Sunday, 8th September 2024

ಜೈಜವಾನ್ ಬರೀ ಜೈಕಾರವಲ್ಲ, ಜೀವನದ ರೀತಿ ಆಗಿಸಿದವರು

ತಿಳಿರುತೋರಣ

srivathsajoshi@yahoo.com

ನೆಗೆಟಿವ್ ಸುದ್ದಿಗಳನ್ನು, ಕಾಸು ಪ್ರಯೋಜನವಿಲ್ಲದ ಐಸ್‌ಬಕೆಟ್ ಚಾಲೆಂಜುಗಳನ್ನು, ಇನ್ನೊಂದು ಮತ್ತೊಂದು ಶೋ-ಆಫ್‌ಗಳನ್ನು ಫೇಸ್‌ಬುಕ್ ವಾಟ್ಸ್ಯಾಪ್‌ಗಳಲ್ಲಿ ಕಾಳ್ಗಿಚ್ಚಿನಂತೆ ಪಸರಿಸಲು ಉತ್ಸುಕರಾಗುವ ನಾವು ರಚನಾತ್ಮಕ ಲೋಕಕಲ್ಯಾಣದ ವಿಷಯಗಳಾದರೆ ಅನಾಸಕ್ತರಾಗುತ್ತೇವೆ.

ಅತ್ಯಂತ ಹೃದಯಸ್ಪರ್ಶಿ ಎನಿಸುವ ಪ್ರತಿಕ್ರಿಯೆಯೊಂದು ಕಳೆದ ವಾರದ ಮುಷ್ಟಿ ಬಗೆಗಿನ ಅಂಕಣಬರಹಕ್ಕೆ ಬಂದಿದೆ. ಬರೆದವರು ಬೆಂಗಳೂರಿ ನಿಂದ ರಶ್ಮಿ ಪಟವರ್ಧನ್. ಇವರು ನನಗೆ ಪರಿಚಿತರೇ. ಚಿತ್ಪಾವನರೇ ಆದ್ದರಿಂದ ದೂರದ ಸಂಬಂಧವೂ ಇರಬಹುದೇನೋ. ಅದಲ್ಲ ಇಲ್ಲಿ ಮುಖ್ಯ.
ಸ್ವತಃ ರಶ್ಮಿ, ಗಂಡ ಕಿಶೋರ ಪಟವರ್ಧನ್, ಮತ್ತು ಮಗಳು ಆಪ್ತಿ – ಮೂವರೂ ಅಷ್ಟಿಷ್ಟು ಬರವಣಿಗೆಯ ಒಳ್ಳೆಯ ಹವ್ಯಾಸ ಇಟ್ಟುಕೊಂಡಿರುವವರು ಎನ್ನುವುದೂ ಇಲ್ಲಿ ಹೈಲೈಟ್ ಅಲ್ಲ. ಆಪ್ತಯಂತೂ ಇಂಗ್ಲಿಷಲ್ಲಿ ZZmoಛ್ಞಿo ಎಂಬ ಚಂದನೆಯ ಬ್ಲಾಗ್ ಬರೆಯುತ್ತಾಳೆ; ಮೊನ್ನೆ ಆಗಸ್ಟ್‌ನಲ್ಲಿ ಅವಳದೊಂದು ಇಂಗ್ಲಿಷ್ ಪುಸ್ತಕ ಒಟ್ಠ್ಟ್ಞಛಿqs ಖ್ಞಿbಛ್ಟಿ Seಛಿ ಖhqs ಎಂಬ ಶೀರ್ಷಿಕೆಯದು ಪ್ರಕಟವಾಗಿದೆ; ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಶ್ರೀಸಿದ್ಧಪ್ಪಾಜಿ, ಪ್ರಕಾಶ ಬೆಳವಾಡಿ, ವಿ.ಮನೋಹರ್, ರೋಹಿತ್ ಚಕ್ರತೀರ್ಥ ಮುಂತಾದ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ; ಆಪ್ತಿ ಒಬ್ಬ ಕಥಕ್ ನೃತ್ಯಗಾರ್ತಿ, ರಂಗಾಭಿನಯ ಆಸಕ್ತೆ, ರೂಪದರ್ಶಿ, ಚಾರಣಪ್ರಿಯೆ, ಬಹುಮುಖ ಪ್ರತಿಭೆಯ ಹುಡುಗಿ -ಇತ್ಯಾದಿಯನ್ನೂ ನನ್ನ ಕಡೆಯಿಂದ ಸೇರಿಸಬಹುದು; ಅದನ್ನೆಲ್ಲ ಮುಂದೆ ಯಾವಾಗಾದರೂ ವಿವರಿಸುತ್ತೇನೆ. ಪ್ರಸ್ತುತ ನಾನಿಲ್ಲಿ ರಶ್ಮಿಯವರ ಈ ಪ್ರತಿಕ್ರಿಯೆಯನ್ನು ಎತ್ತಿಕೊಂಡಿರುವುದು, ನಿಮ್ಮೊಡನೆ ಹಂಚಿಕೊಳ್ಳುತ್ತಿರುವುದು ಬೇರೆಯೇ ಒಂದು ವಿಶೇಷ ಕಾರಣಕ್ಕೆ.

