Saturday, 23rd November 2024

ನನ್ನದು ಒಂದು ಬದೂಕಾ, ನನ್ನದೂ ಸಾಧನೆಯಾ ? ಅನಿಸಿದ್ದು ಸುಳ್ಳಲ್ಲ

ಇದೇ ಅಂತರಂಗ ಸುದ್ದಿ

vbhat@me.com

ಕೆಲ ವರ್ಷಗಳ ಹಿಂದೆ ಒಂದು ವಾರಕ್ಕೂ ಹೆಚ್ಚು ಸಮಯ ದಿವ್ಯಾಂಗ ಹೊಂದಿರುವವರ ಜತೆ ಕಳೆಯುವ ಅವಕಾಶ ಸಿಕ್ಕಿತ್ತು. ಅವರೆಲ್ಲ ಬೇರೆ ಬೇರೆ ದೇಶಗಳಿಂದ ಬಂದವರು. ಕೆಲವರಿಗೆ ನಡೆದಾಡಲು ಆಗುತ್ತಿಲ್ಲ, ಆದರೆ ಉಳಿದ ಅಂಗಗಳು ಚೆನ್ನಾಗಿವೆ. ಕೆಲವರಿಗೆ ಕಿವಿ ಕೇಳುತ್ತಿಲ್ಲ. ಇನ್ನು ಕೆಲವರಿಗೆ ತಲೆ, ಕೈ, ಬೆರಳುಗಳು ಸ್ವಾಽನದಲ್ಲಿ ಇಲ್ಲ. ಹಾಗಂತ ಇವರೆಲ್ಲ ಅವರವರ ಕೇತ್ರದಲ್ಲಿ ಪರಿಣಿತರೇ. ಅವರಲ್ಲೊಬ್ಬಾಕೆ ವಿಶ್ವಸಂಸ್ಥೆಯ ಅಭಿವೃದ್ಧಿ ಹಾಗೂ ಸಾಮಾಜಿಕ ನೀತಿ ವಿಭಾಗದ ನಿರ್ದೇಶಕಿ.

ಮತ್ತೊಬ್ಬಾಕೆ ಕೆನಡಾದ ಒಂಟಾರಿಯೋದ ಡೆಪ್ಯುಟಿ ಮಿನಿಸ್ಟರ್, ಮತ್ತೊಬ್ಬ ಜರ್ಮನಿಯ ಪತ್ರಕರ್ತ. ಇನ್ನೊಬ್ಬ ನ್ಯೂಯಾರ್ಕಿನ ಕಮಿಷನರ್. ಇವರೆಲ್ಲ ತಮ್ಮ ತಮ್ಮ ದೇಶಗಳಿಂದ ಗಾಲಿಕುರ್ಚಿಗಳ ಮೇಲೆ ಇಸ್ರೇಲಿಗೆ ಬಂದಿದ್ದರು. ‘ಎಕ್ಸಸ್ ಇಸ್ರೇಲ್’ ಎಂಬ ಸ್ವಯಂಸೇವಾ ಸಂಸ್ಥೆ ಸಂಘಟಿಸಿದ ನಾಲ್ಕನೇ ಅಂತಾರಾಷ್ಟ್ರೀಯ ದಿವ್ಯಾಂಗಿಗಳ ಸಮ್ಮೇಳನದಲ್ಲಿ ಪಾಳ್ಗೊಳ್ಳಲು ಬಂದ ಇವರೊಂದಿಗೆ ಒಂದು ವಾರದಿಂದ ನಾನು ಕಳೆದಿದ್ದೆ. ವಿಕಲಚೇತನರೊಂದಿಗೆ ನಾನು ಹೀಗೇ ದಿನವಿಡೀ, ವಾರವಿಡೀ ಕಳೆದಿದ್ದೇ ಇಲ್ಲ.

ನನಗೂ ಒಬ್ಬ ಪೋಲಿಯೋ ಪೀಡಿತೆ ಅಕ್ಕ ಇದ್ದಳು. ಅವಳು ಸುಮಾರು ಇಪ್ಪತ್ತು ವರ್ಷ ಬದುಕಿದ್ದಳು. ಸದಾ ಕೂತಲ್ಲೇ ಕುಳಿತಿರುತ್ತಿದ್ದ ಅವಳು ಅನುಭವಿಸಿದ, ಅವಳಿಂದಾಗಿ ನನ್ನ ತಂದೆ- ತಾಯಿ ಅನುಭವಿಸಿದ ಗೋಳು- ನೋವನ್ನು ಸಾಕ್ಷಾತ್ ನೋಡಿದ್ದೇನೆ. ಆಕೆ ಸತ್ತು ಸುಮಾರು ಮೂವತ್ತೆರಡು ವರ್ಷಗಳಾಗಿದ್ದರಿಂದ,
ಆ ನೆನಪುಗಳೆಲ್ಲ ಮಸುಕು ಮಸುಕಾಗಿದೆ. ಆದರೆ ಬೇರೆ ಬೇರೆ ಶಾರೀರಿಕ ಅಸಾಮರ್ಥ್ಯ ಹೊಂದಿದ ಅನೇಕರ ಜತೆ ಯಾವುದೋ ಅನ್ಯ ಅಮೋಘ, ಅಪರೂಪದ ಅನುಭವ ಬೆಳಗಿನಿಂದ ರಾತ್ರಿ ತನಕ ದಿವ್ಯಾಂಗಿಗಳ ಜತೆ ಕಳೆದು ಯೋಚನೆಯಲ್ಲಿ ಆರ್ದ್ರವಾಗಿವೆ.

