunday, 15th December 2024

ಇಸ್ಲಾಂ ರಾಷ್ಟ್ರವೆಂಬ ’ತಿರುಕನ ಕನಸು’

ವೀಕೆಂಡ್ ವಿತ್ ಮೋಹನ್

camohanbn@gmail.com

ಬಿಹಾರದ ಪೊಲೀಸರು PFI ಸಂಘಟನೆಯ ಇಬ್ಬರನ್ನು ಬಂಧಿಸುವ ಮೂಲಕ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ವನ್ನಾಗಿಸುವ ‘ತಿರುಕನ ಕನಸ’ನ್ನು ಹೊತ್ತ ಸಂಘಟನೆಯ ಧ್ಯೇಯೋದ್ದೇಶಗಳನ್ನು ಬಯಲಿಗೆಳೆದಿದ್ದಾರೆ.

1947ರಲ್ಲಿ ಭಾರತವು ಇಬ್ಭಾಗವಾದಾಗ ಮುಸಲ್ಮಾನರಿಗೆ ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರವನ್ನು ನೀಡಿದ ನಂತರವೂ ಭಾರತ ವನ್ನು ಸಂಪೂರ್ಣ ಇಸ್ಮಾಮೀಕರಣಗೊಳಿಸುವ ಷಡ್ಯಂತ್ರ ನಡೆಯುತ್ತಲೇ ಇದೆ. ಕಮ್ಯುನಿಸ್ಟರ ಬೆಂಬಲದಿಂದ ಕೆಲವು ಮುಸ್ಲಿಂ ಸಂಘಟನೆ ಗಳು ಇಂದಿಗೂ ಭಾರತದ ಇಸ್ಲಾಮೀಕರಣದ ಕನಸನ್ನು ಕಾಣುತ್ತಿವೆ. ಈ ಪೈಕಿ ಮುಂಚೂಣಿಯಲ್ಲಿರುವುದು PFI ಸಂಘಟನೆ.

ದೇಶದಾದ್ಯಂತ ಹಲವು ಗಲಭೆಗಳ ಹಿಂದೆ ಈ ಸಂಘಟನೆಯ ಕೈವಾಡವಿರುತ್ತದೆ. ಸಾವಿರಾರು ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆ ಈ ಸಂಘಟನೆಯ ಕೈವಾಡವಿರುತ್ತದೆ. ದೆಹಲಿ ಯಲ್ಲಿ ನಡೆದ ಪೌರತ್ವ ತಿದ್ದುಪಡಿ ವಿಧೇಯಕದ ಪ್ರತಿಭಟನೆಯ ಹಿಂದೆ PFI ಇತ್ತು, ಮಂಗ ಳೂರಿನಲ್ಲಿ ನಡೆದ ಗಲಭೆಯ ಹಿಂದೆ ಇವರ ಕೈವಾಡವಿತ್ತು, ಕರ್ನಾಟಕದಲ್ಲಿ ಸಿದ್ದರಾ ಮಯ್ಯ ಅವಧಿಯ  ಸಾಲು ಸಾಲು ಹಿಂದೂ ಕಾರ‍್ಯಕರ್ತರ ಕೊಲೆಗಳ ಹಿಂದೆ ಈ ಸಂಘ ಟನೆಯ ಕೈವಾಡವಿತ್ತು.