ಓದಿ ನೀವೇ ತಿಳಿದುಕೊಳ್ಳುವಿರಂತೆ: ‘ನಮ್ಮ ಮನೆಯಲ್ಲಿ ದಿನವೂ ಅನ್ನ ಮಾಡುವಾಗ ಒಂದು ಮುಷ್ಟಿ ಅಕ್ಕಿ ತೆಗೆದಿಟ್ಟು ದೇವಸ್ಥಾನಕ್ಕೆ ಕೊಡುವ ಪದ್ಧತಿ ಇತ್ತು. ಈಗ ನನ್ನ ಮಗಳು ಆಪ್ತಿ ಒಂದು ಅಭಿಯಾನ ಶುರು ಮಾಡಿದ್ದಾಳೆ. ಅವಳು ಎರಡು ಪ್ರತ್ಯೇಕ ಡಬ್ಬಿಗಳನ್ನು ಇಟ್ಟುಕೊಂಡಿದ್ದಾಳೆ. ಒಂದು ಡಬ್ಬಿ
ರೈತನ ಹೆಸರಲ್ಲಿ ಇನ್ನೊಂದು ಯೋಧನ ಹೆಸರಲ್ಲಿ. ಅವಳಿಗೆ ಸಿಕ್ಕಿರುವ ಪಾಕೆಟ್ ಮನಿಯಲ್ಲೋ ಅಥವಾ ಅವಳು ಪಡೆದುಕೊಂಡ ನಗದು ಬಹುಮಾನದಲ್ಲೋ ಒಂದಷ್ಟು ಭಾಗವನ್ನು ದಿನವೂ ರೈತನ ಡಬ್ಬಿಗೆ ಹಾಕುತ್ತಾಳೆ.

ಇನ್ನೊಂದು ಡಬ್ಬಿಗೆ ದಿನವೂ ನಾವು ಅನ್ನ ಮಾಡುವಾಗ ಒಂದು ಮುಷ್ಟಿ ಅಕ್ಕಿ ಹಾಕಿಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದೇವೆ. ಪ್ರತಿ ಯುಗಾದಿಯಿಂದ ಹೊಸ ಲೆಕ್ಕ. ವರ್ಷದ ಕೊನೆಗೆ ಲೆಕ್ಕ ಮಾಡಿ ಬಂದ ದುಡ್ಡನ್ನು ಒಬ್ಬ ರೈತನಿಗೆ ಹಾಗೂ ಸಂಗ್ರಹವಾದ ಅಕ್ಕಿ ಅಥವಾ ಇತರ ಧಾನ್ಯವನ್ನು ಒಬ್ಬ
ಸೈನಿಕನ ಮನೆಗೆ ತಲುಪಿಸಲಾಗುತ್ತದೆ. ಈ ಪರಿಕಲ್ಪನೆ ಅವಳಲ್ಲಿ ಬಂದು ಅದರ ಅನುಷ್ಠಾನವನ್ನು ಕಳೆದ ಆರು ವರ್ಷಗಳಿಂದ ಮಾಡುತ್ತಾ ಬಂದಿದ್ದಾಳೆ. ವರ್ಷಕ್ಕೆ ಅರ್ಧ/ಮುಕ್ಕಾಲು ಮುಡಿಯಷ್ಟು ಅಕ್ಕಿ ಹಾಗೂ ಒಂದೆರಡು ಸಾವಿರ ಲೆಕ್ಕದಲ್ಲಿ ದುಡ್ಡು ಸಂಗ್ರಹ ವಾಗುತ್ತದೆ. ಇದು ಒಂದು ಅತ್ಯಲ್ಪ ಪ್ರಮಾಣದ ದೇಣಿಗೆಯಿರಬಹುದು.

ಆದರೆ ಅವಳ ಆಶಯ-ಉದ್ದೇಶ ಉನ್ನತವಾದದ್ದು. ತಾನೊಬ್ಬಳೇ ಮಾಡಿದರೆ ಅಷ್ಟೇನೂ ಉಪಯೋಗವಿಲ್ಲವೆಂದು ಗೊತ್ತು, ಈ ಅಭಿಯಾನದಲ್ಲಿ ಭಾಗವಹಿಸಬೇಕು ಅನಿಸಿದ ಯಾರೇ ಆದರೂ ಭಾಗವಹಿಸಬಹುದು. ಸಂಗ್ರಹವಾದ ಹಣ ಅಥವಾ ಅಕ್ಕಿಯನ್ನು ಅವರವರಿಗೆ ಗೊತ್ತಿರುವ ರೈತ/ಯೋಧರಿಗೆ ಕೊಡ ಬಹುದು. ಇದರಿಂದ ಕಿಂಚಿತ್ ಏನಾದರೂ ಸಮಾಜಕ್ಕೋಸ್ಕರ ಮಾಡಿದೆವೆಂಬ ತೃಪ್ತಿಯೂ ಇರುತ್ತದೆ ಎನ್ನುವುದು ಆಪ್ತಿಯ
ಅಭಿಪ್ರಾಯ. ದಿನವೂ ಒಂದು ಮುಷ್ಟಿ ಧಾನ್ಯ ತೆಗೆದಿಡುವುದು ಯಾರಿಗೂ ಹೊರೆಯಾಗದು.

ದುಡ್ಡಾದರೂ ಅಷ್ಟೇ ಒಂದು ರೂಪಾಯಿಯಿಂದ ಹಿಡಿದು ಯಾವುದೇ ಮೊತ್ತವನ್ನು ತೆಗೆದಿಡಬಹುದು. ಸಂಗ್ರಹವಾದದ್ದನ್ನು ರೈತ/ಯೋಧರಿಗೆ ತಲುಪಿಸಿದಾಗ ಆಗುವ ಖುಷಿಯೇ ಬೇರೆ. ಇನ್ನೊಂದು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಅಕ್ಕಿಯನ್ನಾಗಲಿ, ದುಡ್ಡನ್ನಾಗಲಿ ಕೊಡುವ
-ಟೊ ಕ್ಲಿಕ್ಕಿಸಿ ಎಲ್ಲೂ ಹಂಚಿಕೊಳ್ಳಲಿಕ್ಕಿಲ್ಲ. ಪಡೆದುಕೊಂಡವರಿಗೆ ಸರಿ, ವೀರ ಯೋಧರ ಪಾದದಡಿಯ ಹುಡಿಯಾಗುವ ಆಸೆ ಮುಜುಗರವಾಗದಂತೆ ನೋಡಿಕೊಳ್ಳುವುದು ಮುಖ್ಯ. ಬೇಕಿದ್ದರೆ ಸನ್ಮಾನದ ರೂಪದಲ್ಲಿ ಕೊಡಬಹುದು.

