Friday, 18th October 2024

ಜಗ್ಗೇಶ್ ಬರಿ ತೋತಾಪುರಿ ಅಲ್ಲ, ನವರಸಪುರಿ ಮಾವಿನ ಹಣ್ಣು !

ಹರಿ ಪರಾಕ್

ಜಗ್ಗೇಶ್ ಅವರು ಮಾತನಾಡಿರುವ ಆ ಆಡಿಯೊಗೆ ಹಲವು ಆಯಾಮಗಳಿವೆ. ಅದರಲ್ಲಿ ಅವರು ಕೇವಲ ದರ್ಶನ್ ಅಭಿಮಾನಿಗಳ ಬಗ್ಗೆ ಮಾತ್ರ ಮಾತನಾಡಿಲ್ಲ. ಇಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಅವರೊಂದಿಗೆ ಅವರ ಚಿತ್ರಕ್ಕೆ ಪ್ರಚಾರ ಕೊಟ್ಟ ವೆಬ್‌ಸೈಟ್ ಒಂದರ ಕೆಲಸಗಾರನಿಗೆ ಮಾಡಿದ ಕೆಲಸಕ್ಕೆ ಹಣ ಕೊಡುವಂತೆ ಕಳಕಳಿಯಿಂದ ಹೇಳಿzರೆ. ಅದರ ಜತೆಗೆ ಅವರು ಒಂದೆರಡು ಪತ್ರಿಕೆಗಳ ಬಗ್ಗೆಯೂ ಮಾತನಾಡಿzರೆ. ಅದು ಈ ವಿವಾದದ ಕಿಡಿಯನ್ನು ಹೆಚ್ಚಿಸಿದೆ.

ಹಿರಿಯ ನಟ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳು ಈಗ ಜಗ್ಗೇಶ್ ಅವರಿಗೆ ಅನವಶ್ಯಕ ಕಿರಿಕಿರಿ ಉಂಟು ಮಾಡುತ್ತಿರೋದು ಗಾಂಧಿನಗರದ ಹಾಟ್ ಸುದ್ದಿ. ನಿರ್ಮಾಪಕ ವಿಖ್ಯಾತ್ ಗೌಡ ಅವರೊಂದಿಗೆ ಜಗ್ಗೇಶ್ ಆಡಿದ
ಮಾತಿನ ಆಡಿಯೊದ ಸೌಂಡ್ ಎಫೆಕ್ಟ್ ಈಗ ಎಡೆ ಸದ್ದು ಮಾಡುತ್ತಿದೆ.

ಮೈಸೂರಿನ ಬನ್ನೂರಿನಲ್ಲಿ ಜಗ್ಗೇಶ್ ಅವರ ‘ತೋತಾಪುರಿ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಅವರಿಂದ (ಬಲವಂತವಾಗಿ) ಕ್ಷಮೆ ಕೇಳಿಸಿದ್ದಾರೆ. ಈ ಮೂಲಕ ನಟನೊಬ್ಬನ ಅಭಿಮಾನಿಗಳ ಮೂಲಕ
ಗಾಂಽನಗರದಲ್ಲಿ ಹೊಸ ಹಾಕ್ಯಾಟ ಶುರುವಾಗಿದೆ. ಜಗ್ಗೇಶ್ ಮತ್ತು ನಿರ್ಮಾಪಕ ವಿಖ್ಯಾತ್‌ನ ಮಧ್ಯೆ ನಡೆದ ಸಂಭಾಷಣೆಯನ್ನು ವಿಶ್ವವಿಖ್ಯಾತ ಮಾಡಿದ್ದು ಯಾರು ಎಂಬ ಪ್ರಶ್ನೆ ಸಹಜ. ಈ ಆಡಿಯೊ ರೆಕಾರ್ಡಿಂಗ್ ಈ ಇಬ್ಬರ ಬಳಿ ಮಾತ್ರ ಇರೋಕೆ ಸಾಧ್ಯ. ಜಗ್ಗೇಶ್ ಸಹಜವಾಗಿಯೇ ಇದನ್ನು ಯಾರಿಗೂ ಕಳಿಸಿರೋದಿಲ್ಲ. ಹಾಗಾಗಿ ಈ ಕೆಲಸ ವಿಖ್ಯಾತ್‌ನದ್ದೇ. ಆದರೆ, ಈ ಆಡಿಯೊವನ್ನು ವಿಖ್ಯಾತ್ ಪತ್ರಕರ್ತನೊಬ್ಬರಿಗೆ ಕಳಿಸಿ, ಅವನು ಅದನ್ನು ಊರಿಗೆ ಹಂಚಿದ್ದಾನೆ ಎಂಬ ಸುದ್ದಿ ಇದೆ.

