Thursday, 12th December 2024

ಖಾಸಗಿ ಕಂಪನಿಗಳಿಗೆ ಮುಹೂರ್ತವಿಡುವ ಕಾಲ !

ಅಭಿವ್ಯಕ್ತಿ

ಅರುಣ್ ಕೋಟೆ

ಸದ್ಯದ ಆಧುನಿಕ ಜಗತ್ತಿನ ಮನುಷ್ಯರನ್ನು ನಿಯಂತ್ರಿಸುತ್ತಿರುವವರು ಯಾರು? ಧಾರ್ಮಿಕ ಶ್ರದ್ಧೆ ಇದ್ದವರು ದೇವರು  ಎನ್ನಬ ಹುದು, ಮತ್ತಷ್ಟು ಮಂದಿ ದೇಶದ ಪ್ರಜೆಯಾಗಿ ಸಂವಿಧಾನ ಮಾತ್ರ ನಮ್ಮನ್ನು ನಿಯಂತ್ರಿಸುತ್ತದೆ ಎಂದು ಒಂದೆರಡು ಸಾಲು ಓದಿಬಿಡಬಹುದು, ಇನ್ನು ಕೆಲವರು ರಾಜಕಾರಣಿಗಳ ಅಥವಾ ಅಧಿಕಾರಿಗಳ ಕಡಗೆ ಬೆರಳು ಮಾಡಿ ತೋರಿಸಬಹುದು, ಒಂದಷ್ಟು ಜನ ಬಂಡವಾಳಶಾಹಿಗಳು ನೀಡುವ ಸಂಬಳವೇ ನಮಗೆ ಸರ್ವಸ್ವ ಎನ್ನಬಹುದು.

ರೈತರು, ಕಾರ್ಮಿಕರು ಎನ್ನುವವರನ್ನೂ ಕಾಣಬಹುದು, ತಲೆಕೆಟ್ಟವನಾದರೆ ತನ್ನ ನೆಚ್ಚಿನ ಸಿನಿಮಾ ನಟನ ಹೆಸರನ್ನೂ ಹೇಳ ಬಹುದು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಆಯಾ ನೆಲದ ಧರ್ಮಗಳು ಮತ್ತು ದೇಶದ ಸಂವಿಧಾನ ಅಲ್ಲಿನ ಜನಜೀವನದ ಮೇಲೆ ಗಾಢವಾದ ಪರಿಣಾಮಗಳನ್ನು ಬೀರುತ್ತಿರುತ್ತವೆ. ಈಗ ಧರ್ಮ ಎಂದರೆ ಅಬ್ಬ ದೇವರೋ, ಗುರುವೋ ಅಥವಾ ಗ್ರಂಥವೋ ಇರಬೇಕು.