ಇದನ್ನೇಕೆ ಹೇಳುತ್ತಿದ್ದೇ ನೆಂದರೆ ಕೊರೋನಾ ಸಮಯದಲ್ಲಿ ನೋಡಿದ್ದೇವಲ್ಲ ದೊಡ್ಡವರೆನಿಸಿಕೊಂಡವರು ಎರಡು ಕಿಲೋ ಅಕ್ಕಿ ಕೊಡುವ ಫೋಟೊಗಳನ್ನು ಊರು ತುಂಬ ಹಂಚಿದ್ದು. ಉದ್ದೇಶ ಎಲ್ಲರಿಗೂ ಕೊಡುವ ಪ್ರೇರಣೆ ಯಾಗಲಿ ಎಂದೇ ಇರಬಹುದು ಆದರೆ ತೆಗೆದುಕೊಂಡವರ
ಮುಖದ ಮೇಲಿನ ಅಸಹಾಯಕತೆ ಎದ್ದು ಕಾಣುತ್ತಿತ್ತು. ಮುಷ್ಟಿಯ ಬಗ್ಗೆ ನಿಮ್ಮ ಲೇಖನ ಓದಿದಾಗ ಆಪ್ತಿಯ ಮುಷ್ಟಿ ಅಕ್ಕಿ ಅಭಿಯಾನ ನೆನಪಾಗಿ ಇದನ್ನೆಲ್ಲ ಬರೆದೆ.’

ರಶ್ಮಿಯವರ ಈ ಟಿಪ್ಪಣಿಯನ್ನು ಓದಿದಾಗ ನಾಲ್ಕು ಬೇರೆಬೇರೆ ವಿಚಾರಗಳು ನನ್ನ ತಲೆಯಲ್ಲಿ ಸುಳಿದುವು. ಅದನ್ನು ರಶ್ಮಿಯೊಬ್ಬರಿಗೇ
ಉತ್ತರವಾಗಿ ತಿಳಿಸುವುದಕ್ಕಿಂತ ಇಲ್ಲಿ ಬರೆದು ಒಳ್ಳೆಯದನ್ನು ಇನ್ನಷ್ಟು ಪಸರಿಸೋಣ ಅಂತನಿಸಿತು. ಮೊದಲನೆಯದಾಗಿ ಆಪ್ತಿಯ ಐಡಿಯಾ ಮತ್ತದರ ಹಿಂದಿರುವ ಆಶಯ. ಗ್ರೇಟ್ ಅಲ್ಲವೇ? ಆಪ್ತಿ ಎಂಬ ಹೆಸರೇ ಎಷ್ಟು ಅಪರೂಪದ್ದು ನೋಡಿ. ಹೆಸರಿಗೆ ತಕ್ಕಂತೆ ಆಕೆ ಯಲ್ಲಿ ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶಕ್ಕೆ ರಕ್ಷಣೆ ಯೊದಗಿಸುವ ಯೋಧರ ಬಗ್ಗೆ ಆಪ್ತ ಭಾವ, ಕಾಳಜಿ, ಗೌರವ.

ಅವರೆಲ್ಲ ಚೆನ್ನಾಗಿರಬೇಕೆಂಬ ತುಡಿತ. ಎಷ್ಟು ಚಂದ! ಲಾಲ್ ಬಹದ್ದೂರ್ ಶಾಸ್ತ್ರಿಯವರೇ ನಾದರೂ ಈಗ ಇದ್ದಿದ್ದರೆ ತಾನು ಪ್ರಚುರಪಡಿಸಿದ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯು ಆಪ್ತಿಯಂಥ ಎಳೆಯರ ನಿಷ್ಕಲ್ಮಷ ಮನಸ್ಸುಗಳಲ್ಲಿ ಪ್ರತಿಧ್ವನಿಸುವುದನ್ನು ಕಂಡು ಎಷ್ಟು ಖುಷಿಪಡುತ್ತಿದ್ದರೋ! ನಾನು ಹೇಳುವುದಾದರೆ ಆಪ್ತಿಯ ಈ ಅಭಿಯಾನವು ಮೋದಿಯವರ ‘ಮನ್ ಕೀ ಬಾತ್’ ನಲ್ಲಿ ಪ್ರಸ್ತಾವಗೊಳ್ಳಲಿಕ್ಕೆ ಅರ್ಹತೆಯುಳ್ಳದ್ದು. ಆಕೆಯ ಕಾನ್ಸೆಪ್ಟ್‌ನ ಲ್ಲಿರುವ ಹಿರಿಮೆಯನ್ನು ಜಗತ್ತಿಗೆ ಸಾರುವುದು, ಇನ್ನೂ ಅನೇಕರಿಗೆ ಅದು ಪ್ರೇರಣೆಯಾಗುವುದು ‘ಜ್ಯೋತ್ ಸೇ ಜ್ಯೋತ್ ಜಗಾತೇ
ಚಲೋ… ಪ್ರೇಮ್ ಕೀ ಗಂಗಾ ಬಹಾತೇ ಚಲೋ…’ ಎಂಬಂತೆ ಆಗುವುದಿಲ್ಲವೇ? ಆಪ್ತಿಯ ವೈಭವೀಕರಣ ಇದರ ಉದ್ದೇಶವಲ್ಲ.

