ಗಂಟಾಘೋಷ
ಗುರುರಾಜ್ ಗಂಟಿಹೊಳೆ
ವಾಸ್ತವಿಕತೆಯಿಂದ ಬಹಳ ದೂರವಿರುವ ಇಂದಿನ ಕಾಂಗ್ರೆಸ್ ನಾಯಕತ್ವವು ಅಸಮಂಜಸ ಘೋಷಣೆಗಳನ್ನು ಮಾಡುತ್ತಿದೆ. ದೇಶದ ಹಿತ ಮತ್ತು ಸಮಗ್ರತೆಯನ್ನು ಕಾಯುವ ಒಂದು ಸದೃಢ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳಲಿ ಎಂದು ನಾವೆಲ್ಲ ಬಯಸುತ್ತೇವೆ. ಈ ಕುರಿತಾಗಿ ಆ ಪಕ್ಷದ ನಾಯಕರು ಚಿಂತನೆ ನಡೆಸಬೇಕಿದೆ. ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳ ದಿದ್ದುರು ಕಾಂಗ್ರೆಸ್ ಪಕ್ಷದ ಇತಿಹಾಸದ ಪುಟಗಳಲ್ಲಿ ಒಂದು ವೈರುಧ್ಯದ ಘಟನೆಯಾಗಿ ದಾಖಲಾಗಲಿದೆ.
ಹೌದು, ನಾವೀಗ ಮೇಲಿನಂತೆ ಪ್ರಶ್ನೆ ಕೇಳಲೇಬೇಕಿದೆ. ಪ್ರಶ್ನಿಸುವುದು, ಜನಹಿತಕ್ಕಾಗಿ ದನಿಯೆತ್ತುವುದು ಸಂವಿಧಾನವು ನಮಗೆ ಕೊಟ್ಟಿರುವ ಹಕ್ಕೂ ಹೌದು. ಆ ಪ್ರಶ್ನೆ ಯಾರ ಕುರಿತಾಗಿ ಎಂಬುದನ್ನು ಮುಂದಿನ ಸಾಲುಗಳಲ್ಲಿ ನೋಡೋಣ. ಅಸಾಂವಿಧಾನಿಕ ಉಚಿತ ಗ್ಯಾರಂಟಿ ಘೋಷಣೆಗಳನ್ನು ಮತದಾನದ ಸಮಯದಲ್ಲಿ ಮಾತ್ರ ಮಾಡುವುದು ಸರಿಯೋ ತಪ್ಪೋ ಎಂಬುದನ್ನು ಈ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗ ತೀರ್ಮಾನ ಮಾಡಿಕೊಳ್ಳಲಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಕಳೆದಿದ್ದರೂ, ಕೆಲ ವಿಷಯಗಳಲ್ಲಿ ಇನ್ನೂ ಸುಧಾರಣೆ ಯಾಗಿಲ್ಲ, ಕೆಲ ವಿಚಾರಗಳಲ್ಲಿ ಪ್ರಖರ ನಿರ್ಧಾರಗಳಿಗೆ ಬರಲಾಗಿಲ್ಲ.