ಅನೇಕ ಸಂದೇಹಗಳು: 58 ವರ್ಷ ವಯಸ್ಸಿನ, ಚಿತ್ರರಂಗದಲ್ಲಿ 40 ವರ್ಷಗಳ ಅನುಭವ ಇರುವ ಹಿರಿಯ ನಟ ಜಗ್ಗೇಶ್ ಅವರ ವಿರುದ್ಧ ಏಕಪಕ್ಷೀಯವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಗಮನಿಸಿದವರಿಗೆ ಅನೇಕ ಸಂದೇಹಗಳು ಬರುತ್ತಿವೆ.
ಇದರ ಜತೆಗೆ ಈ ಸಂದರ್ಭ ಜಗ್ಗೇಶ್ ಅವರ ರಾಜಕೀಯ ವಿರೋಧಿಗಳಿಗೆ ಕೂಡಾ ಹಬ್ಬವಾಗಿದೆ. ಅವರು ಬಿಜೆಪಿ ಪಕ್ಷದವರು ಎಂಬ ಕಾರಣ ಇಟ್ಟುಕೊಂಡು ಕೆಲವು ರಾಜಕೀಯ ವಿರೋಧಿಗಳು ಅವರ ಕಾಲೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ.

ಬಹಳಷ್ಟು ಜನಗಳ ವಿರೋಧಕ್ಕೆ ಇದೇ ಕಾರಣ ಆಗಿರೋದು ಇಂದಿನ ರಾಜಕೀಯ ದುರಂತ. ನೆನಪಿರಲಿ, ಜಗ್ಗೇಶ್ ಅಂದ್ರೆ ಜನರಿಗೆ ನೆನಪಾಗೋದು ಅವರೊಬ್ಬ ನಟ ಅಂತ, ರಾಜಕಾರಣಿ ಅಂತಲ್ಲ. ನಟ ಅನ್ನೋದು ಅವರ ಐಡೆಂಟಿಟಿ. ದರ್ಶನ್ ಅಭಿಮಾನಿ ಗಳನ್ನು ಬಿಡಿ. ಅವರಿಗೆ ಇದೇನೂ ಹೊಸತಲ್ಲ. ಅವರು ಸ್ವಲ್ಪ ಟೀಕೆ ಮಾಡಿದರೂ ಸಹಿಸಿಕೊಳ್ಳುವುದಿಲ್ಲ. ಅದು ಸಮಾಜ ಇರಲಿ, ಸಾಮಾಜಿಕ ಜಾಲತಾಣ ಇರಲಿ. ದರ್ಶನ್ ಸಿನಿಮಾ ಚೆನ್ನಾಗಿಲ್ಲ ಅಂತ ಬರೆದ ಅನೇಕ ಪತ್ರಕರ್ತರಿಗೂ ಈ ಅನುಭವ ಆಗಿದೆ.
ಅವರ ಒಂದು ಸಿನಿಮಾ ಇಷ್ಟ ಆಗಲಿಲ್ಲ, ಇದರ ರಿವ್ಯೂ ಬರೀತೀನಿ ಅಂತ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಕ್ಕೇ, ಆ ರಿವ್ಯೂ ಬರೆಯದಂತೆ ಪತ್ರಕರ್ತನೊಬ್ಬನ ಮೇಲೆ ವೈಯಕ್ತಿಕ ನಿಂದನೆಗೆ ಇಳಿದ ಉದಾಹರಣೆಗಳೂ ಇವೆ. ಇರಲಿ ಬಿಡಿ. ಆದರೆ, ಉಳಿದವರಿಗೆ ಏನಾಗಿದೆ ಅನ್ನೋದು ಇಲ್ಲಿ ಕೇಳಬೇಕಾದ ಪ್ರಶ್ನೆ.

