ತುಂಟರಗಾಳಿ
ಸಿನಿಗನ್ನಡ
ಕನ್ನಡಕ್ಕೆ ಡಬ್ಬಿಂಗ್ ಶುರು ಆದ ಮೇಲೆ ಹಿಂದಿ, ತಮಿಳು, ತೆಲುಗು ಮಲಯಾಳಂ ಸಿನಿಮಾಗಳು ನಮ್ಮ ಭಾಷೆಯಲ್ಲಿ
ಬರುತ್ತಿವೆ. ಆದರೆ ಅವುಗಳ ಆರ್ಭಟ ಓಟಿಟಿಗಳ ಹೆಚ್ಚು. ಚಿತ್ರಮಂದಿರಗಳಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಕಾಣಸಿಗುತ್ತಿವೆ.
ಹೀಗಿರುವಾಗ ನಮ್ಮ ಕನ್ನಡ ನಿರ್ಮಾಪಕ ಜಾಕ್ ಮಂಜು ಒಂದು ಹೆಜ್ಜೆ ಮುಂದೆ ಹೋಗಿ, ಗುಜರಾತಿ ಸಿನಿಮಾ ಒಂದನ್ನು ಕನ್ನಡಕ್ಕೆ ತಂದಿದ್ದಾರೆ. ಕಲೆಗೆ ಭಾಷೆಯ ಹಂಗಿಲ್ಲ. ಪ್ಯಾನ್ ಇಂಡಿಯಾ ಕಾನ್ಸೆ ಬಂದ ಮೇಲಂತೂ ಸಿನಿಮಾ ಗಳು ಭಾಷೆಯ ಗಡಿದಾಟಿವೆ. ಬೇರೆ ಬೇರೆ ಭಾಷೆಯ ಸಿನಿಮಾಗಳು ಎಲ್ಲಾ ಕಡೆ ಬಿಡುಗಡೆಯಾಗುತ್ತಿವೆ. ಎಲ್ಲ ನಿಜ. ಆದರೆ ಜಾಕ್ ಮಂಜು ಅವರಿಗೆ ಈ ಗುಜರಾತಿ ಚಿತ್ರವನ್ನು ಯಾಕೆ ಕನ್ನಡಕ್ಕೆ ಡಬ್ ಮಾಡಬೇಕು ಅನ್ನಿಸಿತು ಅಂತ ಗೊತ್ತಿಲ್ಲ.
ಆದರೆ ಈಗ ಗುಜರಾತಿ ಸಿನಿಮಾವೊಂದು ರಾಯರು ಬಂದರು ಮಾವನ ಮನೆಗೆ ಎನ್ನೋ ಹೆಸರಿನಲ್ಲಿ ಕನ್ನಡದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜುಲೈ ೭ರಂದು ರಾಯರು ಬಂದರು ಮಾವನ ಮನೆಗೆ ಚಿತ್ರ ಕನ್ನಡ ಪ್ರೇಕ್ಷಕರ ಎದುರು ಬರಲಿದೆ. ನಿರ್ಮಾಪಕರು ಹಾಗೂ ವಿತರಕರು ಆಗಿರುವ ಜಾಕ್ ಮಂಜು ನಾವು ಕನ್ನಡ ಸಿನಿಮಾಗಳನ್ನು ಮಾಡಿ ಅನ್ಯ ಭಾಷೆಗೆ ಡಬ್ ಮಾಡುತ್ತೇವೆ.