ಇದು ಸಂವಿಧಾನಾತ್ಮಕ ವೈಫಲ್ಯವೋ ಅಥವಾ ಈ ವ್ಯವಸ್ಥೆಯೇ ಹೀಗೆ ಎಂದು ಸುಮ್ಮನಿರುವ ಜನಸಾಮಾನ್ಯರ ವೈಫಲ್ಯವೋ ಎಂಬುದನ್ನು ಅವರವರ ವಿವೇಚನೆಗೆ ಬಿಡೋಣ. ಭಾರತದ ರಾಜಕೀಯದಲ್ಲಿ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್, ಇಂದು ಕೂಡ ಚುನಾವಣೆ ಗೆಲ್ಲಬೇಕಾದರೆ ಉಚಿತ ಘೋಷಣೆ ಗಳ ಮೊರೆಹೋಗಬೇಕಾಗಿರುವುದು ಮಾತ್ರ ವಿಪರ್ಯಾಸ. ಸುಮಾರು ೭೦ ವರ್ಷಗಳಿಂದ, ಚುನಾವಣಾ ಗೆಲುವೊಂದನ್ನೇ ಮನದಲ್ಲಿಟ್ಟು ಕೊಂಡು ಈ ದೇಶದ ಕೆಳ ಮಧ್ಯಮ, ಬಡವ ಮತ್ತು ಅಲ್ಪಸಂಖ್ಯಾತ ಜನರನ್ನು ಉದ್ದೇಶಿಸಿ ಏನಾದರೊಂದು ಆಕರ್ಷಕ ಘೋಷಣೆಯನ್ನು ಮಾಡುತ್ತಲೇ ಬಂದಿದೆ ಈ ಪಕ್ಷ. ಈ ಹಿಂದಿನ ಘೋಷಣೆಗಳು ಆರ್ಥಿಕತೆಯಲ್ಲಿ ಸೃಷ್ಟಿಸಿರುವ ಅಧ್ವಾನಗಳ ಪರಿಯು, ಆಡಳಿತದ ಒಳಗಿರುವ ಅಧಿಕಾರಿಗಳನ್ನೋ, ಕೈ ಪಕ್ಷದ ಇತರೆ ಶಾಸಕರನ್ನೋ ಕೇಳಿದರೆ ತಿಳಿಯುತ್ತದೆ.
ಆ ಇಲಾಖೆಯ ಹಣವನ್ನು ಇನ್ಯಾವುದೋ ಘೋಷಣೆಗೆ ಹೊಂದಿಸಲು ಒದ್ದಾಡುವುದು, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಮತ್ಯಾವುದೋ ಗ್ಯಾರಂಟಿಗೆ ಬಳಸುವುದು, ಜತೆಗೆ ಆರ್ಥಿಕ ಶಿಸ್ತುಗಳಿಲ್ಲದ ಆಡಳಿತ ಮಾಡುವುದು, ಜನರು ಕೇವಲ ಉಚಿತ ಗ್ಯಾರಂಟಿಗಳನ್ನು ನಂಬಿ ಮತ ಹಾಕುವಂತಾಗುವುದು ಇವೆಲ್ಲ ವಿಪರ್ಯಾಸದ ವಿಚಾರಗಳೇ. ಸದ್ಯ ಮತ್ತದೇ, ಜಾರಿಗೊಳಿಸಲು ಅಸಾಧ್ಯವಾದ, ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳಬಲ್ಲ ಹಲವು ಘೋಷಣೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ.
ಸುಮ್ಮನೆ ಯೋಚಿಸಿ, ಪ್ರತಿ ಮಹಿಳೆಗೆ ವಾರ್ಷಿಕ ೧ ಲಕ್ಷ ರುಪಾಯಿಗಳು (ತಿಂಗಳಿಗೆ ೮,೩೩೩ ರು.) ಅಂದರೆ, ದೇಶ ದಲ್ಲಿರುವ ಒಟ್ಟು ೬೬ ಕೋಟಿಗೂ ಹೆಚ್ಚಿನ (ಶೇ.೪೮.೫ರಷ್ಟು) ಮಹಿಳೆಯರಿಗೆ ಇದು ಅನ್ವಯವಾಗಲಿದೆ. ಕೈ ಪಕ್ಷದ ಉಳಿದ ಘೋಷಣೆಗಳನ್ನು ಪಕ್ಕಕ್ಕಿಡಿ. ಇದೊಂದೇ ಸಾಕು, ದೇಶದ ಆರ್ಥಿಕತೆಯ ಬಗ್ಗೆ, ಆಂತರಿಕ ಸುರಕ್ಷತೆ ಬಗ್ಗೆ, ಮಾನವ ಪರಿಶ್ರಮದ ಬಗ್ಗೆ ಮತ್ತು ದುಡಿದು ತಿನ್ನುವ ಸಮತೋಲಿತ ಸಹಜಸೂತ್ರದ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತು ಇಂಥ ಯೋಜನೆ ರೂಪಿಸುವವರು ಎಷ್ಟು ಕಾಳಜಿ ತೋರಿದ್ದಾರೆಂದು ತಿಳಿಯುತ್ತದೆ. ದೇಶದ ೬೬ ಕೋಟಿಗೂ ಹೆಚ್ಚಿನ ಮಹಿಳೆಯರಿಗೆ ಹಂಚಲು ಸುಮಾರು ೬೬ ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಬೇಕು. ಎಲ್ಲಿಂದ ತರುತ್ತಾರೆ?!