ಬದುಕು ಸಂಘರ್ಷಮಯ ಅಥವಾ ಹೋರಾಟದ ಬದುಕು ಅಂತಿಮವಲ್ಲ, ಈ ಮಾತು ಸರಿಯಾಗಿ ಅನ್ವಯವಾಗುವುದು ಅವರಿಗೆ ಮಾತ್ರ. ದಿವ್ಯಾಂಗಿಗಳಿಗೆ ಹೋಲಿಸಿದರೆ ನಮ್ಮ ಬದುಕು ಎಷ್ಟೋ ಪಾಲು ಸಲೀಸು, ಆರಾಮ. ನಾವು ಅನ್ಯರ ನೆರವಿಲ್ಲದೇ ಏನು ಬೇಕಾದರೂ ಮಾಡಬಲ್ಲೆವು, ಎಲ್ಲೆಂದರಲ್ಲಿ ಹೋಗಬಲ್ಲೆವು.
ಆದರೆ ಅವರನ್ನು ನೋಡಿ, ಅವರಿಗೆ ಬೇರೆಯವರ ನೆರವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲೆಂದರಲ್ಲಿ ಅಲ್ಲ, ಬೆಡ್ ರೂಮಿನಿಂದ ಟಾಯ್ಲೆಟ್ಟಿಗೆ ಸಹ ಹೋಗಲು ಆಗುವುದಿಲ್ಲ. ಇಂಥವರಿಗೂ ಒಂದು ಸಹ್ಯವಾಗುವ ಬದುಕು ಕಟ್ಟಿಕೊಡ ಬೇಕು, ಅವರು ಗೌರವದಿಂದ, ಮರ್ಯಾದೆಯಿಂದ, ಘನತೆಯಿಂದ ಬದುಕುವಂತಾಗ ಬೇಕು, ಇವರನ್ನು ನೋಡಿ ಯಾರೂ ಕನಿಕರ ಪಡಬಾರದು, ಕಣ್ಣೀರೂ ಹಾಕಬಾರದು, ಸಹಾನುಭೂತಿ, ಅನುಕಂಪ ಸೂಚಿಸಬಾರದು, ಆದರೆ ಅವರ ಸಾಧನೆ ಕಂಡು ಎಲ್ಲ ಅಭಿಮಾನ ಪಡಬೇಕು, ಅಂಥ ಪರಿಸರ, ಡಿಟ್ಟhಜ್ಞಿಜ Zಠಿಞಟomeಛ್ಟಿಛಿ ನಿರ್ಮಿಸಿಕೊಡುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಬೇಕು.

ಅಂಥ ವಾತಾವರಣ ನಿರ್ಮಿಸಿಕೊಟ್ಟರೆ ಅವರು ಯಾರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು, ಯಾರಿಗೂ ಹೊರೆಯಾಗದೇ, ಸ್ವತಂತ್ರವಾಗಿ ಬದುಕು ಸಾಗಿಸಿಕೊಂಡು ಹೋಗುತ್ತಾರೆ. ನಮಗೆ, ನಿಮಗೆ ಬದುಕಲು ಎಷ್ಟು ಹಕ್ಕು, ಸಮಾನ ಅವಕಾಶಗಳಿವೆಯೋ, ದಿವ್ಯಾಂಗಿಗಳಿಗೂ ಹಕ್ಕಿದೆ, ಅವಕಾಶಗಳಿವೆ. ಯಾವ ಕಾರಣಕ್ಕೂ ಅವರು ನಮಗಿಂತ ಮಾತ್ರ ಶಾಶ್ವತ. ಅದು ಸದಾ ತೆರೆದಿರಬೇಕಷ್ಟೇ.

ಅನ್‌ಬಿಲಿವೇಬಲ್!

ಕಮ್ಮಿಯೇನಲ್ಲ. ಹಾಗಾದರೆ ನಾವು ಅವರಿಗೆ ಅಂಥ ಪರಿಸರ ನಿರ್ಮಿಸಿ ಕೊಟ್ಟಿದ್ದೇವಾ? ಈ ಗಂಭೀರ ವಿಷಯ ಚಿಂತನೆಯೇ ಆ ಸಮಾವೇಶದ ಕೇಂದ್ರಬಿಂದು. ಜಗತ್ತು ಆಧುನಿಕತೆಗೆ ಹೊರಳಿ ಇಷ್ಟು ವರ್ಷಗಳಾದರೂ, ತಂತ್ರಜ್ಞಾನ ಆಧರಿತ ಸಮಾಜ ತಲೆಯೆತ್ತಿ ಇಷ್ಟು ದಶಕಗಳೇ ಕಳೆದರೂ ದಿವ್ಯಾಂಗಿಗಳಿಗೆ ಎಂಥ ಸಮಾಜವನ್ನು ನಾವು ತೆರೆದಿಟ್ಟಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ಉತ್ತರ ಕಂಡುಹಿಡಿಯಲು ಕಷ್ಟವೇನಲ್ಲ. ಶಾರೀರಿಕ ಅಸಾಮರ್ಥ್ಯ ಹೊಂದಿರದ ಸಮಾಜವಿರುವುದು ಸಾಧ್ಯವೇ ಇಲ್ಲ. ಅದು ನಿಲ್ಲಿಸಲಾಗದ ಪಿಡುಗು. ಆದರೆ ದಿವ್ಯಾಂಗಿಗಳಿಗೆ ಆಪ್ತ ವಾಗುವ, ಅವರ ಕೆಲಸಗಳನ್ನು ಅವರೇ ನಿರ್ವಹಿಸಿರುವ ವಾತಾವರಣ ಕಲ್ಪಿಸುವುದು ಸಾಧ್ಯವಿದೆ.