ಈಗ ಬಿಹಾರದಲ್ಲಿ ಬಂಧಿತರಿಂದ ವಶಪಡಿಸಿಕೊಂಡ ದಾಖಲೆ ಪತ್ರಗಳ ಮೂಲಕ ಸಂಘಟನೆಯ ಭಯೋತ್ಪಾದಕ ಮನಸ್ಥಿತಿ ಮತ್ತೊಮ್ಮೆ ಬಯಲಾಗಿದೆ. ಭಾರತದ ಒಂಬತ್ತು ಜಿಲ್ಲೆಗಳಲ್ಲಿ ಶೇ 75ಕ್ಕಿಂತಲೂ ಅಧಿಕ ಮುಸ್ಲಿಮರಿದ್ದು, ಜಗತ್ತಿನ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯಿರುವ ರಾಷ್ಟ್ರ ಭಾರತವೆಂದು PFI ತನ್ನ ಧ್ಯೇಯೋದ್ದೇಶ ಪತ್ರದಲ್ಲಿ ಹೇಳಿದೆ. ಭಾರತದ ಮುಸಲ್ಮಾನರನ್ನು ಸ್ವತಂತ್ರ್ಯಾನಂತರ ತುಂಬಾ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದ್ದು, ವ್ಯಾಪಾರ, ವ್ಯವಹಾರ ಹಾಗೂ ಸರಕಾರಿ ನೌಕರಿಗಳಲ್ಲಿ ಮುಸಲ್ಮಾನರಿಗೆ ಸರಕಾರ ಅವಕಾಶಗಳನ್ನು ನೀಡುತ್ತಿಲ್ಲವೆಂಬ ಸುಳ್ಳನ್ನು ಹೇಳಿದೆ.

ವಸ್ತುಸ್ಥಿತಿಯಲ್ಲಿ ಸ್ವಾತಂತ್ರ್ಯಾ ನಂತರ ಅತೀ ಹೆಚ್ಚು ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್, ಮುಸ್ಲಿಮರನ್ನು ಅಲ್ಪ ಸಂಖ್ಯಾತರೆಂದು ಪರಿಗಣಿಸಿ ಹೆಚ್ಚಿನ ಅನುದಾನಗಳನ್ನು ನೀಡುತ್ತಲೇ ಬಂದಿದೆ. ನರೇಂದ್ರ ಮೋದಿ ಆಡಳಿತಾವಧಿಯಲ್ಲೂ ಅತೀ ಹೆಚ್ಚಿನ ಅನುಧಾನ ನೀಡಲಾಗಿದೆ. ಭಾರತದಲ್ಲಿ ಸುಮಾರು ೨೪ ಕೋಟಿ ಜನಸಂಖ್ಯೆಯಿರುವ ಮುಸ್ಲಿಮರನ್ನು ಇಂದಿಗೂ ಅಲ್ಪಸಂಖ್ಯಾತ ರೆಂದು ಕರೆಯಲಾಗುತ್ತದೆ.

ಸಿಖ್ಖರು, ಜೈನರು, ಪಾರ್ಸಿಗಳು ಕೇವಲ ಲಕ್ಷಗಳಲ್ಲಿದ್ದರೂ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮುಸಲ್ಮಾನರಿಗೆ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತ ಬಂದಿದ್ದರೂ, ಮುಸಲ್ಮಾನರಿಗೆ ಸರಕಾರ ಏನು ಮಾಡುತ್ತಿಲ್ಲವೆಂಬ ಸುಳ್ಳನ್ನು PFI ಹರಡುತ್ತಿದೆ. ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಡಿಗಳು, ಪೀಠೋಪಕರಣದ ಅಂಗಡಿಗಳು, ಮಾಂಸದ ಅಂಗಡಿಗಳು, ಮೊಬೈಲ್ ಅಂಗಡಿಗಳು, ಎಲೆಕ್ಟ್ರಾನಿಕ್ ಅಂಗಡಿಗಳು, ಮಾಂಸದ ಹೋಟೆಲುಗಳು ಎಡೆಯೂ ಇಂದು ಮುಸ್ಲಿಂ ಜನಾಂಗದವರು ವ್ಯಾಪಾರದಲ್ಲಿ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ.