ಸಂವಿಧಾನವೆಂದರೆ ಅಂದು ವ್ಯವಸ್ಥೆ, ಸರಕಾರ, ಅಲ್ಲಿನ ನಾಯಕರುಗಳು, ಒಟ್ಟಾರೆಯಾಗಿ ಅದರ ಅಂಗಾಂಗ ಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಇತ್ತೀಚೆಗೆ ಸದ್ಗುರು ಜಗ್ಗಿ ವಾಸುದೇವ್ ರವರು ಬಹುರಾಷ್ಟ್ರೀಯ ಕಂಪನಿಗಳ ಭವಿಷ್ಯದ ಜಾಗತಿಕ ನಾಯಕ ರುಗಳು ಎಂದದ್ದನ್ನೂ ಇಲ್ಲಿ ಸೇರಿಸಿಕೊಳ್ಳಬಹುದು. ಅಂದರೆ ಇಲ್ಲಿ ಧರ್ಮ, ರಾಜಕೀಯ ನಾಯಕರು, ರಾತ್ರೋರಾತ್ರಿ ಹೊಸ ಬಗೆಯ ಉದ್ಯೋಗ ಸೃಷ್ಟಿಸುವ ಕ್ರಾಂತಿಕಾರಿ Business Model ಗಳನ್ನು ಹುಟ್ಟಿಹಾಕುವ CEO ಗಳು ಜನರ ಏಳಿಗೆ ಬೀಳಿಗೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತಾರೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಜಗತ್ತಿನ ಬಹುಪಾಲು ಜನ ಮಾನಸಿಕ ಸ್ವಾಸ್ಥ್ಯ ಹಿಡಿದು ಊಟ, ವಸತಿಯಂಥ ಎ ಬಗೆಯ ಮೂಲಭೂತ ಸೌಕರ್ಯಗಳಿಗೂ ಈಗಾಗಲೇ ನಾವು ಗುರುತು ಹಾಕಿಕೊಂಡಿರುವ ಮೂರು ಶಕ್ತಿಗಳನ್ನು ಅವಲಂಬಿಸುತ್ತಿದ್ದಾನೆ. ಈ ಜಗತ್ತು ತೀರಾ ಬದಲಾದದ್ದು ಕಳೆದ ಒಂದೂವರೆ ದಶಕದ ಎನ್ನಬಹುದೇನೋ? ಹೌದು, ಜಾಗತೀಕರಣ ಹಾಗೂ ತಂತ್ರಜ್ಞಾನದ ಫಲವನ್ನು ಜನಸಾಮಾನ್ಯರು
ವಾಕರಿಕೆ ಬರುವ ಹಾಗೆ ಅನುಭವಿಸಿದ್ದು ಈ ಕಾಲದಲ್ಲಿಯೇ, ಕೇವಲ ಒಂದು ಫೋನ್ ನಂಬರ್, ಮೇಲ್ ಐಡಿ ನೀಡುವುದರ ಮುಖೇನ ಒಬ್ಬ ಮನುಷ್ಯ ವರ್ಚ್ಯುವಲ್ ಜಗತ್ತನ್ನು ಪ್ರವೇಶಿಸಲು ಸಾಧ್ಯವಾದದ್ದೇ ಬಂದದ್ದು, ವೆಬ್ ಲೋಕದಲ್ಲಿ ವೀಡಿಯೊ ಶೇರಿಂಗ್, ಸಂದೇಶಗಳ ರವಾನೆ, ಸಾಮಾಜಿಕ ಜಾಲತಾಣ ಹೀಗೆ ಅನೇಕ ವೇದಿಕೆಗಳಲ್ಲಿ ತನ್ನ ಸೂಕ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದೇ; ಮನುಕುಲದ ಬದುಕುವ ವಿಧಾನದಲ್ಲಿ ಅಸಾಮಾನ್ಯ ಬದಲಾವಣೆಯಾಯಿತು.

ಏನನ್ನೂ ಪ್ರಮಾಣ ಮಾಡದೆ ಆಧುನಿಕ ಮನುಷ್ಯನನ್ನು ಸುಲಭವಾಗಿ ವಶಪಡಿಸಿಕೊಂಡ ನಾಲ್ಕನೆಯ ಶಕ್ತಿಯೇ ಈ ವರ್ಚ್ಯು ಯಲ್ ಜಗತ್ತು ಅಂದ್ರೆ ಅವುಗಳ ಒಡೆತನದ ಖಾಸಗಿ ಕಂಪನಿಗಳು. ಈ ಶತಮಾನದ ಆರಂಭದಿಂದಲೇ ವರ್ಚ್ಯುಯಲ್ ಜಗತ್ತು ಮನುಷ್ಯನಲ್ಲಿ ಕೃತಕವಾದ ಹಸಿವೊಂದನ್ನು ಬಿತ್ತಿ ಬೆಳೆದು ಇಂಗಿಸುವ ನಾಟಕವನ್ನು ಆಡುತ್ತಲೇ ಇದೆ. ಮುಖ್ಯವಾಗಿ ಹರೆಯದ ಸಹಜ ಆಕರ್ಷಣೆಗೆ, ಸಾಂಗತ್ಯಕ್ಕೆ, ಸಪಗಳಿಗೆ, ಹಲವು ಬಯಕೆಗಳಿಗೆ ತೋರಿಕೆಯ ಫ್ಯಾಷನ್ನಿಗೆ ಈ ವರ್ಚ್ಯುವಲ್ ದುನಿಯಾ ಆಕರ್ಷಕ ಖಾಸಗೀಮಯ ತಂತ್ರಜ್ಞಾನದ ತಂತ್ರಾಂಶದ ವಿನ್ಯಾಸಗಳನ್ನು ಹೊಂದಿದೆ.