ತಡವಾಗಿಯಾದರು ಪರವಾಗಿಲ್ಲ. ಅದನ್ನು ಈಗಲಾದರೂ ಮಾಡೋಣ ಎಂಬುದು ಅಂದು ನಡೆದ ಸಮಾವೇಶದ ಆಶಯ. ನಾನು ಇಂಥ ಮಹತ್ವದ, ಕಿತ್ತು ತಿನ್ನುವ ಸಮಸ್ಯೆಗೆ ತಡವಾಗಿ ಸ್ಪಂದಿಸುತ್ತಿದ್ದೆನಲ್ಲ ಎಂದು ವಿಷಾದವಾಯಿತು. ದಿವ್ಯಾಂಗಿಗಳ ಸಾಧನೆ, ಹೋರಾಟದ ಜೀವನವನ್ನು ಒಂದು ವಾರದಿಂದ ಹತ್ತಿರ ದಿಂದ ನೋಡಿ, ನನ್ನದೂ ಒಂದು ಬದುಕಾ, ನನ್ನದೂ ಒಂದು ಸಾಧನೆಯಾ? ಅನಿಸಿತು. ದಿವ್ಯಾಂಗಿಗಳ ಬದುಕುವ ಅದಮ್ಯ ಚೇತನಕ್ಕೆ ಶರಣು.

ಡೆಸ್ಕ್ ಪತ ಕರ್ತರ ಹದ್ದಿನ ಕಣ್ಣು

ಅದು ೧೯೬೭ರ ದಿನಗಳು. ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕಾ ಕಾರ್ಯಾಲಯಕ್ಕೆ ಒಂದು ಸುದ್ದಿ ಬಂತು. ಅರ್ನಾಲ್ಡ್ ಶ್ವೆರ್ನಗರ್
(ಅಟ್ಝb ಖ್ಚeಡಿZಛ್ಞಿಛಿಜಜಛ್ಟಿ) ಎಂಬ ಇಪ್ಪತ್ತರ ತರುಣನೊಬ್ಬ ‘ಮಿಸ್ಟರ್ ಯುನಿವರ್ಸ್’ ಪಡೆದಿದ್ದಾನೆಂಬ ಸುದ್ದಿ ಆ ಪತ್ರಿಕೆಯ ಕ್ಯಾಲಿಫೋರ್ನಿಯಾ ಬ್ಯೂರೋದಿಂದ
ಬಂತು. ಪತ್ರಿಕೆಯ ಡೆಸ್ಕ್‌ನಲ್ಲಿ ಈ ಬಗ್ಗೆ ಸಣ್ಣದೊಂದು ಚರ್ಚೆ ನಡೆಯಿತು. ಅಲ್ಲಿ ತನಕ ಯಾರೂ ಆತನ ಹೆಸರನ್ನು ಕೇಳಿರಲಿಲ್ಲ. ಡೆಸ್ಕ್‌ನಲ್ಲಿರುವ ಹನ್ನೆರಡು ಪತ್ರಕರ್ತರು ಯಾರೂ ತಮಗೆ ಆ ಹೆಸರು ಗೊತ್ತಿಲ್ಲವೆಂದು ಹೇಳಿದರು. ಅದು ಗೂಗಲ್ ಇಲ್ಲದ ದಿನಗಳು. ಲ್ಯಾರಿ ಪೇಜ್ ಹಾಗೂ ಸೆರ್ಗಿ ಬಿನ್ ಎಲ್ಲಿದ್ದರೋ ಗೊತ್ತಿರ
ಲಿಲ್ಲ. ಪ್ರಾಯಶಃ ಅವರು ಹುಟ್ಟಿರಲಿಲ್ಲ. ಅರ್ನಾಲ್ಡ್ ಶ್ವೆರ್ನಗರ್ ಹೆಸರಿನ ಸ್ಪೆಲ್ಲಿಂಗ್ ಸರಿಯಾಗಿದೆಯಾ, ಅದನ್ನು ಸರಿಯಾಗಿ ಉಚ್ಚರಿಸುವುದು ಹೇಗೆ ಎಂಬ ಬಗ್ಗೆ ಡೆಸ್ಕ್‌ನಲ್ಲಿರುವ ಯಾರಿಗೂ ಖಚಿತ ಮಾಹಿತಿ ಇರಲಿಲ್ಲ. ಆನಂತರ ಆ ಕಾಪಿಯನ್ನು ನಿಭಾಯಿಸುತ್ತಿದ್ದ ಉಪಸಂಪಾದಕ ಕ್ಯಾಲಿಫೋರ್ನಿಯಾ ಬ್ಯೂರೋದ ಮುಖ್ಯಸ್ಥ ರನ್ನು ಸಂಪರ್ಕಿಸಿದ. ಆ ಮುಖ್ಯಸ್ಥ ಆ ಸುದ್ದಿಯನ್ನು ಬರೆದಿರಲಿಲ್ಲ.