ಇಷ್ಟಾದರೂ PFI ಸುಳ್ಳುಗಳ ಮೂಲಕ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 100 ವರ್ಷ ಪೂರೈಸುತ್ತದೆ. ಅಷ್ಟರ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್ ಸರಕಾರವನ್ನು ಅಧಿಕಾರಕ್ಕೆ ತರಬೇಕೆಂಬುದು PFI ನ ‘ತಿರುಕನ ಕನಸು’. ಇಸ್ಲಾಮಿಕ್ ಸರಕಾರವನ್ನು ಅಧಿಕಾರಕ್ಕೆ ತಂದ ನಂತರ ಸಂವಿಧಾನವನ್ನು ತನಗಿಷ್ಟಬಂದಂತೆ ತಿದ್ದಿ ‘ಷರಿಯಾ’ ಕಾನೂನನ್ನು ಭಾರತದಲ್ಲಿ ಜಾರಿಗೊಳಿಸುವ ಹುನ್ನಾರ ಮಾಡುತ್ತಿದೆ. ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರೂ ಭಾರತದಲ್ಲಿ ಇಸ್ಲಾಮಿಕ್ ಸರಕಾರ ಜಾರಿಗೆ ತರಬಹುದಂತೆ.

ಶೇ 10ಮುಸಲ್ಮಾನರು PFI ಸಂಘಟನೆಗೆ ಬೆಂಬಲ ನೀಡಿದರೆ ಸಾಕಂತೆ ಬಹುಸಂಖ್ಯಾತ ಹಿಂದೂಗಳು ಅವರ ಮುಂದೆ ಮಂಡಿಯೂ ರುವಂತೆ ಮಾಡುತ್ತಾರಂತೆ. PFI ಸಂಘಟನೆಯ ಕನಸು ನನಸಾದರೆ ಏನಾಗಬಹುದೆಂಬ ಉದಾಹರಣೆ ನಮಗೆ ಶೇ.97ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕಾಶ್ಮೀರದಲ್ಲಿ. ಹಿಂದೂಗಳು ಇಸ್ಲಾಮಿಕ್ ಮೂಲಭೂತವಾದಿಗಳ ಮುಂದೆ ಮಂಡಿಯೂರಿ ತಮ್ಮ ಪ್ರಾಣ ಕಳೆದುಕೊಂಡ ದೃಶ್ಯ ಕಣ್ಣ ಮುಂದಿದೆ.

ಫಾರೂಕ್ ಅಬ್ದುಲ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಾಶ್ಮೀರದದಂತಹ ಹಲವು ಘಟನೆಗಳು ಮೂಲಭೂತವಾದಿಗಳ ಕೈಗೆ ಅಧಿಕಾರ ಸಿಕ್ಕಾಗ ಏನಾಗುತ್ತದೆಯೆಂಬುದಕ್ಕೆ ಸಾಕ್ಷಿ. ಅಬ್ದು ತನ್ನ ಅವಧಿಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ
ಹುದ್ದೆಗೆ ಹೆಚ್ಚಾಗಿ ಐಪಿಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿರಲಿಲ್ಲ. ಕಾಶ್ಮೀರದ ಪ್ರತ್ಯೇಕತೆಗೆ ಬೆಂಬಲಿಸುವ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದ.

ಜಿಲ್ಲಾಧಿಕಾರಿಗಳ ನೇಮಕದಲ್ಲಿಯೂ ಅಷ್ಟೇ ಹೆಚ್ಚಾಗಿ ಐಎಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿರಲಿಲ್ಲ. ಕಂದಾಯ ಇಲಾಖೆ ಅಽಕಾರಿಗಳೂ ಇವನ ಬಾಲಬುಡುಕ ರಾಗಿದ್ದರು. ಇಡೀ ದೇಶಕ್ಕೆ ಒಂದು ವ್ಯವಸ್ಥೆಯಿದ್ದರೆ, ಅಬ್ದುಲ್ಲಾನ ಸರಕಾರಕ್ಕೆ ಮಾತ್ರ ಬೇರೆಯದ್ದೇ ವ್ಯವಸ್ಥೆಯಿತ್ತು. 1989ರಲ್ಲಿ ನಡೆದ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಕಂದಾಯ ಸಚಿವನ ಮಗನನ್ನು ಗೆಲ್ಲಿಸಿಕೊಂಡು ಬರುವ ಸಲುವಾಗಿ,‘ಬಾರಾಮು’ ಪ್ರಾಂತ್ಯದಲ್ಲಿ ಸ್ವತಃ ಸಚಿವನೇ, ಅಲ್ಲಿನ ಅಧಿಕಾರಿಗಳಿಗೆ
ಬಾಂಬ್ ಸ್ಫೋಟಿಸಿ ಜನರಿಗೆ ಹೆದರಿಕೆ ಬರುವಂತೆ ಮಾಡಿ ಮನೆಯಿಂದ ಆಚೆಗೆ ಬಂದು ಮತ ಹಾಕದಂತೆ ಮಾಡಬೇಕೆಂದು ಹೇಳಿದ್ದ.

