Sunday, 15th December 2024

’ಜಾಕ್‌ ಮಾ’ನ ಜನಪ್ರಿಯತೆಗೆ ಹೆದರಿದನೇ ’ಕ್ಸಿ ಜಿನ್‌ ಪಿಂಗ್‌’

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

1980ರ ದಶಕದಲ್ಲಿ ಆರ್ಥಿಕತೆಯ ದೃಷ್ಟಿಯಲ್ಲಿ ಚೀನಾ ಹಾಗೂ ಭಾರತ ಒಂದೇ ತಕ್ಕಡಿಯಲ್ಲಿದ್ದವು. ವಿಶ್ವದ ದೊಡ್ಡಣ್ಣನೆಂದರೆ
ಅಮೆರಿಕಾ ಅಥವಾ ರಷ್ಯಾದ ಕಡೆಗೆ ಜನರು ಮುಖ ಮಾಡುವಂತಿತ್ತು. ಅಮೆರಿಕಾದ ಪಾಶ್ಚಿಮಾತ್ಯ ಸಂಸ್ಕೃತಿಯು ನಿಧಾನ
ವಾಗಿ ಎಡೆ ಹರಡಲು ಶುರು ವಾಗಿತ್ತು.

ಅಫಘಾನಿಸ್ತಾನದ ಯುದ್ಧದ ನಷ್ಟದ ನಂತರ ರಷ್ಯಾ ನಿಧಾನವಾಗಿ ತನ್ನ ಪಟ್ಟವನ್ನು ಅಮೆರಿಕಾ ದೇಶಕ್ಕೆ ಬಿಟ್ಟುಕೊಟ್ಟಿತ್ತು. ಇಡೀ ಜಗತ್ತಿನ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಿಡಿತ ಸಾಧಿಸಿದ ಅಮೆರಿಕಾ ವಿಶ್ವವನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಯಾಗಿತ್ತು. ಏಷ್ಯಾ ಖಂಡದಲ್ಲಿ ಅಮೆರಿಕಾ ದೇಶವನ್ನು ಮೀರಿಸಬಲ್ಲ ದೇಶವೊಂದು ಮತ್ತೆ
ಕಾಣಸಿಗುವುದು ಕಷ್ಟ ವೆಂದು ಭಾವಿಸುತ್ತಿರುವಾಗಲೇ, ಕಮ್ಯುನಿಸ್ಟ್ ರಾಷ್ಟ್ರ ಚೀನಾ ತನ್ನ ನೂತನ ಆರ್ಥಿಕ ನೀತಿಯ ಮೂಲಕ ಎರಡು ದಶಕಗಳಲ್ಲಿ ಕಂಡು ಕಾಣರಿಯದ ಅಭಿವೃದ್ಧಿಯನ್ನು ಕಂಡಿತು.

2001ರಿಂದ 2003ರ ನಡುವೆ ಚೀನಾ ದೇಶದಲ್ಲಿ ಬಳಕೆಯಾದ ಸಿಮೆಂಟ್ ಅಮೆರಿಕಾ ದೇಶದಲ್ಲಿ 1950 ಹಾಗೂ 2001ರ ನಡುವೆ ಬಳಕೆಯಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಆ ಮಟ್ಟದ ಕಾಮಗಾರಿಗಳನ್ನು ಚೀನಾ ದೇಶವು ಕೈಗೊಂಡಿತ್ತು. ನೋಡನೋಡುತ್ತಲೇ ಜಗತ್ತಿನ ನಂಬರ್ ಒನ್ ರಫ್ತು ರಾಷ್ಟ್ರವಾಗಿ ಚೀನಾ ಬೆಳೆಯಿತು, ಜಗತ್ತಿನ ಮೂಲೆ ಮೂಲೆಗಳಿಗೆ ಬೇಕಾ ದಂಥ ವಸ್ತುಗಳನ್ನು ಕ್ಷಣಮಾತ್ರದಲ್ಲಿ ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಕೊಂಡಿತ್ತು.

ಮನೆಮನೆಯಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕೋಟ್ಯಂತರ ಸಣ್ಣ ಉದ್ದಿಮೆಗಳು ಚೀನಾ ದೇಶದಲ್ಲಿ ಪ್ರಾರಂಭ ಗೊಂಡಿದ್ದವು. ತನ್ನ ಕಮ್ಯುನಿಸ್ಟ್ ನೀತಿಯ ಮೂಲಕ ಮುಲಾಜಿಲ್ಲದೆ ಕೆಲಸಗಾರರನ್ನು ದಿನದ 20 ಘಂಟೆ (ಪ್ರತಿ ದಿನವಲ್ಲ) ಕೆಲಸ ಮಾಡುವಂತೆ ಮಾಡಿತ್ತು. ಯಾವ ದೇಶಕ್ಕೆ ಯಾವ ಗುಣಮಟ್ಟದ ವಸ್ತುಗಳನ್ನು ರಫ್ತು ಮಾಡಬೇಕೆಂಬುದನ್ನು ಚೀನಾ ಚೆನ್ನಾಗಿ ಅರ್ಥ ಮಾಡಿಕೊಂಡಿತ್ತು.

ಭಾರತದ ಮಾರುಕಟ್ಟೆಯನ್ನು ಹಾಳು ಮಾಡಲೆಂದೇ ಕಳಪೆ ಗುಣಮಟ್ಟದ ಹಲವು ವಸ್ತುಗಳನ್ನು ರಫ್ತು ಮಾಡುತ್ತಿತ್ತು. ಅತ್ತ
ಅಮೆರಿಕಾ ದೇಶಕ್ಕೆ ಅತ್ಯಂತ ಗುಣಮಟ್ಟದ ವಸ್ತುಗಳನ್ನು ರಫ್ತು ಮಾಡುತಿತ್ತು. ಜಗತ್ತಿನ ಬಹುದೊಡ್ಡ ಉತ್ಪಾದನಾ ಕಾರ್ಖಾನೆ ಯಾಗಿ ಚೀನಾ ಬೆಳೆದಿತ್ತು. ಇದರ ಫಲವಾಗಿ ಚೀನಾ ದೇಶವು ಜಗತ್ತಿನಲ್ಲಿ ಹೆಚ್ಚು ಬಂಡವಾಳ ಹೂಡ ಬಯಸುವ ರಾಷ್ಟ್ರವಾಗಿ ಬೆಳೆದಿತ್ತು. ಸ್ವತಃ ಅಮೆರಿಕಾದ ಹಲವು ಕಂಪನಿಗಳು ಚೀನಾ ದೇಶದಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದವು.