ಜತೆಗೆ, ಇಂಥ ವಿವೇಕರಹಿತ ಘೋಷಣೆ ಮಾಡಲಾದರೂ ಒಂದು ಇತಿಮಿತಿ ಬೇಡವೇ? ಭಾರತದ ಒಟ್ಟು ಬಜೆಟ್ ಮೊತ್ತವೇ ೪೫ ಲಕ್ಷ ಕೋಟಿ (೨೦೨೩) ಇರುವಾಗ, ೬೬ ಲಕ್ಷ ಕೋಟಿ ಹಣವನ್ನು ಕೇವಲ ಮಹಿಳೆಯರಿಗೆ ಹಂಚಿದರೆ, ಇನ್ನುಳಿದ ೯೪ ಕೋಟಿ ಜನಕ್ಕೆ ಏನು ಕೊಡುತ್ತಾರೆ ಎಂಬುದೇ ಬಹುದೊಡ್ಡ ಸೋಜಿಗದ ಸಂಗತಿ. ನಮ್ಮ ಸಮಾಜದಲ್ಲಿ ಯುವಕ-ಯುವತಿಯರಿದ್ದಾರೆ. ಇವರ ಕಲಿಕೆಯು ತಂದೆ- ತಾಯಿಗಳ ದುಡಿಮೆಯ ಮೇಲೆ ನಿಂತಿದೆ.
ವೈದ್ಯಕೀಯ ಸೇರಿದಂತೆ ಇತರೆ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ಹಣ ಬೇಕು. ಇವರು ತಿಂಗಳಿಗೆ ಕೊಡುವ ೮ ಸಾವಿರ ರುಪಾಯಿ, ಮಹಿಳೆಯರನ್ನು ಅದುಹೇಗೆ ಸ್ವಾವಲಂಬಿಯಾಗಿಸುತ್ತದೆ ಎಂಬುದೇ ನಮ್ಮ ಚಿಂತೆಯಾಗಿದೆ. ಇದರೊಟ್ಟಿಗೆ, ೬೬ ಲಕ್ಷ ಕೋಟಿ ಹಣವನ್ನು ಯಾವ ಮೂಲದಿಂದ ಹೊಂದಿಸುತ್ತಾರೆ ಎಂಬುದನ್ನೂ ಇವರು ಎಲ್ಲೂ ಹೇಳಿಲ್ಲ. ಮತ್ತದೇ ‘ಆ ಇಲಾಖೆಯಿಂದ ತೆಗೆದು ಈ ಗ್ಯಾರಂಟಿಗೆ’ ಎಂಬ ಅಪ್ರಬುದ್ಧ ಹೊಂದಾಣಿಕೆ ಮಾಡುವ ಹುನ್ನಾರ ವರಲ್ಲಿದ್ದರೆ, ರಕ್ಷಣಾತ್ಮಕ ವಿಚಾರದಲ್ಲಿ ಇಡೀ ದೇಶವನ್ನೇ ಭಯಂಕರ ಅಪಾಯದ ಕೂಪಕ್ಕೆ ಈ ಕೈಪಕ್ಷ ತಳ್ಳಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ, ನಮ್ಮ ದೇಶದ ರಕ್ಷಣಾ ಬಜೆಟ್‌ನಿಂದ ತೆಗೆದು ಇನ್ಯಾವುದಕ್ಕೋ ಕೊಡಲೂ ಇವರು ಹಿಂದೆ-ಮುಂದೆ ನೋಡುವುದಿಲ್ಲ. ದೇಶದ ಯುವಜನತೆ ಯು ಅಲ್ಪಾವಧಿಯಲ್ಲಿ ದೇಶಸೇವೆ ಮಾಡಲು ರೂಪಿಸಿರುವ ‘ಅಗ್ನಿವೀರ’ ಯೋಜನೆಯನ್ನೇ ನಿಷೇಧಿಸುವುದಾಗಿ ಕಾಂಗ್ರೆಸ್ ನಾಯಕರು ಈಗಾಗಲೇ ಸ್ಪಷ್ಟವಾಗಿ ಹೇಳುವ ಮೂಲಕ ಸೈನ್ಯದಲ್ಲೂ ರಾಜಕೀಯವನ್ನು ತೂರಿಸಿದ್ದಾರೆ.