ವರದಿಗಾರ ಆಫೀಸಿಗೆ ಬಂದ ನಂತರ ಕೇಳಿ ತಿಳಿಸುವುದಾಗಿ ಹೇಳಿದ. ತಕ್ಷಣ ಅವನನ್ನು ಸಂಪರ್ಕಿಸಲು ಆಗ ಮೊಬೈಲ್ ಇರಲಲ್ಲ. ಸಾಯಂಕಾಲದ ಹೊತ್ತಿಗೆ ಆ ಸುದ್ದಿ ಬರೆದ ವರದಿಗಾರ ಕ್ಯಾಲಿಫೋರ್ನಿಯಾ ಬ್ಯೂರೋಕ್ಕೆ ಬಂದ. ತಕ್ಷಣ ಅವನಿಗೆ ನ್ಯೂಯಾರ್ಕ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿರುವ ಡೆಸ್ಕ್ ಮುಖ್ಯಸ್ಥನನ್ನು ಸಂಪರ್ಕಿಸುವಂತೆ ತಿಳಿಸಲಾಯಿತು. ಅರ್ನಾಲ್ಡ್ ಹೆಸರಿನ ಬಗ್ಗೆ ಕೇಳಿದ ಪ್ರಶ್ನೆಗೆ ಸುದ್ದಿಯನ್ನು ಬರೆದ ವರದಿಗಾರ ಗೊಂದಲಕ್ಕೀಡಾದ. ತಾನು ಬರೆದಿದ್ದೇ ಸರಿ ಎಂದು ವಾದಿಸಿದ. ಆದರೆ ವರದಿಯಲ್ಲಿ ಒಂದೆಡೆ ಖ್ಚeಡಿZಛ್ಞಿಛಿಜಜಛ್ಟಿ ಎಂದೂ ಇನ್ನೊಂದೆಡೆ ಖ್ಚeಡಿಛ್ಟ್ಢಿಛ್ಞಿಛಿಜಜಛ್ಟಿ ಎಂದೂ ಇತ್ತು. ಇವುಗಳ ಪೈಕಿ ಯಾವುದು ಸರಿ ಎಂಬ ಡೆಸ್ಕ್ ಮುಖ್ಯಸ್ಥನ ಪ್ರಶ್ನೆಗೆ ವರದಿಗಾರ ನಿಗೆ ಸ್ಪಷ್ಟತೆ ಇರಲಿಲ್ಲ. ‘ಮಿಸ್ಟರ್ ಯುನಿವರ್ಸ್’ ಸ್ಪರ್ಧೆ ಏರ್ಪಡಿಸಿದ್ದ ಸಂಘಟಕರನ್ನು ಕೇಳಿ ತಿಳಿಸುವಂತೆ ಡೆಸ್ಕ್ ಮುಖ್ಯಸ್ಥರು ತಿಳಿಸಿದರು.

ಸರಿ, ಕ್ಯಾಲಿಫೋರ್ನಿಯಾ ಬ್ಯೂರೋ ವರದಿಗಾರ ಸಂಘಟಕ ರನ್ನು ಸಂಪರ್ಕಿಸಿದ. ಅವರು ಖ್ಚeಡಿZಛ್ಞಿಛಿಜಜಛ್ಟಿ ಸರಿಯಾದದ್ದು ಎಂದು ತಿಳಿಸಿದರು. ನಂತರ ಆತ ನ್ಯೂಯಾರ್ಕ್ ನಲ್ಲಿರುವ ಆಫೀಸ್‌ಗೆ ಫೋನ್ ಮಾಡಿ, ಸರಿಯಾದ ಸ್ಪೆಲ್ಲಿಂಗ್ ಇರುವ ಹೆಸರು ಯಾವುದೆಂಬುದನ್ನು ತಿಳಿಸಿದ. ಇಷ್ಟು ಹೊತ್ತಿಗೆ ಸುಮಾರು ಏಳೆಂಟು ತಾಸುಗಳು ಕಳೆದು ಹೋಗಿದ್ದವು. ಒಂದು ಹೆಸರಿನ ಬಗ್ಗೆ, ಅದೂ ಒಂದು ಸ್ಪೆಲ್ಲಿಂಗ್ ಬಗ್ಗೆ ಡೆಸ್ಕ್ ಮುಖ್ಯಸ್ಥ ಅಷ್ಟೆಲ್ಲ ತಲೆ ಕೆಡಿಸಿಕೊಂಡಿದ್ದ. ಅಲ್ಲದೇ ಈ ಸಂದೇಹ ನಿವಾರಿಸದೇ, ಸುದ್ದಿಯನ್ನು

ಮುದ್ರಣಕ್ಕೆ ಕಳಿಸಕೂಡದು ಎಂದು ತಿಳಿಸಿದ್ದ. ಒಂದು ವೇಳೆ ಹೆಸರನ್ನು ತಪ್ಪಾಗಿ ಬರೆದಿದ್ದರೂ, ಆ ಪತ್ರಿಕೆಯ ‘ತಪ್ಪು-ಒಪ್ಪು’ ಅಂಕಣದಲ್ಲಿ ಮರುದಿನ ಪ್ರಕಟಿಸ ಬಹುದಿತ್ತು. ಆದರೂ ಮೊದಲ ದಿನವೇ ಎಲ್ಲರೂ ಆ ಸುದ್ದಿಯನ್ನು ನೋಡುವುದರಿಂದ, ತಪ್ಪು ಬರೆಯುವುದರಿಂದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಎಂದು ಆತ ಭಾವಿಸಿದ್ದ.

‘ಬೇರೆ ಯಾರಿಗೂ ಅರ್ನಾಲ್ಡ್ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿದ್ದು ಗೊತ್ತಾಗದೇ ಹೋಗಬಹುದು. ಆದರೆ ಸ್ವತಃ ಅರ್ನಾಲ್ಡ್‌ಗಂತೂ ಗೊತ್ತಾಗದೇ ಹೋಗುವುದಿಲ್ಲ. ಮಿಸ್ಟರ್ ಯುನಿವರ್ಸ್ ಟೈಟಲ್ ಪಡೆದ ಸಂತಸದಲ್ಲಿ ಈ ಸಣ್ಣ ಲೋಪವೇಕೆ?’ ಎಂದು ಡೆಸ್ಕ್ ಮುಖ್ಯಸ್ಥ ತನ್ನ ಸಹೋದ್ಯೋಗಿಗಳಿಗೆ ಸರಿಯಾದ ಸ್ಪೆಲ್ಲಿಂಗ್
ಬರೆಯುವಂತೆ ಸೂಚಿಸಿದ್ದ. ಪತ್ರಿಕಾಲಯಗಳಿಗೆ ಪ್ರತಿದಿನ ಸಾವಿರಾರು ಸುದ್ದಿ ಹರಿದು ಬರುತ್ತವೆ. ಪ್ರತಿ ಸುದ್ದಿಯ ಮೇಲೂ ಇಂಥದೇ ಹದ್ದಿನ ಕಣ್ಣಿಟ್ಟಿರಬೇಕು.