2005ರ ನಂತರ ಜಗತ್ತಿನಾದ್ಯಂತ ದೊಡ್ಡಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಯುಗವೊಂದು ಆರಂಭವಾಯಿತು. 19900ರ ದಶಕದಲ್ಲಿ ಆರಂಭವಾಗಿದ್ದರೂ ಸಹ, 2005ರ ನಂತರ ದೊಡ್ಡ ಮಟ್ಟದ ವೇಗ ಮಾಹಿತಿ ತಂತ್ರಜ್ಞಾನಕ್ಕೆ ಸಿಕ್ಕಿತ್ತು. ಉತ್ಪಾದನಾ ವಲಯವು ನಿಧಾನವಾಗಿ ತೆರೆಮರೆಗೆ ಸರಿಯಲು ಶುರುವಾಯಿತು. ಬಂಡವಾಳಶಾಹಿಗಳು ಮಾಹಿತಿ ತಂತ್ರಜ್ಞಾನ ದೆಡೆಗೆ ತಮ್ಮ ಹಣವನ್ನು ಹೂಡಲು ಶುರು ಮಾಡಿದ್ದರು.

ನೋಡ ನೋಡುತ್ತಲೇ ಇಡೀ ಜಗತ್ತನ್ನು ಮಾಹಿತಿ ತಂತ್ರಜ್ಞಾನ ಆವರಿಸಿಕೊಂಡಿತ್ತು. ಚೀನಾ ದೇಶವು ತಾನೇನು ಕಮ್ಮಿಯಿಲ್ಲ ವೆಂದು ತೋರಿಸಿಕೊಳ್ಳಬೇಕಲ್ಲ, ತಾನೂ ಸಹ ಮಾಹಿತಿ ತಂತ್ರಜ್ಞಾನದೆಡೆಗೆ ಹೆಚ್ಚಿನ ಆಸಕ್ತಿ ಯನ್ನು ತೋರಿತ್ತು. ಮಾಹಿತಿ ಹಾಗೂ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ 2010ರ ವೇಳೆಗೆ ಮೊಬೈಲ್ ಕ್ರಾಂತಿಯೂ ಶುರುವಾಗಿತ್ತು.

ಮೊಬೈಲ್ ಬಳಸಿ ಕುಳಿತ ಬೇಕಾದ ಕೆಲಸಗಳನ್ನು ಮಾಡಬಹುದಾದ ಹಲವಾರು ತಂತ್ರಜ್ಞಾನಗಳು ಮಾರುಕಟ್ಟೆಯಲ್ಲಿ ಬಂದಿ ದ್ದವು. ಇದರ ಫಲವಾಗಿ ‘ಈ – ಕಾಮರ್ಸ್’ ಮಾರುಕಟ್ಟೆ ಜಗತ್ತಿನಾದ್ಯಂತ ನಿಧಾನವಾಗಿ ಹರಡಲು ಶುರುವಾಯಿತು. ಅಮೆರಿಕಾದ ‘ಅಮೆಜಾನ್’ ಸಂಸ್ಥೆಯು ಜಗತ್ತಿನ ‘ಈ – ಕಾಮರ್ಸ್’ನ ದೊಡ್ಡಣ್ಣನಾಗಿದ್ದ. ಅದೇ ಮಾದರಿಯ ವ್ಯವಹಾರವನ್ನು ಚೀನಾ ದೇಶದಲ್ಲಿ ‘ಅಲಿಬಾಬಾ’ ಎಂಬ ಕಂಪನಿಯ ಮೂಲಕ ಶುರುಮಾಡಿದ ಉದ್ಯಮಿ ‘ಜಾಕ್ ಮಾ’.

1999ರಲ್ಲಿ ತನ್ನ ಸ್ನೇಹಿತರ ಬಳಿ ಸಾಲ ಮಾಡಿ ಸಣ್ಣದೊಂದು ಉದ್ಯಮವನ್ನು ಶುರುಮಾಡಿದ್ದ ‘ಜಾಕ್ ಮಾ’, ನೋಡನೋಡು ತ್ತಲೇ ಮುಗಿಲೆತ್ತರಕ್ಕೆ ಬೆಳೆದ. ತನ್ನ ‘ಈ – ಕಾಮರ್ಸ್’ ವೆಬ್ ಸೈಟ್‌ನಲ್ಲಿ ಚೀನಾ ದೇಶದ ಬಹುದೊ  ‘ಆನ್‌ಲೈನ್ ಮಾರುಕಟ್ಟೆ’ ಸೃಷ್ಟಿ ಮಾಡಿದ. ಮಿಲಿಯನ್  ಗಟ್ಟಲೆ ಮಾರಾಟಗಾರರು ಈತನ ವೆಬ್ ಸೈಟ್‌ನಲ್ಲಿ ಬಂದು ತಮ್ಮ  ವಸ್ತು ಗಳನ್ನು ಮಾರತೊಡಗಿದರು.

ತನ್ನ ವೆಬ್ ಸೈಟ್‌ನಲ್ಲಿ ಮಾರಾಟ ಮಾಡಲು ಬರುವವರ ಬಳಿ ಒಂದು ರುಪಾಯಿ ಹಣವನ್ನೂ ಕೇಳದ ಈತ, ಕೇವಲ ‘ಜಾಹೀ ರಾತುಗಳಿಂದ’ ಬಿಲಿಯನ್ ಗಟ್ಟಲೆ ಹಣವನ್ನು ಸಂಪಾದಿಸಿದ. ಕುಳಿತ ಜಾಗದಲ್ಲಿ ಗ್ರಾಹಕರನ್ನು ತಲುಪಲು ಈತ ಸಹಕಾರಿಯಾದ. ಚೀನಾ ದೇಶದ ಮೂಲೆ ಮೂಲೆಗಳಿಂದ ಗ್ರಾಹಕರು ಹಾಗೂ ಮಾರಾಟಗಾರರು ಈತನ ವೆಬ್ ಸೈಟ್‌ಗೆ ಬಂದರು.
ಪ್ರತಿನಿತ್ಯವೂ ಬಿಲಿಯನ್ ಗಟ್ಟಲೆ ವ್ಯವಹಾರವು ಈತನ ‘ಅಲಿಬಾಬಾ’ ಕಂಪನಿಯ ವೆಬ್ ಸೈಟ್‌ನಲ್ಲಿ ನಡೆಯುತಿತ್ತು. ಕೇವಲ ಚೀನಾ ಮಾತ್ರವಲ್ಲದೆ ಜಗತ್ತಿನ ಇತರ ರಾಷ್ಟ್ರದ ಗ್ರಾಹಕರೂ ಸಹ ಈತನ ಕಂಪನಿಯ ಮೂಲಕ ಚೀನಾ ದೇಶದ ಮಾರಾಟಗಾರ ರನ್ನು ತಲುಪುತಿದ್ದರು.