ನೆಗೆಟಿವ್ ಸುದ್ದಿಗಳನ್ನು, ಕಾಸು ಪ್ರಯೋಜನವಿಲ್ಲದ ಐಸ್‌ಬಕೆಟ್ ಚಾಲೆಂಜುಗಳನ್ನು, ಇನ್ನೊಂದು ಮತ್ತೊಂದು ಶೋ-ಆಫ್‌ಗಳನ್ನು ಕಾಳ್ಗಿಚ್ಚಿನಂತೆ ಪಸರಿಸಲು ಉತ್ಸುಕರಾಗುವ ನಾವು ರಚನಾತ್ಮಕ ಲೋಕಕಲ್ಯಾಣದ ವಿಷಯಗಳಾದರೆ ಅನಾಸಕ್ತರಾಗುತ್ತೇವೆ, ಮೂಗು ಮುರಿಯುತ್ತೇವೆ. ಅದೇ ವಿಪರ್ಯಾಸ. ಎರಡನೆಯದಾಗಿ ಆಪ್ತಿಯ ಮುಷ್ಟಿ ಅಕ್ಕಿ ಅಭಿಯಾನವು ನನಗೆ ಭಗವದ್ಗೀತೆಯ ಒಂದು ಶ್ಲೋಕವನ್ನೂ ನೆನಪಿಸಿತು. ಆಕೆ ದಾನವಾಗಿ
ಕೊಡಲಿರುವ ಧಾನ್ಯವನ್ನು ಸಂಗ್ರಹಿಸಿಡಲಿಕ್ಕೆ ಎರಡು ಪ್ರತ್ಯೇಕ ಡಬ್ಬಿ (ಪಾತ್ರೆ)ಗಳನ್ನು ತೆಗೆದಿಟ್ಟಿದ್ದಾಳೆ ಮತ್ತು ಅದು ಕೃಷ್ಣ ಪರಮಾತ್ಮನು ಹೇಳಿದ- ದೇಶೇ ಕಾಲೇ ಚ ‘ಪಾತ್ರೇ’ ಚ ತದ್ದಾನಂ- ಎಂಬುದಕ್ಕೆ ಅನುಗುಣವಾಗಿಯೇ ಇದೆ ಅಂತ ಪದವಿನೋದ ದೃಷ್ಟಿಯಿಂದ ಅಲ್ಲ.

ಗೀತೆಯ ಆ ಶ್ಲೋಕದ ಪೂರ್ಣ ರೂಪ ನೋಡಿ: ‘ದಾತವ್ಯಮಿತಿ ಯದ್ದಾನಂ ದೀಯತೇಧಿನುಪಕಾರಿಣೇ| ದೇಶೇ ತಿಳಿರು ತೋರಣ ಶೀವತ ಜೋಶಿ
oಜಿqZಠಿeoZಟoeಜಿಃqsZeಟಟ.ಟಞ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್||’ ಅಂದರೆ, ದಾನ ಮಾಡುವುದು ನನ್ನದೊಂದು ಕರ್ತವ್ಯ ಎಂಬ ಭಾವದಿಂದ ಮಾಡಬೇಕು; ಸತ್ಪಾತ್ರರಿಗೆ, ಸಕಾಲದಲ್ಲಿ, ದೇಶ-ಕಾಲಗಳ ಔಚಿತ್ಯ ವಿವೇಚನೆಯಿಂದ ಮಾಡಬೇಕು. ಪ್ರತ್ಯುಪಕಾರವನ್ನು ಬಯಸದೇ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಅದು ಸಾತ್ತಿ ಕ ದಾನ ಎಂದೆನಿಸಿಕೊಳ್ಳುತ್ತದೆ. ಆಪ್ತಿ ಅಥವಾ ಆಕೆಯ ಪರವಾಗಿ ಆಕೆಯ
ಅಮ್ಮ ಅಂತಲೇ ಇರಲಿ, ಪ್ರತಿದಿನವೂ ಒಂದು ಮುಷ್ಟಿ ಅಕ್ಕಿಯನ್ನು ಯೋಧನಿಗೆಂದು ಡಬ್ಬಿಗೆ ಹಾಕುತ್ತಾರಲ್ಲ, ಅದನ್ನೊಂದು ದೈನಿಕ ವ್ರತದಂತೆ ಪಾಲಿಸುತ್ತಾರಲ್ಲ, ದಾತವ್ಯ(ನಾನು ಕೊಡಲೇಬೇಕಾದ್ದು) ಎಂಬ ಕರ್ತವ್ಯಪ್ರe ಮೆರೆಯುತ್ತಾರಲ್ಲ, ಅದೇ ಸಾತ್ತಿ ಕ ದಾನ.

ಯೋಧರನ್ನು ಗೌರವಿಸಬೇಕು, ಅವರ ಯೋಗಕ್ಷೇಮವನ್ನು ಹಾರೈಸಬೇಕು, ಅವರ ಒಳಿತಿಗಾಗಿ ನಾವು ಕಿಂಚಿತ್ ಆದರೂ ಸೇವೆ ಸಲ್ಲಿಸಬೇಕು ಎಂಬ ಆಪ್ತಿಯ ಆಶಯದಲ್ಲಿ ನನಗೆ ನೆನಪಾದ ಮೂರನೆಯ ಅಂಶವೆಂದರೆ ಹಿಂದೀ ಭಾಷೆಯ ಕವಿ ಮಾಖನಲಾಲ್ ಚತುರ್ವೇದಿಯವರ ‘ಪುಷ್ಪ ಕೀ ಅಭಿಲಾಷಾ’ ಕವಿತೆ. ನಮಗೆ ಏಳನೆಯ ತರಗತಿಯ ಹಿಂದೀ ಪಠ್ಯಪುಸ್ತಕದಲ್ಲಿ ‘ಫೂಲ್ ಕೀ ಚಾಹ್’ ಶೀರ್ಷಿಕೆಯೊಂದಿಗೆ ಇತ್ತು. ಹೂವಿನಷ್ಟೇ ಚಂದವಾದ
ಪದ್ಯ. ‘ಚಾಹ್ ನಹೀ ಮೈ ಸುರಬಾಲಾ ಕೇ ಗೆಹನೊ ಮೇ ಗೂಂಥಾ ಜಾವೂಂ…’ ಎಂದು ಆರಂಭದ ಸಾಲು.

