ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
‘ತಾನೂ ತಿನ್ನುವುದಿಲ್ಲ ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ’ ಎಂಬ ನೀತಿಯಿಂದಾಗಿ ಅನೇಕರಿಗೆ ದೇಶದಲ್ಲಿ ‘ಅಡ್ಜಸ್ಟ್ ಮೆಂಟ್- ಕಮಿಂಟ್‌ಮೆಂಟು’ ಅನುಕೂಲಗಳಾಗುತ್ತಿಲ್ಲ. ಹೀಗಾಗಿ ಮೋದಿಯವರು ಸೋತರೆ ಇಂಥವರೆಲ್ಲ ಬೆಳೆಯಲು ಅನುಕೂಲವಾಗುತ್ತದೆಂಬ ಆಶಾವಾದ!
ಕಳೆದ ವಾರ ನಮ್ಮ ದೇಶ, ಜಿಡಿಪಿಯ ಪ್ರಗತಿ ದರದಲ್ಲಿ ದಾಖಲೆ ಏರಿಕೆ ಸಾಧಿಸಿದೆ. ಅಮೆರಿಕ (%೨.೭) ಜರ್ಮನಿ(%೧.೯) ಜಪಾನ್(%೧.೧) ಫ್ರಾನ್ಸ್ (%೨.೬) ಬ್ರಿಟನ್(%೪.೧) ಚೀನಾ(%೩) ಬ್ರೆಜಿಲ(%೨.೯) ಇಂಡೋನೇಷ್ಯಾ(%೫.೩) ದೇಶಗಳನ್ನು ಹಿಂದಿಕ್ಕಿ ಭಾರತ (%೭.೨) ಆರ್ಥಿಕ ಪ್ರಗತಿ ಸಾಧಿಸಿ, ವೇಗದ ಪ್ರಗತಿಯಲ್ಲಿ ಜಗತ್ತಿನ ನಂಬರ್ ಒನ್ ದೇಶವೆನಿಸಿದೆ. ಒಂದು ದೇಶ ಆರ್ಥಿಕ ಪ್ರಗತಿ ಕಾಣದಿದ್ದರೆ ಅದು ಜಗತ್ತಿನ ಪಾಲಿಗೆ ಸೋಂಬೇರಿ ದೇಶವೆನಿಸುತ್ತದೆ.
ಮೂರು ವರ್ಷಗಳ ಅವಽಯಲ್ಲಿ ಇಡೀ ವಿಶ್ವಕ್ಕೇ ಕರೋನಾ ಅಪ್ಪಳಿಸಿದ ಮೇಲೆ ಅಮೆರಿಕ, ಬ್ರಿಟನ್ ನಂಥ ರಾಷ್ಟ್ರಗಳ ಆರ್ಥಿಕತೆಯೇ ಕುಸಿದು ಕುಳಿತು, ಮೇಲೇರಲಾರದೇ ಪ್ರಯಾಸದಲ್ಲಿವೆ. ಆದರೆ ೧೪೦ ಕೋಟಿ ಜನಸಂಖ್ಯೆಯ ಭಾರತ ಅಂಥ ಅಪಾಯಕಾರಿ ಸೋಂಕನ್ನು ಮತ್ತು ಆ ಸನ್ನಿವೇಶವನ್ನು ಜಾಣ್ಮೆ- ಪ್ರಬುದ್ಧತೆಯಿಂದ ಎದುರಿಸಿ ಕೇವಲ ಒಂಬತ್ತು ತಿಂಗಳ ಲಸಿಕೆ ಕಂಡುಹಿಡಿದು ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಿ ಸಂಭವಿಸಬಹು ದಾದ ದೊಡ್ಡ ವಿಪತ್ತನ್ನು ತಪ್ಪಿಸಿ ಅಭಿವೃದ್ಧಿಯಲ್ಲಿ ವೇಗ ಪಡೆದುಕೊಂಡಿದೆ.