ಕೋಟ್ಯಂತರ ಹದಿ ಹರೆಯದ ಮನಸ್ಸುಗಳು ಇಲ್ಲಿ ಸದಸ್ಯರಾಗುವ ಮುಖಾಂತರ ನವಜಾತ ಶಿಶುವಿನಂತೆ ಪ್ರತಿಕ್ಷಣ ಕಣ್ಣು ಬಿಡುತ್ತಲೇ ಇದ್ದಾರೆ. ಇನ್ನು ಮನುಷ್ಯನ ಮತ್ತೊಂದು ಆಸಕ್ತಿಯಾದ ಜಾತಿ, ಧರ್ಮ, ರಾಜಕಾರಣದ ಸರಕು ಇಲ್ಲಿ ಪ್ರವಾಹವಾಗಿ ಹರಿಯುತ್ತಿರುತ್ತದೆ. ಕಾಲಕ್ರಮೇಣ ಸದಸ್ಯನಾದವನಿಗೆ ಹರೆಯದ ಆಕರ್ಷಣೆಗಳು ತಗ್ಗಿ ರಾಜಕೀಯ ಪ್ರಜ್ಞೆಯ ಹೊಸ ಸೆಳೆತಗಳಿಗೆ ಮನಸ್ಸನ್ನು ಒಡ್ಡಿಕೊಳ್ಳುತ್ತಾನೆ. ವರ್ಚ್ಯುವಲ್ ಜಗತ್ತಿನ ತನ್ನ ಬದುಕು ಹೀಗೆ ತನ್ನ ಆಯಸ್ಸು ಮುಗಿಯುವ ತನಕ ಮುಂದು ವರಿಯುತ್ತದೆ.

ಹಾಗಾದರೆ ಜನಸಾಮಾನ್ಯನಿಗೆ ಇಲ್ಲಿ ತನ್ನ ಸಾಂವಿಧಾನಿಕ ಸ್ವಾತಂತ್ರ್ಯದ ಹಕ್ಕು ಚಲಾಯಿಸಲು ಸಲೀಸಾಯಿತಲ್ಲವೇ? ತನ್ನ ಯಾವುದೇ ಅಭಿವ್ಯಕ್ತಿಗೆ ಈ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾದವಲ್ಲವೇ? ಇಂತಹ ಸವಕಲು ಆಲೋಚನೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸುವುದೇ ಇಂದು ಜಟಿಲವಾಗಿರುವುದು. ನಾವು ಅರ್ಥ ಮಾಡಿಕೊಳ್ಳಬೇಕಾದ್ದು ಇಷ್ಟು, ಈ ವರ್ಚ್ಯುವಲ್ ಜಗತ್ತು ಒಂದು ನಿರ್ಜೀವ ವೇದಿಕೆಯಲ್ಲ ಎನ್ನುವುದು. ಇದು ನಮ್ಮ ವರ್ತನೆ ಹಾಗೂ ಸ್ಥಳದ ಆಧಾರದ ಮೇಲೆ ನಮ್ಮನ್ನು ಪ್ರಚೋದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತದೆ.