‘ಮುಝೇ ತೋಡ್ ಲೇನಾ ವನಮಾಲೀ, ಉಸ್ ಪಥ್ ಪರ್ ದೇನಾ ತುಮ್ ಫೇಂಕ್| ಮಾತೃಭೂಮಿ ಪರ್ ಶೀಶ ಚಢಾನೇ ಜಿಸ್ ಪಥ ಜಾವೇಂ ವೀರ
ಅನೇಕ್|’ ಎಂದು ಕೊನೆಯ ಸಾಲು. ಆ ಪದ್ಯದಲ್ಲಿ ಒಂದು ಹೂವು ತನ್ನ ಮನದಾಳದ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ. ‘ಸುರಬಾಲೆಯರ ಕೇಶಶೃಂಗಾರ ವಸ್ತುವಾಗುವ ಆಸೆ ನನಗಿಲ್ಲ. ಪ್ರೇಮಿಗಳ ಕೊರಳ ಮಾಲೆಯಾಗಿ ಪ್ರೀತಿಯ ಸಂಕೇತವಾಗುವ ಬಯಕೆಯಿಲ್ಲ. ದೇವರ ವಿಗ್ರಹಕ್ಕೆ ಅಲಂಕಾರವಾಗಿ ಭಗವಂತನಿಗೆ ಸನ್ನಿಹಿತನಾದ ಭಾಗ್ಯವಂತ ಎನಿಸಿಕೊಳ್ಳುವ ಇಚ್ಛೆಯಿಲ್ಲ. ಸಮ್ರಾಟರ ಶವದ ಮೇಲೆ ಮೆರೆದು ಮಾನ್ಯತೆ ಪಡೆವ ಆಸೆಯೂ ನನ್ನದಲ್ಲ. ಎಲೈ ಮಾಲಿಯೇ, ನನ್ನನ್ನು ಗಿಡದಿಂದ ಕಿತ್ತು ಆ ದಾರಿಯುದ್ದಕ್ಕೂ ಬಿಸಾಡು.

ಎಲ್ಲಿ ಮಾತೃ ಭೂಮಿಗಾಗಿ ತಲೆಯನ್ನೇ ಒಪ್ಪಿಸಲು ಸಿದ್ಧರಿರುವ ವೀರ ಯೋಧರು ನಡೆಯುತ್ತಾರೋ ಆ ದಾರಿಯಲ್ಲಿ ನನ್ನ ಎಸಳುಗಳನ್ನು ಹರಡು. ಆ
ಸೈನಿಕರ ಪಾದದಡಿಯ ಹುಡಿಯಾಗುವುದೊಂದೇ ನನಗಿರುವ ಆಸೆ’ – ಎಂತಹ ಮಹೋನ್ನತ ಸಂದೇಶ, ಹೂವಿನ ಮನೋಗತದ ರೂಪದಲ್ಲಿ! ಜೀವನಮೌಲ್ಯಗಳನ್ನು ಸಾರುವ ಈರೀತಿಯ ಪದ್ಯ- ಪಾಠಗಳಿರುವುದು ಉರುಹೊಡೆದು ಪರೀಕ್ಷೆಯಲ್ಲಿ ಅಂಕಗಳನ್ನು ಗಿಟ್ಟಿಸಿ ಆಮೇಲೆ ಮರೆಯಲಿಕ್ಕಲ್ಲ. ಜೀವನದುದ್ದಕ್ಕೂ ನೆನಪಿಟ್ಟು ಕೊಳ್ಳಲಿಕ್ಕೆ. ಸಾಧ್ಯವಾದರೆ ಆಪ್ತಿಯಂತೆ ಅಳವಡಿಸಿಕೊಳ್ಳಲಿಕ್ಕೆ. ಹೂವಿಗೆ. ಈಗ ನಿಮಗೆ ‘ಖ್ಠmmಟ್ಟಠಿಜ್ಞಿಜ ಟ್ಠ್ಟ Sಟಟmo
ಡಿeಛ್ಟಿಛಿ ಠಿeಛಿqs ಛಿಛಿb ಜಿಠಿ ಞಟoಠಿ ಠಿeಛಿಜ್ಟಿ ಛಿಛಿಠಿ.ೞ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಒಂದು ಅಮೆರಿಕನ್ ಸ್ವಯಂಸೇವಾ ಸಂಸ್ಥೆಯ ಬಗ್ಗೆ ತಿಳಿಸುತ್ತೇನೆ. ಇದು ಕೂಡ ಹೆಚ್ಚೂಕಡಿಮೆ ಆಪ್ತಿಯ ಮುಷ್ಟಿ ಅಕ್ಕಿ ಅಭಿಯಾನದಂತೆಯೇ ಆರು ವರ್ಷಗಳ ಹಿಂದೆ ೨೦೧೮ರಲ್ಲಿ ಆರಂಭವಾದದ್ದು.

ಪೆನ್ಸಿಲ್ವೇನಿಯಾ ಸಂಸ್ಥಾನದ ಡೆಬ್ರಾ ಹೌಸ್ಲಡೆನ್ ಎಂಬೊಬ್ಬ ಮಹಿಳೆಯ ಕಲ್ಪನೆಯ ಕೂಸು. ಆಕೆಗೆ ಹೆಗಲಾಗಿ ನಿಂತವರು ಪತಿ ಜಾನ್ ಟಿ ಹೌಸ್ಲಡೆನ್. ಅವರ ಮಗ ಅಮೆರಿಕದ ಸೇನೆಯಲ್ಲಿರುವ ಒಬ್ಬ ಯೋಧ. ಆಗ (೨೦೧೮ರಲ್ಲಿ) ಡೆಪ್ಯೂಟೇಷನ್ ಮೇಲೆ ಅಫಘಾನಿ ಸ್ತಾನಕ್ಕೆ ಹೋಗಿದ್ದನು. ಒಂದುದಿನ ಅಲ್ಲಿಂದ ದೂರವಾಣಿ ಕರೆ ಮಾಡಿ ಅಮ್ಮನೊಡನೆ ಅದೂಇದೂ ಮಾತನಾಡುತ್ತಿದ್ದಾಗ ನಿನಗೆ ಇಲ್ಲಿಂದ ಏನು ಕಳಿಸಿಕೊಡಲಿ ಎಂದು ಅಮ್ಮ ಕೇಳಲಾಗಿ ಒಂದು ಜೊತೆ ಜಾಗಿಂಗ್ ಶೂಸ್ ಕಳಿಸಿಕೊಡುವಂತೆ ಅಮ್ಮನನ್ನು ಕೇಳಿ ಕೊಂಡನು. ಅದಕ್ಕೆ ಕಾರಣವಿದೆ. ಅಮೆರಿಕದ ಮಿಲಿಟರಿಯು ಸೈನಿಕರಿಗೆ
ಮಿಲಿಟರಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಯೊಂದನ್ನೂ- ರಣರಂಗದಲ್ಲಿ ಅಥವಾ ಎಂತಹ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕಲ್ಲುಮುಳ್ಳುಗಳ ನಡುವೆಯೂ ನಡೆದಾಡಲಿಕ್ಕೆ ಆಗುವಂಥ ಕಾರ್ಯಕ್ಷಮತೆಯುಳ್ಳ ಬೂಟುಗಳನ್ನೂ- ಒದಗಿಸುತ್ತದೆಯೇ ಹೊರತು ಮಾಮೂಲಿಯಾಗಿ ನಡೆದಾಡಲಿಕ್ಕೆ, ರನ್ನಿಂಗ್ -ಜಾಗಿಂಗ್‌ಗೆ ಬಳಕೆಯಾಗುವ ಶೂಸ್(ಸ್ನೀಕರ್ಸ್) ಸಪ್ಲೈ ಮಾಡುವುದಿಲ್ಲ.