ನಮ್ಮ ಬಹಳಷ್ಟು ಸಿನಿಮಾಗಳು ಗೆದ್ದು ಇವತ್ತು ಕನ್ನಡ ಭಾಷೆ ಹಾಗೂ ಕನ್ನಡ ಸಿನಿಮಾಗಳಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಗೌರವ ತಂದುಕೊಟ್ಟಿವೆ. ಬೇರೆಯವರಿಗೂ ಅದೇ ರೀತಿ ಸ್ವಾಗತವನ್ನು ಕನ್ನಡಿಗರು ಕೋರಬೇಕು ಅಂತ ಹೇಳಿದ್ದಾರೆ. ಆದರೆ ಕನ್ನಡ ಭಾಷೆಗೆ ತರಲೇಬೇಕು ಎನ್ನುವಂಥ ಯಾವ ವಿಶೇಷ ಕಥೆ ಈ ಚಿತ್ರದಲ್ಲಿದೆ ಅನ್ನೋದು ಗೊತ್ತಿಲ್ಲ. ಅದರ ಜೊತೆಗೆ ಕನ್ನಡಿಗರು ಮುಗಿಬಿದ್ದು ನೋಡುವಂಥ ಸ್ಟಾರ್‌ಕಾ ಕೂಡಾ ಈ ಚಿತ್ರದಲ್ಲಿ ಇಲ್ಲ. ಆದರೂ ಒಟ್ಟಿನಲ್ಲಿ ಗುಜರಾತಿ ಮಾಡೆಲ್ ಈಗ
ಚಲನಚಿತ್ರಗಳ ವಿಷಯದಲ್ಲೂ ಕರ್ನಾಟಕಕ್ಕೆ ಕಾಲಿಟ್ಟಿದೆ ಅಂತ ಮಾತ್ರ ಹೇಳಬಹುದು.
ಲೂಸ್ ಟಾಕ್
ಬಸ್ ಕಂಡಕ್ಟರ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಇವತ್ತಿಂದ ಗಂಡ್ ಮಕ್ಳಿಗೆ ೫೦ ಪರ್ಸೆಂಟ್ ಸೀಟ್ ಮೀಸಲು, ಹೆಣ್ಮಕ್ಳಿಗೆ ಟಿಕೆಟ್ ಇಲ್ಲ, ನಿಮ್ ಕೆಲ್ಸ ಅರ್ಧ ಕಮ್ಮಿ ಆಯ್ತಲ್ಲ?
-ಹೌದು, ಆದ್ರೆ, ಅರ್ಧ ಕೆಲ್ಸ ಮಾಡ್ತೀವಿ ಅಂತ ನಮ್ಮನ್ನ ಜನ ಇನ್ಮೇಲೆ ಸೆಮಿ- ಕಂಡಕ್ಟರ್ ಅಂತ ಕರೀತಾರೆ ಅನ್ನೋದೇ ಬೇಜಾರು
ಆದ್ರೂ, ಬರೀ ಹೆಣ್ಮಕ್ಳಿಗೆ ಮಾತ್ರ ಫ್ರೀ ಮಾಡಿದ್ದು ಮೋಸ ಅಲ್ವಾ ಸರ್?
-ಈಗೇನು, ಎರಿಗೂ ಪ್ರೀ ಮಾಡಿ, ನಮ್ಮ ಕೆಲಸಕ್ಕೆ ಕುತ್ತು ತರಬೇಕು ಅಂತನಾ ನಿಮ್ಮ ಅಭಿಪ್ರಾಯ?
ಹಂಗಲ್ಲ ರೀ, ಪಾಪ ಗಂಡ್ ಮಕ್ಳ್ ಮನ್ಸಿಗೆ ಬೇಜಾರ್ ಆಗಲ್ವಾ. ಎಲ್ಲದ್ರಲ್ಲೂ ಬರೀ ಹೆಂಗಸರಿಗೇ ಮೀಸಲಾತಿ ಅಂತ
-ಅದೂ ನಿಜಾನೇ..ಏನ್ ಮಾಡೋದು, ಈ ಸಾರಿಗೆ ಸಂಸ್ಥೆನಾ, ಕರ್ನಾಟಕ ರಾಜ್ಯ ಸ್ಯಾರಿಗೆ ನಿಗಮ ಅಂತ ಹೆಸರು ಬದಲಾಯಿಸೋಕೆ ಹೇಳ್ಬೇಕು ನಮ್ ಸಿದ್ರಾಮಯ್ಯನೋರಿಗೆ
ಅದ್ಸರಿ, ಸಿದ್ರಾಮಯ್ಯನೋರು ಒಂದ್ ದಿನದ ಮಟ್ಟಿಗೆ ಇವತ್ತು ತಾವೇ ಕಂಡಕ್ಟರ್ ಆಗ್ತಾರಂತಲ್ಲ?