ಒಂದು ಪತ ಹಲವು ಭಾವ 

ಕಾರಿನಲ್ಲಿ ಮನೆಗೆ ಹೋಗುತ್ತಿದ್ದೆ. ಎದುರಿಗೆ ಸೂಪರ್ ಮಾರ್ಕೆಟ್ ಕಾಣಿಸಿತು. ಶೇವಿಂಗ್ ಕ್ರೀಮ್ ಹಾಗೂ ಬ್ಲೇಡ್ ತರುವಂತೆ ಮಗನಿಗೆ ಹೇಳಿದೆ. ಆತ ಸೂಪರ್ ಮಾರ್ಕೆಟ್‌ನೊಳಗೆ ಹೋದ. ನಾನು ಅದರ ಮುಂದೆಯೇ ಕಾರನ್ನು ಪಾರ್ಕ್ ಮಾಡಿ ಕುಳಿತುಕೊಂಡೆ. ಅರ್ಧಗಂಟೆಯಾದರೂ ನನ್ನ ಮಗ ಬರಲಿಲ್ಲ. ಐದು ನಿಮಿಷದ ಕೆಲಸಕ್ಕೆ ಇಷ್ಟು ಹೊತ್ತಾದರೂ ಬರಲಿಲ್ಲವಲ್ಲ ಎಂದು ವಿಪರೀತ ಸಿಟ್ಟು ಬಂತು. ಮಗನಿಗೆ ಫೋನ್ ಮಾಡೋಣ ಅಂದ್ರೆ, ಆತ ಕಾರಿನಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದ. ಕ್ಷಣಕ್ಷಣಕ್ಕೂ ನನ್ನ ಸಿಟ್ಟು ಹೆಚ್ಚುತ್ತಿತ್ತು. ನಾನು ತಾಳ್ಮೆ ಕಳೆದುಕೊಳ್ಳಲಾರಂಭಿಸಿದೆ. ನಾನು ಕುಳಿತಲ್ಲಿಂದಲೇ ಸೂಪರ್ ಮಾರ್ಕೆಟ್ ಕಾಣುತ್ತಿತ್ತು. ಕಾರನ್ನು ಪಾರ್ಕ್ ಮಾಡಿ ಒಳಗಡೆ ಹೋಗಿ ಮಗನನ್ನು ಹುಡುಕಬೇಕೆಂದು ನಿರ್ಧರಿಸಿದೆ.

ಸೂಪರ್ ಮಾರ್ಕೆಟ್ ಒಳಗೆ ಕಾಲಿಡುತ್ತಿದ್ದಂತೆ ನನ್ನ ಮಗ ಬಿಲ್ ಪಾವತಿಸಲು ಕ್ಯೂನಲ್ಲಿ ನಿಂತಿರುವುದು ಕಾಣಿಸಿತು. ಆತ ಕೌಂಟರ್‌ಗೆ ಬರಲು ಇನ್ನೂ ಹತ್ತು ನಿಮಿಷಗಳಾದರೂ ಬೇಕಾಗಬಹುದು ಎಂದೆನಿಸಿತು. ನನ್ನ ಆಕ್ರೋಶವನ್ನು ಪ್ರಕಟಿಸಬೇಕೆಂದು ಕೌಂಟರ್‌ನಲ್ಲಿರುವ ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳಲು ಅತ್ತ ಹೆಜ್ಜೆ ಹಾಕಿದೆ. ಆ ಸೂಪರ್ ಮಾರ್ಕೆಟ್‌ನಲ್ಲಿ ಐದು ಕೌಂಟರ್‌ಗಳಿದ್ದರೂ, ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಆ ಒಬ್ಬ ಮಹಿಳೆ ಎರಡೂ ಕಾಲುಗಳಿಲ್ಲದ ಕಸ್ಟಮರ್‌ಗೆ ನೆರವಾಗುತ್ತಿದ್ದಳು. ಆಕೆ ಖರೀದಿಸಿದ ಸಾಮಾನುಗಳನ್ನೆಲ್ಲ ತಾನೇ ಎತ್ತಿಕೊಂಡು ಅವಳ ಕಾರಿನಲ್ಲಿ ಹಾಕಿ ಬಂದಳು. ಕೊನೆಗೆ ಆಕೆಯನ್ನು ವೀಲ್‌ಚೇರ್‌ನಲ್ಲಿ ಕುಳ್ಳಿರಿಸಿಕೊಂಡು ಕಾರಿನ ತನಕ ಬಿಟ್ಟುಬಂದಳು.