ಡೆಪ್ಯೂಟೇಷನ್ ಮೇಲೆ ಹೊರದೇಶಗಳಿಗೆ ಹೋದಾಗ ಖಾಸಗಿಯಾಗಿ ಒಂದೆರಡು ಜೊತೆ ಒಯ್ದಿದ್ದರೂ ಅಲ್ಲಿ ಬೇಗ ಸವಕಲಾಗಿ ಹೋಗುತ್ತವೆ. ಹೊಸದನ್ನು ಕೊಂಡುಕೊಳ್ಳುವ ಅವಕಾಶವೂ ಇರುವುದಿಲ್ಲ. ಮಗನ ಕೋರಿಕೆಯನ್ನು ಈಡೇರಿಸುತ್ತೇನೆಂದ ಡೆಬ್ರಾ, ನಿನ್ನ ಸಹೋದ್ಯೋಗಿಗಳ ಪರಿಸ್ಥಿತಿ ಹೇಗಿದೆ ಎಂದು ಕೇಳಿದಳಂತೆ. ಅವರದೂ ಇದೇ ಅವಸ್ಥೆ ಎಂದಿದ್ದ ಮಗರಾಯ. ಡೆಬ್ರಾ ಯೋಚಿಸಿದಳು. ತಾನೇನೋ ಮಗನಿಗೆ ಒಂದೆರಡು ಜೊತೆ ಸ್ನೀಕರ್ಸ್ ಕಳುಹಿಸಬಲ್ಲೆ. ಆದರೆ ಆತನ ಸಂಗಡಿಗರೂ ಅಷ್ಟೇ ಕಷ್ಟಪಡುತ್ತಿದ್ದಾರಲ್ಲವೇ, ಪಾಪ ಅವರೆಲ್ಲ ತಮ್ಮ ಹೆತ್ತವರೊಡನೆ ಹೇಳಿಕೊಂಡಿದ್ದಾರೋ ಇಲ್ಲವೋ ಎಂದು ಮಮ್ಮಲಮರುಗಿದಳು.

ಅವಳಿದ್ದ ಪಟ್ಟಣದ ಬ್ರಾಯನ್ ಮೌರ್ ಎಂಬ ಶೂ-ಸ್ಟೋರ್‌ಗೆ ಹೋಗಿ, ಮಗನ ತುಕಡಿಯಲ್ಲಿದ್ದ ಅಷ್ಟೂ ಯೋಧರಿಗೆ ಆಗುವಂತೆ ಅಂದರೆ ಹತ್ತಿಪ್ಪತ್ತು ಜೊತೆ ಸ್ನೀಕರ್ಸ್ ಖರೀದಿಸಿದಳು. ಒಂದೊಂದು ಜೊತೆಗೂ ‘ವಿದ್ ಲವ್, ಡೆಬ್ರಾ ಹೌಸ್ಲಡೆನ್’ ಎಂದು ಟ್ಯಾಗ್ ಕಟ್ಟಿ ದೊಡ್ಡದೊಂದು ಪೆಟ್ಟಿಗೆಯಲ್ಲಿಟ್ಟು ಅಫಘಾನಿಸ್ತಾನಕ್ಕೆ, ಮಗನಿದ್ದ ಆರ್ಮಿ ಪ್ಲಟೂನ್‌ಗೆ ರವಾನಿಸಿದಳು. ಆ ಯೋಧರಿಗೆಲ್ಲ ಅದು ಅತ್ಯಂತ ಆವಶ್ಯಕ ಉಡುಗೊರೆಯೇ ಆಗಿತ್ತು. ಡೆಬ್ರಾಳ ಮಗನ ಮೂಲಕ ಎಲ್ಲರಿಂದಲೂ ಹೃದಯಪೂರ್ವಕ ಧನ್ಯವಾದ ಬಂತು.