ಚಿತ್ರರಂಗದ ಮೇಲಿರುವ ಪ್ರೀತಿ: ಜಗ್ಗೇಶ್ ಅವರಿಗೂ ಬೇಕಾದಷ್ಟು ಅಭಿಮಾನಿ ಸಂಘಗಳು ಇವೆ. ಆದರೆ, ಅವರಿಗೆ ದುಡ್ಡು ತಗೊಂಡು ಕೆಲಸ ಮಾಡುವ ಅಭಿಮಾನಿ ಸಂಘಗಳು ಇಲ್ಲ, ಅವರದ್ದೇನಿದ್ದರೂ ಪ್ರಾಮಾಣಿಕ ಅಭಿಮಾನಿಗಳು. ಜಗ್ಗೇಶ್ ನೇರ ನುಡಿಯ, ಪ್ರಾಮಾಣಿಕ ಮಾತಿನ ಮನುಷ್ಯ. ಮನುಷ್ಯತ್ವಕ್ಕೆ ಬೆಲೆ ಕೊಡುವ ಭಾವನಾ ಜೀವಿ. ಒಮ್ಮೊಮ್ಮೆ ಅವರ ಮಾತಿನಲ್ಲಿ ಅತಿರೇಕ ಕಂಡುಬಂದರೆ ಅದಕ್ಕೆ ಅವರಿಗೆ ಚಿತ್ರರಂಗದ ಮೇಲಿರುವ ಪ್ರೀತಿ ಕಾರಣ. ಅವರು ಅಪ್ಪನ ಹೆಸರು ಹೇಳಿಕೊಂಡು ಚಿತ್ರರಂಗದಲ್ಲಿ ಬೆಳೆದವರಲ್ಲ.

ನಮ್ಮಪ್ಪ ಚಿತ್ರರಂಗದಲ್ಲಿ ಎಷ್ಟು ಹೆಸರು ಮಾಡಿದರೂ ಅವರಿಗೆ ಬೆಲೆ ಸಿಗಲಿಲ್ಲ, ನನಗೆ ಯಾರೂ ಅವಕಾಶ ಕೊಡುತ್ತಿಲ್ಲ, ನನ್ನನ್ನು ತುಳಿಯುತ್ತಿದ್ದಾರೆ ಎಂದು ದೂರು ಹೇಳಿಕೊಂಡು ಬೆಳೆದವರಲ್ಲ. ಚಿತ್ರರಂಗದಲ್ಲಿ ಆದ ಎಲ್ಲ ಅವಮಾನಗಳನ್ನು ಅವರು ಇಂದಿಗೂ ನಗು ನಗುತ್ತಲೇ ಹೇಳಿಕೊಂಡು ಬದುಕುತ್ತಾರೆ. ಇಲ್ಲಿ ಅವೆಲ್ಲ ಸಹಜ ಅನ್ನೋದು ಮಾಗಿದ ಅವರ ಅನುಭವಕ್ಕೆ ಗೊತ್ತು. ಸ್ಪುರದ್ರೂಪಿ ಅಲ್ಲದಿದ್ದರೂ ತಮ್ಮ ಫ್ಯೂಸ್ ವ್ಯಾಲ್ಯೂದಿಂದಲೇ, ತಮ್ಮ ನಟನಾ ಕೌಶಲ್ಯದಿಂದಲೇ, ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರಬಲ್ಲ ತಾಕತ್ತಿರುವ ನಟ.

ಜತೆಗೆ ಸ್ನೇಹ ಜೀವಿ. ಕನ್ನಡ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಹೆಸರು ಇದ್ದರೆ ಸಾಕು. ಸಿನಿಮಾ ನಾವು ಕೊಟ್ಟ ದುಡ್ಡಿಗೆ ಮೋಸ ಮಾಡಲ್ಲ ಅನ್ನೋ ನಂಬಿಕೆ ಎಲ್ಲರದು. ಅಂಥದ್ದೇ ಹೆಸರು ಜಗ್ಗೇಶ್ ಅವರದ್ದು. ಇಷ್ಟು ವರ್ಷಗಳ ಕಾಲ ಕನ್ನಡದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳೋದು ಸಾಮಾನ್ಯ ವಿಷಯ ಅಲ್ಲ. ಅವರ ಸಂಭಾಷಣೆಯಲ್ಲಿ ಡಬಲ್ ಮೀನಿಂಗ್ ಇರುತ್ತೆ ಅಂತೆ ಏನೇ ರಾಗಗಳನ್ನು ಹಾಡಿದರೂ ಕೊನೆಗೆ ಜಗ್ಗೇಶ್ ಅವರ ಅಭಿನಯ ಇಷ್ಟ ಇಲ್ಲ ಎನ್ನುವ ಒಬ್ಬ ಕನ್ನಡಿಗನೂ ಬಹುಶಃ ಸಿಗಲಾರನು. ಇನ್ನು ಜಟಾಪಟಿ ಬೇಡ ಅಂತ ಜಗ್ಗೇಶ್ ಸಮಜಾಯಿಷಿ ಕೊಡಲು ಯತ್ನಿಸಿದ್ದರು.