ಸುಮಾರು ೬ ಲಕ್ಷ ಕೋಟಿಯಷ್ಟಿರುವ ನಮ್ಮ ರಕ್ಷಣಾ ಬಜೆಟ್‌ನ ೧೦ ಪಟ್ಟು ಹಣವನ್ನು, ಕೇವಲ ಚುನಾವಣೆಯಲ್ಲಿ ಗೆಲ್ಲುವ ವಿಚಾರ ಇಟ್ಟುಕೊಂಡು ಗ್ಯಾರಂಟಿಗೆ ಘೋಷಿಸಿರುವುದನ್ನು ದೇಶದ ಯಾವ ಮಾಧ್ಯಮಗಳೂ, ತಥಾಕಥಿತ ಬುದ್ಧಿಜೀವಿಗಳೂ ಪ್ರಶ್ನಿಸದಿರುವುದು ಒಂದು ಆಘಾತಕಾರಿ ಬೆಳವಣಿಗೆ.
ಪಕ್ಕದ ಪುಟ್ಟ ರಾಷ್ಟ್ರ ಮಾಲ್ಡೀವ್ಸ್ ಎದುರಿಸಿದ ಮತ್ತು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ನಿಮ್ಮ ಗಮನಕ್ಕೆ ಬಂದಿರಲೂಬಹುದು. ಕೇವಲ ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವ ದೇಶವದು. ಆದರೆ ಅಪ್ರಬುದ್ಧ ರಾಜಕಾರಣಿಗಳ ಅವಿವೇಕದ ನಡೆಯಿಂದಾಗಿ ಆ ಇಡೀ ದೇಶದ ಆರ್ಥಿಕತೆಯೇ
ಕುಸಿದುಬಿತ್ತು. ತಡವಾಗಿಯಾದರೂ ಅಲ್ಲಿನ ರಾಜಕಾರಣಿಗಳು ತಮ್ಮ ಅಹಂ ಅನ್ನು ಬದಿಗಿಟ್ಟು ಭಾರತೀಯರ ಹಾಗೂ ನಮ್ಮ ಪ್ರಧಾನಿಯವರ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದರು.
ವಿಶ್ವದ ಇತರೆ ರಾಷ್ಟ್ರಗಳ ಮುಂದೆ ಮಾಲ್ಡೀವ್ಸ್ ಸಾಲದ ಭಿಕ್ಷೆಗೆ ನಿಲ್ಲುವಂತಾಯಿತು. ಆರ್ಥಿಕತೆಯ ವಾಸ್ತವಾಂಶ ಹೀಗಿರುವಾಗ, ಚಿದಂಬರಂ, ರಾಜನ್ ಸೇರಿದಂತೆ ಬಹು ‘ದೊಡ್ಡ’ ಆರ್ಥಿಕ ‘ತಜ್ಞ’ರನ್ನು ಹೊಂದಿರುವ ಒಂದು ಹಳೆಯ ರಾಜಕೀಯ ಪಕ್ಷದ ದೂರದೃಷ್ಟಿಯು, ರಾಷ್ಟ್ರದ ಸುರಕ್ಷತೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಇಷ್ಟು ಕೆಳಮಟ್ಟಕ್ಕೆ ಕುಸಿದಿರುವುದು ಈ ಪಕ್ಷದ ನೈತಿಕ ಮತ್ತು ಬೌದ್ಧಿಕ ಅಧಃಪತನಕ್ಕೆ ಸಾಕ್ಷಿ. ಪ್ರತಿಷ್ಠಿತ ಆಕ್ಸ್ ಫರ್ಡ್ ಯೂನಿಯನ್ ಸಂಸ್ಥೆಯು Iಟbಜಿ?o ಐbಜಿZ ಜಿo ಟ್ಞ ಠಿeಛಿ ಜಿಜeಠಿ mZಠಿe ಎಂಬ ವಿಷಯದ ಕುರಿತಾಗಿ ಹಲವು ಪ್ರಾಜ್ಞರ ಜತೆಗೆ ಒಂದು ಅಧಿಕೃತ ಸಂವಾದವನ್ನು ಏರ್ಪಡಿಸಿತ್ತು. ಇದರಲ್ಲಿ ಭಾರತದ ಊಜ್ಟಿoಠಿmಟoಠಿ ಎಂಬ ಸುದ್ಧಿಸಂಸ್ಥೆಯ ಸಂಸ್ಥಾಪಕಿ, ಖ್ಯಾತ ನಿರೂಪಕಿ ಪಲ್ಕಿ ಶರ್ಮಾ ಉಪಾ ಧ್ಯಾಯ್ ಕೂಡ ಭಾಗವಹಿಸಿದ್ದರು.