ಅಷ್ಟು ಹೊತ್ತು ಕ್ಯೂನಲ್ಲಿ ನಿಂತಿದ್ದವರೆಲ್ಲ ಸುಮ್ಮನೆ ನಿಂತೇ ಇದ್ದರು. ಆ ಕ್ಯೂನಲ್ಲಿ ನನ್ನ ಮಗನೂ ನಿಂತಿದ್ದ. ಈ ದೃಶ್ಯವನ್ನು ನೋಡಿ ನನ್ನ ಸಿಟ್ಟು ಜರ್ರನೆ ಇಳಿದು ಹೋಯಿತು. ಕೌಂಟರ್‌ನಲ್ಲಿದ್ದ ಮಹಿಳೆ ಬಗ್ಗೆ ಗೌರವ ಮೂಡಿತು. ಅವಳೊಂದಿಗೆ ಜಗಳವಾಡಬೇಕೆಂದು ಹೋದವನು, ಅವಳಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ನಡೆದ ಘಟನೆಯನ್ನೆಲ್ಲ ಮಗ ಸವಿಸ್ತಾರವಾಗಿ ಹೇಳಿದ. ಒಂದು ವೇಳೆ ಕೌಂಟರ್‌ನಲ್ಲಿದ್ದ ಮಹಿಳೆ ಜತೆ ಜಗಳವಾಡಿದ್ದರೆ, ನನಗೆ ನನ್ನ ಬಗ್ಗೆಯೇ ವಿಪರೀತ
ಅಸಹ್ಯ ಮೂಡುತ್ತಿತ್ತೇನೋ? ಜನ ಹೀಗೂ ಇರುತ್ತಾರೆ. ದುಬೈನಿಂದ ಪ್ರಕಟವಾಗುವ ‘ಖಲೀಜ್ ಟೈಮ್ಸ್’ ಪತ್ರಿಕೆಯಲ್ಲಿ ಕೆಲ ವರ್ಷದ ಹಿಂದೆ ಪ್ರಕಟವಾದ ಓದುಗರೊಬ್ಬರ ಪತ್ರವನ್ನು ನಿಮಗೂ ಹೇಳಬೇಕೆಂದು ಅನಿಸಿತು.

ದೃಷ್ಟಿ ಹೋದರೇನು?
ಕೆಲ ದಿನಗಳ ಹಿಂದೆ ಜೇಮ್ಸ್ ಜಾಯ್ಸ್ ಬರೆದ ‘ಊಜ್ಞ್ಞಿಛಿಜZ’o UZhಛಿ’ ಕೃತಿಯನ್ನು ಓದುತ್ತಿದ್ದೆ. ಇದನ್ನು ಪೂರ್ತಿ ಓದಿದ ನಂತರ ಕೆಲವು ವಿಮರ್ಶೆ ಓದಿದಾಗ ಗೊತ್ತಾಗಿದ್ದೇನೆಂದರೆ, ಈ ಕೃತಿ ರಚಿಸುವ ಹೊತ್ತಿಗೆ ಜೇಮ್ಸ್ ಜಾಯ್ಸ್ ದೃಷ್ಟಿಹೀನನಾಗಿದ್ದ. ಎದುರಿಗೆ ಬಂದವರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ಆತ ಬರವಣಿಗೆಯನ್ನು ಬಿಟ್ಟಿರಲಿಲ್ಲ. ತನ್ನ ಆತ್ಮೀಯ ಶಿಷ್ಯರನ್ನು ಕರೆಯಿಸಿ ಡಿಕ್ಟೇಶನ್ ಕೊಡುತ್ತಿದ್ದ. ಸ್ಯಾಮ್ಯುಯಲ್ ಬೆಕೆಟ್ ಕೂಡ ಡಿಕ್ಟೇಶನ್ ತೆಗೆದುಕೊಂಡು ಜೇಮ್ಸ್ ಜಾಯ್ಸ್‌ಗೆ ನೆರವಾಗಿದ್ದ. ಆದರೆ ಇಡೀ ಕೃತಿಯನ್ನು ಓದಿ ಮುಗಿಸುವಾಗ ಲೇಖಕನ ದೃಷ್ಟಿಹೀನತೆಯ ಲವಲೇಶವೂ  ಓದುಗನಿಗೆ
ಗೊತ್ತಾಗುವುದಿಲ್ಲ.

ಕೆಲ ವರ್ಷಗಳ ಹಿಂದೆ ವೀರಕೇಸರಿ ಸೀತಾರಾಮಶಾಸ್ತ್ರಿ ಅವರು ಬರೆದ ‘ದೌಲತ್’ ಕಾದಂಬರಿ ಓದಿದಾಗಲೂ ಇಂಥದೇ ಅನುಭವವಾಗಿತ್ತು. ಈ ಕಾದಂಬರಿ ಬರೆಯುವಾಗ ಅವರ ಎರಡೂ ಕಣ್ಣು ಹೋಗಿತ್ತು. ಸ್ನೇಹಿತರು, ಸಹಾಯಕರು, ಮಕ್ಕಳಿಗೆ ಡಿಕ್ಟೇಶನ್ ಕೊಟ್ಟು ಅವರು ಕಾದಂಬರಿ ಮುಗಿಸಿದ್ದರು. ಟಿಪ್ಪು ಸುಲ್ತಾನ್‌ನ
ಕುರಿತ ಈ ಕಾದಂಬರಿಯಲ್ಲಿ ಪ್ರಕೃತಿ, ಶೌರ್ಯ-ಸಾಹಸ ಮುಂತಾದ ವರ್ಣನೆ ಬರುತ್ತದೆ. ಅಂಥ ಸಂದರ್ಭದಲ್ಲಿ ಲೇಖಕನ ದೃಷ್ಟಿಹೀನತೆಯ ಕೊರತೆ ಸ್ವಲ್ಪವೂ ಎದ್ದು ಕಾಣುವುದಿಲ್ಲ. ಶಾಸ್ತ್ರಿಯವರು ತಮ್ಮ ದೃಷ್ಟಿ ಕಳೆದುಕೊಂಡ ನಂತರವೇ ಹತ್ತಕ್ಕೂ ಹೆಚ್ಚು ಕಾದಂಬರಿ ಬರೆದಿದ್ದು ಅಚ್ಚರಿಯೇ. ಕವಿ, ಕಾದಂಬರಿಕಾರ
ರಾಬರ್ಟ್ ಪೆನ್ ವಾರೆನ್ ಹಾಗೂ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ

ಅಲೀಸ್ ವಾಕರ್ ಕೂಡ ದೃಷ್ಟಿ ಕಳೆದುಕೊಂಡ ನಂತರವೇ ತಮ್ಮ ಮಹತ್ವದ ಕೃತಿಗಳನ್ನು ರಚಿಸಿದವರು. ಸಾಹಿತಿಗೆ, ಬರಹಗಾರರಿಗೆ, ಚಿಂತಕರಿಗೆ ಕಣ್ಣಿನಷ್ಟೇ ಒಳಗಣ್ಣು ಬಹಳ ಮುಖ್ಯ. ಕಣ್ಣು ಮಂಜಾಗಬಹುದು, ದೃಷ್ಟಿ ಹೋಗಬಹುದು, ಆದರೆ ಒಳಗಣ್ಣು ಓಶೋ ಬತ್ತಳಿಕೆಯಲ್ಲಿ ಅವೆಷ್ಟು ಹಾಸ್ಯ ಪ್ರಸಂಗಗಳು, ದೃಷ್ಟಾಂತ
ಗಳು, ಕತೆಗಳು, ಉಪಕತೆಗಳು ಇವೆಯೋ? ಓಶೋ ಏನನ್ನೇ ಹೇಳಲಿ, ಇವುಗಳನ್ನೆಲ್ಲ ಹೇಳದೇ ಮಾತು ಮುಗಿಸುವುದಿಲ್ಲ. ನಮ್ಮ ಎಷ್ಟೋ ಗುರೂಜೀಗಳು, ಸ್ವಾಮೀಜಿಗಳಿಗೆ ಓಶೋ ಹೇಳುವ ಇಂಥ ಕತೆ, ಹಾಸ್ಯಗಳೇ ಇಂದಿಗೂ ಮೂಲ ಸರಕು. ಆದರೆ ಅವರು ಅಪ್ಪಿತಪ್ಪಿಯೂ ಓಶೋ ಹೆಸರು ಹೇಳುವುದಿಲ್ಲ. ತಮ್ಮದೇ ವಿಚಾರ ಎಂಬಂತೆ ಹೇಳುತ್ತಾರೆ. ಓಶೋ ಪುಸ್ತಕ ಓದಿಕೊಂಡವರಿಗೆ ಅವರ ವಿಚಾರದ ತಾಯಿಬೇರು ಎಲ್ಲಿದೆಯೆಂಬುದು ತಟ್ಟನೆ ಗೊತ್ತಾಗುತ್ತದೆ. ಇರಲಿ, ಇತ್ತೀಚೆಗೆ ಕೇಳಿದ ಓಶೋ ಹೇಳಿದ ಹಾಸ್ಯ ಪ್ರಸಂಗ ವನ್ನು ನಿಮಗೂ ಹೇಳಬೇಕು.

ಒಂದೂರಿನಲ್ಲಿ ಒಬ್ಬನಿದ್ದ. ಆತನ ಹೆಸರು ಚಿಛ್ಝಿಜಿಛಿqZಚ್ಝಿಛಿ (ನಂಬಲಸಾಧ್ಯ). ಆತನ ಹೆಂಡತಿ ಬಹಳ ಒಳ್ಳೆಯವಳು. ಅವರಿಬ್ಬರದು ಅನುರೂಪ ಜೋಡಿ. ಅವರ ದಾಂಪತ್ಯದಲ್ಲಿ ಅಸಮಾಧಾನ, ಬೇಸರ ಎಂಬುದೇ ಇರಲಿಲ್ಲ. ಒಂದು ದಿನ ಅನ್‌ಬಿಲಿವೇಬಲ್ ಕಾಯಿಲೆ ಬಿದ್ದ. ಆತನಿಗೆ ತಾನು ಬದುಕಿ ಉಳಿಯುವುದಿಲ್ಲ ಎಂಬುದು ಖಾತ್ರಿಯಾಯಿತು. ಆತ ಹೆಂಡತಿಯನ್ನು ಕರೆದು, ‘ಡಾರ್ಲಿಂಗ್, ನಾನು ಬದುಕುವುದು ಅನುಮಾನ. ನಾನು ಸತ್ತ ನಂತರ ನನ್ನ ಸಮಾಽಯ ಮೇಲೆ ಯಾವ ಕಾರಣಕ್ಕೂ ನನ್ನ ಹೆಸರನ್ನು ಬರೆಯಿಸಬೇಡ. ಕಾರಣ ಜೀವನವಿಡೀ ಈ ವಿಚಿತ್ರ, ಅಸಹ್ಯವಾದ ಹೆಸರನ್ನು ಕರೆಸಿಕೊಂಡು ಸಾಕಾಗಿ ಹೋಗಿದೆ. ಅನ್
ಬಿಲಿವೇಬಲ್ ಎಂಬುದು ಒಂದು ಹೆಸರಾ? ಛೀ… ಬೇಡ.. ಬೇಡ. ನೀನು ನನ್ನ ಸಮಾಧಿ ಮೇಲೆ ಯಾವುದಾದರೂ ವಾಕ್ಯವನ್ನು ಬರೆಯಿಸು. ಆದರೆ ನನ್ನ ಹೆಸರು ಮಾತ್ರ ಬಿಲ್‌ಕುಲ್ ಬೇಡ. ಸತ್ತ ನಂತರವೂ ಅನ್ ಬಿಲಿವೇಬಲ್ ಎಂಬ ಹೆಸರಿನಿಂದ ಗಂಡನ ಕೋರಿಕೆಗೆ ಹೆಂಡತಿ ಸಮ್ಮತಿಸಿದಳು.