ಆದರೆ, ಅಂದು ನಾನು ಹೇಳಿದ್ದರಲ್ಲಿ ಏನು ತಪ್ಪಿದೆ ಎಂದೇ ಜಗ್ಗೇಶ್ ವಾದ ಮಾಡಬಹು ದಿತ್ತು. ಅವರು ಹಾಗೇ ಮಾಡಬೇಕಿತ್ತು ಕೂಡ. ಹಾಗೆ ನೋಡಿದರೆ, ದರ್ಶನ್ ಬಗ್ಗೆ ಜಗ್ಗೇಶ್ ಯಾವ ಕೆಟ್ಟ ಮಾತನ್ನೂ ಆಡಿಲ್ಲ. ಅವರು ಮಾತನಾಡಿರೋದು ದರ್ಶನ್ ಅವರ ಜತೆಗೆ ಇದ್ದು, ಅವರನ್ನು ಮಿಸ್ ಯೂಸ್ ಮಾಡಿಕೊಳ್ಳುವವರ ಬಗ್ಗೆ. ಅದರಲ್ಲಿ ತಪ್ಪೇನಿಲ್ಲ. ಎಲ್ಲ ನಟರ ಹಿಂದೆಯೂ ಇಂಥವರು ಇದ್ದೇ ಇರುತ್ತಾರೆ. ಹಾಗಾಗಿ ಅಂಥವರಿಂದ ಹುಷಾರಾಗಿರುವಂತೆ ಜಗ್ಗೇಶ್ ಅವರಂಥ ಹಿರಿಯ ನಟರೊಬ್ಬರು ದರ್ಶನ್‌ಗೆ ಹೇಳಿದ ಕಿವಿಮಾತು ಅದು ಎಂದುಕೊಳ್ಳಬಹುದಿತ್ತು ಹಾಗೂ ಒಂದೊಮ್ಮೆ ಜಗ್ಗೇಶ್, ದರ್ಶನ್ ಬಗ್ಗೆ ತಪ್ಪು ಮಾತನಾಡಿ
ದ್ದರೆ ಅದನ್ನು ಪ್ರಶ್ನಿಸಬೇಕಾಗಿದ್ದು, ಖುದ್ದು ದರ್ಶನ್ ಹೊರತು ಅಭಿಮಾನಿಗಳು ಎಂಬ ಹಣೆಪಟ್ಟಿ ಹೊತ್ತುಕೊಂಡ ವರಲ್ಲ.

ಇಂಥ ಬೆಳವಣಿಗೆಗಳನ್ನು ಯಾರಾದರೂ ಎಂಜಾಯ್ ಮಾಡಿದರೆ ನಾಳೆ ಯಾರೇ ದೊಡ್ಡವರು ಏನೇ ಮಾತನಾಡಿ ದರೂ,
ಹಾದಿಬೀದಿಯಲ್ಲಿ ಜಗ್ಗೇಶ್‌ಗೆ ಆದ ಅನುಭವವೇ ಆಗುತ್ತದೆ. ಆಗ ಇಂದು ಅದಕ್ಕೆ ಸಪೋರ್ಟ್ ಮಾಡಿದವರೇ ಅದಕ್ಕೆ ಗುರಿ ಯಾಗುವ ಸನ್ನಿವೇಶ ಕೂಡಾ ಬರುತ್ತದೆ. ಒಂದು ವೇಳೆ ಜಗ್ಗೇಶ್ ಅವರ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಆಗಲೂ ತಮ್ಮ ಮನಸ್ಥಿತಿ ಹೀಗೇ ಇರುತ್ತಿತ್ತಾ, ಅವರೊಂದಿಗೂ ನಾವು ಹೀಗೇ ವರ್ತಿಸುತ್ತಿದ್ದೆವಾ ಎಂದು ದರ್ಶನ್ ಅಭಿಮಾನಿಗಳು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕು.