ನಮ್ಮ rhythm ಗಳಿಗೆ ಸಂವಾದಿಯಾಗಿ Algorithm ಗಳನ್ನು ರಚಿಸಿ ತೆರೆಯ ಹಿಂದೆ ಕೂತ ಚಾಣಾಕ್ಷರು ನಮ್ಮನ್ನು ಆಡಿಸುತ್ತಾರೆ. ಎಚ್ಚರವಿರಲಿ ವರ್ಚುಯಲ್ ಜಗತ್ತಿನಲ್ಲಿ ನಿಮ್ಮನ್ನು ಗಮನಿಸಲಾಗುತ್ತಿದೆ! ನೀವು ಇಲ್ಲಿ ನೀವೆಂದುಕೊಂಡಷ್ಟು ಸ್ವಾತಂತ್ರ್ಯರಲ್ಲ. ನಿಮ್ಮ ವರ್ತನೆಗಳನ್ನು ಅನುಸರಿಸಿಯೇ ನಿಮ್ಮನ್ನು ಆ ದಿಕ್ಕಿನೆಡೆಗೆ ಹೆಚ್ಚು ನಿರ್ದಿಷ್ಟರನ್ನಾಗಿಯೂ, ಸಂಕುಚಿತರನ್ನಾಗಿಯೂ,
ಬದ್ಧರನ್ನಾಗಿಯೂ ತಯಾರು ಮಾಡಲಾಗುತ್ತದೆ. ನೀವು Algorithm ಗಳ ಲೆಕ್ಕಾಚಾರಕ್ಕೆ ಕರಾರುವಕ್ಕಾದ ಸ್ಪಂದನೆಯನ್ನು ನೀಡುವ predictable model ಆಗಿರುವಿರಾದರೆ ಅಲ್ಲಿಗೆ Super intelligent ಮನುಷ್ಯ ಈ Artificial intelligence ತಾಳಕ್ಕೆ ಕುಣಿಯುತ್ತಿರುವ ಆಧುನಿಕ ಮುಟ್ಟಾಳನಾದದ್ದು ಖಚಿತವಾಗುತ್ತದೆ.

ಇದು ಮನುಷ್ಯ ತಾನು ಸೃಷ್ಟಿಸಿಕೊಂಡ ತೆವಲಿನ ಜಗತ್ತು. ಸಾಮಾಜಿಕ ಜಾಲತಾಣವಾದ Facebook ಗೋಡೆಯ ಮುಂದೆ ಇಂದು ಚೀನಾದ ಗೋಡೆ ಯಾವ ಮಹಾ ಎನ್ನುವಂತಾಗಿದೆ. ಇದೊಂದು ಅಪ್ರತಿಮ ಗೋಡೆ! ತಂತ್ರಜ್ಞಾನ ಈ ಅಗಮ್ಯ ಗೋಡೆಯನ್ನು ನಮ್ಮ ಕರಸ್ಥಲದಲ್ಲಿ ಚುಳುಕಾಗಿಸಿ ಕೊಟ್ಟಿದೆ. ಸದ್ಯದ ಜಗತ್ತಿನ ಮಹಾನ್ ಜನಪ್ರತಿನಿಧಿಗಳ ಹೆಸರು ಪಟ್ಟಿ ಮಾಡಿದರೆ Trump, ಮೋದಿ, Putin ಹೆಸರುಗಳು ಹೇಳಿ ಸುಮ್ಮನಾದರೆ ಮುಗಿದಂತಾಗುವುದಿಲ್ಲ.

ಅಪರೋಕ್ಷವಾದ ಜಾಗತಿಕ ನಾಯಕರುಗಳ ಸಾಲಿಗೆ ಇಂದು Mark Zuckerberg (Facebook, Instagram, Whatsapp), Jack Dorsey (Twitter) ಗಳಂತಹ ಖಾಸಗಿ ಕಂಪನಿಗಳ CEO ಗಳು ಬಂದು ನಿಂತಿರುವುದು ಸತ್ಯ. ಇವರ ಬಳಿ ವಿಶ್ವದ ಮೂಲೆ ಮೂಲೆಯ ಬಿಲಿಯಾಂತರ ಜನರ Behavioural Secrete Data ಇದೆ. ಮಾಹಿತಿ ಕುತಂತ್ರಜ್ಞಾನದ ಅಮೂಲ್ಯ ಸರಕೇ ಮರೆಯಲ್ಲಿ
ಕೂತು ಜನರ ಅಂಡು ಜಿಗುಟಿ ದಕ್ಕಿಸಿಕೊಂಡ ದತ್ತಾಂಶ. ಅಮೆರಿಕಾ, ರಷ್ಯಾ, ಭಾರತದಂಥ ಬೃಹತ್ ದೇಶಗಳ ಚುನಾವಣೆಗಳ ಮೇಲೆ ಈ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತವೆಯಾದರೆ ಆ ಕಂಪನಿಗಳ ತಾಕತ್ತು ಯಾವ ಮಟ್ಟದ್ದಿರಬೇಡ.