ಅ Uಟ್ಞbಛ್ಟ್ಛ್ಠ್ಝಿ ಎಜಿಞmoಛಿ ಟ್ಛ ಠ್ಟಿZoಟ್ಟಞZಠಿಜಿqಛಿ ಐಘೆಈಐಅ ಎಂಬ ವಿಷಯದ ಮೇಲೆ ನಡೆದ ಈ ಚರ್ಚೆಯು, ಮೋದಿಯವರು ಮಾಡಿದ
ಡಿಜಿಟಲ್ ಕ್ರಾಂತಿ, ಸಾರಿಗೆ, ರೈಲು ಮತ್ತು ಆರ್ಥಿಕತೆಯಲ್ಲಾದ ಬಹುದೊಡ್ಡ ಬೆಳವಣಿಗೆ/ಬದಲಾವಣೆಯ ಕುರಿತು ಸ್ಪಷ್ಟ ಮಾಹಿತಿಗಳನ್ನು ಹೊಮ್ಮಿಸಿತು. ಮಾತ್ರವಲ್ಲ, ಇಲ್ಲಿಯವರೆಗೆ ಮಾಡುತ್ತ ಬಂದಿದ್ದ ‘ಪ್ರಾಯೋಜಿತ ಪಿತೂರಿ’ಗಳನ್ನು ತೊಡೆದುಹಾಕುವಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ
ಸರಕಾರದ ವಾಸ್ತವವನ್ನು ತೆರೆದಿಡುವಲ್ಲಿ ಅದು ಸಫಲವಾಯಿತು. ಹೀಗೆ ದೇಶದ ವಿಚಾರ ಬಂದಾಗಲೆಲ್ಲಾ, ರಾಷ್ಟ್ರಪ್ರೇಮಿಗಳು ರಾಷ್ಟ್ರದ ಪರವಾಗಿ ನಿಲ್ಲಲು ತಮಗೆ ಸಿಗುವ ಯಾವ ಅವಕಾಶಗಳನ್ನೂ ಬಿಡಲಾರರು ಎಂಬುದು ಯಾವ ಕಾಲಕ್ಕೂ ಸಾಬೀತಾಗಿದೆ. ಇದನ್ನು ನಾವು ಮರೆಯಬಾರದು.