ಕೆಲ ದಿನಗಳ ಬಳಿಕ ಅನ್‌ಬಿಲಿವೇಬಲ್ ನಿಧನನಾದ. ಅವನ ಸಮಾಧಿ ಮೇಲೆ ಹೆಂಡತಿ ಬರೆಯಿಸಿದಳು- ‘ಈ ಸಮಾಧಿಯಲ್ಲಿ ಚಿರನಿದ್ದೆಯಲ್ಲಿರುವ ವ್ಯಕ್ತಿ ತನ್ನ ಹೆಂಡತಿಗೆ ಜೀವನದುದ್ದಕ್ಕೂ ನಿಷ್ಠನಾಗಿದ್ದ. ಒಮ್ಮೆಯೂ ಆತ ಹೆಂಡತಿಗೆ ಮೋಸ ಮಾಡಿದವನಲ್ಲ. ಇಂಥ ವಿಧೇಯ ಗಂಡ ಸಿಗುವುದು ಅಪರೂಪ’ ಆ ಸಮಾಧಿಯ
ಮೇಲಿನ ಈ ವ್ಯಾಕ್ಯವನ್ನು ಓದಿದವರೆಲ್ಲ ಉದ್ಗಾರ ತೆಗೆಯುತ್ತಿದ್ದರು- ‘ಇಟ್ಸ್ ಅನ್‌ಬಿಲಿವೇಬಲ್’!

ಡಿಸೆಂಬರ್ ಹದಿನೈದು ಬಂದರೆ… ಡಿಸೆಂಬರ್ ಹದಿನೈದರ ನಂತರ ಬಹುತೇಕ ಮಂದಿಗೆ ಒಂದು ರೀತಿಯ ವಿಚಿತ್ರ ಮನಸ್ಥಿತಿ ಆವರಿಸುತ್ತದಂತೆ. ಅದು ಸುಮಾರು
ಇಪ್ಪತ್ತೈದು ದಿನಗಳ ಕಾಲ ಅಂದರೆ ಜನವರಿ ಐದರ ತನಕ ಇರುತ್ತದಂತೆ. ನಂತರ ಕ್ರಮೇಣ ಆ ಮನಸ್ಥಿತಿ ಮಾಯವಾಗುವುದಂತೆ. ಆ ಮನಸ್ಥಿತಿಗೆ ಇಂಥದೇ ಎಂಬ ಹೆಸರಿಲ್ಲ ಅಥವಾ ಇನ್ನೂ ತನಕ ಯಾರೂ ನಾಮಕರಣ ಮಾಡಿಲ್ಲ. ಅದು ಎಂಥ ಮನಸ್ಥಿತಿ ಅಂದರೆ… ? ಜನೆವರಿ ಒಂದರಿಂದ ಹೊಸ ವ್ಯಕ್ತಿಯಾಗಬೇಕು.
? ಇನ್ನು ಹದಿನೈದು ದಿನ ಸಕತ್ ಗುಂಡು ಹಾಕಬೇಕು, ಆನಂತರ ಅದನ್ನು ಬಿಟ್ಟುಬಿಡಬೇಕು.

? ಇನ್ನು ಹದಿನೈದು ದಿನ ಮಾತ್ರ ಸಿಗರೇಟು ಸೇದೋದು. ನಂತರ ಅದನ್ನು ತುಟಿಗೆ ತಾಗಿಸುವುದಿಲ್ಲ.
? ಜನೆವರಿ ಒಂದರಿಂದ ಜಿಮ್ ಗೆ ಹೋಗುತ್ತೇನೆ. ಅಲ್ಲಿ ತನಕ ಚೆನ್ನಾಗಿ ತಿನ್ನಬೇಕು. ನಂತರ ಫುಲ್ ಡಯಟ್.
? ಜನೆವರಿ ಒಂದರಿಂದ ನಿತ್ಯವೂ ದಿನಚರಿ ಬರೆಯಬೇಕು, ಬೆಳಗ್ಗೆ ಎದ್ದು ವಾಕಿಂಗ್ ಹೋಗಬೇಕು, ಸಂಗೀತ ಕಲಿಯಬೇಕು, ತಬಲಾಕ್ಲಾಸಿಗೆ ಹೋಗಬೇಕು, ಇತ್ಯಾದಿ ಆದರೆ ಜನೆವರಿ ಐದು ಕಳೆಯುತ್ತಿದ್ದಂತೆ, ನಿಧಾನವಾಗಿ ಈ ಎಲ್ಲಾ ಗೊತ್ತುವಳಿಗಳು ಕರಗಲಾರಂಭಿಸುತ್ತವೆ. ಡಿಸೆಂಬರ್ ಹದಿನೈದರ ಮುಂಚಿನ ಮನಸ್ಥಿತಿ ಆವರಿಸಿಕೊಳ್ಳಲಾರಂಭಿಸುತ್ತದೆ.

ಜನೆವರಿ ಇಪ್ಪತ್ತು ಬರುವುದರೊಳಗೆ, ಹಿಂದಿನ ವರ್ಷದ ಡಿಸೆಂಬರ್ ಆರಂಭದ ಮನಸ್ಥಿತಿಗೆ ಮರಳಿರುತ್ತಾರೆ. ಆದರೆ ಪ್ರತಿ ವರ್ಷ ಡಿಸೆಂಬರ್ ಹದಿನೈದು ಬರುತ್ತಿದ್ದಂತೆ, ಈ ರೀತಿ ಅನಿಸುವುದು ಮಾತ್ರ ಸುಳ್ಳಲ್ಲ.