ಪ್ರಜಾಪ್ರಭುತ್ವದ ಕತೆ ಏನಾಗಬೇಡ? ಇಷ್ಟು ಲೀಲಾಜಾಲವಾಗಿ ಜಗತ್ತಿನೆಡೆ ಪಸರಿಸಿಕೊಂಡಿರುವ ಈ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕಾಗಿ ಸಾಕಷ್ಟು ಚಿಂತನೆಗಳು ಸರಕಾರದ ವತಿಯಿಂದ ನಡೆಯುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ
Platform ಗಳನ್ನು ಹೇಗೆ ಧನಾತ್ಮಕವಾಗಿ ಬಳಸಿಕೊಳ್ಳಬೇಕು, ಜನರಿಗೆ ಅನುಕೂಲವಾಗುವಂತಹ ಯೋಜನೆಯ ಮಾಹಿತಿಯನ್ನು ಹೇಗೆ ತಲುಪಿಸಬೇಕೆಂದೆ Guidelines ಮಾಡಿಕೊಂಡು ಆ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆಯೂ ಕೆಲಸ ಮಾಡುತ್ತಿದ್ದವು.

೨೦೨೦ ಎ ವರುಷಗಳ ಹಾಗಲ್ಲವಲ್ಲ. ಕರೋನಾ ಕಾಲದಲ್ಲಿ ಆ ವೈರಸ್‌ಗಿಂತ ವೇಗವಾಗಿ ಹರಡುತ್ತಿದ್ದದು ಏನೆಂದರೆ ವೈರಸ್ ಕುರಿತಾದ ಸುಳ್ಳು ಸುದ್ದಿಗಳು. ರೋಗಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ನಿಯಂತ್ರಿಸುವುದೇ
ಸರಕಾರಗಳಿಗೆ ದೊಡ್ಡ ಸವಾಲಾಯಿತು. ನಮ್ಮ ದೇಶದ ಸರಕಾರವಂತೂ ಜನಸಾಮಾನ್ಯರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹದ್ದುಮೀರಿ ಬಳಸುವ ಈ ಸಾಮಾಜಿಕ ಜಾಲತಾಣವನ್ನು ನಿಯಂತ್ರಿಸಲು ಇನ್ನಷ್ಟು ಮೀನಾಮೇಷ ಎಣಿಸುತ್ತಿದೆ. ಈಗಲೂ ಸಣ್ಣ ಪುಟ್ಟ ಷಯಗಳನ್ನು ಕಂಡೋರ ವೇದಿಕೆಯಲ್ಲಿ ಎಷ್ಟು ರಂಜನೀಯವಾಗಿ ಪ್ರೊಮೋಟ್ ಮಾಡಬಹುದು ಎಂಬುದೇ ಅವರ ಚಿಂತೆ.

ಇವರ ಓಬಿರಾಯನಕಾಲದ ಇಲಾಖೆಯ ವೆಬ್ ಸೈಟುಗಳನ್ನು ಯಾರು ತಾನೇ ತೆಗೆದು ನೋಡುತ್ತಾರೆ. ಸಮಾಧಾನದ ಸಂಗತಿ ಯೆಂದರೆ ಇತ್ತೀಚೆಗೆ ಚೀನಾದ ಒಂದಷ್ಟು App ಗಳನ್ನು ಧಿಡೀರನೆ ನಿಷೇದಿಸಿದ್ದು. ಇದು ಚೀನಾ ಗಡಿಯಲ್ಲಿ ಮಾಡಿದ ಕ್ಯಾತೆಗೆ ಸರಿಯಾಗಿ ಕೊಟ್ಟ ಒಳ ಹೊಡೆತ ಎನ್ನಬಹುದು. ಇನ್ನು ಮೇಲಾದರೂ ಯಾವ್ಯಾವುದೋ ದೇಶದ ಖಾಸಗಿ ಕಂಪನಿಗಳ ಒಡೆತನ ದಲ್ಲಿರುವ ಈ ವರ್ಚುಯಲ್ ಜಗತ್ತಿಗೆ ಮೂಗುದಾರ ಇಡಲೇ ಬೇಕು. Whatsapp ಹಾಗೂ facebook  ಬದಲಿಗೆ ಸರಕಾರವೇ ನಿಯಂತ್ರಿಸುವ ದೇಶದ ಮೆಸೆಂಜರ್, ದೇಶದ ಸಾಮಾಜಿಕ ಜಾಲತಾಣ ಹುಟ್ಟಿಕೊಳ್ಳಬೇಕಿದೆ.