ಜಗತ್ತಿನಲ್ಲಿ ‘ಜಾಕ್ ಮಾ’ನ ಹೆಸರು ಪ್ರತಿಯೊಬ್ಬ ನೂತನ ಉದ್ಯಮಿಗೂ ಪ್ರೇರಣೆಯಾಗಿತ್ತು. ತನ್ನ ಕಂಪನಿಯ ಮೂಲಕ
ಜಗತ್ತಿನ ಇತರ ದೇಶಗಳಲ್ಲಿ ಬಂಡವಾಳ ಹೂಡಲು ಶುರುಮಾಡಿದ. ಭಾರತದಲ್ಲಿಯೂ ಅಷ್ಟೇ ‘ಪೇಟಿಎಂ’ ಕಂಪನಿಯಲ್ಲಿ ‘ಅಲಿಬಾಬಾ’ ಹೂಡಿಕೆ ಮಾಡಿದೆ. ನೂತನ ಉದ್ಯಮಿಗಳು ಇವನು ಹೂಡಬಯಸುವ ಬಂಡವಾಳಕ್ಕಾಗಿ ಕಾದುಕುಳಿತಿರುತ್ತಿದ್ದರು. ‘ಅಲಿಬಾಬಾ’ ಕಂಪನಿಯನ್ನು ಚೀನಾ, ಹಾಂಗ್ ಕಾಂಗ್ ಹಾಗೂ ಅಮೆರಿಕಾ ದೇಶಗಳ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿದ. ‘ಅಲಿಬಾಬಾ’ ನೋಡ ನೋಡುತ್ತಲೇ ಬಹುದೊಡ್ಡ ಸಾರ್ವಜನಿಕ ಕಂಪನಿಯಾಗಿ ಬೆಳೆಯಿತು.

ನಿಧಾನವಾಗಿ ಈತ ‘ಈ ಕಾಮರ್ಸ್’ನಿಂದ ಆಚೆಗೂ ಬಂಡವಾಳವನ್ನು ಹೂಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಶುರು ಮಾಡಿದ್ದ. ಚೀನಾ ದೇಶಕ್ಕೆ ಇಷ್ಟೊಂದು ದೊಡ್ಡಮಟ್ಟದ ಕೀರ್ತಿಯನ್ನು ತಂದಿದ್ದ ‘ಜಾಕ್ ಮಾ’ ಅನುಮಾನಾಸ್ಪದವಾಗಿ ಕಳೆದ ಅಕ್ಟೋಬರ್ ತಿಂಗಳಿಂದ ಕಾಣೆಯಾಗಿದ್ದನೆಂಬ ವರದಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ  ಕೇಳಿಬರುತ್ತಿವೆ. ‘ಜಾಕ್ ಮಾ’ ಸಾರಥ್ಯದಲ್ಲಿ ‘ಆಫ್ರಿಕನ್ ಬಿಸಿನೆಸ್ ಹೀರೋ’ ಎಂಬ ರಿಯಾಲಿಟಿ ಶೋ ನಡೆಯುತಿತ್ತು.

ಅತ್ಯಂತ ಹಿಂದುಳಿದ ಖಂಡವಾದ ಆಫ್ರಿಕಾದ ಉದ್ಯಮಿ ಗಳನ್ನು ಪ್ರೋತ್ಸಾಹಿಸಲು ಈತ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದ. ಈ
ರಿಯಾಲಿಟಿ ಶೋ ನ ಅಂತಿಮ ಸುತ್ತಿನಲ್ಲಿ ‘ಜಾಕ್ ಮಾ’ ಅತಿಥಿಯಾಗಿ ಬರಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ‘ಜಾಕ್ ಮಾ’ ಬರಲಿಲ್ಲ. ಈತನ ಜಾಗಕ್ಕೆ ಮತ್ಯಾರೋ ಬಂದರು. ಅನುಮಾನ ಶುರುವಾದದ್ದೇ ಇಲ್ಲಿಂದ, ಯಾವಾಗ ತನ್ನದೇ ಕಾರ್ಯಕ್ರಮಕ್ಕೆ ತಾನೇ ಬರಲಿಲ್ಲವೋ ‘ಜಾಕ್ ಮಾ’ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿತ್ತು. ಈ  ರ್ಯಕ್ರಮ ನಡೆಯುವ ಕೆಲವು ದಿನಗಳ ಹಿಂದೆ ಚೀನಾದ ಶಾಂಘೈನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ‘ಜಾಕ್ ಮಾ’ ಚೀನಾದ ಸೆಂಟ್ರಲ್ ಬ್ಯಾಂಕಿನ ನೂತನ ನೀತಿಗಳನ್ನು ಬಹಿರಂಗವಾಗಿ ಟೀಕಿಸಿದ್ದ.

ಇತ್ತೀಚಿಗೆ ಚೀನಾ ದೇಶದ ಬ್ಯಾಂಕುಗಳು ‘ಗಿರವಿ ಅಂಗಡಿ’ಗಳ ರೀತಿಯಲ್ಲಿ ಕೆಲಸ ಮಾಡುತ್ತಿವೆಯೆಂಬ ಹೇಳಿಕೆಯನ್ನು ಸರಿ
ನೀಡಿದ್ದ. ಚೀನಾ ಬ್ಯಾಂಕುಗಳಲ್ಲಿ ಪ್ರತಿಯೊಂದು ಸಾಲ ಪಡೆಯಲು ಆಸ್ತಿಯ ಅಡಮಾನವನ್ನು ಕಡ್ಡಾಯ ಮಾಡುತ್ತಿರುವ ನೀತಿಯ ವಿರುದ್ಧ ಹೇಳಿಕೆಯನ್ನು ನೀಡಿದ್ದ. ಇದೇ ರೀತಿಯಲ್ಲಿ ಚೀನಾ ಬ್ಯಾಂಕುಗಳು ವಹರಿಸಿದರೆ ದೇಶದ ಪ್ರಗತಿ ಸಾಧ್ಯವಿಲ್ಲ ವೆಂದು ಬಹಿರಂಗವಾಗಿ ಹೇಳಿದ್ದ.