-ಹಂಗಾದ್ರೆ, ನನ್ನೂ ಒಂದ್ ದಿನದ ಮಟ್ಟಿಗೆ ಸಿಎಂ ಮಾಡ್ಲಿ. ಸಿದ್ರಾಮಯ್ಯನೋರ್ ಕೆಲ್ಸನ ಪರ್ಮನೆಂಟ್ ಮಾಡಿಬಿಡ್ತೀನಿ.
ಸರಿ, ಇನ್ಮೇಲೆ ಹೆಣ್ಮಕ್ಳು ಬಸ್ನಲ್ಲಿ ಓಡಾಡೋದು ಜಾಸ್ತಿ ಆಗಲ್ವೇ..ಈ ಹೊಸ ರೂಲ್‌ನ ನೀವು ಹೇಗೆ ನಿಭಾಯಿಸ್ತೀರಿ?
-ಏನಿಲ್ಲ ತುಂಬಾ ಸಿಂಪಲ, ಮೊದ್ಲೆ ನಮ್ಮ ಬಸ್‌ಗಳಿಗೆ ಗಂಡ್ ಮಕ್ಳು ಓಡಿ ಬಂದು ಹತ್ಕೊಬೇಕಾಗಿತ್ತು. ಅದೇ, ಹೆಣ್ಮಕ್ಳು ಎಲ್ ಕೈ ತೋರಿಸಿದ್ರೂ ನಿಲ್ಲಿಸ್ತಿದ್ವಿ, ಈಗ ಹೆಣ್ಮಕ್ಳು ಕಾಣಿಸಿದ್ರೆ ಸುಮ್ನೆ ರೈಟ್ ರೈಟ್ ಅಂತ ಹೋಗ್ತಾ ಇರೋದೇ..
ನೆಟ್ ಪಿಕ್ಸ್
ದೊಡ್ಡ ಸಾಹುಕಾರನಾಗಿದ್ದ ಖೇಮುಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದರು. ಖೇಮು ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್‌ಗೆ ಬೇಕಾದ ದುಡ್ಡನ್ನೆ ಸುಲಭವಾಗಿ ಹೊಂದಿಸಿಬಿಟ್ಟಿದ್ದ. ಆದರೆ ಒಂದು ಸಮಸ್ಯೆ ಎದುರಾಗಿತ್ತು. ಖೇಮುದು ಒಂದು ಅಪರೂಪದ ಬ್ಲಡ್ ಗ್ರೂಪ್ ಆಗಿತ್ತು. ಆಪರೇಶನ್ ಸಮಯದಲ್ಲಿ ಬ್ಲಡ್ ತುಂಬಾ ಹೋಗುತ್ತೆ. ಆ ಗ್ರೂಪ್ ಬ್ಲಡ್ ಸ್ಟಾಕ್ ಇರಬೇಕು ಅಂದ್ರು ಡಾಕ್ಟರ್. ಆದರೆ ದಾನಿಗಳು ಯಾರೂ ಸಿಗಲಿಲ್ಲ. ಕೊನೆಗೆ ಒಬ್ಬ ಸೇಟು ತಾನು ಬ್ಲಡ್ ಕೊಡ್ತೀನಿ ಅಂತ ಮುಂದೆ ಬಂದ. ಖೇಮುಗೆ ಸಮಾಧಾನ
ಆಯ್ತು. ಆಗ ತನಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವ ಸೇಟುಗೆ ಏನಾದ್ರೂ ಕೊಡಬೇಕು ಅಂತ ಖೇಮು ಅವನಿಗೆ ಒಂದು ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ಅವನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ಕೊಟ್ಟ. ಆಪರೇಷನ್ ಆಯ್ತು. ಖೇಮು ಸುಧಾರಿಸಿಕೊಂಡ.