ಆಯಾ ದೇಶದ ಸಾಮಾಜಿಕ ಜಾಲತಾಣವನ್ನು ಆಯಾ ದೇಶದ ಸರಕಾರಗಳೇ ವಿನ್ಯಾಸಮಾಡಿ ನಿಯಂತ್ರಿಸುವ ದಿನಗಳು ಸನಿಹ ವಿರುವಲ್ಲಿ ಸಂಶಯವೇ ಬೇಡ. ಅಮೆರಿಕ ಅಧ್ಯಕ್ಷಿಯ ಚುನಾವಣೆಯಂತಲೋ, ಫೇಸ್ಬುಕ್ಕಿನ ಹಾವಳಿಯನ್ನು ತಗ್ಗಿಸಲೊ ಅಥವಾ ಜನರಿಗೆ ಸತ್ಯವನ್ನು ಈಗಲಾದರೂ ಹೇಳಿಬಿಡಬೇಕು ಎನ್ನುವ ನೈತಿಕ ಇಚ್ಛೆಯಿಂದಲೋ, Mark Zukerberg ಮೇಲಿನ ಹೊಟ್ಟೆ ಉರಿಯಿಂದಲೋ Netflex ಒಂದಷ್ಟು ಜನ Twitter, Instagram, Google, Facebook, YouTube, Pinterest ಗಳ CEO ಆಸು ಪಾಸಿನ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ತಜ್ಞರನ್ನು ಕಲೆಹಾಕಿ Social dilemma ಎಂಬ ಸಾಕ್ಷ್ಯಚಿತ್ರವನ್ನು ಹೊರ ತಂದಿದೆ.

ಇಲ್ಲಿ ಬರಹಗಾರರು, ಸಾಮಾಜಿಕ ಹೋರಾಟಗಾರರು ಈ ವರ್ಚ್ಯುವಲ್ ಜಗತ್ತಿನ ಹುನ್ನಾರಗಳ ಬಗ್ಗೆ ವಿವರವಾಗಿ ಮಾತನಾಡಿ ದ್ದಾರೆ. ಅವರು ಹೇಳುವ ಕೆಲ ಚಿಂತನಾರ್ಹ ಹೇಳಿಕೆಗಳನ್ನು ಕೇಳಿದರೆ ಮನುಕುಲವು ಯಾವುದೋ ಮಹಾಸಂಚಿಗೆ ಬಲಿಯಾಗಿರ ಬಹುದೇ ಎನ್ನುವ ಗಾಬರಿಯನ್ನುಂಟು ಮಾಡದೆ ಇರದು. ಇಂದಷ್ಟು ಸ್ಯಾಂಪಲ್ ಇವೆ ನೋಡಿ. ಈ ಎರಡು ಉದ್ಯಮಗಳು ಮಾತ್ರ ತಮ್ಮ ಗ್ರಾಹಕರನ್ನು “USERS’ ಎಂದು ಕರೆಯುತ್ತಾರೆ. ಒಂದು ಕಾನೂನು ಬಾಹಿರ ಡ್ರಗ್ ದಂಧೆ ಮತ್ತೊಂದು Software ಕ್ಷೇತ್ರ. ಒಬ್ಬ Magicia ನಮ್ಮ ಆಲೋಚನೆಯ ಜಾಗೃತವಲ್ಲದ ಭಾಗವನ್ನು ಅರ್ಥಮಾಡಿಕೊಳ್ಳುವ ವಿದ್ಯೆಯನ್ನು ಕರಗತ ಮಾಡಿ ಕೊಂಡಿರುತ್ತಾನೆ. ಆಗಲೇ ಮಾಯೆ ಕೆಲಸ ಮಾಡುವುದು.