ಅಂದಿನ ಮಂಗಪಾಂಡೆಯಿಂದ ಮೊದಲ್ಗೊಂಡು ಇಂದಿನ ಯುವಕ- ಯುವತಿ ಯರವರೆಗೆ, ದೇಶದ ಏಕತೆಯ ವಿಚಾರಕ್ಕೆ ಧಕ್ಕೆ ಬಂದಾಗಲೆಲ್ಲಾ ಕಾಲಘಟ್ಟ ಮೀರಿ ಬೆಂಬಲಕ್ಕೆ ನಿಂತಿದ್ದಾರೆ. ಈ ಮಣ್ಣಿನ ಗುಣವೇ ಅಂಥದ್ದು. ಅಪಾಯದ ಮುನ್ಸೂಚನೆ ಬಂದಾಗಲೆಲ್ಲ ಪ್ರಖರ ನಾಯಕತ್ವಕ್ಕೆ, ಯುವ ಸಿಂಹ-ಸಿಂಹಿಣಿಯರಿಗೆ ಜನ್ಮನೀಡುತ್ತದೆ ನಮ್ಮ ಭವ್ಯಭಾರತ. ಎಲ್ಲರೂ ಚುನಾವಣೆಯಲ್ಲಿ ಗೆಲ್ಲುವ ಧಾವಂತಕ್ಕೆ ಬಿದ್ದು ಬಿಸಿಲಿನ ಬೇಗೆಯಲ್ಲೂ ಪ್ರಚಾರ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷದ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅದೇನೋ ವರಾತ ತೆಗೆದಿದ್ದಾರೆ; ಪ್ರಸ್ತುತ ರಾಹುಲ್ ಗಾಂಧಿಯವರ ಮಾರ್ಗದರ್ಶಕರಾಗಿರುವ ಅವರು ಅಮೆರಿಕದಲ್ಲಿದ್ದುಕೊಂಡೇ, ‘ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಐeಛ್ಟಿಜಿಠಿZಛಿ SZ ಅಠಿ ಜಾರಿಗೆ ತರಲಾಗುವುದು. ಈ ಕಾನೂನಿನ ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯ ಸ್ವಲ್ಪ ಭಾಗವು ಸರಕಾರಕ್ಕೆ ಸೇರತಕ್ಕದ್ದು.
ಇದನ್ನು ದೇಶದ ಹಿಂದುಳಿದ ವರ್ಗಕ್ಕೆ ಹಂಚಲಾಗುವುದು’ ಎಂಬ ಹೇಳಿಕೆ ನೀಡಿದರು. ಇದನ್ನು ರಾಹುಲ್ ಗಾಂಧಿಯವರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದರು. ಇದೇ ವಿಷಯ ಕುರಿತಾಗಿ ಪ್ರಧಾನಿ ಮೋದಿಯವರು, ‘ಕಾಂಗ್ರೆಸ್ ಪಕ್ಷವು ನೇರವಾಗಿ ಮಹಿಳೆಯರ ಮಂಗಳ ಸೂತ್ರಕ್ಕೆ ಕೈಹಾಕಿದೆ. ಆ ಮೂಲಕ, ಸ್ವಾಭಿಮಾನದಿಂದ ದುಡಿದು ಬದುಕುವ ಜನರ ಆಸ್ತಿಯನ್ನು ಕಬಳಿಸುವ ಹುನ್ನಾರದಲ್ಲಿದೆ. ದುಡಿದವರ ಆಸ್ತಿಯನ್ನು ಹೀಗೆ ಜನರಿಗೆ ಹಂಚುವ ಆಸಕ್ತಿಯಿದ್ದರೆ, ಇಂದಿರಾ ಗಾಂಧಿಯವರ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಯನ್ನು ದೇಶಕ್ಕೆ ಹಂಚುವ ಸಂದರ್ಭ
ಬಂದಾಗ, ರಾಜೀವ್ ಗಾಂಧಿಯವರು ಒಂದು ಕಾನೂನನ್ನೇ ಬದಲಾಯಿಸಿ ಎಲ್ಲ ಆಸ್ತಿಯನ್ನು ತಮ್ಮಲ್ಲಿಯೇ ಯಾಕೆ ಇಟ್ಟು ಕೊಂಡರು? ಈ ದೇಶದ ಕಾನೂನುಗಳು ಕೆಲವೇ ಮನೆಯವರ ತಾಳಕ್ಕೆ ತಕ್ಕಂತೆ ಕುಣಿಯುವುದಕ್ಕೆ ಈ ದೇಶವೇನು ಪ್ರೈವೇಟ್ ಪ್ರಾಪರ್ಟಿ ಆಗಿದೆಯಾ?’ ಎಂದು ತಮ್ಮ ಚುನಾವಣಾ ಭಾಷಣ ದಲ್ಲಿ ಕೇಳಿದರು.