ಆದರೆ ಕೆಲವೇ ದಿನಗಳಲ್ಲಿ ಖೇಮುಗೆ ಮತ್ತೆ ಹುಷಾರು ತಪ್ಪಿ ಮತ್ತೆ ಆಪರೇಷನ್ ಮಾಡಬೇಕಾಯ್ತು. ಈ ಬಾರಿ ಕೂಡ ಸೇಟು ಬ್ಲಡ್ ಕೊಟ್ಟ. ಆಪರೇಷನ್ ನಂತರ ಖೇಮು ಸೇಟುಗೆ ಒಂದು ಥ್ಯಾಂಕ್ ಯೂ ಕಾರ್ಡ್ ಜೊತೆಗೆ ಒಂದು ಸಣ್ಣ ಚಾಕೋಲೇಟ್ ಬಾP ಕಳುಹಿಸಿದ. ಸೇಟುಗೆ ಬೇಜಾರಾಯ್ತು. ಅವನು ಖೇಮುಗೆ ಕಾಲ್ ಮಾಡಿ ಏನಿದು, ಕಳೆದ ಬಾರಿ ನೋಡಿದ್ರೆ, ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ನನ್ನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಕೊಟ್ಟಿದ್ರಿ, ಈ ಸಲ ಬರೀ ಕಾರ್ಡ್, ನಾಲಕ್ ಚಾಕ
ಲೇಟು ಅಷ್ಟೇನಾ? ಅಂದ. ಅದಕ್ಕೆ ಖೇಮು ಹೇಳಿದ ಏನ್ ಮಾಡೋದು ಬ್ರದರ್, ಈಗ ನನ್ನ ಮೈಯಲ್ಲಿ ಹರೀತಿರೋದು ಸೇಟು ರಕ್ತ.
ಲೈನ್ ಮ್ಯಾನ್
ನಮ್ಮ ಪ್ರೀತಿಯ ರಾಮು ಸಿನಿಮಾ ನೋಡಿ ದರ್ಶನ್ ಅಭಿಮಾನಿಯಾದವನು
-‘ಅಂಧಾ’ ಭಿಮಾನಿ
ಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆ
-ಹೋಮ್ ಡಿಲೆವರಿ
ಪೊಲೀಸರೇ ಹೆಚ್ಚಾಗಿ ಇರುವ ಜಾಗ
-ಪೊಲೀಸ್ ‘ಬೆಲ್ಟ್’
ಆಸ್ತಿಕರನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೊಂದು ಧಾರ್ಮಿಕ ಹೆಸರು
-‘ಉರುಳು’ ಸೇವೆ
೧೦೦ಕ್ಕೆ ನೂರು ಅಂಕ ತೆಗೆಯುವ ವಿದ್ಯಾರ್ಥಿ
-‘ಉತ್ತರ’ ಕುಮಾರ
ಕಣ್ಣೀರಿಗೆ ಕಾರಣ ಏನು?
-‘ಕ್ರೈ’ ಸಿಸ್
ಮನೆಯಲ್ಲಿ ಸಾಕಿದ ಕೋಳಿ ಸತ್ರೆ ಶ್ರದ್ಧಾಂಜಲಿ ಸಲ್ಲಿಸುವ ಬಗೆ
-ರೆ ಇನ್ ‘ಪೀಸ್’
ದೇವರುಗಳೂ ನಂಬಿದ ಭಕ್ತರಿಗೆ ವೆರೈಟಿ, ವೆರೈಟಿ ಮೋಸ
ಮಾಡ್ತಾರೆ
-ಅದಕ್ಕೇ ಹೇಳೋದು, ದೇವನೊಬ್ಬ ‘ನಾಮ’ ಹಲವು
ರಾಜ್ ಕುಮಾರ್ ಅಭಿಮಾನಿ- ಅಭಿಮಾನಿ ದೇವರು
ಶಂಕರ್ ನಾಗ್ ಅಭಿಮಾನಿ- ಅಭಿಮಾನಿ ಡ್ರೈವರು