ಇಂದು ವೇಗದ ಆರ್ಥಿಕ ಬೆಳವಣಿಗೆಯಲ್ಲಿ ಹಿರಿಮೆ ಸಾಧಿಸಿದೆ. ಕೃಷಿ, ಉತ್ಪಾದನೆ, ನಿರ್ಮಾಣ, ಸೇವಾ, ಗಣಿಗಾರಿಕೆ, ಇಂಧನ ಸೇರಿದಂತೆ ಅನೇಕ ವಲಯಗಳಲ್ಲಿ ಪ್ರಗತಿ ದಾಖಲಿಸಿ ಆರ್ಥಿಕತೆಗೆ ಭರ್ಜರಿ ಶಕ್ತಿತುಂಬಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ- ಸೆಪ್ಟೆಂಬರ್‌ನಲ್ಲಿ ಶೇ೬.೨, ಅಕ್ಟೋಬರ್-ಡಿಸೆಂಬನರ್ ಲ್ಲಿ ಶೇ೪.೫ ಪ್ರಗತಿ ದಾಖಲಾಗಿ ಒಟ್ಟಾರೆ ಇಡೀ ವರ್ಷದ ಆರ್ಥಿಕ ಪ್ರಗತಿ ದರ ಶೇ೭.೨ಕ್ಕೆ ಏರಿದೆ.
ಇದು ಸಾಮಾನ್ಯ ಸಾಧನೆಯಲ್ಲವೆಂಬುದಕ್ಕೆ ಮೇಲೆ ನೀಡಲಾದ ‘ದೊಡ್ಡದೇಶಗಳ’ ಪ್ರಗತಿಯ ಅಂಕಿ- ಅಂಶಗಳೇ ಸಾಕ್ಷಿ. ದೇಶದ ಆರ್ಥಿಕತೆ ೩.೩ ಲಕ್ಷ ಕೋಟಿ ರುಪಾಯಿಗಳಿಗೆ ತಲುಪಿದ್ದು ಇದೇ ಹಾದಿಯಲ್ಲಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ೫
ಲಕ್ಷ ಕೋಟಿ ಆರ್ಥಿಕತೆಯ ದೈತ್ಯ ದೇಶವಾಗುವುದು ಸ್ಪಷ್ಟ. ಅಷ್ಟಿಲ್ಲದೇ ಮೊನ್ನೆ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು ಮೋದಿಯವರನ್ನು ‘ದಿ ಬಾಸ್’ ಎಂದದ್ದಾಗಲಿ, ಪಪುವಾ ನ್ಯೂಗಿನಿ ದೇಶದ ಪ್ರಧಾನಿ ಜೇಮ್ಸ್ ಮರಾಪೆ, ಮೋದಿಯವರ ಕಾಲಿಗೆ ಬೀಳುವುದಾಗಲಿ, ಸಭಾಂಗಣದಲ್ಲಿ ‘ದೊಡ್ಡಣ್ಣ’ ಅಮೆರಿಕ ಅಧ್ಯಕ್ಷ ಜೋಬೈಡನ್ ಸ್ವತಃ ಮೋದಿಯವರ ಬಳಿಬಂದು ಅಭಿಮಾನಿ ಯಂತೆ ಕೈಕುಲುಕುವುದಾಗಲಿ ಸಾಮಾನ್ಯ ವಿಚಾರವಲ್ಲ.