ಅವರ ಪೈಕಿ ಒಬ್ಬಾತನಂತೂ ಇದೇನಿದು ಮೇ ತಿಂಗಳಲ್ಲೇ ಕ್ರಿಸ್ಮಸ್ ಬಂದಿತೇ!? ಎಂದು ಆಶ್ಚರ್ಯಪಟ್ಟು ಭಾವಪರವಶನಾದನಂತೆ. ಡೆಬ್ರಾಗೂ ಧನ್ಯತೆಯ ಅನುಭವ. ಇದು ಒಂದು ಬಾರಿಯ ಒಳ್ಳೆಯ ಕೆಲಸ ಅಂತಾಗಬಾರದು, ಇದಕ್ಕೊಂದು ನಿರಂತರತೆ ಕೊಡ ಬೇಕು ಎಂದು ಮನಗಂಡ ಡೆಬ್ರಾ ‘ಸ್ನೀಕರ್ಸ್ ಫಾರ್ ಸೋಲ್ಜರ್ಸ್’ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದಳು. ತಾನು ಸೇವೆ ಸಲ್ಲಿಸುತ್ತಿದ್ದ ಚರ್ಚ್‌ನ ಒಂದಿಷ್ಟು ಸಮಾನಮನಸ್ಕರು ಕೈಜೋಡಿಸಿದರು. ಉದಾರ ಮನಸ್ಸಿನ ಬ್ರಾಯನ್ ಮೌರ್ ಶೂಸ್ ಸ್ಟೋರ್‌ನ ಮಾಲೀಕ ಇಂತಹ ಒಳ್ಳೆಯ ಉದ್ದೇಶಕ್ಕಾದರೆ ತನ್ನ ಲಾಭವನ್ನೂ ತೊರೆದು ರಿಯಾಯಿತಿ ಬೆಲೆಯಲ್ಲಿ ಸ್ನೀಕರ್ಸ್ ಒದಗಿಸಲಿಕ್ಕೆ ಒಪ್ಪಿಕೊಂಡನು. ಯೋಧರ ಅಗತ್ಯಕ್ಕೆ ತಕ್ಕಂತೆ ಅಮೆರಿಕದಿಂದ ಅಫಘಾನಿಸ್ತಾನಕ್ಕೆ ಸ್ನೀಕರ್ಸ್ ಕಳುಹಿಸುವುದನ್ನು ಡೆಬ್ರಾ ತನ್ನ ಕರ್ತವ್ಯ ಎಂಬಂತೆ ಮಾಡತೊಡಗಿದಳು.

ಪೆನ್ಸಿಲ್ವೇನಿಯಾದ ಸ್ಥಳೀಯ ಸುದ್ದಿವಾಹಿನಿಗಳು ಈಬಗ್ಗೆ ಸುದ್ದಿ ಬಿತ್ತರಿಸಿದವು. ಹೆಚ್ಚುಹೆಚ್ಚು ಜನರು ಒಂದೋ ಹೊಸ ಸ್ನೀಕರ್ಸ್ ಅಥವಾ ಸರಿಸಮಾನ ಮೊಬಲಗನ್ನು ಡೆಬ್ರಾಳಿಗೆ ಸಲ್ಲಿಸತೊಡಗಿದರು. ೨೦೧೯ರ ಜುಲೈಯಲ್ಲೊಂದು ದಿನ ಎಬಿಸಿ ವರ್ಲ್ಡ್ ನ್ಯೂಸ್‌ನಲ್ಲಿ ಡೇವಿಡ್ ಮ್ಯೂರ್ ಈ ಬಗ್ಗೆ
ಚಿಕ್ಕದೊಂದು ಫೀಚರ್ ಪ್ರಸ್ತುತಪಡಿಸಿದನು. ಡೆಬ್ರಾಳ ನಿಃಸ್ವಾರ್ಥ ಸೇವೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯಿತು. ಅಮೆರಿಕದ ಐವತ್ತೂ ರಾಜ್ಯಗಳ ಮೂಲೆಮೂಲೆಗಳಿಂದ ದೇಣಿಗೆ ಹರಿದು ಬಂತು. ಕೆಲವು ನಗರಗಳ ಶಾಲಾಮಕ್ಕಳೂ ಈ ಅಭಿಯಾನದಲ್ಲಿ ದಾನಿಗಳಾಗಿ ಸೇರಿಕೊಂಡರು.