ಈ ಒಂದು ಕಾನೂನನ್ನು ಉoಠಿZಠಿಛಿ ಈಠಿqs ಎಂದು ೧೯೫೩ರಲ್ಲಿ ಪರಿಚಯಿಸಲಾಗಿತ್ತು; ರಾಜೀವ್ ಗಾಂಧಿಯವರು ಅಧಿಕಾರಕ್ಕೆ ಬಂದ ಮೇಲೆ ೧೯೮೫ರಲ್ಲಿ ಇದನ್ನು ರದ್ದುಗೊಳಿಸಿದರು. ಭಾಷಣ ಮುಂದುವರಿಸಿದ ಮೋದಿಯವರು, “ಅಂದು ಮನಮೋಹನ್ ಸಿಂಗ್ ಅವರು, ‘ದೇಶದ ಸಂಪನ್ಮೂಲ ಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ’ ಎಂದರು. ಒಂದು ಸೆಕ್ಯುಲರ್ ದೇಶದ ಪ್ರಧಾನಿ ಹೀಗೆ ಮಾತನಾಡಬಹುದಾ?” ಎಂದು ಕೇಳಿದರು. “ಹಿಂದುಳಿದ ವರ್ಗಕ್ಕೆ ಮುಸ್ಲಿಮರನ್ನು ಸೇರಿಸುವ ಮೂಲಕ ಈ ಕಾಂಗ್ರೆಸ್ ಪಕ್ಷವು ಶ್ರಮಿಕರಿಗೆ, ಎಸ್‌ಸಿ/ ಎಸ್‌ಟಿ/ಒಬಿಸಿ ಸಮುದಾಯದವರಿಗೆ ದ್ರೋಹ ಬಗೆಯುತ್ತಿದೆ. ಸಂವಿಧಾನದ ವಿರುದ್ಧವಾಗಿ, ಹಿಂಬಾಗಿಲಿನ ಮೂಲಕ ಈ ಪ್ರಮಾದವೆಸಗುತ್ತಿದೆ. ಈ ಹಿಂದೆ, ತೆಲಂಗಾಣದಲ್ಲಿ ಈ ಕುರಿತು ‘ಪ್ರಾಯೋಗಿಕ ಪರೀಕ್ಷೆ’ ಕೂಡ ಮಾಡಿದೆ” ಎಂದರು.
ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಾದ ರಾಜಕೀಯ ಪಕ್ಷವೊಂದು ಹೀಗೆ ಜಾತ್ಯತೀತತೆಯ ಹೆಸರಿನಲ್ಲಿ ಜನಸಾಮಾನ್ಯರ ಅರಿವಿಗೆ ಬಾರದಂತೆ ಹತ್ತು ಹಲವು ಸೂಕ್ಷ್ಮ ವಿಚಾರಗಳನ್ನು ತಿದ್ದುಪಡಿ ಕೂಡ ಮಾಡಿದೆ. ಅವುಗಳಲ್ಲಿ, ಅಠಿಜ್ಚ್ಝಿಛಿ -೨೫, ೨೮, ೩೦(೧೯೫೦), ಏಇಉ ಅಠಿ (೧೯೫೧), ಏಇಆ ಅಠಿ (೧೯೫೬), ಖಛ್ಚ್ಠ್ಝಿZಜಿoಞ (೧೯೭೫), PuU ಅಠಿ (೧೯೯೧), Uಅಕಿಊ ಅಠಿ (೧೯೯೫), Zಞoಛಿಠ್ಠಿ ಊZhಛಿ ಅಜಿbZqಜಿಠಿ ಸೇರಿವೆ. ಜತೆಗೆ, ಹತ್ತು
ಹಲವು ಕಾನೂನು ಮತ್ತು ನಿಯಮಗಳನ್ನು ಬದಲಾಯಿಸಿ ಜಾರಿಗೆ ತಂದಿದೆ. ಇವುಗಳ ಕುರಿತೂ ಪರಾಮರ್ಶೆಯಾಗಬೇಕಿದೆ. ದೇಶದ ಆತ್ಮಗೌರವದ ಪ್ರತೀಕವಾದ ಶ್ರೀರಾಮ ದೇವರ ಮಂದಿರದ ಉದ್ಘಾಟನೆಗೆ ಒಂದು ರಾಷ್ಟ್ರೀಯ ಪಕ್ಷವಾಗಿ ಹೋಗದಿರುವುದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ
ಇತಿಹಾಸದ ಪುಟಗಳಲ್ಲಿ ಒಂದು ವೈರುಧ್ಯದ ಘಟನೆಯಾಗಿ ದಾಖಲಾಗಲಿದೆ.