ಈತನ ಹೇಳಿಕೆಯನ್ನು ಕೇಳಿ ಕೆಂಡಾಮಂಡಲವಾಗಿದ್ದ ಚೀನಾದ ಅಧ್ಯಕ್ಷ ‘ಕ್ಸಿ ಜಿಂಪಿಂಗ್’ ಬ್ಯಾಂಕಿನ ಅಧಿಕಾರಿಗಳ ಮೂಲಕ
ಆತನ ಮತ್ತೊಂದು ಕಂಪನಿಯಾದ ‘ಆಂಟ್’ (ಕನ್ನಡಲ್ಲಿ ಇರುವೆ) ಇನ್ವೆಸ್ಟ್ಮೆಂಟ್ಸ್‌ಗೆ ನೋಟೀಸ್ ನೀಡಿದ್ದ. ಚೀನಾದ ಅಧ್ಯಕ್ಷ ಈ ಕಂಪನಿಗೆ ನೋಟೀಸ್ ನೀಡಲು ಮತ್ತೊಂದು ಕಾರಣವಿತ್ತು. ಸದ್ಯದರಲ್ಲಿಯೇ ಈ ಕಂಪನಿಯು ಚೀನಾದ ಷೇರು ಮಾರುಕಟ್ಟೆ ಯಲ್ಲಿ ಸಾರ್ವಜನಿಕವಾಗಿ ಷೇರುಗಳನ್ನು ಹಂಚಿಕೆ ಮಾಡುವುದ ರಲ್ಲಿತ್ತು. ಚೀನಾ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಸಾರ್ವಜನಿಕ ಷೇರು ಹಂಚಿಕೆ ಇದಾಗಬೇಕಿತ್ತು.

‘ಜಾಕ್ ಮಾ’ನ ಈ ಕಂಪನಿಯು ‘ಆನ್‌ಲೈನ್’ ಹಣಕಾಸು ವ್ಯವಹಾರ ಮಾಡುವ ಕೆಲಸದಲ್ಲಿ ತೊಡಗಿತ್ತು. ಸುಮಾರು 37 ಬಿಲಿಯನ್ ಡಾಲರ್, ಅಂದರೆ ಸುಮಾರು 400000 ಕೋಟಿ ರುಪಾಯಿಯಷ್ಟು ಹಣವನ್ನು ಸಾರ್ವಜನಿಕ ಷೇರು ಹಂಚಿಕೆಯ
ಮೂಲಕ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು. ‘ಜಾಕ್ ಮಾ’ತನ್ನ ವ್ಯವಹಾರದ ಕದಂಬ ಬಾಹುಗಳನ್ನು ಎಡೆಯೂ ಹರಡಿಸಲು ಶುರು ಮಾಡಿದ್ದು ಕಮ್ಯುನಿಸ್ಟ್ ನಾಯಕನಿಗೆ ಇಷ್ಟವಿರಲಿಲ್ಲ.

ಹೇಗಾದರೂ ಮಾಡಿ ‘ಜಾಕ್ ಮಾ’ನನ್ನು ತಡೆಯಬೇಕಿದ್ದ ಅಧ್ಯಕ್ಷ ಎಂದಿನಂತೆ ತನ್ನ ಸರ್ವಾಧಿಕಾರಿ ಶಕ್ತಿಯನ್ನು ಬಳಸಿ ಆತನ ‘ಆಂಟ್’ ಕಂಪನಿಯ ಸಾರ್ವಜನಿಕ ಷೇರು ಹಂಚಿಕೆಯನ್ನು ತಡೆದ. ಸಾರ್ವಜನಿಕರ ಮುಂದೆ ಕುಂಟುನೆಪವೊಡ್ಡಿ ಚೀನಾ ಸರಕಾರವು ಸಾರ್ವಜನಿಕ ಷೇರು ಹಂಚಿಕೆಗೆ ಅನುಮತಿ ನೀಡಲಿಲ್ಲ.  ಇಷ್ಟಾದರೂ ಸಹ ‘ಜಾಕ್ ಮಾ’ ಸಾರ್ವಜನಿಕವಾಗಿ ಒಂದು ಹೇಳಿಕೆಯನ್ನು ನೀಡಲಿಲ್ಲ. ಪ್ರಚಾರಪ್ರಿಯನಾಗಿದ್ದ ‘ಜಾಕ್ ಮಾ’ ತನ್ನಕಂಪನಿಯ ಮೇಲೆ ಇಷ್ಟೆ ಗಧಾಪ್ರಹಾರ ನಡೆಯುತ್ತಿದ್ದರೂ
ತುಟಿಬಿಚ್ಚಲಿಲ್ಲವೆಂದಾಗ ಆತನು ಕಾಣೆಯಾಗಿರುವ ಅನುಮಾನ ಮತ್ತಷ್ಟು ಹೆಚ್ಚಾಗತೊಡಗಿತು.