ಜಗಮೋಹನ್‌ರಂತಹ ಗಟ್ಟಿಗ ರಾಜ್ಯಪಾಲರಿದ್ದುದರಿಂದ ಆ ಕೃತ್ಯ ಸಾಧ್ಯವಾಗಲಿಲ್ಲ. ‘ಲಾಲ್ ಚೌಕ್’ನಲ್ಲಿ ತಿರಂಗ ಹಾರಿಸಲು ಹರಸಾಹಸ ಪಡಬೇಕಾದಂತಹ ಪರಿಸ್ಥಿಯಲ್ಲಿತ್ತು ಕಾಶ್ಮೀರ, ಪ್ರತ್ಯೇಕ ತಾವಾದಿಗಳಿಗೆ ನೇರವಾಗಿ ಅಬ್ದುನ ಸರಕಾರ ಬೆಂಬಲ ಘೋಷಿಸಿತ್ತು. PFI ತನ್ನ ಸಂಘಟನೆಯ ಸದಸ್ಯರಿಗೆ ದಾಳಿಮಾಡಲು ಕತ್ತಿ, ಚಾಕು, ಚೂರಿ, ಬಾಂಬುಗಳ ಬಳಕೆಯ ತರಬೇತಿ ನೀಡ ಬೇಕೆಂದು ತನ್ನ ಧ್ಯೇಯೋದ್ದೇಶ ಪತ್ರದಲ್ಲಿ ಹೇಳಿದೆ ಹಾಗೂ ಬಾಂಬ್, ಕತ್ತಿ, ಚಾಕುಗಳ ಬಳಕೆಯಲ್ಲಿ ತಜ್ಞರಾಗಿರುವ ಪ್ರತಿ
ಭೆಯನ್ನು ಗುರುತಿಸಿ ಕಠಿಣ ತರಬೇತಿ ನೀಡಬೇಕೆಂದು ಹೇಳಿದೆ. ಪೊಲೀಸ್ ಠಾಣೆಗಳ ಮೇಲೆ ನಡೆಸಿದ ದಾಳಿ, ಶಾಸಕರ ಮನೆಯ ಮೇಲೆ ನಡೆಸಿದ ದಾಳಿ, ಸೈನಿಕರ ಮೇಲೆ ಕಲ್ಲಿನ ದಾಳಿ ಇವೆಲ್ಲವೂ PFI ಸದಸ್ಯನಿಗೆ ಕರಗತವಾಗಿ ಬಂದಿರುವ ವಿದ್ಯೆಗಳು.

ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಗುಲ್ಬರ್ಗ, ದೆಹಲಿ, ಹೈದರಾಬಾದ್, ಶಿವಮೊಗ್ಗ ನಗರಗಳಲ್ಲಿ ನಡೆದ ದಾಳಿಯ ಹಿಂದೆ ಈ ವಿದ್ಯೆಗಳನ್ನು ಕಂಡಿದ್ದೆವು. ಹಿಂದೂ ಸಂಘಟನೆಗಳು ‘ಆಯುಧ ಪೂಜೆ’ಯಂದು ಆಯುಧಗಳಿಗೆ ಪೂಜೆ ಮಾಡುವುದರ ಗುರಾಣಿ ಪಡೆದು ಮಾತನಾಡುವ ಕಮ್ಯುನಿಸ್ಟರಿಗೆ ತಿಳಿದಿರಲಿ, ಹಿಂದೂ ದೇವರುಗಳ ಕೈಯಲ್ಲಿರುವ ಆಯುಧಗಳು ರಾಕ್ಷಸರ ಸಂಹಾರಕ್ಕೆ
ಹೊರತು ಅಮಾಯಕರ ಕೊಲೆ ಮಾಡುವುದಕ್ಕಲ್ಲ.‘ಆಯುಧ ಪೂಜೆ’ಯಂದು ನಡೆಯುವ ಪೂಜೆಯ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಲ್ಲ, ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಈ ಆಚರಣೆಯನ್ನು ಮಾಡಿಕೊಂಡು ಬಂದಿದೆ.