ಅದು ಭಾರತಕ್ಕೆದಕ್ಕಿರುವ ‘ಗಂಡಸುತನ’. ಆದರೆ ಎಂಥ ಕರ್ಮ ನೋಡಿ ! ನಮ್ಮ ದೇಶ ಏನು ಸಾಧಿಸಿದರೇನು ಬಂತು
ಭಾಗ್ಯ? ಇಲ್ಲಿನವರೇ ‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಬಾಯಿಬಡಿದುಕೊಳ್ಳುತ್ತಾರೆ. ಅಮೆರಿಕದಲ್ಲಿ ನಿಂತು ಸ್ವದೇಶದ ಬಗ್ಗೆ ಶತ್ರು ದೇಶದ ಅನಾಗರಿಕರಂತೆ ಮಾತನಾಡುತ್ತಾರೆ. ಆದರೆ ಮೊನ್ನೆ ಅಮೆರಿಕದ ಶ್ವೇತಭವನದ ರಾಷ್ಟ್ರೀಯ
ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್‌ಕಿಬಿರ್ ‘ಭಾರತದಲ್ಲಿ ಪ್ರಜಾಪ್ರಭುತ್ವ ಆರೋಗ್ಯ ಕರವಾಗಿದೆ, ಅನುಮಾವಿದ್ದವರು ದೆಹಲಿಗೆ ಹೋಗಿ ಖುದ್ದು ತಿಳಿದು ಕೊಳ್ಳಬಹುದು’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾ ರಲ್ಲದೇ, ಮೋದಿಯವರನ್ನು ಅಮೆರಿಕ ಪ್ರವಾಸಕ್ಕೆ ಆಹ್ವಾನಿಸಿದ್ದಾರೆ.
ದೇಶದೆಡೆ ವಿಮಾನ ನಿಲ್ದಾಣಗಳು, ಅದ್ಭುತ ಸೇತುವೆಗಳು, ಅತ್ಯದ್ಭುತ ಸುರಂಗಮಾರ್ಗಗಳು, ಸುಸಜ್ಜಿತ ಹೆzರಿಗಳು, ಅತ್ಯಾಧುನಿಕ ರೈಲುಗಳಲ್ಲದೇ ‘ಬಯಲು ಬಹಿರ್ದೆಸೆ ಮುಕ್ತ’ ಹಳ್ಳಿಗಳನ್ನಾಗಿಸಿದ್ದು, ಶುದ್ಧಕುಡಿಯುವ ನೀರಿನ ‘ಜಲಮಿಷನ್’
ಹರಿಸಿದ್ದು, ಕಿಸಾನ್ ಸಮ್ಮಾನ್ ಮೂಲಕ ದೇಶದ ಬೆನ್ನೆಲುಬು ರೈತನಿಗೆ ನೆರವಾಗಿದ್ದು, ದೇಶಕ್ಕೆ ತಲೆಯಿಲ್ಲದಂತೆ ಮಾಡಿದ್ದ ೩೭೦ನೇ ವಿಧಿಯನ್ನು ಕಿತ್ತೆಸೆದದ್ದು, ಮುಸಲ್ಮಾನ ಹೆಣ್ಣುಮಕ್ಕಳಿಗೆ ಶಾಪವಾಗಿದ್ದ ತ್ರಿವಳಿ ತಲಾಖ್ ತೆಗೆದದ್ದು, ಪರದೇಶದಲ್ಲಿ
ಯಮಯಾತನೆ ಅನುಭವಿಸುತ್ತಿದ್ದ ಭಾರತೀಯರಿಗೆ ನೆಲೆ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯಿದೆ ತಂದದ್ದು, ಗುಜರಿ ಅಂಗಡಿ ಯವರೂ ಡಿಜಿಟಲ್ ಪೇಮೆಂಟ್ ಮಾಡುವಂತಾಗಿದ್ದು, ಬ್ಯಾಂಕುಗಳ ಪಾಲಿಗೆ ಅಸ್ಪೃಶ್ಯರಂತಿದ್ದ ಬಡವರು, ನಿರ್ಗತಿಕರನ್ನು ಜನ್‌ಧನ್ ಬ್ಯಾಂಕ್ ಖಾತೆದಾರರನ್ನಾಗಿಸಿದ್ದು, ಭಾರತೀಯರು ಈ ಜನ್ಮದಲ್ಲಿ ರಾಮಜನ್ಮಭೂಮಿಯಲ್ಲಿ ಮಂದಿರ ಕಾಣಲಸಾಧ್ಯವಾಗಿದ್ದಾಗ ನ್ಯಾಯ ಮಾರ್ಗದಲ್ಲಿ ಮಂದಿರ ನಿರ್ಮಾಣವಾಗಿದ್ದು, ಚಿಕ್ಕಪೇಟೆ ಗಲ್ಲಿಯಂತಿದ್ದ ವಾರಾಣಸಿ ದೇಗುಲವನ್ನು ವೈಭವಪೂರಿತವಾಗಿ ಅಭಿವೃದ್ಧಿಪಡಿಸಿದ್ದು…ಎಲ್ಲಕ್ಕಿಂತ ಮಿಗಿಲಾಗಿ ಯುದ್ಧ ಸಾಮರ್ಥ್ಯದಲ್ಲಿ ಸೇನಾ ಬಲದಲ್ಲಿ ಭಾರತ ಶ್ರೀಕೃಷ್ಣದೇವರಾಯನ ಸೈನ್ಯದಂಥ ಬಲಿಷ್ಠತೆ ಹೊಂದಿರುವುದು.