ತನ್ನ ಕಮ್ಯುನಿಸ್ಟ್ ನೀತಿಗಳಿಂದ ಚೀನಾ ಈ ರೀತಿ ಹಲವು ಬಾರಿ ಇತರರಿಗೂ ಮಾಡಿದೆ, ಚೀನಾ ದೇಶದ ಸಿದ್ಧ ನಟಿಮಣಿಯೊಬ್ಬಳು ಹೀಗೆಯೇ ಕಾಣೆಗಿದ್ದಳು, ಮೂರು ತಿಂಗಳುಗಳ ನಂತರ ಆಕೆಯನ್ನು ಜೈಲಿನಲ್ಲಿ ಇರಿಸಿದ್ದ ವಿಷಯ ಗೊತ್ತಾಯಿತು. ಮತ್ತೊಬ್ಬ ‘ರಿಯಲ್ ಎಸ್ಟೇಟ್’ ಉದ್ಯಮಿಯನ್ನು ‘ಕರೋನಾ’ ವಿಷಯದಲ್ಲಿ ಅಧ್ಯಕ್ಷ ‘ಕ್ಸಿ ಜಿಂಗ್ ಪಿಂಗ್’ನನ್ನು ಟೀಕಿಸಿದ್ದಕ್ಕೆ  ಹದಿನೆಂಟು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ. ಜಗತ್ತಿನಲ್ಲಿ ಚೀನಾ ದೇಶದ ಹೆಸರನ್ನು ಎತ್ತರಕ್ಕೆ ಕೊಂಡೊಯ್ದ ‘ಜಾಕ್ ಮಾ’ ಈಗ
ಕಾಣೆಯಾಗಿರುವುದು ನೋಡಿದರೆ, ಕಮ್ಯುನಿಸ್ಟರ ನೀಚಬುದ್ಧಿ ಎದ್ದು ಕಾಣುತ್ತದೆ. ತಮಗೆ ಉಪಯೋಗವಾಗುವವರೆಗೂ ಬಳಸಿಕೊಂಡು ನಂತರ ಅವರನ್ನು ಸಂಪೂರ್ಣವಾಗಿ ಮುಗಿಸುವ ನೀಚಗಾರಿಕೆ ಕಮ್ಯುನಿಸ್ಟರ ರಕ್ತದಲ್ಲಿದೆ.

‘ಜಾಕ್ ಮಾ’ ಅಷ್ಟಕ್ಕೂ ಹೇಳಬಾರದನ್ನು ಹೇಳಲಿಲ್ಲ, ಚೀನಾ ದೇಶದ ಸೆಂಟ್ರಲ್ ಬ್ಯಾಂಕಿನ ನೀತಿಗಳ ಬಗ್ಗೆ ತನ್ನ ಅಭಿಪ್ರಾಯ ವನ್ನು ಹಂಚಿಕೊಂಡ. ಇಷ್ಟೂ ಹೇಳುವ ವಾಕ್ ಸ್ವಾತಂತ್ರ್ಯವಿಲ್ಲವೆಂದರೆ ಕಮ್ಯುನಿಸ್ಟರ ನೀಚ ಆಡಳಿತ ಏನೆಂಬುದನ್ನು
ಅರ್ಥಮಾಡಿಕೊಳ್ಳಿ. ಭಾರತದಲ್ಲಿನ ವಾಕ್ ಸ್ವಾತಂತ್ರ್ಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಮ್ಯುನಿಸ್ಟರು ತಾವು
ಪೂಜಿಸುವ ಚೀನಾ ದೇಶದ ಬಗ್ಗೆ ಈಗ ಏನು ಹೇಳುತ್ತಾರೆ? ಭಾರತದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಕಮ್ಯುನಿಸ್ಟರು ಅಪ್ಪಿತಪ್ಪಿ ಚೀನಾ ದೇಶಕ್ಕೆ ಹೋಗಿ ಮಾತನಾಡಿದರೆ ನಡುರಸ್ತೆಯಲ್ಲಿ ಗುಂಡು ಹೊಡೆದು ಸಾಯಿಸಿಬಿಡುತ್ತದೆ.

ಅಲ್ಲಿನ ಕಮ್ಯುನಿಸ್ಟ್ ಸರಕಾರ. ಚೀನಾ ದೇಶವು ಹೇಳುವುದಕ್ಕಷ್ಟೇ ಕಮ್ಯುನಿಸ್ಟ್ ಸರಕಾರ, ಪ್ರತೀವರ್ಷ ನೂರಾರು
ಬಿಲೇನಿಯರ್‌ ಗಳು ಚೀನಾ ದೇಶದಲ್ಲಿ ಹುಟ್ಟುಕೊಳ್ಳುತ್ತಾರೆ. ಇಂತಹ ಉದ್ಯಮಿಗಳ ಸಾಧನೆಯನ್ನು ಸಹಿಸದ ಕಮ್ಯುನಿಸ್ಟ್ ನಾಯಕ ‘ಕ್ಸಿ ಜಿಂಗ್ ಪಿಂಗ್’ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿರುತ್ತಾನೆ. ಚೀನಾ ದೇಶದ ಪ್ರಮುಖ ದಿನಪತ್ರಿಕೆಯಾದ ‘ಚೈನೀಸ್ ಡೈಲಿ’ ಜಾಕ್ ಮಾ ರನ್ನು ಅಜ್ಞಾತ ಸ್ಥಳದಲ್ಲಿ ಸರಕಾರವು ವಿಚಾರಣೆ ನಡೆಸುತ್ತಿದೆ ಯೆಂದು ವರದಿ ಮಾಡಿತ್ತು. ವರದಿ ಮಾಡಿದ ಕೆಲವೇ ಕೆಲವು ಘಂಟೆಗಳಲ್ಲಿ ವರದಿಯನ್ನು ತನ್ನ ವೆಬ್ ಸೈಟ್‌ನಿಂದ ತೆಗೆದುಹಾಕಿತ್ತು.

ಚೀನಾ ದೇಶದಲ್ಲಿ ಮಾಧ್ಯಮವನ್ನೂ ಸಹ ಸರಕಾರ ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಮಾಧ್ಯಮಗಳ ಪ್ರತಿಯೊಂದು ವರದಿಯ ಮೇಲೂ ಹದ್ದಿನ ಕಣ್ಣಿಟ್ಟಿರುವ ಕಮ್ಯುನಿಸ್ಟ್ ಸರಕಾರ, ತನ್ನ ವಿರುದ್ಧ ಏನಾದರೊಂದು ವರದಿ ಬಂತೆಂದರೆ ಸಾಕು ಮಾಧ್ಯಮಗಳ ಮೇಲೆ ಮುಗಿ ಬೀಳುತ್ತದೆ. ಭಾರತದಲ್ಲಿನ ಕಮ್ಯುನಿಸ್ಟ್ ಮಾಧ್ಯಮಗಳ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಮ್ಯುನಿಸ್ಟರು ಚೀನಾ ಸರಕಾರವು ಅಲ್ಲಿನ ಮಾಧ್ಯಮಗಳ ಮೇಲೆ ಹೇರುವ ನಿರ್ಬಂಧಗಳ ಬಗ್ಗೆ ಮಾತನಾಡುವುದಿಲ್ಲ.