ಜಗ್ಗೇಶ್ ಜತೆ ಜಗಳವಾಡಿದ ದರ್ಶನ್ ಅಭಿಮಾನಿಗಳು, ದರ್ಶನ್‌ಗೆ ನಾನು ಸಪೋರ್ಟ್ ಮಾಡಿದ್ದೇನೆ ಎಂದು ಜಗ್ಗೇಶ್ ಹೇಳಿದಾಗ ನಿಮ್ಮ ಸಪೋರ್ಟ್ ಎಲ್ಲ ಬೇಕಿಲ್ಲ ಎನ್ನುವಂತೆ ಮಾತಾಡಿದ್ದಾರೆ. ಹಾಗಾದ್ರೆ ದರ್ಶನ್ ಏನು, ಯಾರ ಸಪೋರ್ಟ್ ಇಲ್ಲದೆ ಈ ಮಟ್ಟಕ್ಕೆ ಬೆಳೆದು ಬಿಟ್ಟರಾ, ಸಿನಿಮಾಗಳಲ್ಲಿ ಏನೇ ಡೈಲಾಗ್ ಹೊಡೆದರೂ ಚಿತ್ರರಂಗದಲ್ಲಿ ಜಗ್ಗೇಶ್ ಅವರಂಥ ಹಿರಿಯ ನಟರು
ಆಯಾ ಕಾಲಘಟ್ಟ ದಲ್ಲಿ ಕಿರಿಯರಿಗೆ ಕೊಟ್ಟ ಬೆಂಬಲ ದಿಂದಲೇ ಮುಂದಿನ ಪೀಳಿಗೆಯ ಸ್ಟಾರ್‌ಗಳು ಹುಟ್ಟೋದು ಅನ್ನೋ ವಿಷಯ ಹಾಗೆ ಮಾತನಾಡುವ ವರಿಗೆ ಗೊತ್ತಿರಬೇಕು.

ಈ ವಿಷಯದ ಬಗ್ಗೆ ಮಾತನಾಡುವವರು ಚಿತ್ರರಂಗದಲ್ಲಿ ಜಗ್ಗೇಶ್ ಅನುಭವ ಮತ್ತು ದರ್ಶನ್ ಅನುಭವ ಹಾಗೂ ಅವರ ಅಭಿಮಾನಿಗಳ ಅನುಭವ ಎಲ್ಲವನ್ನೂ ಗಮನಿಸಬೇಕು. ಜಗ್ಗೇಶ್ ಪೀಕ್‌ನಲ್ಲಿ ಇದ್ದಾಗ ಅವರ ಚಿತ್ರಗಳು ದುಡಿದ ದುಡ್ಡನ್ನು ಇವತ್ತಿನ ಲೆಕ್ಕದಲ್ಲಿ ನೋಡಿದರೆ ಅದೂ ಕೂಡ ಕೋಟಿಗಳ ಲೆಕ್ಕ ದಾಟುತ್ತದೆ. ಈಗಿನ ಸ್ಟಾರ್‌ಗಳು 3 ದಿನದಲ್ಲಿ ಕೋಟಿ ರು. ಗಳಿಕೆ
ಮಾಡಿದ ತಕ್ಷಣ ಅವರು ಹಿರಿಯ ನಟರಿಗಿಂತ ದೊಡ್ಡವರಾಗುವುದಿಲ್ಲ.