ಮೈಸೂರು ಮಹಾರಾಜರು ಸುಮಾರು 500 ವರ್ಷಗಳಿಂದ ‘ಆಯುಧಪೂಜೆ’ಯಂದು ಆಯುಧಗಳಿಗೆ ಪೂಜೆ ಮಾಡುತ್ತಿದ್ದಾರೆ. ಇಸ್ಲಾಮಿಕ್ ಆಕ್ರಮಣ ಕಾರರು ಭಾರತಕ್ಕೆ ಕಾಲಿಡುವ ಮುನ್ನವೇ ಹಿಂದೂಗಳು ಭಾರತದಲ್ಲಿ ಆಯುಧಗಳನ್ನು ಪೂಜೆ ಮಾಡುತ್ತಿ ದ್ದರು. ತಾನು ಮಾಡಬಯಸುವ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ‘ರಾಷ್ಟ್ರ ಧ್ವಜ’, ‘ಸಂವಿಧಾನ’ ಹಾಗೂ ‘ಅಂಬೇಡ್ಕರ್’ ಹೆಸರುಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು PFI ಧ್ಯೇಯೋದ್ದೇಶ ಪತ್ರದಲ್ಲಿ ಹೇಳಿದೆ. ಜತೆಗೆ ದಲಿತರನ್ನು ತಲುಪಿ ಅವರನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿದೆ.

ಹಿಜಾಬ್ ಗಲಾಟೆಯಲ್ಲಿ ಹೆಣ್ಣುಮಕ್ಕಳ ಪರ ನಿಂತವರು ಬಳಸಿದ ಪದಗಳಿವು. ಸ್ವತಃ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳು ಮಾಧ್ಯಮಗಳ ಮುಂದೆ ಬಂದು ಮಾತನಾಡಿದಾಗ ಬಳಸಿದ ಪದಗಳೂ ಇವೆ. ತಮ್ಮ ತಪ್ಪನ್ನು ಮರೆಮಾಚಿ ದಲಿತರ ಹೆಸರಿನಲ್ಲಿ ಅನುಕಂಪಗಳಿಸಲು ಈ ಪದಬಳಕೆ ಮಾಡಿದ್ದರು. ಬಾಬಾಸಾಹೇಬರು ೧೯೪೭ರಲ್ಲಿ ಭಾರತ ಇಬ್ಭಾಗವಾದಾಗ ಸಂಪೂರ್ಣ ಮುಸ್ಲೀಮರು ಪಾಕಿಸ್ತಾನಕ್ಕೆ ಹೋದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಇರುವುದಿಲ್ಲ ಎಂದಿದ್ದರು.