ಚೀನಾ ದೇಶದಲ್ಲಿ ಇಂದಿಗೂ ‘ಫೇಸ್ಬುಕ್’ ಕೆಲಸ ಮಾಡುವುದಿಲ್ಲ, ‘ಗೂಗಲ’ ಕೆಲಸ ಮಾಡುವುದಿಲ್ಲ. ಅಷ್ಟು ರಹಸ್ಯವಾಗಿ ಚೀನಾ ದೇಶ ತನ್ನೊಳಗಿನ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ‘ಗೂಗಲ’ನಲ್ಲಿ ಅಪ್ಪಿತಪ್ಪಿಯೂ ಚೀನಾ ದೇಶದ ಹಲವು ವಿಚಾರಗಳು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ‘ಜಾಕ್ ಮಾ’ ಬಹುಕಾಲದ ವಿಶ್ರಾಂತಿಗಾಗಿ ಹೊರಬರುತ್ತಿಲ್ಲ ವೆಂದು ಹೇಳಿದ್ಧಾರೆ. ಆದರೆ ಮತ್ತೊಬ್ಬ ಪತ್ರಕರ್ತನ ಪ್ರಕಾರ ಪ್ರಚಾರಪ್ರಿಯ ಜಾಕ್ ಮಾ ಇಷ್ಟೊಂದು ತಿಂಗಳುಗಳ ಕಾಲ ಭೂಗತನಾಗಲು ಸಾಧ್ಯವಿಲ್ಲವೆಂದು ಹೇಳುತ್ತಾನೆ.

ಏನೇ ಆದರೂ ಇಷ್ಟೆ ವಿಚಾರಗಳು ಜಾಕ್ ಮಾ ಬಗ್ಗೆ ಚರ್ಚೆಯಾಗುತ್ತಿರುವಾಗ ಹೊರಬಂದು ಒಂದು ಹೇಳಿಕೆಯನ್ನು ಜಾಕ್ ಮಾ
ನೀಡಬಹುದಿತ್ತು. ಹೊರದೇಶದಲ್ಲಿ ಅಡಗಿದ್ದರೂ ಸಹ, ತನ್ನ ಇರುವಿಕೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಹೇಳ
ಬಹುದಿತ್ತು. ಜಾಕ್ ಮಾ ಸಹ ಸಾಮಾನ್ಯನಲ್ಲ, ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಬೇಕೆಂದರೆ ಸುಲಭದ ಕೆಲಸವಲ್ಲ. ಚೀನಾ
ದೇಶದಲ್ಲಿ ಈ ಹಿಂದೆ ನಡೆದಿರುವ ಘಟನೆಗಳ ಬಗ್ಗೆ ‘ಜಾಕ್ ಮಾ’ಗೆ ಅರಿವಿದ್ದೇ ಇದೆ, ಎಲ್ಲರಿಗೂ ಕಮ್ಯುನಿಸ್ಟ್ ಸರಕಾರದ ಮೇಲೆಯೇ
ಅನುಮಾನ. ಸಾಮಾನ್ಯ ಶಾಲಾ ಶಿಕ್ಷಕನಾಗಿದ್ದ ‘ಜಾಕ್ ಮಾ’ ಚೀನಾದ ಬರ್ ಒನ್ ಶ್ರೀಮಂತ ವ್ಯಕ್ತಿಯಾದ ಕಥೆ ಮಾತ್ರ ರೋಚಕ, ಇಂತಹ ಶ್ರೀಮಂತ ವ್ಯಕ್ತಿ ಹಠಾತ್ ಕಾಣೆಯಾಗುತ್ತಾನೆಂದರೆ ಕಮ್ಯುನಿಸ್ಟರ ಕೈವಾಡವಿರಲೇಬೇಕು.

‘ಜಾಕ್ ಮಾ’ನ ಮಾಹಿತಿ ತಂತ್ರಜ್ಞಾನ ವ್ಯವಹಾರವು ಎಲ್ಲಿ ಚೀನೀ ಸರಕಾರವನ್ನು ಮೀರಿಸಿ ಬೆಳೆಯುತ್ತದೆಂಬ ಭಯ ಅಧ್ಯಕ್ಷ ‘ಕ್ಸಿ ಜಿಂಗ್ ಪಿಂಗ್’ಗೆ ಇತ್ತು. ಚೀನಾ ದೇಶದ ಮಾಹಿತಿಗಳು ಎಲ್ಲಿ ಜಗತ್ತಿಗೆ ಸೋರಿಕೆಯಾಗುತ್ತದೆಯೆಂಬ ಆತಂಕವೂ ಸಹ ಅಧ್ಯಕ್ಷನಿಗಿತ್ತೆಂದು ಹಲವು ಪತ್ರಕರ್ತರು ಅಭಿಪ್ರಾಯ ಪಟ್ಟಿದ್ಧಾರೆ. ಕಳೆದ ಕೆಲವು ವರ್ಷಗಳಿಂದ ‘ಕ್ಸಿ ಜಿಂಗ್ ಪಿಂಗ್’ ಚೀನಾದ ಖಾಸಗಿ ಕಂಪನಿಗಳನ್ನು ನಿಯಂತ್ರಿಸುವ ಸಲುವಾಗಿ ತನ್ನ ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿಗಳನ್ನು ಈ ಕಂಪನಿಗಳಲ್ಲಿ ನಿರ್ದೇಶಕರಾಗಿ ಮಾಡಿದ್ದಾನೆ.

ಅವನ ಪಕ್ಷದ ಪ್ರತಿನಿಽಗಳ ಕಣ್ಣು ತಪ್ಪಿಸಿ ಯಾವೊಂದು ಕೆಲಸವೂ ಆಗುತ್ತಿರಲಿಲ್ಲ, ಖಾಸಗಿ ಕಂಪನಿಯ ಪ್ರತಿಯೊಂದು ಆಗು
ಹೋಗುಗಳೂ ಅಧ್ಯಕ್ಷ ‘ಕ್ಸಿ ಜಿಂಗ್ ಪಿಂಗ್’ನ ಕೈ ಸೇರುತಿತ್ತು. ಮತ್ತೊ ಹೆಚ್ಚಾಗಿ ಚೀನಾ ದೇಶದಲ್ಲಿ ಸುಸಜ್ಜಿತವಾದ ಕ್ರಿಮಿನಲ್ ಕಾನೂನು ಜಾರಿಯಲಿಲ್ಲ, ಕಮ್ಯುನಿಸ್ಟ್ ಅಧ್ಯಕ್ಷ ನಿರ್ಧಾರ ಮಾಡಿದ ಹಾಗೆ ಎಲ್ಲವೂ ನಡೆಯುತ್ತದೆ. ಸ್ವೀಡೆನ್ ದೇಶದ ಪತ್ರಕರ್ತನೊಬ್ಬ ‘ಕ್ಸಿ ಜಿಂಗ್ ಪಿಂಗ್’ ಬಗ್ಗೆ ಅವಹೇಳನಕಾರಿಯಾಗಿ ಬರೆದನೆಂದು ಥೈಲ್ಯಾಂಡ್‌ನಿಂದ ಆತನನ್ನು ಕಿಡ್ನಾಪ್ ಮಾಡಿಸಿ ಚೀನಾ ಪೊಲೀಸರ ವಶದಲ್ಲಿರಿಸಲಾಗಿತ್ತು.