ಹೀಗೆ ಇಷ್ಟೆಲ್ಲ ಮಾಡಿದರೂ ಜನ ಕೇಳುವುದು ಮಾತ್ರ ‘ಇದರಿಂದೆಲ್ಲ ಹೊಟ್ಟೆ ತುಂಬುತ್ತಾ?!’. ಜನರ ವಿಷಯ ಬಿಡಿ, ಅವರನ್ನು ದಾರಿತಪ್ಪಿಸುವ ಕುತಂತ್ರಿ ರಾಜಕಾರಣಿಗಳೇ ‘ಜಿಡಿಪಿಯಿಂದ ಹೊಟ್ಟೆ ತುಂಬುತ್ತಾ?’ ಎಂದು ಮತದಾರರ ಮುಂದೆ
ಭಾಷಣ ಹೊಡೆದು ಅವರಿಗೆ ಬಿಟ್ಟಿ ಭಾಗ್ಯಗಳನ್ನು, ಹುಳಿದ್ರಾಕ್ಷಿಗಳಂಥ ಗೂಬೆ ಗ್ಯಾರೆಂಟಿಗಳನ್ನು ಕೃತಕವಾಗಿ ಕೊಟ್ಟು, ವೋಟುಗಳನ್ನು ಬಾಚಿಕೊಂಡು ಅಧಿಕಾರಕ್ಕೇರುವ ಅಪಾಯಕಾರಿ ಬೆಳವಣಿಗೆ ಆರಂಭಗೊಂಡಿದೆ.
ಹೀಗಾಗಿ ಜನ ಸಮಗ್ರವಾಗಿ ದೇಶವನ್ನು ನೋಡುವ ಮನಃಸ್ಥಿತಿಯನ್ನು ಕಳೆದುಕೊಂಡು ‘ಅಯ್ಯೋ ನಾನು, ನನ್ನ ಮನೆ ಉದ್ಧಾರವಾದರೆ ಸಾಕಪ್ಪ, ಬೇರೇದೆಲ್ಲ ಯಾವನಿಗೆ ಬೇಕು?’ ಎಂಬಷ್ಟಕ್ಕೆ ಸೀಮಿತವಾಗುತ್ತಿದ್ದಾನೆ. ಈಗ ನೋಡಿ ಕರ್ನಾಟಕ ದಲ್ಲಿ ಕಾಂಗ್ರೆಸ್ ತೋರಿಸಿದ ಗ್ಯಾರೆಂಟಿ ಮಂತ್ರದಂಡವನ್ನೇ ಎಲ್ಲ ಪಕ್ಷಗಳೂ ‘ಪೇಟೆಂಟ್’ ಪಡೆದುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೋರಿಸುತ್ತವೆ. ಆಗ ಶೇಖಡ ೭೦ ರಷ್ಟಿರುವ ಸಾಮಾನ್ಯ ಮತದಾರರು ಈ ದಂಡಕ್ಕೆ ಮರುಳಾಗಿಹೋದರೆ ಇನ್ನೆಲ್ಲಿ ಮೋದಿ? ಇನ್ನೆಲ್ಲಿ ಆತ್ಮನಿರ್ಭರ ಭಾರತ!? ಆನಂತರ ಆತ್ಮ ‘ಬರ್ಬರ’ ಭಾರತವಷ್ಟೇ!. ಅಸಾವುದ್ಧೀನ್ ಓವೈಸಿ ಅದನ್ನೇ ಹೇಳಿದ್ದು-‘ಮೋದಿ-ಯೋಗಿ ಇರುವವರೆಗೂ ಮಾತ್ರ ಅವರ ಹವಾ, ಅವರು ಹೋದ ಮೇಲೆ
ನಮ್ದೇ ಹವಾ’ ಎಂದು. ಮೋದಿ-ಯೋಗಿ ಸೋತರೆ ಅವರು ಹಿಮಾಲಯದ ತಪ್ಪಲಲ್ಲಿ ಕಳೆದುಹೋಗಬಹುದು.