೨೦೨೦ರಲ್ಲಿ ಪ್ಯಾಂಡೆಮಿಕ್ ವೇಳೆಯಲ್ಲೂ ದೂರದೇಶದಲ್ಲಿದ್ದ ಸೈನಿಕರನ್ನು ಮರೆಯದೆ ಡೆಬ್ರಾ ತನ್ನ ಸೇವೆಯನ್ನು ಅವ್ಯಾಹತವಾಗಿ ಮುಂದು ವರಿಸಿದಳು. ಎಬಿಸಿ ವರ್ಲ್ಡ್ ನ್ಯೂಸ್‌ನಲ್ಲಿ ಡೇವಿಡ್ ಮ್ಯೂರ್‌ನಿಂದ ಮತ್ತೊಮ್ಮೆ ಆಕೆಯ ಸಾಹಸದ ಪ್ರಶಂಸೆಯಾಯ್ತು. ಈಗ ಡೆಬ್ರಾಳ ‘ಸ್ನೀಕರ್ಸ್ ಫಾರ್ ಸೋಲ್ಜರ್ಸ್’ ಸಂಸ್ಥೆಯು ಅಮೆರಿಕದ ಮಿಲಿಟರಿ ತುಕಡಿಗಳಿರುವ ಸಿರಿಯಾ, ಇರಾಕ್, ನೈಗರ್, ಸೊಮಾಲಿಯಾ, ಜೋರ್ಡಾನ್ ಮುಂತಾದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆಲ್ಲ ಸ್ನೀಕರ್ಸ್ ಸರಬರಾಜು ಮಾಡುತ್ತದೆ. ತಿಂಗಳಿಗೆ ೩೦೦ರಿಂದ ೫೦೦ ಜೊತೆಗಳವರೆಗೂ
ಸ್ನೀಕರ್ಸ್ ಕಳುಹಿಸುವಷ್ಟು ಧನ ಸಂಗ್ರಹವಾಗುತ್ತಿದೆ. ಒಂಬತ್ತು ಬೇರೆಬೇರೆ ವಿಧದ, ಉತ್ಕೃಷ್ಟ ಗುಣಮಟ್ಟದ ಸ್ನೀಕರ್ಸ್ ಕ್ಯಾಟಲಾಗ್ ಅನ್ನು ವೆಬ್ ಮೂಲಕ ಯೋಧರಿಗೆ ತೋರಿಸಿ ಅವರು ತಮಗೆ ಬೇಕಾದ್ದನ್ನು ಮೊದಲೇ ಆಯ್ದುಕೊಳ್ಳುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಈಗ ಡೆಬ್ರಾ ತನ್ನ ಹೆಸರನ್ನು ಹಾಕಿಕೊಳ್ಳುವುದಿಲ್ಲ, ಬದಲಿಗೆ ಪ್ರತಿಯೊಂದು ಸ್ನೀಕರ್ಸ್ ಜೊತೆಗೂ ಕಟ್ಟಿದ ಟ್ಯಾಗ್‌ನಲ್ಲಿ ಬೇರೆಬೇರೆ ದಾನಿಗಳ ಹೆಸರಿರುತ್ತದೆ. ತಾಯ್ನೆಲದಿಂದ ದೊಡ್ಡದೊಡ್ಡ ಪಾರ್ಸೆಲ್ ಬಾಕ್ಸ್‌ಗಳಲ್ಲಿ ಬಂದು ತಲುಪುವ ಸ್ನೀಕರ್ಸ್ ಪಡೆದು ಖುಷಿಯಿಂದ ಉಬ್ಬಿಹೋಗುವ ಯೋಧರು ಸ್ನೀಕರ್ಸ್ ಜೊತೆಗಿನ ಫೋಟೊ ಗಳನ್ನು ಅಪ್‌ಲೋಡ್ ಮಾಡುತ್ತಾರೆ. ಇಮೇಲ್ ಸಂದೇಶಗಳನ್ನು ಕಳುಹಿಸಿ ಡೆಬ್ರಾಗೆ ಮತ್ತು ದಾನಿಗಳೆಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸು ತ್ತಾರೆ. ‘ನೀವು ಕಳುಹಿಸಿದ ಹೊಸ ಸ್ನೀಕರ್ಸ್‌ನಿಂದಾಗಿ ನನಗೀಗ ಹೊಸ ಉಮೇದು ಬಂದಿದೆ. ನಾನು ಈ ಜೂನ್ ತಿಂಗಳಲ್ಲಿ ೨೦೦ ಮೈಲು ಓಡುವ ಗುರಿಯಿಟ್ಟುಕೊಳ್ಳುತ್ತೇನೆ. ಅಮೆರಿಕದ ಸೈಂಟ್ ಜೂಡ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವ ಪುಟ್ಟ
ಕಂದಮ್ಮಗಳಿಗೆ ನನ್ನ ಈ ಓಟದ ಚಾಲೆಂಜ್ ನೆರವಾಗಲಿದೆ!’ ಎಂದು ಒಬ್ಬ ಸೈನಿಕ ಬರೆದಿದ್ದ ಥ್ಯಾಂಕ್ಯೂ ಇಮೇಲ್ ಓದುವಾಗಂತೂ ಡೆಬ್ರಾ ಗಳಗಳನೆ ಅತ್ತಳಂತೆ. ಇನ್ನೊಬ್ಬ ಸೈನಿಕ ‘ಯುದ್ಧಪ್ರದೇಶಗಳಿಗೆ ಡೆಪ್ಯೂಟ್ ಆದ ಸೈನಿಕರಿಗೆ ಇಂತಹ ಸ್ನೀಕರ್ಸ್ ಆವಶ್ಯಕತೆ ಎಷ್ಟಿರುತ್ತದೆಂದು ನಾನು ಅನುಭವಿಸಿ ಬಲ್ಲೆ. ಆದ್ದರಿಂದ ನಿಮ್ಮೀ ಸೇವಾ ಕಾರ್ಯಕ್ಕೆ ನನ್ನ ಕಡೆಯಿಂದ ಕಿಂಚಿತ್ ದೇಣಿಗೆ ಎಂಬಂತೆ ನನ್ನ ವೇತನದ ಒಂದಿಷ್ಟು ಭಾಗವನ್ನು ಕಳುಹಿಸುತ್ತಿದ್ದೇನೆ’ ಎಂದು ಬರೆದಿರುವುದೂ ಇದೆ.

ಕೆರೆಯ ನೀರನು ಕೆರೆಗೆ ಚೆಲ್ಲಿ ಬಾಳಿಗೊಂದು ಧನ್ಯತೆ ಪಡೆವ ಪುಣ್ಯಜೀವಿಗಳು ಅವರೆಲ್ಲ. ಈ ಪ್ರಪಂಚ ನಾವಂದುಕೊಂಡಷ್ಟು ಕೆಟ್ಟದಿಲ್ಲ. ಇಲ್ಲಿ ಒಳ್ಳೆಯ
ಸಂಗತಿಗಳು ಅನೇಕವಿವೆ. ಒಳ್ಳೆಯ ಜನರು ಎಲ್ಲೆಡೆಯೂ ಇದ್ದಾರೆ. ನೆಗೆಟಿವ್ ಮೈಂಡ್‌ಸೆಟ್‌ನ ಮುಷ್ಟಿ ಬಿಚ್ಚಿ, ಒಳ್ಳೆಯದನ್ನು ಗ್ರಹಿಸಿ ಭದ್ರವಾದ ಮುಷ್ಟಿಯಲ್ಲಿ ಇಟ್ಟುಕೊಂಡು ನಾವೂ ಇನ್ನಷ್ಟು ಒಳ್ಳೆಯ ವರಾಗಬೇಕು. ಆಪ್ತಿಯ ‘ಮುಷ್ಟಿ ಅಕ್ಕಿಯಿಂದ ಯೋಧರಿಗೆ ನೆರವು’ ಅಭಿಯಾನ, ಡೆಬ್ರಾಳ ‘ಸ್ನೀಕರ್ಸ್ ಫಾರ್ ಸೋಲ್ಜರ್ಸ್’ ಅಭಿಯಾನದಂಥವು ನಮಗೆ ಪ್ರೇರಣೆಯಾಗಬೇಕು. ಆಗ ಮಾತ್ರ ಜೈ ಜವಾನ್ ಬರೀ ಜೈಕಾರದ ಘೋಷಣೆಯಾಗುಳಿಯದೆ ಜೀವನದ ರೀತಿ ಎಂದೆನಿಸುತ್ತದೆ.

Leave a Reply

Your email address will not be published. Required fields are marked *

error: Content is protected !!