೨೦೧೨ರಿಂದ ಚೀನಾ ದೇಶದ ಆರ್ಥಿಕತೆ ಹೇಳುವ ಮಟ್ಟಕ್ಕೆ ಬೆಳೆಯುತ್ತಿಲ್ಲ ಒಂದು ರುಪಾಯಿಯ ಆರ್ಥಿಕತೆ ಬೆಳೆಸಲು ಸುಮಾರು ಎರಡು ರುಪಾಯಿಯ ಬಂಡವಾಳ ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಸಗಿ ಕಂಪನಿಗಳ ಮೇಲೆ ಈ ರೀತಿಯ ಗಧಾಪ್ರಹಾರ ನಡೆಸಿದರೆ ಚೀನಾ ದೇಶದ ಆರ್ಥಿಕತೆ ಪಾತಾಳ ಮುಟ್ಟುವುದರಲ್ಲಿ ಆಶ್ಚರ್ಯವಿಲ್ಲ. ಚೀನಾ ದೇಶದ ಮಾಹಿತಿ ತಂತ್ರಜ್ಞಾನದ ದೊಡ್ಡಣ್ಣನಂತಿದ್ದ ‘ಜಾಕ್ ಮಾ’ನ ಅನುಮಾಸ್ಪದ ಕಾಣೆಯಾದ ಪ್ರಕರಣವನ್ನು ನೋಡಿದರೆ ಜಗತ್ತಿನ ಇತರ ದೇಶಗಳ ಬಂಡವಾಳಶಾಹಿಗಳು ಚೀನಾ ದೇಶದಲ್ಲಿ ಹೂಡಿಕೆ ಮಾಡಲು ಹೆದರಬೇಕಾಗುತ್ತದೆ.

‘ಜಾಕ್ ಮಾ’ನ ‘ಆಂಟ್’ ಕಂಪನಿಯ ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಚೀನಾ ಸರಕಾರ, ‘ಜಾಕ್ ಮಾ’ನ ಈ
ಕಂಪನಿಯಿಂದ ಹಲವು ಗ್ರಾಹಕರಿಗೆ ತೊಂದರೆ ಆಗುವ ಸಂಭವವಿರುವುದರಿಂದ ತನ್ನ ಮೂಲ ವ್ಯವಹಾರವನ್ನು ಬಿಟ್ಟು
ಬೇರೆಯ ವ್ಯವಹಾರವನ್ನು ಮಾಡಬಾರದೆಂಬ ಎಚ್ಚರಿಕೆಯನ್ನು ನೀಡಿತ್ತು. ಸರಕಾರದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದ ಕಂಪನಿಯ
ನಿರ್ದೇಶಕ ಮಂಡಳಿ ಚೀನಾ ದೇಶದ ಮೂಲ ಉದ್ದೇಶದಡಿಯಲ್ಲಿಯೇ ತನ್ನ ವ್ಯವಹಾರವನ್ನು ನಡೆಸುವುದಾಗಿಯೂ ಹೇಳಿತ್ತು. ಅಷ್ಟಾದರೂ ಸಹ ‘ಜಾಕ್ ಮಾ’ಮಾತ್ರ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಚೀನಾದಲ್ಲಿ ಎಲ್ಲಿ ‘ಮಾಹಿತಿ ತಂತ್ರಜ್ಞಾನ’ದ ಕ್ರಾಂತಿಯಾಗಿ ಕಮ್ಯುನಿಸ್ಟ್ ಪಾರ್ಟಿಯ ಅಧ್ಯಕ್ಷನನ್ನು ‘ಜಾಕ್ ಮಾ’ ನಿಯಂತ್ರಿಸಲು ಶುರು ಮಾಡುತ್ತಾನೆಂಬ ಭಯ ಅಧ್ಯಕ್ಷ ‘ಕ್ಸಿ ಜಿಂಗ್ ಪಿಂಗ್’ಗಿದೆ. ಕೆಂಪು ಬಾವುಟ ಹಿಡಿದು ಅಧಿಕಾರಕ್ಕೆ ಬಂದಂಥವನಿಗೆ ಮಾಹಿತಿ ತಂತ್ರಜ್ಞಾನದ ಅರಿವಿರುವುದಿಲ್ಲ, ತನ್ನ ದೇಶದಲ್ಲಿನ ನಾಗರಿಕರು, ಮಾಧ್ಯಮಗಳು, ಕುಲಪತಿಗಳು, ವಿಜ್ಞಾನಿಗಳ ಮೇಲೆ ಇಲ್ಲ ಸಲ್ಲದ ನಿರ್ಬಂಧ ಹೇರಿ ಆಜೀವ ಪರ್ಯಂತ ಅಧಿಕಾರ ನಡೆಸಾಲು ಸಿದ್ಧತೆ ನಡೆಸಿರುವ ಅಧ್ಯಕ್ಷ ‘ಕ್ಸಿ ಜಿಂಗ್ ಪಿನ್’ಗೆ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದ ಎಲ್ಲಿ ತನ್ನ ದೇಶದ ಜನರು ಕಮ್ಯುನಿಸ್ಟ್ ಪಾರ್ಟಿಯ ಮೇಲೆ ಮುಗಿಬೀಳುತ್ತಾರೆಂಬ ಭಯವಿದೆ.