ಆದರೆ ಇಂಥ ನಾಯಕರನ್ನು ದೇಶ ಕಳೆದುಕೊಂಡರೆ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಸ್ಥಿತಿ ಚಿಂತಾಜನಕ ಎಂಬುದು
ಅನುಭವಕ್ಕೆ ಬಂದಮೇಲೆಯೇ ಅರಿವಾಗುತ್ತದೆ. ಸತ್ಯವೇನೆಂದರೆ ದೇಶದ ಜಿಡಿಪಿ ೭.೨ಕ್ಕೆ ಏರಿದರೆ ನಮ್ಮ ಹಳ್ಳಿಯ ಜಗಲಿಯ ಮೇಲೆ ಕೂತು ಬೀಡಿ ಸೇದುವ ಬೋರೇಗೌಡನಿಗೇನು ಲಾಭ? ವಿಮಾನ ನಿಲ್ದಾಣಗಳು, ಟನ್ನಲ್‌ಗಳು, ಶಸ್ತ್ರಾಸ್ತ್ರಗಳು, ಸರ್ಜಿ
ಕಲ್‌ಸ್ಟ್ರೈಕ್, ಸ್ವಾವಲಂಬನೆ…ಹೀಗೆ ಇಂಥವು ಗಳಿಂದ ನಮ್ಮ ಶ್ರೀಸಾಮನ್ಯನಿಗೇನು ಲಾಭ? ಹೌದು, ಇಂಥ ಭಾವನೆ ಗಳಿಂದಾಗುವ ರಾಜಕೀಯ ಹೊಡೆತಗಳತ್ತ ಮೋದಿಯವರು ಮೊದಲು ಗಮನಹರಿಸಲೇ ಬೇಕಿದೆ. ಜಾಗತಿಕ ಮಟ್ಟದಲ್ಲಿ ಎಲ್ಲ
ದೇಶಗಳು ನಮ್ಮ ತಾಕತ್ತನ್ನು ಮನಗಂಡು ಗೌರವಿಸುವಂತೆ ದೇಶದ ಒಳಗಿರುವ ಕಟ್ಟಕಡೆಯ ಅಸಹಾಯಕ ಪ್ರಜೆಗಳ ಭಾವನೆಗಳನ್ನೂ ಮೋದಿ ಯವರು ಅರಿಯಬೇಕಿದೆ.
ನಮ್ಮ ದೇಶದ ಜನ ವೋಲ್ವೋ ಬಸ್ಸಿನ ಓಡಾಡವಷ್ಟು ಶ್ರೀಮಂತರಾಗಿಲ್ಲ. ಅವರ ಮುಂದೆ ಉಚಿತ ಪ್ರಯಾಣವೆಂದು
ಟ್ರಾಕ್ಟರ್-ಲಾರಿ ನಿಲ್ಲಿಸಿದರೂ ಅದು -ಲ್ ಆಗುತ್ತದೆ. ಹೀಗಿರುವಾಗ ಬಿಟ್ಟಿ ಭರವಸೆ, ತುಟ್ಟಿ ಗ್ಯಾರೆಂಟಿಗಳ ಮುಂದೆ ಜನಗಳಿಗೆ ದೇಶ ಗಳಿಸುವ ಕೀರ್ತಿ, ಪ್ರಗತಿ, ದೇಶಾಭಿಮಾನ, ರಾಷ್ಟ್ರೀಯತೆ ಇವುಗಳೆಲ್ಲ ಒಂದು ಸಿನಿಮಾದಂತೆ ಕಾಣುತ್ತದೆಯೇ
ಹೊರತು ಮತಗಟ್ಟೆಗೆ ಬಂದಾಗ ಪರಿಗಣಿಸುವುದು ಪೆಟ್ರೋಲ್, ವಿದ್ಯುತ್, ಎಣ್ಣೆ, ಕಾಳು, ಅಕ್ಕಿ, ಹಾಲ, ದಿನಸಿ ಪದಾರ್ಥಗಳ ಮೌಲ್ಯಗಳನ್ನು ಮಾತ್ರ.