ಸಾಕಷ್ಟು ಬೆಳೆದಿರುವ ಇಂದಿನ ಮಾರ್ಕೆಟ್‌ನಲ್ಲಿ 3 ದಿನದ ಕಲೆಕ್ಷನ್ ನಂಬಿರುವವರೇ ಇಷ್ಟು ಮಾತನಾಡಿದರೆ ಆ ಕಾಲದ, ಅಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮದೇ ರಾಜ್ಯಭಾರ ಮಾಡಿದ ವರಿಗೆ, ಇಂಥದೊಂದು ಮಾರ್ಕೆಟ್ ಅನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟವರಿಗೆ, ಇನ್ನೆಂಥ ಘನತೆ ಇರಬೇಡ? ಒಟ್ಟಿನಲ್ಲಿ ಜಗ್ಗೇಶ್ ಅವರ ಶೂಟಿಂಗ್ ಜಾಗಕ್ಕೆ ಹೋಗಿ ಗಲಾಟೆ ಮಾಡಿದೆವು ಅಂತಲೂ, ಅದರಿಂದ ಜಗ್ಗೇಶ್ ಅವರಿಗೆ ಅವಮಾನ ಮಾಡಿದೆವು ಅಂತಲೂ ಯಾರಾದರೂ ಅಂದುಕೊಂಡಿದ್ದರೆ, ಖುಷಿ ಪಟ್ಟಿದ್ದರೆ ಅದು ಅವರ ದಡ್ಡತನ ಅಷ್ಟೇ. ಯಾಕಂದ್ರೆ 40 ವರ್ಷಗಳ ಚಿತ್ರಜೀವನ ದಲ್ಲಿ ಅದೆಲ್ಲವನ್ನೂ ಮೀರಿ ಬೆಳೆದವರು
ಜಗ್ಗೇಶ್. ಗೊತ್ತಿರಲಿ, ಜಗ್ಗೇಶ್ ಅಂದ್ರೆ ಬರಿ ತೋತಾಪುರಿ ಅಲ್ಲ, ಅದು ಕನ್ನಡ ಚಿತ್ರರಂಗದ ನವ‘ರಸಪುರಿ’ ಮಾವಿನ ಹಣ್ಣು!

ಕ್ಷಮೆ ಕೇಳಿದ ದರ್ಶನ್
ಬೆಂಗಳೂರು: ದರ್ಶನ್ ಅಭಿಮಾನಿಗಳು, ಜಗ್ಗೇಶ್ ಅವರ ಚಿತ್ರೀಕರಣಕ್ಕೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕ್ಷಮೆ ಕೋರಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ದರ್ಶನ್, ವಿವಾದ ಯಾಕೆ ಭುಗಿಲೆದ್ದಿತು. ಹುಡುಗರು ಯಾಕೆ ಚಿತ್ರೀಕರಣಕ್ಕೆ ಮುತ್ತಿಗೆ ಹಾಕಿದರು ಎಂಬ ವಿಚಾರವೂ ಗೊತ್ತಾಗುತ್ತಿರಲಿಲ್ಲ. ಜಗ್ಗೇಶ್ ಸರ್ ಹಿರಿಯ ಕಲಾವಿದರು, ಅವರಿಗೆ ನೋವಾಗಬಾರದು. ನನ್ನ ಅಭಿಮಾನಿಗಳಿಂದ ನೋವಾಗಿದೆ, ಅವರ ಪರವಾಗಿ ನಾನೇ ಕ್ಷಮೆ ಕೋರು ತ್ತಿದ್ದೇನೆ ಎಂದಿದ್ದಾರೆ.

ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಾಗ ನಾನು ಊರಿನಲ್ಲಿ ಇರಲಿಲ್ಲ. ತಿರುಪತಿಯಲ್ಲಿದ್ದೆ. ಹಿರಿಯರು ಏನೋ ಮಾತನಾಡಿದ್ದಾರೆ ಬಿಡು ಎಂದು ಸುಮ್ಮನಾಗಿದ್ದೆ ಎಂದು ದರ್ಶನ್ ಹೇಳಿದ್ದಾರೆ. ನಾನೂ ಜಗ್ಗೇಶ್ ಅವರಿಗೆ ಕರೆ ಮಾಡುವ ಪ್ರಯತ್ನ ಮಾಡಿದೆ. ಕಾಲ್ ಕನೆಕ್ಟ್ ಆಗಲಿಲ್ಲ.ಆಗಿದ್ದರೆ ಅಂದೇ ನಾನು ಸಮಸ್ಯೆ ಪರಿಹರಿಸುತ್ತಿದ್ದೆ ಎಂದು ದರ್ಶನ್ ಹೇಳಿದ್ದಾರೆ.

ವಿಷ ಘಳಿಗೆ ಮರೆಯೋಣ
ದರ್ಶನ್ ಕ್ಷಮೆ ಕೋರಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಸಮಯ ಸಂದರ್ಭ ವಿಷ ಘಳಿಗೆ ಇಷ್ಟೆಲ್ಲ ಅವಾಂತರ ಮಾಡಿಸಿದೆ. ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ ಇದ್ದದ್ದೆ. ವಿಶಾಲ ಚಿಂತನೆಯ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ, ಕನ್ನಡಕ್ಕೆ ಒಗ್ಗಟ್ಟಿರಲಿ, ಈಗ ಮನಸ್ಸು ಹಗುರವಾಯಿತು. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.