‘ಜಾಕ್ ಮಾ’ ತನ್ನ ಕಂಪನಿಯನ್ನು ಬೆಳೆಸಿದ ರೀತಿಯನ್ನು ನೋಡಿದರೆ ಗುಬ್ಬಚ್ಚಿ ಗೂಡಿನಂತಿದ್ದ ಚೀನಾ, ಮುಂದೊಂದು ದಿನ
ಓಪನ್ ಪುಸ್ತಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚೀನಾದಲ್ಲಿ ‘ಪ್ರಜಾಪ್ರಭುತ್ವ’ ಸ್ಥಾಪನೆಯಾಗಲು ಅಧ್ಯಕ್ಷ ‘ಕ್ಸಿ ಜಿಂಗ್
ಪಿಂಗ್’ ಬಿಡುತ್ತಿಲ್ಲ, ಇಡೀ ದೇಶವು ಈಗ ಆತನ ಕೈಯಡಿಯಲ್ಲಿದೆ. ಯಾವಾಗ ಇಡೀ ಚೀನಾದ ವ್ಯವಹಾರವನ್ನು ‘ಜಾಕ್ ಮಾ’ ಮಾಹಿತಿ ತಂತ್ರಜ್ಞಾನದ ಮೂಲಕ ನಿಯಂತ್ರಿಸಲು ಶುರುಮಾಡಿದನೋ ಅಧ್ಯಕ್ಷನಿಗೆ ಅನುಮಾನ ಬರತೊಡಗಿತ್ತು.

ನಿಧಾನವಾಗಿ ‘ಜಾಕ್ ಮಾ’ ಎಡೆಯೂ ತನ್ನ ನಿಯಂತ್ರಣ ಸಾಧಿಸತೊಡಗಿದ, ಕಾಲ ಕಳೆದಂತೆ ಇಡೀ ಚೀನಾ ದೇಶದ ವರ್ತಕ ರೆಲ್ಲರೂ ಅವನು ಹೇಳಿದ ಹಾಗೆ ಕೇಳಬೇಕಾಗುತ್ತದೆ. ‘ಪ್ರಜಾಪ್ರಭುತ್ವ’ದ ಬಗ್ಗೆ ಒಲವಿರುವ ‘ಜಾಕ್ ಮಾ’ ಸಾರ್ವಜನಿಕ ಜೀವನ ವನ್ನು ಹೆಚ್ಚು ಇಷ್ಟ ಪಡುತಿದ್ದ. ‘ಜಾಕ್ ಮಾ’ನ ಜೀವನ ಶೈಲಿ ಎಷ್ಟಿತ್ತೆಂದರೆ ಚೀನಾದ ‘ಮಾರ್ಷಲ್ ಆರ್ಟ್ಸ್’  ಸಿನೆಮಾವೊಂದ ರಲ್ಲಿ ಅಭಿನಯಿಸಿದ್ದ. ಈತನ ಅಭಿನಯ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಳೆದ ಐದು ವರ್ಷಗಳಲ್ಲಿ ‘ಜಾಕ್ ಮಾ’ ಚೀನಿಯರಿಗೆ ಒಬ್ಬ ದೊಡ್ಡ ‘ಐಕಾನ್’ ರೀತಿಯಲ್ಲಿ ಕಂಡುಬಂದ.

ಜಗತ್ತಿನ ಇತರ ದೇಶದ ನಾಯಕರ ಜೊತೆ ಸಂಪರ್ಕ ಇಟ್ಟುಕೊಂಡ, ಇತರ ದೇಶಗಳಲ್ಲಿ ತಾನು ಬಂಡವಾಳ ಹೂಡಲು ಶುರು ಮಾಡಿದ. ‘ಜಾಕ್ ಮಾ’ನ ಈ ಜನಪ್ರಿಯತೆಯು ಮುಂದೊಂದು ದಿನ ಎಲ್ಲಿ ತನ್ನ ಕಮ್ಯುನಿಸ್ಟ್ ನೀತಿಗೆ ಪೆಟ್ಟು ನೀಡಿ ತನ್ನನ್ನು ಅಧಿಕಾರದಿಂದ ಕೆಳಗಿಳಿಸುತ್ತದೆಯೆಂಬ ಆತಂಕದಿಂದ ಚೀನಾದ ಅಧ್ಯಕ್ಷ ‘ಕ್ಸಿ ಜಿಂಗ್ ಪಿಂಗ್’ಗಿತ್ತು. ‘ಜಾಕ್ ಮಾ’ನನ್ನು ನಿಯಂತ್ರಿಸುವ ಸಲುವಾಗಿ ಗುಪ್ತ ಸ್ಥಳವೊಂದರಲ್ಲಿ ವಿಚಾರಣೆ ನಡೆಸುತ್ತಿರಬಹುದೆಂಬ ಅನುಮಾನ ಹಲವರನ್ನು ಕಾಡುತ್ತಿದೆ.

ಸತ್ಯಾಸತ್ಯತೆ ಏನೇ ಇದ್ದರೂ ಸಹ, ಚೀನಾ ತನ್ನ ವಿಚಿತ್ರ ಕಮ್ಯುನಿಸ್ಟ್ ನೀತಿಗಳಿಂದ ಜಗತ್ತಿನ ಇತರ ದೇಶಗಳ ಬಳಿ ತನ್ನ  ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ. ‘ಜಾಕ್ ಮಾ’ ತಪ್ಪು ಮಾಡಿದ್ದರೂ ಸಹ ಜಗತ್ತು ಚೀನಾವನ್ನು ನಂಬುವುದಿಲ್ಲ, ಆತನನ್ನು
ನಂಬುತ್ತದೆ. ತನಗಾಗದವರನ್ನು ಸದ್ದಿಲ್ಲದೇ ಒಳಗೊಳಗೇ ಹೊರಜಗತ್ತಿಗೆ ತಿಳಿಯದ ರೀತಿಯಲ್ಲಿ ಮುಗಿಸುವ ಕಲೆ ಚೀನಾದ
ಕಮ್ಯುನಿಸ್ಟ್ ನಾಯಕನಿಗಿದೆ. ತಮ್ಮ ದೇಶದೊಳಗಿನ ಪ್ರತಿಯೊಂದು ವಿದ್ಯಮಾನವನ್ನೂ ಅನುಮಾನದಿಂದಲೇ ನೋಡುವ ಕಮ್ಯುನಿಸ್ಟರು ‘ಜಾಕ್ ಮಾ’ನ ಜನಪ್ರಿಯತೆಯನ್ನು ಸಹಿಸಲಾಗದೇ ಏನಾದರೂ ಮಾಡಿರಬಹುದೆಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.