ಹತ್ತು ವರ್ಷಗಳ ಹಿಂದೆ ತಿಂಗಳಿಗೆ ಹತ್ತು ಸಾವಿರ ಸಂಪಾದಿಸುತ್ತಿದ್ದವರು ಇಂದು ಮೂವತ್ತು ಸಾವಿರ ಸಂಪಾದಿಸುತ್ತಿದ್ದೇವೆ ಎಂಬುದನ್ನು ಜನ ಲೆಕ್ಕಹಾಕಿಕೊಳ್ಳುವುದಿಲ್ಲ. ಆದರೆ, ಹತ್ತು ವರ್ಷಗಳ ಹಿಂದೆ ೪೦೦ ರುಪಾಯಿ ಇದ್ದ ಸಿಲಿಂಡರ್ ಇಂದು ೧೨೦೦ ಆಗಿರುವುದನ್ನು ಸಹಿಸಿಕೊಳ್ಳುವುದಿಲ್ಲ. ಇಂಥ ಅವೈಜ್ಞಾನಿಕ ತುಲನೆಗಳನ್ನೇ ಅಧಿಕಾರ ರಹಿತ ರಾಜಕೀಯ ಪಕ್ಷಗಳು ಬ್ರಹ್ಮಾಸ್ತ್ರದಂತೆ ಬಳಸಿಕೊಂಡು ಜನರನ್ನು ‘ಆರ್ಥಿಕ ಮೌಢ್ಯದೊಳಗೆ’ ದಬ್ಬುತ್ತಿದ್ದಾರೆ.
ವಾಜಪೇಯಿಯವರೂ ಐದುವರ್ಷಗಳ ಕಾಲ ದೇಶವನ್ನು ಮುನ್ನಡೆಸಿ ಅನೇಕ ಯೋಜನೆಗಳ ಮೂಲಕ ದೇಶದ ಹೊರಗೂ ಒಳಗೂ ಹೆಮ್ಮೆಯ ಆಡಳಿತವನ್ನೇ ನೀಡಿದರು. ಕಾರ್ಗಿಲ್ ಯುದ್ಧವನ್ನು ಗೆದ್ದು ಸ್ವಾಭಿಮಾನ ಮೆರೆಸಿದರು. ಅಂಥ ಪ್ರಧಾನ
ಮಂತ್ರಿಗೇ ಜನ ಮತ್ತೊಂದು ಅವಧಿಗೆ ಅವಕಾಶವನ್ನು ನೀಡಲಿಲ್ಲ. ಹೀಗಾಗಿ ನಮ್ಮ ದೇಶ ‘ದಿ ಬಾಸ್’ ಭಾರತವಾಗೇ ಮುಂದುವರಿಯಬೇಕಾದರೆ ಮೋದಿ ಯಂಥವರೇ ಮುನ್ನಡೆಸಬೇಕು. ಅದಕ್ಕಾಗಿ ಮೊದಲಿಗೆ ಜನಸಾಮಾನ್ಯನ ಮನಸನ್ನು ಮೊದಲು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು.