‘ಬುರ್ಖಾ’ ಅವೈಜ್ಞಾನಿಕ ಎಂದಿದ್ದರು. ಹಲವು ಮುಸ್ಲಿಂ ನಾಯಕರ ರಾಷ್ಟ್ರೀಯತೆಯ ಬಗ್ಗೆ ಬಾಬಾಸಾಹೇಬರಿಗೆ ಅನುಮಾನ ವಿತ್ತು. ಅಂತಹ ಬಾಬಾಸಾಹೇಬರ ಹೆಸರನ್ನು ಗುರಾಣಿ ಯಂತೆ ಬಳಸಲಾಗುತ್ತಿದೆ. ಬಾಬಾ ಸಾಹೇಬರ ಹೆಸರಿನಡಿಯಲ್ಲಿ ಮುಸಲ್ಮಾನ್ ಹಾಗೂ ದಲಿತರನ್ನು ಒಗ್ಗೂಡಿಸಿ, ಇಬ್ಬರನ್ನೂ ದಾರಿತಪ್ಪಿಸುವ ಷಡ್ಯಂತ್ರವನ್ನು ಕಮ್ಯುನಿಸ್ಟರು ಮಾಡುತ್ತಿದ್ದಾರೆ.
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ವನ್ನು ಅಡ್ಡತಂದು, ಸಂಘವು ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸುವತ್ತ ಹೊರಟಿದೆ ಎಂಬ ಸುಳ್ಳನ್ನು ಮುಸಲ್ಮಾನರ ತಲೆಯಲ್ಲಿ ತುಂಬಬೇಕೆಂದು PFI ಹೇಳಿದೆ. ಬಾಬ್ರಿ ಮಸೀದಿ ಗಲಾಟೆ, ಕೋಮು ಸಂಘರ್ಷದ ವಿಷಯಗಳ ಬಗ್ಗೆ ಸದಾ ಪ್ರಸ್ತಾಪಿಸಿ ಹಿಂದೂ ಹಾಗೂ ಮುಸಲ್ಮಾನರ ಮಧ್ಯೆ ಇರುವ ಕಂದಕವನ್ನು ಮತ್ತಷ್ಟು ದೊಡ್ಡದು ಮಾಡುವ ಹುನ್ನಾರವೂ PFI ಸಂಘಟನೆಯ ದ್ಯೇಯೋದ್ದೇಶ ಪತ್ರದಲ್ಲಿದೆ.

ತನ್ನ 2047ರ ಮುಸ್ಲಿಂ ರಾಷ್ಟ್ರದ ಕನಸನ್ನು ಈಡೇರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ಸಹಾಯ ಬಯಸಬೇಕು. ಅಲ್ಲಿಂದ ತಮ್ಮ ಕೃತ್ಯಗಳಿಗೆ ಬೇಕಿರುವ ಹಣ ಸಂದಾಯಮಾಡಬೇಕೆನ್ನುವುದು ಈ ಸಂಘಟನೆಯ ಉದ್ದೇಶ. ಈಗಾಗಲೇ ಟರ್ಕಿ ದೇಶ ಇವರಿಗೆ ಬೆಂಬಲ ಘೋಷಿಸಿದೆ ಯಂತೆ. ಟರ್ಕಿಯ ಜತೆಗೆ ಇತರ ರಾಷ್ಟ್ರಗಳ ಜತೆ ಸಂಪರ್ಕ ಸಾಧಿಸುವ
ನಿಟ್ಟಿನಲ್ಲಿ ಕೆಲಸವಾಗಬೇಕಂತೆ. ಅತ್ತ ‘ಸಂಯುಕ್ತ ಅರಬ್ ರಾಷ್ಟ್ರ’ ನರೇಂದ್ರ ಮೋದಿಯವರ ಜತೆ ಎರಡು ಬಿಲಿಯನ್
ಅಮೆರಿಕನ್ ಡಾಲರ್ ಹಣವನ್ನು ಭಾರತದಲ್ಲಿ ಆಹಾರ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಎರಡು ದಿನಗಳ ಹಿಂದೆ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ ಹಾಗೂ ಇಸ್ರೇಲ್ ದೇಶಗಳು ತಂತ್ರಜ್ಞಾನ ಪಾಲುದಾರರಾಗಿzರೆ. ಮುಸ್ಲಿಂ ರಾಷ್ಟ್ರಗಳೇ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಸಾವಿರಾರು ಕೋಟಿಯ ಬಂಡವಾಳ ಹೂಡುತ್ತಿದ್ದರೆ ಇತ್ತ PFI ಭಾರತವನ್ನು ಇಸ್ಲಾಂ ರಾಷ್ಟ್ರವ ನ್ನಾಗಿಸಲು ಇಸ್ಲಾಮಿಕ್ ರಾಷ್ಟ್ರಗಳ ನೆರವು ಬಯಸುವ ಕನಸು ಕಾಣುತ್ತಿದೆ. PFI ತನ್ನ ಕೃತ್ಯಗಳನ್ನು ನಡೆಸುವ ಸಲುವಾಗಿ ಬೇಕಿರುವ ಸಾಮಗ್ರಿಗಳನ್ನು ದಾಸ್ತಾನು ಮಾಡಲು, ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ದಾಸ್ತಾನುಗಳನ್ನು
ತೆರೆದು ಬಾಂಬುಗಳು, ಮಚ್ಚುಗಳು, ಚಾಕುಗಳನ್ನು ಸಂಗ್ರಹ ಮಾಡಬೇಕೆಂದು ತನ್ನ ಧ್ಯೇಯೋದ್ದೇಶ ಪತ್ರದಲ್ಲಿ ಹೇಳಿದೆ.