ಹಾಗೆಯೇ, ವಾಸ್ತವಿಕತೆಯಿಂದ ಬಹಳ ದೂರವಿರುವ ಇಂದಿನ ಕಾಂಗ್ರೆಸ್ ನಾಯಕತ್ವವು ಅಸಮಂಜಸ ಘೋಷಣೆಗಳನ್ನು ಮಾಡುತ್ತಿದೆ. ದೇಶದ ಹಿತವನ್ನು ಕಾಯುವ ಬದಲಾಗಿ, ಮೋದಿಯವರನ್ನು ಸೋಲಿಸುವುದಕ್ಕೆ ಮಾತ್ರವೇ ಚುನಾವಣಾ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದೆ. ಇದರಿಂದಾಗಿ ಆ
ಪಕ್ಷವು ಜನಮನ ಗೆಲ್ಲುವುದು ಸಾಧ್ಯವಾಗುತ್ತಿಲ್ಲ. ಅನೇಕ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಒಟ್ಟಾರೆಯಾಗಿ ಗಮನಿಸಿದರೆ, ಪಕ್ಷವು ತನ್ನ ಭವಿಷ್ಯದ ಚಿಂತೆ ಬಿಟ್ಟು ಚರಮಗೀತೆಯ ರಚನೆಯತ್ತ ತೊಡಗಿಕೊಂಡಿದೆಯೇ? ಎನಿಸುತ್ತದೆ. ದೇಶದ ಹಿತವನ್ನು ಮತ್ತು ಸಮಗ್ರತೆಯನ್ನು
ಕಾಯುವ ಒಂದು ಸದೃಢ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳಲಿ ಎಂದು ನಾವೆಲ್ಲ ಬಯಸುತ್ತೇವೆ.
ಈ ಕುರಿತಾಗಿ ಆ ಪಕ್ಷದ ನಾಯಕರು ಚಿಂತನೆ ಮಾಡಬೇಕಿದೆ. ಹಾಗೆಯೇ, ಇಂದು ದೇಶದ ಪ್ರಜೆ ಎಚ್ಚೆತ್ತುಕೊಂಡಿದ್ದಾನೆ. ರಾಜಕೀಯ ವಿಚಾರದಲ್ಲಿ ಯಾವುದೇ ಪಕ್ಷವಾಗಲಿ ತುಂಬ ವರ್ಷಗಳ ಕಾಲ ವಂಚಿಸುತ್ತ, ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಮುಂದುವರಿಯಲಾಗದು. ಇಂಥ ಚಿತ್ತಸ್ಥಿತಿಯನ್ನು ಮತದಾರ ತಾಳ್ಮೆಯಿಂದಲೇ ಬದಲಾಯಿಸಿದ್ದಾನೆ. ಈಗೇನಿದ್ದರೂ ಅವನು, ‘ಅಭಿವೃದ್ಧಿಯ ವಿಚಾರವೇನು ಮತ್ತು ದೇಶಕ್ಕಾಗಿ ಮಾಡುವ ಕೆಲಸವೇನು?’ ಎಂಬುದನ್ನಷ್ಟೇ ಕೇಳುತ್ತಿದ್ದಾನೆ. ಇಂದಿನ ಯುವಜನರು ಜಾಗೃತ ನಾಗರಿಕರಾಗುತ್ತಿರುವುದು, ದೇಶದಲ್ಲಿ ಮಹತ್ತರ ಬದಲಾವಣೆಯಾಗುತ್ತಿರುವುದರ ಸಂಕೇತವಾಗಿದೆ.
ಚುನಾವಣೆ ಎಂಬುದು ಐದು ವರ್ಷಗಳಿಗೆ ಒಮ್ಮೆ ಮಾತ್ರ ಸಿಗುವ ಅಪರೂಪದ ಅವಕಾಶ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ನಾವೆಲ್ಲ ಪಾಲ್ಗೊಳ್ಳೋಣ. ನೀವುಗಳೆಲ್ಲ ತಪ್ಪದೇ ಮತದಾನ ಮಾಡುವುದರ ಜತೆಗೆ, ಶೇ.೧೦೦ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಇತರರನ್ನೂ ಪ್ರೇರೇಪಿಸಬೇಕು