ಬಾಲ್ಯದಲ್ಲಿ ಮಕ್ಕಳಿಗೆ ನಮ್ಮ ಮನೆತನ ಅಂದರೆ ಏನು, ನಮ್ಮಪ್ಪನನ್ನು ಆಫೀಸಿನಲ್ಲಿ ಸಮಾಜದಲ್ಲಿ ಹೇಗೆಲ್ಲ ಹೊಗಳುತ್ತಾರೆ ಎಂಬುದು ಬೇಕಿರುವುದಿಲ್ಲ. ಆದರೆ ನಮ್ಮಪ್ಪ ಸಂಜೆ ಮನೆಗೆ ಬರುವಾಗ ಏನು ತಿಂಡಿ ತರ್ತಾರೆ, ಏನೇನು ಕೊಡಿಸುತ್ತಾರೆ ಎಂಬುದನ್ನಷ್ಟೇ ಕಾತರದಿಂದ ನಿರೀಕ್ಷಿಸುತ್ತಾರೆ. ಹಾಗೆಯೇ ನಮ್ಮ ಗ್ರಾಮೀಣ ಭಾಗದ ಮುಗ್ಧ ಜನಗಳಾಗಲಿ ಅನಕ್ಷರಸ್ಥ ಸಾಮಾನ್ಯ ಪ್ರಜೆಗಳಾಗಲಿ ಮೊದಲು ಕೇಳುವುದೇ ಅಕ್ಕಿ, ಹಾಲು, ವಿದ್ಯುತ್, ಪೆಟ್ರೋಲ್, ಸಿಲಿಂಡರ್ ಮಾತ್ರ. ಕೆಲ ತಿಳಿವಳಿಕೆ ಇಲ್ಲದವರಂತೂ ‘ಮೋದಿಗೆ ಹೆಂಡ್ರು-ಮಕ್ಳಿಲ್ಲ, ಸಂಸಾರವಿಲ್ಲ. ಅವರಿಗೇನು ಗೊತ್ತಾಗುತ್ತೆ ನಮ್ಮ ಕಷ್ಟ?’ ಎಂದು ಪ್ರಶ್ನಿಸುತ್ತಾರೆ.
ಒಂದು ಮೂಲದಿಂದ ಕೇಳಿಬರುತ್ತಿರುವ ಆಘಾತಕಾರಿ ಸುದ್ದಿಯೆಂದರೆ ಅನೇಕರು ಈ ಬಾರಿ ಮೋದಿ ಯವರ ಸೋಲನ್ನು ಪಕ್ಷಾತೀತವಾಗಿ ಬಯಸುತ್ತಿದ್ದಾರೆ ಎಂಬುದು.
ಮೋದಿಯವರ ‘ತಾನೂ ತಿನ್ನುವುದಿಲ್ಲ ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ’ ಎಂಬ ನೀತಿಯಿಂದಾಗಿ ಅನೇಕರಿಗೆ ದೇಶದಲ್ಲಿ ‘ಅಡ್ಜಸ್ಟ್‌ಮೆಂಟ್-ಕಮಿಂಟ್‌ಮೆಂಟು’ ಅನುಕೂಲ ಗಳಾಗುತ್ತಿಲ್ಲ. ಹೀಗಾಗಿ ಮೋದಿಯವರು ಸೋತರೆ ಇಂಥವರೆಲ್ಲ ಬೆಳೆಯಲು ಅನುಕೂಲವಾಗುತ್ತದೆಂಬ ಆಶಾವಾದ! ಹೀಗಾಗಿ ‘ಕಾಂಗ್ರೆಸ್ ಸರಕಾರವಿದ್ದಾಗ ಜನರ ಕೈಯಲ್ಲಿ ದುಡ್ಡು ಹರಿದಾಡುತ್ತಿದ್ದವು. ಬಿಜೆಪಿ ಸರಕಾರ ಬಂದಮೇಲೆ ಜನರ ಬಳಿ ದುಡ್ಡೇ ಇರುತ್ತಿಲ್ಲ’ ಎಂಬ ಮೂರ್ಖತನದ ಅಭಿಪ್ರಾಯ ಅನೇಕರಲ್ಲಿದೆ. ಇನ್ನು ಪ್ರತಿಪಕ್ಷಗಳ ಮನಃಸ್ಥಿತಿಗಳನ್ನು ಗಮನಿಸಿದರೆ ಸಂವಿಧಾನದನ್ವಯ ದೇಶದ ಸಾರ್ವಭೌಮತೆಯ ಏಕೈಕ ವಿಷಯವಾಗಿ ಸರಕಾರದೊಂದಿಗೆ ನಿಲ್ಲಬೇಕು.