ಬೆಂಗಳೂರಿನ ಹಲವು ಕಡೆಗಳಲ್ಲಿ ಪೋಲೀಸರ ದಾಳಿಯಿಂದ ಇಸ್ಲಾಮಿಕ್ ಭಯೋತ್ಪಾದಕರು ಸಂಗ್ರಹಿಸಿದ್ದಂತಹ ಸ್ಫೋಟಕಗಳು ವಶವಾಗಿರುವುದು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ಆಸರೆ ಬಯಸಿ ಬರುವ ತನ್ನ ಸಮುದಾಯದವರಿಗೆ ಮನೆಯನ್ನು ಬಾಡಿಗೆಗೆ ಕೊಡುವ ಮಾಲೀಕನಿಗೆ ತಾನೊಬ್ಬ ಭಯೋತ್ಪಾದಕನಿಗೆ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದೇನೆಂಬ ಅರಿವಿರುವುದಿಲ್ಲ.
ನಿಷೇಽತ ‘ಸಿಮಿ’ ಯ ಹಲವು ಸದಸ್ಯರು ಇಂದು Pಊಐ ಸಂಘಟನೆಯಲ್ಲಿದ್ದಾರೆ.

PFI ಹಾಗೂ SDPI ಸಂಘಟನೆ ಯನ್ನು ನಿಷೇಧಿಸಿದ ಮರುದಿನ ಮತ್ತೊಂದು ಹೆಸರಿನಲ್ಲಿ ಇವರು ತಮ್ಮ ಕಾರ್ಯ ಚಟುವಟಿಕೆ ಶುರುಮಾಡುತ್ತಾರೆ. 800 ವರ್ಷಗಳಿಂದ ಭಾರತವನ್ನು ಸಂಪೂರ್ಣ ಇಸ್ಲಾಮೀಕರಣ ಮಾಡಬೇಕೆಂಬ ಕನಸನ್ನು ಹೊತ್ತು ನೂರಾರು ರಾಜರುಗಳು ದಂಡೆತ್ತಿ ಬಂದರು. ಇವರ ಶ್ರಮವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಯಿತೇ ಹೊರತು,
ಯೂರೊಬ್ಬನೂ ಯಶಸ್ಸುಗಳಿಸಲಿಲ್ಲ. ಈಗಲೂ ಅಷ್ಟೇ ಅದೇ ‘ತಿರುಕನ ಕನಸ’ನ್ನು PFI ಕಾಣುತ್ತಿದೆ.

ವಿಪರ್ಯಾಸವೆಂದರೆ ಜಗತ್ತಿನ ಇತರೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿಲ್ಲದ ಸವಲತ್ತು ಹಾಗೂ ಸ್ವಾತಂತ್ರ್ಯ ಭಾರತೀಯ ಮುಸಲ್ಮಾನ ರಿಗಿದೆ, ಆದರೂ ಸಹ ’PFI’ನಂತಹ ಸಂಘಟನೆಗಳು ಮುಸಲ್ಮಾನರನ್ನು ಎತ್ತಿಕಟ್ಟಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿರುತ್ತವೆ.