It’s a disinformation&for&profit business model. Facebook ಮನುಷ್ಯ ಹಿಂದೆಂದೂ ಕಂಡಿರದ ಪರಿಣಾಮಕಾರಿ ಸಾಧನ. ಸಮಸ್ಯೆ ಏನೆಂದರೆ ಅದು ತನ್ನ ಬಳಕೆದಾರರಲ್ಲಿ ಯಾವುದಾದರೂ ಒಂದು ನಂಬಿಕೆಯನ್ನು ಬಿತ್ತದೆ ಬಿಡುವುದಿಲ್ಲ. This is the tool of persuasion. If you are not paying for the product than you are the product. We have gone from the infor mation age into the disinformation age. ಸುಳ್ಳು ಸತ್ಯಕ್ಕಿಂತ 6 ಪಟ್ಟು ವೇಗವಾಗಿ ಹರಡುತ್ತದೆ. The truth is boring. ಸ್ವತಃ ಸತ್ಯ ಅಸತ್ಯವನ್ನು ಗುರುತಿಸಲಾಗದ ತಂತ್ರಜ್ಞಾನ, ಮನುಷ್ಯನ ಅಸ್ತಿತ್ವಕ್ಕೆ ಕಂಟಕವಾಗಿರುವ ಸಾಧ್ಯತೆ ಇದೆಯೇ? ಎನ್ನುವ ಪ್ರಶ್ನೆಗೆ ಆ ಜಾಣರು – ಮನುಷ್ಯನ ಅಸ್ತಿತ್ವಕ್ಕೆ ಕಂಟಕವಾಗಿರುವುದು ತಂತ್ರಜ್ಞಾನವಲ್ಲ, ಅದು ಬಹಿರಂಗ ಗೊಳಿಸಿರುವ ಮನುಷ್ಯನ ಆಂತರ್ಯದ ಕೊಳಕುತನ ಎಂದು ಹೇಳುತ್ತಾರೆ. ಮತ್ತೊಂದು ಕಾರಣ ಪ್ರಾಮಾಣಿಕ ನಾಯಕತ್ವದ ಕೊರತೆ ಎನ್ನುತ್ತಾರೆ.

ಒಟ್ಟಾರೆಯಾಗಿ ನಾವು ನಮ್ಮ ಪಂಚೇಂದ್ರಿಯಗಳ ಹಾಗೆ ಪಂಚಭೂತಭೂತಗಳ ಹಾಗೆ ನಮ್ಮ ಫೋನುಗಳಲ್ಲಿರುವ, ನಿರಂತರ  ವಾಗಿ ನಮ್ಮನ್ನು ಪ್ರಚೋದಿಸುವ ಹೆಚ್ಚು ಕಡಿಮೆ ಪಂಚ App ಗಳು ನಮ್ಮ ಮೇಲೆ ಬಲವಾದ ಹಿಡಿತವನ್ನೇ ಹೊಂದಿರುವಂತಾ ಯಿತಲ್ಲವೆ. ಭೌತಿಕ ಜಗತ್ತಿನಲ್ಲಿ ಮನುಷ್ಯ ಉನ್ನತವಾಗಿ ವಿಕಾಸವಾಗಿದ್ದರೂ ವರ್ಚ್ಯುಯಲ್ ಜಗತ್ತಿನಲ್ಲಿ ಇನ್ನೂ ಮಂಗನಂತೆಯೇ ವರ್ತಿಸುತ್ತಿದ್ದಾನೆ. ಅವನ ತಂತ್ರಜ್ಞಾನದ ಈ ದಾಸ್ಯ ಚರಿತ್ರೆಯ ಎಂದೆಂದಿನ ದಾಸ್ಯಗಳ ದಾಸ್ಯ ಎನಿಸುತ್ತದೆ. ಇನ್ನೂ ಈ ಕಳೆ ಯನ್ನು ಬೆಳೆಯಲು ಬಿಡಬೇಕೆ?