ಆದರೆ ನಮ್ಮಲ್ಲಿನ ಪ್ರತಿಪಕ್ಷ ಗಳನ್ನು ಗಮನಿಸಿದರೆ ಇವರು ಪಾಕಿಸ್ತಾನ, ಚೀನಾದಲ್ಲಿ ಕೂತು ಮಾತನಾಡುತ್ತಿದ್ದಾರೆಯೋ
ಎಂಬಂತಿದೆ. ಇಸ್ರೇಲ್ ಯುದ್ಧಕ್ಕೆ ನಿಂತರೆ ಅಲ್ಲಿನ ಪ್ರತಿಪಕ್ಷಗಳು ಆಡಳಿತ ಪಕ್ಷದೊಂದಿಗೆ ನಿಂತು ದೇಶದ ರಕ್ಷಣೆಗಿಳಿಯುತ್ತವೆ. ಆದರೆ ನಮ್ಮಲ್ಲಿ ದೇಶಾಭಿಮಾನಿ ಗಳಿಗಿಂತ ದೇಶದ್ರೋಹಿ ಒಳಮನಸ್ಸಿನ ಮಂದಿಯೇ ಹೆಚ್ಚಾಗಿದ್ದಾರೆ.
ಇಂಥವರು ಅಧಿಕಾರವಿಲ್ಲದೇ ನರಳುತ್ತಿದ್ದಾರೆ. ಹೀಗಿರುವಾಗ ಮೋದಿಯವರು ವಿದೇಶಗಳಿಂದ ಸಿಗುವ ಮನ್ನಣೆಗಳಿಂದ ಮೈಮರೆಯದೆ ಶ್ರೀಸಾಮಾನ್ಯನ ಕೂಗನ್ನು ಕೇಳಿಸಿಕೊಳ್ಳಲೇಬೇಕು. ಹಳ್ಳಿಹಳ್ಳಿಗಳನ್ನು ಆವರಿಸಬೇಕು. ಕೂಲಿ ಮಾಡಿ ಬದುಕುವ ಜನಸಾಮಾನ್ಯ ಪ್ರಜಾತಂತ್ರದ ಬುಡದಲ್ಲಿನ ಬೇರಿನಂತೆ. ಮೊದಲು ಆತನನ್ನು ಪೊರೆದು ಅವನ ಮನಗೆಲ್ಲಬೇಕು. ಇದು ಪ್ರಧಾನಿ ಮೋದಿಯವರಿಗೆ ಹೇಳಬೇಕಿಲ್ಲ. ಲೋಕಸಭಾ ಚುನಾವಣೆಗೆ ಕೇವಲ ೧೧ ತಿಂಗಳುಗಳಿವೆ. ಪ್ರಜ್ಞಾವಂತ ಮತದಾರರಿಗೆ ಮೋದಿ-ಯೋಗಿಜೀ ಹೊರ ತಾದ ಪಕ್ಷಗಳು ದೇಶ ಉಳಿಸುತ್ತಾರೆಂಬ ಗ್ಯಾರೆಂಟಿ ಗಳಿಲ್ಲ.
ಹೀಗಿರುವಾಗ ಕೇಂದ್ರ ಸರಕಾರ ದೇಶದ ಸಾಮಾನ್ಯ ಮತದಾರರ ನಾಡಿಮಿಡಿವನ್ನು ಅರಿತು ಅವರ ನೆಮ್ಮದಿಯ ಬದುಕಿಗೆ ಪ್ರಾಶಸ್ತ್ಯ ನೀಡಿ ಅವರನ್ನು ‘ಸ್ವಾಭಾವಿಕವಾಗಿ’ ಒಲಿಸಿಕೊಳ್ಳಬೇಕು.